Search
  • Follow NativePlanet
Share
» »ಈ ರಸ್ತೆ ಪ್ರವಾಸಗಳಿಗೆ ಗುಂಡಿಗೆ ಗಟ್ಟಿ ಇರಲೇ ಬೇಕು

ಈ ರಸ್ತೆ ಪ್ರವಾಸಗಳಿಗೆ ಗುಂಡಿಗೆ ಗಟ್ಟಿ ಇರಲೇ ಬೇಕು

By Vijay

ಸಾಹಸಪ್ರಿಯ, ಸವಾಲು ಸ್ವೀಕರಿಸುವಂತಹ ಮನೋಬಲವುಳ್ಳ ಪ್ರವಾಸಿಗರೆ ಇನ್ನೇನು ಬೇಸಿಗೆಯು ದ.ಭಾರತದಲ್ಲಿ ಕಾಲಿಡುತ್ತಿದೆ. ಆದರೆ ದೂರದ ಹಿಮಾಚಲ ಪ್ರದೇಶದ ಕೆಲ ವಿಸ್ಮಯಕರ ಸ್ಥಳಗಳು ಹಿಮ ಹಾಸಿಗೆಯಿಂದ ಮುಕ್ತಿ ಪಡೆದ ದಾರಿಗಳ ಮೂಲಕ ತಮ್ಮನ್ನು ಭೇಟಿ ಮಾಡಿ ಎಂದು ಉತ್ಸುಕತೆಯಿಂದ ಕರೆಯುತಿವೆ. ಹೌದು ಹಿಮಾಚಲದ ಅದೇಷ್ಟೊ ಸುಂದರ ಸ್ಥಳಗಳು ಚಳಿಗಾಲದ ಸಂದರ್ಭದಲ್ಲಿ ಅತಿಯಾದ ಹಿಮಪಾತಗಳ ಪ್ರಭಾವದಿಂದಾಗಿ ದೇಶದೊಂದಿಗೆ ತಾತ್ಕಾಲಿಕವಾಗಿ ನಂಟನ್ನು ಕಳಚಿಕೊಳ್ಳುತ್ತವೆ.

ಥಾಮಸ್ ಕುಕ್ ನಿಂದ ಡೊಮೆಸ್ಟಿಕ್ ಫ್ಲೈಟ್ ಬುಕ್ಕಿಂಗ್ ಮೇಲೆ ರೂ. 1000 ಕಡಿತ

ಜನವರಿ, ಫೆಬ್ರುವರಿಗಳ ನಂತರದಲ್ಲಿ ಹಿಮದ ಪ್ರಭಾವ ತಿಳಿಗೊಂಡು ಆ ಸ್ಥಳಗಳಿಗೆ ಮತ್ತೆ ಭೇಟಿ ನೀಡುವಂತೆ ಅವಕಾಶ ಕಲ್ಪಿಸುತ್ತವೆ. ಆದರೆ ಈ ಸ್ಥಳಗಳಿಗೆ ಹಾಯಾಗಿ ಅಥವಾ ಸುಲಭವಾಗಿ ತಲುಪಬಹುದೆಂದು ನೀವು ತಿಳಿದಿದ್ದರೆ, ಖಂಡಿತ ನಿಮ್ಮ ಗ್ರಹಿಕೆ ತಪ್ಪು. ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವಂತೆ ಶ್ರಮ ಪಟ್ಟರೆ ಮಾತ್ರ ಫಲ ಲಭ್ಯ ಎಂಬಂತೆ, ಈ ಸುಂದರ ಸ್ಥಳಗಳ ಸ್ವರ್ಗ ಸದೃಶ ದೃಶ್ಯಾವಳಿಗಳನ್ನು ನೋಡಿ ನೀವು ನಿಮ್ಮ ಕಣ್ಮನಗಳನ್ನು ತುಂಬಿಕೊಳ್ಳಬೇಕಾಗಿದ್ದರೆ, ಕಷ್ಟಕರ ದಾರಿಯಲ್ಲಿ ಸಹನೆಯಿಂದ ಚಾಲನೆ ಮಾಡಿ, ನಿಮ್ಮ ಚಾಲನಾ ಕೌಶಲ್ಯವನ್ನು ಒರೆಗೆ ಹಚ್ಚಿ ಅದನ್ನು ದಕ್ಕಿಸಿಕೊಳ್ಳಬಹುದು.

