Search
  • Follow NativePlanet
Share
ಮುಖಪುಟ » ಸ್ಥಳಗಳು» ತುಯೆನ್ಸಾಂಗ್

ತುಯೆನ್ಸಾಂಗ್ : ಒಂದೇ ಸ್ಥಳದಲ್ಲಿ ಅಸಂಖ್ಯಾತ ರಂಗುರಂಗಿನ ಬುಡಕಟ್ಟು ಜನಾಂಗ

6

ನಾಗಾಲ್ಯಾಂಡ್ ನ ಪೂರ್ವಭಾಗದ ದೊಡ್ಡ ಜಿಲ್ಲೆಯೆನಿಸಿರುವ ತುಯೆನ್ಸಾಂಗ್, ಅದೇ ಹೆಸರಿನ ಜಿಲ್ಲೆಯ ಪ್ರಧಾನ ಕಚೇರಿಯಾಗಿದೆ. ಕೇವಲ ಗಾತ್ರಕ್ಕೆ ಮಾತ್ರವಲ್ಲದೆ, ಹೆಚ್ಚು ಸಂವಿಧಾನಿಕ ಸೌಕರ್ಯಗಳನ್ನು ಹೊಂದಿರುವುದರಿಂದ ಈ ಜಿಲ್ಲೆ ಬಹಳ ಮುಖ್ಯವಾಗಿದೆ. 1947 ನೇ ಇಸ್ವಿಯಲ್ಲಿ ಈ ನಗರವನ್ನು ಸ್ಥಾಪಿಸಲಾಯಿತು. ಇದನ್ನು ಈಶಾನ್ಯ ಸರಹದ್ದು ಏಜೆನ್ಸಿ (North East Frontier Agency) ನಿರ್ವಹಿಸಲು ಸ್ಥಾಪಿಸಲಾಯಿತು. ಜಿಲ್ಲೆಯ ಪೂರ್ವ ದಿಕ್ಕಿನ ಗಡಿಭಾಗದಲ್ಲಿ ಮ್ಯಾನ್ ಮಾರ್ ಮತ್ತು ಉಳಿದ ನಾಗಾಲ್ಯಾಂಡ್ ನ ಜಿಲ್ಲೆಗಳ ಮತ್ತೊಂದು ಬದಿಯಲ್ಲಿದೆ. ಎನ್ಇಎಫ್‌ಎ ಆಡಳಿತ ಪ್ರಧಾನ ಕಚೇರಿಯಾಗಿರುವ ತುಯೆನ್ಸಾಂಗ್, ಪ್ರಸ್ತುತ ಮಾನ್, ಕಿಫೈರ್ ಮತ್ತು ಲಾಂಗ್ ಲೆಂಗ್ ಜಿಲ್ಲೆಗಳನ್ನು ಒಳಗೊಂಡಿದೆ. ಒಟ್ಟಾರೆ ಈ ನಾಲ್ಕು ಜಿಲ್ಲೆಗಳನ್ನು ಪ್ರಾಚ್ಯ ನಾಗಾಲ್ಯಾಂಡ್ ಎಂದು ಕರೆಯಲ್ಪಟ್ಟಿತು.

1957ರವರೆಗೆ ತುಯೆನ್ಸಾಂಗ್ ಭಾರತೀಯ ಭೂಪ್ರದೇಶದ ಮತ್ತು ಮ್ಯಾನ್ ಮಾರ್ ನ ಭಾಗವಾಗಿರಲಿಲ್ಲ. ಆದರೆ ಅವಿಭಜಿತ ಅಸ್ಸಾಂನ ಕೋಹಿಮಾ ಮತ್ತು ಮೋಕೊಕ್ ಚುಂಗ್ ಜಿಲ್ಲೆಗಳು ತುಯೆನ್ಸಾಂಗ್ ಗೆ ಸೇರ್ಪಟ್ಟ ಮೇಲೆ ವಿಧಿವತ್ತಾಗಿ ಇದನ್ನು ಭಾರತೀಯ ಭೂಪ್ರದೇಶದ ಭಾಗ ಎಂದು ಪರಿಗಣಿಸಲಾಯಿತು. ಆ ಸಮಯದಲ್ಲಿ, ಅಂದರೆ ನಾಗಾಲ್ಯಾಂಡ್ ಒಂದು ರಾಜ್ಯವಾಗಿರದ ಸಮಯದಲ್ಲಿ, ತುಯೆನ್ಸಾಂಗ್ ನಾಗಾ ಹಿಲ್ಸ್ ತುಯೆನ್ಸಾಂಗ್ ಪ್ರದೇಶಕ್ಕೆ ಪ್ರಧಾನ ಆಡಳಿತ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ 1963ರಲ್ಲಿ ನಾಗಾಲ್ಯಾಂಡನ್ನು ಸ್ವತಂತ್ರ ರಾಜ್ಯವನ್ನಾಗಿ ಮಾಡಿದಾಗ, ತುಯೆನ್ಸಾಂಗ್, ಮೊಕೊಕ್ ಚುಂಗ್ ಮತ್ತು ಕೋಹಿಮಾ ಎಂಬ ಮೂರು ಜಿಲ್ಲೆಗಳನ್ನು ರೂಪಿಸಲಾಯಿತು. ನಾಗಾಲ್ಯಾಂಡ್ ನಲ್ಲಿ ಹೆಚ್ಚು ಜಿಲ್ಲೆಗಳಾಗುತ್ತಿದ್ದಂತೆ ತುಯೆನ್ಸಾಂಗ್ ಗಾತ್ರ ಕಡಿಮೆಯಾಗುತ್ತ ಬಂದಿತು.

