Search
  • Follow NativePlanet
Share
» »ಸ್ಯಾಮ್ಯುಯೆಲ್ ಬೌರ್ನ್ ಕಂಡ ಅದ್ಭುತ ಭಾರತ

ಸ್ಯಾಮ್ಯುಯೆಲ್ ಬೌರ್ನ್ ಕಂಡ ಅದ್ಭುತ ಭಾರತ

By Vijay

ಪ್ರವಾಸಿ ಛಾಯಾಗ್ರಹಣ ಹಿಂದಿನಿಂದಲೂ ಪ್ರಚಲಿತದಲ್ಲಿತ್ತಾದರೂ ಇತ್ತೀಚಿನ ಕಳೆದ ಕೆಲವು ದಶಕಗಳಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಹಿರಿಯರು ಹೇಳಿರುವಂತೆ ಸಾಮಾನ್ಯ ಜ್ಞಾನವು ದೇಶ ಸುತ್ತಿ, ಕೋಶ ಓದುವುದರಿಂದ ಹೇಗೆ ವೃದ್ಧಿಸುತ್ತದೊ ಅದೆ ರೀತಿ ಪ್ರವಾಸಿ ಛಾಯಾಗ್ರಹಣವೂ ಸಹ ವಿವಿಧ ಸ್ಥಳಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಕಾಲವು ನಾಶ ಮಾಡದಂತೆ ಶಾಶ್ವತವಾಗಿ ಉಳಿಯುವಂತೆ ಹಾಗೂ ಬೆಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಥಾಮಸ್ ಕುಕ್ ನ ಎಲ್ಲ ಉಚಿತ ಪ್ರವಾಸಿ ಕೂಪನ್ನುಗಳನ್ನು ಪಡೆಯಿರಿ

ಸ್ಯಾಮ್ಯುಯೆಲ್ ಬೌರ್ನ್ ಒಬ್ಬ ಬ್ರಿಟಿಷ್ ಪ್ರವಾಸಿ ಛಾಯಾಗ್ರಾಹಕರಾಗಿದ್ದು ತಮ್ಮ ಅತ್ಯದ್ಭುತ ಏಳು ವರ್ಷಗಳ ಭಾರತದಲ್ಲಿನ ಕೆಲಸಕ್ಕಾಗಿ ಪ್ರಶಂಸೆ ಪಡೆದಿದ್ದು, ಇಂದು 19 ನೆಯ ಶತಮಾನದ ಮಹಾನ್ ಪ್ರವಾಸಿ ಛಾಯಾಗ್ರಾಹಕರಲ್ಲಿ ಒಬ್ಬರೆನಿಸಿದ್ದಾರೆ. ಇವರು ಮೂಲತಃ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು ನಂತರ ಛಾಯಾಗ್ರಹಣದ ಗೀಳು ಉಂಟಾಗಿ ತಮ್ಮಲ್ಲಿ ಅಡಗಿದ್ದ ಅದ್ಭುತ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಇವರ ಪ್ರತಿಭೆಗೆ ಭಾರತ ದೇಶದಲ್ಲಿನ ಸುತ್ತಾಟ ಪ್ರಮುಖ ಕಾರಣವಾಗಿರುವುದನ್ನು ಮರೆಯುವಂತಿಲ್ಲ.