ವಿಶೇಷ ಲೇಖನ : ಭಾರತದ ಅದ್ಭುತ ರೋಮಾಂಚಕ ಸ್ಥಳಗಳು

ಬನ್ನಿ, ಆ ಎರಡು ಅದ್ಭುತ ಮಾರ್ಗಗಳು ಯಾವುವು ಹಾಗೂ ಅದರ ಕಷ್ಟಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಮಾರ್ಗ ಒಂದು : ಸಚ್ ಮತ್ತು ಪಂಗಿ ಕಣಿವೆಗಳಲ್ಲಿ ಪಯಣ, ಮಾರ್ಗ ಎರಡು : ಮನಾಲಿಯಿಂದ ಚಂದ್ರ ತಾಲ್ ಹಾಗೂ ಕಾಜಾ.

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಇತ್ತ ಭಾರತದ ಇತರೆ ಕಡೆ ಬೇಸಿಗೆ ಮುಗಿದು ಮಳೆ ಕಾಲಿಡುತ್ತಿದ್ದಂತೆಯೆ ಅತ್ತ ಹಿಮಾಲಯದ ಹತ್ತಿರವಿರುವ ಪ್ರದೇಶಗಳು ಹಿತಕರವಾದ ಪರಿಸರ ಹಾಗೂ ವಾತಾವರಣ ಪಡೆಯುತ್ತ, ರಸ್ತೆ ಪ್ರವಾಸಗಳಿಗೆ ಪ್ರವಾಸಿಗರನ್ನು ಸ್ವಾಗತಿಸಲು ಪ್ರಾರಂಭಿಸುತ್ತವೆ. ಹೌದು ಹಿಮಾಲಯದ ಬುಡದಲ್ಲಿರುವ ಹಲವು ರಹದಾರಿಗಳ ಮೂಲಕ ಮಾಡುವ ಪ್ರವಾಸ ಎಲ್ಲಿಲ್ಲದ ಹುಮ್ಮಸ್ಸು ಹಾಗೂ ಹುರುಪನ್ನು ತುಂಬುತ್ತದೆ.

ಚಿತ್ರಕೃಪೆ: Steve Hicks

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಈ ರಸ್ತೆ ಪ್ರವಾಸಗಳು ಸಾಕಷ್ಟು ಸವಾಲೆಸೆಯುವಂತಹ ಅಂಶಗಳನ್ನು ಹೊಂದಿರುವುದರಿಂದ ಸಾಹಸಪ್ರಿಯ ಪ್ರವಾಸಿಗರಿಗೆ ಈ ಪ್ರವಾಸವು ಎಲ್ಲಿಲ್ಲದ ಸಂತಸ ಉಂಟುಮಾಡುತ್ತದೆ. ಆದರೆ ನೀವೋಬ್ಬ ನಿಪುಣ ಚಾಲಕನಾಗಿರಬೇಕು ಹಾಗೂ ಸಾಕಷ್ಟು ಸಹನೆ ಹಾಗೂ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ.

