Search
  • Follow NativePlanet
Share
» »ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

By Vijay

ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಒಂದು, ಅಷ್ಟೊಂದಾಗಿ ಹೆಸರು ಕೇಳಲ್ಪಡದ ಆದರೆ ಉತ್ತಮ ಪರಿಸರ ಹೊಂದಿದ ಚಿಕ್ಕ ಗಿರಿಧಾಮವಾಗಿದೆ. ಪ್ರಕೃತಿಯ ಸುಂದರ ಛಾಯಾಚಿತ್ರಗಳನ್ನು ತೆಗೆಯುವ ಹಂಬಲ, ಇಂಗಿತ ನಿಮಗಿದ್ದಲ್ಲಿ ಯಳಗಿರಿ ಗಿರಿಧಾಮವು ಆ ನಿಮ್ಮ ಹವ್ಯಾಸಕ್ಕೆ ಸ್ಫೂರ್ತಿ ನೀಡಲು ಸಿದ್ಧವಾಗಿ ನಿಲ್ಲುತ್ತದೆ.

ದಿನದ ಕೊಡುಗೆ : ಹೋಟೆಲ್ ಬುಕಿಂಗ್ ಮೇಲೆ 50% ವಿನಾಯಿತಿ ಪಡೆಯಿರಿ

ಸಮುದ್ರ ಮಟ್ಟದಿಂದ ಸುಮಾರು 1048 ಮೀ. ಗಳಷ್ಟು ಎತ್ತರದಲ್ಲಿರುವ ಯಳಗಿರಿಯು 14 ಸಣ್ಣ ಕೊಪ್ಪಲುಗಳ ಗುಂಪಾಗಿದೆ ಹಾಗೂ ಇಲ್ಲಿ ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವುದನ್ನು ಕಾಣಬಹುದು. ತಮಿಳುನಾಡಿನ ಇತರೆ ಪ್ರಖ್ಯಾತ ಗಿರಿಧಾಮಗಳಾದ ಊಟಿ ಹಾಗೂ ಕೊಡೈಕೆನಲ್ ಗಳಿಗೆ ಹೋಲಿಸಿದರೆ ಯಳಗಿರಿಯು ಅಷ್ಟೊಂದು ಅಭಿವೃದ್ಧಿ ಆಗಿಲ್ಲವಾದರೂ ಇತ್ತೀಚೆಗಷ್ಟೆ, ಇಲ್ಲಿನ ಜಿಲ್ಲಾಡಳಿತವು ಈ ತಾಣವನ್ನು ಜನಪ್ರೀಯಗೊಳಿಸುವ ನಿಟ್ಟಿನಲ್ಲಿ ಪಾರಾಗ್ಲೈಡಿಂಗ್ ಹಾಗೂ ರಾಕ್ ಕ್ಲೈಂಬಿಂಗ್ ನಂತಹ ಕೆಲವು ಸಾಹಸ ಕ್ರೀಡೆಗಳನ್ನು ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ.

ವಿಶೇಷ ಲೇಖನ : ಮೋಡಿ ಮಾಡುವ ಕೊಡೈಕೆನಾಲ್

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿಯಲ್ಲಿ ಚಾರಣದ ಸಂತಸ ಹಂಚಿಕೊಳ್ಳುತ್ತಿರುವ ಯುವತಿ
ಚಿತ್ರಕೃಪೆ: McKay Savage