ವಿಶೇಷ ಲೇಖನ : ಹಳೆಯ ಕರ್ನಾಟಕದ ಮನಸೆಳೆವ ಚಿತ್ರಗಳು

19 ನೆಯ ಶತಮಾನದ ಸಂದರ್ಭದಲ್ಲಿ ಭಾರತ ಹೇಗಿತ್ತು ಎಂದೊಮ್ಮೆ ಯೋಚಿಸಿದರೆ ಸಾಕು, ಕುತೂಹಲ ಉಂಟಾಗದಿರಲು ಸಾಧ್ಯವೆ ಇಲ್ಲ. ಆಗ ಪ್ರಮುಖವಾಗಿ ಉತ್ತರ ಭಾರತ ಸ್ಥಳಗಳು ಹೆಚ್ಚಾಗಿ ಮಂಚೂಣಿಯಲ್ಲಿದ್ದುದರಿಂದ, ಸ್ಯಾಮ್ಯುಯೆಲ್ ತಮ್ಮ ಏಳು ವರ್ಷಗಳ ಪ್ರವಾಸದಲ್ಲಿ ಹಲವು ರೋಮಾಂಚನಕಾರಿ ಭಾರತದ ಪ್ರಮುಖ ಸ್ಥಳಗಳ ಅಂದಿನ ಸ್ಥಿತಿಯನ್ನು ತಮ್ಮ ಲೆನ್ಸುಗಳಲ್ಲಿ ಸೆರೆ ಹಿಡಿದಿದ್ದಾರೆ. ನಿಮಗೂ ಸಹ ಅಂದಿನ ಕಾಲದ ಭಾರತದ ಸ್ಥಳಗಳನ್ನು ನೋಡುವ ಬಯಕೆ ಇದೆಯೆ? ಹಾಗಾದರೆ ಈ ಸ್ಲೈಡುಗಳಲ್ಲಿ ನೋಡಿ ಸವಿಯಿರಿ. ನೀವೇನಾದರೂ ಈ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದರೆ ಕಾಲದ ಕಪಿಮುಷ್ಠಿಯಿಂದಾದ ಬದಲಾವಣೆಗಳನ್ನು ಗಮನಿಸಲು ಪ್ರಯತ್ನಿಸಿ.

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಚಂಬಾ : ಹಿಮಾಚಲ ಪ್ರದೇಶ ರಾಜ್ಯದ ಕಂಗ್ರಾ ಕಣಿವೆಯಲ್ಲಿರುವ ಚಂಬಾ ಪಟ್ಟಣದ ಮಾರುಕಟ್ಟೆ ಪ್ರದೇಶ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ರಾಜಸ್ಥಾನದ ಭರತ್ಪುರ ಪಟ್ಟಣದಲ್ಲಿರುವ ದೀಗ್ ಅರಮನೆ ಅಥವಾ ಗೋಪಾಲ ಭವನ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾದಲ್ಲಿರುವ ದಕ್ಷಿಣೇಶ್ವರ ಕಾಳಿ ಮಂದಿರ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಕೊಲ್ಕತ್ತಾದಲ್ಲಿರುವ ಸರ್ಕಾರಿ ಭವನ, 1860 ರಿಂದ 1870 ರ ಮಧ್ಯದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಭಾರತದ ಮುಕುಟ ಎಂದೆ ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಶ್ಮೀರ ಕಣಿವೆಯ ಚಿತ್ರ. 1860 ರಿಂದ 1870 ರ ಮಧ್ಯದಲ್ಲಿ.

ಚಿತ್ರಕೃಪೆ: Wellcome Images

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರ ಪ್ರದೇಶ ರಾಜ್ಯದ ರಾಜಧಾನಿ ನಗರ ಲಖನೌನ ಬಾರಾ ಇಮಾಂಬರಾ ಸಂಕೀರ್ಣದ ರುಮಿ ದರ್ವಾಜಾ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಕೊಲ್ಕತ್ತಾದ ಕಾಲಿ ಘಾಟ್ ಬಳಿಯಿರುವ ನಲ್ಲಾ ಅಥವಾ ಆದಿ ಗಂಗಾ ನದಿ ದಂಡೆ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ವಾರಣಾಸಿಯ ಗಂಗಾ ನದಿ ತಟದಲ್ಲಿರುವ ವಿವಿಧ ಘಾಟ್ ಗಳು ಹಾಗೂ ದೇವಾಲಯಗಳು. 1865 ರ ಸಂದರ್ಭದಲ್ಲಿ.

ಚಿತ್ರಕೃಪೆ: wikipedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರ ಪ್ರದೇಶ ಲಖನೌನ ಹುಸ್ಸೇನಾಬಾದ್ ಬಜಾರ್ ನ ಒಂದು ದೃಶ್ಯ. 1860 ರಿಂದ 1870 ರ ಮಧ್ಯದಲ್ಲಿ.

