Search
  • Follow NativePlanet
Share
» »ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಬೆಂಗಳೂರಿನಂತಹ ನಗರವಾಗಲಿ ಹಳ್ಳಿಯಾಗಲಿ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿರುವ ಬಾಗಿಲುಗಳಿಂದ ಮನೆಗಳನ್ನು ನಿರ್ಮಿಸುತ್ತಾರೆ. ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಯಾರೇ ಅಪರಿಚಿತರು ಬಂದರು ಬಾಗಿಲನ್ನು ತೆಗೆಯಲು ಹಿಂಜರಿಯುತ್ತೇವೆ. ಮನೆ ಎಂದ ಮೇಲೆ

ಬೆಂಗಳೂರಿನಂತಹ ನಗರವಾಗಲಿ ಹಳ್ಳಿಯಾಗಲಿ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿರುವ ಬಾಗಿಲುಗಳಿಂದ ಮನೆಗಳನ್ನು ನಿರ್ಮಿಸುತ್ತಾರೆ. ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಯಾರೇ ಅಪರಿಚಿತರು ಬಂದರು ಬಾಗಿಲನ್ನು ತೆಗೆಯಲು ಹಿಂಜರಿಯುತ್ತೇವೆ. ಮನೆ ಎಂದ ಮೇಲೆ ಬಾಗಿಲು ಇಲ್ಲವೆಂದರೆ ಏನು ಚೆಂದ?.

ಸಾಮಾನ್ಯವಾಗಿ ಬಾಗಿಲಿಗೆ ವಾಸ್ತು ಶಾಸ್ತ್ರದಲ್ಲಿ ತನ್ನದೇ ಆದ ವೈಶಿಷ್ಟತೆ ಇದೆ. ಬೆಂಗಳೂರಿನಂತಹ ನಗರದಲ್ಲಿ ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಆಧುನಿಕವಾದ ಶೈಲಿಯಲ್ಲಿ ಬಾಗಿಲುಗಳಿಂದ ತಮ್ಮ ಮನೆಗಳನ್ನು ನಿರ್ಮಿಸುತ್ತಾರೆ.

ಎನು ಇಂದು ಬಾಗಿಲ ಕುರಿತು ಇಷ್ಟೂ ಮಾತನಾಡುತ್ತಿದ್ದೇನೆ ಎಂದು ಕೊಳ್ಳುತ್ತೀದ್ದೀರಾ? ಹಾಗಾದರೆ ತಿಳಿಯಿರಿ ಭಾರತದಲ್ಲಿನ ಒಂದು ಪ್ರದೇಶದಲ್ಲಿ ಯಾವ ಮನೆಗೇ ಆಗಲಿ, ಅಂಗಡಿಗಳಿಗಾಗಲಿ, ಬ್ಯಾಂಕುಗಳಿಗೂ ಕೂಡ ಬಾಗಿಲು ಇರುವುದಿಲ್ಲ. ಮಹಾರಾಷ್ಟ್ರದ ಶನಿಸಿಂಗ್ನಾಪುರದಲ್ಲಿ ಈ ವಿಶಿಷ್ಟತೆಯನ್ನು ಕಾಣಬಹುದು.

ಪ್ರಸ್ತುತ ಲೇಖನದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗ್ಯಾವುದ್ದಕ್ಕೂ ಬಾಗಿಲು ಏಕೆ ಇಲ್ಲ ಎಂಬ ಕಾರಣವನ್ನು ಲೇಖನದ ಮೂಲಕ ತಿಳಿಯೋಣ.

