ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

Written by:
Published: Thursday, July 13, 2017, 9:30 [IST]
Share this on your social network:
   Facebook Twitter Google+ Pin it  Comments

ಪ್ರಪಂಚದಲ್ಲಿ ಚಾರಿತ್ರಿಕವಾದ ಹಾಗೂ ರಹಸ್ಯಗಳನ್ನು ಹೊಂದಿರುವ ಅದೆಷ್ಟೋ ಕಟ್ಟಡಗಳಿವೆ. ಅತ್ಯಂತ ಪುರಾತನವಾದ ಸಂಸ್ಕøತಿಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ರಹಸ್ಯಗಳನ್ನು ಹೊಂದಿರುವುದಕ್ಕೆ ಅಂತ್ಯವೇ ಇಲ್ಲ. ಇಂದಿಗೂ ನಮ್ಮ ದೇಶದ ಹಲವಾರು ಕಟ್ಟಡಗಳು ಹೇಗೆ ನಿರ್ಮಿಸಿದರು? ಎಂಬ ಪ್ರಶ್ನೆ ರಹಸ್ಯವಾಗಿಯೇ ಉಳಿದು ಬಿಟ್ಟಿದೆ. ಅಂತಹ ಕಟ್ಟಡಗಳ ಮುಖ್ಯವಾಗಿ ದೇವಾಲಯಗಳ ಬಗ್ಗೆ ತಿಳಿಯೋಣ.

ಆ ದೇವಾಲಯಗಳನ್ನು ನಿರ್ಮಿಸಿದ ಬಗ್ಗೆ ಇಂದಿಗೂ ಕೂಡ ನಿಗೂಢವಾಗಿಯೇ ಉಳಿದಿವೆ. ಅಂತಹ ರಹಸ್ಯಗಳನ್ನು ಹೊಂದಿರುವ ಟಾಪ್ 5 ದೇವಾಲಯದ ಬಗ್ಗೆ ಲೇಖನದಲ್ಲಿ ತಿಳಿಯೋಣ.

1.ಕೋನಾರ್ಕ್ ಸೂರ್ಯಾ ದೇವಾಲಯ

ಈ ದೇವಾಲಯವನ್ನು ಕ್ರಿ.ಶ 1236 ರಿಂದ 1264ರ ಮಧ್ಯ ಕಾಲದಲ್ಲಿ ಗಂಗರ ವಂಶಕ್ಕೆ ಸೇರಿದ ಲಾಂಗುಲ ನರಸಿಂಹದೇವ ಎಂಬ ರಾಜನು ನಿರ್ಮಿಸಿದನು ಎಂದು ಅಲ್ಲಿನ ಆಧಾರದ ಮೂಲಕ ದೊರೆಯುತ್ತದೆ. ಈ ದೇವಾಲಯವನ್ನು 7 ಕುದುರೆ ಹಾಗೂ 24 ಚಕ್ರಗಳನ್ನು ಹೊಂದಿರುವ ರಥದ ಮಾದರಿಯಲ್ಲಿ ನಿರ್ಮಿಸಿದ್ದಾರೆ.

 

PC:Bikashrd

ಕೋನಾರ್ಕ್ ಸೂರ್ಯಾ ದೇವಾಲಯ

ಆದರೆ ಈ ದೇವಾಲಯದಲ್ಲಿ ಕೆಲವು ಭಾಗವನ್ನು 18 ನೇ ಶತಮಾನದಲ್ಲಿ ಕೆಲವು ದಾಳಿಕೋರರು ಭಿನ್ನ ಮಾಡಿದರು ಎಂದು ಚರಿತ್ರಗಾರರು ಹೇಳುತ್ತಾರೆ. ಆ ಭಿನ್ನವಾದ ಸ್ಥಳದಲ್ಲಿ ಸುಮಾರು 52 ಟನ್‍ಗಳಷ್ಟು ಆಯಸ್ಕಾಂತ ಇತ್ತು ಎಂದು ಹೇಳುತ್ತಾರೆ.

