Search
  • Follow NativePlanet
Share
» »ತುಮಕೂರಿಗೆ ಭೇಟಿ ನೀಡಲು ಪ್ರೇರೇಪಿಸುವ ಚುಂಬಕಗಳು

ತುಮಕೂರಿಗೆ ಭೇಟಿ ನೀಡಲು ಪ್ರೇರೇಪಿಸುವ ಚುಂಬಕಗಳು

By Vijay

ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ, ವಾರಾಂತ್ಯ ರಜೆಗಳನ್ನು ಹಾಯಾಗಿ ಕಳೆಯುವಂತೆ ಮಾಡಲು ಸಹಕಾರಿಯಾಗಿರುವ ತುಮಕೂರು ಜಿಲ್ಲಾ ಕೇಂದ್ರವು ಹತ್ತು ಹಲವು ಆಕರ್ಷಕ ಹಾಗೂ ಭೇಟಿ ನೀಡಲು ಯೋಗ್ಯವಾದ ತಾಣಗಳನ್ನು ಹೊಂದಿರುವ ತವರಾಗಿದೆ.

ಗುಜು ಗುಜು ಗದ್ದಲದಿಂದ ದೂರ ಉಳಿದು, ಪ್ರಕೃತಿಯಲ್ಲಿ ಶಾಂತಿಯುತವಾಗಿ ವಿಲೀನವಾಗಲು ಮನ ಬಯಸಿದ್ದರೆ, ಕೋಟೆ, ಬೆಟ್ಟ,ದುರ್ಗಗಳಂತಹ ತಾಣಗಳಿಗೆ ಭೇಟಿ ನೀಡಲು ಮನ ತವಕಿಸಿದ್ದರೆ ಇಲ್ಲವೆ ಟ್ರೆಕ್ಕಿಂಗ್ ಅಥವಾ ಧಾರ್ಮಿಕ ಕೇಂದ್ರಗಳಿಗೆ ನಮಸ್ಕಾರ ಹೇಳಲು ಮನ ಹವಣಿಸುತ್ತಿದ್ದರೆ ತುಮಕೂರು ಸಹ ಒಂದು ಒಳ್ಳೆಯ ಆಯ್ಕೆ ನಿಮಗಾಗಬಹುದು.

ವಿಶೇಷ ಲೇಖನ : ಹಾಸನ, ಶಿವಮೊಗ್ಗದಲ್ಲಿರುವ ಪುರಾತನ ದೇವಾಲಯಗಳು

ಈ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಂದ ಹಿಡಿದು ಧಾರ್ಮಿಕ ಕ್ಷೇತ್ರಗಳವರೆಗೆ ಹತ್ತು ಹಲವು ಪ್ರವಾಸಿ ಆಕರ್ಷಣೆಗಳಿದ್ದು ಭೇಟಿ ನೀಡ ಯೋಗ್ಯ ಸ್ಥಾನಗಳಾಗಿವೆ. ಪ್ರಸ್ತುತ ಲೇಖನದ ಮೂಲಕ ತುಮಕೂರು ಜಿಲ್ಲೆಯ ಕೆಲವೆ ಕೆಲವು ವಿಶೇಷವಾಗಿ ಭೇಟಿ ಮಾಡಬಹುದಾದ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಿರಿ.

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಹುತ್ರಿದುರ್ಗ : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ ಈ ಬೆಟ್ಟ ಒಂದು ಅದ್ಭುತವಾದ ಟ್ರೆಕ್ಕಿಂಗ್ ತಾಣವಾಗಿದೆ. ಇದರ ಮನೋಜ್ಞವಾದ ಪರಿಸರವು ಮನಸ್ಸಿಗೆ ಸಾಕಷ್ಟು ಹುರುಪು ನೀಡುತ್ತದೆ. ಕುಣಿಗಲ್-ಮಾಗಡಿ ರಾಜ್ಯ ಹೆದ್ದಾರಿ ಸಂಖ್ಯೆ 94 ರಿಂದ ಏಳು ಕಿ.ಮೀ ದೂರದಲ್ಲಿರುವ ಈ ದುರ್ಗದ ಬೆಟ್ಟದ ಮೇಲೆ ಶಿವನಿಗೆ ಮುಡಿಪಾದ ಶಕರೇಶ್ವರ ದೇವಾಲಯವನ್ನು ಕಾಣಬಹುದು. ದಿನದ ಸುಅಭವಾದ ಹಾಗೂ ಅಷ್ಟೆ ರೋಮಾಂಚಕವಾದ ಚಾರಣಕ್ಕೆ ಇದು ಆದರ್ಶಮಯವಾಗಿದೆ.

