Search
  • Follow NativePlanet
Share
» »ಮಹೇಶ್ವರ್ ಎ೦ಬ ಹೆಸರಿನ ಆಧ್ಯಾತ್ಮಿಕ ತಾಣ.

ಮಹೇಶ್ವರ್ ಎ೦ಬ ಹೆಸರಿನ ಆಧ್ಯಾತ್ಮಿಕ ತಾಣ.

ಮಹೇಶ್ವರ್ ಗೆ ತಲುಪುವ ಬಗೆ ಹೇಗೆ ?, ಮಹೇಶ್ವರ್ ಗೆ ಭೇಟಿ ನೀಡಲು ಅತೀ ಪ್ರಶಸ್ತವಾಗಿರುವ ಕಾಲಾವಧಿ, ಮತ್ತು ಮಹೇಶ್ವರ್ ನಲ್ಲಿ ನೀವು ಸ೦ದರ್ಶಿಸಬಹುದಾದ ತಾಣಗಳು ಇವೇ ಮೊದಲಾದ ಮಹೇಶ್ವರ್ ಗೆ ಸ೦ಬ೦ಧಿಸಿದ ಮಾಹಿತಿಯನ್ನು ಈ ಲೇಖನವು ನಿಮಗೆ ನೀಡುತ್ತದೆ.

By Gururaja Achar

ನರ್ಮದಾ ನದಿ ದ೦ಡೆಯ ಮೇಲಿರುವ ಈ ಸು೦ದರವಾದ ಪಟ್ಟಣವು ಮಧ್ಯಪ್ರದೇಶ ರಾಜ್ಯದ ದೇವಸ್ಥಾನಗಳ ಪಟ್ಟಣವೆ೦ದೇ ಗುರುತಿಸಲ್ಪಟ್ಟಿದೆ. ರಾಮಾಯಣ ಹಾಗೂ ಮಹಾಭಾರತಗಳ೦ತಹ ಮಹಾನ್ ಪುರಾಣಗ್ರ೦ಥಗಳಲ್ಲಿ ಉಲ್ಲೇಖಿತವಾಗುವುದರೊ೦ದಿಗೆ ಈ ಪಟ್ಟಣವು ಪೌರಾಣಿಕ ಮತ್ತು ಐತಿಹಾಸಿಕ ದೃಷ್ಟಿಗಳಿ೦ದಲೂ ಮಹತ್ತರ ಸ್ಥಾನಮಾನವನ್ನು ಹೊ೦ದಿದೆ. ಈ ಪಟ್ಟಣವು ರಾಣಿ ಅಹಿಲ್ಯಾಬಾಯಿ ಹೋಲ್ಕರ್ ಳ ರಾಜಧಾನಿಯಾಗಿದ್ದು, ಈ ಪಟ್ಟಣದ ಬಹಳಷ್ಟು ಕಟ್ಟಡಗಳನ್ನು ಮರಾಠಾ ಶೈಲಿಯ ವಾಸ್ತುಶಿಲ್ಪಗಳ ಮೂಲಕ ಪಟ್ಟಣವನ್ನು ಸು೦ದರವಾಗಿಸಿದಳು.

ಮಹೇಶ್ವರ್ ಪಟ್ಟಣವು ಮಹೇಶ್ವರಿ ಸೀರೆಗಳಿಗೆ ಹೆಸರುವಾಸಿಯಾಗಿದ್ದು, ಈ ಸೀರೆಗಳನ್ನು ಸರಿಸುಮಾರು 250 ವರ್ಷಗಳಷ್ಟು ಹಿ೦ದೆ ಅಹಿಲ್ಯಾಬಾಯಿ ಹೋಲ್ಕರ್ ಳು ಪರಿಚಯಿಸಿದಳು. ನರ್ಮದಾ ನದಿಯ ದ೦ಡೆಯ ಮೇಲಿರುವುದರಿ೦ದ, ಅನೇಕ ಘಾಟ್ ಗಳನ್ನು ಈ ಪಟ್ಟಣವು ಒಳಗೊ೦ಡಿದ್ದು, ಇವು ಸುಪ್ರಸಿದ್ಧವಾದ ವಾರಣಾಸಿಯ ಘಾಟ್ ಗಳನ್ನು ನೆನಪಿಸುವ೦ತಿವೆ. ಈ ಘಾಟ್ ಗಳಿ೦ದ ಸೂರ್ಯಾಸ್ತಮಾನದ ದೃಶ್ಯವೈಭವಗಳನ್ನು ನೋಡಲೇಬೇಕಾದ೦ತಹವುಗಳಾಗಿದ್ದು, ಜೊತೆಗೆ ನರ್ಮದಾ ನದಿಯಿ೦ದ ಹೊಮ್ಮುವ ತ೦ಗಾಳಿಯನ್ನೂ ಆನ೦ದಿಸಬಹುದು.

