Search
  • Follow NativePlanet
Share
» »ಅಚ್ಚರಿಗೊಳಿಸುವ ಸೂರ್ಯ ದೇಗುಲಗಳು

ಅಚ್ಚರಿಗೊಳಿಸುವ ಸೂರ್ಯ ದೇಗುಲಗಳು

By Vijay

ಹಿಂದೂ ಧರ್ಮದಲ್ಲಿ ದೇವತೆಗಳು ಅಪಾರ. ಪ್ರತಿಯೊಬ್ಬ ಪ್ರಮುಖ ದೇವತೆಗೆ ಮುಡಿಪಾಗಿರುವ ದೇವಸ್ಥಾನಗಳನ್ನು ದೇಶದೆಲ್ಲೆಡೆ ಇರುವುದನ್ನು ಕಾಣಬಹುದು. ಇವುಗಳಲ್ಲಿ ಶಿವ, ವಿಷ್ಣು, ಗಣಪತಿ, ಲಕ್ಷ್ಮಿ, ಪಾರ್ವತಿ, ಆಂಜನೇಯ, ಕೃಷ್ಣ, ಸುಬ್ರಹ್ಮಣ್ಯ ದೇವರುಗಳಿಗೆ ಮೀಸಲಾದ ದೇವಸ್ಥಾನಗಳು ಬಲು ಪ್ರಮುಖ ಹಾಗೂ ಎಲ್ಲೆಡೆ ಕಂಡುಬರುವುದು ಸಾಮಾನ್ಯ.

ಹೋಳಿ ಕೊಡುಗೆ: ಗೊಐಬಿಬೊದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 60% ರಷ್ಟು ರಿಯಾಯಿತಿ

ಹಿಂದೂ ಧರ್ಮದ ಪ್ರಕಾರ ದೇವಲೋಕದ ದೇವತೆಗಳಲ್ಲಿ ಸೂರ್ಯ ದೇವನೂ ಸಹ ಬಹು ಪ್ರಮುಖ ದೇವತೆ. ಒಂದರ್ಥದಲ್ಲಿ ಭೂಮಿಯ ಮೇಲೆ ಜೀವನ ಸುಗಮವಾಗಿ ನಡೆಯಲು ಸೂರ್ಯನ ಕೃಪೆ ಇರಲೇಬೇಕು. ಸೂರ್ಯನ ಕಿರಣಗಳು ವಾತಾವರಣದಲ್ಲಿ ಪಸರಿಸುವ ಅಪಾಯಕರ ಸೂಕ್ಷ್ಮ ಜೀವಾಣುಗಳನ್ನು ನಾಶಗೊಳಿಸಿ ಬದುಕಲು ಸಹಕಾರಿಯಾಗಿದೆ ಎಂಬುದು ಗೊತ್ತೆ ಇದೆ. ಅಲ್ಲದೆ ಕಾಲ ಕಾಲಕ್ಕೆ ಮಳೆ ಬೀಳಲು ಸಹ ಸೂರ್ಯನ ಸಹಾಯ ಬೇಕೇ ಬೇಕು. ಹಸಿರು ಸಸ್ಯಗಳಿಗೆ ಬೆಳೆಯಲು ಸೂರ್ಯ ಬೇಕೇ ಬೇಕು.

ವಿಶೇಷ ಲೇಖನ : ಭಾರತದ ಪುರಾತನ ನಗರಗಳು

ಇಂತಹ ಉಪಕಾರಿಯಾದ ಸೂರ್ಯನಿಗೆ ಮುಡಿಪಾದ ದೇವಾಲಯಗಳಿರುವುದು ಬಲು ಕಡಿಮೆ. ಅದರಲ್ಲೂ ಪ್ರಮುಖವಾದ ದೇವಾಲಯಗಳಿರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಹಿಂದೆ ನಮ್ಮ ಪೂರ್ವಜರು ಬದುಕಲು ಪ್ರಕೃತಿಯೊಂದಿಗೆ ಉತ್ತಮ ಬೆಸುಗೆ ಹೊಂದಿದ್ದರು. ಋತುಮಾನಗಳಿಗೆ ತಕ್ಕಂತೆ ಜೀವನಶೈಲಿ ರೂಢಿಸಿಕೊಂಡಿದ್ದರು. ಜೂನ್ ಅಥವಾ ಬೇಸಿಗೆಯ ಸಂದರ್ಭದಲ್ಲಿ ಸೂರ್ಯನು ತನ್ನ ಪಥದಿಂದ ಉತ್ತರದ ಕಡೆಗೆ ಮೇಲೆರುತ್ತ ಟ್ರಾಪಿಕ್ ಆಫ್ ಕ್ಯಾನ್ಸರ್ (ಕರ್ಕಾಟಕ ವೃತ್ತ) ತಲುಪುತ್ತಾನೆ. ಆದ್ದರಿಂದ ಈ ಸಂದರ್ಭದಲ್ಲಿ ದಿನಗಳ ಅವಧಿ ಹೆಚ್ಚು ಹಾಗೂ ರಾತ್ರಿ ಕಡಿಮೆಯಿರುತ್ತದೆ.

