Search
  • Follow NativePlanet
Share
» »ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

By Vijay

ಬೆಂಗಳೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರದಲ್ಲಿರುವ ತುಮಕೂರು ಹಲವು ಆಕರ್ಷಕ, ಮನಸೂರೆಗೊಳ್ಳುವ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ತುಮಕೂರು ನಗರವು ಜಿಲ್ಲೆಯ ಜಿಲ್ಲಾ ಕೇಂದ್ರ ಪ್ರದೇಶವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಹೊಂದಿದೆ.

ತುಮಕೂರು ಜಿಲ್ಲೆಯು ತನ್ನಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಯುಳ್ಳ ಸ್ಥಳಗಳನ್ನು ಹೊಂದಿದೆ. ಇವುಗಳಲ್ಲಿ ಬಹು ಮಟ್ಟಿಗಿನ ಸ್ಥಳಗಳು ಧಾರ್ಮಿಕ ಆಕರ್ಷಣೆಯುಳ್ಳ ಸ್ಥಳಗಳಾಗಿವೆ. ಸಿದ್ಧಗಂಗಾ ಮಠವಿರಬಹುದು, ದೇವರಾಯನದುರ್ಗ ಇರಬಹುದು ಇಲ್ಲವೆ ತುರುವೆಕೆರೆಯ ಶಂಕರೇಶ್ವರ ದೇವಾಲಯವಿರಬಹುದು ಎಲ್ಲವೂ ಧಾರ್ಮಿಕ ಆಕರ್ಷಣೆಯ ಸ್ಥಳಗಳಾಗಿವೆ.

ದೇಶೀಯ ವಿಮಾನ ದರಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ

ವಿಶೇಷ ಲೇಖನ : ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ

ಚಿತ್ರಕೃಪೆ: Dineshkannambadi

ಪ್ರಸ್ತುತ ಲೇಖನದ ಮೂಲಕ ತುಮಕೂರು ಜಿಲ್ಲೆಯಲ್ಲಿ ಕಂಡುಬರುವ ಅಥವಾ ಪ್ರವಾಸಿ ಮಹತ್ವವನ್ನು ಪಡೆದಿರುವ ಕೆಲ ಕ್ಷೇತ್ರಗಳ ಕುರಿತು ತಿಳಿಯಿರಿ.

ಮಧುಗಿರಿ:

ಮಧುಗಿರಿ ತುಮಕೂರು ಜಿಲ್ಲೆಯಲ್ಲಿರುವ ಒಂದು ತಾಲೂಕು ಪ್ರದೇಶವಾಗಿದ್ದು, ಬೆಟ್ಟ ಗುಡ್ಡಗಳಿಂದ ಕೂಡಿದ ಆಕರ್ಷಕ ತಾಣವಾಗಿದೆ. ತುಮಕೂರು ನಗರದಿಂದ 43 ಕಿ.ಮೀ ದೂರವಿರುವ ಈ ತಾಣ ಬೆಂಗಳೂರಿನಿಂದ ಸುಮಾರು 100 ಕಿ.ಮೀ ಗಳಷ್ಟು ದೂರದಲ್ಲಿದೆ. ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಮಧುಗಿರಿಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Vinay Siddapura

ಮಧುಗಿರಿ ಏಕಶಿಲಾ ಬೆಟ್ಟ: ಮೇಲಿನ ಚಿತ್ರದಲ್ಲಿ ಕಾಣುತ್ತಿರುವ ಬೆಟ್ಟವು ಏಕ ಶಿಲಾ ಬೆಟ್ಟವಾಗಿದೆ. ಮಧುಗಿರಿಯಲ್ಲಿ ಕಂಡುಬರುವ ಈ ಏಕಶಿಲಾ ಬೆಟ್ಟವು ಏಷಿಯಾ ಖಂಡದಲ್ಲೆ ಎರಡನೇಯ ಅತಿ ದೊಡ್ಡ ಏಕಶಿಲಾ ಬೆಟ್ಟವಾಗಿದೆ.

