ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕಣ್ಮನ ಸೆಳೆಯುವ ಕೇರಳದ ತಾಣಗಳು...

Written by: Divya
Updated: Tuesday, March 14, 2017, 12:54 [IST]
Share this on your social network:
   Facebook Twitter Google+ Pin it  Comments

ಪ್ರವಾಸ ಎಂದೊಡನೆ ಮೊದಲು ಗೂಗಲ್‍ನ ಮೊರೆ ಹೋಗುತ್ತೇವೆ. ಯಾವ ತಾಣ? ಎಷ್ಟು ದೂರ? ಎಷ್ಟು ಜನ ಹೋಗುತ್ತಾರೆ ಎನ್ನುವುದನ್ನು ಮೊದಲು ನೋಡುತ್ತೇವೆ. ಹಾಗಾಗಿ ಅದೆಷ್ಟೋ ತಾಣಗಳು ನಮಗೆ ಪರಿಚಯವೇ ಆಗಿರುವುದಿಲ್ಲ. ನಾವು ನೋಡುವ ಸ್ಥಳದಲ್ಲಿ ಜನ ಜಂಗುಳಿ ಸ್ವಲ್ಪ ಪ್ರಮಾಣದಲ್ಲಿ ಇರಲಿ ಎಂದು ಬಯಸುವುದು ನಿಜ... ಕೊನೆಯಲ್ಲಿ ಯಾವುದೋ ಪ್ರದೇಶಗಳನ್ನು ನೋಡಿ ಹಿಂದಿರುಗುತ್ತೇವೆ.

ಕೇರಳದಂತಹ ಸುಂದರ ತಾಣದಲ್ಲಿ ಜನ ಸಂದಣಿಯಿಂದ ದೂರ ಇರುವ ಪ್ರದೇಶಗಳು ಹಲವಾರಿವೆ. ಇಲ್ಲಿಗೆ ಪ್ರವಾಸ ಬೆಳೆಸಿದರೆ ಸುಂದರ ಅನುಭವಗಳು ನಿಮ್ಮ ಪಾಲಾಗುವವು. ಬೆಂಗಳೂರಿಗೆ ಹತ್ತಿರ ಇರುವ ಈ ತಾಣಕ್ಕೆ ವಾರದ ರಜೆಯಲ್ಲಿ ಬರಬಹುದು.

ಚೆಂಬ್ರಾ ಪೀಕ್

ಸಮುದ್ರ ಮಟ್ಟಕ್ಕಿಂತ 2100 ಮೀಟರ್ ಅಡಿ ಎತ್ತರದಲ್ಲಿರುವ ಈ ತಾಣ ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡಬಲ್ಲದು. ದಟ್ಟವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ತಾಣದಲ್ಲಿ ಶಿಬಿರವನ್ನು ಹೂಡಬಹುದು. ಗುಡ್ಡದ ತುದಿಯಲ್ಲಿ ಒಂದು ಪುಟ್ಟ ಕೆರೆಯಿದೆ. ಇದು ಇಲ್ಲಿಯ ಮುಖ್ಯ ಆಕರ್ಷಣೆಯಲ್ಲೊಂದು. ಪ್ರವಾಸಿಗರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಚಾರಣಕ್ಕೆ ಬೇಕಾಗುವ ಉಪಕರಣ ಹಾಗೂ ಮಾರ್ಗದರ್ಶಕರನ್ನು ಒದಗಿಸುತ್ತದೆ.

ವಯನಾಡ್ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PC : P maneesha

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

ಕೇರಳ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿ ಬರುವ ಈ ಉದ್ಯಾನವನ ನೀಲಗಿರಿ ಕಣಿವೆಗಳ ಮಧ್ಯದಲ್ಲಿದೆ. ಇಲ್ಲಿ ಒಮ್ಮೆ ಚಾರಣ ಕೈಗೊಂಡರೆ ಜೀವನದಲ್ಲಿ ಮರೆಯಲಾಗದ ಅನುಭವ ಪಡೆಯಬಹುದು. 237.52 ಸ್ಕ್ವೇರ್ ಕಿ.ಮೀ ವ್ಯಾಪ್ತಿಯಲ್ಲಿರುವ ಈ ಉದ್ಯಾನವನದಲ್ಲಿ ಅಪರೂಪದ ಹಕ್ಕಿಗಳ ಸಂಕುಲ, ಮಂಗಗಳು ಹಾಗೂ ಸುಂದರ ಜಲಧಾರೆಗಳನ್ನು ವೀಕ್ಷಿಸಬಹುದು.

