Search
  • Follow NativePlanet
Share
» »ಬೆಂಗಳೂರಿನ ಝಗಮಗಿಸುವ ಬಡಾವಣೆಗಳು

ಬೆಂಗಳೂರಿನ ಝಗಮಗಿಸುವ ಬಡಾವಣೆಗಳು

By Vijay

ದೇಶದ ಯಾವುದೆ ಭಾಗ ಅಥವಾ ರಾಜ್ಯಗಳಿಂದರಲಿ ಒಂದೊಮ್ಮೆ ಬೆಂಗಳೂರಿಗೆಂದು ಬಂದರೆ ಸಾಕು, ತಮ್ಮ ಎರಡನೆಯ ಮನೆ ಎಂಬಂತೆ ಸಲಿಗೆಯಿಂದ ಇದ್ದು ಬಿಡುವಂತೆ ಮಾಡುತ್ತದೆ ಭಾರತದ ಅತಾಧುನಿಕ ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರು. ಬೆಂಗಳೂರು, ತನ್ನ ವೈಭವಯುತ ಮಾಲ್ ಗಳು,ಸದಾ ಕಿಕ್ಕಿರಿದು ತುಂಬಿರುವ ರೋಡ್ ಗಳು ಮತ್ತು ಎತ್ತರದ ಕಟ್ಟಡಗಳಿಂದ, ಪ್ರಸ್ತುತ ಭಾರತದ ಹೊಸ ಮುಖವಾಗಿ ಹೊರಹೊಮ್ಮುತ್ತಿದೆ. ಈಗಿನ ಯುವಜನತೆಗೆ ತಕ್ಕುದಾದ ಸ್ಥಳ ಎಂದೇ ಹೇಳಬಹುದು.

8000 ರೂ. ಗಳವರೆಗೆ ಕಡಿತ : ಎಲ್ಲ ಉಚಿತ ಕೂಪನ್ನುಗಳನ್ನು ಪಡೆಯಿರಿ

"ಪಿಂಚಣಿದಾರರ ಸ್ವರ್ಗ", "ಉದ್ಯಾನಗಳ ನಗರ", "ಭಾರತದ ಸಿಲಿಕಾನ್ ವ್ಯಾಲಿ" ಎಂಬೆಲ್ಲ ಬಿರುದುಗಳನ್ನು ಪಡೆದಿರುವ ಬೆಂಗಳೂರು ನಗರವು ಲವಲವಿಕೆಯಿಂದ ಕೂಡಿದ್ದು, ಇಲ್ಲಿರುವ ಹಲವಾರು ವಿವಿಧ ಬಡಾವಣೆಗಳು, ಪ್ರದೇಶಗಳು ಹುರುಪು ತಂದುಕೊಡುವಂತಹ ವಾತಾವರಣದಿಂದ ಸದಾ ತುಂಬಿರುತ್ತವೆ. ಆದ ಕಾರಣ ಒಂದೊಮ್ಮೆ ಬೆಂಗಳೂರಿನಲ್ಲಿ ಸಂಚರಿಸಲು ಹೊರಟರೆ ಸಾಕು ಬೇಸರ ಎಂಬ ಅಂಶವೇ ನಿಮ್ಮ ಹತ್ತಿರ ಸುಳಿಯದು. ಅತಿಯಾದ ವಾಹಣ ದಟ್ಟಣೆ ಹಾಗು ಅದರಿಂದುಂಟಾಗುವ ಗದ್ದಲದ ಮಧ್ಯೆಯೂ ಒಂದು ರೀತಿಯ ಹುಮ್ಮಸ್ಸನ್ನು ಬೆಂಗಳೂರು ನಗರ ಕರುಣಿಸುತ್ತದೆ.

ವಿಶೇಷ ಲೇಖನ : ವಿಶಿಷ್ಟ ಅನುಭವ ನೀಡುವ ಕೊಲ್ಕತ್ತಾ ನಗರ ಜೀವನ

ಇನ್ನೂ ರಾತ್ರಿ ಹಾಗೂ ವಾರಾಂತ್ಯಗಳ ದಿನದಂದು ಬೆಂಗಳೂರು ಸಿಂಗರಿಸಿಕೊಳ್ಳುವ ರೀತಿಯನ್ನು ವರ್ಣಿಸುವುದಕ್ಕಿಂತ ಸಾಕ್ಷಾತ್ ನೋಡಿಯೇ ಅನುಭವಿಸಬೇಕು. ಹದಿಹರೆಯದವರನ್ನು ಸೆಳೆಯುವ ನಾನಾ ರೀತಿಯ ಅಂಗಡಿ ಮುಗ್ಗಟ್ಟುಗಳು, ವೈವಿಧ್ಯಮಯ ಹಾಗೂ ಶೀಘ್ರವಾಗಿ ತಯಾರಿಸಲಾಗುವ ತಿಂಡಿಗಳ ಮಳಿಗೆಗಳು, ಕಾಲೇಜು ಹಾಗೂ ಉದ್ಯಾನಗಳ ಸುತ್ತಮುತ್ತ ನಿಲ್ಲುವ ಚಾಟ್ ಅಥವಾ ಕುರುಕಲು ತಿಂಡಿಗಳ ವ್ಯಾಪಾರಿಗಳು, ಅಲ್ಲಲ್ಲಿ ಸಂಗೀತ ಹೊಮ್ಮಿಸುವ ಕ್ಲಬ್ಬು ಪಬ್ಬುಗಳು, ಮಾಲ್ ಗಳು, ಸಿನೆಮಾ ಮಂದಿರಗಳು ಎಲ್ಲವೂ ಸೇರಿ ಒಂದು ಮಾಯಾ ಲೋಕವನ್ನೆ ಸೃಷ್ಟಿಸಿರುತ್ತವೆ.

