Search
  • Follow NativePlanet
Share
» »ಪ್ರಪಂಚದಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳವಿದು.........

ಪ್ರಪಂಚದಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳವಿದು.........

ಪ್ರಪಂಚದಲ್ಲಿಯೇ ಅತ್ಯಂತ ಮೋಕ್ಷದಾಯಕವಾದ ಪ್ರದೇಶವೆಂದರೆ ಅದು ಪಂಚ ಪ್ರಯಾಗ ಎಂದು ಹೇಳುತ್ತಾರೆ. ಅಸಲಿಗೆ ಪ್ರಯಾಗ ಎಂದರೆ ಸಂಗಮ ಎಂಬ ಅರ್ಥವಾಗಿದೆ. ಆ ಪ್ರಯಾಗಗಳು ಎಲ್ಲಿ ಇವೆ? ಯಾವ ಪ್ರದೇಶದಲ್ಲಿ ಇದೆ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಓದಿ ಬದ

ಪ್ರಪಂಚದಲ್ಲಿಯೇ ಅತ್ಯಂತ ಮೋಕ್ಷದಾಯಕವಾದ ಪ್ರದೇಶವೆಂದರೆ ಅದು ಪಂಚ ಪ್ರಯಾಗ ಎಂದು ಹೇಳುತ್ತಾರೆ. ಅಸಲಿಗೆ ಪ್ರಯಾಗ ಎಂದರೆ ಸಂಗಮ ಎಂಬ ಅರ್ಥವಾಗಿದೆ. ಆ ಪ್ರಯಾಗಗಳು ಎಲ್ಲಿ ಇವೆ? ಯಾವ ಪ್ರದೇಶದಲ್ಲಿ ಇದೆ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಓದಿ ಬದ್ರಿನಾಥಗೆ ತೆರಳುವ ಮಾರ್ಗದಲ್ಲಿ ಪಂಚ ಪ್ರಯಾಗಗಳು ಇವೆ. ಅವುಗಳೆಂದರೆ ವಿಷ್ಣು ಪ್ರಯಾಗ, ನಂದ ಪ್ರಯಾಗ, ಕರ್ಣ ಪ್ರಯಾಗ, ರುದ್ರಪ್ರಯಾಗ ಮತ್ತು ದೇವ ಪ್ರಯಾಗ.

ಉತ್ತರಖಂಡದಲ್ಲಿನ ಟೆಹ್ರಿಗರ್ವಾಲ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 2723 ಅಡಿ ಎತ್ತರದಲ್ಲಿದೆ ಪ್ರಸಿದ್ಧಕ್ಷೇತ್ರ ದೇವ ಪ್ರಯಾಗ. 108 ದಿವ್ಯ ಸ್ಥಳಗಳಲ್ಲಿ ಒಂದು ಎಂದು ಪ್ರಖ್ಯಾತತೆ ಹೊಂದಿದೆ. ಈ ಕ್ಷೇತ್ರದಲ್ಲಿ ಕೇಧಾರನಾಥದಲ್ಲಿ ಹುಟ್ಟಿದ ಮಂದಾಕಿನಿ ನದಿ, ಬದರಿನಾಥ್‍ನಲ್ಲಿ ಹುಟ್ಟಿದ ಅಲಕಾನಂದ, ಗಂಗೋತ್ರಿಯಲ್ಲಿ ಹುಟ್ಟಿದ ಗಂಗಾ ನದಿ, ಹೀಗೆ ಈ ಮೂರು ಪವಿತ್ರ ನದಿಗಳು ಸೇರಿ ತ್ರಿವೇಣಿ ಸಂಗಮವಾಗುತ್ತದೆ.

