Search
  • Follow NativePlanet
Share
» »ಹಸಿರಿನ ಮೆರುಗು ಕಂಗೊಳಿಸುವ ವಗಮೋನ್ ಸೊಬಗು

ಹಸಿರಿನ ಮೆರುಗು ಕಂಗೊಳಿಸುವ ವಗಮೋನ್ ಸೊಬಗು

By Vijay

ಕೇರಳ ರಾಜ್ಯದಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ.

ಎಕ್ಸ್ ಪೆಡಿಯಾದಿಂದ ಫ್ಲೈಟ್ ಬುಕ್ಕಿಂಗ್ ಮೇಲೆ 50% ರವರೆಗೂ ಕಡಿತ

ಕೇರಳದ ಹದಿನಾಲ್ಕು ಜಿಲ್ಲೆಗಳಾದ ಕಾಸರ್ಗೋಡ್, ಕಣ್ಣೂರ್, ವಾಯ್ನಾಡ್, ಕೋಳಿಕೋಡ್, ಮಲಪ್ಪುರಮ್, ಪಾಲಕ್ಕಾಡ್, ತ್ರಿಶ್ಶುರ್, ಎರ್ನಾಕುಲಮ್, ಇಡುಕ್ಕಿ, ಕೊಟ್ಟಾಯಮ್, ಆಲಪ್ಪುಳಾ (ಅಲ್ಲೆಪ್ಪಿ), ಪತ್ನಾಮತಿಟ್ಟಾ, ಕೊಲ್ಲಂ, ತಿರುವನಂತಪುರಂ ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ಇವುಗಳಲ್ಲಿ, ಇತರೆ ಇನ್ನು ಹತ್ತು ಹಲವು ರೋಮಾಂಚಕ ಸ್ಥಳಗಳನ್ನು ವಿಕ್ಷೀಸಬಹುದಾಗಿದೆ.

ವಿಶೇಷ ಲೇಖನ : ಸೌಂದರ್ಯದ ಖನಿ ಕೇರಳದ ತೇಣಿ

ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ಒಂದು ಗಿರಿಧಾಮ ಪ್ರದೇಶವಾಗಿರುವ ವಗಮೋನ್, ಕೇರಳ ರಾಜ್ಯದಲ್ಲಿ ಎಲೆ ಮರೆಯ ಕಾಯಿಯಂತಿರುವ ಒಂದು ಸುಂದರ ಪ್ರದೇಶ. ಪ್ರಸ್ತುಅ ಲೇಖನದ ಮೂಲಕ ವಗಮೋನ್ ಪಟ್ಟಣದ ಕುರಿತು ಸಂಕ್ಷೀಪ್ತವಾಗಿ ತಿಳಿಯಿರಿ ಹಾಗೂ ಅದರ ಅಂದ ಚೆಂದ ಪರಿಸರದ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಿ.

ಹೆಚ್ಚಿನ ಲೇಖನಗಳು : ಇಡುಕ್ಕಿಯ ಅದ್ಭುತ ಸೌಂದರ್ಯ ಎಲ್ಲೆಲ್ಲೂ ನೀರು ಇದು ಕುಮರಕಂ ವಿಶೇಷ

ವಗಮೋನ್ ಸೊಬಗು:

ವಗಮೋನ್ ಸೊಬಗು:

ನವದಂಪತಿಗಳಿಗೆ ಕಾಲಕಳೆಯಲು ಸುಂದರವಾದ ತಾಣವಿದು. ವಿಶಾಲವಾಗಿ ಹರಡಿರುವ ಹಸಿರು, ನೀಲಿ ನೀಲಿ ಪರ್ವತಗಳು, ಸುಂದರ ನದಿಗಳು, ನೀರಝರಿಗಳು, ಆಹ್ಲಾದಕರವಾದ ವಾತಾವರಣ ಮತ್ತು ದಟ್ಟವಾದ ಅರಣ್ಯವಿರುವದರಿಂದ ವಗಮೋನ್‌ ಎಂಥವರ ಮನಸ್ಸನ್ನೂ ಸೆಳೆಯುತ್ತದೆ.