ಸಮುದ್ರಮಟ್ಟದಿಂದ ಸುಮಾರು 1371 ಮೀಟರ್ ಎತ್ತರದಲ್ಲಿ ತುಯೆನ್ಸಾಂಗ್ ಇದೆ. ವೋಖಾ ಮತ್ತು ಮೊಕೊಕ್ ಚುಂಗ್ ಮಾರ್ಗವಾಗಿ ಪ್ರಯಾಣಿಸಿದರೆ ತುಯೆನ್ಸಾಂಗ್ ಕೋಹಿಮಾದಿಂದ 269 ಕಿ.ಮೀ. ದೂರದಲ್ಲಿದೆ. ರಾಜ್ಯದ ರಾಜಧಾನಿಯಿಂದ ಜುನ್ ಹೆಬೊಟೋ ಮಾರ್ಗವಾಗಿ ಪ್ರಯಾಣಿಸಿದರೆ 235 ಕಿ.ಮೀ. ದೂರದಲ್ಲಿದೆ. ಪ್ರಾಚ್ಯ ನಾಗಾಲ್ಯಾಂಡ್ ನ ಮುಖ್ಯ ಕೇಂದ್ರವಾಗಿಯೂ ತುಯೆನ್ಸಾಂಗ್ ಕಾರ್ಯ ನಿರ್ವಹಿಸುತ್ತಿದೆ.

ಭಾರತದ ಸಂವಿಧಾನ ತುಯೆನ್ಸಾಂಗ್ ಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟಿದೆ. ಇದರ ಪ್ರಕಾರ, ಸಂಸತ್ ಯಾವುದೇ ತರಹದ ಕಾನೂನನ್ನು ಜಾರಿಗೊಳಿಸಿದರೂ ವಿಶೇಷವಾಗಿ ನಾಗಾಗಳ ಧಾರ್ಮಿಕ ಹಾಗು ಸಾಮಾಜಿಕ ಆಚರಣೆಗೆ ಸಂಬಂಧಪಟ್ಟ, ಭೂಮಿಗೆ ಸಂಬಂಧಪಟ್ಟ ಯಾವುದೇ ಪರಿಣಾಮ ಇವರ ಮೇಲೆ ಬೀಳುವುದಿಲ್ಲ. ಆದರೆ ನಾಗಾ ವಿಧಾನಸಭೆ ಕಾನೂನನ್ನು ಜಾರಿಗೊಳಿಸಿದರೆ ಆಘ ವಿಷಯ ಬೇರೆಯಾಗಿರುತ್ತದೆ.

