Search
  • Follow NativePlanet
Share
» »ಭಾರತದಲ್ಲಿರುವ ಒಟ್ಟು ಯುನೆಸ್ಕೊ ತಾಣಗಳೆಷ್ಟು?

ಭಾರತದಲ್ಲಿರುವ ಒಟ್ಟು ಯುನೆಸ್ಕೊ ತಾಣಗಳೆಷ್ಟು?

By Vijay

ನಿಮಗೆಲ್ಲ ತಿಳಿದಿರುವಂತೆ ಯುನೆಸ್ಕೊ (UNESCO) ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಆಂಡ್ ಕಲ್ಚರಲ್ ಆರ್ಗನೈಸೇಷನ್ ಎಂಬ ವಿಸ್ತೃತ ರೂಪ ಹೊಂದಿರುವ ಈ ಸಂಸ್ಥೆಯು ಪ್ರಪಂಚದಾದ್ಯಂತ ಕಂಡುಬರುವ ಕೆಲವು ವಿಶೇಷ ಹಾಗೂ ಮಹತ್ವ ರಚನೆಗಳಿಗೆ, ಸ್ಥಳಗಳಿಗೆ ವಿಶ್ವ ಮಾನ್ಯತೆಯನ್ನು ನೀಡುತ್ತದೆ.

ಪೇಟಿಎಂ ಕೂಪನ್ನುಗಳು : 200 ರೂ.ಗಳ ಟಿಕೆಟ್ ಮೇಲೆ 15% ರಷ್ಟು ಹಣ ಮರುಪಾವತಿ ಹಾಗೂ ಐ ಫೋನ್ 6 ಗೆಲ್ಲುವ ಅವಕಾಶ

ಈ ಸಂಸ್ಥೆಯ ಮುಖ್ಯ ಉದ್ದೇಶ, ವಿಶ್ವಸಂಸ್ಥೆಯ ಸ್ಥಾಪನಶಾಸನದಲ್ಲಿ ಸೂಚಿಸಲಾದಂತೆ ನ್ಯಾಯ ಹಾಗೂ ಪರಿಪಾಲನೆ ಮತ್ತು ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ವಿಶ್ವವ್ಯಾಪಿ ಗೌರವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಣ, ವಿಜ್ಞಾನ, ಮತ್ತು ಸಂಸ್ಕೃತಿಯ ಮೂಲಕ ಅಂತರರಾಷ್ಟ್ರೀಯ ಸಹಯೋಗಕ್ಕೆ ಪ್ರೋತ್ಸಾಹ ನೀಡಿ ಶಾಂತಿ ಮತ್ತು ಭದ್ರತೆಗೆ ನೆರವಾಗುವುದಾಗಿದೆ.

ವಿಶೇಷ ಲೇಖನ : ಪಶ್ಚಿಮಘಟ್ಟಗಳ ಮಾದಕ ಲೋಕ

ಅಂತೆಯೆ ಇದು ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಒಂದೆ ತಳಹದಿಯಲ್ಲಿ ತರುವ ಒಂದು ಭಾವನಾತ್ಮಕವಾದ ವೇದಿಕೆಯಾಗಿದೆ ಎಮ್ದರೆ ತಪ್ಪಾಗಲಾರದು. ಇದು ವಿಶಿಷ್ಟ, ವಿಶೇಷ ಹಾಗೂ ಅಪರೂಪ ಎನ್ನಬಹುದಾದ ಸ್ಥಳಗಳಿಗೆ, ರಚನೆ-ಸ್ಮಾರಕಗಳಿಗೆ ಅಂಶಗಳಿಗೆ ತನ್ನ ಮಾನ್ಯತೆಯನ್ನು ಕರುಣಿಸುತ್ತದೆ. ಪ್ರಸ್ತುತ ಲೇಖನವು ಭಾರತದಲ್ಲಿ ಯುನೆಸ್ಕೊದಿಂದ ಮಾನ್ಯತೆ ಪಡೆದಿರುವ ತಾಣಗಳೆಷ್ಟು ಹಾಗೂ ಅವು ಯಾವುವು ಎಂಬುದರ ಕುರಿತು ತಿಳಿಸುತ್ತದೆ.

ಈ ವಿಶ್ವಮಾನ್ಯತೆ ಪಡೆದಿರುವ ತಾಣಗಳ ಪೈಕಿ ಒಂದಾದರೂ ತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿ ಹಾಗೂ ಆ ರಚನೆ\ಸ್ಥಳವು ಈ ಮಾನ್ಯತೆ ಪಡೆದಿರುವ ಹಿಂದಿನ ಗುಟ್ಟನ್ನು ಅಥವಾ ವರ್ಚಸ್ಸನ್ನು ತಿಳಿಯಿರಿ.

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

1. ಮಹಾ ಬೋಧಿ ದೇವಾಲಯ ಸಂಕೀರ್ಣ : ಬಿಹಾರ ರಾಜ್ಯದ ಬೋಧ ಗಯಾ ಜಿಲ್ಲೆಯಲ್ಲಿರುವ ಮಹಾ ಬೋಧಿ ದೇವಾಲಯ ಸಂಕೀರ್ಣವು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿರುವ ತಾಣವಾಗಿದೆ. ವಿಶಿಷ್ಟ ಸಂಸ್ಕೃತಿ ಹಾಗೂ ಪುರಾತತ್ವ ಮಹತ್ವತೆಯನ್ನು ಪಡೆದಿರುವ ದೃಷ್ಟಿಯಲ್ಲಿ ಇದಕ್ಕೆ ಈ ಮಾನ್ಯತೆಯು ಲಭಿಸಿದ್ದು 2002 ರಲ್ಲಿ. ಈ ಸಂಕೀರ್ಣದಲ್ಲಿರುವ ಮೊದಲ ದೇವಾಲಯವು ಮೂರನೆಯ ಶತಮಾನದಲ್ಲಿ ಚಕ್ರವರ್ತಿ ಅಶೋಕ ಸಾಮ್ರಾಟನಿಂದ ನಿರ್ಮಾಣ ಮಾಡಲಾಗಿದೆ. ನಂತರ ಇತರೆ ಅನೇಕ ದೇಗುಲಗಳು ಸಮಯ ಕಳೆದಂತೆ ಇದಕ್ಕೆ ಸೇರ್ಪಡೆಗೊಂಡವು.