ಚಿತ್ರಕೃಪೆ: Travelling Slacker

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಈ ಸಮಯದಲ್ಲಿ ಹಿಮಪಾತದಿಂದ ಮುಚ್ಚಿಹೋಗಿದ್ದ ಪಾಸ್ (ರಹದಾರಿ) ಗಳು, ಹಿಮದಿಂದ ಮುಕ್ತಿ ಪಡೆದು ಮತ್ತೆ ತಮ್ಮ ಮೇಲೆ ವಾಹನಗಳ ಚಲನೆಯನ್ನು ನೀರಿಕ್ಷಿಸುತ್ತಿರುತ್ತವೆ. ಮೊದಲ ಮಾರ್ಗವು ಡಾಲ್ ಹೌಸಿ - ಖಜ್ಜಿಯಾರ್ - ಚಂಬಾ - ಬೈರಾಗಡ್ - ಸಚ್ ಪಾಸ್ - ಕಿಲ್ಲಾರ್ - ಚೆರಿ ಬಂಗಲೆ - ಉದೈಪುರ - ತಂಡಿ - ಗ್ರಾಂಫು - ರೊಹ್ತಂಗ್ ಪಾಸ್ ನಿಂದ ಮನಾಲಿಯವರೆಗಿದೆ.

ಚಿತ್ರಕೃಪೆ: Travelling Slacker

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಡಾಲ್ ಹೌಸಿಯನ್ನು ಮನಾಲಿಯೊಂದಿಗೆ ಬೆಸೆಯುವ ಈ ಮಾರ್ಗವು ಆಷ್ಟೊಂದಾಗಿ ಕೇಳಲ್ಪಟ್ಟಿಲ್ಲ. ಆದರೆ ಇದೊಂದು ಸುಂದರ ದೃಶ್ಯಾವಳಿಗಳನ್ನು ಕರುಣಿಸುವ ಮಾರ್ಗವಾಗಿದ್ದು ಸಾಕಷ್ಟು ಕಷ್ಟಕರ ಅಂಶಗಳನ್ನು ಮಾರ್ಗ ಮಧ್ಯದಲ್ಲಿ ಅನುಭವಿಸಬೇಕಾಗುತ್ತದೆ.

ಚಿತ್ರಕೃಪೆ: Anirban Biswas

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಡಾಲ್ ಹೌಸಿಯಿಂದ ಚಂಬಾವರೆಗೆ 77 ಕಿ.ಮೀ ದೂರವಿದ್ದು ಮಾರ್ಗವು ಬಲು ಸುಲಭವೆಂದೆ ಹೇಳಬಹುದು. ಆದರೆ ಚಂಬಾದ ನಂತರ ನಿಜವಾದ ಸವಾಲೆಸೆಯುವ ಮಾರ್ಗ ಶುರುವಾಗುತ್ತದೆ. ರಾಜ್ಯ ಹೆದ್ದಾರಿ ಸಂಖ್ಯೆ 37 ಬರಬರುತ್ತ ಅತಿ ಚಿಕ್ಕದಾಗುತ್ತ ಹೋಗುತ್ತದೆ ಹಾಗೂ ಒಂದೆಡೆ ಪ್ರಪಾತ ಇನ್ನೊಂದೆಡೆ ಬೆಟ್ಟಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಇತರೆ ವಾಹನಗಳು ಕಂಡುಬರುವುದು ವಿರಳ. ಆದರೂ ನೀವು ಬೆಳಿಗ್ಗೆಯ ಸಮಯದಲ್ಲಿ ಬಹು ಬೇಗನೆ ಹೊರಡುವುದೆ ಉತ್ತಮ. ಒಂದೊಮ್ಮೆ ಮುಂದೆ ಯಾವುದಾದರೂ ವಾಹನ ಬಂದಲ್ಲಿ ಮತ್ತೆ ಹಿಂಬರಬೇಕಾಗುತ್ತದೆ (ರಿವರ್ಸ್ ಗೇರ್ ಹಾಕಿಕೊಂಡು! ಇದು ಅತಿ ಕಷ್ಟಕರವಾಗಬಹುದು).