ಚಿತ್ರಕೃಪೆ: solarisgirl

ಸಿದ್ಧರ ಬೆಟ್ಟ: ಸಿದ್ಧರ ಬೆಟ್ಟದ ಮೇಲಿನಿಂದ ಕಂಡುಬರುವ ಚಿತ್ರ. ಮಧುಗಿರಿಯ ಬಳಿ ಕಂಡು ಬರುವ ಮತ್ತೊಂದು ಸಾಹಸಮಯ ಪ್ರವಾಸಿ ಆಕರ್ಷಣೆ ಸಿದ್ಧರ ಬೆಟ್ಟ. ಸಿದ್ಧರ ಬೆಟ್ಟವು ತನ್ನಲ್ಲಿ ದೊರಕುವ ಔಷಧೀಯ ಗುಣವುಳ್ಳ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಬೆಟ್ಟದ ಮೇಲಿನಿಂದ ನೈಸರ್ಗಿಕ ನೀರಿನ ಸೆಲೆಯೊಂದು ಕೆಳ ಹರಿಯುತ್ತದೆ. ಈ ನೀರಿನಲ್ಲೂ ಔಷಧೀಯ ಗುಣಗಳಿವೆ ಎಂದು ನಂಬಲಾಗಿದೆ.

ಚಿತ್ರಕೃಪೆ: Saurabh Sharan

ಮಧುಗಿರಿ ಕೋಟೆ: ಮೇಲಿನ ಚಿತ್ರದಲ್ಲಿ ಕಾಣುತ್ತಿರುವ ಮಧುಗಿರಿ ಕೋಟೆಯು ವಿಜಯನಗರ ಸಾಮ್ರಾಜ್ಯದ ಅರಸ್ರಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಕೋಟೆಯಾಗಿದೆ.

ತುರುವೆಕೆರೆ ಮೂಲೆ ಶಂಕರೇಶ್ವರ ದೇವಸ್ಥಾನ:

ಶಿವನಿಗೆ ಮುಡಿಪಾದ ಮೂಲೆ ಶಂಕರೇಶ್ವರ ದೇವಸ್ಥಾನವು ತುಮಕೂರು ಜಿಲ್ಲೆಯ ತುರುವೆಕೆರೆ ಪಟ್ಟಣದಲ್ಲಿದೆ. ಹೊಯ್ಸಳ ದೊರೆಯಾದ ಮೂರನೇಯ ನರಸಿಂಹನ ಆಡಳಿತಾವಧಿಯಲ್ಲಿ ಅಂದರೆ ಹೆಚ್ಚು ಕಡಿಮೆ 13 ನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ. ಪ್ರಸ್ತುತ ಐತಿಹಾಸಿಕ ಮಹತ್ವವುಳ್ಳ ಪ್ರವಾಸಿ ತಾಣವಾಗಿ ಇದು ಇತಿಹಾಸ ಪ್ರಿಯ ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Dineshkannambadi

ಮಾರ್ಕೋನಹಳ್ಳಿ ಜಲಾಶಯ:

ಚಿತ್ರಕೃಪೆ: Siddarth.P.Raj

ಮಾರ್ಕೋನ ಹಳ್ಳಿಯ ಜಲಾಶಯವನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆನವಾರ ಎಂಬಲ್ಲಿ ನಿರ್ಮಿಸಲಾಗಿದೆ. ಇಂದು ಇದೊಂದು ಪ್ರವಾಸಿ ಆಕರ್ಷಣೆಯಾಗಿ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತದೆ.

ದೇವರಾಯನದುರ್ಗ:

ತುಮಕೂರು ಜಿಲ್ಲೆಯಲ್ಲಿರುವ ದೇವರಾಯನ ದುರ್ಗವು ಒಂದು ಚಿಕ್ಕ ಗಿರಿಧಾಮ ಪ್ರದೇಶವಾಗಿದ್ದು ತನ್ನಲ್ಲಿರುವ ಯೋಗ ಹಾಗೂ ಭೋಗ ನರಸಿಂಹನ ದೇವಸ್ಥಾನಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ವಾರ್ಷಿಕವಾಗಿ ಇಲ್ಲಿ ಅತಿ ಸಡಗರದಿಂದ ಹಬ್ಬಗ್ಳನ್ನೂ ಸಹ ಆಯೋಜಿಸಲಾಗುತ್ತದೆ. ಸುತ್ತಮುತ್ತಲಿನ ಸ್ಥಳಗಳು ಹಾಗೂ ಬೆಂಗಳೂರಿನಿಂದ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ.

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

ಚಿತ್ರಕೃಪೆ: Srinivasa83

ಇನ್ನೊಂದು ವಿಶೇಷ ಲೇಖನ : ತುಮಕೂರು ಜಿಲ್ಲೆಯ ಚೌಡೇಶ್ವರಿಯ ಮಹಿಮೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X