Search
  • Follow NativePlanet
Share
» »ಜಮ್ಮುವಿನ 108 ಶಕ್ತಿಪೀಠಗಳಲ್ಲಿ ಒಂದಾದ ವೈಷ್ಣೋವ ದೇವಿಯ ದರ್ಶನ ಮಾಡಿದ್ದಿರಾ?

ಜಮ್ಮುವಿನ 108 ಶಕ್ತಿಪೀಠಗಳಲ್ಲಿ ಒಂದಾದ ವೈಷ್ಣೋವ ದೇವಿಯ ದರ್ಶನ ಮಾಡಿದ್ದಿರಾ?

By Sowmyabhai

ಭಾರತದಲ್ಲಿ ಲಕ್ಷಾಂತರ ದೇಗುಲಗಳಿವೆ ಆದರೆ ಅವುಗಳಲ್ಲಿ ಸಾಕಷ್ಟು ಮಹಿಮೆಯುಳ್ಳ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬುದು ಹಲವಾರು ಭಕ್ತರ ಬೇಡಿಕೆಯಾಗಿರುತ್ತದೆ. ಅತಂಹ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ತಮ್ಮ ಬೇಡಿಕೆಗಳು, ಇಷ್ಟಾರ್ತಗಳನ್ನು ನೇರವೇರಿಸುವ ಸಲುವಾಗಿ ಮಹಿಮಾನ್ವಿತ ದೇವರ ದರ್ಶನ ಭಾಗ್ಯ ನಮ್ಮದಾಗಲಿ ಎಂದು ಅಂದುಕೊಳ್ಳುವುದುಂಟು. ಅತಂಹ ಮಾಹಿಮಾನ್ವಿತ ಹಾಗೂ ಶಕ್ತಿ ದೇವತೆ ಎನಿಸಿಕೊಂಡ ಪವಿತ್ರ ಕ್ಷೇತ್ರವು ಜಮ್ಮುವಿನಲ್ಲಿದೆ.

Best Places to Visit in Jammu

ಭಾರತದ ಪವಿತ್ರವಾದ ಹಿಂದೂ ದೇವಾಯಗಳಲ್ಲಿ ಒಂದಾದ ವೈಷ್ಣೋವ ದೇವಿ ದೇವಾಲಯವು 108 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ಪವಿತ್ರ ಕ್ಷೇತ್ರವು ಜಮ್ಮುವಿನ ಕತ್ರಾದ ತ್ರಿಕುಟ ಬೆಟ್ಟದ ಮೇಲೆ ನೆಲೆಸಿದ್ದು ಸಮುದ್ರಮಟ್ಟದಿಂದ 1700 ಮೀಟರ್ ಎತ್ತರದಲ್ಲಿ ಈ ತಾಯಿ ನೆಲೆಸಿದ್ದಾಳೆ. ಈ ದೇವಾಲಯದ ಮಾದರಿಯು ಗುಹೆಯಂತಿದ್ದು, ಗುಹೆಯ ಉದ್ದ ಸುಮಾರು 30 ಮೀಟರ್ ಹಾಗೂ ಎತ್ತರ 1.5 ಮೀಟರ್ ನಷ್ಟಿದೆ.

ದುರ್ಗಾವತರದಲ್ಲಿ ನೆಲೆಗೊಂಡಿರುವ ಈ ತಾಯಿ ಭಕ್ತಾದಿಗಳ ಕಷ್ಟಗಳನ್ನು ನಿವಾರಿಸಲು ಭೂಮಿಗಿಳಿದ ಶಕ್ತಿದೇವತೆ ಹಾಗೂ ಲಕ್ಷಾಂತರ ದೇಶಿಯ ಹಾಗೂ ವಿದೇಶಿಯ ಭಕ್ತರನ್ನು ಹೊಂದಿದ್ದಾಳೆ. ವಾರ್ಷಿಕವಾಗಿ, ದೇಶ ವಿದೇಶಗಳಿಂದ ಸುಮಾರು 8 ಮಿಲಿಯನ್ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ತಾಯಿ ನೆಲೆಗೊಂಡಿರುವ ಗುಹೆಗೊಂದು ಇತಿಹಾಸವಿದೆ ಅದೆನೆಂದರೆ ಪಾರ್ವತಿ ಸ್ವರೂಪಿಯಾದ ವೈಷ್ಣೋವ ದೇವಿಯು ತಾನು ಸಂಹರಿಸಿದ ರಾಕ್ಷಸರನ್ನು ಈ ಗುಹೆಯನ್ನು ಬಳಸುತ್ತಿದ್ದಳು ಎಂಬ ಪೌರಾಣಿಕವಿದೆ. ಈ ದೇವಿಯ ಮೂರು ರೂಪಗಳಾದ ಮಹಾಕಾಳಿ, ವಿದ್ಯಾದೇವತೆಯಾದ ಮಹಾಸರಸ್ವತಿ ಮತ್ತು ಮಹಾಲಕ್ಷೀಯ ವಿಗ್ರಹಗಳನ್ನು ಈ ಗುಹೆಯಲ್ಲಿ ಕಾಣಬಹುದು.