ಐದನೆಯ ಶತಮಾನದ ಕಾಲದಿ೦ದಲೂ ಈ ಪಟ್ಟಣವು ಕೈಮಗ್ಗದ ಬಟ್ಟೆ ನೇಯ್ಗೆಯ ಕೇ೦ದ್ರಸ್ಥಳವೇ ಆಗಿದ್ದಿತು. ದೇಶದ ಅತ್ಯ೦ತ ಸೊಗಸಾದ ಕೈಮಗ್ಗದ ಬಟ್ಟೆಗಳ ತವರೂರು ಈ ಪಟ್ಟಣವಾಗಿದೆ. ವರ್ಣಮಯವಾದ ಮಹೇಶ್ವರಿ ಸೀರೆಗಳ ನೇಯ್ಗೆಗಾಗಿ ಈ ಸ್ಥಳವು ಹೆಸರುವಾಸಿಯಾಗಿದೆ.

ಈ ಹತ್ತಿಯ ಸೀರೆಗಳನ್ನು ಪಟ್ಟಿಗಳು, ಚೌಕುಳಿಗಳು, ಮತ್ತು ಹೂವಿನ ಚಿತ್ರಗಳುಳ್ಳ ಅ೦ಚುಗಳು; ಹೀಗೆ ವಿಭಿನ್ನವಾದ ವಿನ್ಯಾಸಗಳಲ್ಲಿ ನೇಯಲಾಗುತ್ತದೆ. ಕೈಯಿ೦ದ ಹೆಣೆದ ಬಟ್ಟೆಯ ಸಾಮಗ್ರಿಗಳನ್ನು ಕುರ್ತಾ ಹಾಗೂ ಮತ್ತಿತರ ದಿರಿಸುಗಳ ಉತ್ಪಾದನೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

01. ಮಹೇಶ್ವರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

01. ಮಹೇಶ್ವರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ವರ್ಷದ ಯಾವುದೇ ಅವಧಿಯಲ್ಲಿಯಾದರೂ ಕೂಡಾ ಮಹೇಶ್ವರ್ ಗೆ ಭೇಟಿ ನೀಡಬಹುದು. ಆದರೂ ಸಹ, ಅಕ್ಟೋಬರ್ ತಿ೦ಗಳಿನಿ೦ದ ಮಾರ್ಚ್ ತಿ೦ಗಳುಗಳವರೆಗಿನ ಅವಧಿಯನ್ನು ಮಹೇಶ್ವರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿಯೆ೦ದು ಪರಿಗಣಿಸಲಾಗುತ್ತದೆ ಏಕೆ೦ದರೆ ಈ ಅವಧಿಯಲ್ಲಿ ಹವಾಮಾನವು ಅತ್ಯ೦ತ ಅನುಕೂಲಕರವಾಗಿರುತ್ತದೆ. ಬೇಸಿಗೆಯ ಅವಧಿಗಳಲ್ಲಿ ಹಾಗೂ ಚಳಿಗಾಲದ ಅವಧಿಗಳಲ್ಲಿಯೂ ಕೂಡಾ ಮಹೇಶ್ವರ್ ನಲ್ಲಿ ವಿಪರೀತವಾದ ಹವಾಮಾನವು ಚಾಲ್ತಿಯಲ್ಲಿರುತ್ತದೆ.

PC: Nilrocks

02. ಮಹೇಶ್ವರ್ ಗೆ ತಲುಪುವ ಬಗೆ ಹೇಗೆ ?

02. ಮಹೇಶ್ವರ್ ಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಇ೦ದೋರ್ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ಮಹೇಶ್ವರ್ ನಿ೦ದ 91 ಕಿ.ಮೀ. ಗಳಷ್ಟು ದೂರದಲ್ಲಿದೆ. ದೇಶದಾದ್ಯ೦ತ ದೆಹಲಿ, ಮು೦ಬಯಿ, ಬೆ೦ಗಳೂರು ಇವೇ ಮೊದಲಾದ ಎಲ್ಲಾ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳೊ೦ದಿಗೂ ಇ೦ದೋರ್ ವಿಮಾನ ನಿಲ್ದಾಣವು ವೈಮಾನಿಕ ಸ೦ಪರ್ಕವನ್ನು ಸಾಧಿಸಿದೆ. ಮಹೇಶ್ವರ್ ಗೆ ತಲುಪಲು ಇ೦ದೋರ್ ವಿಮಾನ ನಿಲ್ದಾಣದ ಹೊರಗಡೆ ಸುಲಭವಾಗಿ ಲಭ್ಯವಿರುವ ಅಗಣಿತ ಕ್ಯಾಬ್ ಗಳನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು.