ವಿಶೇಷ ಲೇಖನ : ಭಾರತದ ಹೃದಯ ದೆಹಲಿ ನಗರ ನೊಟ

ಪ್ರಸ್ತುತ ಲೇಖನದ ಮೂಲಕ ಬೆಂಗಳೂರಿನ ಕೆಲ ನಿತ್ಯೋತ್ಸಾಹದಿಂದ ಕೂಡಿರುವ ಬಡಾವಣೆಗಳ ಕುರಿತು ತಿಳಿಯಿರಿ. ಈ ಸ್ಥಳಗಳಲ್ಲಿ ಒಮ್ಮೆಯಾದರೂ ಸುತ್ತಾಡಿ, ಶಾಪಿಂಗ್ ಮಾಡಿದರೆ ಸಾಕು ಆ ನೆನಪುಅಗಳು ಬಹು ಕಾಲದವರೆಗೆ ನಿಮ್ಮ ಮನದಲ್ಲಿ ಉಳಿದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಕೋರಮಂಗಲ : 60 - 70 ರ ದಶಕದಲ್ಲಿ ಕೊಂಪೆಯಂತಿದ್ದ ಕೋರಮಂಗಲ ಇಂದು ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆ ಹಾಗೂ ದುಬಾರಿ ವಸತಿ ಪ್ರದೇಶ. ಬೆಂಗಳೂರಿನಲ್ಲಿ ಐಟಿ ಕ್ರಾಂತಿಯ ನಂತರ, ಬೆಂಗಳೂರು ಹೊರವಲಯದ ಸಾಕಷ್ಟು ಪ್ರದೇಶಗಳು ಶೀಘ್ರಗತಿಯಲ್ಲಿ ಅಭಿವೃದ್ಧಿಗೊಂಡವು. ಇದೆ ಸಂದರ್ಭದಲ್ಲಿ ಕೋರಮಂಗಲವೂ ಸಹ ಸಾಕಷ್ಟು ಅಭಿವೃದ್ಧಿಗೊಂಡಿತು.

ಚಿತ್ರಕೃಪೆ: Augustus Binu

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಇಂದು ಇಲ್ಲಿ ಸಾಫ್ಟ್ ವೇರ್ ಕಂಪನಿಗಳು ಬಹುಸಂಖ್ಯಯಲ್ಲಿ ಇರುವುದಲ್ಲದೆ ವಿವಿಧ ರೀತಿಯ ಹೋಟೆಲುಗಳು, ಬಹು ಮಹಡಿ ವಸತಿ ಕಟ್ಟಡಗಳು, ಶಾಪಿಂಗ್ ಮಾಲ್ ಗಳು ತಲೆ ಎತ್ತಿವೆ. ಇಲ್ಲಿ ಕನ್ನಡಿಗರೊಂದಿಗೆ ಸಾಕಷ್ಟು ಜನ ಹೊರಗಿನವರು ತಮ್ಮ ಬದುಕನ್ನು ರೂಪಿಸಿಕೊಂಡು ವಾಸಿಸುತ್ತಿರುವುದನ್ನು ಕಾಣಬಹುದು.

ಚಿತ್ರಕೃಪೆ: Ashwin Kumar

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಅಗಲವಾದ ರಸ್ತೆಗಳು, ಸ್ವಚ್ಛ ಪರಿಸರ ಈ ಸ್ಥಳದ ಮಹತ್ವವನ್ನು ಹೆಚ್ಚಿಸಿದ್ದು ಸಾಕಷ್ಟು ಜನ ದಟ್ಟಣೆಯನ್ನು ಪ್ರತಿ ನಿತ್ಯ ಕಾಣುತ್ತದೆ ಕೋರಮಂಗಲ.

ಚಿತ್ರಕೃಪೆ: Shiva Shenoy

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಜೆ ಪಿ ನಗರ : ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ. "ಜಯಪ್ರಕಾಶ ನಾರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರಿಗಳಾದ ದಿ. ಶ್ರೀ ರಾಮಕೃಷ್ಣ ಹೆಗ್ಗಡೆಯವರು ಸ್ಥಾಪಿಸಿದ್ದಾರೆ. ರಂಗಶಂಕರದಂತಹ ಆಧುನಿಕ ನಾಟಕ ಕಲಾ ಮಂದಿರಕ್ಕೆ ಮನೆಯಾಗಿರುವ ಜೆ ಪಿ ನಗರದಲ್ಲಿ ಪ್ರಖ್ಯಾತ ನಟರಾದ ಅಂಬರೀಶ್, ಸುದೀಪ್, ತಾರಾ, ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ, ನಾಟಕಕಾರ ಗಿರೀಶ್ ಕರ್ನಾಡ್ ಮುಂತಾದವರ ಮನೆಗಳಿವೆ.