ಚಿತ್ರಕೃಪೆ: Travelling Slacker

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಚಂಬಾದಿಂದ 53 ಕಿ.ಮೀ ದೂರದಲ್ಲಿದೆ ಬೈರಾಗಡ್. ಬೈರಾಗಡ್ ನಿಮ್ಮ ಪ್ರಯಾಣದ ಮೊದಲ ತಂಗುದಾಣವಾಗಲು ಎಲ್ಲ ಅರ್ಹತೆ ಹೊಂದಿದೆ. ಆದ್ದರಿಂದ ಇದು ನಿಮ್ಮ ಮೊದಲ ವಿಶ್ರಾಂತ ಸ್ಥಳವಾಗಲಿ. ಇಲ್ಲಿ ಸರ್ಕಾರಿ ವಸತಿಗೃಹ ಒಂದಿದ್ದು ತಂಗಲು ಅನುಕೂಲಕರವಾಗಿದೆ. ಅಲ್ಲದೆ ಊಟವು ಸಹ ಇಲ್ಲಿ ದೊರೆಯುತ್ತದೆ. ಸಚ್ ಪಾಸ್ ಸಾಕಷ್ಟು ಅದ್ಭುತವಾಗಿರುವುದರಿಂದ ಬೈರಾಗಡ್ ನಿಂದ ನಸುಕಿನಲ್ಲಿಯೆ ಸಚ್ ಪಾಸ್ ತೆರಳಲು ಯೋಜನೆ ಮಾಡಿಕೊಳ್ಳಿ.

ಚಿತ್ರಕೃಪೆ: Travelling Slacker

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಬೈರಾಗಡ್ ನಿಂದ ಸಚ್ ಪಾಸ್ ವರೆಗಿನ ರಸ್ತೆಯು ನಿಮ್ಮನ್ನು ಹಾಗೂ ನಿಮ್ಮ ಚಾಲನಾ ನಿಪುಣತೆಯನ್ನು ನಿಜವಾಗಿಯೂ ಒರೆಗೆ ಹಚ್ಚುತ್ತದೆ. ಪ್ರಯಾಣದ ಈ ಒಂದು ಭಾಗವು ಅತ್ಯುನ್ನತವಾದ ಅನುಭವವನ್ನು ನಿಮಗೆ ಕರುಣಿಸುತ್ತದೆ. ಅತಿ ಚಿಕ್ಕದಾದ ರಸ್ತೆ, ಅಲ್ಲಲ್ಲಿ ಒಡುಕುಗಳು, ಆಳವಾದ ಪ್ರಪಾತ, ಅಬ್ಬಾ ಉಸಿರು ಬಿಗಿ ಹಿಡಿಯುವಂತಿದೆ ಈ ಮಾರ್ಗ. ಸಾಕಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗುತ್ತದಿಲ್ಲಿ. ಯಾವುದೆ ಚಿಕ್ಕ ತಪ್ಪುಗಳಿಗೆ ಅವಕಾಶವಿಲ್ಲ.

ಚಿತ್ರಕೃಪೆ: nevil zaveri

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಈ ರೀತಿಯ ಗಂಭೀರ ಹಾಗೂ ಮೈಯಲ್ಲಿ ಚಳಿ ಹುಟ್ಟಿಸುವ ಮಾರ್ಗವು ಸುಮಾರು 29 ಕಿ.ಮೀ ಗಳಷ್ಟು ಉದ್ದವಿದೆ. ಸಚ್ ಪಾಸ್ ಇನ್ನೇನು ಕೇವಲ ಏಳು ಕಿ.ಮೀ ಮಾತ್ರ ಇದೆ ಎಂದಾಗ ನಿಮಗೆ ಮೊದಲ ಹಿಮ ನದಿಯ ಗರಿಗೆದರಿದ ನೋಟ ಅದ್ಭುತವಾಗಿ ಕಂಡು ಬರುತ್ತದೆ. ರೋಮ ರೋಮಗಳೂ ಸೆಟೆದು ನಿಲ್ಲುವಲ್ಲಿ ಯಾವುದೆ ಸಂಶಯವಿಲ್ಲ.

