Search
  • Follow NativePlanet
Share
» »ಸರ್ವಧರ್ಮ ಸಮಾಗಮ ಹಜಿ ಅಲಿ ದರ್ಗ

ಸರ್ವಧರ್ಮ ಸಮಾಗಮ ಹಜಿ ಅಲಿ ದರ್ಗ

ಹಜಿ ಅಲಿ ದರ್ಗ ದಕ್ಷಿಣ ಭಾರತದ ಮಹಾರಾಷ್ಟ್ರದಲ್ಲಿದೆ. ಈ ದರ್ಗವು ಮಂಬೈ ಮಾಹಾನಗರದಲ್ಲಿದ್ದು ಈ ದರ್ಗ ಪವಿತ್ರ ಪುಣ್ಯ ತೀರ್ಥಕ್ಷೇತ್ರವಾಗಿದೆ. ಕೇವಲ ಮಹಾರಾಷ್ಟ್ರದ ಪ್ರವಾಸಿಗರೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ,ವಿದೇಶಗಳಿಂದ ಕೂಡ ಭೇಟಿ ನೀಡುತ್ತಾ

ಹಜಿ ಅಲಿ ದರ್ಗ ದಕ್ಷಿಣ ಭಾರತದ ಮಹಾರಾಷ್ಟ್ರದಲ್ಲಿದೆ. ಈ ದರ್ಗವು ಮಂಬೈ ಮಾಹಾನಗರದಲ್ಲಿದ್ದು ಈ ದರ್ಗ ಪವಿತ್ರ ಪುಣ್ಯ ತೀರ್ಥಕ್ಷೇತ್ರವಾಗಿದೆ. ಕೇವಲ ಮಹಾರಾಷ್ಟ್ರದ ಪ್ರವಾಸಿಗರೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ,ವಿದೇಶಗಳಿಂದ ಕೂಡ ಭೇಟಿ ನೀಡುತ್ತಾರೆ. ಈ ದರ್ಗವು ಇಸ್ಲಾಮ್ ಧರ್ಮಕ್ಕೆ ಸೇರಿದ್ದರು ಕೂಡ ಅನ್ಯ ಜಾತಿಯವರು, ಅನ್ಯ ಧರ್ಮದವರು ಕೂಡ ಈ ಹಜಿ ಅಲಿ ದರ್ಗಗೆ ಭೇಟಿ ನೀಡುತ್ತಾರೆ. ವಿಶೇಷವೆನೆಂದರೆ ಈ ಮಸೀದಿ ಮತ್ತು ದರ್ಗವು ನದಿಯ ಮಧ್ಯೆ ನಿರ್ಮಾಣಗೊಂಡಿದೆ. ಹಲವಾರು ಪ್ರವಾಸಿಗರು ತಮ್ಮ ಅಭಿಲಾಷೆ ಈಡೇರಿಸಿಕೊಳ್ಳಲು ಇಲ್ಲಿಗೆ ಭಕ್ತಿಯಿಂದ ಭಕ್ತರು ಆಗಮಿಸುತ್ತಾರೆ. ಮುಂಬೈಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ತಾಣ ಇದಾಗಿದ್ದು ಇದರ ಅದ್ಬುತ ನಿರ್ಮಾಣ ಶೈಲಿಯು ನಮ್ಮನ್ನು ಚಕಿತಗೊಳ್ಳುವಂತೆ ಮಾಡದೇ ಇರದು. ಈ ದರ್ಗದ ಸೌಂದರ್ಯ ಅತ್ಯಂತ ಆಕರ್ಷಕತೆಯಿಂದ ಕೂಡಿದೆ. ಪ್ರಸ್ತುತ ಲೇಖನದಲ್ಲಿ ಮುಂಬೈನ ಸರ್ವಧರ್ಮ ಸಮಾಗಮ ಹಜಿ ಅಲಿ ದರ್ಗದ ಬಗ್ಗೆ ಮಾಹಿತಿ ತಿಳಿಯೋಣ.

ನಿರ್ಮಾಣದ ಇತಿಹಾಸ

ನಿರ್ಮಾಣದ ಇತಿಹಾಸ

ಈ ಹಜಿ ಅಲಿ ದರ್ಗವನ್ನು ಒಬ್ಬ ಶ್ರೀಮಂತ ಇಸ್ಲಾಮಿಕ್ ವ್ಯಾಪರಿ ಹಜಿ ಅಲಿ ಷಾ ಬುಕಾರಿ ಎಂಬುವ ವ್ಯಕ್ತಿ ಸ್ಥಾಪನೆ ಮಾಡಿದನು. ಈ ದರ್ಗವನ್ನು ಸುಮಾರು 1431 ರ ಮಹಾರಾಷ್ಟ್ರದ ಮುಂಬೈನಲ್ಲಿ ನಿರ್ಮಾಣ ಮಾಡಿದನು.