ಚಿತ್ರಕೃಪೆ: Swaroop C H

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಜಯನಗರ : ಒಂಬತ್ತು ವಿಭಾಗಗಳುಳ್ಳ ಬೆಂಗಳೂರಿನ ಜಯನಗರ ಬಡಾವಣೆಯು ಏಷಿಯಾ ಖಂಡದಲ್ಲೆ ದೊಡ್ಡದಾದ ಬಡಾವಣೆಗಳ ಪೈಕಿ ಒಂದಾಗಿದೆ. ಒಂದನೆಯ ಬ್ಲಾಕಿನಿಮ್ದ ಹಿಡಿದು ಒಂಬತ್ತನೆಯ ಬ್ಲಾಕಿನವರೆಗೆ ಸಾಕಷ್ಟು ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಹಾಗೂ ಶಾಪಿಂಗ್ ಮಳಿಗೆಗಳನ್ನು ಜಯನಗರದಲ್ಲಿ ಕಾಣಬಹುದು. ಜಯನಗರದ ಸೌತ್ ಎಂಡ್ ವೃತ್ತದ ಬಳಿಯಿರುವ ಅಂಬರ ಚುಂಬನ.

ಚಿತ್ರಕೃಪೆ: Guru Nandan

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರರಿಂದ ಈ ಸ್ಥಳಕ್ಕೆ ಜಯನಗರ ಬಂದಿರಬಹುದೆಂದು ಹೇಳಲಾಗುತ್ತದಾದರೂ ಅದಕ್ಕೆ ಪೂರಕವಾದ ಯಾವುದೆ ಆಧಾರಗಳಿಲ್ಲ. ಜಯನಗರವು ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗು ಬಿ.ಟಿ.ಎಮ್. ಬಡಾವಣೆಗಳಿಂದ ಸುತ್ತುವರಿದಿದೆ. ಜಯನಗರದ ನಂದಾ ಮುಖ್ಯ ರಸ್ತೆ.

ಚಿತ್ರಕೃಪೆ: Ravinder M A

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಇಲ್ಲಿ ಬಹುಮಹಡಿಯ ಕಾಂಪ್ಲೆಕ್ಸ್ ನಾಲ್ಕನೆಯ ಬ್ಲಾಕ್ ನಲ್ಲಿ ಇರುವುದರಿಂದ ಇದು ಬಹಳ ಜನಪ್ರಿಯ ಸ್ಠಳವಾಗಿದೆ. ಬೆಂಗಳೂರಿನ ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಜಯನಗರಕ್ಕೆ ಸಾಕಷ್ಟು ಬಸ್ಸುಗಳು ಲಭ್ಯವಿದೆ. ಮತ್ತೊಂದು ಸಂಗತಿ ಎಂದರೆ ಇಲ್ಲಿ ಸಾಕಷ್ಟು ಆಭರಣಗಳ ಮಳಿಗೆಗಳನ್ನು ಕಾಣಬಹುದು.

ಚಿತ್ರಕೃಪೆ: Morgan Davis

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬಸವನಗುಡಿ : ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳ ಪೈಕಿ ಬಸವನಗುಡಿ ಬಡಾವಣೆಯೂ ಸಹ ಒಂದು. ಬಸವನಗುಡಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಬಡಾವಣೆ. ಅಗಲವಾದ ರಸ್ತೆ, ಸಾಂಪ್ರದಾಯಿಕ ಶೈಲಿಯ ಕಟ್ಟಡಗಳು, ಪೂಜಾ ಸಾಮಗ್ರಿಗಳು ದೊರೆಯುವಂತಹ ಮಳಿಗೆಗಳು ಹಾಗೂ ಉದ್ಯಾನಗಳಿಂದ ತುಂಬಿದೆ ಈ ಬಡಾವಣೆ. ರಾಮಕೃಷ್ಣ ಆಶ್ರಮದ ಮುಂಭಾಗದಲ್ಲಿರುವ ವಿವೇಕಾನಂದ ಉದ್ಯಾನ.

ಚಿತ್ರಕೃಪೆ: Srinivasa S

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬಸವನಗುಡಿಯು ಧಾರ್ಮಿಕವಾಗಿಯೂ ಮಹತ್ವ ಪಡೆದಿದ್ದು ಇಲ್ಲಿ ಸಾಕಷ್ಟು ಪ್ರಸಿದ್ಧ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಈ ಪ್ರದೇಶದಲ್ಲಿರುವ ದೊಡ್ಡ ಬಸವಣ್ಣ (ನಂದಿ) ದೇವಸ್ಥಾನದಿಂದಾಗಿ ಇದಕ್ಕೆ ಬಸವನಗುಡಿ ಎಂದು ಹೆಸರು ಬಂದಿದೆ.