ವಿಶೇಷ ಲೇಖನ : ಭಾರತದ ಅತ್ಯದ್ಭುತ ಕೋಟೆಗಳು

ಅಲ್ಲದೆ ಈ ಸಂದರ್ಭದಲ್ಲಿ ಬೇಸಿಗೆಯೂ ಸಹ ರಣ ರಣ ಬಿಸಿಲಿನಿಂದ ಕೂಡಿರುವುದರಿಂದ ಬದುಕಲು ಬಹು ಕಷ್ಟವಾಗುತ್ತದೆ. ಈ ಒಂದು ದೃಷ್ಟಿಯಿಂದ ಹಿಂದೆ ಪೂರ್ವಜರು ಸೂರ್ಯನನ್ನು ಕುರಿತು ತನ್ನ ಕೃಪಾ ದೃಷ್ಟಿ ತಮ್ಮ ಮೇಲಿದ್ದು, ಬದುಕಲು ಕಷ್ಟಕರವಾಗದಂತೆ ವಾತಾವರಣದ ಶಾಖವನ್ನು ನಿಯಂತ್ರಿಸು ಎಂದು ಬೇಡಿ ಕೊಳ್ಳಲು ಸೂರ್ಯನಿಗೆಂದು ಮುಡಿಪಾದ ದೇವಸ್ಥಾನಗಳನ್ನು ನಿರ್ಮಿಸಿದರೆನ್ನಲಾಗುತ್ತದೆ. ಕಥೆ ಏನೆ ಇರಲಿ, ನಮ್ಮ ದೇಶದಲ್ಲಿ ಕಂಡುಬರುವ ಈ ಅದ್ಭುತ ಸೂರ್ಯ ದೇಗುಲಗಳು ತಮ್ಮ ಶಿಲ್ಪಕಲೆಗಾಗಿ ಅತಿ ಪ್ರಸಿದ್ಧವಾಗಿವೆ ಹಾಗೂ ಅದ್ಭುತ ಪ್ರವಾಸಿ ಸ್ಥಳಗಳಾಗಿವೆ.

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಮೊಧೇರಾ ಸೂರ್ಯ ದೇವಾಲಯ : ಸೂರ್ಯ ದೇವರಿಗೆ ಮುಡಿಪಾದ ಒಂದು ಸುಂದರ ಸೂರ್ಯ ದೇವಾಲಯವು ಗುಜರಾತ್ ರಾಜ್ಯದಲ್ಲಿದೆ. ಗುಜರಾತಿನ ಮೊಧೇರಾ ಎಂಬಲ್ಲಿದೆ ಈ ಸೂರ್ಯ ದೇಗುಲ. ಇದು ಮೆಹ್ಸಾನಾದಿಂದ 25 ಕಿ.ಮೀ ಹಾಗೂ ಅಹ್ಮದಾಬಾದ್ ನಿಂದ 102 ಕಿ.ಮೀ ಗಳಷ್ಟು ದೂರವಿದ್ದು ಪುಷ್ಪಾವತಿ ನದಿ ತಟದ ಮೇಲೆ ನೆಲೆಸಿದೆ.

ಚಿತ್ರಕೃಪೆ: Kaushik Patel

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಸೋಲಂಕಿ ರಾಜವಂಶದ ಭೀಮದೇವ ರಾಜನಿಂದ ಈ ದೇಗುಲವು 1026 ರಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯವು ಅತ್ಯದ್ಭುತ ಎನ್ನಬಹುದಾದ ಶಿಲ್ಪಕಲೆಯ ಒಡೆಯನಾಗಿದೆ ಹಾಗೂ ಇಲ್ಲಿ ಯಾವುದೇ ರೀತಿಯ ಪೂಜಾ ಕೈಂಕರ್ಯಗಳು ಜರುಗುವುದಿಲ್ಲ.