ಚಿತ್ರಕೃಪೆ: Bpilgrim

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

2. ಭೀಮ್ ಬೆಟ್ಕಾ ಶಿಲಾ ಛಾವಣಿಗಳು : ಭಾರತ ಉಪಖಂಡದಲ್ಲೆ ಮೊಟ್ಟ ಮೊದಲ ಬಾರಿಗೆ ಮಾನವ ಜೀವಿಸಿದ್ದರ ಬಗ್ಗೆ ಆಧಾರ ಕೊಡುವ ಭೀಮ್ ಬೇಟ್ಕಾ ಕಲ್ಲಿನ ಆಶ್ರಯಗಳು ಪೇಲಿಯೊಲಿಥಿಕ್ ಅಥವಾ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ತಾಣವಾಗಿದೆ. ಈ ವಿಸ್ಮಯಭರಿತ ಕುತೂಹಲಕಾರಿ ತಾಣವಿರುವುದು ಮಧ್ಯ ಪ್ರದೇಶದ ರಾಯ್ಸನ್ ಜಿಲ್ಲೆಯಲ್ಲಿ. 2003 ರಲ್ಲಿ ಯುನೆಸ್ಕೊದಿಂದ ಈ ತಾಣವು ಅದ್ಭುತವಾಗಿ ಸಂರಕ್ಷಿಸಲ್ಪಟ್ಟ ನೈಸರ್ಗಿಕ ಶಿಲಾ ರಚನೆಗಳು ಹಾಗೂ ಅತಿ ಪುರಾತನ ಶಿಲಾ ವರ್ಣ ರಚನೆಗಳು ಎಂಬ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Raveesh Vyas

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ರಾಯ್ಸನ್ ಜಿಲ್ಲೆಯಲ್ಲಿರುವ ಈ ತಾಣವು ರಾಜಧಾನಿ ಭೋಪಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀಗಳ ದೂರದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಸಸ್ಯ ಸಂಪತ್ತಿನಿಂದ ಆವರಿಸಿದೆ. ಇಲ್ಲಿರುವ ಕಲ್ಲಿನ ಆಸರೆಗಳು (ಶೆಲ್ಟರ್ಸ್) ಹಾಗು ಗುಹೆಗಳಲ್ಲಿ ಸಾಕಷ್ಟು ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಕೆಲವು ವರ್ಣಚಿತ್ರಗಳು 30000 ವರ್ಷಗಳಷ್ಟು ಪುರಾತನವಾಗಿದ್ದರೆ ಇನ್ನೂ ಕೆಲವು ಜಾಮಿತಿಯ ಆಕೃತಿಗಳು ಮಧ್ಯಯುಗದಲ್ಲಿ ರಚಿತವಾಗಿರುವುದಾಗಿವೆ.

ಚಿತ್ರಕೃಪೆ: Priyanka1tamta

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

3. ಬೌದ್ಧ ಸ್ಮಾರಕಗಳು, ಸಂಚಿ, ಮಧ್ಯ ಪ್ರದೇಶ : ಮಧ್ಯ ಪ್ರದೇಶ ರಾಜ್ಯದ ರಾಜಧಾನಿ ಭೋಪಾಲ ನಗರದಿಂದ 45 ಕಿ.ಮೀ ದೂರದಲ್ಲಿರುವ ಸಂಚಿ ಎಂಬಲ್ಲಿನ ಬೌದ್ಧ ಸ್ಮಾರಕಗಳು ಯುನೆಸ್ಕೊದಿಂದ 1989 ರಲ್ಲಿ ವಿಶಿಷ್ಟ ಮಹತ್ವವುಳ್ಳ ಸಂಸ್ಕೃತಿ ಎಂಬ ಮಾನ್ಯತೆಯನ್ನು ಪಡೆದಿದೆ. ಮೌರ್ಯ ಚಕ್ರವರ್ತಿ ಅಶೋಕನ ಕಾರ್ಯಭಾರದಲ್ಲಿ ಇದರ ನಿರ್ಮಾಣವಾಗಿದೆ ಎಂದು ತಿಳಿಯಲಾಗಿದ್ದು ಇಲ್ಲಿನ ಸ್ತೂಪವು ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Jean-Pierre Dalbéra

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

4. ಮಾನಸ ವನ್ಯಜೀವಿ ಧಾಮ : ಹಿಮಾಲಯ ಪರ್ವತಗಳ ಬುಡದಲ್ಲಿ, ಭೂತಾನ್ ದೇಶದ ಗಡಿಯ ಬಳಿ ಮಾನಸ ನದಿಯಗುಂಟ ಸುಮಾರು 1,20,000 ಎಕರೆಗಳಷ್ಟು ವಿಶಾಲವಾದ ಭೂಮಿಯಲ್ಲಿ ಹರಡಿರುವ, ಅಸ್ಸಾಂ ರಾಜ್ಯದಲ್ಲಿರುವ ಈ ವನ್ಯಧಾಮವು ತನ್ನ ವಿಶಿಷ್ಟವಾದ ಪರಿಸರದ ಕಾರಣದಿಂದ ಯುನೆಸ್ಕೊದ ಮಾನ್ಯತೆಯನ್ನು 1985 ರಲ್ಲಿ ಪಡೆದಿದೆ. ಈ ಧಾಮವು ಹಲವು ಬಗೆಯ ಸಸ್ಯ ಪ್ರಬೇಧಗಳು, 21 ಬಗೆಯ ಅಳಿವಿನಂಚಿನಲ್ಲಿರುವ ಸಸ್ತನಿಗಳು, 55 ಬಗೆಯ ಸಸ್ತನಿಗಳು, 36 ಬಗೆಯ ಸರಿಸೃಪಗಳು, 3 ಬಗೆಯ ಉಭಯವಾಸಿಗಳು ಹಾಗೂ 350 ಬಗೆಯ ಪಕ್ಷಿ ಪ್ರಬೇಧಗಳಿಗೆ ಆಶ್ರಯವನ್ನೊದಗಿಸಿದೆ.

