Search
  • Follow NativePlanet
Share
» »ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

By Vijay

ಕೇಳಿದರೆ ಅಚ್ಚರಿ ಅನುಸುತ್ತಿದೆಯಲ್ಲವೆ? ಆದರೆ ಇದು ಸತ್ಯ. ಹಿಂದುಗಳು ಪಾಲಿಸುವ ದುಷ್ಟರನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಿಸುವ, ಮಹಾ ಶಕ್ತಿಶಾಲಿಯಾಗಿರುವ ಅಂಜನಾಸುತ ಆಂಜನೇಯನನ್ನೆ ಬೇಡಿಗಳಿಂದ ಕಟ್ಟಿ ಹಾಕಲಾಗಿರುವ ಎರಡು ದೇವಾಲಯಗಳನ್ನು ಭಾರತದ ಒಡಿಶಾ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಾಣಬಹುದಾಗಿದೆ.

ಜಗನ್ನಾಥ ಪುರಿ ರಥೋತ್ಸವದ ವಿಶೇಷತೆ ಗೊತ್ತೆ?

ಮೊದಲನೇಯದಾಗಿ ಒಡಿಶಾ ರಾಜ್ಯದಲ್ಲಿರುವ ಆಂಜನೇಯ ದೇಗುಲದ ಕುರಿತು ತಿಳಿಯಿರಿ. ಒಡಿಶಾದಲ್ಲಿರುವ ಜಗನ್ನಾಥ ಪುರಿ ಕ್ಷೇತ್ರವು ಅಪಾರವಾಗಿ ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ. ಜಗತ್ತಿಗೆ ಒಡೆಯನಾದ ಜಗನ್ನಾಥನ ಈ ಕ್ಷೇತ್ರದಲ್ಲೆ ಆಂಜನೇಯನ ಈ ದೇವಾಲಯವಿದೆ. ಈ ದೇವಾಲಯವನ್ನು ದರಿಯಾ ಮಹಾವೀರ ದೇವಾಲಯ ಎಂದೆ ಕರೆಯಲಾಗುತ್ತದೆ.

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Indi Samarajiva

ಪುರಿಯಲ್ಲಿರುವ ಚಕ್ರನಾರಾಯಣನ ದೇವಾಲಯದ ಪಶ್ಚಿಮಕ್ಕೆ ಸುಭಾಸ್ ಬೋಸ್ ಚೌಕಿನಿಂದ ಪೆಂತಕತಾಗೆ ಸಂಪರ್ಕ ಕಲ್ಪಿಸುವ ಚಕ್ರತೀರ್ಥ ರಸ್ತೆಯ ಎಡ ಬದಿಯಲ್ಲಿ ದರಿಯಾ ಮಹಾವೀರನ ದೇವಾಲಯವಿದೆ. ದರಿಯಾ ಎಂದರೆ ಸಮುದ್ರ ಎಂಬರ್ಥವಿರುವುದರಿಂದ ಮಹಾವೀರನಾದ ಹನುಮನು ಸಮುದ್ರದಿಂದ ನಗರವನ್ನು ಕಾಪಾಡುತ್ತಿರುವನೆಂಬ ನಂಬಿಕೆಯಿಂದ ಇದನ್ನು ದರಿಯಾ ಮಹಾವೀರ ದೇವಾಲಯ ಎಂದು ಕರೆಯಲಾಗುತ್ತದೆ.

ಪ್ರತೀತಿಯಂತೆ ಒಂದೊಮ್ಮೆ ಜಗನ್ನಾಥ ಈ ಕ್ಷೇತ್ರದಲ್ಲಿ ನೆಲೆಸಿದ ನಂತರ ಅವನ ದರ್ಶನ ಕೋರಿ ಸಮುದ್ರ ದೇವನು ಈ ದೇವಾಲಯಕ್ಕೆ ಭೇಟಿ ನೀಡಿದನು. ಆ ಸಮಯದಲ್ಲಿ ಸಮುದ್ರದ ನೀರು ಈ ಪ್ರದೇಶದೊಳಗೆಲ್ಲ ನುಗ್ಗಿ ಅಪಾರ ಹಾನಿಗಳುಂಟಾದವು. ಜನರು ಈ ಕುರಿತು ಜಗನ್ನಾಥನನ್ನು ಪ್ರಾರ್ಥಿಸಿದರು. ಜಗನ್ನಾಥನು ರಕ್ಷಕನಾದ ಆಂಜನೇಯನನ್ನು ಕುರಿತು ವಿಚಾರಿಸಿದಾಗ ಹನುಮನು ಅವನ ಅಪ್ಪಣೆ ಪಡೆಯದೆ ಅಯೋಧ್ಯೆಗೆ ತೆರಳಿರುವ ವಿಚಾರ ತಿಳಿಯಿತು.

