ಬಾಗೋರೆ ಕಿ ಹವೇಲಿಯು ಪಿಚೋಲಾ ಕೆರೆಯ ಸಮೀಪದಲ್ಲೇ ಇದೆ. ಮೇವಾರ ರಾಯಲ್ ಕೋರ್ಟ್ನ ಮುಖ್ಯಮಂತ್ರಿಯಾದ ಅಮಿರ್ ಚಾಂದ್ ಬಾದ್ವಾ ಇದನ್ನು ನಿರ್ಮಿಸಿದ್ದಾರೆ. ಈ 18ನೇ ಶತಮಾನದ ಹವೇಲಿಯು ತನ್ನ ಸುಂದರವಾದ ಕೆತ್ತನೆಗಳು ಮತ್ತು ಗ್ಲಾಸ್ ವರ್ಕ್ಸ್ನಿಂದ ಪ್ರಸಿದ್ಧವಾಗಿದೆ. ಬಾಗೋರೆಯ ಮಹಾರಾಣ ಶಕ್ತಿ ಸಿಂಗ್ ಈ ಮುಖ್ಯ ರಚನೆಗೆ 1878ರಲ್ಲಿ ಮೂರು ಅಂತಸ್ತುಗಳನ್ನು ನಿರ್ಮಿಸಿದರು.
1986ರಲ್ಲಿ ಈ ಕಟ್ಟಡವನ್ನು ವೆಸ್ಟ್ ಝೋನ್ ಕಲ್ಚರಲ್ ಸೆಂಟರಿಗೆ ನೀಡಲಾಯಿತು. ಇಲ್ಲೊಂದು ಮ್ಯೂಸಿಯಂ ಇದ್ದು, ಇಲ್ಲಿ ಮೇವಾರದ ಕಲಾಕೃತಿಗಳು ಮತ್ತು ಸಂಸ್ಕೃತಿಯು ಬಿಂಬಿಸಲ್ಪಟ್ಟಿವೆ. ಇದರ ಜೊತೆಗೆ, ಪ್ರವಾಸಿಗರು ಡೈಸ್ ಗೇಮ್ಗಳು, ಬೀಸಣಿಕೆಗಳು, ಆಭರಣದ ಪೆಟ್ಟಿಗೆಗಳು, ಹುಕ್ಕಾ ಮತ್ತು ಇತರ ಸಾಮಗ್ರಿಗಳನ್ನು ನೋಡಬಹುದು. ಗ್ಲಾಸ್ನಿಂದ ಮಾಡಿದ ಸುಂದರವಾದ ನವಿಲುಗಳನ್ನೂ ಇಲ್ಲಿ ನೋಡಬಹುದು.
ರಾಣಿ ಚೇಂಬರಿನಲ್ಲಿ ಪ್ರವಾಸಿಗರು ಮೇವಾರದ ಕೆಲವು ಮೂಲ ಪೇಂಟಿಂಗ್ಗಳನ್ನು ನೋಡಬಹುದು. ಈ ಮ್ಯಾನ್ಷನ್ನ ಒಳಾಂಗಣವನ್ನು ಸೂಕ್ಷ್ಮವಾದ ಗಾಜಿನ ಕಸೂತಿಯಿಂದ ಅಲಂಕರಿಸಲಾಗಿದೆ.