ಚಿತ್ರಕೃಪೆ: Simbu123

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

5. ಕಾಜಿರಂಗಾ ಅಭಯಾರಣ್ಯ : ಇದೆ ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಗುಂಟ ನೆಲೆಸಿರುವ ಕಾಜಿರಂಗಾ ಅಭಯಾರಣ್ಯವೂ ಸಹ 1985 ರಲ್ಲಿ ಯುನೆಸ್ಕೊದಿಂದ ಮಾನ್ಯತೆಯನ್ನು ಪಡೆದ ಪ್ರವಾಸಿ ಆಕರ್ಷಣೆಯ ವನ್ಯಜೀವಿ ಧಾಮವಾಗಿದೆ. ಈ ವನ್ಯಧಾಮವು ಒಂದು ಕೊಂಬಿನ ಭಾರತೀಯ ಖಡ್ಗಮೃಗಗಳಿಗಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Diganta Talukdar

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

6. ಖಜುರಾಹೊ : ಮಾರ್ಮಿಕವಾಗಿ ಕಾಮಸೂತ್ರದ ಭೂಮಿ ಎಂದು ಕರೆಯಲಾಗುವ ಮಧ್ಯ ಪ್ರದೇಶ ರಾಜ್ಯದಲ್ಲಿರುವ ಖಜುರಾಹೊ ದೇಗುಲಗಳ ಸಂಕೀರ್ಣವು ತನ್ನ ಕಾಮ ಪ್ರಚೋದಕ ಹಾಗೂ ಆಕರ್ಷಕ ಶಿಲ್ಪ ಕಲೆಗಳ ಕೆತ್ತನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಭಾರತದಲ್ಲಿ ಮುಸ್ಲಿಮರ ಆಕ್ರಮಣಕ್ಕಿಂತೆ ಮುಂಚೆ ಪ್ರಚಲಿತದಲ್ಲಿದ್ದ ಚಂಡೇಲ ರಾಜವಂಶದ ಅಂದಿನ ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಇಲ್ಲಿನ ಶಿಲ್ಪಕಲೆಗಳು ಸಾದರಪಡಿಸುತ್ತವೆ. ಈ ಒಂದು ವಿಶಿಷ್ಟ ಕೆತ್ತನೆಯ ಕಲೆಗಳಿಗಾಗಿಯೆ ಇದು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Liji Jinaraj

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

7. ಚಂಪಾನೇರ್-ಪಾವಗಡ್ ಪುರಾತತ್ವ ಉದ್ಯಾನ : ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿರುವ ಈ ತಾಣವು ಯುನೆಸ್ಕೊದ ಮಾನ್ಯತೆ ಪಡೆದ ತಾಣವಾಗಿದೆ. ಚಂಪಾನೇರ್ ನಗರದ ಸುತ್ತಮುತ್ತಲು ಹರಡಿರುವ ಈ ತಾಣಗಳ ವೈಶಿಷ್ಟ್ಯವೆಂದರ ಪಕ್ಕದ ಪಾವಗಡ್ ಪಟ್ಟಣದ ಬೆಟ್ಟಗಳ ಮೇಲೆ ಸಾಲಾಗಿ ನಿರ್ಮಾಣ ಮಾಡಲಾಗಿರುವ ಕೋಟೆ ಕೊತ್ತಲಗಳು.

ಚಿತ್ರಕೃಪೆ: Phso2

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

8. ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ಇದು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ. ಜೈಸಿಂಗನು ಖಗೋಳ ಶಾಸ್ತ್ರದಲ್ಲಿ ಅತೀವ ಆಸಕ್ತಿವುಳ್ಳವನಾಗಿದ್ದನು ಹಾಗೂ ಈ ರಚನೆಗಳ ಹಿಂದಿರುವ ಮುಖ್ಯ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು ಹಾಗೂ ತಾರಾ ಮಂಡಲದಲ್ಲುಂಟಾಗುವ ಹಲವು ಬದಲಾವಣೆಗಳು, ಗ್ರಹಣಗಳ ಕುರಿತು ತಿಳಿಯುವುದು.

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

9. ಭಾರತದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ವಿಶ್ವದಲ್ಲೆ ಮೊದಲ ಹತ್ತು ಜೀವ ವೈವಿಧ್ಯತೆ ಕಂಡುಬರುವ ಉತ್ಕೃಷ್ಟ ವನ್ಯ ಜೀವಿಗಳ ತಾಣಗಳ ಪೈಕಿ ಒಂದಾಗಿದ್ದು ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಿದೆ. ಗುಜರಾತ್ ಹಾಗು ಮಹಾರಾಷ್ಟ್ರ ರಾಜ್ಯಗಳ ಪಶ್ಚಿಮ ಅಂಚಿನ ಬಳಿಯಿಂದ ಪ್ರಾರಂಭವಾಗುವ ಈ ಘಟ್ಟಗಳು ಕರ್ನಾಟಕ, ಕೇರಳ ಹಾಗು ತಮಿಳುನಾಡಿನ ಕನ್ಯಾಕುಮಾರಿಯ ವರೆಗೂ ಹರಡಿದ್ದು ಸುಮಾರು 1600 ಕಿ.ಮೀ ಗಳಷ್ಟು ವ್ಯಾಪ್ತಿಯನ್ನು ಹೊಂದಿದೆ. ಒಟ್ಟಾರೆ 16,000 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಪಶ್ಚಿಮ ಘಟ್ಟಗಳು ಸಮುದ್ರ ಮಟ್ಟದಿಂದ ಸರಾಸರಿ 1200 ಮೀ (3900 ಅಡಿಗಳು) ಎತ್ತರದಲ್ಲಿದೆ. ಇದು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣಗಳ ಮಾನ್ಯತೆಯನ್ನು ಪಡೆದಿದೆ. ಪಶ್ಚಿಮ ಘಟ್ಟಗಳ ಕೆಲವು ಭಾಗಗಳು ಮಾತ್ರವೆ ಮಾನ್ಯತೆಯನ್ನು ಪಡೆದುಕೊಂಡಿವೆ. ಆಗಸ್ತ್ಯಮಲೈ ಸಮೂಹ.

ಚಿತ್ರಕೃಪೆ: Rakesh

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟಗಳ ಪೆರಿಯಾರ್ ಸಮೂಹ.

ಚಿತ್ರಕೃಪೆ: Wouter Hagens

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟಗಳ ಆನಮಲೈ ಸಮೂಹ.

ಚಿತ್ರಕೃಪೆ: Marcus334

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟಗಳ ನೀಲ್ಗಿರಿ ಸಮೂಹ.

ಚಿತ್ರಕೃಪೆ: Enchant me

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟಗಳ ಕರ್ನಾಟಕದ ತಲಕಾವೇರಿ ಸಮೂಹ.

ಚಿತ್ರಕೃಪೆ: L. Shyamal

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟಗಳ ಕುದುರೆಮುಖ ಸಮೂಹ.

ಚಿತ್ರಕೃಪೆ: Karunakar Rayker

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಮಾನ್ಯತೆ ಪಡೆದಿರುವ ಮಹಾರಾಷ್ಟ್ರದ ಪಶ್ಚಿಮಘಟ್ಟಗಳ ಸಹ್ಯಾದ್ರಿ ಸಮೂಹ.

ಚಿತ್ರಕೃಪೆ: Nicholas

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

10. ರಾನಿ ಕಿ ವಾವ್ : ಗುಜರಾತ್ ರಾಜ್ಯದ ಪಟಾನ್ ಎಂಬಲ್ಲಿರುವ ರಾನಿ ಕಿ ವಾವ್ ಒಂದು ಅದ್ಭುತ ಕೆತ್ತನೆಯುಳ್ಳ ಮೆಟ್ಟಿಲು ಬಾವಿಯಾಗಿದ್ದು ಯುನೆಸ್ಕೊದಿಂದ 2014 ರಲ್ಲಿ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Bernard Gagnon

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

11. ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಜೂನ್ 2014 ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಯಿತು. ವಿಶೇಷ ನಿಸರ್ಗ ಸೌಂದರ್ಯ ಹಾಗೂ ಜೀವಸಂಪತ್ತಿನ ಮಾನದಂಡಗಳ ಆಧಾರದ ಮೇಲೆ ಇದಕ್ಕೆ ಈ ಮಾನ್ಯತೆಯನ್ನು ನೀಡಲಾಗಿದೆ. ಈ ರಾಷ್ಟ್ರೀಯ ಉದ್ಯಾನವು ಹಿಮಾಚಲ ರಾಜ್ಯದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾದ ಕುಲ್ಲು ಪ್ರದೇಶದಲ್ಲಿ ನೆಲೆಸಿದೆ. 754 ಚ.ಕಿ.ಮೀ ಗಳಷ್ಟು ವಿಸ್ತೀರ್ಣ ಹೊಂದಿದ್ದು, 1984 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಹಲವಾರು ವೈವಿಧ್ಯಮಯ ಸಸ್ಯ ಹಾಗು ಪ್ರಾಣಿ ಸಂಪತ್ತಿಗೆ ಆಶ್ರಯ ತಾಣವಾಗಿರುವ ಈ ಉದ್ಯಾನ ಗುರುತರವಾದ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ಚಿತ್ರಕೃಪೆ: Travelling Slacker

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

12. ಕೆಂಪು ಕೋಟೆ : ದೆಹಲಿಯ ಜನಪ್ರಿಯ ಕಿಲ್ಲಾ-ಎ-ಮೊಹಲ್ಲಾ ಎಂದು ಕರೆಯಲ್ಪಡುವ ರೆಡ್ ಫೋರ್ಟ್ ಅಥವಾ ಕೆಂಪು ಕೋಟೆ(ಲಾಲ್ ಕಿಲಾ) ಒಂದು ಭವ್ಯ ಪ್ರವಾಸಿ ಆಕರ್ಷಣೆಯಾಗಿದೆ. 17ನೇ ಶತಮಾನದ ಮಧ್ಯಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದ್ದು ನಿರ್ಮಾಣದಲ್ಲಿ ಕೆಂಪು ಕಲ್ಲನ್ನು ಹೆಚ್ಚಾಗಿ ಬಳಸಲಾಗಿದೆ. ಅಂತೆಯೆ ಇದರ ಹೆಸರು ಲಾಲ್ ಕಿಲ್ಲಾ ಎಂದು ಬಂದಿದೆ. ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. ಈ ಕೋಟೆಯು ಸುಮಾರು 2.41ಕಿಮೀ.ವಿಸ್ತೀರ್ಣ ಹೊಂದಿದ್ದು, ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ರೆಡ್ ಫೋರ್ಟ್ ಅನ್ನು ಗುರುತಿಸಲಾಗಿದೆ.

ಚಿತ್ರಕೃಪೆ: Achyutmisra

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

13. ಹುಮಾಯೂನ್ ಸಮಾಧಿ ಸ್ಮಾರಕ : ಹೊಸದೆಹಲಿಯಲ್ಲಿರುವ ಈ ಹುಮಾಯೂನ್‌ ಸಮಾಧಿ ಸ್ಮಾರಕವನ್ನು ಮುಘಲ್‌ ಅರಸರ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಇಲ್ಲಿನ ಅತ್ಯಂತ ಜನಪ್ರಿಯ ತಾಣವಾದ ಓಲ್ಡ್‌ ಫೋರ್ರ್ಟ್ ಅಥವಾ ಪುರಾನಾ ಕಿಲ್ಲಾದ ಬಳಿಯಿದೆ. ಇದು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ 1993 ರಲ್ಲಿಯೇ ಸೇರ್ಪಡೆ ಆಗಿದೆ. ಇದು ದೇಶದಲ್ಲಿರುವ ಆಕರ್ಷಕ ಮುಘಲ್‌ ವಾಸ್ತುಶಿಲ್ಪ ಎಂಬ ಹೆಗ್ಗಳಿಕೆಯನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ.

