Search
  • Follow NativePlanet
Share
» »ಟ್ರೆಕ್ಕಿಂಗ್‍ಗೆ ಸೂಕ್ತವಾದ ಸುಂದರ ಸ್ಥಳಗಳು

ಟ್ರೆಕ್ಕಿಂಗ್‍ಗೆ ಸೂಕ್ತವಾದ ಸುಂದರ ಸ್ಥಳಗಳು

ಸ್ನೇಹಿತರ ಜೊತೆಗೂಡಿ ಒಂದು ಟ್ರೆಕ್ಕಿಂಗ್‍ಗೆ ಭೇಟಿ ನೀಡಬೇಕು, ಒಂದು ಸುಂದರವಾದ ಅನುಭುತಿ ಪಡೆಯಬೇಕು ಎಂಬುದು ಪ್ರತಿಯೊಬ್ಬ ಯುವ ಜನತೆಯ ಮನದಾಸೆಯಾಗಿರುತ್ತದೆ. ಟ್ರೆಕ್ಕಿಂಗ್ ಸಾಹಸ ಪ್ರೀಯರಿಗೆ ಅತ್ಯಂತ ರೋಮಾಂಚಕಾರಿಯಾದ ಅನುಭವವನ್ನು ನೀಡುವಂತಹದು.

ಸ್ನೇಹಿತರ ಜೊತೆಗೂಡಿ ಒಂದು ಟ್ರೆಕ್ಕಿಂಗ್‍ಗೆ ಭೇಟಿ ನೀಡಬೇಕು, ಒಂದು ಸುಂದರವಾದ ಅನುಭುತಿ ಪಡೆಯಬೇಕು ಎಂಬುದು ಪ್ರತಿಯೊಬ್ಬ ಯುವ ಜನತೆಯ ಮನದಾಸೆಯಾಗಿರುತ್ತದೆ. ಟ್ರೆಕ್ಕಿಂಗ್ ಸಾಹಸ ಪ್ರೀಯರಿಗೆ ಅತ್ಯಂತ ರೋಮಾಂಚಕಾರಿಯಾದ ಅನುಭವವನ್ನು ನೀಡುವಂತಹದು ಅಲ್ಲಿನ ಪ್ರಕೃತಿ ಸೌಂದರ್ಯ, ಹಕ್ಕಿಗಳ ಚಿಲಿಪಿಲಿ ಶಬ್ದಗಳು, ದಟ್ಟ ಅರಣ್ಯ ಇವೆಲ್ಲವು ಮನಸ್ಸಿಗೆ ಮುದ ನೀಡುವಂತಹದು. ಬೆಂಗಳೂರಿನ ಮಹಾನಗರದ ಸಮೀಪ ಟ್ರೆಕ್ಕಿಂಗ್‍ಗೆ ಹೋಗಲು 150 ಕಿ,ಮೀ ಅಂತರದೊಳಗಿನ ಹಲವಾರು ಸ್ಥಳಗಳಿದ್ದು, ಪ್ರಸುತ್ತ ಲೇಖನದಲ್ಲಿ ಬೆಂಗಳೂರಿನ ಸಮೀಪದ ಪ್ರಮುಖ ಟ್ರೆಕ್ಕಿಂಗ್ ಸ್ಥಳಗಳನ್ನು ತಿಳಿಯಿರಿ ಒಮ್ಮೆ ಭೇಟಿ ಕೊಡಿ.