ಚಿತ್ರಕೃಪೆ: Sarvagnya

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಹೆಚ್ಚು ಕನ್ನಡ ಜನರನ್ನು ಹೊಂದಿರುವ ಬಸವನಗುಡಿ ಬಡಾವಣೆಯು ಬೆಂಗಳೂರಿನ ಅತಿ ಹಳೆಯ ಬಡಾವಣೆಗಳಲ್ಲೊಂದಾಗಿದೆ. ಇಲ್ಲಿರುವ ರಾಮಕೃಷ್ಣ ಆಶ್ರಮ ಆಧ್ಯಾತ್ಮಿಕ ಭಾವನೆಯನ್ನು ಪುಳಕಿತಗೊಳಿಸಿದರೆ, ಗಾಂಧಿ ಬಜಾರ್ ಸಾಂಪ್ರದಾಯಿಕ ಶೈಲಿಯ ಖರೀದಿಗಳಿಗೆ ಹೆಸರುವಾಸಿಯಾಗಿದೆ. ಇನ್ನೂ ಬ್ಯೂಗಲ್ ಉದ್ಯಾನವಂತೂ ಒತ್ತಡವನ್ನು ಹೊಡೆದೊಡಿಸುವುದರಲ್ಲಿ ಪರಿಣಾಮಕಾರಿಯಾಗಿದೆ.

ಚಿತ್ರಕೃಪೆ: Rkrish67

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಕನ್ನಡದಲ್ಲಿ ಕಹಲೆ ಎಂದು ಕರೆಯಲ್ಪಡುವ ಬ್ಯೂಗಲ್ ರಾಕ್ ಮೂಲತಃ ಭೂಮಟ್ಟದಿಂದ ಅಂಕು ಡೊಂಕಾಗಿ ಎತ್ತರದಲ್ಲಿ ರೂಪಗೊಂಡ ಒಂದು ಶಿಲೆಯ ದಿಬ್ಬವಾಗಿದ್ದು, ಇದರ ಆಯಸ್ಸು ಸುಮಾರು 3,000 ಮಿಲಿಯನ್ ವರ್ಷಗಳಷ್ಟು ಎಂದು ಅಂದಾಜಿಸಲಾಗಿದೆ. ಪ್ರಖ್ಯಾತ ಕನ್ನಡ ಸಾಹಿತಿ ಡಿ.ವಿ.ಜಿ ಅವರ ನೆಚ್ಚಿನ ತಾಣವಾಗಿತ್ತು ಈ ಉದ್ಯಾನ.

ಚಿತ್ರಕೃಪೆ: Andreas Metz

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮ.

ಚಿತ್ರಕೃಪೆ: Suma

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬಿಟಿಎಂ ಲೇ ಔಟ್ : ಬಿ. ಟಿ. ಎಂ. ದಕ್ಷಿಣ ಬೆಂಗಳೂರಿನ ಭಾಗದಲ್ಲಿರುವ ಒಂದು ಬಡಾವಣೆಯ ಹೆಸರು. ಅಷ್ಟಕ್ಕೂ ಈ ಬಡಾವಣೆಗೆ ಈ ರೀತಿಯ ಹೆಸರು ಬರಲು ಕಾರಣ ಏನೆಂದು ನಿಮಗೆ ಗೊತ್ತಾ? ಹೌದು, ಬನ್ನೇರುಘಟ್ಟ, (ಭೈರಸಂದ್ರ), ತಾವರೆಕೆರೆ ಹಾಗೂ ಮಡಿವಾಳ ಪ್ರದೇಶಗಳ ಸಂಕ್ಷಿಪ್ತ ರೂಪವಾಗಿ ಇದಕ್ಕೆ ಬಿ.ಟಿಎಂ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Radhatanaya

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಇದು 'ಕುವೆಂಪು ನಗರ' ಎಂದು ಮರುನಾಮಕರಣ ಮಾಡಲ್ಪಟ್ಟಿದ್ದರೂ ಬಿಟಿಎಂ ಲೇಔಟ್ ಎಂಬ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಬೆಂಗಳೂರಿನ 'ರಿಂಗ್ ರೋಡ್' ಎಂದು ಕರೆಯಲ್ಪಡುವ ರಸ್ತೆ ಈ ಬಡಾವಣೆಯ ಮೂಲಕ ಹಾದುಹೋಗುತ್ತದೆ. 'ಬಿ.ಟಿ.ಎಮ್. ಲೇಔಟ್ ಮೊದಲ ಹಂತ ಮತ್ತು ಎರಡನೇ ಹಂತವನ್ನು ಈ 'ರಿಂಗ್ ರೋಡ್' ಬೇರ್ಪಡಿಸುತ್ತದೆ.