ವರ್ಣರಂಜಿತ ಸಂಸ್ಕೃತಿಯನ್ನು ಹೊಂದಿರುವ ವಿನೂತನ ಪ್ರವಾಸಿ ತಾಣ

ತುಯೆನ್ಸಾಂಗ್ ನ್ನು ಮಿನಿ ನಾಗಾಲ್ಯಾಂಡ್ ಅಂತಲೂ ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅನೇಕ ಬುಡಕಟ್ಟು ಜನಾಂಗದವರು ಒಂದೇ ಸ್ಥಳದಲ್ಲಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇದು ಸ್ಥಳದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಚಟುವಟಿಕೆಯಿಂದಿರುವ ಜನರು, ವಿವಿಧ ಸಾಂಸ್ಕೃತಿಕ ಪದ್ಧತಿಗಳು, ಆಚರಣೆಗಳು, ರಂಗುರಂಗಿನ ವೇಷಭೂಷಣಗಳು, ನೃತ್ಯಗಳು, ಜನಪದ ಹಾಡುಗಳು ಎಲ್ಲವೂ ಸೇರಿಕೊಂಡು ತುಯೆನ್ಸಾಂಗ್ ಒಂದು ವಿನೂತನ ಸ್ಥಳವಾಗಲು ಕಾರಣವಾಗಿದೆ. ಪ್ರವಾಸಿ ತಜ್ಞರ ಪ್ರಕಾರ, ನಾಗಾಲ್ಯಾಂಡ್ ನ ಕ್ಷಣಿಕ ದರ್ಶನ ಪಡೆಯಲು, ತುಯೆನ್ಸಾಂಗ್ ಗೆ ಭೇಟಿ ಅವಶ್ಯಕ. ಏಕೆಂದರೆ, ನಾಗಾಲ್ಯಾಂಡ್ ನ ಅನ್ಯ ಜಿಲ್ಲೆಗಳನ್ನು ಹೊರತುಪಡಿಸಿದರೆ, ಸಾಂಸ್ಕೃತಿಕ ವೈವಿಧ್ಯತೆಗೆ ಇಂಬು ನೀಡುವಂತೆ, ತುಯೆನ್ಸಾಂಗ್ ನಲ್ಲಿ ತಲೆತಲಾಂತರದಿಂದ ವಿವಿಧ ಬಗೆಯ ಬುಡಕಟ್ಟು ಜನಾಂಗದವರು ಸಹಬಾಳ್ವೆ ನಡೆಸುತ್ತಿದ್ದಾರೆ.

ಚಾಂಗ್‌ಗಳು, ಸಂಗಟಾಮ್‌ಗಳು, ಯಿಮ್‌ಚುಂಗರುಗಳು, ಕಿಯಾಮ್‌ನಿಯಂಗನ್‌ಗಳು ಶಾಶ್ವತವಾಗಿ ಇಲ್ಲಿ ಜಮೀನುದಾರರಾಗಿದ್ದಾರೆ. ಇವರು ತುಯೆನ್ಸಾಂಗ್‌ನ ಪರ್ಮನೆಂಟ್ ಬುಡಕಟ್ಟು ಜನಾಂಗದವರು ಎಂದು ಹೇಳಬಹುದು. ಈ ಜನಾಂಗಗಳ ಜೊತೆಗೆ ಸುಮಿನಾಗಾಗಳು ಸಹ ಈ ಸ್ಥಳದ ನಿವಾಸಿಗಳಾಗಿದ್ದಾರೆ.

ಪ್ರವಾಸಿಗರ ಆಸಕ್ತಿ ಕೆರಳಿಸುವ ವಿಶಿಷ್ಟವಾದ ಕರಕುಶಲ ವಸ್ತುಗಳು, ಕೈಮಗ್ಗ ಮತ್ತು ಆಭರಣಗಳು

ತುಯೆನ್ಸಾಂಗ್ ಕರಕುಶಲ ವಸ್ತುಗಳಿಗೆ, ಕೈಮಗ್ಗಗಳಿಗೆ ಬಹಳ ಜನಪ್ರಿಯತೆ ಪಡೆದಿದೆ. ಇಲ್ಲಿಯ ಜನರು ತಮ್ಮ ಸಾಂಪ್ರದಾಯಿಕ ನಾಗಾ ಉಡುಗೆ ತೊಡುಗೆಗಳಲ್ಲಿರುವುದು ಪ್ರಪಂಚದಾದ್ಯಂತ ಫ್ಯಾಷನ್ ಪ್ರಿಯರಲ್ಲಿ ಅಚ್ಚರಿ ಮೂಡಿಸುತ್ತದೆ. ಕೆಂಪು ವರ್ಣದ ವಸ್ತ್ರದ ಮೇಲೆ ಕರಗಳಿಂದ ಮಾಡಿದ ಕಲೆಯ ಕೆಲಸ, ಆಭರಣಗಳು ಇವೆಲ್ಲವೂ ತುಯೆನ್ಸಾಂಗ್ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ತುಯೆನ್ಸಾಂಗ್ ಪ್ರವಾಸ ಕೈಗೊಂಡಾಗ ಬುಡಕಟ್ಟು ಜನಾಂಗದ ಕರಕುಶಲ ವಸ್ತುಗಳಿರುವ ಮಾರುಕಟ್ಟೆಯಲ್ಲಿ ಅಡ್ಡಾಡಲು ಒಂದು ಇಡೀ ದಿನವಾದರೂ ಬೇಕೇಬೇಕು. ಪ್ರವಾಸಿಗರು ತುಯೆನ್ಸಾಂಗ್ ಪಟ್ಟಣದಿಂದ ಇತರ ಊರುಗಳಾದ ಲಾಂಗ್ ಟ್ರೋಕ್, ಕಿಫೈರ್ ಮತ್ತು ಪುಂಗ್ರೂಗೆ ಪ್ರವಾಸ ಕೈಗೊಳ್ಳಬಹುದು.