ಚಿತ್ರಕೃಪೆ: Anshuzsnowy7

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಸಚ್ ಪಾಸ್ ನ ಕೆಳ ಬದಿಯಲ್ಲಿ ಒಂದು ಧಾಬಾ ಇದ್ದು ಬೆಳಿಗ್ಗೆಯ ಉಪಾಹಾರ ಸವಿಯಲು ಆದರ್ಶಮಯ ಎಂತಲೆ ಹೇಳಬಹುದು. ಬಿಸಿ ಬಿಸಿ ನೂಡಲ್ಸ್ ಅನ್ನು ಬಾಯ್ಚಪ್ಪರಿಸಿ ತಿನ್ನಬಹುದು. ಸಚ್ ಪಾಸ್ ನಂತರ ಪಂಗಿ ಕಣಿವೆಯ ಹತ್ತಿರ ಪ್ರಯಾಣ ಮುಂದುವರೆಸಬೇಕು. ಈ ಸಮಯದಲ್ಲಿ ಕಿಲ್ಲಾಅರ್, ಚೆರಿ ಬಂಗಲೆ ದಾಟಿಕೊಂಡು ಹೋಗಬೇಕು. ರಸ್ತೆ ದುಸ್ಥಿತಿಯಲ್ಲಿದ್ದರೂ ಸಹ ತೆರಳುವಾಗ ಕಂಡುಬರುವ ಸುಂದರ ಪ್ರಕೃತಿಯು ನಿಮಗುಂಟಾಗುವ ಕಿರಿ ಕಿರಿಯನ್ನು ಮರೆಯುವಲ್ಲಿ ಸಹಾಯ ಮಾಡುತ್ತದೆ.

ಚಿತ್ರಕೃಪೆ: Steve Hicks

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಪಂಗಿ ಚಿಕ್ಕದಾದ ಹಾಗೂ ಅಷ್ಟೆ ಅದ್ಭುತವಾದ ಕಣಿವೆಯಾಗಿದೆ. ಇದು ಲಾಹೌಲ್ ಜಿಲ್ಲೆಗೆ ತೆರಳಲು ಹೆಬ್ಬಾಗಿಲೂ ಸಹ ಹೌದು. ಇಲ್ಲಿಂದ ಪ್ರಯಾಣ ಮುಂದುವರೆಸಿದಾಗ ಸಿಗುವ ಪ್ರಮುಖ ಪಟ್ಟಣ ಉದೈಪುರ (ಚೆರಿ ಬಂಗಲೆಯಿಂದ 63 ಕಿ.ಮೀ). ನಿಮಗಿಷ್ಟವಿದ್ದಲ್ಲಿ ಉದೈಪುರದಿಂದ ಒಂಭತ್ತು ಕಿ.ಮೀ ದೂರವಿರುವ ತ್ರಿಲೋಕನಾಥ ಮಂದಿರಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Steve Hicks

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಉದೈಪುರದಿಂದ ಪ್ರಯಾಣ ಮುಂದುವರೆಸಿ 44 ಕಿ.ಮೀ ದೂರದಲ್ಲಿರುವ ತಂಡಿ ತಲುಪಿ. ತಂಡಿಯು ಲೇಹ್ - ಮನಾಲಿ ಹೆದ್ದಾರಿಯ ಮೇಲಿದ್ದು, ಅದರ ಮೂಲಕ ಪ್ರಯಾಣ ಬೆಳೆಸುತ್ತ ಮನಾಲಿಯನ್ನು ತಲುಪಿ. ಇಲ್ಲಿಗೆ ಈ ಮಾರ್ಗದ ಅತ್ಯದ್ಭುತ ಹಾಗೂ ರೋಚಕ ಪ್ರಯಾಣ ಮುಕ್ತಾಯಗೊಳ್ಳುತ್ತದೆ.