ಚಿತ್ರಕೃಪೆ: Srinivasa S

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಶಿವಗಂಗೆ : ತುಮಕೂರಿನಲ್ಲಿ ಭೇಟಿ ನೀಡಬಹುದಾದ ಧಾರ್ಮಿಕ ಹಾಗೂ ಸಾಹಸಪ್ರಧಾನವಾದ ಆಕರ್ಷಣೆ ಇದಾಗಿದೆ. ಮೂಲತಃ ಇದೊಂದು ಶಿಖರ ಶೃಂಗವಾಗಿದೆ. ಶಿವಲಿಂಗದಾಕಾರದ ಬೆಟ್ಟ ಇದಾಗಿದ್ದು ಇಲ್ಲಿ ನೀರಿನ ತೊರೆಯೊಂದಿದ್ದು ಅದನ್ನು ಗಂಗೆಯೆಂದೆ ನಂಬಲಾಗಿದೆ. ಹೀಗೆ ಶಿವ ಹಾಗೂ ಗಂಗೆಯ ನೆಲೆಯಾಗಿರುವ ಕಾರಣ ಇದನ್ನು ಶಿವಗಂಗೆ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಈ ತಾಣದಲ್ಲಿ ಪಾತಾಳಗಂಗೆ, ಒಳ್ಕಲ್ ತೀರ್ಥ, ಗಂಗಾಧರೇಶ್ವರ ದೇವಾಲಯ, ಬಸವಣ್ಣ ಹೀಗೆ ಹಲವು ಪವಿತ್ರ ಸನ್ನಿಧಿಗಳು, ರಚನೆಗಳು ಇರುವುದರಿಂದ ಇದನ್ನು ಒಮ್ಮೊಮ್ಮೆ ದಕ್ಷಿಣ ಕಾಶಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ದಾಬಸ್ ಪೇಟೆಗೆ ಹತ್ತಿರದಲ್ಲಿರುವ ಈ ಬೆಟ್ಟದಲ್ಲಿ ಶಾರದಾಂಬೆಯ ದೇಗುಲ, ಆಗಸ್ತ್ಯ ತೀರ್ಥ, ಕಣ್ವ ತೀರ್ಥ, ಕಪಿಲ ತೀರ್ಥ, ಪಾತಾಳಗಂಗೆ ಮುಂತಾದವುಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Dayanandashetty beloor

