ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ತ್ರಿಪುರಾ ಪ್ರವಾಸೋದ್ಯಮ - ಶೃಂಗಾರ ಸ್ವರೂಪದ ರಾಜ್ಯ

ಭಾರತ ದೇಶದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯಂತ ಉತ್ಕೃಷ್ಟ ರಾಜ್ಯಗಳಲ್ಲಿ ಒಂದು - ತ್ರಿಪುರಾ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು ಕಣಿವೆ ಮತ್ತು ಬೆಟ್ಟಗುಡ್ಡಗಳಿಂದಾಗಿ ತ್ರಿಪುರಾ ರಾಜ್ಯ ದೇಶದ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಲ್ಲೊಂದು. ದೇಶದ ಮೂರನೇ ಅತಿ ಚಿಕ್ಕರಾಜ್ಯವಾಗಿರುವ ತ್ರಿಪುರಾ, ಈಶಾನ್ಯ ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ಪುಟ್ಟ ರಾಜ್ಯ. ತ್ರಿಪುರಾ ಹತ್ತೊಂಬತ್ತು ವಿವಿಧ ಸಮುದಾಯಗಳು ವಾಸವಾಗಿರುವ ಸುಂದರ ಮಿಶ್ರಣದಂತಿರುವ ರಾಜ್ಯ, ಬೆಂಗಾಲಿ ಬುಡಕಟ್ಟೇತರ ಸಮುದಾಯವನ್ನೂ ಹೊಂದಿರುವ ರಾಜ್ಯ. ತ್ರಿಪುರಾ ಪ್ರವಾಸೋದ್ಯಮ ಕುತೂಹಲಕಾರಿ ಚರಿತ್ರೆ ಹೊಂದಿದ್ದು, ವಿಫುಲ ವೈವಿಧ್ಯತೆಯನ್ನು ಹೊಂದಿದೆ.

ತ್ರಿಪುರಾ

ತ್ರಿಪುರಾ - ಆರಂಭ

ಚರಿತ್ರಕಾರರು ಮತ್ತು ಸಂಶೋಧಕರು ತ್ರಿಪುರಾ ರಾಜ್ಯದ ಮೂಲದ ಬಗ್ಗೆ ಅನೇಕರು ತಮ್ಮದೇ ಆದ ಕಲ್ಪನೆಗಳನ್ನು ಹೊಂದಿದ್ದರು. 'ರಾಜಮಾಲ' ತ್ರಿಪುರಾದ ಖ್ಯಾತ ಚಾರಿತ್ರಿಕ ನ್ಯಾಯಾಲಯದ ದಾಖಲೆ ಉಲ್ಲೇಖಸಿದಂತೆ , ಹಲವು ವರ್ಷಗಳ ಹಿಂದೆ ತ್ರಿಪುರ್ ಎನ್ನುವ ರಾಜ ಈ ಪ್ರದೇಶವನ್ನು ಆಳುತ್ತಿದ್ದ ಹಾಗಾಗಿ ಇದಕ್ಕೆ ತ್ರಿಪುರಾ ಎನ್ನುವ ಹೆಸರು ಬಂತು. ಆಧುನಿಕ ತ್ರಿಪುರಾವನ್ನು ಈ ಹಿಂದೆ ತ್ರಿಪುರಿ ಸಾಮ್ರಾಜ್ಯ ಬ್ರಿಟಿಷರ ಅಣತಿಯಂತೆ ವೈಭವೋಪೇತವಾಗಿ ದರ್ಬಾರ್ ನಡೆಸುತ್ತಿದ್ದ ರಾಜ್ಯ.

ತ್ರಿಪುರ ಪ್ರವಾಸೋದ್ಯಮ -ಭೌಗೋಳಿಕ ಮತ್ತು ಹವಾಮಾನದ ಬಗ್ಗೆ ಒಂದು ನೋಟ

ತ್ರಿಪುರಾ ಈಶಾನ್ಯ ಭಾರತದ ಏಳು ಉನ್ನತ ರಾಜ್ಯಗಳಲ್ಲೊಂದು, ಅಲ್ಲದೇ ’ಏಳು ಸಹೋದರಿ’ಯರು ಎಂದೂ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಪರ್ವತ ಶ್ರೇಣಿಗಳು, ಬೆಟ್ಟಗುಡ್ಡಗಳು, ಬಯಲುಪ್ರದೇಶಗಳ ಜೊತೆ ಕಿರಿದಾದ ಕಣಿವೆಗಳನ್ನು ಹೊಂದಿದೆ. ರಾಜ್ಯದ ಪೂರ್ವದ ಭಾಗದಲ್ಲಿ ಜಾಮಪುಯಿ ಪರ್ವತ ಶ್ರೇಣಿ, ಪಶ್ಚಿಮಕ್ಕೆ ಉನಕೋಟಿ - ಶಕಂತಲಾಂಗ್, ಲೋಂಗಾತ್ರೋಯಿ, ಅಥರಾಮುರ - ಕಾಲಜಾರಿ ಮತ್ತು ಬರ್ಮಾಪುರ - ಡಿಯೋಟಾಮುರವಿದೆ.