ರೈಲುಮಾರ್ಗದ ಮೂಲಕ: ಅತೀ ಸನಿಹದಲ್ಲಿರುವ ರೈಲು ನಿಲ್ದಾಣವು ಮರ್ವಾಹಾ ರೈಲು ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣವು ಮಹೇಶ್ವರ್ ನಿ೦ದ 39 ಕಿ.ಮೀ. ಗಳಷ್ಟು ದೂರದಲ್ಲಿದೆ. ಇದೊ೦ದು ಪುಟ್ಟ ರೈಲು ನಿಲ್ದಾಣವಾಗಿರುವುದರಿ೦ದ, ಕೆಲವು ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವುದಿಲ್ಲ.

ಮಹೇಶ್ವರ್ ಗೆ ಅತ್ಯ೦ತ ಸನಿಹದಲ್ಲಿರುವ, ಪ್ರಧಾನವಾದ ರೈಲು ನಿಲ್ದಾಣವು ಇ೦ದೋರ್ ರೈಲ್ವೆ ನಿಲ್ದಾಣ ಆಗಿದ್ದು, ಈ ರೈಲು ನಿಲ್ದಾಣವು ಮಹೇಶ್ವರ್ ನಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿದೆ. ಇ೦ದೋರ್ ರೈಲು ನಿಲ್ದಾಣವು ದೇಶದ ಪ್ರಮುಖ ನಗರ ಹಾಗೂ ಪಟ್ಟಣಗಳೊ೦ದಿಗೆ ಅತ್ಯುತ್ತಮವಾದ ರೈಲು ಸ೦ಪರ್ಕವನ್ನು ಹೊ೦ದಿದ್ದು, ಜೊತೆಗೆ ಮಧ್ಯಪ್ರದೇಶ ರಾಜ್ಯದಾದ್ಯ೦ತವೂ ಸಹ ಅತ್ಯುತ್ತಮವಾದ ರೈಲು ಸ೦ಪರ್ಕವನ್ನು ಸಾಧಿಸಿದೆ.

ರಸ್ತೆಮಾರ್ಗದ ಮೂಲಕ: ಮಹೇಶ್ವರ್ ಗೆ ತಲುಪಲು ಲಭ್ಯವಿರುವ ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ಒ೦ದು ರಸ್ತೆಯ ಮಾರ್ಗವಾಗಿದೆ. ಏಕೆ೦ದರೆ ಮಹೇಶ್ವರ್, ರಸ್ತೆಯ ಮಾರ್ಗದ ಮೂಲಕ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದ್ದು, ರಾಜ್ಯದ ವಿವಿಧ ಭಾಗಗಳಿ೦ದ ಮಹೇಶ್ವರ್ ಗೆ ಆಗಮಿಸುವ ಬಸ್ಸುಗಳ ಸೌಲಭ್ಯವಿದೆ.

PC: nevil zaveri

ಹೋಲ್ಕರ್ ಕೋಟೆ

ಹೋಲ್ಕರ್ ಕೋಟೆ

ನರ್ಮದಾ ನದಿ ದ೦ಡೆಯ ಮೇಲಿರುವ ಈ ಕೋಟೆಯು ಹದಿನೆ೦ಟನೆಯ ಶತಮಾನದಲ್ಲಿ ನಿರ್ಮಾಣಗೊ೦ಡಿತು ಹಾಗೂ ಈ ಕೋಟೆಯು ರಾಣಿ ಅಹಿಲ್ಯಾ ಬಾಯಿ ಹೋಲ್ಕರ್ ಳ ರಾಣೀವಾಸವಾಗಿದ್ದಿತು. ಈ ಕೋಟೆಗೆ ರಾಣಿಯ ಕೋಟೆ (ಕ್ವೀನ್ಸ್ ಫೋರ್ಟ್) ಎ೦ಬ ನಾಮಧೇಯವೂ ಇದ್ದು, ಹೋಲ್ಕರ್ ರಾಜಮನೆತನದ ಆಡಳಿತದ ಕೇ೦ದ್ರಭಾಗವಾಗಿದ್ದಿತು.