ಈ ಪ್ರಾಂತ್ಯದಲ್ಲಿ ಬ್ರಹ್ಮಚಾರಿಗಳು ನಾಲ್ಕು ಮಾಸಗಳ ಕಾಲ ಅಷ್ಟಾಕ್ಷರಿ ಮಂತ್ರವನ್ನು ಜಪಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಈ ವಿಷಯವನ್ನು ಮಹಾ ಶಿವನು ನಾರದಮುನಿಗೆ ಹೇಳಿದನು ಎಂದು ಸ್ಕಂದ ಪುರಾಣದಲ್ಲಿದೆ. ಪುರಾಣಗಳ ಪ್ರಕಾರ ದಶರಥಮಹಾರಾಜ, ಶ್ರೀರಾಮಚಂದ್ರ ಇಲ್ಲಿ ಶಿವನಿಗಾಗಿ ತಪಸ್ಸು ಮಾಡಿದರು ಎಂದು ಹೇಳುತ್ತಾರೆ. ಪಂಚ ಪಾಂಡವರು ಕೂಡ ಈ ಕ್ಷೇತ್ರವನ್ನು ತೆರಳಿ ಇಲ್ಲಿಯೇ ಸ್ನಾನವನ್ನು ಆಚರಿಸಿ ಸ್ವಾಮಿಯನ್ನು ದರ್ಶನ ಮಾಡಿಕೊಂಡರಂತೆ.

ಪ್ರಸ್ತುತ ವಿಷ್ಣು ಪ್ರಯಾಗ ಎಲ್ಲಿದೆ ಎಂಬುದನ್ನು ತಿಳಿಯೋಣ.

ವಿಷ್ಣು ಪ್ರಯಾಗ

ವಿಷ್ಣು ಪ್ರಯಾಗ

ಇದು ಬದ್ರಿನಾಥಕ್ಕೆ ದಕ್ಷಿಣ ದಿಕ್ಕಿಗೆ 35 ಕಿ.ಮೀ ದೂರದಲ್ಲಿ ನಿಧಿ ಎಂಬ ಕಣಿವೆ ಪ್ರದೇಶಗಳು ಇರುತ್ತವೆ. ಅಲ್ಲಿನ ಪರ್ವತ ಶಿಖರಗಳಿಂದ ಹರಿಯುವ ನದಿ ದವಳ ಗಂಗ, ಪಶ್ಚಿಮ ದಿಕ್ಕಿನಿಂದ ಪ್ರವಹಿಸುವ ವಿಷ್ಣು ಪ್ರಯಾಗದಲ್ಲಿ ಅಲಕಾನಂದದಲ್ಲಿ ಲೀನವಾಗುತ್ತದೆ.

ವಿಷ್ಣು ಪ್ರಯಾಗ

ವಿಷ್ಣು ಪ್ರಯಾಗ

ಇಲ್ಲಿ ಮಹಾ ವಿಷ್ಣುವು ವೀರನಾರಾಯಣ ರೂಪದಲ್ಲಿ ತಪಸ್ಸು ಮಾಡುವದಕ್ಕೋಸ್ಕರ ಬದ್ರಕಾವನಂ ದಾರಿಗೆ ತೆರಳುವ ಸಮಯದಲ್ಲಿ ಸಂಗಮದ ಸಮೀಪದಲ್ಲಿ ಕೆಲವು ಕಾಲ ಧ್ಯಾನವನ್ನು ಮಾಡಿದನಂತೆ. ಅದ್ದರಿಂದಲೇ ಈ ಪವಿತ್ರವಾದ ಪ್ರದೇಶಕ್ಕೆ ವಿಷ್ಣು ಪ್ರಯಾಗ ಎಂಬ ಹೆಸರು ಬಂದಿತು.

ನಂದ ಪ್ರಯಾಗ

ನಂದ ಪ್ರಯಾಗ

ಬದರಿನಾಥನಿಂದ ಸುಮಾರು 106 ಕಿ.ಮೀ ದೂರದಲ್ಲಿ ನಂದ ಪ್ರಯಾಗವಿದೆ. ಇಲ್ಲಿಂದ ಸುಮಾರು 75 ಕಿ.ಮೀ ದೂರದಲ್ಲಿ ನಂದಾದೇವಿ ಪರ್ವತ ಶಿಖರವಿದೆ.