ಹವಾಮಾನ

ತಂಪಾದ ಮತ್ತು ಹಿತಕರವಾದ ಹವಾಮಾನವನ್ನು ವರ್ಷವಿಡೀ ಕಾಣಬಹುದು.

ತುಯೆನ್ಸಾಂಗ್ ಪ್ರಸಿದ್ಧವಾಗಿದೆ

ತುಯೆನ್ಸಾಂಗ್ ಹವಾಮಾನ

ಉತ್ತಮ ಸಮಯ ತುಯೆನ್ಸಾಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತುಯೆನ್ಸಾಂಗ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 155 ತುಯೆನ್ಸಾಂಗ್ ನಿಂದ ಡಿಮಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಪಟ್ಟಣದ ಜೀವನಾಡಿಯಾಗಿದೆ. ಎಲ್ಲಾ ಟ್ಯಾಕ್ಸಿಗಳು, ಬಸ್ ಗಳು ಈ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿಯೇ ತುಯೆನ್ಸಾಂಗ್ ತಲುಪುತ್ತವೆ. ಮೊದಲಿಗೆ ಡಿಮಾಪುರ ತಲುಪಿ ಅಲ್ಲಿಂದ ರಸ್ತೆಯ ಮೂಲಕ ತುಯೆನ್ಸಾಂಗ್ ಗೆ ಪಯಣ ಬೆಳೆಸಬಹುದು. ಅದೇ ತರಹ ಅಮಗುರಿ ಅಥವಾ ಮರಿಯಾನಿ ರೈಲು ನಿಲ್ದಾಣವನ್ನು ತಲುಪಿದ ಮೇಲೆ ರಸ್ತೆ ಮಾರ್ಗವಾಗಿ ತುಯೆನ್ಸಾಂಗ್ ಮುಟ್ಟಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತುಯೆನ್ಸಾಂಗ್ ನಿಂದ 65 ಕಿ.ಮೀ. ದೂರದಲ್ಲಿರುವ ಅಮಗುರಿ ರೈಲು ನಿಲ್ದಾಣವೇ ಅತ್ಯಂತ ಸಮೀಪದ ರೈಲು ನಿಲ್ದಾಣ. ಮರಿಯಾನಿ ರೈಲು ನಿಲ್ದಾಣವೂ ಹತ್ತಿರದಲ್ಲಿಯೇ ಇದೆ. ಇಲ್ಲವಾದರೆ ಮೊದಲಿಗೆ ಡಿಮಾಪುರಕ್ಕೆ ರೈಲು ಮುಖಾಂತರ ಹೋಗಿ ಅಲ್ಲಿಂದ ರಸ್ತೆ ಮೂಲಕ 600 ಕಿ.ಮೀ. ಪ್ರಯಾಣಿಸಿದರೆ ತುಯೆನ್ಸಾಂಗ್ ತಲುಪಬಹುದು. ಇಲ್ಲಿಂದ ಪ್ರವಾಸಿಗರ ಟ್ಯಾಕ್ಸಿ, ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತುಯೆನ್ಸಾಂಗ್ ಅತ್ಯಂತ ಸಮೀಪದ ವಿಮಾನ ನಿಲ್ದಾಣವೆಂದರೆ ಡಿಮಾಪುರ ವಿಮಾನ ನಿಲ್ದಾಣ. ಇಲ್ಲಿಂದ ಇತರ ಸಾರಿಗೆ ವ್ಯವಸ್ಥೆಯ ಸೌಲಭ್ಯವಿದೆ. ಇದನ್ನು ಹೊರತುಪಡಿಸಿದರೆ, ತುಯೆನ್ಸಾಂಗ್ ಮತ್ತೊಂದು ಹತ್ತಿರದ ವಿಮಾನ ನಿಲ್ದಾಣವೆಂದರೆ 113 ಕಿ.ಮೀ ದೂರದಲ್ಲಿರುವ ಜೋಹತ್ ವಿಮಾನ ನಿಲ್ದಾಣ, 183 ಕಿ.ಮೀ. ದೂರದಲ್ಲಿರುವ ಅಸ್ಸಾಂನ ಲಾಖಿಮ್ ಪುರ ಜಿಲ್ಲೆಯಲ್ಲಿರುವ ಲಿಲ್‌ಬರಿ ವಿಮಾನ ನಿಲ್ದಾಣ ಮತ್ತು 183 ಕಿ.ಮೀ. ದೂರದಲ್ಲಿರುವ ದಿಬ್ರುಘಡ್ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun