Search
  • Follow NativePlanet
Share
» »ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ

ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ

ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಅನೇಕ ಐತಿಹಾಸಿಕ ಹಿರಿಮೆಯನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿರುವ ಗುಹಾಲಯವು ಹೆಚ್ಚು ಆಕರ್ಷಕ ಹಾಗೂ ವಿಶೇಷತೆಯಿಂದ ಕೂಡಿವೆ.

By Divya

ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಅನೇಕ ಐತಿಹಾಸಿಕ ಹಿರಿಮೆಯನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿರುವ ಗುಹಾಲಯವು ಹೆಚ್ಚು ಆಕರ್ಷಕ ಹಾಗೂ ವಿಶೇಷತೆಯಿಂದ ಕೂಡಿವೆ. ರಾಜ-ಮಹರಾಜರ ಕಾಲದಲ್ಲಿ ನಿರ್ಮಾಣಗೊಂಡ ಈ ಗುಹಾಲಯವು ಪ್ರವಾಸಿಗರಿಗೊಂದು ಪ್ರೇಕ್ಷಣೀಯ ಸ್ಥಳ. ಸೂಕ್ಷ್ಮ ಕೆತ್ತನೆಗಳು ಹಾಗೂ ಭೌಗೋಳಿಕ ಪರಿಸರ ಆಕಾಲದ ಸಿರಿ-ವೈಭವಗಳನ್ನು ತೆರೆದಿಡುತ್ತವೆ. ತಮಿಳುನಾಡು ಪ್ರವಾಸೋದ್ಯಮ: ಕಿರುಪರಿಚಯ

Krishna Cave Temple In Mahabalipuram

7 ಮತ್ತು 8ನೇ ಶತಮಾನದಲ್ಲಿ ನಿರ್ಮಾಣಗೊಂಡ ಅನೇಕ ದೇವಾಲಯ ಹಾಗೂ ಸ್ಮಾರಕಗಳು ಇಲ್ಲಿವೆ. ಅವುಗಳಲ್ಲಿ ಕೃಷ್ಣ ಗುಹಾಲಯವು ಒಂದು. ವಿಭಿನ್ನ ಕೆತ್ತನೆಯ ಸೊಬಗನ್ನು ಒಳಗೊಂಡಿರುವ ಈ ಸ್ಥಳ ಪ್ರವಾಸಿಗರಿಗೊಂದು ಸ್ವರ್ಗ ತಾಣ. ಬೆಂಗಳೂರಿನಿಂದ 349.5 ಕಿ.ಮೀ. ದೂರ ಇರುವುದರಿಂದ 5-6 ತಾಸುಗಳ ಪ್ರಯಾಣ ಮಾಡಬೇಕು. ಸಮುದ್ರ ತೀರದ ದೇವಸ್ಥಾನ, ಮಹಾಬಲಿಪುರಂ

ಕೃಷ್ಣ ಗುಹಾಲಯ ಅಥವಾ ಕೃಷ್ಣ ಮಂಟಪ ಎಂದು ಕರೆಯಲ್ಪಡುವ ಈ ಗುಹಾಲಯ ಒಂದೇ ಬಂಡೆಯ ರಚನೆ. ಕೃಷ್ಣನನ್ನು ಪೂಜಿಸಲ್ಪಡುವ ಈ ದೇಗುಲ 7ನೇ ಶತಮಾನದ ಇತಿಹಾಸದಲ್ಲಿ ಅಡಕವಾಗಿದೆ. ಮಹಾಬಲಿಪುರಂನಲ್ಲಿರುವ ಈ ಅದ್ಭುತವನ್ನು ವಿಶ್ವ ಪರಂಪರೆಯ ತಾಣ ಎಂದು ಪರಿಗಣಿಲಾಗಿದೆ.

