Search
  • Follow NativePlanet
Share
» »ಆಂಧ್ರದಲ್ಲಿರುವ ಕೆಲವು ಅದ್ಭುತ ಜಲಪಾತಗಳು

ಆಂಧ್ರದಲ್ಲಿರುವ ಕೆಲವು ಅದ್ಭುತ ಜಲಪಾತಗಳು

By Vijay

ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಆಂಧ್ರಪ್ರದೇಶ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಧಾರ್ಮಿಕದಿಂದ ಹಿಡಿದು ಸ್ನೇಹಿತರೊಂದಿಗೆ ಮನರಂಜನೆಯವರೆಗೂ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಇಂದು ಆಂಧ್ರಪ್ರದೇಶ ರಾಜ್ಯದಲ್ಲಿ ಕಾಣಬಹುದಾಗಿದೆ.

ಮಳೆಗಾಲದ ಸಮಯದಲ್ಲಿ ಆಂಧ್ರದಲ್ಲಿ ಪ್ರವಾಸಿ ಚಟುವಟಿಕೆಗಳು ಗರಿಗೆದಲಾರಂಭಿಸುತ್ತವೆ. ರಾಜ್ಯವು ತನ್ನಲ್ಲಿರುವ ಕೆಲವು ಜಲಪಾತ ತಾಣಗಳಿಗೆ ಹೆಸರುವಾಸಿಯಾಗಿದ್ದು ಈ ಸಂದರ್ಭದಲ್ಲಿ ಆ ಜಲಪಾತ ತಾಣಗಳಿಗೆ ಸಾಕಷ್ಟು ಬೇಡಿಕೆಯುಂಟಾಗಿ ಭೇಟಿ ನೀಡುವವರ ಸಂಖ್ಯೆ ಏರುತ್ತ ಹೋಗುತ್ತದೆ.

ಆಂಧ್ರದಲ್ಲಿ ಚಿಕ್ಕ ಪುಟ್ಟ ಅನೇಕ ಜಲಪಾತಗಳಿವೆಯಾದರೂ ಗೋದಾವರಿ, ಕೃಷ್ಣ ಹಾಗೂ ನಾಗವಲಿ ನದಿಗಳಿಂದ ರೂಪಗೊಂಡ ಕೆಲವು ಆಕರ್ಷಕ ಜಲಪಾತಗಳಿದ್ದು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿ ಸಾಕಷ್ಟು ಪ್ರವಾಸಿಗರನ್ನು ಅಕ್ಕ ಪಕ್ಕದ ರಾಜ್ಯಗಳಿಂದಲೂ ಸಹ ಚುಂಬಕದಂತೆ ಸೆಳೆಯುತ್ತವೆ.

ಪ್ರಸ್ತುತ ಲೇಖನದಲ್ಲಿ ಆಂಧ್ರದ ಕೆಲವು ಆಯ್ದ ಹಾಗೂ ಭೇಟಿ ನೀಡಲು ಯೋಗ್ಯವಾದ ಜಲಪಾತ ತಾಣಗಳ ಕುರಿತು ತಿಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ನಿಮಗೇನಾದರೂ ಆಂಧ್ರ ಪ್ರವಾಸ ಹೊರಡಬೇಕಾದಲ್ಲಿ ಖಂಡಿತವಾಗಿಯೂ ಈ ಜಲಪಾತಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ.

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಎತಿಪೋತಲ ಜಲಪಾತ : ಇದು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಸ್ಥಿತವಿರುವ ಈ ಸುಂದರ ಜಲಪಾತ ಗುಂಟೂರು ಜಿಲ್ಲೆಯ ಮಾರ್ಚೇಲ ಪಟ್ಟಣದಲ್ಲಿದೆ.

ಚಿತ್ರಕೃಪೆ: Sarvagyana guru

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಈ ಜಲಪಾತಕ್ಕೆ ಹೆಸರು ಎತ್ತಿ ಹಾಗೂ ಪೋತ ಎಂಬ ಎರಡು ತೆಲುಗು ಶಬ್ದಗಳಿಂದ ಬಂದಿದುದಾಗಿದೆ ಎಂದು ಹೇಳಲಾಗುತ್ತದೆ. ಇದರ ಅರ್ಥ ಎತ್ತಿ ಹಾಗೂ ಸುರಿ ಎಂದರ್ಥೈಸಬಹುದು. ಈ ಜಲಪಾತವು 70 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ ಹಾಗೂ ನೋಡಲು ನಯನ ಮನೋಹರವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Rajib Ghosh

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಮುಖ್ಯವಾಗಿ ಈ ಜಲಪಾತವು ಮೂರು ನೀರಿನ ಮೂಲಗಳಿಂದ ರೂಪಗೊಂಡಿದೆ ಹಾಗೂ ಅವುಗಳೆಂದರೆ ಚಂದ್ರವಂಕ ವಾಗು (ವಾಗು ಎಂದರೆ ಕಾಲುವೆ ಅಥವಾ ತೋಡು ನಾಲೆ), ನಕ್ಕಲ ವಾಗು ಹಾಗೂ ತುಮ್ಮಲ ವಾಗು. ಚಂದ್ರವಂಕ ಕೃಷ್ಣಾ ನದಿಯ ಉಪನದಿಯಾಗಿದೆ.

ಚಿತ್ರಕೃಪೆ: Praveen120

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಎತಿಪೋತಲದಿಂದ ಧರೆಗೆ ಧುಮುಕುವ ನೀರು ಮುಂದೆ ಮೂರು ಕಿ.ಮೀ ಗಳಷ್ಟು ಉದ್ದ ಹರಿದು ಕೊನೆಯದಾಗಿ ಶರೀಶೈಲಂನಲ್ಲಿರುವ ಜಲಾಶಯದಲ್ಲಿ ಸೇರ್ಪಡೆಗೊಳ್ಳುತ್ತದೆ. ಆಂಧ್ರ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಇಲ್ಲಿ ವೀಕ್ಷಣಾ ತಾಣವನ್ನು ನಿರ್ಮಿಸಿದ್ದು ಅಲ್ಲಿಂದ ಜಲಪಾತದ ಮನಮೋಹಕ ನೋಟವನ್ನು ಕಾಣಬಹುದು. ಶ್ರೀಶೈಲಂ ಜಲಾಶಯ.

ಚಿತ್ರಕೃಪೆ: Srikar Kashyap

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಲಕೋನ ಜಲಪಾತ : ಇದು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಸುಂದರ ಜಲಪಾತ ತಾಣವಾಗಿದೆ. ಅಲ್ಲದೆ ಆಂಧ್ರದ ಅತಿ ಎತ್ತರದ ಜಲಪಾತ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ.

ಚಿತ್ರಕೃಪೆ: VinothChandar

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

270 ಅಡಿಗಳಷ್ಟು ಒಟ್ಟಾರೆ ಎತ್ತರ ಹೊಂದಿರುವ ಈ ಜಲಪಾತವು ಆಂಧ್ರದ ಚಿತ್ತೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಬಳಿಯಿರುವ ಸಿದ್ಧೇಶ್ವರ ದೇವಾಲಯದಿಂದಾಗಿಯೂ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: kiran kumar

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಮೂಲತಃ ಇದೊಂದು ಕಾಡು ಪ್ರದೇಶದಲ್ಲಿ ಸುಂದರವಾಗಿ ಧರೆಗೆ ಧುಮುಕುವ ಜಲಪಾತವಾಗಿದ್ದು ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ. ಸಸ್ಯ ಹಾಗೂ ಜೀವ ವವಿಧ್ಯತೆಯಿಂದ ಕೂಡಿರುವ ತಾಣವಾಗಿದೆ. ಈ ಪ್ರದೇಶದಲ್ಲಿ ಕಂಡುಬರುವ ವಿಶಿಷ್ಟ ವರ್ಣದ ಅಣಬೆ.