ಅಂತರ ಗಂಗೆ ಟ್ರೆಕ್ಕಿಂಗ್ ಮತ್ತು ಗುಹೆ

PC:solarisgirl

ಅಂತರ ಗಂಗೆ ಟ್ರೆಕ್ಕಿಂಗ್ ಮತ್ತು ಗುಹೆ
ಅಂತರಗಂಗೆಯು ಒಂದು ಸುಂದರವಾದ ತಾಣವಾಗಿದೆ. ವಿಶೇಷವೆನೆಂದರೆ ಇಲ್ಲಿ ಗುಹಾ ದೇವಾಲಯವಿದ್ದು, ಬೆಂಗಳೂರಿನಿಂದ ಸುಮಾರು 60 ಕಿ,ಮೀ ಅಂತರದಲ್ಲಿದೆ. ಈ ತಾಣವು ಟ್ರೆಕ್ಕಿಂಗ್ ಮಾಡಲು ಅತ್ಯಂತ ಜನಪ್ರಿಯ ಸ್ಥಳವಾಗಿದೆ ಹಾಗೂ ಒಂದು ದಿನದ ಮಟ್ಟಿಗೆ ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಇದು ಸೂಕ್ತವಾದ ಸ್ಥಳ. ಇಲ್ಲಿನ ಗೂಹ ದೇವಾಲಯವನ್ನು ಅನ್ವೇಷಿಸಲು ಪ್ರವಾಸಿಗರು ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ಅಂತರ ಗಂಗೆ ಟ್ರೆಕ್ಕಿಂಗ್ ಸುಮಾರು 4 ಕಿ,ಮೀ ಯಷ್ಟು ಅಂತರದಲ್ಲಿದ್ದು, ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೆ ಟ್ರೆಕ್ಕಿಂಗ್‍ಗೆ ಭೇಟಿ ನೀಡಲು ಅತ್ಯಂತ ಪ್ರಶ್ಯಸ್ತವಾದ ಸಮಯವಾಗಿದೆ. ಈ ಟ್ರೆಕ್ಕಿಂಗ್ ನಿಮಗೆ ಅತ್ಯಂತ ಆನಂದವನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.

ಕುಂತಿ ಬೆಟ್ಟ

PC: Aditya Patawari

ಕುಂತಿ ಬೆಟ್ಟ ಟ್ರೆಕ್ಕಿಂಗ್
ಕುಂತಿ ಬೆಟ್ಟವು ಬೆಂಗಳೂರಿನಿಂದ ಸುಮಾರು 123 ಕಿ,ಮೀ ಅಂತರದಲ್ಲಿದ್ದು ಅತ್ಯಂತ ಸುಂದರವಾದ ಪ್ರಕೃತಿಯನ್ನು ಹೊಂದಿದೆ. ಇಲ್ಲಿನ ಬೆಟ್ಟದ ಟ್ರೆಕ್ಕಿಂಗ್‍ಗೆ ಹಲವಾರು ಪ್ರವಾಸಿಗಳು ಬರುತ್ತಿರುತ್ತಾರೆ. ಈ ಕುಂತಿ ಬೆಟ್ಟವು ಪಾಂಡವಪುರದಲ್ಲಿದೆ. ಈ ಬೆಟ್ಟಮಹಾಭಾರತದ ಪಾಂಡವರು ಕೆಲವು ದಿನಗಳ ಕಾಲ ಇಲ್ಲಿ ನೆಲೆಸಿದ್ದರು ಎಂಬ ಇತಿಹಾಸವನ್ನು ಈ ಕುಂತಿ ಬೆಟ್ಟ ಹೊಂದಿದೆ. ಈ ಬೆಟ್ಟವು ಸುಮಾರು 950 ಮೀಟರ್‍ಗಳಷ್ಟು ಎತ್ತರದಲ್ಲಿದೆ. ಕುಂತಿ ಬೆಟ್ಟದ ಟ್ರೆಕ್ಕಿಂಗ್‍ಗೆ ಭೇಟಿ ನೀಡಲು ನವೆಂಬರ್‍ನಿಂದ ಫೆಬ್ರವರಿ ತಿಂಗಳು ಅತ್ಯಂತ ಸೂಕ್ತವಾದ ಸಮಯವಾಗಿದೆ. ಈ ಟ್ರೆಕ್ಕಿಂಗ್‍ಗೆ ತೆಗೆದುಕೊಳ್ಳುವ ಸಮಯ ಕೇವಲ 5 ಕಿ,ಮೀ ಆಗಿದೆ.