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಪ್ರಾರಂಭಿಕರಿಗೆ ಅಥವಾ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಏರುವ ಚಾರಣ ಮಾರ್ಗ ಈ ಬೆಟ್ಟ ಹೊಂದಿದೆ. ಕೆಲವು ಸ್ಥಳಗಳಲ್ಲಿ ಬೆಟ್ಟವು ಮೊನಚಾಗಿದ್ದು ಅಲ್ಲಿ ಭದ್ರತೆಯ ದೃಷ್ಟಿಯಿಂದ ಕಬ್ಬಿಣದ ಸಲಾಖೆಗಳನ್ನು ಗಟ್ಟಿಯಾಗಿ ನೆಡಲಾಗಿದೆ. ಅಲ್ಲದೆ ವಿಶ್ರಾಂತಿ ಪಡೆಯಲೂ ಸಹ ಅಲ್ಲಲ್ಲಿ ಸ್ಥಳಗಳಿದ್ದು ಸ್ಥಳೀಯ ವ್ಯಾಪಾರಿಗಳು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರುತ್ತಿರುತ್ತಾರೆ.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಇಲ್ಲಿನ ಗವಿ ಗಂಗಾಧರೇಶ್ವರ ದೇಗುಲವು ರೋಚಕ ವಿಷಯವನ್ನೊಳಗೊಂಡಿದೆ. ಅದರ ಪ್ರಕಾರ ಈ ಶಿವಲಿಂಗಕ್ಕೆ ತುಪ್ಪದಿಂದ ಅಭಿಷೇಕ ಮಾಡಿದರೆ ಅದು ವಿಚಿತ್ರವೆಂಬಂತೆ ಬೆಣ್ಣೆಯಾಗುತ್ತದೆ ಮತ್ತು ಆ ಬೆಣ್ಣೆಯು ಅನೇಕ ವ್ಯಾಧಿಗಳಿಗೆ ಪರಿಣಾಮಕಾರಿಯಾದ ಔಷಧೀಯ ಗುಣ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿರುವ ವೀರಭದ್ರಸ್ವಾಮಿಯ ವಿಗ್ರಹ.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಇನ್ನೊಂದು ನಂಬಿಕೆಯಂತೆ ಗಂಗಾಧರೇಶ್ವರ ದೇವಾಲಯದ ಗರ್ಭ ಗೃಹದಲ್ಲಿ ಸುರಂಗ ಮಾರ್ಗವೊಂದಿದ್ದು ಅದು ನೇರವಾಗಿ 50 ರಿಂದ 60 ಕಿ.ಮೀ ಗಳಷ್ಟು ದೂರದಲ್ಲಿರುವ ಬೆಂಗಳೂರಿನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿದೆಯಂತೆ. ಒಳಕಲ್ಲು ತೀರ್ಥ.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಶಿವಗಂಗೆಯ ಇನ್ನೊಂದು ಬೆಟ್ಟದ ತುದಿಯಲ್ಲಿರುವ ಮಂಟಪದೊಳಗಿನ ನಂದಿ ವಿಗ್ರಹ. ಇಲ್ಲಿಯವರೆಗೆ ತಲುಪುವುದು ಬಹು ಅಪಾಯಕಾಅರಿಯಾಗಿದೆ. ಆದರೆ ಹಿಂದೆ ಈ ರೀತಿಯಾಗಿ ಮೊನಚಾದ ಬಂಡೆಯ ತುದಿಯ ಮೇಲೆ ನಂದಿ ನಿರ್ಮಿಸಿದ ಆ ಶಿಲ್ಪಿಗಳ ಗಟ್ಟಿ ಗುಂಡಿಗೆಯನ್ನು ಮೆಚ್ಚಲೇಬೇಕು.

ಚಿತ್ರಕೃಪೆ: Manjeshpv

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಅರಳುಗುಪ್ಪೆಯ ಚೆನ್ನಕೇಶವ : ಅರಳುಗುಪ್ಪೆ ಎಂಬುದೊಂದು ತುಮಕೂರು ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ. ಆದರೆ ಈ ಪಟ್ಟಣವು ಐತಿಹಾಸಿಕವಾಗಿ ಮಹತ್ವ ಪಡೆದಿದ್ದು ತನ್ನಲ್ಲಿರುವ 13 ನೆಯ ಶತಮಾನದ ಹೊಯ್ಸಳ ಶೈಲಿಯ, ಭಗವಂತ ವಿಷ್ಣುವಿಗೆ ಮುಡಿಪಾದ ಚೆನ್ನಕೇಶವನ ದೇವಸ್ಥಾನದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಸರಳ ಹಾಗೂ ಅಷ್ಟೆ ಆಕರ್ಷಕವಾದ ಕೆತ್ತನೆಗಳಿಂದ ಕೂಡಿದ ಈ ದೇವಾಲಯ ಭೇಟಿ ನೀಡಯೋಗ್ಯ ರಚನೆಯಾಗಿದೆ.