ಚಿತ್ರಕೃಪೆ: Ekabhishek

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

14. ಕುತುಬ್ ಮಿನಾರ್ ಸಂಕೀರ್ಣ : ದೆಹಲಿಯಲ್ಲಿರುವ ಮತ್ತೊಂದು ಜನಪ್ರೀಯ ಐತಿಹಾಸಿಕ ಸ್ಮಾರಕವಾದ ಕುತುಬ್ ಮಿನಾರ್ ಸಂಕೀರ್ಣವು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Planemad

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

15. ಹಳೆ ಗೋವಾದ ಚರ್ಚುಗಳು ಮತ್ತು ಕಾನ್ವೆಂಟುಗಳು : 16 ಹಾಗೂ 18 ನೆಯ ಶತಮಾನಗಳ ಮಧ್ಯೆ ಗೋವಾವನ್ನು ಆಳುತ್ತಿದ್ದ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾದ ಅದ್ಭುತ ಪೋರ್ಚುಗೀಸ್ ವಾಸ್ತು ಶಿಲ್ಪ ಕಲೆಯ ಚರ್ಚು ಹಾಗೂ ಕಾನ್ವೆಂಟು ಕಟ್ಟಡಗಳನ್ನು ವಿಶಿಷ್ಟ ಸಂಸ್ಕೃತಿಗಳ ಅಡಿಯಲ್ಲಿ 1986 ರಲ್ಲಿ ಯುನೆಸ್ಕೊ ಇವುಗಳಿಗೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ನೀಡಿದೆ. ಗೋವಾದ ಸಿ ಕ್ಯಾಥೇಡ್ರಲ್ ಚರ್ಚ್.

ಚಿತ್ರಕೃಪೆ: Danny Burke

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

16. ಪಟ್ಟದಕಲ್ಲಿನ ವಾಸ್ತು ಶಿಲ್ಪ ಸಂಕೀರ್ಣಗಳು : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಎಂಬ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣದಲ್ಲಿರುವ ಚಾಲುಕ್ಯ ವಾಸ್ತು ಶಿಲ್ಪ ಕಲೆಯ ಭವ್ಯತೆಯನ್ನು ಅನಾವರಣಗೊಳಿಸುವ ರಚನೆಗಳು 1987 ರಲ್ಲಿ ಯುನೆಸ್ಕೊದಿಂದ ಸುಂದರ ಹಾಗೂ ವಿಶಿಷ್ಟ ವಾಸ್ತುಕಲೆಯ ಕುರುಹಾಗಿ ವಿಶ್ವ ಪಾರಂಪರಿಕ ತಾಣದ ಮನ್ಯತೆ ಪಡೆದಿದೆ.

ಚಿತ್ರಕೃಪೆ: Manjunath Doddamani

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

17. ಹಂಪಿಯ ಶಿಲ್ಪ ಕಲೆಯ ರಚನೆಗಳು : ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯಿರುವ ವಿಜಯ ನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುತ್ತಿರುವ ಹಂಪಿತ ಅತ್ಯದ್ಭುತ ಸುಂದರ ಕೆತ್ತನೆಯ ಶಿಲ್ಪ ಕಲೆಯ ರಚನೆಗಳು ಯುನೆಸ್ಕೊದಿಂದ ಮಾನ್ಯತೆಯನ್ನು 1986 ರಲ್ಲಿ ಪಡೆದುಕೊಂಡಿವೆ.

ಚಿತ್ರಕೃಪೆ: Apadegal

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

18. ಅಜಂತಾ ಗುಹೆಗಳು : ಎರಡು ಹಂತಗಳಲ್ಲಿ ನಿರ್ಮಾಣವಾದ ಮಹಾರಾಷ್ಟ್ರದ ಅಜಂತಾ ಬೌದ್ಧ ಗುಹೆಗಳು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನು ಪಡೆದಿದೆ. ಗುಪ್ತರ ಕಾಲದಲ್ಲಿ ನಿರ್ಮಾಣವಾದ ಬೌದ್ಧ ಧರ್ಮದ ವರ್ಣಕಲೆಯನ್ನು ಪ್ರತಿಪಾದಿಸುವ ಈ ಗುಹೆಗಳು ಪ್ರವಾಸಿ ಆಕರ್ಷಣೆಯೂ ಹೌದು. ಇದು ಪೂರ್ಣವಾಗಿ ಎರಡರಿಂದ ಆರನೆಯ ಶತಮಾನಗಳ ಮಧ್ಯದಲ್ಲಿ ನಿರ್ಮಾಣವಾಗಿವೆ.

ಚಿತ್ರಕೃಪೆ: Soman

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

19. ಎಲ್ಲೋರಾ ಗುಹೆಗಳು : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರಾದ ಗುಹೆಗಳು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನು 1983 ರಲ್ಲಿ ಪಡೆದುಕೊಂಡಿದೆ. ಈ ಗುಹೆಗಳಲ್ಲಿ ಹಿಂದೂ, ಬೌದ್ಧ ಹಾಗೂ ಜೈನ ಧರ್ಮಕ್ಕೆ ಸಮ್ಬಂಧಿಸಿದಂತೆ ಶಿಲ್ಪ ಕಲೆಗಳನ್ನು ಕಾಣಬಹುದಾಗಿದೆ. ಇವು ಕ್ರಿ.ಶ. 600 ರಿಂದ 1000 ದ ಮಧ್ಯದಲ್ಲಿ ನಿರ್ಮಾಣವಾದ ಸುಂದರ ಗುಹಾ ಕೆತ್ತನೆಗಳಾಗಿವೆ.

ಚಿತ್ರಕೃಪೆ: Y.Shishido

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

20. ಎಲಿಫಂಟಾ ಗುಹೆಗಳು : ಪೂರ್ವ ಮುಂಬೈ ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಬುಂಬೈ ಬಂದರು ಪ್ರದೇಶದಲ್ಲಿರುವ ಎಲಿಫಂಟಾ ಗುಹೆಗಳು ಯುನೆಸ್ಕೊದಿಂದ ಮಾನ್ಯತೆ ಪಡೆದ ತಾಣವಾಗಿದೆ. ಇದೊಮ್ದು ಸಣ್ಣ ದ್ವೀಪದಲ್ಲಿ ನಿರ್ಮಿತವಾದ ಗುಹಾ ರಚನೆಗಳಾಗಿದ್ದು ಹಿಂದೂ ಹಾಗೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅಂಶಗಳನ್ನೊಳಗೊಂಡ ರಚನೆಯಾಗಿದೆ.