ರಾಮನಗರ ಟ್ರೆಕ್ಕಿಂಗ್

PC:Navaneeth KN

ರಾಮನಗರ ಟ್ರೆಕ್ಕಿಂಗ್
ರಾಮನಗರವು ಬೆಂಗಳೂರಿನಿಂದ 50 ಕಿ,ಮೀ ಅಂತರದಲ್ಲಿದೆ. ರಾಮನಗರದಲ್ಲಿ ಒಂದು ಸುಂದರವಾದ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳವಿದ್ದು ಹಲವಾರು ಯುವ ಜನತೆ ಟ್ರೆಕ್ಕಿಂಗ್‍ನ ರೊಮಾಂಚಕ ಅನುಭುತಿ ಪಡೆಯಲು ಬರುತ್ತಿರುತ್ತಾರೆ. ಬಾಲಿವುಡ್‍ನ ಪ್ರಖ್ಯಾತ ಸಿನಿಮಾ ಶೂಲೆ ಚಿತ್ರೀಕರಣ ನಡೆದ ಸ್ಥಳ ಇದಾಗಿದೆ. ರಾಮಾನಗರ ಟ್ರೆಕ್ಕಿಂಗ್ ಮಳೆಗಾಲದ ಸಮಯದಲ್ಲಿ ಅತ್ಯಂತ ಅಪಾಯವಾಗಿರುವುದರಿಂದ ನವೆಂಬರ್ ನಿಂದ ಫೆಬ್ರವರಿ ತಿಂಗಳು ಅತ್ಯಂತ ಪ್ರಶ್ಯಸ್ತವಾದ ಸಮಯವಾಗಿದೆ. ಈ ರಾಮನಗರದ ಟ್ರೆಕ್ಕಿಂಗ್ ನಿಮಗೆ ವಿಶಿಷ್ಟವಾದ ಆನಂದವನ್ನು ಉಂಟು ಮಾಡುತ್ತದೆ. ಈ ಟ್ರೆಕ್ಕಿಂಗ್ 6 ಮೀ ನಷ್ಟಿದೆ.

ಮಾಕಳೀ ದುರ್ಗ ಟ್ರೆಕ್ಕಿಂಗ್

PC:Sakeeb Sabakka

ಮಾಕಳೀ ದುರ್ಗ ಟ್ರೆಕ್ಕಿಂಗ್
ಮಾಕಳೀ ದುರ್ಗವು ಅತ್ಯಂತ ಸುಂದರವಾದ ಪ್ರದೇಶ ನೋಡುಗರನ್ನು ತನ್ನ ಪ್ರಕೃತಿ ಸೌಂದರ್ಯದಿಂದಲೇ ಮರಳು ಮಾಡುವ ಅದ್ಭುತ ಸ್ಥಳ ಈ ಮಾಕಳೀ ಟ್ರೆಕ್ಕಿಂಗ್. ಬೆಂಗಳೂರಿನಿಂದ ಮಾಕಳೀದುರ್ಗಕ್ಕೆ 60 ಕಿ,ಮೀ ಯಷ್ಟು ಅಂತರದಲ್ಲಿದೆ. ಇದೊಂದು ಪ್ರಖ್ಯಾತವಾದ ಟ್ರೆಕ್ಕಿಂಗ್ ಯೋಗ್ಯವಾದ ಸ್ಥಳವಾಗಿದ್ದು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 1.350 ಮೀಟರ್‍ಗಳಷ್ಟು ಎತ್ತರದಲ್ಲಿದೆ ಹಾಗೂ ಈ ಟ್ರೆಕ್ಕಿಂಗ್ ಕೈಗೊಳ್ಳಲು ಅತ್ಯಂತ ಉತ್ತಮವಾದ ಕಾಲವೆಂದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಅತ್ಯಂತ ಸೂಕ್ತವಾದ ಕಾಲಾವಧಿಯಾಗಿದೆ. ಮಾಕಳೀ ದುರ್ಗ ಟ್ರೆಕ್ಕಿಂಗ್ ಸರಾಸರಿ 7 ಕಿ,ಮೀಯಷ್ಟಿದೆ.

ಕಬ್ಬಲದುರ್ಗ ಟ್ರೆಕ್ಕಿಂಗ್

PC:thanveerkumar

ಕಬ್ಬಲದುರ್ಗ ಟ್ರೆಕ್ಕಿಂಗ್
ಕಬ್ಬಲದುರ್ಗದಲ್ಲಿ ರಾತ್ರಿಯ ಹೊತ್ತಿನಲ್ಲಿ ಟ್ರೆಕ್ಕಿಂಗ್ ಮಾಡಲು ಹಲವಾರು ಪ್ರವಾಸಿಗರು ಇಷ್ಟಪಡುತ್ತಾರೆ. ಈ ಕಬ್ಬಲದುರ್ಗವು ಕನಕಪುರದಲ್ಲಿದೆ ಹಾಗೂ ಬೆಂಗಳೂರಿನಿಂದ 60 ಕಿ,ಮೀಯಷ್ಟು ಅಂತರದಲ್ಲಿದೆ. ಕಬ್ಬಲದುರ್ಗದಲ್ಲಿ ಹಲವಾರು ಬೆಟ್ಟಗಳಿದ್ದು, ನಿಮಗೆ ಇಷ್ಟವಾದ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಬಹುದಾಗಿದೆ. ಈ ಬೆಟ್ಟವು 2,090 ಅಡಿ ಎತ್ತರವಿದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಅತಿ ಅದ್ಭುತ. ಈ ಟ್ರೆಕ್ಕಿಂಗ್ ಸುಮಾರು 4 ಕಿ,ಮೀಯಷ್ಟಿದೆ ಹಾಗೂ ಟ್ರೆಕ್ಕಿಂಗ್ ಭೇಟಿ ನೀಡಲು ಪ್ರಶ್ಯಸ್ತವಾದ ಕಾಲಾವಧಿಯೆಂದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳು ಅತ್ಯಂತ ಸೂಕ್ತವಾಗಿದೆ.