ಚಿತ್ರಕೃಪೆ: Manjuap

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಮಾರ್ಕೋನಹಳ್ಳಿ ಜಲಾಶಯ : ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ಹರಿದಿರುವ ಶಿಂಶಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯ ಇದಾಗಿದೆ. ಮೈಸೂರಿನ ಅರಸರಾದ ನಾಲ್ಕನೆಯ ಕೃಷ್ಣರಾಜ ಒಡೇಯರ್ ಅವರು ತಮ್ಮ ಆಸ್ಥಾನದ ದಿವಾನರಾಗಿದ್ದ ಸರ್. ಎಂ ವಿಶ್ವೇಶ್ವರಯ್ಯನವರ ಸಲಹೆಯ ಮೆರೆಗೆ ಈ ಜಲಾಶಯವನ್ನು ನಿರ್ಮಿಸಿದ್ದಾರೆ. ಇಂದು ಇದು ಹಾಗೆ ಸುಮ್ಮನೆ ಹಾಯಾಗಿ ಸಮಯ ಕಳೆಯಲು ಉತ್ತಮವಾದ ತಾಣವಾಗಿ ಪ್ರಸಿದ್ದಿ ಪಡೆದಿದೆ.

ಚಿತ್ರಕೃಪೆ: Siddarth.P.Raj

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಕುಣಿಗಲ್ ಕೆರೆ : "ಮೂಡಲ್ ಕುಣಿಗಲ್ ಕೆರೆ ನೋಡೋಗೊಂದ್ ಐಭೋಗ" ಎಂಬ ಹಾಡು ಬಹುತೇಕರಿಗೆ ಗೊತ್ತೆ ಇರುತ್ತದೆ. ಹೌದು ಕುಣಿಗಲ್ ಕೆರೆಯು ಕರುಣಿಸುವ ಸುಂದರ ನೋಟಕ್ಕೆ ಪೂರಕವಾಗಿ ಈ ಸಾಲು ರಚನೆಯಾಗಿದೆ. ನಿಜಕ್ಕೂ ಈ ಕೆರೆಯ ಸುತ್ತಮುತ್ತಲಿನ ನೋಟವು ಮನಸ್ಸಿಗೆ ಪ್ರಸನ್ನತೆಯನ್ನುಂಟು ಮಾಡುತ್ತದೆ.

ಚಿತ್ರಕೃಪೆ: Vinayak Hegde

https://www.flickr.com/photos/focusdigitalarts/9075885966/in/photolist-eQ1hGw-dezAkh-xkHZR6-xzTQ5A

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ದೇವರಾಯನದುರ್ಗ : ತುಮಕೂರು ಜಿಲ್ಲೆಯಲ್ಲಿರುವ ಈ ಗಿರಿಧಾಮವು ಯೋಗನರಸಿಂಹ ದೇವಸ್ಥಾನ, ಭೋಗನರಸಿಂಹ ದೇವಸ್ಥಾನ ಹಾಗೂ ನಾಮದಚಿಲುಮೆಗೆ ಜನಪ್ರಿಯವಾಗಿದೆ. ಮೊದಲಿಗೆ ಜಡಕನ ದುರ್ಗ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳವನ್ನು ಮೈಸೂರಿನ ದೊರೆ ಚಿಕ್ಕ ದೇವರಾಜ ಒಡಯರ್ ವಶಪಡಿಸಿಕೊಂಡ ನಂತರ ದೇವರಾಯನದುರ್ಗ ಎಂಬ ಹೆಸರನ್ನು ಪಡೆಯಿತು.

ಚಿತ್ರಕೃಪೆ: Hari Prasad Nadig

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ದೇವರಾಯನದುರ್ಗದಲ್ಲಿ ಎರಡು ದೇಗುಲಗಳನ್ನು ಕಾಣಬಹುದು. ಭೋಗ ನರಸಿಂಹ ದೇವಸ್ಥಾನವು ಬೆಟ್ಟದ ಬುಡದಲ್ಲಿದ್ದರೆ, ಯೋಗ ನರಸಿಂಹ ದೇವಸ್ಥಾನವು ಬೆಟ್ಟದ ಮೇಲೆ ನೆಲೆಸಿದೆ. ವಾರ್ಷಿಕವಾಗಿ ಫಾಲ್ಗುಣ ಮಾಸ ಶುದ್ಧ ಪೂರ್ಣಿಮೆಯ ದಿನದಂದು ರಥೋತ್ಸವವನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಅಂದರೆ ಈ ಉತ್ಸವವು ವರ್ಷದ ಮಾರ್ಚ್ ಅಥವಾ ಎಪ್ರಿಲ್ ಸಮಯದಲ್ಲಿ ಜರುಗುತ್ತದೆ.