ಇಲ್ಲಿ ಬಂದ ಎಲ್ಲರೂ ಮೊದಲನೆಯದಾಗಿ ಗಮನಿಸುವ ಅಂಶ ಎಂದರೆ ಇಲ್ಲಿನ ಪ್ರಶಾಂತ ವಾತಾವರಣ ಹಾಗೂ ಇಲ್ಲಿನ ನಿಸರ್ಗ ಸಹಜ ಸೌಂದರ್ಯ. ಇಲ್ಲಿ ಸುತ್ತಲೂ ಇರುವ ಹೂವು ಹಾಗೂ ಹಣ್ಣಿನ ತೋಪಿನಿಂದಾಗಿ ಇಲ್ಲಿ ಬರುವ ಆಹ್ಲಾದಕರ ಪರಿಮಳ ಇಲ್ಲಿನ ಮತ್ತೊಂದು ಮುಖ್ಯ ಆಕರ್ಷಣೆ. ಇಲ್ಲಿನ ನಿಸರ್ಗದ ನಡುವೆ ಡ್ರೈವ್ ಮಾಡುತ್ತಾ ಸಾಗುವುದು ಮತ್ತೊಂದು ಆಕರ್ಷಣೆ. ಇದು ಚಟುವಟಿಕೆಯಿಂದ ಕೂಡಿದ ತಾಣ ಎನ್ನಬಹುದು.
ಸಾಹಸ ಕ್ರೀಡೆಗಳನ್ನು ಇಷ್ಟಪಡುವವರಿಗೆ ಯಳಗಿರಿ ಒಂದು ಪ್ರಮುಖ ತಾಣ.

ವಿಶೇಷ ಲೇಖನ : ಕೊಡಗು ನೋಡಲು ಬಲು ಸೊಗಸು

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ಯಳಗಿರಿ
ಚಿತ್ರಕೃಪೆ: L.vivian.richard

ಇದು ಮಹಾರಾಷ್ಟ್ರದ ಪಂಚಗಣಿಯ ನಂತರದ ಅತ್ಯುತ್ತಮವಾದ ನೈಸರ್ಗಿಕ ಕ್ರೀಡೆಗಳನ್ನು ಅನುಭವಿಸಬಹುದಾದ ತಾಣ ಎಂಬ ಹೆಸರು ಪಡೆದಿದೆ. ಅಲ್ಲದೆ, ಕೇವಲ ಯುವಜನರು ಇಷ್ಟಪಡುವ ಕ್ರೀಡೆಗಳ ತಾಣವಾಗಿರದೆ ಹಿರಿಯರೂ ಸಹ ಇಷ್ಟ ಪಡುವಂತೆ ಇಲ್ಲಿ ಹಲವು ದೇವಾಲಯಗಳಿರುವುದನ್ನು ಕಾಣಬಹುದು. ಪುಂಗನೂರು ಕೆರೆ ಇಲ್ಲಿನ ಪ್ರಮುಖ ಸ್ಥಳವಾಗಿದೆ. ಹಸಿರು ಬೆಟ್ಟಗಳ ನಡುವೆ ಬೋಟಿಂಗ್ ಮಡುವುದು ಇಲ್ಲಿನ ಅತ್ಯುತ್ತಮ ಅನುಭವಗಳಲ್ಲಿ ಒಂದು. ಇಲ್ಲಿನ ಘಾಟ್ ಗಳಲ್ಲಿ ಕಾಣಸಿಗುವ ಪರಿಸರದ ನೋಟ ಎಂದೂ ಮರೆಯುವ ಹಾಗಿಲ್ಲ. ನಿಳವೂರ್ ಕೆರೆ ಇಲ್ಲಿನ ಇನ್ನೊಂದು ಆಕರ್ಷಣೆ.

ವಿಶೇಷ ಲೇಖನ : ಸುಂದರ ಮೈಮಾಟದ ಊಟಿ

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿಯ ಒಂದು ದೇವಾಲಯ
ಚಿತ್ರಕೃಪೆ: Ashwin Kumar

ಯಳಗಿರಿಯ ಸುತ್ತಮುತ್ತಲಿರುವ ಇತರೆ ಪ್ರಮುಖ ಸ್ಥಳಗಳೆಂದರೆ ವೆಲವನ್ ದೇವಾಲಯ, ಸ್ವಾಮಿಮಲೈ ಗಿರಿಧಾಮಗಳಂತಹ ಗಿರಿಧಾಮಗಳು, ಚಾರಣ ಮಾರ್ಗಗಳು, ಪ್ರಕೃತಿ ಪ್ರಿಯರಿಗಾಗಿ ಉದ್ಯಾನವನಗಳು, ಸರ್ಕಾರಿ ಔಷಧೀಯ ಗಿಡಮೂಲಿಕೆಗಳ ವನಗಳು ಹಾಗೂ ಹಣ್ಣುಗಳ ವನಗಳು. ನಕ್ಷತ್ರ ವೀಕ್ಷಣೆ ನಿಮಗೆ ಇಷ್ಟವಾದರೆ ದೂರದರ್ಶಕ ಮನೆ ಹಾಗೂ ವೈನು ಬಪ್ಪು ಆಕಾಶ ವೀಕ್ಷಣಾಲಯವನ್ನು ನೋಡಲು ಮರೆಯದಿರಿ. ಇಲ್ಲಿರುವ ದೂರದರ್ಶಕದ ಮೂಲಕ ಬಾನಾಡಿಯ ಚಂದ್ರನಿಂದ ಹಿಡಿದು ಮಿನುಗುವ ನಕ್ಷತ್ರಗಳ ಸುಂದರ ನೋಟವನ್ನು ಕಾಣಬಹುದು.