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: J'ram DJ

ಇದರಿಂದ ಕೋಪಿಸಿಕೊಂಡ ಜಗನ್ನಾಥನು, ಈ ಕ್ಷೇತ್ರವನ್ನು ಹಗಲು-ರಾತ್ರಿ ಕಾಯುವ ಜವಾಬ್ದಾರಿಯನ್ನು ಮರೆತು ಹೋಗಿದ್ದ ಹನುಮನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಇನ್ನು ಮುಂದೆ ಇಲ್ಲಿಯೆ ಸದಾ ನೆಲೆಸಿದ್ದು ಈ ಕ್ಷೇತ್ರವನ್ನು ಸಮುದ್ರ ನೀರು ಸೇರದಂತೆ ಕಾಯಬೇಕೆಂದು ಹೇಳಿದನು. ಹೀಗಾಗಿ ಈ ಹನುಮನಿಗೆ ಬೇಡಿ ಹನುಮಾನ್ ಎಂಬ ಹೆಸರೂ ಸಹ ಬಂದಿತು. ಸ್ಥಳೀಯವಾಗಿ ನಂಬಲಾಗಿರುವಂತೆ ಅಂದಿನಿಂದ ಈ ಸ್ಥಳವು ಸಮುದ್ರ ತೀರದಲ್ಲಿದ್ದರೂ ಯಾವ ಬಿರುಗಾಳಿಯ ಸಂದರ್ಭದಲ್ಲೂ ಸಮುದ್ರ ನೀರು ಇಲ್ಲಿ ಹೊಕ್ಕಿಲ್ಲ ಎನ್ನಲಾಗುತ್ತದೆ.

ಪುರಿಗೆ ತೆರಳುವ ಬಗೆ

ಎರಡನೇಯದಾಗಿ ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರನ ದೇವಾಲಯ ಆವರಣದಲ್ಲಿ ಬೇಡಿ ಆಂಜನೇಯನ ಸನ್ನಿಧಿಯನ್ನು ಕಾಣಬಹುದು. ಇದನ್ನು ಬೇಡಿ ಆಂಜನೇಯ ಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ. ವೆಂಕಟೇಶ್ವರ ಸ್ವಾಮಿ ಹಾಗೂ ಭೂವರಾಹಸ್ವಾಮಿಯ ನಂತರ ಇದಕ್ಕೆ ಹೆಚ್ಚಿನ ಮನ್ನಣೆಯಿದೆ. ಆ ಎರಡೂ ದೇವಾಲಯಗಳಲ್ಲಿ ನೈವೇದ್ಯ ಅರ್ಪಿಸಿದ ನಂತರ ಅದನ್ನು ಈ ದೇವಾಲಯಕ್ಕೆ ತರಲಾಗುತ್ತದೆ.

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ತಿರುಮಲದಲ್ಲಿರುವ ಬೇಡಿ ಆಂಜನೇಯನ ಸನ್ನಿಧಿ, ಚಿತ್ರಕೃಪೆ: vimal_kalyan

ಪ್ರತೀತಿಯಂತೆ ಹನುಮನು ತನ್ನ ತರುಣಾವಸ್ಥೆಯಲ್ಲಿದ್ದಾಗ ಒಂಟೆಯೊಂದನ್ನು ಹುಡುಕಲು ತಿರುಮಲ ಕ್ಷೇತ್ರ ಬಿಟ್ಟು ಹೊರಡಲು ಸಜ್ಜಾಗಿದ್ದ. ಅವನ ಹಟ ಮಾರಿತನವನ್ನು ಸಹಿಸಲಾರದೆ ತಾಯಿ ಅಂಜನಾ ದೇವಿಯು ಆತನ ಕೈಗಳನ್ನು ಸರಪಣಿಗಲಿಂದ ಬಂಧಿಸಿ ತಾನು ಮರಳುವವರೆಗೆ ಎಲ್ಲಿಯೂ ಕದಲ ಕೂಡದಿಂದ ಆದೇಶಿಸಿ ಆಕಾಶ ಗಂಗೆಯತ್ತ ಹೊರಟು ಹೋದಳು. ಹೀಗೆ ಹೋರ ಹೋದ ಅಂಜನಾ ದೇವಿ ಮತ್ತಿನೆಂದೂ ಮರಳಲಿಲ್ಲ ಎಂದು ನಂಬಲಾಗಿದ್ದು, ಆದ್ದರಿಂದ ಇಂದಿಗೂ ಇಲ್ಲಿ ಆಂಜನೇಯನು ಸಂಕೋಲೆಗಳಿಂದ ಬಂಧಿಸಲ್ಪಟ್ಟು ಕಾಯುತ್ತಿರುವನು ಎಂದು ಹೇಳಲಾಗುತ್ತದೆ.

ತಿಮ್ಮಪ್ಪನ ದರ್ಶನ ಯಾರಿಗೆ ತಾನೆ ಬೇಕಿಲ್ಲ! ನೀವೂ ಹೋಗಿ

ತಿರುಪತಿಗಿರುವ ರೈಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X