Search
  • Follow NativePlanet
Share
» »ಬೆಂಗಳೂರಿನ ಸಮೀಪದಲ್ಲಿರುವ ಈ ವಿಸ್ಮಯ ದೇವಾಲಯಕ್ಕೆ ಭೇಟಿ ನೀಡಿದ್ದಿರಾ?

ಬೆಂಗಳೂರಿನ ಸಮೀಪದಲ್ಲಿರುವ ಈ ವಿಸ್ಮಯ ದೇವಾಲಯಕ್ಕೆ ಭೇಟಿ ನೀಡಿದ್ದಿರಾ?

ಈ ಪಂಚ ಲಿಂಗೇಶ್ವರ ದೇವಾಲಯವು ಬೆಂಗಳೂರು ತಾಲ್ಲೂಕಿನ ವಿಜಯಪುರದ ಬೇಗೂರಿನಲ್ಲಿದೆ. ಬೆಂಗಳೂರಿನ ಎಮ್.ಜಿ ರಸ್ತೆಯಿಂದ ಈ ದೇವಾಲಯಕ್ಕೆ ಕೇವಲ 25 ಕಿ,ಮೀ ಅಂತರದಲ್ಲಿದೆ. ಈ ದೇವಾಲಯವನ್ನು ಸ್ಥಳೀಯರು ನಾಗನಾಥೇಶ್ವರ, ನಾಗೇಶ್ವರ ದೇವಾಲಯವೆಂದೂ ಕರೆಯುತ್ತ

ದೇವಾಲಯಗಳು ಪ್ರತಿಯೊಬ್ಬ ಹಿಂದೂವಿಗೆ ಒಂದು ಪವಿತ್ರವಾದ ಸ್ಥಳವಾಗಿದೆ. ದೇವಾಲಯಗಳ ರಚನೆಗಳು ತಮ್ಮ ಅದ್ಭುತ ಹಾಗೂ ಕಲಾತ್ಮಕತೆಯಿಂದ ಕೂಡಿದ ಗೋಪುರಗಳು, ವಾಸ್ತುಶಿಲ್ಪಗಳಿಂದಾಗಿ ಇತಿಹಾಸ ಪ್ರಿಯರನ್ನು ಸೆಳೆಯುವ ಶಕ್ತಿಯನ್ನು ಹೊಂದಿವೆ. ದೇವಾಲಯಗಳಿಗೆ ಭೇಟಿ ಕೊಟ್ಟಾಗ ಏನೋ ಒಂದು ಬಗೆಯ ನೆಮ್ಮದಿ, ಶಾಂತಿ ದೊರೆಯುತ್ತದೆ ಎಂದು ಕೆಲವರು ಹೋಗುವುದುಂಟು. ಇನ್ನು ಕೆಲವರು ಐತಿಹಾಸಿಕ ತಾಣದ ಬಗ್ಗೆ ಕುತೂಹಲವಿರುವವರು ಭೇಟಿ ನೀಡಬಹುದು. ಆಸ್ತಿಕನಾಗಲಿ, ನಾಸ್ತಿಕನಾಗಲಿ ಒಮ್ಮೆ ಬೇಗೂರಿನ ಪಂಚ ಲಿಂಗೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಿ. ಪ್ರಸ್ತುತ ಲೇಖನದಲ್ಲಿ ಪಂಚ ಲಿಂಗೇಶ್ವರ ದೇವಾಲಯದ ಬಗ್ಗೆ ತಿಳಿಯೋಣ.