ಚಿತ್ರಕೃಪೆ: Srinivasa83

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಇನ್ನು ದೇವಾರಾಯನದುರ್ಗದ ಬೆಟ್ಟದ ಬುಡದಲ್ಲಿರುವ ತುಮಕೂರಿನೆಡೆ ಸಾಗುವ ರಸ್ತೆಯಲ್ಲಿ ನಾಮದ ಚಿಲುಮೆ ಎಂಬ ಆಕರ್ಷಣೆಯನ್ನು ಕಾಣಬಹುದು. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ, ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ 'ನಾಮ' ಇಡಲು ನೀರಿಗಾಗಿ ಹುಡುಕಾಡಿದನಂತೆ. ನೀರು ಎಲ್ಲಿ ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿನ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ ಅಂದರೆ ರಾಮ ಚಿಲುಮೆ ಎಂದು ಕರೆಯುತ್ತಾರೆ.

ಚಿತ್ರಕೃಪೆ: Siddarth P Raj

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಮತ್ತೊಂದು ವಿಷಯವೆಂದರೆ, ನಾಮದ ಚಿಲುಮೆಯ ನಂತರ ಪ್ರಸ್ತುತವಿರುವ ಅತಿಥಿ ಗೃಹದ ಮುಂದೆ ಪಾಳು ಬಿದ್ದ ಹಳೆಯ 1931 ರಲ್ಲಿ ನಿರ್ಮಿಸಲಾಗಿದ್ದ ಅತಿಥಿ ಗೃಹವೊಂದನ್ನು ಕಾಣಬಹುದು. ಡಾ. ಸಲೀಂ ಅಲಿ ತಮ್ಮ ಅಧ್ಯಯನದ ಸಮಯದಲ್ಲಿ ಈ ಅತಿಥಿ ಗೃಹದಲ್ಲಿ ತಂಗಿದ್ದರು.

ಚಿತ್ರಕೃಪೆ: Gpitta

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಇನ್ನು ದೇವರಾಯನದುರ್ಗದ ಈಶಾನ್ಯಕ್ಕೆ ಬ್ಯಾಚೇನಹಳ್ಳಿ, ಎ.ವೆಂಕಟಾಪುರದ ಮಾರ್ಗವಾಗಿ ಸುಮಾರು 26 ಕಿ.ಮೀ ಚಲಿಸಿದರೆ ಸಿಗುವ ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವೆ ಗೊರವನಹಳ್ಳಿ. ಮೂಲತಃ ಗೊರವನಹಳ್ಳಿಯು ಲಕ್ಷ್ಮಿ ದೇವಿಯ ದೇಗುಲದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಲಕ್ಷ್ಮಿ ದೇವಿಯು ಐಶ್ವರ್ಯವಲ್ಲದೆ ಕಂಕಣ ಭಾಗ್ಯವನ್ನು ಕರುಣಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಮದುವೆ ಆಗ ಬಯಸುವ ಪುರುಷ ಹಾಗೂ ಮಹಿಳಾ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Darwinius

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಗೊರವನಹಳ್ಳಿಯಿಂದ ಉತ್ತರಕ್ಕೆ ಕೊರಟಗೆರೆ ಮೂಲಕ ಸುಮಾರು 26 ಕಿ.ಮೀ ಕ್ರಮಿಸಿದರೆ ಸಾಕು ಮಧುಗಿರಿಯನ್ನು ತಲುಪಬಹುದು. ಮಧುಗಿರಿಯು ಏಕಶಿಲಾ ಬೆಟ್ಟ ಹಾಗೂ ಅಲ್ಲಿ ನಿರ್ಮಿಸಲಾಗಿರುವ ಕೋಟೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Saurabh Sharan