ಚಿತ್ರಕೃಪೆ: Redtigerxyz

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

21. ಛತ್ರಪತಿ ಶಿವಾಜಿ ಟರ್ಮಿನಸ್ : ಮುಂಬೈನ ಕೇಂದ್ರ ರೈಲು ನಿಲ್ದಾಣವಾಗಿರುವ ಈ ಕಟ್ಟಡವು ಒಂದು ಐತಿಹಾಸಿಕ ಮಹತ್ವವುಳ್ಳ ಕಟ್ಟಡವಾಗಿದೆ. ಇದರ ವಿನ್ಯಾಸ ಹಾಗೂ ನಿರ್ಮಾಣಕ್ಕೆ ಒಟ್ಟು ಹತ್ತು ವರ್ಷಗಳು ತಗುಲಿದ್ದು ಮೊದಲಿಗೆ ಇದು ವಿಕ್ಟೋರಿಯಾ ಟರ್ಮಿನಸ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ನಂತರ ಮರಾಠರ ಮಹಾ ದೊರೆಯಾದ ಶಿವಾಜಿಯ ಗೌರವಾರ್ಥವಾಗಿ ಇದನ್ನು ಛತ್ರಪತಿ ಶಿವಾಜಿ ಎಂದು ಮರುನಾಮಕರಣ ಮಾಡಲಯಿತು. ಯುನೆಸ್ಕೊದಿಂದ 2004 ರಲ್ಲಿ ಇದಕ್ಕೆ ಮಾನ್ಯತೆ ದೊರೆಯಿತು.

ಚಿತ್ರಕೃಪೆ: Joe Ravi

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

22. ಭಾರತದಲ್ಲಿ ಕಂಡುಬರುವ ಕೆಲ ಅತ್ಯದ್ಭುತ ರಚನೆಗಳ ಪೈಕಿ ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಸಹ ಒಂದು. ಸೂರ್ಯ ದೇವರಿಗೆ ಮುಡಿಪಾದ ಈ ಭವ್ಯ ಶಿಲ್ಪ ಕಲೆಯುಳ್ಳ ದೇವಾಲಯ ಖುಜುರಾಹೊದ ರೀತಿಯಲ್ಲಿ ಮೈಥುನ ಅಥವಾ ಮಿಥುನ ಶಿಲ್ಪ ಕಲೆಗೂ ಪ್ರಖ್ಯಾತಿ ಪಡೆದಿದೆ. ಸಂಸ್ಕೃತದ ಕೋನ ಹಾಗೂ ಸೂರ್ಯ ಎಂಬ ಅರ್ಥ ಕೊಡುವ ಅರ್ಕ ಪದಗಳಿಂದ ಇದಕ್ಕೆ ಕೋನಾರ್ಕ ಎಂಬ ಹೆಸರು ಬಂದಿದೆ. ಈ ಸುಂದರ ಸೂರ್ಯ ದೇವಾಲಯವು ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಕೋನಾರ್ಕ್ ಎಂಬ ಚಿಕ್ಕ ಪಟ್ಟಣದಲ್ಲಿ ನಿರ್ಮಿಸಲ್ಪಟ್ಟಿದೆ. ಆದ್ದರಿಂದ ಈ ದೇವಾಲಯ ಕೋನಾರ್ಕ್ ಸೂರ್ಯ ದೇವಾಲಯವೆಂದೆ ಪ್ರಸಿದ್ಧಿ ಪಡೆದಿದೆ. 1984 ರಲ್ಲಿ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Tetraktys

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

23. ಕೇವಲಾದೇವ್ ರಾಷ್ಟ್ರೀಯ ಉದ್ಯಾನ : ರಾಜಸ್ಥಾನದ ಭರತಪುರದಲ್ಲಿರುವ ಕೇವಲಲಾದೇವ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ಮಾನ್ಯತೆ ಪಡೆದ ಉದ್ಯಾನವಾಗಿದೆ. ಸಂರಕ್ಷಿಸಲ್ಪಟ್ಟ ಉತ್ತಮವಾದ ನೈಸರ್ಗಿಕ ಆಸ್ತಿ ಎಂಬ ಅಂಶದ ಮೇಲೆ ಈ ತಾಣಕ್ಕೆ 1985 ರಲ್ಲಿ ಮಾನ್ಯತೆ ದೊರೆಯಿತು.

ಚಿತ್ರಕೃಪೆ: Nikhilchandra81

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

24. ಚೋಳ ದೇವಸ್ಥಾನಗಳು : ಇತಿಹಾಸವನ್ನು ಗಮನಿಸಿದಾಗ ಹಿಂದೆ ಸಾಕಷ್ಟು ಸಾಮ್ರಾಜ್ಯಗಳು ದಕ್ಷಿಣ ಭಾರತವನ್ನು ಆಳಿರುವ ವಿಷಯ ತಿಳಿದುಬರುತ್ತದೆ. ಆ ಹಲವು ಸಾಮ್ರಾಜ್ಯಗಳ ಪೈಕಿ ಚೋಳ ಸಾಮ್ರಾಜ್ಯವು ಸಹ ಮಹತ್ವ ಪಡೆದಿದೆ. ಇದು ಶಕ್ತಿಶಾಲಿಯಾಗಿತ್ತು ಹಾಗೂ ಸಾಕಷ್ಟು ವಿಸ್ತಾರವಾಗಿ ಹರಡಿತ್ತು. ಚೋಳರು ತಮ್ಮದೆ ಆದ ವಿಶಿಷ್ಟ ವಾಸ್ತು ಶಿಲ್ಪ ಕಲೆಗೆ ಪ್ರಸಿದ್ಧರಾದವರು. ಇಂದಿಗೂ ನಾನಾ ಭಾಗಗಳಲ್ಲಿ ಕಂಡು ಬರುವ ಪುರಾತನ ಶಿಲ್ಪ ಕಲೆಯ ಕೆಲವು ವಿಶಿಷ್ಟತೆಗಳನ್ನು ಗಮನಿಸಿ ಇದು ಚೋಳರ ಕಾಲದಲ್ಲಿ ನಿರ್ಮಾಣವಾಗಿತ್ತೆಂದು ಸುಲಭವಾಗಿ ಇತಿಹಾಸ ತಜ್ಞರು ಹೇಳಿ ಬಿಡುತ್ತಾರೆ. ಇವರ ರಚನೆಗಳಲ್ಲಿ ಪ್ರಮುಖವಾಗಿ ಶಿವನಿಗೆ ಮುಡಿಪಾದ ದೇವಾಲಯಗಳನ್ನೆ ಬಹುವಾಗಿ ನೋಡಬಹುದು ಹಾಗೂ ತಮಿಳುನಾಡಿನ ರಾಜ್ಯಾದ್ಯಂತ ಚೋಳರ ಅಮೋಘ ಶಿಲ್ಪ ಕಲೆಗಳ ರಚನೆಗಳನ್ನು ಕಾಣಬಹುದು. ಯುನೆಸ್ಕೊ ಚೋಳರ ಕಾಲದಲ್ಲಿ ನಿರ್ಮಾಣವಾದ ಇಂದಿಗೂ ಪ್ರಚಲಿತದಲ್ಲಿರುವ ತಮಿಳುನಾಡಿನ ಚೋಳ ದೇವಸ್ಥಾನಗಳನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ತಂಜಾವೂರಿನಲ್ಲಿರುವ ಬೃಹದೇಶ್ವರ ದೇವಸ್ಥಾನ.