PC:Kartike Bhatore 

ಕೋನಾರ್ಕ್ ಸೂರ್ಯಾ ದೇವಾಲಯ

ಆ ಆಯಸ್ಕಾಂತವು ಗರ್ಭಗುಡಿಯಲ್ಲಿರುವ ಸ್ವಾಮಿಯ ವಿಗ್ರಹವನ್ನು ಗಾಳಿಯಲ್ಲಿ ತೇಲುವ ಹಾಗೆ ಮಾಡುತ್ತಿತ್ತು ಎಂದು ಚರಿತ್ರಕಾರರು ಹೇಳುತ್ತಾರೆ. ಆದರೆ ಆ ಆಯಸ್ಕಾಂತವನ್ನು ಏಕೆ ನಾಶ ಪಡಿಸಿದರು? ಎಂಬ ವಿಷಯ ಯಾರಿಗೂ ಗೊತ್ತಿಲ್ಲ. ಆದರೆ ಈ ಗುಡಿಯಲ್ಲಿರುವ ರಥ ಚಕ್ರಗಳಲ್ಲಿ ವಿಜ್ಞಾನವು ಅಡಗಿದೆ. ಏಕೆಂದರೆ ಸನ್ ಡಯಲ್ ಇಂದಿಗೂ ಕೂಡ ವೇಳಾಪಟ್ಟಿಯನ್ನು ತಿಳಿಸುತ್ತದೆ. ನಮ್ಮ ಭಾರತದೇಶದ ನೈಪುಣ್ಯತೆಯು ಎಷ್ಟೊ ಮಾಹಿಮಾನ್ವಿತವಾದುದು ಎಂಬುದನ್ನು ಇದರಿಂದ ತಿಳಿಯುತ್ತದೆ.

PC:Bikashrd

ಬೃಹದೀಶ್ವರ ದೇವಾಲಯ

ತಮಿಳು ನಾಡಿನ ತಂಜಾವೂರಿಗೆ ಅತ್ಯಂತ ಸಮೀಪದಲ್ಲಿರುವ ಈ ಗುಡಿಯನ್ನು ನಿರ್ಮಿಸಿ ಸುಮಾರು 1000 ವರ್ಷಗಳಿಕ್ಕಿಂತ ಪುರಾತನವಾಗಿದೆ. ಈ ದೇವಾಲಯವನ್ನು ಕ್ರಿ.ಶ 1015ರಲ್ಲಿ ಚೋಳ ವಂಶಕ್ಕೆ ಸೇರಿದ ರಾಜೇಂದ್ರ ಚೋಳ ಕಟ್ಟಿಸಿದ ಎಂದು ಚರಿತ್ರಕಾರರು ಹೇಳುತ್ತಾರೆ.


PC:Vishnu R Haripad

 

ಬೃಹದೀಶ್ವರ ದೇವಾಲಯ

ಈ ದೇವಾಲಯವನ್ನು ಕುಂಜರ ರಾಜಾ ರಾಜಾ ಪೆರುಂಧಾಚನ್ ಎಂಬ ವಾಸ್ತು ಶಿಲ್ಪಿಯು ಆಗಮ ಶಾಸ್ತ್ರದ ಪ್ರಕಾರ ನಿರ್ಮಿಸಿರುವುದು ಎಂದು ಅಲ್ಲಿನ ಶಾಸನಗಳಿಂದ ತಿಳಿದು ಬಂದಿದೆ. ಈ ಬೃಹದೀಶ್ವರ ದೇವಾಲಯವನ್ನು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಿರುವುದಾಗಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಸುಮಾರು ಲಕ್ಷ 30 ಸಾವಿರ ಗ್ರಾನೈಟ್ ಕಲ್ಲನ್ನು ಉಪಯೋಗಿಸಲಾಗಿದೆ.


PC:KARTY JazZ

 

ಬೃಹದೀಶ್ವರ ದೇವಾಲಯ

ಈ ಗುಡಿಯ ಗೋಪುರ ಮೇಲೆ ಇರುವ ದುಂಡಾಕಾರದ ಕಟ್ಟಡ ಒಂದೇ 80 ಟನ್ ಇದೆಯಂತೆ. ದೇವಾಲಯದ ಗೋಪುರದ ಎತ್ತರ 216 ಅಡಿಯಿದೆ. ಕ್ರೇನ್‍ಗಳು, ಮಿಷಿನ್‍ಗಳು ಯಾವುದೇ ಪರಿಕರವಿಲ್ಲದ ಆ ಕಾಲದಲ್ಲಿ ಇಂತಹ ಭಾರವಾದ ಕಲ್ಲನ್ನು ಮೇಲೆ ಹೇಗೆ ಇಟ್ಟರೋ? ಎಂಬುದು ಎಂದಿಗೂ ಕೂಡ ಒಂದು ರಹಸ್ಯವಾಗಿಯೇ ಉಳಿದಿದೆ.