ಚಿತ್ರಕೃಪೆ: Steve Hicks

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಎರಡನೆಯ ಮಾರ್ಗವು ಮನಾಲಿಯಿಂದ ಹೊರಟು ಚಂದ್ರ ತಾಲ್ ಅನ್ನು ತಲುಪುವುದಾಗಿದೆ. ಈ ಮಾರ್ಗವೂ ಸಹ ಸಾಕಷ್ಟು ರೋಮಾಂಚನವನ್ನುಂಟು ಮಾಡುತ್ತದೆ. ಮನಾಲಿಯಿಂದ 50 ಕಿ.ಮೀ ದೂರದ ರೋಹ್ತಂಗ್ ವರೆಗೂ ಪ್ರಯಾಣ ಮಾರ್ಗವು ಅಷ್ಟೊಂದು ಕಷ್ಟಕರವಾಗಿಲ್ಲ. ಒಂದೊಮ್ಮೆ ರೋಹ್ತಂಗ್ ಪ್ರವೇಶಿಸಿದರೆಂದರೆ ಸಾಕು, ನಿಮ್ಮಲ್ಲಿ ಅವಿತು ಕುಳಿತಿರುವ ನಿಪುಣ ಚಾಲಕನನ್ನು ಎಬ್ಬಿಸಲೇಬೇಕು.

ಚಿತ್ರಕೃಪೆ: Balaji.B

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಒಂದೊಮ್ಮೆ ಗ್ರಾಂಫು ತಲುಪಿದ ಮೇಲೆ ಅಲ್ಲಿಂದ ಕೊಕ್ಸರ್ ಅಥವಾ ಕೀಲಾಂಗ್ ಗೆ ಹೊರಡುವ ಬದಲು ನಿಮ್ಮ ಪ್ರಯಾಣವನ್ನು ಚತ್ರುವಿನೆಡೆ ಬೆಳೆಸಬೇಕು. ರೋಹ್ತಂಗ್ ನಿಂದ 15 ಕಿ.ಮೀ ದೂರವಿರುವ ಗ್ರಾಂಫುವಿನಿಂದ ಬಲ ತಿರುವು ಪಡೆದು ಸಂಚರಿಸಿದಾಗ ನೀವು ಜಗತ್ತಿನಲ್ಲಿ ಒಬ್ಬರೆ ಜೀವಿಸಿತ್ತಿದ್ದೀರೆಂಬ ಭಾವನೆ ಮೂಡುತ್ತದೆ. ಯಾವುದೆ ರೀತಿಯ ಕೃತಕ ಶಬ್ದಗಳು ಕಿವಿಗಳಿಗೆ ಬಿಳುವುದೂ ಇಲ್ಲ ಒಬ್ಬ ನರ ಪಿಳ್ಳೆಯೂ ಕಣ್ಣಿಗೆ ಗೋಚರಿಸುವುದೂ ಇಲ್ಲ.

ಚಿತ್ರಕೃಪೆ: nevil zaveri

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಈ ಮಾರ್ಗದಲ್ಲಿ ನೀವು ಪಯಣಿಸುವಾಗ ಗ್ರಾಂಫು, ಚತ್ರು, ಚೊಟ್ಟಾ ದಾರಾ, ಬತಾಲ್ ಅಥವಾ ಲೋಸರ್ ಎಂಬ ಯಾವುದಾದರೊಂದು ಸ್ಥಳದಲ್ಲಿ ವಿಶ್ರಾಂತಿ ಪಡೆಯಬಹುದು. ಬತಲ್ ನಲ್ಲಿರುವ ಚಂದ್ರ ಧಾಬಾ.

