Search
  • Follow NativePlanet
Share
» »ನಕ್ಷತ್ರಾಕಾರದಲ್ಲಿರುವ ಕರ್ನಾಟಕದ ಈ ಕೋಟೆ ಎಲ್ಲಿದೆ ಗೊತ್ತ?

ನಕ್ಷತ್ರಾಕಾರದಲ್ಲಿರುವ ಕರ್ನಾಟಕದ ಈ ಕೋಟೆ ಎಲ್ಲಿದೆ ಗೊತ್ತ?

ನಮ್ಮ ದೇಶದಲ್ಲಿನ ಕೋಟೆಗಳು ಎಂದರೇ ದೇಶಿಯರಿಗೇ ಅಲ್ಲದೇ ವಿದೇಶಿಯರಿಗೂ ಇಷ್ಟ. ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ. ಒಂದೊಂದು ಕೋಟೆ ಒಂದೊಂದು ಘನವಾದ ಇತಿಹಾಸವನ್ನು ಹೊಂದಿವೆ. ಅವುಗಳ ವಾಸ್ತುಶಿಲ್ಪ, ಕಟ್ಟಡಗಳು, ಭಧ್ರತೆಗಳು, ಫಿರಂಗಿಗಳು

ನಮ್ಮ ದೇಶದಲ್ಲಿನ ಕೋಟೆಗಳು ಎಂದರೇ ದೇಶಿಯರಿಗೇ ಅಲ್ಲದೇ ವಿದೇಶಿಯರಿಗೂ ಇಷ್ಟ. ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ. ಒಂದೊಂದು ಕೋಟೆ ಒಂದೊಂದು ಘನವಾದ ಇತಿಹಾಸವನ್ನು ಹೊಂದಿವೆ. ಅವುಗಳ ವಾಸ್ತುಶಿಲ್ಪ, ಕಟ್ಟಡಗಳು, ಭಧ್ರತೆಗಳು, ಫಿರಂಗಿಗಳು, ರಾಜ, ರಾಣಿಯರ ಕೊಠಡಿ, ಸಭಾಮಂಟಪ, ಮಹಲ್ ಇವೆಲ್ಲಾ ಕಣ್ಣಾರೆ ಕಂಡು ಆನಂದಿಸಬೇಕು ಎಂದಾದರೆ ಮಂಜರಾಬಾದ್ ಕೋಟೆಗೆ ತೆರಳಬೇಕು.

ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ಹಲವಾರು ಐತಿಹಾಸಿಕತೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಕೋಟೆಗಳಿವೆ. ಆ ಕೋಟೆಗಳಲ್ಲಿ ಒಂದು ಮಂಜರಾಬಾದ್ ಕೋಟೆ. ಸಾಮಾನ್ಯವಾಗಿ ಕೆಲವರು ಈ ಕೋಟೆಯ ಹೆಸರನ್ನು ಕೇಳಿರುವುದಿಲ್ಲ. ಈ ಕೋಟೆಯು ಕರ್ನಾಟಕ ರಾಜ್ಯದ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಕೋಟೆಗಳಲ್ಲಿ ಒಂದಾಗಿದೆ. ಈ ಸುಂದರವಾದ ಹಾಗೂ ಭವ್ಯವಾದ ಕೋಟೆಯು ಸಕಲೇಶ್ವರ ಪುರದಲ್ಲಿದೆ. ಈ ಕೋಟೆಯ ಸೌಂದರ್ಯವು ನಕ್ಷತ್ರಾಕಾರದಂತೆ ಇದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಪ್ರಸ್ತುತ ಲೇಖನದ ಮೂಲಕ ಮಂಜರಾಬಾದ್ ಕೋಟೆಯ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಮಂಜರಾಬಾದ್ ಕೋಟೆಯು ಹಾಸನ ಜಿಲ್ಲೆಯ ಸಕಲೇಶ್ವರ ಪುರದಲ್ಲಿದೆ. ಈ ಕೋಟೆಯು ಹಾಸನದಿಂದ ಸುಮಾರು 23 ಕಿ,ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 227 ಕಿ,ಮೀ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.


PC:Chandu6119

ನಿರ್ಮಾಣ ಮಾಡಿದವರು?

ನಿರ್ಮಾಣ ಮಾಡಿದವರು?

