Search
  • Follow NativePlanet
Share
» »ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು

ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು

ಯಾವುದಾದರೂ ಮುದ್ದಾದ ಮಗುವನ್ನು ಕಂಡಾಗ ಶ್ರೀ ಕೃಷ್ಣನಂತೆ ಇದ್ದಾನೆ ಎಂದು ಹೇಳುತ್ತೇವೆ. ಕಳ್ಳ ಕೃಷ್ಣನು ತನ್ನ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವನ ತನಕವೂ ಅವನ ಲೀಲೆಗಳು ಅಪಾರವಾದುದು. ಹೀಗಾಗಿಯೇ ಮಕ್ಕಳನ್ನು ಶ್ರೀ ಕೃಷ್ಣನಿಗೆ ಹೋಲಿಸುತ್ತಾರೆ.

ಯಾವುದಾದರೂ ಮುದ್ದಾದ ಮಗುವನ್ನು ಕಂಡಾಗ ಶ್ರೀ ಕೃಷ್ಣನಂತೆ ಇದ್ದಾನೆ ಎಂದು ಹೇಳುತ್ತೇವೆ. ಕಳ್ಳ ಕೃಷ್ಣನು ತನ್ನ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವನ ತನಕವೂ ಅವನ ಲೀಲೆಗಳು ಅಪಾರವಾದುದು. ಹೀಗಾಗಿಯೇ ಮಕ್ಕಳನ್ನು ಶ್ರೀ ಕೃಷ್ಣನಿಗೆ ಹೋಲಿಸುತ್ತಾರೆ. ಹೀಗಿರುವಾಗ ದ್ವಾರಕೆಯ ಬಗ್ಗೆ ನೀವು ತಿಳಿಯಬೇಕಾಗಿರುವುದು ಸಾಕಷ್ಟಿದೆ.

ಕ್ರಿ.ಶ ಪೂರ್ವ 300 ವರ್ಷಗಳ ಹಿಂದೆ ಸಾಗರದ ಗರ್ಭದಲ್ಲಿ ಮುಳುಗಿ ಹೋದ ಶ್ರೀ ಕೃಷ್ಣನ ಲೀಲೆಯ ತಾಣ ದ್ವಾರಕೆ. ಈ ತಾಣದ ಬಗ್ಗೆ ಅದ್ಭುತವಾದ ವಿಷಯಗಳನ್ನು ಎಂದಾದರೂ ಕೇಳಿದ್ದೀರಾ?. ಹಾಗಾದರೆ ಕೇಳಿ 192 ಕಿ,ಮೀ ಎತ್ತರ ಹಾಗೂ 192 ಕಿ,ಮೀ ಅಗಲ. ಸುಮಾರು 36,864 ಚದರ ಕಿ,ಮೀ ವಿಸ್ತಿರ್ಣದಲ್ಲಿ ನಿರ್ಮಾಣವಾದ ದ್ವಾರಕೆ.

ಇಲ್ಲಿ ಹಲವಾರು ದೊಡ್ಡ ದೊಡ್ಡ ಅರಮನೆಗಳು, ಕಟ್ಟಡಗಳು, ಎತ್ತರವಾದ ಸ್ತಂಭಗಳು, ವಜ್ರದ ತೋರಣಗಳು, ಸಾಟಿ ಇಲ್ಲದ ವಾಸ್ತುಶಿಲ್ಪಗಳು. ಎತ್ತರವಾದ ವೃಕ್ಷಗಳು, ಬೃಹತ್ ಬೀದಿಗಳು ಹೀಗೆ ಒಂದು ಕಾಲದಲ್ಲಿ ಶ್ರೀಮಂತವಾಗಿ ಬಾಳಿದ ನಗರವಿದು....

ಶ್ರೀ ಕೃಷ್ಣನ ದ್ವಾರಕೆಯ ಕುರಿತು ಕುತೂಹಲಕಾರಿಯಾದ ವಿಷಯಗಳನ್ನು ಲೇಖನದ ಮೂಲಕ ತಿಳಿಯಿರಿ.