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಹೆಮ್ಮೆಯ ಸಂಗತಿ ಎಂದರೆ ಮಧುಗಿರಿ ಏಕಶಿಲಾ ಬೆಟ್ಟವು ಸಂಪೂರ್ಣ ಏಷಿಯಾ ಖಂಡದಲ್ಲೆ ಎರಡನೇಯ ಅತಿ ದೊಡ್ಡ ಬೆಟ್ಟವಾಗಿದೆ. ಇದೊಂದು ರಾಷ್ಟ್ರೀಯ ಮಹತ್ವ ಪಡೆದಿರುವ ಸ್ಮಾರಕವೂ ಹೌದು.

ಚಿತ್ರಕೃಪೆ: balu

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಈ ಬೃಹತ್ ಬೆಟ್ಟದ ಮೊನಚಾದ ಭಾಗಗಳಲ್ಲಿ ಮಧಿಗಿರಿ ಕೋಟೆಯನ್ನು ಕಟ್ಟಲಾಗಿದೆ. ಅಂತರಾಳದ ಬಾಗಿಲು, ದಿಡ್ಡಿ ಬಾಗಿಲು ಹಾಗೂ ಮೈಸೂರು ದ್ವಾರ ಎಂಬ ಹೀಗೆ ಮೂರು ಪ್ರವೇಶ ದ್ವಾರಗಳನ್ನು ಈ ಕೋಟೆ ಹೊಂದಿದೆ. ಈ ಕೋಟೆಯು ವಿಜಯನಗರ ಸಾಮ್ರಾಜ್ಯದವರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Nagarjun Kandukuru

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಚಿತ್ರದುರ್ಗದಲ್ಲಿರುವ ಏಳು ಸುತ್ತಿನ ಕಲ್ಲಿನ ಕೋಟೆಯನ್ನು ನೆನಪಿಸುವ ಮಧುಗಿರಿ ಕೋಟೆಯು ವಿಜಯ ನಗರ ಅರಸರಿಂದ ನಿರ್ಮಿಸಲ್ಪಟ್ಟಿದೆ. ಒಂದೊಮ್ಮೆಯಾದರೂ ಭೇಟಿ ನೀಡಲು ಯೋಗ್ಯವಾದ ಐತಿಹಾಸಿಕ ಆಕರ್ಷಣೆಯ ಕೋಟೆ ಇದಾಗಿದೆ.

ಚಿತ್ರಕೃಪೆ: Nagarjun Kandukuru

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಮಧುಗಿರಿ ಕೋಟೆಯ ಮತ್ತೊಂದು ರಮಣೀಯ ನೋಟ.

ಚಿತ್ರಕೃಪೆ: Saurabh Sharan

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಮಧುಗಿರಿ ಏಕಶಿಲಾ ಬೆಟ್ಟದ ಬಳಿಯಿರುವ ವೆಂಕಟರಮಣ ಸ್ವಾಮಿ ದೇವಸ್ಥಾನವು ಪ್ರಸಿದ್ಧಿ ಪಡೆದ ತಾಣವಾಗಿದೆ. ವಿಷ್ಣುವಿಗೆ ಮುಡಿಪಾದ ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vinay Siddapura

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಹಿಕ್ಕಲ್ : ತುಮಕೂರು ನಗರದಿಂದ 16 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಬೆಟ್ಟ ತಾಣವು ತನ್ನಲ್ಲಿರುವ ವೆಂಕಟರಮಣ ಸ್ವಾಮಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದನ್ನು ಕೂರ್ಮಗಿರಿ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Sathyanveshane

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಈ ಬೆಟ್ಟವು ಶ್ರೀನಿವಾಸನ ಉಪಸ್ಥಿತಿಯಿಂದ ಪವಿತ್ರವಾಗಿದ್ದು ಶ್ರೀನಿವಾಸನು ಹುತ್ತದ ರೂಪದಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಇದನ್ನು ಮತ್ತಷ್ಟು ಪವಿತ್ರಗೊಳಿಸಿರುವಂತೆ ಶ್ರೀದೇವಿ ಹಾಗೂ ಬೂದೇವಿಯರು ಇಲ್ಲಿರುವುದನ್ನು ಕಾಣಬಹುದು.