ಈ ಮಂಜರಾಬಾದ್ ನಿರ್ಮಾಣವನ್ನು ಸುಮಾರು 1792ರಲ್ಲಿ ಮೈಸೂರಿನ ಹುಲಿ ಟಿಪ್ಪು ಸೂಲ್ತಾನ್ ನಿರ್ಮಿಸಿದನು. ಈ ಕೋಟೆಯನ್ನು ಫ್ರೆಂಚ್ ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲೇಪ್ರೀಸ್ಟ್ರೆ ಡಿ ವೂಬಾನ್ ಎಂಬುವವನಿಂದ ಮಿಲಿಟರಿ ಕೋಟೆಯಂತೆ ನಿರ್ಮಿಸಿದನು. ಈ ಕೋಟೆಯು ಅತ್ಯಂತ ಸುಂದರವಾಗಿದ್ದು ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ.


PC:Rvsssuman

ಕೋಟೆ

ಕೋಟೆ

ಈ ಮಂಜರಾಬಾದ್ ಕೋಟೆಯು ಸುಮಾರು 988 ಮೀಟರ್ ಎತ್ತರದಲ್ಲಿದೆ. ವಿಶೇಷವೆನೆಂದರೆ ಈ ಭವ್ಯವಾದ ಕೋಟೆಯು ಬೆಟ್ಟದ ಮೇಲೆ ನೆಲೆಸಿದೆ. ಈ ಕೋಟೆ ಇರುವ ಬೆಟ್ಟದ ಮೇಲೆ ಹೋದರೆ ಸುಂದರವಾದ ಪ್ರಾಕೃತಿಕ ಸೊಬಗನ್ನು ಕಂಡು ಆನಂದಿಸಬಹುದಾಗಿದೆ. ಹಾಗೆಯೇ ಅರೇಬಿಯನ್ ಸಮುದ್ರವನ್ನು ಸಹ ಈ ಕೋಟೆಯಿಂದ ವೀಕ್ಷಿಸಬಹುದಾಗಿದೆ.

PC:Rvsssuman

ಟಿಪ್ಪು ಸೂಲ್ತಾನ್

ಟಿಪ್ಪು ಸೂಲ್ತಾನ್

ಮೈಸೂರಿನ ಹುಲಿ ಟಿಪ್ಪು ಸೂಲ್ತಾನ್ 1792 ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ನಂತರ ಮೈಸೂರಿನಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದನು ಆ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಿದನು ಎಂದು ಇತಿಹಾಸಕಾರರು ತಿಳಿಸುತ್ತಾರೆ.


PC:Ashwin Kumar

ಬ್ರಿಟೀಷರು

ಬ್ರಿಟೀಷರು

ಈ ಸಮಯದಲ್ಲಿ ಬ್ರಿಟೀಷರೊಂದಿಗೆ ಹೈದ್ರಾಬಾದ್‍ನ ಮರಾಠರು, ನಿಜಾಮರು ಕೂಡ ಕೈ ಜೋಡಿಸಿದರು. ಆ ಸಮಯದಲ್ಲಿ ಟಿಪ್ಪು ಸುಲ್ತಾನ್ ಫ್ರೆಂಚರೊಂದಿಗೆ ಸಂಬಂಧವನ್ನು ಬೆಳೆಸಿದ್ದನು.

PC:Raghuvara

ಫ್ರೆಂಚ್

ಫ್ರೆಂಚ್

ಹಾಗಾಗಿಯೇ ಟಿಪ್ಪು ಸೂಲ್ತಾನ್ ಫ್ರೆಂಚ್‍ರ ಇಂಜಿನಿಯರ ಸಹಾಯದಿಂದ ಮಂಜರಾಬಾದ್ ನಂತಹ ಸುಂದರವಾದ ಕೋಟೆಯನ್ನು ನಿರ್ಮಿಸಿದನು. ಮುಖ್ಯವಾಗಿ ಫ್ರಾನ್ಸ್ ಮಿಲಿಟರಿ ಇಂಜಿನಿಯರ್‍ಗಳಿಂದ ಭಧ್ರವಾದ ಈ ಕೋಟೆಯನ್ನು ನಿರ್ಮಾಣ ಮಾಡಿಸಿದನು.