ಸಮುದ್ರ

ಸಮುದ್ರ

ಇಂಥಹ ಸುಂದರವಾದ ದ್ವಾರಕೆಯು ಈಗ ಸಮುದ್ರ ಗರ್ಭದಲ್ಲಿ ಮುಳುಗಿ ಹೋಗಿರುವುದು ದುರಾದೃಷ್ಟಕರವಾದುದು. ದ್ವಾರಕೆಯನ್ನು "ಗೋಲಡೆನ್ ಸಿಟಿ ಆಫ್ ಇಂಡಿಯಾ" ಎಂದೂ ಸಹ ಕರೆಯುತ್ತಾರೆ. ಈ ಆಧ್ಯಾತ್ಮಿಕವಾದ ಸ್ಥಳ ಇರುವುದು ಗುಜರಾತ್ ರಾಜ್ಯದ ದೇವಭೂಮಿ ದ್ವಾರಕೆ ಜಿಲ್ಲೆಯಲ್ಲಿ.

ದ್ವಾರಕಾದೀಶ ದೇವಾಲಯ

ದ್ವಾರಕಾದೀಶ ದೇವಾಲಯ

ಈ ದ್ವಾರಕಾದೀಶ ದೇವಾಲಯವು ಸುಮಾರು 2,500 ವರ್ಷಗಳ ಪುರಾತನವಾದುದು. ಈ ಪವಿತ್ರವಾದ ದೇವಾಲಯವನ್ನು ಮಹಮದ್ ಬೆಗಾದಾ ಎಂಬ ಆಳಿತಗಾರ ನಾಶ ಪಡಿಸಿದನು. ತದನಂತರ 16 ನೇ ಶತಮಾನದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು.

ದ್ವಾರಕ ಮಾತಾ

ದ್ವಾರಕ ಮಾತಾ

ಈ ದ್ವಾರಕೆಯಲ್ಲಿ ಆದಿ ಗುರು ಶಂಕರಾಚಾರ್ಯರು ಶಾರದ ಪೀಠ ಅಥವಾ ದ್ವಾರಕಾ ಪೀಠವನ್ನು ಪ್ರತಿಷ್ಟಾಪಿಸಿದರು. ವಿಶೇಷವೆನೆಂದರೆ 4 ಶಕ್ತಿ ಪೀಠಗಳಲ್ಲಿ ಈ ಶಾರದ ಪೀಠವು ಒಂದು. ಈ ಪೀಠವನ್ನು ಹಿಂದೂಗಳ ಶೇಷ್ಟವಾದ ತೀರ್ಥಕ್ಷೇತ್ರವಾಗಿದೆ.

ಶ್ರೀ ಕೃಷ್ಣ ಜನ್ಮ

ಶ್ರೀ ಕೃಷ್ಣ ಜನ್ಮ

ಶ್ರೀ ಕೃಷ್ಣನು ಕ್ರಿ.ಶ ಪೂರ್ವ 3222 ಜುಲೈ 28ರ ಅರ್ಧರಾತ್ರಿ ಶುಕ್ರವಾರದ ದಿನದಂದು ಮಧುರದಲ್ಲಿ ಕಂಸನ ಬಂಧಿಖಾನೆಯಲ್ಲಿ ಜಗತ್ ಗುರು ಶ್ರೀ ಕೃಷ್ಣನು ಜನಿಸಿದನು.

ಕಂಸ

ಕಂಸ

ಕಂಸನನ್ನು ಸಂಹರಿಸಿದ ನಂತರ ಮಧುರವನ್ನು ಆಳುತ್ತಿದ್ದ ಕೃಷ್ಣನನ್ನು ಮಗಧ ರಾಜ ಜರಾಸಂದ, ಕಾಲೇಯನೊಂದಿಗೆ ಸೇರಿ ಸುಮಾರು 17 ಬಾರಿ ಶ್ರೀ ಕೃಷ್ಣನ ಜೊತೆ ಯುದ್ಧವನ್ನು ಮಾಡಿದನು.