ಚಿತ್ರಕೃಪೆ: Radhatanaya

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಅತಿದೊಡ್ಡ ಕೆರಗಳಲ್ಲಿ ಒಂದಾದ ಮಡಿವಾಳ ಕೆರೆ ಈ ಬಡಾವಣೆಗೆ ತಾಗಿಕೊಂಡಿದ್ದು ದೇಶೀ ಮತ್ತು ವಿದೇಶಿ ಪಕ್ಷಿಗಳ ನೆಲೆವೀಡಾಗಿದೆ. ಈ ಬಡಾವಣೆ 'ಕೋರಮಂಗಲ,' 'ಎಚ್.ಎಸ್.ಆರ್. ಲೇಔಟ್', 'ಬನ್ನೇರುಘಟ್ಟ ರಸ್ತೆ'. 'ಜೆ.ಪಿ.ನಗರ', ಮತ್ತು 'ಜಯನಗರ'ಕ್ಕೆ ಹತ್ತಿರದಲ್ಲಿದ್ದು ವಾಣಿಜ್ಯ ಸಂಸ್ಥೆಗಳು ಮತ್ತು ವಸತಿ ಗೃಹಗಳ ಸೌಕರ್ಯಕ್ಕೆ ಬಹಳ ಅನುಕೂಲಕರವಾದ ಪರಿಸರದಲ್ಲಿದೆ.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಗಾಂಧಿ ನಗರ : ಮೆಜೆಸ್ಟಿಕ್ ಬೆಂಗಳೂರು ನಗರದ ಹೃದಯ ಬಡಿತ ಎಂದರೆ ತಪ್ಪಾಗಲಾರದು. ಅತ್ಯಂತ ಜನಸಂದಣಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಎಲ್ಲ ರೀತಿಯ ವಸ್ತುಗಳು ಅತಿ ಕಡಿಮೆ ದರದಿಂದ ಹಿಡಿದು ದುಬಾರಿ ಮೊತ್ತದವರೆಗೂ ಲಭಿಸುತ್ತವೆ.

ಚಿತ್ರಕೃಪೆ: Shayak Sen

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಕೇಂದ್ರ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳು ಈ ಪ್ರದೇಶದಲ್ಲೆ ಇರುವುದರಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರುತ್ತಾರೆ. ರಸ್ತೆ ಬದಿಯ ಪುಟ್ಟ ಚಹಾ ಅಂಗಡಿಯಿಂದ ಹಿಡಿದು ಪಂಚತಾರಾ ಸೌಲಭ್ಯವುಳ್ಳ ಹೋಟೆಲ್‍ಗಳು ಇಲ್ಲಿವೆ. ಬೆಂಗಳೂರಿನ ಸಂಸ್ಕೃತಿಯನ್ನು ಅತಿ ಹತ್ತಿರದಿಂದ ನೋಡ ಬಯಸಲು ಇಷ್ಟವಿದ್ದಲ್ಲಿ ಈ ಪ್ರದೇಶದಲ್ಲಿ ಒಮ್ಮೆ ಸುತ್ತಾಡಿದರೆ ಸಾಕು.

ಚಿತ್ರಕೃಪೆ: Charles Haynes

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬಸವೇಶ್ವರ ನಗರ : ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಬಸವೇಶ್ವರ ನಗರವು ಒಂದು ಪ್ರತಿಷ್ಠಿತ ಬಡಾವಣೆಯಾಗಿದೆ. ಸಾಕಷ್ಟು ಆಧುನಿಕ ವಾಣಿಜ್ಯ ಕಟ್ಟಡಗಳು, ಮಳಿಗೆಗಳು ತಲೆ ಎತ್ತಿ ನಿಂತಿರುವ ಈ ಬಡಾವಣೆಯು ಕಮಲಾನಗರ, ಶಾರದ ಕಾಲೋನಿ, ಕೆ.ಎಚ್.ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಕುರುಬರಹಳ್ಳಿ, ಸಾಣೆಗುರುವನಹಳ್ಳಿ ಮತ್ತು ಮಂಜುನಾಥನಗರಗಳನ್ನು ಒಳಗೊಂಡಿದೆ. ಬಸವೇಶ್ವರ ನಗರದ ಅಂಬೇಡ್ಕರ್ ಮೈದಾನದಲ್ಲಿರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣ.

ಚಿತ್ರಕೃಪೆ: Dvrkumar

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮಲ್ಲೇಶ್ವರಂ : ಬೆಂಗಳೂರಿನ ಪುರಾತನ ಪ್ರದೇಶಗಳ ಪೈಕಿ ಒಂದಾಗಿರುವ ಮಲ್ಲೇಶ್ವರಂ ಒಂದು ಸಾಂಪ್ರದಾಯಿಕ ಸ್ಥಳವಾಗಿದೆ. ಹಲವಾರು ದೇವಸ್ಥಾನಗಳನ್ನು ಹೊಂದಿರುವ ಈ ಪ್ರದೇಶವು ಪೂಜಾ ಹಾಗು ಗ್ರಂಥಿಗೆ ಸಾಮಗ್ರಿಗಳ ಮಳಿಗೆಗಳಿಗೆ ಪ್ರಸಿದ್ಧವಾಗಿದೆ. ಹಬ್ಬ ಹರಿದಿನಗಳ ಸಾಕಷ್ಟು ಸಾಮಗ್ರಿಗಳು ಈ ಪ್ರದೇಶದಲ್ಲಿ ದೊರಕುತ್ತವೆ. ಈ ಪ್ರದೇಶವು ಹೂವಿನ ಹಾಗು ತರಕಾರಿ ಮಾರುಕಟ್ಟೆಗೂ ಸಹ ಪ್ರಸಿದ್ಧವಾಗಿದೆ.