PC:Shootatsightfoto


ದರ್ಗದ ವಿಶಾಲತೆ

ದರ್ಗದ ವಿಶಾಲತೆ

ಈ ದರ್ಗವು ಅತ್ಯಂತ ಆಕರ್ಷಣಿಯುತವಾಗಿದ್ದು, ಸುಂದರ ವಾಸ್ತು ಶಿಲ್ಪವನ್ನು ಹೊಂದಿದೆ. ಸುಮಾರು 4,500 ಚದರ ಮೀಟರ್‍ನಷ್ಟು ವಿಶಾಲವಾಗಿದ್ದು 85 ಅಡಿ ಎತ್ತರದಲ್ಲಿ ಈ ದರ್ಗವನ್ನು ನಿರ್ಮಾಣ ಮಾಡಲಾಗಿದೆ.

PC:Colomen

ಧರ್ಮ

ಧರ್ಮ

ಸರ್ವಧರ್ಮ ಸಮಾಗಮ ಹಜಿ ಅಲಿ ದರ್ಗದಲ್ಲಿ ಯಾವುದೇ ಜಾತಿ, ಧರ್ಮಗಳ ಭೇದ ಭಾವವಿಲ್ಲದೇ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬುದ್ದ, ಜೈನರು ಕೂಡ ಭೇಟಿ ನೀಡುವ ಪುಣ್ಯ ಸ್ಥಳವಿದು.
PC:A.Savin

ಪ್ರಾರ್ಥನೆ

ಪ್ರಾರ್ಥನೆ

ಈ ದರ್ಗದಲ್ಲಿ ಹಲವಾರು ಪ್ರವಾಸಿಗರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಸಂಪತ್ತು, ಆರೋಗ್ಯ, ವಿವಾಹ ಮುಂತಾದವುಗಳನ್ನು ಈ ದೇವರು ನೆರವೇರಿಸುತ್ತಾನೆ ಎಂಬುದು ಭಕ್ತಾದಿಗಳ ನಂಬಿಕೆ.
PC:Colomen

ವಿಶೇಷ

ವಿಶೇಷ

ಈ ದರ್ಗವು ಒಂದು ಪವಿತ್ರವಾದ ನದಿಯ ಮಧ್ಯೆಯಲ್ಲಿ ನೆಲೆಸಿದೆ. ಇದನ್ನು ನೋಡುವುದೇ ಒಂದು ಬಗೆ ನವೀನ ಅನುಭವ. ಈ ದರ್ಗವು ಇಸ್ಲಾಮಿಕ್ ಪವಿತ್ರ ಪುಣ್ಯ ಕ್ಷೇತ್ರವಾದ ಮೆಕ್ಕಾಗೆ ದಾರಿ ಹೊಂದಿದೆ ಎನ್ನಾಲಾಗಿದೆ.
PC:Pancholi

 ಸೌಂದರ್ಯ

ಸೌಂದರ್ಯ

ಈ ಹಜಿ ಅಲಿ ದರ್ಗವು ತನ್ನ ಬಿಳಿ ವರ್ಣದಿಂದ ಕಂಗೊಳಿಸುತ್ತಿದೆ. ಬೃಹತ್ ಕಟ್ಟಡ ವಿಭಿನ್ನ ವಾಸ್ತುಶಿಲ್ಪ ಕಲೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅಪೂರ್ವ ಶಕ್ತಿಯನ್ನು ಹೊಂದಿದೆ.
PC:A.Savin

 ವಾಸ್ತು ಶಿಲ್ಪ

ವಾಸ್ತು ಶಿಲ್ಪ

ಈ ಪವಿತ್ರ ದರ್ಗವನ್ನು ಮಕಾರನ್ ಮಾರ್ಬಲ್‍ನಿಂದ ನಿರ್ಮಾಣ ಮಾಡಲಾಗಿದೆ. ಷಾಹಜಾಹನ್ ನಿರ್ಮಾಸಿದ ತಾಜ್ ಮಹಲ್ ಕೂಡ ಇದೇ ಮಾರ್ಬಲ್ ಅನ್ನು ಬಳಸಿ ನಿರ್ಮಿಸಿರುವುದನ್ನು ಕಾಣಬಹುದು. ಸುಮಾರು 400 ವರ್ಷಗಳ ಹಿಂದಿನ ವಾಸ್ತು ಶಿಲ್ಪವನ್ನು ಹೊಂದಿದೆ.
PC:Vaikoovery