ಚಿತ್ರಕೃಪೆ: Cpt.a.haddock

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಉತ್ತರ ಪ್ರದೇಶದ ಆಗ್ರಾ ಪಟ್ಟಣದಲ್ಲಿರುವ ವಿಶ್ವ ಪ್ರಸಿದ್ಧ ತಾಜ್ ಮಹಲ್, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: wikipedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರಾಖಂಡ ರಾಜ್ಯದ ಪ್ರಖ್ಯಾತ ತೀರ್ಥ ಕ್ಷೇತ್ರ ಹರಿದ್ವಾರ 1866 ರಲ್ಲಿ.

ಚಿತ್ರಕೃಪೆ: wikipedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರ ಪ್ರದೇಶದ ಫತೇಹ್ ಪುರ್ ಸಿಕ್ರಿಯಲ್ಲಿ ಅಕ್ಬರ ನಿರ್ಮಿಸಿದ ಹಲವು ರಚನೆಗಳ ಪೈಕಿ ಒಂದಾದ ರಾಣಿಯ ವಸತಿ ಗೃಹ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಲಖನೌ ನಗರದಲ್ಲಿರುವ ಒಂದು ಅರಮನೆ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಇಂದಿಗೂ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರನ್ನು ಸೆಳೆಯುತ್ತಿರುವ ಲಖನೌನ ಕೇಸರ್ ಬಾಗ್ ಅರಮನೆ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಮಿಳುನಾಡಿನ ತಿರುಚ್ಚಿಯಲ್ಲಿರುವ ಶ್ರೀರಂಗಂ ದೇವಸ್ಥಾನ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಮಿಳುನಾಡಿನ ಪ್ರಖ್ಯಾತ ಗಿರಿಧಾಮ ಊಟಿಯಲ್ಲಿನ ತೋಡಾ ಬುಡಕಟ್ಟು ಜನಾಂಗದವರು. 1869 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಪಶ್ಚಿಮ ಬಂಗಾಳ ರಾಜ್ಯದ ಏಕೈಕ ಗಿರಿಧಾಮ ದಾರ್ಜೀಲಿಂಗ್. 1870 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಮಿಳುನಾಡಿನ ತಂಜಾವೂರು ಪಟ್ಟಣದ ರಸ್ತೆ ಬದಿಯೊಂದರಲ್ಲಿ ನಿಯಮಿತ ಅಂತರದಲ್ಲಿ ಸ್ಥಿತವಿರುವ ಮೂರು ದೇವಸ್ಥಾನ ಗೋಪುರಗಳು. 1869 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಂಜಾವೂರಿನ ಬೃಹದೇಶ್ವರ ದೇವಾಲಯ ಸಂಕೀರ್ಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. 1869 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಂಜಾವೂರಿನ ಬೃಹದೇಶ್ವರ ದೇವಾಲಯ ಸಂಕೀರ್ಣ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಪ್ರಖ್ಯಾತ ಐತಿಹಾಸಿಕ ಕೇಂದ್ರ ಉತ್ತರ ಪ್ರದೇಶದ ಫತೇಹ್ಪುರ್ ಸಿಕ್ರಿಯಲ್ಲಿರುವ ಪಂಚ ಮಹಲ್. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಫತೇಹ್ಪುರ್ ಸಿಕ್ರಿಯಲ್ಲಿರುವ ಅಕ್ಬರ ಮಹಾರಾಜನ ಆಸ್ಥಾನದಲ್ಲಿದ್ದ ನವರತ್ನಗಳ ಪೈಕಿ ಒಂದಾದ ಬೀರ್ಬಲ್ ನ ಅರಮನೆ. 1870 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ತಿರುಚ್ಚಿಯ ಶ್ರೀರಂಗಂನಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ರಾಜ ಗೋಪುರ. 1870 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರ ಪ್ರದೇಶದ ಗಂಗಾ ಹಾಗೂ ಗೋಮತಿ ನದಿಗಳು ಸಂಗಮಗೊಳ್ಳುವ ಸ್ಥಳದ ಬಳಿ ಹಾಗೂ ವಾರಣಾಸಿಯಿಂದ ಈಶಾನ್ಯಕ್ಕೆ 13 ಕಿ.ಮೀ ದೂರದಲ್ಲಿರುವ ಸಾರನಾಥ ಎಂಬ ಚಿಕ್ಕ ಪಟ್ಟಣದಲ್ಲಿರುವ ಬೌದ್ಧ ಧರ್ಮದ ಸ್ತೂಪ.
1860 ರಿಂದ 1870 ರ ಮಧ್ಯದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ದೆಹಲಿಯ ಪ್ರಖ್ಯಾತ ಚಾಂದನಿ ಚೌಕ್ ಬೀದಿ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ದೆಹಲಿಯಲ್ಲಿ ಸಮಾಧಿ ಸ್ಮಾರಕಗಳಿರುವ ಒಂದು ಉದ್ಯಾನ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರಾಖಂಡ ರಾಜ್ಯದಲ್ಲಿರುವ ಗಿರಿಧಾಮ ಪ್ರದೇಶ ನೈನಿತಾಲ್ ನಲ್ಲಿರುವ ನೈನಿತಾಲ್ ಕೆರೆ. 1865 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಕಾಶ್ಮೀರದ ಶ್ರೀನಗರದಲ್ಲಿರುವ ಝೀಲಂ ನದಿಯ ದಾಲ್ ಕೆನಾಲ್, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Fæ