ಚಿತ್ರಕೃಪೆ: ☻☺

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮಲ್ಲೇಶ್ವರಂನಲ್ಲಿ ಸಾಂಪ್ರದಾಯಿಕ ಹಿಂದೂಗಳು ಬಹಳ ಸಂಖ್ಯೆಯಲ್ಲಿದ್ದು, ಸಾಕಷ್ಟು ಸಮ್ಖ್ಯೆಯಲ್ಲಿ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. 15 ನೆಯ ಕ್ರಾಸಿನಲ್ಲಿ ಶಿರಡಿ ಸಾಯಿ ದೇವಸ್ಥಾನದಿಂದ ಹಿಡಿದು ಅದರ ಹಿಂಬದಿಯ ರಸ್ತೆಯು ಗಂಗಮ್ಮ, ದಕ್ಷಿಣ ಕಾಶಿ ನಂದಿ ತೀರ್ಥ ಹೀಗೆ ದೇವಾಲಯಗಳಿಂದಲೆ ತುಂಬಿದೆ. ಕಾಡು ಮಲ್ಲೇಶ್ವರನ ದೇವಸ್ಥಾನ. ಇದರಿಂದಾಗಿಯೆ ಈ ಸ್ಥಳಕ್ಕೆ ಮಲ್ಲೇಶ್ವರಂ ಎಮ್ಬ ಹೆಸರು ಬಂದಿದೆ. ಇದು ಶಿರಡ್ಶಿ ಸಾಯಿ ದೇವಸ್ಥಾನದ ಪಕ್ಕದಲ್ಲಿಯೆ ನೆಲೆಸಿದೆ.

ಚಿತ್ರಕೃಪೆ: Shashank B

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮಲ್ಲೇಶ್ವರಂನ ಸಂಜೆಯು ಸಾಕಷ್ಟು ಉತ್ಸಾಹಭರಿತವಾಗಿದ್ದು ಶಾಪಿಂಗ್ ಮಾಡಲು ಇಲ್ಲವೆ ಹಾಗೆ ಸುಮ್ಮನೆ ಸುತ್ತಾಡಲು ಪ್ರೇರೆಪಿಸುತ್ತದೆ.

ಚಿತ್ರಕೃಪೆ: Dave

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮಲ್ಲೇಶ್ವರಂ 18 ನೆ ಕ್ರಾಸಿನಲ್ಲಿರುವ ಸ್ಯಾಂಕಿ ಕೆರೆ. ಮುಂಜಾವಿನ ನಡಿಗೆ ಇಲ್ಲವೆ ಸಂಜೆಯ ಒಂದು ಲಘು ವಿಶ್ರಾಂತಿಗೆ ಈ ಕೆರೆಯು ಹೇಳಿ ಮಾಡಿಸಿದಂತಹ ಪ್ರದೇಶವಾಗಿದೆ. ಸಂಜೆಯ ಸುಂದರ ಸಮಯದಲ್ಲಿ ಹಾಯಾಗಿ ಕೆರೆಯ ಪಕ್ಕದ ಕಟ್ಟೆಗಳಲ್ಲಿ ಕುಳಿತು ಹರಟಿಸುತ್ತ ಆನಂದಿಸಬಹುದು.

ಚಿತ್ರಕೃಪೆ: MizzD

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಇಂದಿರಾ ನಗರ : ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ನೆನಪಿನಲ್ಲಿ ರೂಪಗೊಂಡ ಪೂರ್ವ ಬೆಂಗಳೂರಿನ ಇಂದಿರಾ ನಗರ ಇಂದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಸುಮಾರು 1980 ರ ಸಂದರ್ಭದಲ್ಲಿ ಈ ಬಡಾವಣೆಯ ನಿರ್ಮಾಣವಾಯಿತು. ಸಿಎಂಹೆಚ್ ರಸ್ತೆ.

ಚಿತ್ರಕೃಪೆ: Adkrish22290

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ನಿರ್ಮಾಣವಾದಾಗ ಮಧ್ಯಮ ಸ್ಥಿತಿಯಲ್ಲಿದ್ದ ಈ ಬಡಾವಣೆಯು ಅನೇಕ ಐಟಿ ಕಂಪನಿಗಳಿರುವ ಪ್ರದೇಶಗಳಿಗೆ ಸಾಮಿಪ್ಯದಲ್ಲಿರುವುದರಿಂದ ಶೀಘ್ರವಾಗಿ ಅಭಿವೃದ್ಧಿಗೊಂಡು, ಇಂದು ಬೆಂಗಳೂರಿನ ದುಬಾರಿ ಪ್ರದೇಶಗಳ ಪೈಕಿ ಒಂದೆನೆಸಿದೆ. ಇಂದಿರಾ ನಗರದಲ್ಲಿರುವ ಸಂಗೀತ ಸಭಾ ಎಂಬ ಪ್ರಖ್ಯಾತ ಕಲಾಶಾಲೆ.