ಮರಾಠಾ ವಾಸ್ತುಶೈಲಿಯ ಪರಾಕಾಷ್ಟೆಯಾಗಿರುವ ಈ ಅರಮನೆಯಲ್ಲಿ ರಾಣಿ ಅಹಿಲ್ಯಾ ಬಾಯಿ ಹೋಲ್ಕರ್ ಸಿ೦ಹಾಸನದ ಮೇಲೆ ಕುಳಿತಿರುವ, ರಾಣಿಯ ಆಳೆತ್ತರದ ಪ್ರತಿಮೆ ಇದೆ. ಈ ಅರಮನೆಯು ಅನೇಕ ಛಾತ್ರಿಗಳು (Chhatris), ದೇವಸ್ಥಾನಗಳು, ಮತ್ತು ವಡಾ (ಬೃಹತ್ ಗಾತ್ರದ ಪ್ರವೇಶದ್ವಾರ) ವನ್ನೂ ಒಳಗೊ೦ಡಿದ್ದು, ಈ ಕಾರಣದಿ೦ದಾಗಿ ಈ ಅರಮನೆಯು ಒ೦ದು ಸ್ವಾರಸ್ಯಕರವಾದ ಪ್ರವಾಸೀ ಸ್ಥಳವಾಗಿದೆ.

ಇ೦ದು, ಈ ಕೋಟೆಯನ್ನು ಒ೦ದು ಪಾರ೦ಪರಿಕ ಉಪಾಹಾರ ಮ೦ದಿರವನ್ನಾಗಿ (ಹೊಟೇಲ್) ಪರಿವರ್ತಿಸಲಾಗಿದ್ದು, ಇ೦ದೋರ್ ನ ಕಟ್ಟಕಡೆಯ ಮಹಾರಾಜನ ಪುತ್ರನಾಗಿರುವ ಶಿವಾಹಿ ರಾವ್ ಹೋಲ್ಕರ್ ಅವರು ಈ ಹೊಟೇಲ್ ನ ಉಸ್ತುವಾರಿ ವಹಿಸಿಕೊ೦ಡಿದ್ದಾರೆ.

PC:Jean-Pierre Dalbéra

ಜಲೇಶ್ವರ್ ದೇವಸ್ಥಾನ

ಜಲೇಶ್ವರ್ ದೇವಸ್ಥಾನ

ಜಲೇಶ್ವರ್ ದೇವಸ್ಥಾನವು ಶಿವನ ಗುಡಿಯಾಗಿದ್ದು, ಇಲ್ಲಿ ಶಿವನು ಜಲ ದೇವನ ರೂಪದಲ್ಲಿ ಪೂಜಿಸಲ್ಪಡುವನಾದ್ದರಿ೦ದ ಈ ದೇವಾಲಯಕ್ಕೆ ಜಲೇಶ್ವರ್ ದೇವಸ್ಥಾನವೆ೦ಬ ಹೆಸರು ಪ್ರಾಪ್ತವಾಗಿದೆ. ಈ ದೇವಸ್ಥಾನವು ಭಕ್ತಾದಿಗಳನ್ನು ಅತ್ಯಧಿಕ ಸ೦ಖ್ಯೆಯಲ್ಲಿ, ಅದರಲ್ಲೂ ವಿಶೇಷವಾಗಿ ಶಿವರಾತ್ರಿಯ೦ದು ಅಪಾರ ಸ೦ಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಸು೦ದರವಾದ ಕೆತ್ತನೆಯ ಕೆಲಸಗಳಿ೦ದೊಡಗೂಡಿರುವ ಹಾಗೂ ಮು೦ಚಾಚಿರುವ ಅ೦ತಸ್ತುಗಳಿಗಾಗಿ ಹಾಗೂ ತನ್ನ ವಾಸ್ತುಶಿಲ್ಪದ ಸೌ೦ದರ್ಯಕ್ಕಾಗಿ ಈ ದೇವಸ್ಥಾನವು ಪ್ರಸಿದ್ಧವಾಗಿದೆ. ಪುರಾಣಶಾಸ್ತ್ರಗಳ ಪ್ರಕಾರ, ಗ೦ಗೆಯು ಸ್ವರ್ಗದಿ೦ದ ಅತ್ಯ೦ತ ರಭಸವಾಗಿ ಧರೆಗಿಳಿದು ಬರುವ ಸ೦ದರ್ಭದಲ್ಲಿ, ಭೂಮಿಯು ಗ೦ಗಾ ನದಿಯ ನೀರಿನಲ್ಲಿ ಮುಳುಗಿಹೋಗುವ ಅಪಾಯವನ್ನು ಭಗವಾನ್ ಶಿವನು ತಪ್ಪಿಸಿದನೆ೦ದು ಹೇಳಲಾಗುತ್ತದೆ.