ಪ್ರಸಿದ್ದ ಕಟ್ಟಡ

ಪ್ರಸಿದ್ದ ಕಟ್ಟಡ

ದರ್ಗದ ಒಳಗೆ ಎರಡು ಪ್ರಸಿದ್ದವಾದ ಕಟ್ಟಡಗಳಿವೆ. ಅವುಗಳೆಂದರೆ ಒಂದು ಮಸೀದಿ ಹಾಗೂ ದರ್ಗ. ಈ ಎರಡು ಕಟ್ಟಡದ ವಾಸ್ತು ಶಿಲ್ಪವನ್ನು ಮೊಗಲ್ ಹಾಗೂ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
PC:Vaikoovery

ಪ್ರಮುಖ ಆಕರ್ಷಣೆಗಳು

ಪ್ರಮುಖ ಆಕರ್ಷಣೆಗಳು

ಈ ಪುಣ್ಯ ಕ್ಷೇತ್ರದ ಮುಂದೆ ಹಲವಾರು ಆಹಾರಗಳ ಹೋಟೆಲ್‍ಗಲಿದ್ದು, ವಿಧ ವಿಧವಾದ ಸ್ವಾಧಿಷ್ಟ ಆಹಾರಗಳಾದ ಚಾಟ್ಸ್, ಐಸ್ ಕ್ರೀಮ್ಸ್, ಮೊಗಲ್ ಬಿರಿಯಾನಿ, ಹೈದ್ರಾಬಾದಿ ಫಾಸ್ಟ್ ಫುಡ್ ಕೂಡ ದೊರೆಯುತ್ತದೆ. ರುಚಿಕರ ಆಹಾರಗಳ ಜೊತೆ ಜೊತೆಗೆ ಒಂದಿಷ್ಟು ಶಾಪಿಂಗ್ ಕೂಡ ಮಾಡಬಹುದಾಗಿದೆ.
PC:Colomen

ಸಮೀಪದಲ್ಲಿರುವ ಸ್ಥಳಗಳು

ಸಮೀಪದಲ್ಲಿರುವ ಸ್ಥಳಗಳು

ಈ ದರ್ಗವು ಮುಂಬೈನ ಲಾಲ್ ಲಜಪತ್ ರಾಯ್ ಮಾರ್ಗದಲ್ಲಿದ್ದು, ಹಲವಾರು ಪ್ರಸಿದ್ದ ಸ್ಥಳಗಳು ಈ ಹಜಿ ಅಲಿ ದರ್ಗದ ಬಳಿ ಇವೆ. ಮಹಾಲಕ್ಷ್ಮಿ ರೇಸ್ ಕೋರ್ಸ್ ಸ್ಟೇಡಿಯಂ ಈ ದರ್ಗದಿಂದ ಕೇವಲ 11 ಕಿ,ಮೀ ಅಂತರದಲ್ಲಿದೆ. ಹಾಗೇಯೆ ಸಿ ಲಿಂಕ್ ಎಂಬ ಸ್ಥಳವು ದರ್ಗದಿಂದ 6 ಕಿ,ಮೀ ದೂರದಲ್ಲಿದೆ.
PC:A.Savin

ಪ್ರವೇಶ ಸಮಯ

ಪ್ರವೇಶ ಸಮಯ

ಈ ಪವಿತ್ರ ದರ್ಗಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಬೆಳಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶವಿರುತ್ತದೆ.
PC:Karan Shah

ರೈಲಿನಿಂದ ತಲುಪುವ ಬಗೆ

ರೈಲಿನಿಂದ ತಲುಪುವ ಬಗೆ

ಬೆಂಗಳೂರಿನಿಂದ ಮುಂಬೈಗೆ ನೇರವಾದ ರೈಲು ಸಂಪರ್ಕವಿರುವುದರಿಂದ ಮುಂಬೈನಿಂದ ಸುಲಭವಾಗಿ ಈ ದರ್ಗಕ್ಕೆ ಭೇಟಿ ನೀಡಬುಹುದು. ಈ ರೈಲುಮಾರ್ಗದ ಪ್ರಯಾಣದಿಂದ ಮುಂಬೈನ ಹಲವಾರು ಪ್ರಸಿದ್ದ ನಗರಗಳನ್ನು ದಾಟಿ ಹೋಗುತ್ತದೆ. ಇದೊಂದು 24 ಘಂಟೆಗಳ ಸುಧೀರ್ಘ ಪ್ರಯಾಣ.
PC:Karan Shah

ವಿಮಾನ ಮಾರ್ಗ

ವಿಮಾನ ಮಾರ್ಗ

ಈ ದರ್ಗಗೆ ಹತ್ತಿರವಾದ ವಿಮಾನ ನಿಲ್ದಾಣವೆಂದರೆ ಅದು ಮುಂಬೈ. ಇಲ್ಲಿಂದ ಹಜಿ ಅಲಿ ದರ್ಗ ಹತ್ತಿರವಾಗಿರುವುದರಿಂದ ಟ್ಯಾಕ್ಸಿಯ ಮೂಲಕ ತೆರಳಬುಹುದು.
PC:Rakesh

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X