ಚಿತ್ರಕೃಪೆ: Indiranagar Seller

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಸಿಎಂಹೆಚ್ ರಸ್ತೆ, ಡಬಲ್ ರಸ್ತೆ ಇಂದಿರಾ ನಗರದ ಪ್ರಮುಖ ಭಾಗಗಳಾಗಿದ್ದು, ಸಾಕಷ್ಟು ಬಗೆಯ ಹೋಟೆಲುಗಳು, ವಾಣಿಜ್ಯ ಕಟ್ಟಡಗಳು, ಆಧುನಿಕ ಉಡುಗೆ ತೊಡುಗೆಗಳ ಮಳಿಗೆಗಳನ್ನು ಈ ಪ್ರತಿಷ್ಠಿತ ಬಡಾವಣೆಯಲ್ಲಿ ಕಾಣಬಹುದಾಗಿದೆ. ಅಲ್ಲದೆ ಇಂದಿರಾ ನಗರ ಮೆಟ್ರೊ ಸಮ್ಪರ್ಕವನ್ನೂ ಸಹ ಹೊಂದಿದ್ದು ನಿಲ್ದಾಣ ಹೊಂದಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Rameshng

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಕೆಆರ್ ಮಾರುಕಟ್ಟೆ : ಕೃಷ್ಣ ರಾಜೇಂದ್ರ ಮಾರುಕಟ್ಟೆ ನಗರದ ಹೃದಯಭಾಗದಲ್ಲಿರುವ ಅತ್ಯಂತ ಜನಸಂದಣಿಯಿಂದ ಕೂಡಿರುವ ಸದಾ ಚಟುವಟಿಕೆಯಿಂದ ಕೂಡಿರುವ ಮಾರುಕಟ್ಟೆ ಪ್ರದೇಶ ಇದಾಗಿದೆ. ಅತಿ ಕಡಿಮೆ ಬೆಲೆಯಲ್ಲಿ ವಿವಿಧ ವಸ್ತುಗಳನ್ನು ಕೊಳ್ಳುವ ಆಸೆ ನಿಮಗಿದ್ದರೆ ಈ ಪ್ರದೇಶಕ್ಕೊಮ್ಮೆ ಭೇಟಿ ನೀಡಲೇಬೇಕು. ಮೆಜೆಸ್ಟಿಕ್ ಬಸ್ಸು ನಿಲ್ದಾಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳು ಈ ಮಾರುಕಟ್ಟೆಗೆ ತೆರಳಲು ದೊರಕುತ್ತವೆ.

ಚಿತ್ರಕೃಪೆ: Vinu Thomas

https://www.flickr.com/photos/vinut/6525198407

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಇನ್ನೂ ರಾಜಾಜಿ ನಗರ ಹಾಗೂ ವಿಜಯನಗರ ಬಡಾವಣೆಗಳು ಒಂದಕ್ಕೊಂದು ಅಕ್ಕ ಪಕ್ಕದಲ್ಲೆ ಇದ್ದು, ಇಲ್ಲಿ ಬಹುವಾಗಿ ಉತ್ತರ ಕರ್ನಾಟಕದ ಜನರು ವಾಸಿಸುತ್ತಾರೆ. ಮಾರುಕಟ್ಟೆಗಳಿಂದ ಹಿಡಿದು ಎಲ್ಲ ಬಗೆಯ ವಸ್ತುಗಳು ದೊರಕುವ, ಧಾರ್ಮಿಕ ಆಶ್ರಮಗಳು ಹಾಗೂ ದೇವಸ್ಥಾನಗಳಿರುವ ಪ್ರಮುಖ ಬಡಾವಣೆಗಳಾಗಿವೆ ಇವೆರಡು. ರಾಜಾಜಿ ನಗರದಲ್ಲಿರುವ ಡಬ್ಲ್ಯೂಟಿಸಿ ಬಹು ಮಹಡಿ ಕಟ್ಟಡ.

ಚಿತ್ರಕೃಪೆ: Cv manjoo

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಶಿವಾಜಿ ನಗರ : ಬೆಂಗಳೂರಿನ ಎಂಜಿ ರಸ್ತೆ ಹಾಗೂ ಫ್ರೇಸರ್ ಟೌನ್ ಗಳಿಗೆ ಹತ್ತಿರದಲ್ಲಿರುವ ಶಿವಾಜಿ ನಗರ ಸಾಕಷ್ಟು ಲವಲವಿಕೆಯಿಂದ ಕೂಡಿರುವ ಪ್ರದೇಶ. ಹಾರ್ಡ್ ವೇರ್ ವಸ್ತುಗಳು, ಸಾಕು ಪ್ರಾಣಿಗಳು, ತರಹೇವಾರಿ ಬಟ್ಟೆಗಳಿಗೆ ಹೆಸರುವಾಸಿಯಾಗಿದೆ ಈ ಬಡಾವಣೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು, ವಲಸೆ ಬಂದ ತಮಿಳಿಗರು, ಕ್ರೈಸ್ತರು ವಾಸಿಸುತ್ತಾರೆ. ಸಾಕಷ್ಟು ಮಸೀದಿ, ಚರ್ಚು ಹಾಗೂ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು ಹಾಗೂ ಈ ಬಡಾವಣೆಯಲ್ಲಿರುವ ಕಮರ್ಷೀಯಲ್ ಸ್ಟ್ರೀಟ್ ಕಡಿಮೆ ದರದ ಹಾಗೂ ಒಳ್ಳೆಯ ಗುಣಮಟ್ಟದ ಬಟ್ಟೆ ಬರೆಗಳಿಗೆ ಹೆಸರುವಾಸಿ. ಅಲ್ಲದೆ ವಿವಿಧ ರೀತಿಯ ಹಣ್ಣುಗಳನ್ನು ಇಲ್ಲಿ ಖರೀದಿಸಬಹುದಾಗಿದೆ.