ಪ್ರಜೆಗಳು

ಪ್ರಜೆಗಳು

ಕೊನೆಗೆ ಪ್ರಜೆಗಳಿಗೆ ರಕ್ಷಣೆ ನೀಡುವುದಕ್ಕೋಸ್ಕರ ಪಶ್ಚಿಮ ತೀರಕ್ಕೆ ತೆರಳಿ ಗೋಮತಿ ನದಿ ತೀರದಲ್ಲಿ ದ್ವಾರಕೆಯನ್ನು ನಿರ್ಮಿಸಿದನು. ಶ್ರೀ ಕೃಷ್ಣನ ಕಾಲದ ನಂತರ ಪ್ರವಾಹ ಏರ್ಪಟ್ಟು ದ್ವಾರಕೆ ಸಾಗರ ಗರ್ಭದಲ್ಲಿ ಸೇರಿಕೊಂಡಿತು.

ಚರಿತ್ರೆ

ಚರಿತ್ರೆ

ಅದ್ಭುತವಾದ ಶ್ರೀ ಕೃಷ್ಣ ನಿರ್ಮಿಸಿದ ದ್ವಾರಕೆಯು ಭೂಮಿ ಮೇಲೆ ಇತ್ತೊ ಇಲ್ಲವೂ ಎಂಬಂತೆ ಅದೃಶ್ಯವಾಗಿ ಹೋಯಿತು. ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಪರಿಶೋಧನೆಗಳು ಭಾರತೀಯ ಚಾರಿತ್ರಿಕ ನಿರ್ಮಾಣದಲ್ಲಿ ಅಪೂರ್ವವಾದ ಘಟ್ಟವನ್ನು ಅವಿಷ್ಕಾರಿಸಿತು.

ಮಹಾ ನಗರ

ಮಹಾ ನಗರ

ಸಾಗರ ಮಧ್ಯೆಯಲ್ಲಿ ಒಂದು ಮಹಾ ನಗರವು ಬಯಲಿಗೆ ಬಂದಿತು. ಮಹಾಭಾರತ ಕಾಲದ ಶ್ರೀ ಕೃಷ್ಣ ಪುರಾವೆಯ ನಗರ ಹೊರ ಪ್ರಪಂಚಕ್ಕೆ ಬಯಲಿಗೆ ಬಂದಿತು. ಇದೇ ಶ್ರೀ ಕೃಷ್ಣ ನಿರ್ಮಿಸಿದ ದ್ವಾರಕೆ.

ಶಿಥಿಲ

ಶಿಥಿಲ

ಸಮುದ್ರ ಗರ್ಭದಲ್ಲಿರುವ ಅಪೂರ್ವವಾದ ನಿರ್ಮಾಣ ಬೆಳಕಿಗೆ ಬಂದಿತು. ಶ್ರೀ ಕೃಷ್ಣನ ದ್ವಾರಕೆ ಕೇವಲ ಚಿಕ್ಕ ಚಿಕ್ಕದಾದ ಕಟ್ಟಡಗಳು ಅಲ್ಲದೇ ಬೃಹತ್ ಆದ ರತ್ನ ಮಂಟಪಗಳಾಗಿದ್ದವು.

ಮಹಾಭಾರತ

ಮಹಾಭಾರತ

ಕೆಲವು ಸಂಶೋಧನೆಯ ಪ್ರಕಾರ ಈ ಅದ್ಭುತ ನಗರವನ್ನು ಮಹಾಭಾರತದ ಕಾಲಾವಧಿಯಲ್ಲಿ ಶ್ರೀ ಕೃಷ್ಣ ನಿರ್ಮಿಸಿದನು ಎಂದು ರುಜುವಾತು ಆಯಿತು.

ಭಾರತದ ನಾಗರೀಕತೆ

ಭಾರತದ ನಾಗರೀಕತೆ

ಶ್ರೀ ಕೃಷ್ಣನ ದ್ವಾರಕೆ ಸಮುದ್ರದಲ್ಲಿ ಮುಳುಗಿ ಹೋದ ನಂತರ ಭಾರತೀಯ ನಾಗರೀಕತೆಯೂ ಕೂಡ ಮಾಯವಾಗಿ ಹೋಯಿತು. ನಮ್ಮ ಸಂಸ್ಕøತಿಯ ಬಗ್ಗೆ ತಿಳಿಸುವವರು ಯಾರೂ ಇಲ್ಲದೇ ಹೋದರು.