ಚಿತ್ರಕೃಪೆ: J.M.Garg

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ದಟ್ಟ ಕಾಡಿನ ಮಧ್ಯದ ಕತ್ತಲ ಸಾಮ್ರಾಜ್ಯದಲ್ಲಿ ತಿಳಿಯಾಗಿ ಹರಿವ ನೊರೆ ಹಾಲಿನ ತೊರೆಯನ್ನು ನೋಡುಗರಿಗೆ ಉಣಬಡಿಸುವ ಈ ಸ್ಥಳ ನಿಜಕ್ಕೂ ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Ahura21

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಉಬ್ಬಾಲಮಡುಗು ಜಲಪಾತ : ಇದು ಜನಪ್ರೀಯವಾಗಿ ತಡಾ ಜಲಪಾತ ಎಂಬ ಹೆಸರಿನಿಂದಲೂ ಸಹ ಗುರುತಿಸಲ್ಪಡುತ್ತದೆ. ಈ ಜಲಪಾತ ತಾಣವನ್ನು ಟ್ರೆಕ್ ಮೂಲಕ ತಲುಪಬಹುದಾಗಿದ್ದು, ಆ ಚಾರಣವು ತಡಾ ಚಾರಣ ಅಥವಾ ತಡಾ ಟ್ರೆಕ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Raj

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ವಾಣಿಜ್ಯ ಯೋಜನಾ ನಗರವಾದ ಶ್ರೀಸಿಟಿಯ ಉತ್ತರಕ್ಕಿರುವ ಈ ಜಲಪಾತ ತಾಣವು ತಮಿಳುನಾಡಿನ ಚೆನ್ನೈ ನಗರದಿಂದ 80 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ಈ ಜಲಪಾತ ತಾಣವು ಆಂಧ್ರಪ್ರದೇಶದ ಬುಚ್ಚಿನಾಯ್ಡು ಖಂಡ್ರಿಗ ಹಾಗೂ ವರದಯ್ಯಪಾಲಂ ಮಂಡಲಗಳ ಅಧೀನದಲ್ಲಿ ಬರುತ್ತದೆ.

ಚಿತ್ರಕೃಪೆ: McKay Savage

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಶ್ರೀಕಾಳಹಸ್ತಿಯಿಂದ ಕೇವಲ 35 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಜಲಪಾತ ಕೇಂದ್ರವು ಸಿದ್ಧುಲಯ್ಯ ಕೋನ ಎಂಬ ಕಾಡಿನಲ್ಲಿದ್ದು ಅದ್ಭುತ ಚಾರಣ ಪಥ ಹಾಗೂ ರಮಣೀಯ ಪರಿಸರವನ್ನು ಹೊಂದಿರುವ ಪ್ರದೇಶದಲ್ಲಿದೆ.

ಚಿತ್ರಕೃಪೆ: McKay Savage

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಚೆನ್ನೈನಿಂದ ತಡಾ ರೈಲು ನಿಲ್ದಾಣಕ್ಕೆ ರೈಲುಗಳು ಲಭ್ಯವಿದೆ. ಅಲ್ಲದೆ ಚೆನ್ನೈ ಬಸ್ಸು ನಿಲ್ದಾಣದಿಂದ ವರದಯ್ಯಪಾಲಂಗೆ ಬಸ್ಸುಗಳು ದೊರೆಯುತ್ತವೆ. ನಂತರ ಅಲ್ಲಿಂದ ತಡಾ ಚೆಕ್ ಪೋಸ್ಟಿಗೆ ತೆರಳಿ, ಅಲ್ಲಿಂದ ಹತ್ತು ಕಿ.ಮೀ ಗಳಷ್ಟು ಕಾಡಿನಲ್ಲಿ ಟ್ರೆಕ್ ಮಾಡುತ್ತ ಜಲಪಾತವನ್ನು ತಲುಪಬಹುದು.

ಚಿತ್ರಕೃಪೆ: Viknesh

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಕಪಿಲತೀರ್ಥಂ ಜಲಪಾತ : ತಿರುಪತಿಯಲ್ಲಿರುವ ಪ್ರಸಿದ್ಧ ಹಾಗೂ ಪುಣ್ಯ ಶೈವ ಧಾರ್ಮಿಕ ಕ್ಷೇತ್ರವಾಗಿದೆ ಕಪಿಲತೀರ್ಥಂ. ಇದೊಂದು ಪುಷ್ಕರಿಣಿಯಾಗಿದ್ದು ಶೇಷಾಚಲಂ ಬಟ್ಟಗಳ ಭಾಗವಾದ ಮೊನ್ಚಾದ ಬೆಟ್ಟವೊಂದರಿಂದ ನೀರು ಈ ತೀರ್ಥದಲ್ಲಿ ಧುಮುಕುತ್ತದೆ.