Krishna Cave Temple In Mahabalipuram

PC:en.wikipedia.org

ವಿನ್ಯಾಸ
ವಿಶಾಲವಾದ ಬಂಡೆಯಲ್ಲಿ ಕೆತ್ತಲಾದ ವಿಷ್ಮಯ ರೂಪದ ಈ ಗುಹಾಲಯ ಮಹಾಬಲಿಪುರಂನ ಒಂದು ಅದ್ಭುತ ಸೃಷ್ಟಿ. ಹಳೆಯ ಕಾಲದ ಈ ಗುಹಾಲಯದ ವಾಸ್ತು-ಶಿಲ್ಪ ಹಾಗೂ ಸುತ್ತಲಿನ ಪರಿಸರ ಸರಳವಾಗಿ ಸೊಗಸಾಗಿದೆ. ಕಲ್ಲಿನ ಮೇಲೆ ಕೆತ್ತಲಾದ ಇಲ್ಲಿಯ ಕೆತ್ತನೆಗಳು ಉಬ್ಬು ಶಿಲ್ಪ ಕಲಾಕೃತಿಗಳು. ಈ ಕಲಾಕೃತಿಗಳು ಭಾರತೀಯ ಪೌರಾಣಿಕ ಸನ್ನಿವೇಶಗಳನ್ನು ಬಿಂಬಿಸುತ್ತವೆ. ಪಂಚ ರಥಗಳು, ಮಹಾಬಲಿಪುರಂ

ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತುತ್ತಿರುವುದು, ಗೋಪಿಕಾ ಸ್ತ್ರೀಯರೊಡನೆ ಆಡುತ್ತಿರುವುದು, ಗೋಪಿಕಾ ಸ್ತ್ರೀಯರು ನೀರಿನ ಬಿಂದಿಗೆಯನ್ನು ತಲೆಯಮೇಲಿಟ್ಟುಕ್ಕೊಂಡು ಸಾಗುತ್ತಿರುವುದು ಹೀಗೆ ಅನೇಕ ಸನ್ನಿವೇಶಗಳು ಹಾಗೂ ಪೌರಾಣಿಕ ಕಥೆಗಳಿಗೆ ಸಂಬಂಧಪಟ್ಟ ಕೆತ್ತನೆಗಳು ಅದ್ಭುತವಾಗಿ ಮೂಡಿಬಂದಿವೆ.

Krishna Cave Temple In Mahabalipuram

PC:en.wikipedia.org

ಹತ್ತಿರದ ಆಕರ್ಷಣೆ
ಮಹಾಬಲಿಪುರಂಅಲ್ಲಿ ನೋಡುವಂತಹ ಸ್ಥಳಗಳು ಅನೇಕ. ಅವುಗಳಲ್ಲಿ ಆಕರ್ಷಣೀಯ ಸ್ಥಳವೆಂದರೆ ಪಂಚರಥಗಳು, ವರಹ ಗುಹಾಲಯ, ಕೃಷ್ಣಾ ಬಟರ್ ಬಾಲ್, ಭಾರತದ ಸೀಶೆಲ್ ಮ್ಯೂಸಿಯಂ, ಮಮಲ್ಲಾಪುರಂ ಲೈಟ್ ಹೌಸ್. ತಮಿಳುನಾಡಿನ ಜನಾಕರ್ಷಣೆಯ ತಾಣಗಳು

ಹೋಗುವ ದಾರಿ
ಕೃಷ್ಣ ಗುಹಾಲಯವು ಮಹಾಬಲಿಪುರಂ ನಗರದಿಂದ 1 ಕಿ.ಮೀ. ದೂರದಲ್ಲಿದೆ. ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಚೆಂಗಲ್‍ಪುಟ್ಟು ರೈಲ್ವೆ ನಿಲ್ದಾಣ. ಇದು ಸಿಟಿಯಿಂದ 24 ಕಿ.ಮೀ. ದೂರದಲ್ಲಿದೆ. ಮಹಾಬಲಿಪುರಂಅಲ್ಲಿ ವಸತಿ ವ್ಯವಸ್ಥೆಗೆ ಅನೇಕ ರೆಸಾರ್ಟ್ ಹಾಗೂ ಹೋಟೆಲ್ ರೂಮ್‍ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗೆಯೇ ಊಟ-ತಿಂಡಿಗಳಿಗೂ ಚಿಂತಿಸಬೇಕಿಲ್ಲ. ಎಲ್ಲಾ ಸೌಲಭ್ಯಗಳಿಗೂ ಅನುಕೂಲಕರ ಪರಿಸರ ಇಲ್ಲಿದೆ.

Read more about: tamil nadu bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X