ವಿಶ್ವ ಕರ್ಮ

ವಿಶ್ವ ಕರ್ಮ

ದ್ವಾರಕೆಯನ್ನು ಈಗೀನ ಕಟ್ಟಡಗಳಿಗಿಂತ ಸಾಟಿ ಇಲ್ಲದ ನಿರ್ಮಾಣವನ್ನು ವಿಶ್ವ ಕರ್ಮನಿಂದ ಆ ಕಾಲದಲ್ಲಿಯೇ ನಿರ್ಮಾಣ ಮಾಡಿಸಿದ್ದನು ಶ್ರೀ ಕೃಷ್ಣನು.

36000 ಚದರ ವಿಸ್ರ್ತೀಣ

36000 ಚದರ ವಿಸ್ರ್ತೀಣ

ಈ ದ್ವಾರಕಾದಲ್ಲಿ ಸುಮಾರು 36000 ಚದರ ವಿಸ್ರ್ತೀಣದಲ್ಲಿ ನಗರ ನಿರ್ಮಾಣ ಮಾಡಿದರು. ದ್ವಾರಕೆಯಲ್ಲಿ 90 ಲಕ್ಷ ರಾಜ ಭವನಗಳು ಇದ್ದವು ಎಂದರೆ ನೀವು ನಂಬುತ್ತೀರಾ? ಹೌದು ಇದು ನಿಜ

ಶ್ರೀ ಕೃಷ್ಣನ ಪತ್ನಿಯರು

ಶ್ರೀ ಕೃಷ್ಣನ ಪತ್ನಿಯರು

ಶ್ರೀ ಕೃಷ್ಣನ ಅಷ್ಟ ಪತ್ನಿಯರ ಜೊತೆಗೆ 1600 ಗೋಪಿಕೆಯರಿಗೆ ಒಂದೊಂದು ರಾಜ ಭವನಗಳು ನಿರ್ಮಾಣ ಮಾಡಲಾಗಿತ್ತು. ಈ ಭವನಗಳೆಲ್ಲವೂ ರತ್ನಗಳಿಂದ ನಿರ್ಮಿಸಿದ್ದರಂತೆ.

ನಗರ ಸೌಂದರ್ಯ

ನಗರ ಸೌಂದರ್ಯ

ಈ ದ್ವಾರಕಾ ನಗರದಲ್ಲಿ ಬೃಹತ್ ಕಟ್ಟಡಗಳು, ದೊಡ್ಡ ದೊಡ್ಡದಾದ ಬೀದಿಗಳು, ಸೊಂಪಾಗಿ ಬೆಳೆದಿರುವ ಮರಗಳು, ಉದ್ಯಾನವನಗಳು ಇವುಗಳ ಮಧ್ಯೆ ಇರುವ ರಾಜ ಭವನಗಳು, ವರ್ಗಗಳಿಗೆ ಪ್ರತ್ಯೇಕವಾದ ನಿವಾಸಗಳು ಹೀಗೆ ಕ್ರಮ ಬದ್ಧವಾದ ನಗರ ಎಂದು ಹೇಳಬಹುದಾಗಿದೆ.

ಇತರ ದೇವಾಲಯಗಳು

ಇತರ ದೇವಾಲಯಗಳು

ಈ ಸುಂದರವಾದ ದ್ವಾರಕೆಯಲ್ಲಿ ವಸುದೇವ, ದೇವಕಿ, ಬಲರಾಮ, ರೇವತಿ, ಸುಭಧ್ರಾ, ರುಕ್ಮಿಣಿ ದೇವಿ, ಜಾಂಬವತಿ ದೇವಿ ಮತ್ತು ಸತ್ಯಭಾಮ ದೇವಿಯವರ ದೇವಾಲಯಗಳು ಇವೆ.

ತಲುಪುವ ಬಗೆ?

ತಲುಪುವ ಬಗೆ?

ವಿಮಾನ ಮಾರ್ಗದ ಮೂಲಕ
ಈ ಸುಂದರವಾದ ದ್ವಾರಕೆಯನ್ನು ಕಣ್ಣಾರೆ ಕಾಣಬೇಕು ಎಂದು ನಿಮ್ಮ ಆಸೆಯಾಗಿದ್ದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜಮಾನಗರ ಏರ್‍ಪೋರ್ಟ್. ಇಲ್ಲಿಂದ ದ್ವಾರಕೆಗೆ ಸುಮಾರು 45 ಕಿ,ಮೀ ದೂರ ಮಾತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X