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ದೆಹಲಿಯ ಪ್ರಖ್ಯಾತ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾದ ಕುತುಬ್ ಮಿನಾರ್, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ರಾಜಸ್ಥಾನದ ಭರತ್ಪುರದಲ್ಲಿರುವ ದೀಗ್ ಕೋಟೆ, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಕಾಶ್ಮೀರದ ಶ್ರೀನಗರದಲ್ಲಿರುವ ಝೀಲಂ ನದಿಯಿಂದ ರೂಪಗೊಂಡ ದಾಲ್ ಸರೋವರ ಹಾಗೂ ಪಕ್ಕದಲ್ಲಿರುವ ಚುನಾರ್ ಬಾಗ್ (ಉದ್ಯಾನ), 1863 ರಿಂದ 1867 ರ ಮಧ್ಯೆ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಕಾಶ್ಮೀರದ ಶ್ರೀನಗರದಲ್ಲಿರುವ ಮುಘಲ್ ರಾಜರಿಂದ ನಿರ್ಮಿತ ಶಾಲಿಮಾರ್ ಉದ್ಯಾನ, 1864 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಭೀಮತಲ್ ನಲ್ಲಿರುವ ಭೀಮತಲ್ ಕೆರೆ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಮಹಾರಾಷ್ಟ್ರದ ಪುಣೆಯಲ್ಲಿರುವ ಪಾರ್ವತಿ ಬೆಟ್ಟ. ಇಂದು ಪಾರ್ವತಿ ದೇವಿಗೆ ಮುಡಿಪಾಗಿರುವುದೂ ಸೇರಿದಂತೆ ಇತರೆ ನಾಲ್ಕು ದೇವಸ್ಥಾನಗಳನ್ನು ಬೆಟ್ಟದ ತುದಿಯಲ್ಲಿ ನೋಡಬಹುದು.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ನಲ್ಲಿರುವ ಒಂದು ಸೇತುವೆ. 1865 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಮುಂಬೈನ ರ್‍ಯಾಂಪರ್ಟ್ ರೋವ್,1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಮುಂಬೈನಲ್ಲಿರುವ ಶೇಖ್ ಮೆಮನ್ ಬೀದಿ, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಮುಂಬೈನಲ್ಲಿದ್ದ ಅಂದಿನ ಎಸ್ಪ್ಲಾನೇಡ್ ಹೋಟೆಲ್, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ಇಂದು ಛತ್ರಪತಿ ಶಿವಾಜಿ ಟರ್ಮಿನಸ್ ಆಗಿರುವ ಅಂದಿನ ಮುಂಬೈನ ಪ್ರಖ್ಯಾತ ವಿಕ್ಟೋರಿಯಾ ಟರ್ಮಿನಸ್, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಹಳೆಯ ಭಾರತ, ಮನಸೆಳೆವ ಭಾರತ:

ಹಳೆಯ ಭಾರತ, ಮನಸೆಳೆವ ಭಾರತ:

ರಾಜಸ್ಥಾನದ ಭರತ್ಪುರ್ ಕೋಟೆ, 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X