ನಂದಾದೇವಿ ಪರ್ವತ ಶಿಖರ

ನಂದಾದೇವಿ ಪರ್ವತ ಶಿಖರ

ನಂದಾದೇವಿ ಶಿಖರ ಪ್ರದೇಶದಲ್ಲಿ ಜನಿಸಿದ ನದಿಯಾದ್ದರಿಂದ ಈ ನದಿಯ ಹೆಸರಿನಿಂದಲೇ ಇಲ್ಲಿ ಸಂಗಮ ಪ್ರದೇಶವನ್ನು ನಂದಪ್ರಯಾಗ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ ಪೂರ್ವದಲ್ಲಿ ನಂದು ಎಂಬ ಚಕ್ರವರ್ತಿ ಈ ಪ್ರದೇಶದಲ್ಲಿ ಯಜ್ಞವನ್ನು ಮಾಡಿದನಂತೆ ಹಾಗಾಗಿಯೇ ಈ ಪ್ರದೇಶಕ್ಕೆ ನಂದಾ ಪರ್ವತ ಎಂದು ಹೆಸರು ಬಂದಿತು ಎಂದು ಇನ್ನು ಕೆಲವರು ವಾದಿಸುತ್ತಾರೆ.

ಕರ್ಣ ಪ್ರಯಾಗ

ಕರ್ಣ ಪ್ರಯಾಗ

ನಂದ ಪ್ರಯಾಗದ ನಂತರ ಸುಮಾರು 22 ಕಿ.ಮೀ ದೂರದಲ್ಲಿ ಅಂದರೆ ಬದ್ರಿನಾಥದಿಂದ ಸುಮಾರು 128 ಕಿ.ಮೀ ದೂರದಲ್ಲಿ ಕರ್ಣ ಪ್ರಯಾಗವಿದೆ. ಇಲ್ಲಿ ಪಿಡಗರಂಗ ಎಂಬ ನದಿ ಅಲಕಾನಂದ ನದಿಯಲ್ಲಿ ಸೇರುತ್ತದೆ.

ಕರ್ಣ ಪ್ರಯಾಗ

ಕರ್ಣ ಪ್ರಯಾಗ

ನಂದು ರಾಜನು ಸೂರ್ಯ ಭಗವಾನನಿಗಾಗಿ ತಪ್ಪಸ್ಸು ಮಾಡಿ ಕವಚಗಳನ್ನು ಪಡೆದನು ಎಂದು ಸ್ಥಳ ಪುರಾಣಗಳು ಹೇಳುತ್ತದೆ. ಆ ಕಾರಣವಾಗಿ ಈ ಪ್ರದೇಶಕ್ಕೆ ಕರ್ಣ ಪ್ರಯಾಗ ಎಂದು ಹೆಸರು ಬಂದಿತು. ಇಲ್ಲಿ ಅತ್ಯಂತ ಪ್ರಾಚೀನವಾದ ಉಮಾದೇವಿ ದೇವಾಲಯವು ಕೂಡ ಇದೆ.

ರುದ್ರ ಪ್ರಯಾಗ

ರುದ್ರ ಪ್ರಯಾಗ

ಕರ್ಣ ಪ್ರಯಾಗದಿಂದ ಸುಮಾರು 32 ಕಿ.ಮೀ ದೂರದ ಪ್ರಯಾಣದ ನಂತರ ರುದ್ರಪ್ರಯಾಗ ತಲುಪಬಹುದು. ಉತ್ತರಖಂಢನಲ್ಲಿನ ರುದ್ರ ಪ್ರಯಾಗ ಜಿಲ್ಲಾ ಮುಖ್ಯಕೇಂದ್ರವಾದ ರುದ್ರಪ್ರಯಾಗ, ಕೇದಾರ ನಾಥಗೆ ತೆರಳುವ ಯಾತ್ರಿಕರಿಗೆ ಇಲ್ಲಿ ಭೋಜನ, ವಸತಿ ಸೌಕರ್ಯಗಳು ಇವೆ.