ನಾಗಲಿಂಗೇಶ್ವರ ಲಿಂಗ

PC: Dineshkannambadi

ಈ ಪಂಚ ಲಿಂಗೇಶ್ವರ ದೇವಾಲಯವು ಬೆಂಗಳೂರು ತಾಲ್ಲೂಕಿನ ವಿಜಯಪುರದ ಬೇಗೂರಿನಲ್ಲಿದೆ. ಬೆಂಗಳೂರಿನ ಎಮ್.ಜಿ ರಸ್ತೆಯಿಂದ ಈ ದೇವಾಲಯಕ್ಕೆ ಕೇವಲ 25 ಕಿ,ಮೀ ಅಂತರದಲ್ಲಿದೆ. ಈ ದೇವಾಲಯವನ್ನು ಸ್ಥಳೀಯರು ನಾಗನಾಥೇಶ್ವರ, ನಾಗೇಶ್ವರ ದೇವಾಲಯವೆಂದೂ ಕರೆಯುತ್ತಾರೆ. ಶಾಸನಗಳ ಪ್ರಕಾರ ಈ ಬೇಗೂರ್‍ನ್ನು ವೆಪ್ಪೂರು ಎಂದು ಕರೆಯಲಾಗುತ್ತಿತ್ತು. ಈ ಪಂಚ ಲಿಂಗೇಶ್ವರನ ದೇವಾಲಯವು ಸಮಾರು 1300 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಗಂಗರ ರಾಜವಂಶದವರಾದ ರಾಜ ಕುಲತುಂಗಾ ಮತ್ತು ರಾಜಸಿಂಹನಂದಿ ನಿರ್ಮಿಸಿದ ದೇವಾಲಯವಾಗಿದೆ. ಈ ದೇವಾಲಯವು ಪಂಚ ಅಂದರೆ 5 ಲಿಂಗ ಹೊಂದಿರುವ ದೇವಾಲಯವಾಗಿದೆ. ಈ ದೇಗುಲದ ಒಳಭಾಗದಲ್ಲಿ ಭವ್ಯವಾದ ಗೋಪುರ, ಅತ್ಯಾಕರ್ಷಕವಾದ ಮೂರ್ತಿಗಳು, ಮನೋಹರ ಶಿಲ್ಪಕಲೆಗಳು, ಬೃಹತ್ ನವರಂಗಗಳು, ನಾಲ್ಕು ಶೃಂಗಗಳ ಮಧ್ಯೆ ಇರುವ ನಂದಿ ಮಂಟಪವು ಅತ್ಯಂತ ಸುಂದರವಾಗಿದೆ. ಇಲ್ಲಿ ಕೆಲವು ಕನ್ನಡದ ಶಿಲಾಶಾಸನಗಳನ್ನು ಕಾಣಬಹುದಾಗಿದೆ. ಐದು ಲಿಂಗಗಳು ಭಕ್ತರ ಬಗೆ ಬಗೆಯ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿ ಶಾಲಿಯಾದ ಲಿಂಗಗಳಾಗಿವೆ.

ಪಂಚಲಿಂಗೇಶ್ವರ ದೇವಾಲಯ

PC: Dineshkannambadi

ನಾಗಲಿಂಗೇಶ್ವರ ಲಿಂಗ
ಈ ನಾಗಲಿಂಗೇಶ್ವರ ಲಿಂಗವು ದೇವಾಲಯದಲ್ಲಿರುವ ಪಂಚ ಲಿಂಗಗಳಲ್ಲೆ ಅತಿ ಎತ್ತರವಾದ ಲಿಂಗವಾಗಿದೆ. ಈ ಲಿಂಗವು ಸುಮಾರು 5 ಅಡಿ ಎತ್ತರವಿದೆ. ಈ ಲಿಂಗದ ಮುಂಭಾಗದಲ್ಲಿ ನಂದಿಯು 4 ಅಡಿ ಎತ್ತರದಲ್ಲಿದ್ದಾನೆ. ಈ ನಾಗಲಿಂಗೇಶ್ವರ ಸ್ವಾಮಿಯ ಹಿಂದೆ ಸೂರ್ಯದೇವನ ಮೂರ್ತಿ ಇದೆ. ಈ ನಾಗಲಿಂಗೇಶ್ವರ ಲಿಂಗನನ್ನು ಆರಾಧಿಸುವುದರಿಂದ ವ್ಯಾಪರ ವೃಧಿ, ಉತ್ತಮ ವೃತ್ತಿ, ರೋಗ ರೊಜಿನಗಳನ್ನು ತಡೆಗಟ್ಟಿ ಗುಣಪಡಿಸುವ ಶಕ್ತಿ ಈ ದೇವನು ಭಕ್ತರಿಗೆ ಪ್ರಸಾದಿಸುತ್ತಾನೆ. ಇದರಿಂದ ಹಲವಾರು ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಬೇಡಿಕೆಯನ್ನು ನೆರವೆರಿಸುವಂತೆ ಬೇಡಿಕೊಳ್ಳುತ್ತಾರೆ.