PC:WIKICOMMON

ವೀರಭಧ್ರ ದೇವಾಲಯ

ಈ ವಿಶೇಷವನ್ನು ಕಾಣಲು ಹಲವಾರು ಪ್ರದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಆ ಸ್ತಂಭವು ಅಷ್ಟು ಭಾರವಾಗಿದ್ದರೂ ಕೂಡ ಗಾಳಿಗೆ ಹೇಗೆ ವಾಲಾಡುತ್ತಿದೆಯೋ ಯಾರಿಗೂ ತಿಳಿದಿಲ್ಲ. ಇದೂ ಕೂಡ ಒಂದು ರಹಸ್ಯವಾಗಿಯೇ ಉಳಿದುಬಿಟ್ಟಿದೆ.


PC:Nagesh Kamath

 

 

ವೀರಭಧ್ರ ದೇವಾಲಯ

1910ರಲ್ಲಿ ಒಬ್ಬ ಬ್ರಿಟೀಷ್ ಇಂಜಿನಿಯರ್ ವಿಭಿನ್ನವಾದ ಈ ಸ್ತಂಭವನ್ನು ಕಂಡು ಆಶ್ಚರ್ಯಗೊಂಡು, ಆ ಸ್ತಂಭ ಹಾಗೂ ನೆಲವನ್ನು ಮುಚ್ಚಲು ಪ್ರಯತ್ನಿಸಿದನು. ಇದರಿಂದಾಗಿ ಆ ದೇವಾಲಯದ ಕಟ್ಟಡವು ಚಿದ್ರ ಚಿದ್ರವಾಗಲು ಪ್ರಾರಂಭವಾದುದನ್ನು ಗಮನಿಸಿ ಆ ಕೆಲಸವನ್ನು ಕೈಬಿಟ್ಟನು. ಆ ಸ್ತಂಭದ ಬಗ್ಗೆ ಎಷ್ಟೊ ಪರಿಶೋಧನೆ ಮಾಡಿದರೂ ಕೂಡ ಆ ನಿರ್ಮಾಣ ರಹಸ್ಯವನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಗಲಿಲ್ಲ.


PC:Premnath Thirumalaisamy

 

 

ಅನಂತ ಪದ್ಮನಾಭ ದೇವಾಲಯ

ಕೇರಳದ ತಿರುವನಂತಪುರದಲ್ಲಿರುವ ಈ ದೇವಾಲಯವನ್ನು ಯಾರು ನಿರ್ಮಿಸಿದರೊ? ಹೇಗೆ ನಿರ್ಮಿಸಿದರೊ? ಎಂಬ ವಿಷಯ ಇಂದಿಗೂ ಯಾರಿಗೂ ತಿಳಿದಿಲ್ಲ. ಪ್ರಪಂಚದಲ್ಲಿ ಸಂಪತ್ತಿಗೆ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಈ ದೇವಾಲಯದಲ್ಲಿ ಸುಮಾರು 22 ಬಿಲಿಯನ್ ಡಾಲರ್ ಬೆಲೆಯುಳ್ಳ ಬಂಗಾರ ಹಾಗೂ ವಜ್ರಾಭರಣಗಳಿವೆ.


PC:Ashcoounter

 

ಅನಂತ ಪದ್ಮನಾಭ ದೇವಾಲಯ

ಈ ಸಂಪತ್ತು ಎಲ್ಲವೂ ಕೂಡ ಅನಂತ ಪದ್ಮನಾಭ ದೇವಾಲಯದ ನೆಲ ಮಾಳಿಗೆಯಲ್ಲಿರುವ 5 ಕೊಠಡಿಗಳದಾಗಿದೆ. ಇನ್ನೂ ಅಲ್ಲಿ ತೆರವು ಎಂದು 3 ಕೊಠಡಿಗಳಿವೆ. ಆದರೆ ಅವುಗಳಲ್ಲಿನ ಒಂದು ಕೊಠಡಿಯ ಪ್ರವೇಶ ದ್ವಾರವು ದೊಡ್ಡ ದೊಡ್ಡ ಸರ್ಪಗಳ ಶಿಲ್ಪಗಳಿಂದ ಅಲಂಕೃತವಾಗಿದೆ. ಅವುಗಳನ್ನು ನಾಗಬಂಧ ಎಂದು ನಮ್ಮ ಪುರಾಣಗಳು ಹೇಳುತ್ತವೆ.