ಶನಿ ಸಿಂಗ್ನಾಪುರ

ಶನಿ ಸಿಂಗ್ನಾಪುರ

ಶನಿ ಸಿಂಗ್ನಾಪುರ ಅಥವಾ ಶನಿ ಸಿಂಗಾಪುರ ಮಹಾರಾಷ್ಟ್ರದ ಒಂದು ಪ್ರಸಿದ್ಧವಾದ ಹಳ್ಳಿಯಾಗಿದೆ. ಮಹಾರಾಷ್ಟ್ರದ ಅಹಮಾದ್ ನಗರ ಜಿಲ್ಲೆಯ ನೆವಸಾ ತಾಲ್ಲೂಕಿನಲ್ಲಿರುವ ಒಂದು ಗ್ರಾಮದಲ್ಲಿ ಶ್ರೀ ಶನಿ ಮಹಾತ್ಮ ಸ್ವಾಮಿಯು ನೆಲೆಸಿದ್ದಾನೆ. ಬಾಗಿಲಿಲ್ಲದ ಮನೆ, ಅಂಗಡಿ, ಬ್ಯಾಂಕುಗಳು ಇರುವುದು ಇಲ್ಲಿಯೇ.


PC:YOUTUBE

ಪ್ರಸಿದ್ಧಿ

ಪ್ರಸಿದ್ಧಿ

ಈ ಗ್ರಾಮದಲ್ಲಿ ಯಾವುದೇ ಬಾಗಿಲುಗಳನ್ನು ಹೊಂದಿಲ್ಲ ಎಂದೂ ಸಹ ಶನಿಸಿಂಗ್ನಾಪುರವು ಪ್ರಸಿದ್ಧಿಯನ್ನು ಪಡೆದಿದೆ. ವಿಚಿತ್ರ ಏನೆಂದರೆ ಇಲ್ಲಿ ಇದುವರೆವಿಗೂ ಯಾವುದೇ ಕಳ್ಳತನದ ವರದಿಯಾಗಿಲ್ಲ.

PC:YOUTUBE

ಪುರಾಣ

ಪುರಾಣ

ಸ್ವಯಂ ಭೂ ಶನ್ಯೆಶ್ಚರ ಪ್ರತಿಮೆಯಾಗಿದೆ. ಒಂದು ನದಿ ತೀರದಲ್ಲಿ ಕಪ್ಪು ಬಣ್ಣದ ಕಲ್ಲು ತೆಲುತ್ತಿರುವುದನ್ನು ಕಂಡ ಕೆಲವು ಸ್ಥಳೀಯರು. ಈ ದಿವ್ಯವಾದ ಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಈ ಮೂರ್ತಿಯು ಕಾಳಿ ಯುಗದ ಪ್ರಾರಂಭದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ.


PC:YOUTUBE

ಕನಸ್ಸಿನಲ್ಲಿ ಬಂದ ಶನಿಶ್ವರ

ಕನಸ್ಸಿನಲ್ಲಿ ಬಂದ ಶನಿಶ್ವರ

ನದಿಯಿಂದ ತಂದ ಕಪ್ಪು ಕಲ್ಲು ರಕ್ತಸ್ರಾವ ಪ್ರಾರಂಭವಾಯಿತು. ಇದನ್ನು ಕಂಡ ಕೆಲವು ಕುರುಬರು ದಿಗ್ಭ್ರಮೆಗೊಂಡರು. ಆ ದಿನ ರಾತ್ರಿ ಶನಿಶ್ವರ ದೇವನು ಕನಸಿನಲ್ಲಿ ಕುರುಬನಿಗೆ ಕಾಣಿಸಿಕೊಂಡು ತನಗೊಂದು ದೇವಾಲಯವನ್ನು ನಿರ್ಮಿಸು ಎಂದು ಹೇಳಿದನು.

PC:YOUTUBE

ಮೇಲ್ಛಾವಣಿ

ಮೇಲ್ಛಾವಣಿ

ಶನಿದೇವನು ತನ್ನ ದೇವಾಲಯವು ಯಾವುದೇ ರೀತಿಯಿಂದ ಮೇಲ್ಛಾವಣಿಯನ್ನು ಹೊಂದಿರಬಾರದು ತೆರೆದ ಆಕಾಶದಲ್ಲಿ ಇರಬೇಕೆಂದು ಆದ್ಯತೆಯನ್ನು ನೀಡಿದರು. ಇದಕ್ಕೆ ಒಪ್ಪಿದ ಕುರುಬ ಶನಿ ದೇವನ ಅನುಮತಿಯಂತೆಯೇ ನಿರ್ಮಿಸಿದ.