ಚಿತ್ರಕೃಪೆ: Richard Weil

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಗ್ರಾಂಫುವಿನಿಂದ 17 ಕಿ.ಮೀ ದೂರದಲ್ಲಿರುವ ಚತ್ರು ದಾಟಿದ ನಂತರ ನಿಮ್ಮ ಪ್ರಯಾಣ ಮಾರ್ಗವು ರಂಗೇರಲು ಪ್ರಾರಂಭಿಸುತ್ತದೆ. ಸಾಕಷ್ಟು ಕಡೆಗಳಲ್ಲಿ ರಸ್ತೆಗಳು ಒಡೆದಿದ್ದು ನಿಮ್ಮ ನಾಡಿ ಮಿಡಿತ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಸಾಕಷ್ಟು ಜಾಗರೂಕತೆಯಿಂದ, ನಿಧಾನವಾಗಿ ಮುಂದೆ ಚಲಿಸುತ್ತಿರಬೇಕು. ಚತ್ರುದಲ್ಲಿರುವ ಸೇತುವೆ.

ಚಿತ್ರಕೃಪೆ: Raja Selvaraj

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಈ ಸಂದರ್ಭದಲ್ಲಿ ನಿಮಗೆ ಎದುರಾಗಬಹುದಾದ ವಾಹನಗಳೆಂದರೆ ಕುರಿಗಳ ಹಿಂಡು. ಹೆಚ್ಚು ಜಾಗರೂಕತೆಯಿಂದ, ಸಹನೆಯಿಂದ ಇವುಗಳನ್ನು ನಿಧಾನವಾಗಿ ದಾಟಿ ಮತ್ತೆ ಪ್ರಯಾಣ ಮುಂದುವರೆಸಬೇಕು.

ಚಿತ್ರಕೃಪೆ: Raphael Affentranger

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ನಂತರ ಕುಂಜುಮ್ ಲಾ ದ ಹತ್ತಿರ ನಿಮ್ಮ ಪ್ರಯಾಣ ಮುಂದುವರೆಯುತ್ತದೆ. ಚಿಕ್ಕ ಅಥವಾ ಕಿರಿದಾದ ರಸ್ತೆ, ಅಲ್ಲಲ್ಲಿ ಒಡಕುಗಳು, ಆಳವಾದ ಪ್ರಪಾತ, ರುದ್ರಮಯ ಪರ್ವತಗಳು ಎಲ್ಲವೂ ಸೇರಿ ಈ ನಿಮ್ಮ ಪ್ರಯಾಣವನ್ನು ಎಂದಿಗೂ ಮರೆಯಲಾಗದಂತಹ ಅನುಭವದ ಬುತ್ತಿಯನ್ನು ಕಟ್ಟಿ ಕೊಡುತ್ತವೆ.

ಚಿತ್ರಕೃಪೆ: Lev Yakupov

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಮೈಜುಮ್ಮೆನ್ನಿಸುವ ರಸ್ತೆ ಮಾರ್ಗ:

ಕುಂಜುಮ್ ಲಾ ದ ಬಳಿಯಲ್ಲೆ ಅತಿ ಕಿರಿದಾದ ಹಾಗೂ ಕ್ಲಿಷ್ಟಕರವಾದ 12 ಕಿ.ಮೀ ಉದ್ದದ ರಸ್ತೆಯೊಂದಿದ್ದು, ಇದು ನೇರವಾಗಿ ನಿಮ್ಮನ್ನು ಚಂದ್ರ ತಾಲಕ್ಕೆ ಕರೆದೊಯ್ಯುತ್ತದೆ. ಆದರೆ ಎಚ್ಚರ ಈ ರಸ್ತೆಯನ್ನು ಪಳಗಿಸುತ್ತ ಪ್ರಯಾಣಿಸಲು ಅತಿ ನಿಪುಣ ಚಾಲಕರೆ ಬೇಕು. ಇಲ್ಲಿ ಯಾವ ಸಂದರ್ಭದಲ್ಲಿ ಯಾವ ರೀತಿಯ ನಾಟಕೀಯ ಸ್ಥಿತಿ ಉದ್ಭವವಾಗುವುದೆಂದು ಹೇಳುವುದು ಕಷ್ಟ. ಚಂದ್ರತಲ ಸರೋವರ.

ಚಿತ್ರಕೃಪೆ: Raphael Affentranger

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X