ಚಿತ್ರಕೃಪೆ: Adityamadhav83

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಈ ಜಲಪಾತದ ಎದುರುಬದಿಯಲ್ಲಿ ಶಿವನಿಗೆ ಮುಡಿಪಾದ ದೇವಾಲಯವಿದ್ದು ಅದನ್ನು ಕಪಿಲೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಪ್ರತೀತಿಯಂತೆ ಕಪಿಲ ಮುನಿಗಳು ಹಿಂದೆ ಇಲ್ಲಿ ಶಿವನನ್ನು ಆರಾಧಿಸಿದ್ದರಿಂದ ಇದಕ್ಕೆ ಕಪಿಲತೀರ್ಥ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Vimalkalyan

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಪೆಂಚಲಕೋನ ಜಲಪಾತ : ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪೂರು ತಾಲೂಕಿನ ಪೆಂಚಲಕೋನವು ಧಾರ್ಮಿಕ ತಾಣವಾಗಿದ್ದು ಜಲಪಾತ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. ಹಿಂದೆ ಕಣ್ವ ಮುನಿಗಳು ಇಲ್ಲಿ ತಪಗೈದಿದ್ದು ಇಲ್ಲಿಯೆ ನರಸಿಂಹನು ಯೋಗಮುದ್ರೆಯಲ್ಲಿ ದರ್ಶನ ನೀಡಿದ್ದ. ಪೆಂಚಲಕೋನ ಜಲಪಾತದ ನೀರು ಮುಂದೆ ಕಂಡಲೇರು ಜಲಾಶಯಕ್ಕೆ ಸೇರುತ್ತದೆ.

ಚಿತ್ರಕೃಪೆ: Chandu3782

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಕಲ್ಯಾಣ ರೇವು ಜಲಪಾತ : ಕೌಂಡಿನ್ಯ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಬರುವ ಈ ಜಲಪಾತವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿಂದ ಹತ್ತು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Vfuller09

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಕೈಗಲ್ ಜಲಪಾತ : ಕೌಂಡಿನ್ಯ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಬರುವ ಈ ಜಲಪಾತವೂ ಸಹ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಪಲಮನೇರ್ ನಿಂದ ಸುಮಾರು 28 ಕಿ.ಮೀ ಗಳಷ್ಟು ದೂರದಲ್ಲಿದ್ದು ಪಾಲಮನೇರ್-ಕುಪ್ಪಂ ಹೆದ್ದಾರಿಯಲ್ಲಿ ಬರುತ್ತದೆ.

ಚಿತ್ರಕೃಪೆ: Vfuller09

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ಕತಿಕಿ ಜಲಪಾತ : ಇದು ನೋಡಲು ಅತ್ಯಂತ ಸುಂದರವಾಗಿ ಕಾಣುವ ಜಲಪಾತ. ಗೊಸ್ತನಿ ನದಿಯಿಂದ ರುಪಗೊಂಡಿರುವ ಈ ಜಲಪಾತ ಆಂಧ್ರದ ವಿಶಾಖಾಪಟ್ಟಣಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಅರಕು ಕಣಿವೆಯ ಬಳಿಯಿದೆ.

ಚಿತ್ರಕೃಪೆ: Arkadeep Meta

ಆಂಧ್ರದ ಸುಂದರ ಜಲಪಾತಗಳು:

ಆಂಧ್ರದ ಸುಂದರ ಜಲಪಾತಗಳು:

ತಿರುಪತಿಯ ಕಪಿಲತೀರ್ಥ ಜಲಪಾತ ಮೈದುಂಬಿಕೊಂಡು ಧುಮುಕುವಾಗ.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X