ಚಿತ್ರಕೃಪೆ: Kerala Tourism

ವಗಮೋನ್ ಸೊಬಗು:

ವಗಮೋನ್ ಸೊಬಗು:

ರಜಾಕಾಲದ ದಿನಗಳನ್ನು ಕಳೆಯಲು ಸೂಕ್ತವಾದ ತಾಣವಿದು. ಥಂಗಾಲ್‌ ಬೆಟ್ಟ, ಮುರುಗನ್‌ ಬೆಟ್ಟ ಮತ್ತು ಕುರಿಸುಮಾಲವು ನಿಸರ್ಗ ಸೌಂದರ್ಯವನ್ನು ಹೆಚ್ಚಿಸಿವೆ. ಸೌಂದರ್ಯದ ಖನಿಯ ಹೊರತಾಗಿ ವಗಮೋನ್‌ನಲ್ಲಿ ಜನರ ನೋಡಬೇಕಾದ ಹಲವು ಸಂಗತಿಗಳಿವೆ.

ಚಿತ್ರಕೃಪೆ: Madhu Kannan

ವಗಮೋನ್ ಸೊಬಗು:

ವಗಮೋನ್ ಸೊಬಗು:

ಬಂಡೆ ಹತ್ತುವುದು, ಚಾರಣ, ಗುಡ್ಡ ಹತ್ತುವುದು ಮತ್ತು ಪ್ಯಾರಾಗ್ಲೈಡಿಂಗ್‌ನಂಥ ಚಟುವಟಿಕೆಗಳನ್ನು ಪ್ರವಾಸಿಗರು ನಡೆಸಬಹುದು. ಇನ್ನು ನೀವು ಸಾಹಸಿಗಳಲ್ಲದಿದ್ದರೆ ಸುತ್ತಲಿನ ಸುಂದವಾದ ಹಸಿರು ಪರಿಸರವನ್ನು ವೀಕ್ಷಿಸುತ್ತಾ ಕುಳಿತುಕೊಳ್ಳಬಹುದು.

ಚಿತ್ರಕೃಪೆ: Anoop Joy

ವಗಮೋನ್ ಸೊಬಗು:

ವಗಮೋನ್ ಸೊಬಗು:

ಸಮುದ್ರ ಮಟ್ಟದಿಂದ ಸುಮಾರು 1,100 ಮೀಟರು ಎತ್ತರಕ್ಕೆ ಈ ಪ್ರದೇಶವಿದೆ. ಏಷ್ಯಾದ ಸ್ಕಾಟ್‌ಲ್ಯಾಂಡ್‌ ಎಂದು ವಗಮೋನ್‌ ಅನ್ನು ಕರೆಯಲಾಗಿದೆ. ಭೇಟಿ ಮಾಡಲೇಬೇಕಾದ ಭಾರತದ 50 ಪ್ರದೇಶಗಳಲ್ಲಿ ಇದೂ ಒಂದೆಂಬ ಹೆಗ್ಗಳಿಕೆಯನ್ನು ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ ಪಡೆದಿದೆ.

ಚಿತ್ರಕೃಪೆ: Bibinca

ವಗಮೋನ್ ಸೊಬಗು:

ವಗಮೋನ್ ಸೊಬಗು:

ವಗಮೋನ್‌ ಪ್ರದೇಶವನ್ನು ಕಂಡುಹಿಡಿದಿದ್ದು ಬ್ರಿಟಿಷರು. ಇವರು ತಮ್ಮ ಟೀ ಪ್ಲಾಂಟೇಷನ್ನಿಗೆ ಈ ತಾಣ ಸೂಕ್ತ ಎಂದು ಭಾವಿಸಿದ್ದರು. ನಂತರದಲ್ಲಿ ಕುರಿಸುಮಾಲಾದಲ್ಲಿ ಕ್ರಿಶ್ಚಿಯನ್‌ ಮಿಶಿನರಿಗಳನ್ನು ಸ್ಥಾಪಿಸಿದರು.