ತ್ರಿಪುರಾದ ಹವಾಮಾನ

ತ್ರಿಪುರಾ ರಾಜ್ಯದ ಹವಾಮಾನ ಪರ್ವತ ಶ್ರೇಣಿಗಳ ಭಾಗದಲ್ಲಿರುವ ಹವಾಮಾನವನ್ನೇ ಹೊಂದಿದೆ. ತ್ರಿಪುರಾ ಉಷ್ಣವಲಯ ಹುಲ್ಲುಗಾವಲು ವಾತಾವರಣವನ್ನು ಹೊಂದಿದೆ. ನಾಲ್ಕು ಪ್ರಮುಖ ಖುತುಗಳು ಚಳಿಗಾಲ ಡಿಸೆಂಬರ್ - ಫೆಬ್ರವರಿ, ಮುಂಗಾರು ಮುನ್ನ ಖುತು ಮಾರ್ಚಿನಿಂದ ಎಪ್ರಿಲ್ ವರೆಗೆ, ಮುಂಗಾರು ಮೇ ತಿಂಗಳಿನಿಂದ ಸೆಪ್ಟಂಬರ್ ವರೆಗೆ. ತ್ರಿಪುರಾದ ಉಷ್ಣಾಂಶ ಚಳಿಗಾಲದಲ್ಲಿ ಹತ್ತು ಡಿಗ್ರಿ ಮತ್ತು ಬೇಸಿಗೆಯಲ್ಲಿ 35 ಡಿಗ್ರಿಯವರೆಗಿರುತ್ತದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಭಾರೀ ಮಳೆಯೂ ಬೀಳುತ್ತದೆ.

ತ್ರಿಪುರಾ ಶ್ರೀಮಂತ ಸಂಸ್ಕ್ರುತಿ

ಪ್ರವಾಸಿಗರು ವಿವಿಧ ರೀತಿಯ ಸಾಂಸ್ಕೃತಿಕ ಸಮಾಗಮಕ್ಕೆ ಸಾಕ್ಷಿಯಾಗಬಹುದು, ಯಾಕೆಂದರೆ ತ್ರಿಪುರಾ ವಿವಿಧ ಭಾಷಿಗರು ನೆಲೆಸಿರುವ ರಾಜ್ಯ. ಪ್ರತಿ ಬುಡಕಟ್ಟು ಜನಾಂಗದವರು ತಮ್ಮ ಸಂಸ್ಕೃತಿಗನ್ವಯ ವೈವಿಧ್ಯ ರೀತಿಯಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ವರ್ಷದ ಬೇರೆ ಬೇರೆ ಸಮಯದಲ್ಲಿ ಪ್ರವಾಸಿಗರು ಆಕರ್ಷಣೀಯ ಹಬ್ಬಗಳನ್ನು ಆಚರಿಸುತ್ತಾರೆ, ಉದಾಹರಣೆಗೆ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಾಗಿ ಬರುವ ದುರ್ಗಾಪೂಜೆ, ಅದನಂತರ ದೀಪಾವಳಿ ಹಬ್ಬ, ಜುಲೈ ತಿಂಗಳಲ್ಲಿ ಹದಿನಾಲ್ಕು ದೇವರನ್ನು ಪೂಜಿಸುವ ಕರಾಚಿ ಪೂಜಾ, ಅಶೋಕ ಅಷ್ಠಮಿ ಉತ್ಸವ, ಬುದ್ಧ ಪೂರ್ಣಿಮಾ, ಪೋಸ್ - ಸಂಕ್ರಾಂತಿ ಮೇಳ ಮತ್ತು ದೀಪೋತ್ಸವ ಪ್ರಮುಖವಾದದ್ದು.