ಕಾಳಿ ಕಮಟೇಶ್ವರ ಲಿಂಗ
ಕಾಳಿ ಕಮಟೇಶ್ವರ ಸ್ವಾಮಿಯು ಲಿಂಗ ಸ್ವರೂಪಿಯಾಗಿದ್ದು ಸುಮಾರು 3.1/2 ಅಡಿ ಎತ್ತರದಲ್ಲಿದ್ದಾನೆ. ಹಾಗೇಯೆ 1 ಅಡಿ ಎತ್ತರವಿರುವ ಪಾರ್ವತಿ ಸ್ವರೂಪಿ ಕಾಳಿ ಕೂಡ ನೆಲೆಸಿದ್ದಾಳೆ. ಈ ಸ್ವಾಮಿಯು ಬಂದ ಭಕ್ತರ ತಮ್ಮ ಇಷ್ಟಾರ್ಥಗಳನ್ನು ನೇರವೇರಿಸುತ್ತಾನೆ. ಈ ದೇಗುಲದ ಒಳಭಾಗದಲ್ಲಿ ಒಂದು ಕಮಲದ ಕಲಾಕೃತಿ ಇದೆ. ಭಕ್ತರು ಈ ಕಲಾಕೃತಿಯ ಮೇಲೆ ನಿಂತು ದೇವರನ್ನು ಬೇಡಿಕೊಳ್ಳಬುಹುದು. ಈ ಕಮಟೇಶ್ವರನು ಸಂತಾನ ಇಲ್ಲದವರಿಗೆ ಸಂತಾನ, ಉತ್ತಮ ಆರೋಗ್ಯ, ಶತ್ರು ಕಾಟದಿಂದ ಶಾಶ್ವತ ಪರಿಹಾರ ದೊರಕಿಸಿಕೊಡುವ ಶಕ್ತಿ ದೇವನಾಗಿ ನೆಲೆಸಿದ್ದಾನೆ. ವಿಶೇಷವೆನೆಂದರೆ ಈ ಲಿಂಗ ಸ್ವರೂಪಿಯ ಮುಂದೆ ನಂದಿ ನೆಲೆಸಿಲ್ಲ. ಕಾರಣವೆನೆಂದರೆ ಈ ಕಾಳಿ ಕಮಟೇಶ್ವರನು ದುರ್ಗಿ ಸ್ವರೂಪಿಯಾದ ಕಾಳಿಯೊಂದಿಗೆ ನೆಲೆಸಿರುವುದಕ್ಕೆ ಇಲ್ಲಿ ನಂದಿಯನ್ನು ಸ್ಥಾಪಿಸಿಲ್ಲ.

ಪಂಚಲಿಂಗೇಶ್ವರ ದೇವಾಲಯ

PC:Dineshkannambadi

ಕರಣೇಶ್ವರ ಲಿಂಗ
ಈ ಲಿಂಗವೂ ಅತ್ಯಂತ ಚಿಕ್ಕದಾಗಿದ್ದು ಸುಮಾರು 21/2 ಅಡಿಯಷ್ಟು ಎತ್ತರದಲ್ಲಿದ್ದಾನೆ. ಈ ಲಿಂಗದ ಮುಂಭಾಗದಲ್ಲಿ ಚಿಕ್ಕದಾದ ನಂದಿ ನೆಲೆಸಿದ್ದಾನೆ. ಈ ಕರಣೇಶ್ವರನ ಮಹಿಮೆಗಳೆಂದರೆ ಈ ಲಿಂಗದ ಬಲಭಾಗದಲ್ಲಿ ನಿಂತು ದೇವರನ್ನು ಪ್ರಾರ್ಥಿಸಿದರೆ ಹೊಟ್ಟೆ ನೋವಿನಿಂದ, ಕೆಲವು ಮಾನಸಿಕ ಸಮಸ್ಯೆಗಳಿಂದ ಬಳಲು ತಿರುವವರನ್ನು ಈ ದೇವನು ಪರಿಹರಿಸುತ್ತಾನೆ. ಹಾಗೇಯೇ ಎಡ ಭಾಗದಲ್ಲಿ ನಿಂತು ಪ್ರಾರ್ಥಿಸಿದರೆ ಪಾಶ್ವವಾಯುವಿನಿಂದ ಬಳಲು ತಿರುವವರು, ಮೆದುಳಿನ ಅಸ್ವಸ್ಥತೆಗಳಿಂದ ಬಳಲುತ್ತಿರುವವರನ್ನು ಈ ಸ್ವಾಮಿಯು ಗುಣಪಡಿಸುತ್ತಾನೆ ಎಂಬ ನಂಬಿಕೆ ಇದೆ.