ಚಿತ್ರಕೃಪೆ: Vanischenu

ವಗಮೋನ್ ಸೊಬಗು:

ವಗಮೋನ್ ಸೊಬಗು:

ವಾಗಮೋನ್‌ನಲ್ಲಿ ಸೂಸೈಡ್‌ ಪಾಯಿಂಟ್‌ ಕೂಡಾ ಇದೆ. ಇದನ್ನು ಮೂನ್‌ಪರ ಎಂದು ಕರೆಯಲಾಗುತ್ತದೆ. ಇದು V ಆಕೃತಿಯಲ್ಲಿದೆ. ವಾಗಮೋನ್‌ನಲ್ಲೇ ಅತ್ಯಂತ ಸುಂದರವಾದ ತಾಣ ಇದು. ಈ ಪ್ರದೇಶದಿಂದ ಆಳವಾದ ಕಣಿವೆಯನ್ನು ನೊಡಬಹುದು. ಈ ಕಣಿವೆಯು ಕೂಪದಂತೆ ಭಾಸವಾಗುತ್ತದೆ.

ಚಿತ್ರಕೃಪೆ: Prasanths

ವಗಮೋನ್ ಸೊಬಗು:

ವಗಮೋನ್ ಸೊಬಗು:

ಸೂಸೈಡ್‌ ಪಾಯಿಂಟ್‌ಗೆ ಚಾರಣ ಮಾಡುವುದು ಅತ್ಯಂತ ಸಾಹಸದ ಕೆಲಸ. ಇಲ್ಲಿನ ಅತ್ಯದ್ಭುತ ಪರಿಸರ ನಿಮ್ಮನ್ನು ಮೇಲೆ ಹತ್ತುವಂತೆ ಪ್ರೋತ್ಸಾಹಿಸುತ್ತದೆ. ಒಮ್ಮೆ ನೀವು ಬೆಟ್ಟವನ್ನು ಏರಿದ ಮೇಲೆ ಮೇಲೆ ಹತ್ತಿದ ಆಯಾಸವನ್ನೆಲ್ಲಾ ಮರೆಯುತ್ತೀರಿ. ಅಂತಹ ಸುಂದರ ದೃಶ್ಯವನ್ನು ನೀವು ಮೇಲಿನಿಂದ ನೋಡಬಹುದು.

ಚಿತ್ರಕೃಪೆ: Vanischenu

ವಗಮೋನ್ ಸೊಬಗು:

ವಗಮೋನ್ ಸೊಬಗು:

ಕುರಿಸುಮಾಲಾ ಆಶ್ರಮವು ಕುರಿಸುಮಾಲಾ ಗುಡ್ಡದ ಮೇಲಿದೆ. "ಮೌಂಟೇನ್‌ ಆಫ್‌ ದಿ ಹೋಲಿ ಕ್ರಾಸ್" ಎಂದು ಈ ಕುರಿಸುಮಾಲಾ ಗುಡ್ಡವನ್ನು ಕರೆಯಲಾಗುತ್ತದೆ. ಈ ಆಶ್ರಮವು ನಝ್ರಾನಿ ಕ್ಯಾಥೊಲಿಕ್ಸ್‌ರಿಗೆ ಸಂಬಂಧಿಸಿದ್ದಾದರೂ ಇದು ಗಾಂಧಿ ಸಿದ್ದಾಂತವನ್ನು ಬೆಂಬಲಿಸುವಂಥದ್ದು. ಇಲ್ಲಿಗೆ ಎಲ್ಲಾ ಧರ್ಮದ ಜನರೂ ಬರುತ್ತಾರೆ. ಗುಡ್‌ ಫ್ರೈಡೇಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಮರದ ಕ್ರಾಸ್‌ಅನ್ನು ಹಿಡಿದುಕೊಂಡು ಭಕ್ತರು ಗುಡ್ಡವನ್ನು ಏರುತ್ತಾರೆ.