ಚಿತ್ರಕೃಪೆ: GatesPlusPlus

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಮಾರತಹಳ್ಳಿ : ಬೆಂಗಳೂರಿನಲ್ಲಾದ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಮುಂಚೆ ಇದೊಂದು ಸಾಧಾರಣ ಹಳ್ಳಿ/ಪ್ರದೇಶವಾಗಿತ್ತು. ಮತ್ತೊಂದು ರೋಚಕ ಸಂಗತಿಯೆಂದರೆ ಹಿಂದೊಮ್ಮೆ ಮಾರುತ ಎಂಬ ಯುದ್ಧ ವಿಮಾನವೊಂದು ಆಕಸ್ಮಿಕವಾಗಿ ಈ ಸ್ಥಳದಲ್ಲಿ ಅಪಘಾತಗೊಂಡಿತ್ತು. ತದನಂತರ ಈ ಹಳ್ಳಿಗೆ ಮಾರುತಹಳ್ಳಿ ಎಂದು ಹೆಸರುಬಂದು ಕ್ರಮೇಣವಾಗಿ ಇಂದು ಮಾರತಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತವಾಗಿದೆ. ಐಟಿ ಪ್ರದೇಶಗಳಾದ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೆಚ್.ಎ.ಎಲ್ ನಿಲ್ದಾಣ ಹಾಗು ಹೊರ ವರ್ತುಲ ರಸ್ತೆಗಳಿಗೆ ಈ ಪ್ರದೇಶವು ಹತ್ತಿರದಲ್ಲಿರುವುದರಿಂದ ಇಂದು ಈ ಪ್ರದೇಶವು ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ ಹಾಗು ಅಸಂಖ್ಯಾತ ಪ್ರತಿಷ್ಠಿತ ವ್ಯಾಪಾರಿ ಮಳಿಗೆಗಳು, ಶಾಪಿಂಗ್ ಮಾಲ್‍ಗಳು ಇಂದು ಇಲ್ಲಿ ತಲೆ ಎತ್ತಿವೆ. ಇದು ಕೂಡ ಶಾಪಿಂಗ್ ಮಾಡಲು ಒಂದು ಉತ್ತಮವಾದ ಸ್ಥಳವಾಗಿದೆ.

ಚಿತ್ರಕೃಪೆ: Amol.Gaitonde

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಬೆಂಗಳೂರಿನ ಪ್ರಸಿದ್ಧ ಬಡಾವಣೆಗಳು:

ಯಶವಂತಪುರ : ಯಶವಂತಪುರ ಬಡಾವಣೆಯು ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದಾಗಿದೆ ಹಾಗೂ ಬೆಂಗಳೂರಿನ ಕೇಂದ್ರ ನಿಲ್ದಾಣದ ನಂತರ ಪ್ರಮುಖ ರೈಲು ನಿಲ್ದಾಣವೂ ಸಹ ಆಗಿದೆ. ಇದು ಬೆಂಗಳೂರು ರೈಲು ನಿಲ್ದಾಣ ದಿಂದ ಪಶ್ಚಿಮ ಭಾಗಕ್ಕೆ ಆರು ಕಿ.ಮೀ ದೂರದಲ್ಲಿದೆ. ಜನವಸತಿಯ ಪ್ರದೇಶವಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡಿರುವ ಯಶವಂತಪುರವು ಕೃಷಿ ನಿಯಂತ್ರಿತ ಮಾರುಕಟ್ಟೆಯನ್ನು (APMC) ಸಹ ಒಳಗೊಂಡಿದೆ ಹಾಗೂ ಹೂವುಗಳ ಮಾರುಕಟ್ಟೆಗೆ ಪ್ರಸಿದ್ಧವಾಗಿದೆ. ಮಲ್ಲೇಶ್ವರ,ಮಹಾಲಕ್ಷ್ಮಿಬಡಾವಣೆ,ನಂದಿನಿ ಬಡಾವಣೆ,ಮತ್ತಿಕೆರೆ ಇದರ ಸುತ್ತಮುತ್ತಲಿರುವ ಇನ್ನಿತರ ಬಡಾವಣೆಗಳು.

ಚಿತ್ರಕೃಪೆ: Smeet Chowdhury

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X