ನಾಗೇಶ್ವರ ಲಿಂಗ
ನಾಗೇಶ್ವರ ಸ್ವಾಮಿ ಲಿಂಗವೂ ಕೂಡ ಮಹಿಮಾನ್ವಿತನಾಗಿದ್ದು ಈ ದೇವಾಲಯದಲ್ಲಿ ಪ್ರಮುಖವಾದ ಒಂದು ಸ್ಥಳವಿದೆ. ಆ ಸ್ಥಳದಲ್ಲಿ ನಾಗಲಿಂಗನನ್ನು ಪ್ರಾರ್ಥಿಸಿದರೆ ತಮ್ಮ ಇಷ್ಟಾರ್ಥ ನೆರವೆರುವುದೆ ಅಲ್ಲದೇ ಹಾಗೇಯೆ ರೋಗಗಳು, ಶತ್ರು ಕಾಟ, ಮಾಂತ್ರಿಕ ವಿದ್ಯೆಯಿಂದ ಭದ್ರತೆ ದೊರೆಯುತ್ತವೆ. ಈ ರೀತಿ ಪ್ರಾರ್ಥಿಸುವಾಗ ಭಕ್ತರು ದೇವರ ಬಲಭಾಗದಲ್ಲಿ ಯಂತ್ರದ ವರ್ಣ ಚಿತ್ರದ ಮೇಲೆ ನಿಲ್ಲಬೇಕು.

ಚೋಳೇಶ್ವರ ಲಿಂಗ
ಈ ದೇವಾಲಯದಲ್ಲಿ ಚೋಳೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ಸ್ವಾಮಿಯ ಲಿಂಗವು 4 ಅಡಿ ಉದ್ದವಿದ್ದು 2 ಅಡಿ ಎತ್ತರದ ನಂದಿಯ ಮುಂಭಾಗದಲ್ಲಿದೆ. ಈ ಸ್ವಾಮಿಯ ಮಹಿಮೆ ಎಂದರೆ ಮದುವೆಯಾಗದ ಕನ್ಯೆಯರು ಈ ದೇಗುಲದ ಒಳಭಾಗದ ಅಷ್ಟ ಫಲಕದ ಮೇಲೆ ನಿಂತು ಬೇಡಿಕೊಂಡರೆ ಶೀಘ್ರ ಮದುವೆ ಸಮಾರಂಭಗಳು ಅ ಮನೆಯಲ್ಲಿ ನಡೆಯುತ್ತವೆ ಎಂದು ಜನರ ನಂಬಿಕೆಯಾಗಿದೆ.

ದೇವಾಲಯದ ಸಮಯ
ಈ ದೇವಾಲಯವು ಮುಂಜಾನೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆವಿಗೂ ಈ ದೇವಾಲಯದ ದರ್ಶನ ಭಾಗ್ಯವನ್ನು ಪಡೆಯಬಹುದಾಗಿದೆ.

ದೇವಾಲಯದಲ್ಲಿರುವ ಹಲವಾರು ಶಕ್ತಿ ದೇವತೆಗಳು
ಈ ದೇವಾಲಯದಲ್ಲಿ ಹಲವಾರು ದೇವತಾ ಮೂರ್ತಿಗಳಿವೆ. ಪಾರ್ವತಿಯ ವಿಗ್ರಹವು ಸುಮಾರು 5 ಅಡಿ ಎತ್ತರವಿದ್ದು, ಈ ತಾಯಿಯನ್ನು ಪ್ರಾರ್ಥಿಸಿದರೆ ರಕ್ತದೊತ್ತಡ, ರಕ್ತದ ಕ್ಯಾನ್ಸರ್ ಗುಣ ಪಡಿಸುವ ಶಕ್ತಿ ಹೊಂದಿದ್ದಾಳೆ ಎಂದು ನಂಬಾಲಾಗಿದೆ.ಈ ದೇವಾಲಯದಲ್ಲಿ ವಿನಾಯಕ, ಚಾಮುಂಡೇಶ್ವರಿ, ಕಾಳಭೈರವ, ವಿಷ್ಣು, ಚಂದ್ರ ಮತ್ತು ವಿಶ್ವನಾಥನ ಮೂರ್ತಿಗಳಿವೆ. ಕಳೀಂಗ ಸರ್ಪಗಳ ಅದಿ ದೇವತೆ ಈ ದೇವನ ಕೃಪೆಗೆ ಪಾತ್ರರಾಗಲು ಹಲವಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಸಪ್ತ ಋಷಿಗಳು, ಅಷ್ಟ ದಿಕ್ಕು ಪಾಲಕರ ಮೂರ್ತಿಗಳಿದ್ದು ಪ್ರತಿದಿನ ರಾತ್ರಿ ಪ್ರತ್ಯೇಕವಾದ ಪೂಜಾ ಕೈಂಕರ್ಯವನ್ನು ನಡೆಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X