ಹಬ್ಬಹರಿದಿನಗಳನ್ನು ವೈಭವಾಗಿ ಆಚರಿಸುವುದರ ಜೊತೆಗೆ, ತ್ರಿಪುರಾ ಪ್ರವಾಸೋದ್ಯಮ ಕಲಾತ್ಮಕ ನೃತ್ಯ, ಸಂಗೀತಕ್ಕೂ ಮಾನ್ಯತೆ ನೀಡುತ್ತದೆ. ವಿವಿಧ ಬುಡಕಟ್ಟು ಜನಾಂಗದವರು ತಮ್ಮದೇ ಆದ ನೃತ್ಯ ಮತ್ತು ಸಂಗೀತ ಪದ್ದತಿಯನ್ನು ಹೊಂದಿದ್ದಾರೆ. ಗೌರಿ ಪೂಜೆಯ ಸಮಯದಲ್ಲಿನ ಗೋರಿಯಾ ನೃತ್ಯವನ್ನು ತ್ರಿಪುರಿ ಮತ್ತು ಜಮಾತೀಯಾ ಜನರು ಆಡುತ್ತಾರೆ. ಇದೇ ರೀತಿ ಹೊಜ್ಜಗಿರಿ ನೃತ್ಯವನ್ನು ನೋಡುವುದೇ ಒಂದು ಆನಂದ, ರಿಯಾಂಗ್ ಸಮುದಾಯದ ಸಣ್ಣ ಹುಡುಗಿಯರು ಮಣ್ಣಿನ ಕಣದಲ್ಲಿ ಆಯ ತಪ್ಪದೇ ಡ್ಯಾನ್ಸ್ ಮಾಡುತ್ತಾರೆ. ಇದಲ್ಲದೇ ಲಿಬಂಗ್ ನೃತ್ಯ, ಮಮಿತಾ ನೃತ್ಯ, ಮೋಸ್ಕ್ ಸುಲ್ಮನಿ ನೃತ್ಯ, ಬಿಜು ನೃತ್ಯ, ಹಿಕ್ ಕಾಕ್ ನೃತ್ಯ ಮುಂತಾದವು ತ್ರಿಪುರಾದ ಪ್ರಮುಖ ನೃತ್ಯಗಳು.

ಇನ್ನೊಂದು ವಿಚಾರವೆಂದರೆ ಈ ಜನಾಂಗದವರು ನೃತ್ಯಕ್ಕಾಗಿ ತಮ್ಮದೇ ಆದ ಸಂಗೀತ ಪರಿಕರಗಳನ್ನು ಬಳಸುತ್ತಾರೆ. ಉದಾಹರಣೆಗೆ ಸರಿಂದಾ, ಚಾಂಗ್ ಪೆಂಗ್ ಮತ್ತು ಸುಮಾಯಿ. ಇದಲ್ಲದೇ ಕರಕುಶಲ, ಮರದ ಸಾಮಾನಿನ ವಸ್ತು, ನಿತ್ಯೋಪಯೋಗಿ ಸಾಮಾನು, ಅಲಂಕಾರದ ವಸ್ತುಗಳನ್ನು ಬಿದಿರು ಮತ್ತು ಬೆತ್ತದಿಂದ ತಯಾರಿಸುತ್ತಾರೆ.

ತ್ರಿಪುರಾದ ಪ್ರವಾಸೋದ್ಯಮ ಮತ್ತು ಪ್ರವಾಸಿ ಕೇಂದ್ರಗಳು ತ್ರಿಪುರಾದ ಸುತ್ತಮುತ್ತ

ಮಾಲಿನ್ಯವಿಲ್ಲದ ಗಾಳಿ, ಸುಂದರ ವಾತಾವರಣ, ಕುತೂಹಲಕರಿ ಪ್ರವಾಸಿ ಕೇಂದ್ರಗಳು, ತ್ರಿಪುರಾ ರಾಜ್ಯ ಎಲ್ಲಾ ವರ್ಗದ ಪ್ರವಾಸಿಗರಿಗೆ ಸ್ವರ್ಗ. ತ್ರಿಪುರಾದಲ್ಲಿರುವ ಪ್ರವಾಸಿ ಕ್ಷೇತ್ರಗಳು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ಸಂಯೋಜಿತವಾಗಿದೆ. ಅಗಾಧವಾಗಿ ಬೆಳೆದಿರುವ ದಟ್ಟನೆಯ ಕಾಡುಗಳು, ಜಲಚರ ಪ್ರಾಣಿಗಳು ಸಮ್ಮಿಲವೇ ತ್ರಿಪುರಾದಲ್ಲಿದೆ.