PC:Pandith Jantakahalli


ಮಂಜರಾಬಾದ್ ಕೋಟೆ

ಮಂಜರಾಬಾದ್ ಕೋಟೆ

ಸುರಂಗ ಮಾರ್ಗಕೋಟೆಯ ನಿರ್ಮಾಣದ ನಂತರ ಪರಿಶೀಲನೆ ನಡೆಸಿದ ಟಿಪ್ಪು ಈ ಕೋಟೆಗೆ ಒಂದು ಹೆಸರು ಇಟ್ಟನು. ಅದೇ ಮಂಜರಾಬಾದ್ ಕೋಟೆ. ಮಂಜರ ಎಂಬುದು ಕನ್ನಡದ ಪದವಾಗಿದ್ದು, ಮಂಜು ಎಂಬ ಅರ್ಥವನ್ನು ನೀಡುತ್ತದೆ.

PC:Raghuvara

ಸುರಂಗ ಮಾರ್ಗ

ಸುರಂಗ ಮಾರ್ಗ

ಇತಿಹಾಸಕಾರರ ಪ್ರಕಾರ ಈ ಮಂಜರಾಬಾದ್ ಕೋಟೆಯು ಶ್ರೀ ರಂಗ ಪಟ್ಟಣಕ್ಕೆ ನೇರವಾದ ಸುರಂಗ ಮಾರ್ಗವನ್ನು ಹೊಂದಿದೆ ಎಂದು ಹೇಳುತ್ತಾರೆ.

PC:Aravind K G

ಭಧ್ರವಾದ ಕೋಟೆ

ಭಧ್ರವಾದ ಕೋಟೆ

ಈ ಕೋಟೆಯನ್ನು ಮಿಲಿಟರಿ ಕೋಟೆಗಳಂತೆ ನಿರ್ಮಿಸಿರುವ ಟಿಪ್ಪು ತನ್ನ ಅತ್ಯಂತ ಬಲಿಷ್ಟವಾದ ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯಲ್ಲಿ ಅಷ್ಟಭುಜಾಕೃತಿ ವಿನ್ಯಾಸವನ್ನು ಹೊಂದಿದೆ. ಈ ಕೋಟೆಯು ನಕ್ಷತ್ರಾಕಾರವಾಗಿ ಕಂಗೊಳಿಸುತ್ತಿದೆ.


PC:Aravind K G

ನಿರ್ಮಾಣ

ನಿರ್ಮಾಣ

ಈ ಕೋಟೆಯನ್ನು ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ಹಲವಾರು ಕೊಠಡಿಗಳು ಹಾಗು ಬಾವಿಗಳನ್ನು ಕಾಣಬಹುದಾಗಿದೆ. ಭಧ್ರವಾದ ಈ ಕೋಟೆಯ ಒಳಭಾಗದಲ್ಲಿ ಬೇಸಿಗೆ ಕಾಲಕ್ಕೆ ಎಂದು ಪ್ರತ್ಯೇಕವಾದ ಕೊಠಡಿಯನ್ನು ಕಾಣಬಹುದಾಗಿದೆ.

PC:Rvsssuman

ಭಾರತದ ನಕ್ಷತ್ರಾಕಾರದ ಕೋಟೆ

ಭಾರತದ ನಕ್ಷತ್ರಾಕಾರದ ಕೋಟೆ

ಈ ಮಂಜರಾಬಾದ್ ಕೋಟೆಯು ನಕ್ಷತ್ರಾಕಾರವಾಗಿ ನಿರ್ಮಾಣ ಮಾಡಿರುವುದರಿಂದ ಈ ಕೋಟೆಯನ್ನು "ಭಾರತದ ನಕ್ಷತ್ರಾಕಾರದ ಕೋಟೆ" ಎಂದು ಹೆಗ್ಗಳಿಕೆ ಪಡೆದಿದೆ.


PC:Subramanya Hariharapura Sridhara

ತಲುಪುವ ಬಗೆ?

ತಲುಪುವ ಬಗೆ?

ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿರುವ ಭಾರತದ ಏಕೈಕ ನಕ್ಷತ್ರಾಕಾರದ ಕೋಟೆ ಇರುವುದು ಹಾಸನದ ಸಕಲೇಶ್ವರ ಪುರದಲ್ಲಿ. ಬೆಂಗಳೂರಿನಿಂದ ಸುಮಾರು 227 ಕಿ,ಮೀ ದೂರದಲ್ಲಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X