PC:Nagarjun Kandukuru

ಮಧುಗಿರಿ ಬೆಟ್ಟ ಟ್ರೆಕ್ಕಿಂಗ್
ಮುಧುಗಿರಿ ಬೆಟ್ಟವು 3,930 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಅತ್ಯಂತ ಎತ್ತರವಾಗಿದ್ದು ಟ್ರೆಕ್ಕಿಂಗ್ ಮಾಡಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಮಧುಗಿರಿ ಬೆಟ್ಟಕ್ಕೆ ಸುಮಾರು 100 ಕಿ,ಮೀ ಅಂತರದಲ್ಲಿದೆ. ಮೈಸೂರಿನ ಸುಲ್ತಾನ ಹೈದಾರಲಿ ನಿರ್ಮಿಸಿದ ಪ್ರಸಿದ್ದವಾದ ಮಧುಗಿರಿ ಕೋಟೆ ಕೂಡ ಇಲ್ಲಿದೆ. ಈ ಬೆಟ್ಟದ ಮೇಲೆ ಗೋಪಾಲ ಕೃಷ್ಣ ನೆಲೆಸಿದ್ದಾನೆ ಹಾಗೂ ಇಲ್ಲಿನ ವಾಸ್ತುಶಿಲ್ಪವು ಅತ್ಯಂತ ಆಕರ್ಷಣೀಯವಾಗಿದೆ. ಟ್ರೆಕ್ಕಿಂಗ್ ಸುಮಾರು 3 ಕಿ,ಮೀಯಷ್ಟಿದ್ದು ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳು ಅತ್ಯಂತ ಸೂಕ್ತವಾದ ಕಾಲಾವಧಿಯಾಗಿದೆ.

ಸವನದುರ್ಗ ಟ್ರೆಕ್ಕಿಂಗ್

PC:.siddharth sarangan

ಸವನದುರ್ಗ ಟ್ರೆಕ್ಕಿಂಗ್
ಈ ಸವನದುರ್ಗ ಬೆಟ್ಟವು 1,226 ಮೀಗಳಷ್ಟು ಎತ್ತರದಲ್ಲಿದ್ದು ಟ್ರೆಕ್ಕಿಂಗ್ ಮಾಡಲು ಅತ್ಯಂತ ಯೋಗ್ಯ ಸ್ಥಳವಾಗಿದೆ. ಬೆಂಗಳೂರಿನಿಂದ ಇಲ್ಲಿಗೆ 65 ಕಿ,ಮೀಯಷ್ಟು ಅಂತರದಲ್ಲಿದೆ. ಇಲ್ಲಿ ದಟ್ಟ ಕಾಡಿನ ಹಾಗೆ ಇರುವ ಈ ಪ್ರದೇಶ ತಂಪಾದ ಗಾಳಿ, ಹಸಿರಿನ ಸೌಂದರ್ಯ, ಹಕ್ಕಿಯ ಇಂಪಾದ ಶಬ್ದಗಳಿಂದ ಪ್ರವಾಸಿರನ್ನು ತನ್ನತ್ತ ಆಕರ್ಷಿಸುತ್ತದೆ. ಸವನದುರ್ಗಕ್ಕೆ ಭೇಟಿ ನೀಡುವ ಪ್ರಯಾಣದಲ್ಲಿ ಟಿಪ್ಪುಸುಲ್ತಾನ್ ನಿರ್ಮಿಸಿದ ಕೋಟೆಯನ್ನು ಕೂಡ ಕಾಣಬಹುದು. ಈ ತಾಣಕ್ಕೆ ಟ್ರೆಕ್ಕಿಂಗ್ ನೀಡಲು ಸೂಕ್ತವಾದ ಸಮಯವೆಂದರೆ ನವೆಂಬರ್‍ನಿಂದ ಫೆಬ್ರವರಿಯವರೆಗೆ ಹಾಗೂ ಈ ಟ್ರೆಕ್ಕಿಂಗ್ 4 ಕಿ,ಮೀಯಷ್ಟಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X