ರುದ್ರ ಪ್ರಯಾಗ

ರುದ್ರ ಪ್ರಯಾಗ

ಎತ್ತರವಾದ ಮೆಟ್ಟಿಲು ಇಳಿದು ಕೆಳಗೆ ತೆರಳಿದರೆ ಸಂಗಮ ಪ್ರದೇಶವನ್ನು ಸೇರಿಕೊಳ್ಳಬಹುದಾಗಿದೆ. ಸಂಗಮಕ್ಕೆ ಹೋಗುವ ದಾರಿಯಲ್ಲಿ ನಾರದ ಶಿಲ ಇರುತ್ತದೆ. ಇಲ್ಲಿ ನಾರದ ಮಹರ್ಷಿಯು ಶಿವನೊಂದಿಗೆ ಸೇರಿ ಸಂಗೀತವನ್ನು ಕಲಿಯುತ್ತಾನೆ. ಈ ಪ್ರದೇಶದಲ್ಲಿ ಶಿವನು ರುದ್ರನಾಥನಾಗಿ ಪೂಜಿಸಲಾಗುತ್ತಿದೆ. ಇಲ್ಲಿ ಚಾಮುಂಡ ದೇವಿ ಕೂಡ ನೆಲೆಸಿದ್ದಾಳೆ. ಈ ಚಾಮುಂಡ ದೇವಿ ದೇವಾಲಯದ ಸಮೀಪದಲ್ಲಿ ಒಂದು ಗುಹೆ ಇದೆ ಅದರಲ್ಲಿ ಕೋಟಿ ಲಿಂಗವನ್ನು ದರ್ಶನ ಮಾಡಿಕೊಳ್ಳಬಹುದು.

ದೇವ ಪ್ರಯಾಗ

ದೇವ ಪ್ರಯಾಗ

ರುದ್ರ ಪ್ರಯಾಗದಿಂದ ಸುಮಾರು 40 ಕಿ.ಮೀ ದೂರ ಪ್ರಯಾಣದ ನಂತರ ದೇವ ಪ್ರಯಾಗಕ್ಕೆ ತಲುಪಬಹುದಾಗಿದೆ. ಪೂರ್ವದಲ್ಲಿ ದೇವಶರ್ಮ ಎಂಬ ಮುನಿಯು ಈ ಪ್ರದೇಶದಲ್ಲಿ ತಪಸ್ಸು ಮಾಡಿದ್ದಕ್ಕಾಗಿ ದೇವ ಪ್ರಯಾಗ ಎಂದು ಹೆಸರು ಬಂದಿತು ಎಂಬ ಕಥೆ ಇದೆ.

ದೇವ ಪ್ರಯಾಗ

ದೇವ ಪ್ರಯಾಗ

ದೇವ ಪ್ರಯಾಗ ಎಂದರೆ ದೇವರುಗಳು ನೆಲೆಸಿರುವ ಪವಿತ್ರವಾದ ಸ್ಥಳ ಎಂಬುದಾಗಿದೆ. ಹಾಗಾಗಿ ಈ ಪ್ರದೇಶವನ್ನು ಸರ್ವ ದೇವತೆಗಳ ನಿವಾಸ ಸ್ಥಳ ಎಂದು ಹೇಳುತ್ತಾರೆ.

ದೇವ ಪ್ರಯಾಗ

ದೇವ ಪ್ರಯಾಗ

ಅಲಕಾನಂದ ಮಹಾಲಕ್ಷ್ಮೀ ಸ್ವರೂಪವೆಂದೂ, ಭಗಿರಥಿ ಸ್ವಯಂ ಶಿವನ ಪತ್ನಿ ಎಂದು ಹೇಳುತ್ತಾರೆ. ಇಲ್ಲಿ ಅತ್ತೆ ಹಾಗು ಸೂಸೆಗಳ ಮಧ್ಯೆ ಮನಸ್ತಾಪವಿದ್ದರೆ ಇಲ್ಲಿ ಬಂದು ಪೂಜೆ ಮಾಡಿದರೆ ಜಗಳ, ಮನಸ್ತಾಪಗಳು ಕಡಿಮೆಯಾಗುತ್ತದೆ ಎಂತೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಿಷ್ಣು ಪ್ರಯಾಗಕ್ಕೆ ತಲಪಲು ಹರಿದ್ವಾರದಿಂದ 290 ಕಿ.ಮೀ ದೂರ, ದೆಹಲಿಯಿಂದ 540 ಕಿ.ಮೀ ದೂರದಲ್ಲಿದೆ. ಸಮೀಪದ ರೈಲ್ವೆ ನಿಲ್ದಾಣ ಎಂದರೆ ಹರಿದ್ವಾರ ಮತ್ತು ರಿಶಿಖೇಶ್. ಡೆಹರ್ರಾಡೂನ್‍ಯಿಂದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಸಮೀಪವಾದುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X