ವಿಶೇಷ ಲೇಖನ : ಯೇರ್ಕಾಡ್ ಎಂಬ ಸುಂದರ ಗಿರಿಧಾಮ

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿ ಸಾಹಸ ಶಿಬಿರದಲ್ಲಿ ತರುಣರ ಸಾಹಸ
ಚಿತ್ರಕೃಪೆ: McKay Savage

ಇಲ್ಲಿನ ಹವಾಮಾನ ವರ್ಷವಿಡಿ ಆಹ್ಲಾದಕರವಾಗಿದ್ದರೂ ನವೆಂಬರ್ ನಿಂದ ಫೆಬ್ರವರಿಯ ತನಕದ ಚಳಿಗಾಲದ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಅವಧಿಯಾಗಿದೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 11 ರಿಂದ 34 ಡಿಗ್ರಿ ಸೆಲ್ಶಿಯಸ್ ತನಕ ಬದಲಾಗುತ್ತಾ ಇರುತ್ತದೆ. ಆದರೆ ಚಳಿಗಾಲದ ಅವಧಿಯಲ್ಲಿ ಇದು 11 ರಿಂದ 25 ಡಿಗ್ರಿ ಸೆಲ್ಶಿಯಸ್ ತನಕ ಬದಲಾಗುತ್ತದೆ. ಜುಲೈ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇಲ್ಲಿ ಸಾಮಾನ್ಯ ಮಳೆಯಾಗುತ್ತದೆ. ಈ ಸ್ಥಳವು ಜನವರಿಯಲ್ಲಿ ಆಚರಿಸುವ ಪೊಂಗಲ್ ಹಾಗೂ ಅಕ್ಟೋಬರ್ ನಲ್ಲಿ ಆಚರಿಸಲಾಗುವ ದೀಪಾವಳಿಯ ಅವಧಿಯಲ್ಲಿ ಬಹಳ ಸುಂದರವಾಗಿ ಕಾಣುತ್ತದೆ.

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿ ಚಾರಣವೂ ಸಹ ಸಾಹಸಮಯ
ಚಿತ್ರಕೃಪೆ: L.vivian.richard

ಯಳಗಿರಿಯನ್ನು ತಲುಪಲು ಸಾಕಷ್ಟು ಸಂಪರ್ಕ ಮಾಧ್ಯಮಗಳು ಲಭ್ಯವಿದ್ದು ಸುಲಭವಾಗಿ ತೆರಳಬಹುದಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನಿಂದ ಯಳಗಿರಿಯು 157 ಕಿ.ಮೀ ಗಳಷ್ಟು ದೂರವಿದ್ದು ಇಲ್ಲಿಂದ ಕ್ಯಾಬ್ ಮೂಲಕ ಯಳಗಿರಿಗೆ ತಲುಪಬಹುದಾಗಿದೆ. ಚೆನ್ನೈ ವಿಮಾನ ನಿಲ್ದಾಣವೂ ಯಳಗಿರಿಗೆ ಸಮೀಪದಲ್ಲಿದೆ. ಜೊಲಾರ್ಪೆಟ್ಟಲ್ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಯಳಗಿರಿಗೆ ತಲುಪಲು ಬಸ್ಸುಗಳು ಹಾಗೂ ಕ್ಯಾಬ್ ಗಳು ಸುಲಭವಾಗಿ ದೊರೆಯುತ್ತವೆ.