Best Places to Visit in Jammu

PC : Nikhilchandra

ಪೂಜಾ ವೇಳಾಪಟ್ಟಿ
ಈ ವೈಷ್ಣೋವ ದೇವಿಗೆ ಪ್ರತಿದಿನ ಎರಡು ಬಾರಿ ಆರತಿಮಾಡಲಾಗುತ್ತದೆ. ಮೊದಲ ಆರತಿ ಸೂರ್ಯೋದಯದ ಮುಂಚೆ ಹಾಗೂ ಎರಡನೇ ಆರತಿ ಸುರ್ಯಾಸ್ತದ ನಂತರ. ಈ ತಾಯಿಯನ್ನು ಹಲವಾರು ಬಗೆಯ ಅಭಿಷೇಕವಾದ ನೀರು, ಹಾಲು, ತುಪ್ಪ, ಬೆಣ್ಣೆ, ಸಕ್ಕರೆಗಳಿಂದ ಮಾಡಲಾಗುತ್ತದೆ ಹಾಗೂ ವೈಷ್ಣೋವ ದೇವಿಗೆ ಮುಖ್ಯವಾಗಿ ನವರಾತ್ರಿ ಮತ್ತು ದುರ್ಗಪೂಜೆಯಂದು ವೀಷೇಶ ಪೂಜೆ ನಡೆಯುತ್ತದೆ.

Best Places to Visit in Jammu

PC: Nikhilchandra

ಹತ್ತಿರ ಇರುವ ಪ್ರದೇಶಗಳು
ಬಾಗ್ ಈ ಬಾಹು, ರಣ್‍ಭೀರೆಶ್ವರ್ ದೇವಾಲಯ, ಮಹಾಮಾಯಾ ದೇವಾಲಯ, ಗೌರಿ ಶಂಕರ ದೇವಾಲಯ, ಪಂಚ್ ಪೀರ್ ದೇವಾಲಯ.

ವೈಷ್ಣೋವ ದೇವಿಯ ದೇವಾಲಯಕ್ಕೆ ಉತ್ತಮ ಕಾಲಾವಧಿ
ಈ ದೇವಿಗೆ ನವರಾತ್ರಿಯಲ್ಲಿ ವೈಭವೋಪೇತವಾಗಿ ಪೂಜೆಗಳು ನಡೆಸುವುದರಿಂದ ಮಾರ್ಚ್‍ನಿಂದ ಅಕ್ಟೋಬರ್‍ನವರೆಗೆ ದೇವಿಯ ದರ್ಶನ ಪಡೆಯಲು ಉತ್ತಮ ಕಾಲಾವಧಿಯಾಗಿದೆ.

ಜಮ್ಮುವಿನ ವೈಷ್ಣೋವ ದೇವಿಯ ದೇವಾಲಯಕ್ಕೆ ತಲುಪುವ ಬಗೆ?

ವಿಮಾನ ಮಾರ್ಗದ ಮೂಲಕ: ಬೆಂಗಳೂರಿನಿಂದ ವೈಷ್ಣೋವ ದೇವಿ ದೇವಾಲಯಕ್ಕೆ ನೇರವಾದ ವಿಮಾನಗವಿದ್ದು. ವಿಮಾನದ ಮೂಲಕ ತೆರಳಲು ಬೆಂಗಳೂರಿನಿಂದ ಕೇವಲ ನಾಲ್ಕು ತಾಸುಗಳಲ್ಲಿ ತಲುಪಬಹುದು. ಜಮ್ಮು ವಿಮಾನ ನಿಲ್ದಾಣದಿಂದ ಸುಮಾರು 35 ಕಿ,ಮೀ ದೂರದಲ್ಲಿದೆ ಈ ದೇವಾಲಯ.

ರೈಲ್ ಮಾರ್ಗದ ಮೂಲಕ: ಬೆಂಗಳೂರಿನಿಂದ ಜಮ್ಮುವಿನ ಉಧಮ್‍ಪುರಗೆ ನೇರವಾದ ರೈಲ್ವೆ ಸಂಪರ್ಕವಿದ್ದು ಸುಮಾರು 41 ಗಂಟೆಗಳಕಾಲ ದೀರ್ಘ ಪ್ರಯಾಣವಾಗಿದೆ. ಉಧಮ್‍ಪುರನಿಂದ ಈ ಕ್ಷೇತ್ರಕ್ಕೆ ಕೇವಲ 24 ಕಿ,ಮೀ ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ಹಲವಾರು ಮೀಸಲಾತಿಯ ಬಸ್‍ಗಳ ಸೌಲಭ್ಯಗಳಿದ್ದು ನೇರವಾಗಿ ಈ ದೇವಾಲಯಕ್ಕೆ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X