ಗುಲಾಬ್ ಬಾಘ್ನ್ನು ಸಜ್ಜನ್ ನಿವಾಸ್ ಉದ್ಯಾನ ಎಂದೂ ಕರೆಯುತ್ತಾರೆ, ಇದನ್ನು ಮಹಾರಾಣ ಸಜ್ಜನ್ ಸಿಂಗ್ 1850ರಲ್ಲಿ ನಿರ್ಮಿಸಿದ. ಉದಯಪುರದಲ್ಲೇ ಅತ್ಯಂತ ದೊಡ್ಡ ಉದ್ಯಾನ ಇದು. ಸುಮಾರು 0.40 ಚದರ ಕಿ.ಮೀ ವ್ಯಾಪ್ತಿಯನ್ನು ಇದು ಆಕ್ರಮಿಸಿಕೊಂಡಿದೆ. ಇಲ್ಲಿರುವ ವಿಕ್ಟೋರಿಯಾ ಹಾಲ್ ಮ್ಯೂಸಿಯಂನಲ್ಲಿ ಪುರಾತನ ಸಾಮಗ್ರಿಗಳು ಮತ್ತು ಇತರ ರಾಜರ ಕಾಲದ ಸಾಮಗ್ರಿಗಳನ್ನು ಕಾದಿರಿಸಲಾಗಿದೆ. ಅರಮನೆಯ ಆವರಣದಲ್ಲೇ ಈ ಮ್ಯೂಸಿಯಂ ಕೂಡಾ ಇದೆ. ಇಲ್ಲೊಂದು ಪ್ರಾಣಿ ಸಂಗ್ರಹಾಲಯವೂ ಇದೆ.
ಪ್ರಾಣಿ ಸಂಗ್ರಹಾಲಯ ಮತ್ತು ಮ್ಯೂಸಿಯಂನ ಹೊರತಾಗಿ ಸರಸ್ವತಿ ಭವನ ಲೈಬ್ರರಿಯನ್ನೂ ಇಲ್ಲಿ ನಿರ್ಮಿಸಲಾಗಿದೆ. ಇದನ್ನು ಮಹಾರಾಣ ಫತೇಹ್ ಸಿಂಗ್ ನಿರ್ಮಿಸಿದ್ದರು. ಆರ್ಕಿಯಾಲಜಿ, ಇತಿಹಾಸ ಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳ ಭಂಡಾರ ಈ ಲೈಬ್ರರಿಯಲ್ಲಿದೆ. ಈ ಪುಸ್ತಕಗಳ ಜೊತೆಗೆ ಪ್ರವಾಸಿಗರು ಮಧ್ಯಯುಗಕ್ಕೆ ಸಂಬಂಧಿಸಿದ ತಾಳೆಗರಿಗಳನ್ನೂ ನೋಡಬಹುದು.