Search
  • Follow NativePlanet
Share
» »ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

By Vijay

ಈಶಾನ್ಯ ಭಾರತವು ನಿಜವಾಗಿಯೂ ಪ್ರಕೃತಿ ಸಂಪತ್ತಿನಿಂದ ಕೂಡಿರುವ ಭಾಗ. ಈ ಭಾಗದಲ್ಲಿ ಬರುವ ಸಾಕಷ್ಟು ಸ್ಥಳಗಳು ಉಳಿದ ಭಾರತದ ಭಾಗಗಳಿಗೆ ಹೋಲಿಸಿದರೆ ಅಷ್ಟೊಂದು ಹೆಸರುವಾಸಿಯಾಗಿಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಇಲ್ಲಿನ ಸ್ಥಳಗಳಲ್ಲಿ ಕಂಡುಬರುವ ಮುಗ್ಧತೆ, ಸುಂದರತೆ, ಸರಳತೆ ಭೇಟಿ ನೀಡುವ ಪ್ರವಾಸಿಗರ ಮನ ಕದಿಯುವುದರಲ್ಲಿ ಸಂಶಯವಿಲ್ಲ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಚಿತ್ರಕೃಪೆ: rajkumar1220

ಅರುಣಾಚಲ ಪ್ರದೇಶ ಇರಲಿ ಅಥವಾ ನಾಗಾಲ್ಯಾಂಡ್ ಇರಲಿ ಪ್ರತಿಯೊಂದು ರಾಜ್ಯಗಳೂ ಸಹ ತಮ್ಮಲ್ಲಿ ಅಮುಲ್ಯವಾದ ಪ್ರಕೃತಿ ಸಂಪತ್ತನ್ನೊಳಗೊಂಡ ಹಲವು ಸ್ಥಳಗಳನ್ನು ಹುದುಗಿಸಿಟ್ಟಿಕೊಂಡಿವೆ ಎಂತಲೆ ಹೇಳಬಹುದು. ಪ್ರಸ್ತುತ ಲೇಖನವು ಅರುಣಾಚಲ ಪ್ರದೇಶದಲ್ಲಿರುವ ಜಿರೊ ಎಂಬ ಪುಟ್ಟ ಪಟ್ಟಣದ ಕುರಿತು ತಿಳಿಸುತ್ತದೆ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಚಿತ್ರಕೃಪೆ: rajkumar1220

ಅರುಣಾಚಲ ಪ್ರದೇಶ ರಾಜ್ಯದ ಲೋವರ್ ಸುಬಾನ್ಸಿರಿ ಜಿಲ್ಲೆಯಲ್ಲಿರುವ ಜಿರೊ ಒಂದು ವಿಶಿಷ್ಟ ಆಕರ್ಷಣೆಯ ಸ್ಥಳವಾಗಿದೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸುವ ನಿಟ್ಟಿನಲ್ಲಿ ತಯಾರಿಸಲಾಗುವ ಪಟ್ಟಿಯಲ್ಲಿ ನೆಚ್ಚಿನ ತಾಣವಾಗಿ ಇದನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ಸೇರಿಸಲಾಗಿದೆ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಚಿತ್ರಕೃಪೆ: rajkumar1220

ಜಿರೊ ಪಟ್ಟಣದಲ್ಲಿ ಕೆಲಸ ಕಾರ್ಯಗಳು, ವ್ಯವಹಾರಗಳು, ಚಟುವಟಿಕೆಗಳು ನಡೆಯುವ ಭಾಗವನ್ನು ಹಾಪೋಲಿ ಎಂದು ಕರೆಯಲಾಗುತ್ತದೆ ಹಾಗೂ ಇಲ್ಲಿನ ಸ್ಥಳೀಯರನ್ನು ಅಪತಾನಿಗಳು ಎಂದು ಕರೆಯಲಾಗುತ್ತದೆ. ಮೂಲತಃ ಅಪತಾನಿಗಳು ಸ್ಥಳೀಯ ನಿವಾಸಿಗಳಾದರೂ ಸಹ ಬುಡಕಟ್ಟು ಜನಾಂಗದವರಿಂದ ಕೆಲವು ವಿಚಾರಗಳಲ್ಲಿ ವಿಶಿಷ್ಟ ಸಂಪ್ರದಾಯವುಳ್ಳವರಾಗಿದ್ದಾರೆ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು


ಅತಿ ಎತ್ತರದ ಶಿವಲಿಂಗವಿರುವ ದೇವಾಲಯ
ಚಿತ್ರಕೃಪೆ: rajkumar1220

ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರು ಒಂದೆ ಸ್ಥಳದಲ್ಲಿ ನೆಲೆಸದೆ ಉಪಜೀವನ ಕಳೆಯಲು ಅಲೆದಾಡುವವರಾಗಿರುತ್ತಾರೆ. ಆದರೆ ಅಪತಾನಿಗಳು ಒಂದೆ ಸ್ಥಳದಲ್ಲಿ ನೆಲೆಯೂರಿರುತ್ತಾರೆ ಹಾಗೂ ಕೃಷಿಯನ್ನು ತಮ್ಮ ಉಪಜೀವನಕ್ಕಾಗಿ ಆಯ್ದುಕೊಳ್ಳುತ್ತಾರೆ. ಮೊದಲು ಮುಖಗಳ ಮೇಲೆ ಇತರೆ ಬುಡಕಟ್ಟು ಜನರ ಹಾಗೆ ಹೆಚ್ಚೆ ಹಾಕಿಸಿಕೊಳ್ಳುತ್ತಿದ್ದರೂ ಪ್ರಸ್ತುತ ಅದನ್ನು ಈ ಜನರು ಪರಿಪಾಲಿಸುತ್ತಿಲ್ಲ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಜಿರೊ ಅಪತಾನಿ ಬುಡಕಟ್ಟು ಮಹಿಳೆ
ಚಿತ್ರಕೃಪೆ: Doniv79

ಚಳಿಗಾಲದ ಸಂದರ್ಭದಲ್ಲಿ ಇಲ್ಲಿನ ಪರಿಸರವು ಹಿತಕರವಾದ ವಾತಾವರಣವನ್ನು ಹೊಂದಿದ್ದು, ಸ್ಥಳವು ವಧುವಿನಂತೆ ಸಿಂಗರಿಸಲ್ಪಟ್ಟಿರುತ್ತದೆ. ಮತ್ತೊಂದು ವಿಶೇಷವೆಂದರೆ ಅರುಣಾಚಲ ಪ್ರದೇಶ ರಾಜ್ಯದಲ್ಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿರುವುದು ಈ ಒಂದು ಪಟ್ಟಣದಲ್ಲಿ. ನೂರಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಶಾಲ್ಲೆಗಳು ಇಲ್ಲಿವೆ.

ಜಿರೊ ಎಂಬ ವಿಶಿಷ್ಟ ಜನರ ಸುಂದರ ನಾಡು

ಚಿತ್ರಕೃಪೆ: rajkumar1220

ಜಿರೊದ ಪ್ರಮುಖ ಆಕರ್ಷಣೆಯೆಂದರೆ ಹಚ್ಚಹಸಿರಿನಿಂದ ಕಂಗೊಳಿಸುವ ಟ್ಯಾಲಿವ್ಯಾಲಿ, ಹಿಲಾಕ್ ಜಿರೊ ಪುಟು, ತಾರೆನ್ ಮೀನು ಕೃಷಿ ಹಾಗೂ ಕರ್ಡೊದಲ್ಲಿರುವ ಎತ್ತರದ ಶಿವಲಿಂಗ. ಇಲ್ಲಿರುವ ಅಪತಾನಿ ಜನರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಇದರಲ್ಲಿ ಮುಖ್ಯವಾಗಿ ಮಾರ್ಚ್ ನಲ್ಲಿ ನಡೆಯುವ ಮಯೊಕೊ ಹಬ್ಬ, ಜನವರಿಯಲ್ಲಿ ಬರುವ ಮುರುಂಗ್ ಹಬ್ಬ ಮತ್ತು ಜುಲೈಯಲ್ಲಿ ನಡೆಯುವ ದ್ರೀ ಹಬ್ಬ.

ಜಿರೊ ಅರುಣಾಚಲದ ರಾಜಧಾನಿ ಪಟ್ಟಣವಾದ ಇಟಾನಗರದಿಂದ 150 ಕಿ.ಮೀ ಹಾಗೂ ಲಖೀಂಪುರ ಪಟ್ಟಣದಿಂದ ಸುಮಾರು 100 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ನಿಮಗಿಷ್ಟವಾಗಬಹುದಾದ ಇತರೆ ಲೇಖನಗಳು:

ಈ ಅಪರಿಚಿತ ಗಿರಿಧಾಮಗಳು ಗೊತ್ತೆ?

ಅಂಬೋಲಿ ಎಂಬ ಮಾಯಾ ಸಂಕೋಲೆ

ಅಪಾರ ಖ್ಯಾತಿಯ ಲೋಣಾವಲಾಅಪಾರ ಖ್ಯಾತಿಯ ಲೋಣಾವಲಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X