ಚಿತ್ರಕೃಪೆ: Sudhamshu Hebbar

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಷ್ಟೆ ಅಲ್ಲ, ಮೊಧೇರಾ ಶ್ರೀರಾಮನಿಂದ ರಚಿತವಾದ ಸ್ಥಳವೆಂದೂ ಸಹ ನಂಬಲಾಗಿದೆ. ಸ್ಕಂದ ಪುರಾಣದ ಪ್ರಕಾರ, ಶ್ರೀರಾಮನು ಲಂಕೆಯ ರಾವಣನನ್ನು ಕೊಂದ ಬಳಿಕ ತನಗಂಟಿದ ಬ್ರಹ್ಮಹತ್ಯಾ (ರಾವಣ ಜನ್ಮತಃ ಒಬ್ಬ ಬ್ರಾಹ್ಮಣ) ದೋಷದಿಂದ ಮುಕ್ತಿ ಪಡೆಯುವ ಉದ್ದೇಶದಿಂದ ವಸಿಷ್ಠ ಋಷಿಗಳ ಬಳಿ ತೆರಳಿ ತೀರ್ಥ ಕ್ಷೇತ್ರದ ಕುರಿತು ಕೇಳುತ್ತಾನೆ. ಸೂರ್ಯ ದೇಗುಲದ ಬಳಿಯಿರುವ ಸೂರ್ಯ ಕುಂಡ ಎಂಬ ಪುಷ್ಕರಿಣಿ.

ಚಿತ್ರಕೃಪೆ: Parmar uday

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಆಗ ಮುನಿವರ್ಯರು ಧರ್ಮಾರಣ್ಯಕ್ಕೆ ತೆರಳುವಂತೆ ಸೂಚಿಸುತ್ತಾರೆ. ಇಂದಿನ ಮೊಧೇರಾ ಸುತ್ತಮುತ್ತಲಿನ ಪ್ರದೇಶವೆ ಅಂದು ಧರ್ಮಾರಣ್ಯವಾಗಿತ್ತು. ಅದರಂತೆ ಶ್ರೀರಾಮನು ಅಲ್ಲಿಗೆ ತೆರಳಿ ತಪಗೈದು, ಒಂದು ಪುಟ್ಟ ಗ್ರಾಮವನ್ನು ನಿರ್ಮಿಸುತ್ತಾನೆ. ಆ ಪುಟ್ಟ ಗ್ರಾಮವೆ ಇಂದಿನ ಮೊಧೇರಾ.

ಚಿತ್ರಕೃಪೆ: Aakarjinwala

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ನಂತರ ಸೋಲಂಕಿ ರಾಜರು ಈ ಪ್ರದೇಶವನ್ನು ಆಳುತ್ತಾರೆ. ಇವರು ಸೂರ್ಯವಂಶಿಯರಾದುದರಿಂದ ಸೂರ್ಯನ ಮೇಲೆ ಅಪಾರವಾದ ಭಕ್ತಿ ಉಳ್ಳವರಾಗಿದ್ದರು. ಅದರಂತೆ ಈ ವಂಶದ ಒಂದನೆಯ ರುಷಭ ಭೀಮದೇವ ಸೋಲಂಕಿ ಈ ದೇವಸ್ಥಾನದ ನಿರ್ಮಾಣವನ್ನು ಸುಮಾರು 1026 ರಲ್ಲಿ ಮಾಡಿದನೆನ್ನಲಾಗಿದೆ.

ಚಿತ್ರಕೃಪೆ: Bernard Gagnon

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಕೋನಾರ್ಕ್ ಸೂರ್ಯ ದೇಗುಲ : ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಭಾರತದ ಹಲವು ಸ್ಥಳಗಳ ಪೈಕಿ ಕೋನಾರ್ಕ್ ಸೂರ್ಯ ದೇವಾಲಯವೂ ಒಂದಾಗಿದೆ. ಆದ್ದರಿಂದ ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಈ ದೇವಸ್ಥಾನವು ಹೆಚ್ಚಿನ ಮಹತ್ವ ಪಡೆದಿದೆ ಎಂದು ಹೇಳಬಹುದಾಗಿದೆ. 13 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಮನಸೆಳೆವ ಅತ್ಯಾಕರ್ಷಕ ಕೆತ್ತನೆಗಳಿಂದ ಕೂಡಿದೆ. ಈ ಸುಂದರ ಸೂರ್ಯ ದೇವಾಲಯವು ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಕೋನಾರ್ಕ್ ಎಂಬ ಚಿಕ್ಕ ಪಟ್ಟಣದಲ್ಲಿ ನಿರ್ಮಿಸಲ್ಪಟ್ಟಿದೆ. ಆದ್ದರಿಂದ ಈ ದೇವಾಲಯ ಕೋನಾರ್ಕ್ ಸೂರ್ಯ ದೇವಾಲಯವೆಂದೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Arpan Bhowmick