ಚಿತ್ರಕೃಪೆ: Amitra Kar

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ತಮಿಳುನಾಡಿನ ದಾರಾಸುರಂನಲ್ಲಿರುವ ಐರವತೀಶ್ವರರ್ ದೇವಸ್ಥಾನದ ಗರ್ಭಗೃಹವು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: wikipedia

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

25. ರಾಜಸ್ಥಾನದ ಬೆಟ್ಟ ಕೋಟೆಗಳು : ರಾಜಸ್ಥಾನ ರಾಜ್ಯದ ಅರಾವಳಿ ಬೆಟ್ಟ ಶ್ರೇಣಿಯಲ್ಲಿ ಸಾಲಾಗಿ ಬೆಟ್ಟದ ಮೇಲೆ ಕೋಟೆ ಕೊತ್ತಲಗಳು ಭವ್ಯವಾಗಿ ನಿರ್ಮಾಣವಾಗಿರುವುದು ಕಂಡುಬರುತ್ತವೆ. ಇದು ಅಂದಿನ ರಾಜಸ್ಥಾನವನ್ನು ಆಳುತ್ತಿದ್ದ ರಜಪೂತರ ಸೈನ್ಯದ ರಕ್ಷಣಾ ನೀತಿಯನ್ನು ಅನಾವರಣಗೊಳಿಸುತ್ತದೆ. ರಾಜಸ್ಥಾನದ ವಿವಿಧ ಭಾಗಗಳಲ್ಲಿರುವ ಈ ಬೆಟ್ಟದ ಕೋಟೆಗಳು ಯುನೆಸ್ಕೊದಿಂದ ಮಾನ್ಯತೆ ಪಡೆದುಕೊಂಡಿವೆ. ಬೆಟ್ಟ ಕೋಟೆಗಳ ಪೈಕಿ ಜೈಸಲ್ಮೇರ್ ನಲ್ಲಿರುವ ಜೈಸಲ್ಮೇರ್ ಕೋಟೆ.

ಚಿತ್ರಕೃಪೆ: Adrian Sulc

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

26. ತಾಜ ಮಹಲ್ : ಇದರ ಕುರಿತು ಹೆಚ್ಚು ಏನನ್ನು ಹೇಳಲಾಗುವುದಿಲ್ಲ. ಜಗತ್ತಿನ ಏಳು ಅದ್ಭುತಗಳ ಪೈಕಿ ಒಂದಾಗಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಖ್ಯಾತಿ ತಂದಿತ್ತ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಈ ಸುಂದರ ಹಾಗೂ ಪ್ರೇಮ ಸ್ಮಾರಕ ಎಂದು ಕರೆಸಿಕೊಳ್ಳುವ ತಾಜ್ ಮಹಲ್ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Dennis Jarvis

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

27. ಫತೇಪುರ್ ಸಿಕ್ರಿ : 16 ನೆಯ ಶತಮಾನದ ಅರ್ಧದಲ್ಲಿ ಮುಘಲ್ ಚಕ್ರವರ್ತಿ ಅಕ್ಬರನು ಯುದ್ಧದಲ್ಲಿ ಜಯಗಳಿಸಿದ ನಂತರ "ವಿಜಯದ ನಗರ" ಎಂದು ಅರ್ಥ ಕೊಡುವ ಫತೇಪು ಸಿಕ್ರಿಯನ್ನು ನಿರ್ಮಿಸಿದನು ಇದು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: Ramón

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

28. ಆಗ್ರಾ ಕೋಟೆ : ಆಗ್ರಾದಲ್ಲಿರುವ ಆಗ್ರಾ ಕೋಟೆಯು ಐತಿಹಾಸಿಕವಾಗಿ ಶ್ರೀಮಂತ ವಾಸ್ತುಕಲೆಯುಳ್ಳ ಅದ್ಭುತ ಕೋಟೆಯಾಗಿದೆ. 1982 ರಲ್ಲಿ ಯುನೆಸ್ಕೊದಿಂದ ಇದಕ್ಕೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರೆತಿದೆ.

ಚಿತ್ರಕೃಪೆ: Acred99

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

29. ನಂದಾ ದೇವಿ : ನಂದಾದೇವಿ ಭಾರತದಲ್ಲಿ ಕಂಡುಬರುವ ಪರ್ವತಗಳಲ್ಲಿ ಎರಡನೆಯ ಅತಿ ಎತ್ತರದ ಪರ್ವತ ಶಿಖರವಾಗಿದೆ. ಇನ್ನು ಕೇವಲ ಭಾರತ ದೇಶದ ಪರೀಧಿಯಲ್ಲಿ ಮಾತ್ರವೆ ಇರುವ ಪರ್ವತಗಳಿಗೆ ಹೋಲಿಸಿದಾಗ ನಂದಾ ದೇವಿ ಪರ್ವತ ಅತ್ಯುನ್ನತ ಪರ್ವತವಾಗಿ ಹೊರ ಹೊಮ್ಮುತ್ತದೆ. ಕಂಚನಜುಂಗಾ ಈ ನಿಟ್ಟಿನಲ್ಲಿ ಮೊದಲ ಪರ್ವತವಾಗಿದ್ದು ನೇಪಾಳದವರೆಗೂ ಚಾಚಿದೆ. ನಂದಾ ದೇವಿ ಪರ್ವತವು ಉತ್ತರಾಖಂಡ ರಾಜ್ಯದ ಕುಮಾವೂನ್ ಹಿಮಾಲಯ ಪ್ರದೇಶದ ರಿಷಿಗಂಗಾ ಕಣಿವೆಯ ಪಶ್ಚಿಮಕ್ಕೆ ಮತ್ತು ಗೋರಿಗಂಗಾ ಕಣಿವೆಯ ಪೂರ್ವಕ್ಕೆ ನೆಲೆ ನಿಂತಿರುವುದನ್ನು ಕಾಣಬಹುದಾಗಿದೆ. ಮೂಲತಃ ನಂದಾದೇವಿ ಪರ್ವತದಲ್ಲಿ ಎರಡು ಶಿಖರಗಳನ್ನು ಕಾಣಬಹುದಾಗಿದೆ. ಇವುಗಳನ್ನು ಪ್ರತ್ಯೇಕವಾಗಿ ನಂದಾದೇವಿ ಈಸ್ಟ್ ಹಾಗೂ ನಂದಾದೇವಿ ವೆಸ್ಟ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಯುನೆಸ್ಕೊದಿಂದ 1988 ರಲ್ಲಿ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: sporadic

