ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಹನುಮಂತನು ಹೀಗೆ ಧಾರಾಕಾರವಾಗಿ ಅಳುತ್ತಿರುವುದಕ್ಕೆ ಕಾರಣವಾದರೂ ಏನು?

Written by:
Published: Saturday, June 17, 2017, 14:00 [IST]
Share this on your social network:
   Facebook Twitter Google+ Pin it  Comments

ಹನುಮಂತ ಶ್ರೀ ರಾಮನ ಭಂಟ. ಹನುಮಂತ ದುಷ್ಟರನ್ನು ಸದೆಬಡೆದ ಧರ್ಮರಕ್ಷಕ. ಇವನನ್ನು ಆಂಜನೇಯ, ಹನುಮಾನ್, ಬಜರಂಗಬಲಿ, ಅಂಜನಿಪುತ್ರ, ಪವನ ಸುತ, ಚಿರಂಜೀವ ಎಂದು ಹಲವಾರು ನಾಮಗಳಿಂದ ಕರೆಯುತ್ತಾರೆ. ಭಕ್ತ ಎಂಬ ಪದಕ್ಕೆ ಹನುಮನು ಮೊದಲ ಸ್ಥಾನದಲ್ಲಿರುವುದನ್ನು ಕಾಣಬಹುದಾಗಿದೆ.

ಏಕೆಂದರೆ ಹನುಮಂತ ಎಂದ ಕೂಡಲೇ ನೆನಪಾಗುವುದು ಶ್ರೀ ರಾಮ. ಹನುಮಂತ ಎಂದರೇ ಶ್ರೀ ರಾಮ, ರಾಮ ಎಂದರೆ ಹನುಮಂತ ಎನ್ನವಷ್ಟು ಆಪ್ತ. ರಾಮಾಯಾಣದಲ್ಲಿ ಹನುಮಂತನ ಪಾತ್ರ ಅಪಾರವಾದುದು.

ಶನಿ ದಶೆಯಲ್ಲಿ ಮುಕ್ತಿ ಹಾಗೂ ಭೂತ ಪ್ರೇತಗಳಿಂದ ಶಮನ ಮಾಡುವುದು ಹೀಗೆ ಹಲವಾರು ಹನುಮಂತನ ಮಹಿಮೆಗಳನ್ನು ಹೇಳಲು ದಿನಗಳೇ ಸಾಲದು. ಪವನಸುತನ ಶಕ್ತಿಯ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.

ಚಿಕ್ಕ ಪುಟ್ಟ ಮಕ್ಕಳಿಗೂ ಹನುಮತ ಗಾಡ್ ಫೆವೆರಟ್. ಹೌದು ಹನುಮಂತನ ಬಗ್ಗೆ ಯಾಕೆ ಇಷ್ಟೊಂದು ಹೇಳುತ್ತಾ ಇದ್ದೇನೆ ಎಂದು ಯೋಚಿಸುತ್ತಿದ್ದಿರಾ? ಹಾಗಾದರೆ ವಿಷಯಕ್ಕೆ ಬರುತ್ತೇನೆ. ಬೆಟ್ಟವನ್ನೇ ಕೈಯಲ್ಲಿ ಹಿಡಿದ ಹನುಮಂತನು ಕಲಿಯುಗದಲ್ಲಿ ಆಳುತ್ತಿದ್ದಾನೆ.

ಪ್ರಸ್ತುತ ಲೇಖನದಲ್ಲಿ ಹನುಮಂತನ ಕಣ್ಣೀರಿನ ಸತ್ಯ ಕಥೆಯ ಬಗ್ಗೆ ತಿಳಿಯೋಣ.

ಶ್ರೀರಾಮ

ಹನುಮಂತನನ್ನು ಶ್ರೀರಾಮನ ಎದುರಿಗೆ ಸ್ಥಾಪಿಸುವುದು ಸಾಮಾನ್ಯ. ರಾಮನಲ್ಲಿಯೋ ಹನುಮನು ಅಲ್ಲಿ ಎಂಬ ಹಾಗೆ ರಾಮನ ಬಂಟನಾಗಿರುವ ಹನುಮನು ದೇವಾಲಯಗಳಲ್ಲಿ ನೆಲೆಸಿರುತ್ತಾನೆ.

PC:YOUTUBE

 

ಹನುಮಂತನ ದೇವಾಲಯ

ಹನುಮನ ದೇವಾಲಯಗಳನ್ನು ದೇಶ ವಿದೇಶಗಳಲ್ಲೂ ಕಾಣಬಹುದಾಗಿದೆ. ಹನುಮಂತನ ಶಕ್ತಿ ಬಲದಿಂದಲೇ ಭಕ್ತರನ್ನು ಕಾಪಾಡುತ್ತಾ ಬರುತ್ತಿದ್ದಾನೆ.