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಪೂರ್ವ ಗಂಗ ಸಾಮ್ರಾಜ್ಯದ ದೊರೆಯಾಗಿದ್ದ ಒಂದನೇಯ ನರಸಿಂಹದೇವನಿಂದ ಈ ಸೂರ್ಯ ದೇವಾಲಯವು ಸುಮಾರು 1250 ರ ಸಮಯದಲ್ಲಿ ನಿರ್ಮಿಸಲ್ಪಟ್ಟಿದೆ. ಆಸಕ್ತಿಕರ ಸಂಗತಿಯೆಂದರೆ ಈ ಒಟ್ಟಾರೆ ದೇವಸ್ಥಾನವೆ ಒಂದು ದೊಡ್ಡ ರಥದ ರೂಪದಲ್ಲಿ ನಿರ್ಮಿಸಲ್ಪಟ್ಟಿರುವುದು.

ಚಿತ್ರಕೃಪೆ: Aleksandr Zykov

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಈ ದೇವಾಲಯವು ಅಂದಿನ ಕಾಲದಲ್ಲಿ ಎಷ್ಟು ದೊಡ್ಡದಾಗಿತ್ತೆಂದರೆ ಸಮುದ್ರ ಮಾರ್ಗವಾಗಿ ಬರುವವರಿಗೆ ಇದು ಗುರುತು ಗೋಪುರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಾವಿಕರು ಇದನ್ನು ಕಪ್ಪು ಪಗೋಡ ಎಂಬ ಹೆಸರಿನಿಂದ ಗುರುತಿಸುತ್ತಿದ್ದರು. ಇದಕ್ಕೆ ವಿರುದ್ಧವೆಂಬಂತೆ ಪುರಿಯಲ್ಲಿರುವ ದೊಡ್ಡ ಜಗನ್ನಾಥನ ದೇವಸ್ಥಾನವು ಬಿಳಿ ಪಗೋಡ ಎಂಬೆ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.

ಚಿತ್ರಕೃಪೆ: Tetraktys

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಮೂಲತಃ ಈ ದೇವಾಲಯವನ್ನು ಚಂದ್ರಭಾಗ ಎಂಬ ನದಿಯ ಮುಖ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಆದರೆ ಇಂದು ನದಿಯು ತಗ್ಗಿ ಹೋಗಿರುವುದು ಕಂಡುಬರುತ್ತದೆ. ದೇವಸ್ಥಾನವನ್ನು ಸೂಕ್ಷ್ಮವಾಗಿ ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿರ್ಮಿಸಲಾಗಿದ್ದು, ಸೂರ್ಯನ ಪ್ರಥಮ ರಷ್ಮಿಯು ದೇವಸ್ಥಾನಕ್ಕೆ ತಗುಲುವಂತೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Achilli Family | Journeys

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkleir

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಕಾಮಸೂತ್ರದ ಪ್ರಭಾವ ಹೊಂದಿರುವ ಹಲವಾರು ಶೃಂಗಾರಮಯ ಭಂಗಿಗಳ ಶಿಲ್ಪ ಕಲೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ರೀತಿಯ ಶಿಲ್ಪಕಲೆಗಳು ಸಾಮಾನ್ಯವಾಗಿ ವಿದೇಶಿ ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಕೆರಳಿಸುತ್ತದೆ.

ಚಿತ್ರಕೃಪೆ: Steve Browne & John Verkleir

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಶೃಂಗಾರಮಯ ರಸವನ್ನು ಭೂಷಿತಗೊಳಿಸುವ ಒಂದು ಮಿಥುನ ಶಿಲ್ಪಕಲೆ.

ಚಿತ್ರಕೃಪೆ: Steve Browne & John Verkleir

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಈ ಮಿಥುನ ಶಿಲ್ಪಕಲೆಗಳು ರತಿ ಸಮಾಗಮದ ಸೂಕ್ಷ್ಮವಾದ ಅಂಶಗಳನ್ನು ಅನಾವರಣಗೊಳಿಸುತ್ತವೆ.