ಚಿತ್ರಕೃಪೆ: Sathyanveshane

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಆಂಧ್ರದ ಪ್ರಖ್ಯಾತ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಈ ದೇಗುಲವನ್ನು ಮೂಲ ಶ್ರೀನಿವಾಸನ 108 ಉಪಸನ್ನಿಧಿಗಳ ಪೈಕಿ ಒಂದನ್ನಾಗಿ ಪರಿಗಣಿಸಿ ಬಾಲಾಜಿಯ ವಿಗ್ರಹವೊಂದನ್ನು ಇಲ್ಲಿ ಪ್ರತಿಷ್ಠಾಪಿಸಿದೆ. ಇಲ್ಲಿರುವ ವೆಂಕಟರಮಣ ಸ್ವಾಮಿಯನ್ನು ಹಿಕ್ಕಲ್ಲಪ್ಪ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಚಿತ್ರಕೃಪೆ: François de Dijon

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಇನ್ನೂ ಈ ಪ್ರದೇಶವು ಪ್ರಶಾಂತವಾದ ಪರಿಸರದಲ್ಲಿ ನೆಲೆಸಿದ್ದು ಬೆಂಗಳೂರಿನಿಂದ ಸುಮಾರು 70 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಬರುವಾಗ ಮೊದಲು ದಾಬಸ್ ಪೇಟೆಗೆ ತೆರಳಿ ಅಲ್ಲಿಂದ ಮುಂದೆ ಸಾಗುತ್ತ ಬಂದರೆ ಮಾಹಿತಿ ಫಲಕದ ಮೂಲಕ ಹಿಕ್ಕಲ್ಲಪ್ಪ ಸನ್ನಿಧಿಗೆ ತಲುಪಬಹುದು.

ಚಿತ್ರಕೃಪೆ: Sathyanveshane

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ತುರುವೆಕೆರೆ ತುಮಕೂರಿನ ಪಂಚಾಯತಿ ಪಟ್ಟಣ ಹಾಗೂ ತಾಲೂಕು ಕೇಂದ್ರವಾಗಿದ್ದು ಹಲವು ಐತಿಹಾಸಿಕ ಮಹತ್ವವುಳ್ಳ ಹೊಯ್ಸಳ ವಾಸ್ತುಶೈಲಿಯ ಕೆತ್ತನೆಗಳ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಚೆನ್ನಿಗರಾಯ ಅಥವಾ ಚೆನ್ನಕೇಶವ ದೇವಸ್ಥಾನವು ಒಂದು ಪ್ರಮುಖ ಹೊಯ್ಸಳ ಆಕರ್ಷಣೆಯಾಗಿದೆ.

ಚಿತ್ರಕೃಪೆ: Holenarasipura

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ಗಂಗಾಧರೇಶ್ವರ ದೇವಸ್ಥಾನ : ತುರುವೆಕೆರೆಯಲ್ಲಿರುವ ಶಿವನಿಗೆ ಮುಡಿಪಾದ ಪುರಾತನ ದೇವಾಲಯ ಇದಾಗಿದೆ. ಸುಂದರ ವಾಸ್ತುಕಲೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ ಈ ದೇವಾಲಯ. ದೇವಾಲಯದಲ್ಲಿರುವ ಬೃಹತ್ ಗ್ರಾನೈಟ್ ನಂದಿಯು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Dineshkannambadi

ತುಮಕೂರಿನ ಆಕರ್ಷಣೆಗಳು:

ತುಮಕೂರಿನ ಆಕರ್ಷಣೆಗಳು:

ತುರುವೆಕೆರೆಯಲ್ಲಿರುವ ಶಿವನಿಗೆ ಮುಡಿಪಾದ ಮತ್ತೊಂದು ಪುರಾತನ ದೇವಾಲಯ ಶಂಕರೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X