PC:YOUTUBE

ತೈಲಾಭಿಷೇಕ

ತೈಲಾಭಿಷೇಕ

ಇಲ್ಲಿ ಪ್ರತಿನಿತ್ಯ ಶನಿವಾರದಂದು ಶನಿದೇವರಿಗೆ "ತೈಲಾಭಿಷೇಕ" ಮಾಡಲು ಸ್ಥಳೀಯರು ಸಿದ್ಧರಾದರು. ಇದರಿಂದ ಸಂತೋಷನಾದ ಶನಿದೇವರು ಯಾವುದೇ ದರೋಡೆಕೋರರ ಬಗ್ಗೆ ಭಯ ಬೇಡ ಎಂದು ಭರವಸೆ ನೀಡಿದನು.


PC:YOUTUBE

ಬಾಗಿಲು

ಬಾಗಿಲು

ಶನಿದೇವರ ಆಜ್ಞೆಯಂತೆ ಇಂದಿಗೂ ಯಾವುದೇ ಮನೆ, ಅಂಗಡಿ, ದೇವಾಲಯ, ಬ್ಯಾಂಕುಗಳಿಗೆ ಆಗಲಿ ಬಾಗಿಲುಗಳಿಲ್ಲ.

PC:YOUTUBE

ಶನಿ ದೇವ

ಶನಿ ದೇವ

ಕಳ್ಳತನ ಮಾಡಿದರೆ ಶನಿ ದೇವರು ಶಿಕ್ಷಿಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ. ನಿಮಿಷದಲ್ಲಿ ಗಡಿ ದಾಟುವ ಮುಂಚೆಯೇ ಕಳ್ಳರು ರಕ್ತದ ವಾಂತಿ ಮಾಡಿಕೊಂಡು ಸಾಯುತ್ತಾರೆ ಎಂಬುದು ಸ್ಥಳೀಯ ಭಕ್ತರ ನಂಬಿಕೆಯಾಗಿದೆ.

PC:YOUTUBE

ದೇವಾಲಯ

ದೇವಾಲಯ

ಶನಿ ದೇವಾಲಯದ ಮೂರ್ತಿಯು ಕಪ್ಪು ಕಲ್ಲಿನಿಂದ ಕೂಡಿದೆ. ಇಲ್ಲಿ ಯಾವುದೇ ರೀತಿಯ ಮೇಲ್ಛಾವಣಿ ಇಲ್ಲ ಬದಲಾಗಿ ಭಕ್ತಾದಿಗಳು ಶನಿ ದೇವರ ಮೇಲೆ ದಿನನಿತ್ಯ ಎಣ್ಣೆಯ ಅಭಿಷೇಕ ಮಾಡುತ್ತಾರೆ.

PC:YOUTUBE

ಇತರ ದೇವತಾ ಮೂರ್ತಿ

ಇತರ ದೇವತಾ ಮೂರ್ತಿ

ಇಲ್ಲಿ ತ್ರಿಶೂಲ, ನಂದಿ, ಶಿವ, ಹನುಮಾನ ಮೂರ್ತಿಗಳನ್ನು ಕಾಣಬಹುದಾಗಿದೆ. ಶನಿವಾರದ ಅಮಾವಾಸ್ಯೆಯ ದಿನಗಳಲ್ಲಿ ದೊಡ್ಡ ಉತ್ಸವ ನಡೆಯುವುದರಿಂದ ಹಲವಾರು ಭಕ್ತರು ಈ ದೇವಾಲಯಕ್ಕೆ ಹಾಗೂ ಬಾಗಿಲಿಲ್ಲದ ವಿಶೇಷವನ್ನು ಕಣ್ಣು ತುಂಬಿಕೊಳ್ಳುತ್ತಾರೆ.