ಚಿತ್ರಕೃಪೆ: Steve Browne & John Verkleir

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಸೂರಿಯಾನರ್ ಕೋವಿಲ್ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ ಸೂರ್ಯನಿಗೆ ಮುಡಿಪಾದ ದೇವಸ್ಥಾನ. ಇದು ಕುಂಭಕೋಣಂ ನ ಉತ್ತರ ದಿಕ್ಕಿಗೆ 15 ಕಿ.ಮೀ ದೂರದಲ್ಲಿದೆ. ಇದು ತಮಿಳುನಾಡಿನ ಪ್ರಸಿದ್ಧ ನವಗ್ರಹ ದೇವಸ್ಥಾನಗಳ ಪೈಕಿಯೂ ಸಹ ಒಂದಾಗಿದೆ. ಕ್ರಮಬದ್ಧವಾದ ನವಗ್ರಹ ಯಾತ್ರೆ

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಆಂಧ್ರಪ್ರದೇಶದ ಶ್ರೀಕಾಕುಲಂ ಪಟ್ಟಣದ ಬಳಿಯಿರುವ ಅರಸವಿಲ್ಲಿ ಎಂಬಲ್ಲಿ ಸೂರ್ಯ ದೇವರಿಗೆ ಮುಡಿಪಾದ ಒಂದು ಪುರಾತನ ದೇವಾಲಯವಿದೆ. ಮೂಲತಃ ಹರ್ಷವಲ್ಲಿ ಎಂದು ಕರೆಯಲ್ಪಡುತ್ತಿದ್ದ ಈ ತಾಣವು ಕ್ರಮೇಣ ಅರಸವಲ್ಲಿ ಎಂದು ಕರೆಯಲ್ಪಟ್ಟಿತು ಹಾಗೂ ಇಲ್ಲಿರುವ ಸೂರ್ಯನಾರಾಯಣ ಸ್ವಾಮಿಯ ದೇಗುಲವು 7 ನೆಯ ಶತಮಾನದ ಸಂದರ್ಭದಲ್ಲಿ ಕಳಿಂಗ ದೊರೆಯಾಗಿದ್ದ ದೇವೆಂದ್ರ ವರ್ಮನಿಂದ ನಿರ್ಮಿಸಲ್ಪಟ್ಟಿದೆ. ಐದು ಅಡಿ ಎತ್ತರದ ಕಪ್ಪು ಗ್ರಾನೈಟ್ ಕಲ್ಲಿನ ಪದ್ಮ, ಉಷಾ ಮತ್ತು ಛಾಯಾ ಪತ್ನಿಯರ ಸಮೇತನಾದ ಸೂರ್ಯ ವಿಗ್ರಹ ಹಾಗೂ ಏಳು ಕುದುರೆಗಳ ರಥ ಇಲ್ಲಿನ ಮುಖ್ಯ ಆಕರ್ಷಣೆ.

ಚಿತ್ರಕೃಪೆ: Adityamadhav83

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಚ್ಚರಿಗೊಳಿಸುವ ಸೂರ್ಯ ದೇಗುಲ:

ಅಸ್ಸಾಂ ರಾಜ್ಯದ ಗೋಲ್ಪಾರಾ ಪಟ್ಟಣದಿಂದ ಸುಮಾರು 12 ಕಿ.ಮೀ ಗಳಷ್ಟು ದೂರದಲ್ಲಿ ಶ್ರೀ ಸೂರ್ಯ ಪಹಾರ್ (ಡ್) ಎಂಬ ಬೆಟ್ಟದ ಮೇಲೊಂದು ದೇವಾಲಯಗಳ ಸಂಕೀರ್ಣವಿರುವುದನ್ನು ಕಾಣಬಹುದು. ಇದು ಗುವಾಹಟಿಯಿಂದ 136 ಕಿ.ಮೀ ದೂರವಿದೆ. ತಜ್ಞರ ಪ್ರಕಾರ, ಹಿಂದೆ ಈ ಪ್ರದೇಶವು ಸೂರ್ಯನನ್ನು ಪೂಜಿಸುವ ಸ್ಥಳವಗಿತ್ತೆನ್ನಲಾಗಿದೆ. ಅಲ್ಲದೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿವಲಿಂಗಗಳು, ಹಾಗೂ ಬೌದ್ಧ ಮತ್ತು ಜೈನ ಧರ್ಮಗಳಿಗೆ ಸಂಬಂಧಿಸಿದ ಅನೇಕ ಕುರುಹುಗಳು ದೊರೆತಿವೆ. ಬೆಟ್ಟದ ಮೇಲೆ ಒಂದು ಸಮತಟ್ಟಾದ ಪ್ರದೇಶದಲ್ಲಿ ಸುಮಾರು ಒಂದು ಕಿ.ಮೀ ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಶಿವಲಿಂಗಗಳು ಹಾಗೂ ಇತರೆ ದೇಗುಲಗಳು ಚದರಿರುವುದನ್ನು ಕಾಣಬಹುದು. ಇದೂ ಕೂಡ ಸೂರ್ಯನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Travelling Slacker

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X