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

30. ಸುಂದರಬನ್ಸ್ : ಅಕ್ಷರಶಃ ಸುಂದರಬನ್ ಅನ್ನು ಭಾಷಾಂತರಿಸಿದಾಗ ಕನ್ನಡದಲ್ಲಿ "ಸುಂದರ ವನ" ಎಂದಾಗುತ್ತದೆ. ಇಲ್ಲಿನ ಕಾಡಿನ ಅಪರಿಮಿತ ಸೌಂದರ್ಯದಿಂದಲೊ ಏನೊ ಇದಕ್ಕೆ ಸುಂದರಬನ್ ಎಂಬ ಹೆಸರು ಬಂದಿದೆ. ಜಗತ್ತಿನಲ್ಲೆ ಬೃಹತ್ತಾದ ಮ್ಯಾಂಗ್ರೋವ್ ಕಾಡಿನ ಒಂದು ಭಾಗ ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಅಷ್ಟೆ ಅಲ್ಲ, ಯುನೆಸ್ಕೊದಿಂದಲೂ ಸಹ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆಯನ್ನೂ ಸಹ ಪಡೆದಿದೆ. "ಬಂಗಾಳ ಹುಲಿ"ಗಳಿಗೆ ಪ್ರಮುಖ ತಾಣವಾಗಿರುವ ಈ ಪ್ರದೇಶ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದ್ದು ಪ್ರವಾಸಿ ದೃಷ್ಟಿಯಿಂದ ಪ್ರಮುಖವಾದ ತಾಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ವೈವಿಧ್ಯಮಯ ವನ್ಯಜೀವಿ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Frances Voon

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

31. ಮಹಾಬಲಿಪುರಂ ದೇವಾಲಯ ಸಂಕೀರ್ಣ : ಮಾಮಲ್ಲಪುರಂ ಎಂತಲೂ ಕರೆಯಲ್ಪಡುವ ಈ ತೀರ ಪಟ್ಟಣ ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿದೆ. ಚೆನ್ನೈ ನಗರದ ದಕ್ಷಿಣಕ್ಕೆ ಕೇವಲ 60 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಪಟ್ಟಣ ಐತಿಹಾಸಿಕ ಪ್ರಸಿದ್ಧ ಪಟ್ಟಣವಾಗಿದ್ದು ಅನನ್ಯ ಏಕಶಿಲಾ ಕೆತ್ತನೆಯ ರಚನೆಗಳಿಗೆ ಪ್ರಖ್ಯಾತಿ ಗಳಿಸಿದೆ. ಮಹಾಬಲಿಪುರಂ ಕಡಲ ತಡಿಯ ದೇಗುಲದಿಂದ ಹಿಡಿದು ಗುಹೆ, ರಥ, ಮಂಟಪಗಳಂತಹ ವಿಶಿಷ್ಟ ಸ್ಮಾರಕಗಳು ಅನನ್ಯವಾಗಿ ಕೆತ್ತಲ್ಪಟ್ಟಿದ್ದು, ಭೇಟಿ ನೀಡುವ ಪ್ರವಾಸಿಗರಿಗೆ ವಿಶಿಷ್ಟ ಅನುಭೂತಿ ಕರುಣಿಸುವಲ್ಲಿ ಸಫಲವಾಗಿವೆ. ಅಷ್ಟೆ ಏಕೆ ಮಹಾಬಲಿಪುರಂ ಸ್ಮಾರಕಗಳ ಸಮೂಹವು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನೂ ಸಹ ಪಡೆದಿವೆ.

ಚಿತ್ರಕೃಪೆ: J'ram DJ

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

ಭಾರತದಲ್ಲಿರುವ ವಿಶ್ವಪಾರಂಪರಿಕ ತಾಣಗಳು:

32. ಪರ್ವತ ರೈಲುಗಳು : ಪರ್ವತ ರೈಲುಗಳು ಒಂದು ಅದ್ಭುತವಾದ ಅನುಭವವನ್ನು ನೀಡುತ್ತವೆ. ಎತ್ತರದ ಪ್ರದೇಶಗಳಿಗೆ ಈ ಪುಟಾಣಿ ರೈಲುಗಳು ಚುಕು ಬುಕು ಎಂದು ಕೂಗುತ್ತ ಏರುವುದೆ ಒಂದು ರೋಮಾಂಚಕ ಅನುಭವ. ಭಾರತದಲ್ಲಿರುವ ದಾರ್ಜೀಲಿಂಗ್ ಹಿಮಾಲಯನ್ ಎಕ್ಸ್ ಪ್ರೆಸ್, ನೀಲ್ಗಿರಿ ಮೌಂಟೆನ್ ರೈಲು ಹಾಗೂ ಕಲ್ಕಾ - ಶಿಮ್ಲಾ ರೈಲು ಮಾರ್ಗಗಳು ಯುನೆಸ್ಕೊದಿಂದ ಮಾನ್ಯತೆಯನ್ನು ಪಡೆದಿವೆ. ಕಲ್ಕಾ-ಶಿಮ್ಲಾ ರೈಲು.

ಚಿತ್ರಕೃಪೆ: AHEMSLTD

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X