PC:YOUTUBE

 

ಸೀತಾ ರಾಮ

ಹನುಮಂತನ ದೇವಾಲಯದಲ್ಲಿ ಶ್ರೀ ರಾಮ ಹಾಗೂ ಸೀತಾ ದೇವಿಯ ವಿಗ್ರಹ ಅಥವಾ ಫೋಟು ಆದರೂ ಕಾಣುತ್ತೇವೆ. ಶ್ರೀ ರಾಮನ ಮೇಲೆ ಹನುಮಂತನಿಗೆ ಇದ್ದ ಅಗಾಢವಾದ ಭಕ್ತಿಯೇ ಆಗಿತ್ತು.

PC:YOUTUBE

 

ಚಿಕ್ಕ ಚಿಕ್ಕ ದೇವಾಲಯ

ಹನುಮಂತನು ದೊಡ್ಡ ದೊಡ್ಡದಾದ ದೇವಾಲಯಗಳಲ್ಲೇ ಅಲ್ಲದೇ ಚಿಕ್ಕ ದೇವಾಲಯ, ಅಶ್ವತ ವೃಕ್ಷದ ಬಳಿ, ರೋಡಿನ ಬಳಿ ಹನುಮಂತನ ಮೂರ್ತಿ ಅಥವಾ ಫೋಟೊಗಳನ್ನು ನಾವು ನೋಡಿರುತ್ತೇವೆ.

PC:YOUTUBE

 

ರಾಮಾಯಣ

ರಾಮಾಯಣದಲ್ಲಿ ಶ್ರೀ ರಾಮನ ಭಂಟನಾಗಿ ರಾವಣನ ಸೈನ್ಯದ ಜೊತೆ ಯುದ್ಧವನ್ನು ಮಾಡಿ ಜಯ ತಂದುಕೊಟ್ಟವನು. ವಾನರ ಸೈನ್ಯ ಸ್ಥಾಪಕನಾಗಿ ಲಂಕಾ ಧಹನವನ್ನು ಮಾಡಿದವನು.

PC:YOUTUBE

 

ಅಳುತ್ತಿರುವ ಹನುಮಂತ

ಹೀಗೆ ಧೀಘಾವಾಗಿ ಅಳುತ್ತಿರುವ ಹನುಮಂತನ ದೇವಾಲಯವಿರುವುದು ತೆಲಂಗಾಣ ರಾಜ್ಯದ ಖಮ್ಮಂ ವೈರಪಲ್ಲಿ ಮಂಡಲ ಅಗ್ರಾಹಾರದಲ್ಲಿ.

PC:YOUTUBE

 

ಇದ್ದಕ್ಕಿದ್ದ ಹಾಗೆ

ಇದ್ದಕ್ಕಿದ್ದ ಹಾಗೆ ಹನುಮಂತನ ಕಣ್ಣೀನಿಂದ ಕಣ್ಣೀರು ಧಾರಾಕಾರವಾಗಿ ಸುರಿಯ ತೊಡಗಿತು.

PC:YOUTUBE

 

ಪೂಜೆಗಳು

ಸ್ವಾಮಿ ಹನುಮಂತನಿಗೆ ಮನ ನೊಂದಿದೆ ಎಂದು ಭಕ್ತಾದಿಗಳು ಶಾಂತಿ ಪೂಜೆಯನ್ನು ಮಾಡಲು ಮುಂದಾದರು. ಆದರೂ ಸ್ವಾಮಿಯು ಅಳುವುದನ್ನು ನಿಲ್ಲಿಸಲಿಲ್ಲ.

PC:YOUTUBE

 

ಜನರು

ಈ ವಿಚಿತ್ರವಾದ ಹನುಮಂತನ ಕಣ್ಣೀರನ್ನು ಕಾಣಲು ತಂಡೋಪ ತಂಡವಾಗಿ ತೆಲಂಗಾಣದ ಹಲವು ಪ್ರದೇಶಗಳಿಂದ ಜನರು ಈ ದೇವಾಲಯಕ್ಕೆ ಬರಲು ಪ್ರಾರಂಭಿಸಿದರು.

PC:Dharma

 

ಹನುಮಂತ ಆಳಲು ಕಾರಣವೇನು?

ಈ ರೀತಿ ಧಾರಕಾರವಾಗಿ ಹನುಮಂತನು ಅಳುತ್ತಿರುವ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಕಲಿಯುಗದಲ್ಲೂ ಇಂತಹ ಹಲವು ವಿಸ್ಮಯ ನಡೆಯುವುದು ಆಶ್ಚರ್ಯವೇ ಸರಿ.

PC:Anuj Nair

 

English summary

What causes Hanuman to cry ?

The temple of Hanumanth who is crying as a dhega is in the Khammam Veerapalli Mandala Agaragam in the state of Telangana.
Please Wait while comments are loading...