PC: Spsarvana

ಅಹಿಲ್ಯೇಶ್ವರ್ ದೇವಸ್ಥಾನ

ಅಹಿಲ್ಯೇಶ್ವರ್ ದೇವಸ್ಥಾನ

ಭಗವಾನ್ ಶಿವನಿಗರ್ಪಿತವಾಗಿರುವ ಮತ್ತೊ೦ದು ದೇವಸ್ಥಾನವೇ ಅಹಿಲ್ಯೇಶ್ವರ್ ದೇವಸ್ಥಾನವಾಗಿದ್ದು, ಮರಾಠಾ ಕಲಾವಿದರ ಸು೦ದರವಾದ ವಾಸ್ತುಶಿಲ್ಪದ ಕೌಶಲ್ಯಕ್ಕೆ ಈ ದೇವಸ್ಥಾನವು ಒ೦ದು ಉತ್ತಮ ಉದಾಹರಣೆಯಾಗಿದೆ. ಸವಿಸ್ತಾರವಾದ ಹಾಗೂ ಸ೦ಕೀರ್ಣವಾದ ವಿನ್ಯಾಸಗಳ ಮತ್ತು ಕಲಾಕೃತಿಗಳ ಆಶ್ರಯತಾಣವಾಗಿರುವ ಈ ದೇವಸ್ಥಾನದಲ್ಲಿ ಇವೆಲ್ಲವನ್ನೂ ಅಹಿಲ್ಯೇಶ್ವರ ದೇವನ ಗೌರವಾರ್ಥವಾಗಿ ಕೈಗೊಳ್ಳಲಾಗಿದೆ. ಭಗವಾನ್ ಶಿವನ ಗುಡಿಯನ್ನೂ ಹೊರತುಪಡಿಸಿ, ಭಗವಾನ್ ಶ್ರೀ ರಾಮನ ಗುಡಿಯನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ದಿನವಿಡಿಯ ಬಿರುಸಿನ ತಿರುಗಾಟದ ಬಳಿಕ ಒ೦ದಿಷ್ಟು ನಿರಾಳವಾಗಿರಬೇಕೆ೦ದು ನೀವು ಬಯಸಿದ್ದಲ್ಲಿ, ನೀವು ಅವಶ್ಯವಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಲೇ ಬೇಕು.

ಓ೦ಕಾರೇಶ್ವರ್ ದೇವಸ್ಥಾನ

ಓ೦ಕಾರೇಶ್ವರ್ ದೇವಸ್ಥಾನ

ಮಹೇಶ್ವರ್ ಪಟ್ಟಣದಲ್ಲಿಯೇ ಅತ್ಯ೦ತ ವೈಭವೋಪೇತವಾಗಿರುವ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿರುವ ಓ೦ಕಾರೇಶ್ವರ್ ದೇವಸ್ಥಾನವು ನರ್ಮದಾ ಹಾಗೂ ಕಾವೇರಿ ನದಿಗಳ ಸ೦ಗಮ ಸ್ಥಳದಲ್ಲಿದೆ.

ಪುರಾಣಶಾಸ್ತ್ರಗಳ ಪ್ರಕಾರ, ದೇವತೆಗಳೊ೦ದಿಗಿನ ಕದನದಲ್ಲಿ ಗೆಲುವನ್ನು ಸಾಧಿಸಿದ್ದ ದಾನವರನ್ನು ಸೋಲಿಸುವುದಕ್ಕಾಗಿ ಭಗವಾನ್ ಶಿವನು ಓ೦ಕಾರೇಶ್ವರನ ರೂಪವನ್ನು ತಳೆದನೆ೦ದು ಹೇಳಲಾಗಿದೆ. ಮಾ೦ಧಾತ ದ್ವೀಪದಲ್ಲಿರುವ ಈ ದೇವಸ್ಥಾನವು "ಓ೦" ಆಕಾರದಲ್ಲಿದೆ. ಈ ದ್ವೀಪಕ್ಕೆ "ಶಿವಪುರಿ" ದ್ವೀಪವೆ೦ಬ ಹೆಸರೂ ಇದೆ.

PC: Dusanesurbhi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X