 

 

ಅನಂತ ಪದ್ಮನಾಭ ದೇವಾಲಯ

ಆ ಕೊಠಡಿಯನ್ನು ತೆಗೆಯಬೇಕಾದರೆ ಕೆಲವು ಮಂತ್ರಗಳಿಂದ ಮಾತ್ರ ಸಾಧ್ಯವಾಗುವಂತಹುದು. ಒಂದು ವೇಳೆ ಬಲವಂತವಾಗಿ ಆ ಕೊಠಡಿಯ ದ್ವಾರವನ್ನು ತೆಗೆದರೆ ದೊಡ್ಡ ಪ್ರಮಾಣದ ಹಾನಿ ಸಂಭವಿಸುತ್ತದೆ ಎಂದು ಪುರಾಣಗಳು ತಿಳಿಸುತ್ತವೆ. ಇಷ್ಟಕ್ಕೂ ಆ ಕೊಠಡಿಯಲ್ಲಿ ಏನಿದೆ? ಆ ಕೊಠಡಿಗೆ ನಾಗಬಂಧನವನ್ನು ಏಕೆ ಇದೆ? ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ.

ಕೈಲಾಸ ದೇವಾಲಯ

ಮಹಾರಾಷ್ಟ್ರದ ಎಲ್ಲೊರ ಗುಹೆಯಲ್ಲಿದೆ ಕೈಲಾಸ ದೇವಾಲಯವಿದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಿದರು? ಯಾರು ನಿರ್ಮಿಸಿದರು ಎಂಬುದಕ್ಕೆ ಸರಿಯಾದ ಆಧಾರಗಳಿಲ್ಲ. ಕೆಲವು ಮಂದಿ ಚರಿತ್ರಕಾರರ ಲೆಕ್ಕದ ಪ್ರಕಾರ ಕಿ.ಶ 6 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಸೇರಿದ ರಾಜರು ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ.

 

 

ಕೈಲಾಸ ದೇವಾಲಯ

ವಿಶೇಷವೆನೆಂದರೆ ಈ ದೇವಾಲಯವೆಲ್ಲಾ ಒಂದೇ ಕಲ್ಲಿನಲ್ಲಿ ನಿರ್ಮಿಸಿರುವುದಾಗಿದೆ. ಒಂದು ಗ್ರಾನೈಟ್ ಬೆಟ್ಟದ ಮೇಲಿನಿಂದ ಕೆತ್ತಿರುವುದು ಎಂದು ಚರಿತ್ರಕಾರರು ಲೆಕ್ಕ ಹಾಕಿದ್ದಾರೆ. ಈ ದೇವಾಲಯವು ಅತ್ಯಂತ ದೊಡ್ಡದಾಗಿದೆ. ಕೈಲಾಸ ದೇವಾಲಯವನ್ನು ಪ್ರಪಂಚದಲ್ಲಿಯೇ ಏಕ ಶಿಲ ಫಲಕದಿಂದ ನಿರ್ಮಿಸಿದ ಕಟ್ಟಡವಾಗಿ ಖ್ಯಾತಿ ಪಡೆದಿದೆ.

ಕೈಲಾಸ ದೇವಾಲಯ

ಈ ದೇವಾಲಯವನ್ನು ನಿರ್ಮಿಸುವುದಕ್ಕೆ ಸುಮಾರು 4 ಲಕ್ಷ ಟನ್ ಕಲ್ಲಿನಿಂದ ನಿರ್ಮಿಸಿರುವುದಾಗಿದೆ ಎಂದು ಕೆಲವು ಆಧಾರಗಳು ತಿಳಿಸುತ್ತವೆ. ಕೆಲವು ಸಾವಿರ ವರ್ಷಗಳ ಹಿಂದೆ ಇಂತಹ ದೊಡ್ಡ ದೇವಾಲಯವನ್ನು ಹೇಗೆ ನಿರ್ಮಿಸಿದರು? ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದು ಬಿಟ್ಟಿದೆ.

English summary

What are the unresolved mysteries today?

There are so many buildings in the world that have historical and secrets. There is no end to having secrets in our country of India with the most ancient culture. How many buildings in our country have been built today? The question remains secretly. Let's look at temples such as buildings.
Please Wait while comments are loading...