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿ ಕೆರೆಯಲ್ಲಿ ಸುಂದರ ದೋಣಿ ವಿಹಾರ
ಚಿತ್ರಕೃಪೆ: Sayowais

ತಮಿಳುನಾಡಿನ ಪೊನ್ನೇರಿಯಿಂದ ರಸ್ತೆ ಸೌಲಭ್ಯ ಕೂಡ ಉತ್ತಮವಾಗಿದೆ. ಚನ್ನೈ, ಸೇಲಂ, ಹೊಸೂರು ಮತ್ತು ಬೆಂಗಳೂರಿನಿಂದ ನಿರಂತರ ಬಸ್ ಸಂಪರ್ಕ ಯಳಗಿರಿಗಿದೆ. ಆದರೆ ಬಸ್ ಪ್ರಯಾಣ ಬಹಳ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಲ್ಲದೆ ನಿಮ್ಮನ್ನು ಹೆಚ್ಚು ಸುಸ್ತಾಗಿಸುತ್ತದೆ. ಯಳಗಿರಿಗೆ ರೈಲಿನ ಮೂಲಕ ಪ್ರಯಣಿಸುವುದು ಸೂಕ್ತವಾಗಿದೆ. ಯಳಗಿರಿಗೆ ನೀವು ಡ್ರೈವ್ ಮಾಡುತ್ತಾ ಹೋಗುವುದಾದರೆ ಸಾಕಷ್ಟು ಮಾರ್ಗಸೂಚಿ ಫಲಕಗಳಿವೆ ಹಾಗೂ ಪೆಟ್ರೋಲ್ ಪಂಪ್ ಗಳೂ ಸಾಕಷ್ಟಿವೆ. ಆದರೆ ಯಳಗಿರಿ ಸಮೀಪ ಬಂದಂತೆ ಘಾಟ್ ಗಳು ಸಾಕಷ್ಟು ಬರುವುದರಿಂದ ಮೊದಲೆ ತುಸು ಹೆಚ್ಚಾಗಿ ಪೆಟ್ರೋಲ್ ತುಂಬಿಕೊಂಡು ಹೋಗುವುದು ಉತ್ತಮ.

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಹಚ್ಚಹಸಿರಿನ ಹಾಸಿಗೆಯ ಯಳಗಿರಿ
ಚಿತ್ರಕೃಪೆ: McKay Savage

ಮತ್ತೊಂದು ಸಂಗತಿಯೆಂದರೆ, ತಮಿಳುನಾಡಿನಲ್ಲಿ ಸಿಗುವ ಅತ್ಯಂತ ಉತ್ತಮವಾದ ಜೇನುತುಪ್ಪ ಯಳಗಿರಿಯಲ್ಲಿ ಸಿಗುವ ಕಾರಣ ಟ್ರಿಪ್ ಮುಗಿಸಿ ಮರುಳುವಾಗ ದಾರಿಯಲ್ಲಿ ಸಿಗುವ ಜೇನುತುಪ್ಪ ಹಾಗೂ ಹಲಸಿನ ಹಣ್ಣನ್ನು ಕೊಳ್ಳಲು ಮರೆಯದಿರಿ. ಮನೆಯಲ್ಲೇ ಜೇನುನೊಣಗಳನ್ನು ಸಾಕಿ ಬೆಳೆಸಿ ಈ ಜೇನು ತುಪ್ಪವನ್ನು ತಯಾರಿಸಲಾಗುತ್ತದೆ ಹಾಗೂ ಮರ ಹಾಗೂ ಹೊರಗಡೆ ಇರುವ ಜೇನು ನೊಣಗಳಿಂದ ತಯಾರಿಸಲಾದ ಜೇನು ತುಪ್ಪವೂ ಇಲ್ಲಿ ಲಭ್ಯವಿದೆ. ಹೀಗೆ ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗಿ ನಿಮ್ಮ ರಜಾ ದಿನಗಳನ್ನು ಅನುಭವಿಸಬೇಕಾದರೆ ಯಳಗಿರಿ ಒಂದು ಅತ್ಯುತ್ತಮ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X