ತ್ರಿಪುರಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕಣ್ಣಿಗೆ ಹಬ್ಬವಾಗಲಿದೆ. ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ತುಂಬಾ ಪ್ರವಾಸಿ ಸ್ಥಳಗಳಿವೆ. ಐತಿಹಾಸಿಕ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇವಾಲಯಗಳು ಇಲ್ಲಿವೆ. ಉದಾಹರಣೆಗೆ ಜಗನ್ನಾಥ ದೇವಾಲಯ, ಉಮಾಮಹೇಶ್ವರಿ ದೇವಾಲಯ ಇತ್ಯಾದಿ. ಬೆನ್ಬುನ್ ಬಿಹಾರ್ / ಬುದ್ದ ದೇವಾಲವನ್ನು ವೀಕ್ಷಿಸಬಹುದು. ಅಲ್ಲದೇ ಅಗರ್ತಲಾದ ಸೇಪಾಝಿಲಾ ಪಾರ್ಕಿನಲ್ಲಿ ವಿವಿಧ ಪ್ರಾಣಿಗಳನ್ನೂ ನೋಡಬಹುದು.

ಅಗರ್ತಲಾದಲ್ಲಿ ರೋಸ್ ವ್ಯಾಲಿ ಅಮ್ಯೂಸ್ಮೆಂಟ್ ಪಾರ್ಕ್ ಕೂಡಾ ಇದೆ. ಅಗರ್ತಲಾ ಹೊರತಾಗಿ, ತ್ರಿಪುರಾದಲ್ಲಿ ಬೇರೆ ಪ್ರವಾಸಿ ಸ್ಥಳಗಳೂ ಇವೆ. ಅದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ದಲಾಯಿ, ಕೈಲಾಶಹರ್, ಉನಕೋಟಿ ಮತ್ತು ಉದಯಪುರ್. ಉದಯಪುರದಲ್ಲಿ ಭಕ್ತಾದಿಗಳಿಗೆ ತ್ರಿಪುರ ಸುಂದರಿ ದೇವಾಲಯ ಮತ್ತು ಭುವನೇಶ್ವರಿ ದೇವಾಲಯ, ಕೈಲಾಶಹರ್ ನಲ್ಲಿ ಚೌದೋ ದೇವೊತಾರ್ ದೇವಾಲಯ ಮತ್ತು ಟೀ ಎಸ್ಟೇಟ್ ಕೂಡಾ ಇದ್ದು ಎಲ್ಲರನ್ನೂ ಆಕರ್ಷಿಸುತ್ತದೆ.

ತ್ರಿಪುರಾದಲ್ಲಿ ಪೂರ್ಣಾಂಕದ, ಕುತೂಹಲ ಹುಟ್ಟಿಸುವ ಸ್ಥಳಗಳಿವೆ. ಅವು ಯಾವುದೆಂದರೆ ಉಜ್ಜಯಂತ ಅರಮನೆ, ತ್ರಿಪುರಾ ರಾಜ್ಯ ಮ್ಯೂಸಿಯಂ, ಸುಕಂತ ಅಕಾಡೆಮಿ, ಲಾಂಗ್ ಥರಾಯಿ ಮಂದಿರ, ಮನಿಪುರಿ ರಾಸ್ ಲೀಲಾ ಮೇಳ, ಉನಕೋಟಿ, ಲಕ್ಷ್ಮಿ ನಾರಾಯಣ ದೇವಾಲಯ, ಪುರಾನೋ ರಾಜ್ಬರಿ ಮತ್ತು ನಜ್ರುಲ್ ಗ್ರಂಥಾಗರ್ ಮತ್ತು ಸದಾ ಮೋಡದಿಂದ ತುಂಬಿರುವ ಚಿರತೆ ಪಾರ್ಕ್ ಮತ್ತು ರಾಜ್ಬರಿ ಪಾರ್ಕ್.

ಇನ್ನೇಕೆ ತಡ? ಲಗೇಜ್ ಪ್ಯಾಕ್ ಮಾಡಿ ಹೊರಡಿ ತ್ರಿಪುರಾದ ಸುಂದರ ಅನುಭವದ ಪ್ರವಾಸಕ್ಕಾಗಿ. ತ್ರಿಪುರಾದಿಂದ ಹಿಂದಿರುಗಿದ ನಂತರ ನಿಮಗೆ ಖಂಡಿತಾ ನಿರಾಶೆಯಾಗುವುದಿಲ್ಲ.