ಚಿತ್ರಕೃಪೆ: Vanischenu

ವಗಮೋನ್ ಸೊಬಗು:

ವಗಮೋನ್ ಸೊಬಗು:

ಕರಿಸುಮಾಲ ಗುಡ್ಡವನ್ನು ಹೋಲಿ ಕ್ರಾಸ್‌ನ ಗುಡ್ಡ ಎಂದೂ ಕರೆಯಲಾಗಿದೆ. ವಗಮೋನ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿ ಈ ಗುಡ್ಡವಿದೆ. ಕ್ರಿಶ್ಚಿಯನ್ನರಿಗೆ ಅತ್ಯಂತ ಪ್ರಮುಖವಾದ ಧಾರ್ಮಿಕ ಕೇಂದ್ರವಿದು. ಇಲ್ಲಿರುವ ಡೈರಿ ಫಾರಂಗಳೂ ಕೂಡಾ ಜನಪ್ರಿಯ. ಗುಡ್ಡದ ಎರಡೂ ಕಡೆಗೆ ಚಹಾ ತೋಟಗಳನ್ನು ಹೊಂದಿದ್ದು, ಕಣ್ಮನ ತಣಿಸುತ್ತದೆ.

ಚಿತ್ರಕೃಪೆ: Vanischenu

ವಗಮೋನ್ ಸೊಬಗು:

ವಗಮೋನ್ ಸೊಬಗು:

ಸುತ್ತಲೂ ಮೂರು ಗುಡ್ಡಗಳು, ಮಧ್ಯೆ ಒಂದು ಕೆರೆ. ಇಂಥದ್ದೊಂದು ಸನ್ನಿವೇಶದಲ್ಲಿ ಈ ವಗಮೋನ್‌ ಕೆರೆ ಇದೆ. ಗುಡ್ಡಗಳ ಮೇಲಿರುವ ಗಿಡಗಳನ್ನು ನೀಟಾಗಿ ಕತ್ತರಿಸಲಾಗಿದೆ. ಹೀಗಾಗಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ. ಇಲ್ಲಿಗೆ ಭೇಟಿ ಮಾಡಲು ಬರುವವರು ಈ ಕೆರೆಯಲ್ಲಿ ಬೋಟ್ ರೈಡ್‌ ಕೂಡಾ ಮಾಡಬಹುದು. ಈ ಸಣ್ಣ ಸಣ್ಣ ಗುಡ್ಡಗಳನ್ನು ಹತ್ತಿ ವಿಶಾಲವಾದ ಪ್ರದೇಶದ ಸೌಂದರ್ಯವನ್ನು ಸವಿಯಬಹುದು. ಪಿಕ್‌ನಿಕ್‌ಗೆಂದು ಹೇಳಿ ಮಾಡಿಸಿದ ತಾಣ ವಗಮೋನ್.

ಚಿತ್ರಕೃಪೆ: Riju K

ವಗಮೋನ್ ಸೊಬಗು:

ವಗಮೋನ್ ಸೊಬಗು:

ದಟ್ಟ ಅರಣ್ಯಗಳು ಪ್ರವಾಸಿಗರನ್ನು ಮುದಗೊಳಿಸುತ್ತದೆ. ಮುರುಗನ್‌ ಪಾರಾವನ್ನೂ ಕುಡಾ ಈ ಗುಡ್ಡದಿಂದ ಕಾಣಬಹುದು. ದೂರದೂರುಗಳಿಂದ ಇಲ್ಲಿಗೆ ಪ್ರವಾಸಕ್ಕೆ, ಟ್ರೆಕ್ಕಿಂಗ್‌ಗೆ ಬರುತ್ತಾರೆ. ಇಲ್ಲಿರುವ ಕರಿಸುಮಲ ಆಶ್ರಮಕ್ಕೆ ಭಕ್ತರ ದಂಡೇ ಬರುತ್ತದೆ. ಗುಡ್‌ ಪ್ರೈಡೆಯ ಸಂದರ್ಭದಲ್ಲಿ ಕೈಯಲ್ಲಿ ಕ್ರಾಸ್‌ಅನ್ನು ಹಿಡಿದುಕೊಂಡು ಕರಿಸುಮಲ ಗುಡ್ಡವನ್ನು ಭಕ್ತರು ಹತ್ತುತ್ತಾರೆ.