ತಮಿಳುನಾಡಿನ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PC : Lijo Lawrance

 

 

ತಟ್ಟೆಕ್ಕದ ಪಕ್ಷಿಧಾಮ

ಕೇರಳದ ಮಧ್ಯಭಾಗದಲ್ಲಿರುವ ಈ ಪಕ್ಷಿಧಾಮ ಕೊಚ್ಚಿಯಿಂದ 58 ಕಿ.ಮೀ. ವ್ಯಾಪ್ತಿಯಲ್ಲಿದೆ. ಇದು ಕೇರಳದ ಮೊದಲ ಪಕ್ಷಿಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಸುಮಾರು 300 ವಿವಿಧ ಬಗೆಯ ಪಕ್ಷಿ ಸಂಕುಲಗಳನ್ನು ಕಾಣಬಹುದು. ಪ್ರವಾಸದಲ್ಲಿ ವನ್ಯ ಜೀವಿಗಳು ಹಾಗೂ ಪಕ್ಷಿಗಳ ವೀಕ್ಷಣೆಯೂ ಮಧುರ ಅನುಭವ ನೀಡುವುದು.

ಕೊಚ್ಚಿ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PC : Dilshad Roshan

 

 

ಕುರುವದ್ವೀಪ

ಈ ದ್ವೀಪ ವಯನಾಡಿನಲ್ಲಿ ಹರಿವ ಕಬಿನಿ ನದಿಯಿಂದ ಸುತ್ತುವರಿದಿದೆ. ಸುಂದರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ತಾಣ ಪ್ರವಾಸಿಗರಿಗೆ ನಿಸರ್ಗದ ಸ್ವರ್ಗ ಆಗುವುದರಲ್ಲಿ ಸಂದೇಹವಿಲ್ಲ. ಒಂದು ದಡದಿಂದ ಇನ್ನೊಂದು ದಡಕ್ಕೆ ಬಿದಿರಿನ ತೆಪ್ಪದಲ್ಲಿ ಸಾಗಬೇಕು. ಇದು ಒಂದು ಅಮೋಘ ಅನುಭವ ನೀಡುವುದು.

ಕುರುವದ್ವೀಪದ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PC : Vinayraj

 

 

ತೇನ್ಮಲಾ ಅಣೆಕಟ್ಟು

ಕಲ್ಲದಾ ನದಿಗೆ ಅಡ್ಡವಾಗಿ ಕಟ್ಟಿರುವ ತೇನ್ಮಲಾ ಅಣೆಕಟ್ಟು ಕೇರಳದ ಪ್ರಮುಖ ಆಕರ್ಷಣೆಯಲ್ಲಿ ಒಂದು. ಇತ್ತೀಚೆಗೆ ಇದನ್ನು ಪರಿಸರ ಪ್ರವಾಸೋದ್ಯಮ ತಾಣ ಎಂದು ಗುರುತಿಸಲಾಗಿದೆ. ತಿರುವನಂತಪುರದಿಂದ 72 ಕಿ.ಮೀ. ದೂರದಲ್ಲಿದೆ. ಇಲ್ಲಿ ಪ್ರವಾಸಿಗರು ಹಗ್ಗದ ಸೇತುವೆಯಲ್ಲಿ ನಡೆಯಬಹುದು. ಚಾರಣ ಹಾಗೂ ದೋಣಿ ವಿಹಾರಕ್ಕೂ ಅವಕಾಶ ಕಲ್ಪಿಸಲಾಗಿದೆ.

PC : Kerala Tourism


 

ಬೈಪೊರೆ ಕಡಲ ತೀರ

ಈ ಸಮುದ್ರ ತೀರ ಪುರಾತನ ಕೋಟೆಯಾದ ಕ್ಯಾಲಿಕಟ್‍ನ ಸಮೀಪದಲ್ಲಿದೆ. ಇಲ್ಲಿ ಕಲ್ಲಿನಲ್ಲಿಯೇ ನಿರ್ಮಿಸಲಾದ ಸೇತುವೆಯಿದೆ. ಇದು ಸುಮಾರು 2 ಕಿ.ಮೀ. ಉದ್ದವನ್ನು ಹೊಂದಿದೆ. ಇಲ್ಲಿ ನಿಂತು ಕಡಲ ತೀರದ ಸುಂದರ ದೃಶ್ಯವನ್ನು ಸೆರೆಹಿಡಿಯಬಹುದು.

PC : Suresh babunair

 

 

ತುಷಾರಗಿರಿ ಜಲಪಾತ

ತುಷಾರಗಿರಿ ಎಂದರೆ ಮಂಜಿನಿಂದ ಕೂಡಿದ ಗಿರಿಗಳು ಎಂದಾಗುತ್ತದೆ. ಕ್ಯಾಲಿಕಟ್‍ನಿಂದ 50 ಕಿ.ಮೀ. ದೂರದಲ್ಲಿದೆ. ಇಲ್ಲಿ ಚಾರಣವನ್ನು ಕೈಗೊಳ್ಳಬಹುದು. ಸುಂದರವಾದ ಈ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಖುಷಿ.

PC : Dr.Juna

 

 

 

Read more about: travel, india, kerala, wayanad
English summary

Wondrous Offbeat Travel Destinations In Kerala

Kerala has a lot more to offer than just the popular destinations that we have seen in the advertisements and learnt about through other media sources or known through word of mouth. The best way to enjoy and exploit a place is by making it a point to visit a place that is out of the box.
Please Wait while comments are loading...