PC:YOUTUBE

ಮಹಿಮೆ

ಮಹಿಮೆ

ಈ ಗ್ರಾಮದ ಜನರು ಶನಿ ದೇವರ ಮೇಲೆ ಇರುವ ನಂಬಿಕೆಯೊ ಏನೊ ತಿಳಿಯದು. ಆದರೆ ವಿಸ್ಮಯವಿರುವ ದೇವಾಲಯವನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದ ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬ್ಯಾಂಕುಗಳಿಗೂ ಬಾಗಿಲು ಇಲ್ಲದೇ ಇರುವುದು ಮತ್ತಷ್ಟು ವಿಶೇಷವಾಗಿದೆ.

PC:YOUTUBE

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಶಿರಿಡಿ ಸಾಯಿ ಬಾಬಾ ದೇವಾಲಯ ಶನಿ ಸಿಂಗ್ನಾಪುರದಿಂದ ಸುಮಾರು 70 ಕಿ,ಮೀ ದೂರದಲ್ಲಿದೆ. ಸಕೋತ್ರಿ ಶನಿ ಸಿಂಗ್ನಾಪುರದಿಂದ 69 ಕಿ,ಮೀ ದೂರದಲ್ಲಿದೆ. ಅಜಂತಾ ಎಲ್ಲೋರಾ ಗುಹೆಗಳು ಶನಿ ಸಿಂಗ್ನಾಪುರದ ದಕ್ಷಿಣ ದಿಕ್ಕಿಗೆ 79 ಕಿ,ಮೀ ದೂರದಲ್ಲಿ ಎಲ್ಲೋರಾ ಗುಹೆಗಳನ್ನು ಕಾಣಬಹುದಾಗಿದೆ.

PC:YOUTUBE

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ವಿಶಿಷ್ಟವಾದ ದೇವಾಲಯಕ್ಕೆ ಹಾಗೂ ಬಾಗಿಲುಗಳಿಲ್ಲದ ವಿಸ್ಮಯ ದೇವಾಲಯವನ್ನು ಕಾಣಲು ಸಮೀಪದ ವಿಮಾನ ನಿಲ್ದಾಣವೆಂದರೆ ಔರಂಗಬಾದ್ ಏರ್ಪೋಟ್. ಇಲ್ಲಿಂದ ಶನಿ ಸಿಂಗ್ನಾಪುರಕ್ಕೆ ಕೇವಲ 90 ಕಿ,ಮೀ ದೂರದಲ್ಲಿದೆ.

PC:Manfred Sommer

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಸಮೀಪದ ರೈಲ್ವೆ ನಿಲ್ದಾಣವೆಂದರೆ ರಹೋರಿ ಸುಮಾರು 32 ಕಿ,ಮೀ ಅಂತರ, ಅಹಮದಾ ನಗರ 35 ಕಿ,ಮೀ ಮತತು ಶ್ರೀ ರಾಮ ಪುರ 54 ಕಿ,ಮೀ ಸಿರಿಡಿ ರೈಲ್ವೆ ಸ್ಟೇಷನ್‍ನಿಂದ 75 ಕಿ,ಮೀ ದೂರದಲ್ಲಿದೆ.

ಪ್ರಯಾಣ

ಪ್ರಯಾಣ

ಶನಿ ಸಿಂಗ್ನಾಪುರಕ್ಕೆ ರಾಹೋರಿಯಿಂದ 24 ಕಿ,ಮೀ, ಅಹಮಾದ ನಗರಯಿಂದ 40 ಕಿ,ಮೀ, ಔರಂಗಬಾದ್‍ನಿಂದ 72 ಕಿ,ಮೀ, ನಾಸಿಕ್‍ನಿಂದ 143 ಕಿ,ಮೀ, ಮುಂಬೈನಿಂದ 295 ಕಿ,ಮೀ, ಪುಣೆಯಿಂದ 161 ಕಿ,ಮೀ ಅಂತರದಲ್ಲಿದೆ.


PC:Manfred Sommer

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X