ಚಿತ್ರಕೃಪೆ: Bobinson K B

ವಗಮೋನ್ ಸೊಬಗು:

ವಗಮೋನ್ ಸೊಬಗು:

ಗುಡ್ಡದ ದಾರಿಯಲ್ಲಿ ಯುರೋಪಿಯನ್ ಮಾದರಿಯಲ್ಲಿ ಕಟ್ಟಿದ ಒಂದು ಪುರಾತನ ಮನೆಯಿದೆ. ಈ ಮನೆಯ ಹಿಂದೆ ಕೃತಕ ಕೆರೆ ಇದೆ. ಈ ಮನೆ ಮತ್ತು ಕೆರೆಯನ್ನು ನಿರ್ಮಿಸಿದ್ದು ಲಾರೀ ಬೇಕರ‍್. ಇಂಡೋ-ಸ್ವಿಸ್‌ ಪ್ರಾಜೆಕ್ಟ್‌ನಲ್ಲಿ ಕರಿಸುಮಲ ಆಶ್ರಮದ ಭಕ್ತರಿಂದ ನಡೆಸಲ್ಪಡುವ ಡೈರಿ ಫಾರಂಅನ್ನೂ ಕೂಡಾ ನೋಡಬಹುದು.

ಚಿತ್ರಕೃಪೆ: Visakh wiki

ವಗಮೋನ್ ಸೊಬಗು:

ವಗಮೋನ್ ಸೊಬಗು:

ಕೆರೆಯಿಂದ ಹೊರಬರುವ ಒಂದು ಸಣ್ಣ ತೊರೆಯೇ ಇಲ್ಲಿನ ಜಲಪಾತ. ಈ ಪ್ರವಾಹವು ದಟ್ಟ ಅರಣ್ಯವನ್ನು ಹೊಂದಿರುವ ಇಳಿಜಾರಿನಲ್ಲಿ ಹರಿದು ಪ್ರವಾಸಿಗರಿಗೆ ಸುಂದರವಾದ ನೋಟವನ್ನು ನೀಡುತ್ತದೆ. ಚಾರಣಿಗರಿಗೆ ಈ ದಾರಿಯು ಅತ್ಯಂತ ಇಷ್ಟವಾದದ್ದು. ಈ ಜಲಪಾತವು ತೀರಾ ಮೇಲಿನಿಂದ ಬೀಳುವಂಥದ್ದಲ್ಲ, ಆದರೆ ಇಲ್ಲಿನ ಸುಂದರವಾದ ಸನ್ನಿವೇಶವು ಕಣ್ಣಿಗೆ ಮುದಗೊಳಿಸುತ್ತದೆ.

ಚಿತ್ರಕೃಪೆ: anumodbalan

ವಗಮೋನ್ ಸೊಬಗು:

ವಗಮೋನ್ ಸೊಬಗು:

ಕೊಟ್ಟಾಯಮ್‌ನಿಂದ ವಗಮೋನ್‌ಗೆ ಸುಮಾರು 65 ಕಿ.ಮೀ ದೂರ. ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಮೀಪದ ರೈಲ್ವೆ ಸ್ಟೇಷನ್‌ ಕೊಟ್ಟಾಯಮ್‌ನಲ್ಲಿದೆ.

ಚಿತ್ರಕೃಪೆ: Honeycrisp

ವಗಮೋನ್ ಸೊಬಗು:

ವಗಮೋನ್ ಸೊಬಗು:

ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ರೆಸಾರ್ಟ್‌‌ಗಳು ಲಭ್ಯವಿದೆ. ತೆಕ್ಕಡಿ, ಪೀರ್‌ಮೇಡ್‌ ಮತ್ತು ಕುಲಮಾವುಗಳಿಗೆ ವಗಮೋನ್‌ನಿಂದ ಪ್ರವಾಸ ಕೈಗೊಳ್ಳಬಹುದು. ವರ್ಷಪೂರ್ತಿ ಇಲ್ಲಿನ ವಾತಾವರಣವು ಪ್ರವಾಸಿಗಳಿಗೆ ಸೂಕ್ತವಾಗಿರುತ್ತದೆ.

ಚಿತ್ರಕೃಪೆ: Bobinson K B

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X