Search
  • Follow NativePlanet
Share
» »ದೇವ ಭೂಮಿಯೆಡೆಗೆ ಚಾರಣ ಯಾತ್ರೆ

ದೇವ ಭೂಮಿಯೆಡೆಗೆ ಚಾರಣ ಯಾತ್ರೆ

ರುದ್ರಪ್ರಯಾಗ್‍ ಜಿಲ್ಲೆಯಲ್ಲಿರುವ ತುಂಗನಾಥ ದೇವಾಲಯವು ಜಗತ್ ಪ್ರಸಿದ್ಧಿ ಪಡೆದಿದೆ. ಸಮುದ್ರ ಮಟ್ಟದಿಂದ 3680 ಮೀ. ಎತ್ತರದಲ್ಲಿರುವ ಈ ತಾಣದಲ್ಲಿ ಪ್ರಪಂಚದಲ್ಲಿಯೇ ಅತಿ ಎತ್ತರದ ಶಿವಾಲಯವಿದೆ.

By Divya

ಪೌರಾಣಿಕ ಕಥೆಗಗಳನ್ನು ಒಳಗೊಂಡಿರುವ ಪವಿತ್ರ ಕ್ಷೇತ್ರಗಳು ಭಾರತದ ಉತ್ತರ ಭಾಗದಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಉತ್ತರಾಖಂಡವು ಒಂದು. ಧಾರ್ಮಿಕವಾಗಿ ಮಹತ್ವ ಪಡೆದ ಈ ತಾಣದಲ್ಲಿ ಸುಂದರ ನದಿ-ತೊರೆಗಳು ಹಾಗೂ ಪವಿತ್ರ ಕ್ಷೇತ್ರಗಳ ದರ್ಶನ ಮಾಡಬಹುದು. ಗತಕಾಲದ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರಕ್ಕೆ ದೇವ ಭೂಮಿ ಎಂತಲೂ ಕರೆಯುತ್ತಾರೆ.

ತುಂಗಾನಾಥ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರುದ್ರಪ್ರಯಾಗ್‍ ಜಿಲ್ಲೆಯಲ್ಲಿರುವ ತುಂಗನಾಥ ದೇವಾಲಯವು ಜಗತ್ ಪ್ರಸಿದ್ಧಿ ಪಡೆದಿದೆ. ಸಮುದ್ರ ಮಟ್ಟದಿಂದ 3680 ಮೀ. ಎತ್ತರದಲ್ಲಿರುವ ತಾಣದಲ್ಲಿ ಪ್ರಪಂಚದಲ್ಲಿಯೇ ಅತಿ ಎತ್ತರದ ಶಿವಾಲಯವಿದೆ. ಚಾರಣದ ಮೂಲಕವೇ ಕ್ರಮಿಸಬೇಕಾದ ಈ ತಾಣ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ. ಇಲ್ಲಿಗೆ ದೇಶದ ಮೂಲೆ ಮೂಲೆಯಿಂದಲೂ ಮಂದಿ ಹರಿದುಬರುತ್ತಾರೆ. ಮಾರ್ಚ್ ನಂತರದ ದಿನಗಳೇ ಈ ಪ್ರದೇಶದ ಭೇಟಿಗೆ ಸೂಕ್ತ ಕಾಲ ಎನ್ನಲಾಗುತ್ತದೆ.

ನಂಬಿಕೆ

ನಂಬಿಕೆ

ಗಿರಿಯ ತುದಿಯಲ್ಲಿರುವ ಈ ದೇಗುಲ ಚಂದ್ರಪರ್ವತ ಶಿಖರದಲ್ಲಿರುವ ಪಂಚ ಕೇದಾರ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ತಾಣಕ್ಕೆ ಪಾದ ಯಾತ್ರೆಯ ಮೂಲಕ ಬಂದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

PC: en.wikipedia.org

ಇತಿಹಾಸ

ಇತಿಹಾಸ

ಸಾವಿರ ವರ್ಷದ ಇತಿಹಾಸ ಹೊಂದಿರುವ ಈ ದೇಗುಲ ಶಿಖರದ ತುದಿಯಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ಒಂದು. ಇದು ಮಹಾಭಾರತದ ಪಾಂಡವರ ಕಥೆಯನ್ನು ಒಳಗೊಂಡಿದೆ.

PC: en.wikipedia.org

ರಾಮಾಯಣದ ನಂಟು

ರಾಮಾಯಣದ ನಂಟು

ಈ ದೇಗುಲವು ರಾಮಾಯಣದ ಇತಿಹಾಸವನ್ನು ಒಳಗೊಂಡಿದೆ. ರಾವಣನು ಶಿವನ ಸಾಕ್ಷಾತ್ಕಾರ ಪಡೆದು, ಆತ್ಮಲಿಂಗವನ್ನು ಪಡೆಯುವ ಉದ್ದೇಶಕ್ಕಾಗಿ ಚಂದ್ರಗಿರಿ ಪರ್ವತದಲ್ಲಿಯೇ ತಪಸ್ಸನ್ನು ಗೈದ ಎನ್ನಲಾಗುತ್ತದೆ.

PC: en.wikipedia.org

ಶೈಲ ಪುತ್ರಿ

ಶೈಲ ಪುತ್ರಿ

ಪುರಾಣದ ಪ್ರಕಾರ ಕೈಲಾಸದಲ್ಲಿ ವಾಸಿಸುವ ಶಿವ ಪಾರ್ವತಿಯರ ವಾಸಸ್ಥಾನವಿದು. ಹಾಗಾಗಿಯೇ ಪಾರ್ವತಿಯನ್ನು ಶೈಲ ಪುತ್ರಿ ಎಂತಲೂ ಕರೆಯುತ್ತಾರೆ. ಎಂದರೆ ಶಿಖರಗಳ ಮಗಳು ಎಂದಾಗುತ್ತದೆ.

PC: en.wikipedia.org

ಪೂಜೆಯ ಪರಿ

ಪೂಜೆಯ ಪರಿ

ದೇವರನ್ನು ಇಲ್ಲಿಯ ಸ್ಥಳೀಯ ಮೈಥಾನಿ ಬ್ರಾಹ್ಮಣರು ಪೂಜಿಸುತ್ತಾರೆ. ಎಂಟನೇ ಶತಮಾನದಿಂದಲೂ ಈ ವಿಧಾನ ನಡೆದುಕೊಂಡು ಬಂದಿದೆ. ನಿತ್ಯವೂ ನಿಯಮಬದ್ಧವಾಗಿಯೇ ಪೂಜಿಸಲಾಗುತ್ತದೆ. ಭಕ್ತರು ಶಿವನ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳುತ್ತಾರೆ.

PC: flickr.com

ಪವಿತ್ರ ಕ್ಷೇತ್ರ

ಪವಿತ್ರ ಕ್ಷೇತ್ರ

ಈ ಶಿವಾಲಯವನ್ನು ಆದಿ ಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದರು ಎನ್ನಲಾಗುತ್ತದೆ. ಈ ತಾಣದಲ್ಲಿ ಅನೇಕ ಪುಟ್ಟ ಪುಟ್ಟ ಪವಿತ್ರ ಕ್ಷೇತ್ರಗಳಿರುವುದರಿಂದ ಅವುಗಳ ದರ್ಶನದಿಂದ ಜನ್ಮ ಪಾವನವಾಗುವುದು.

PC: en.wikipedia.org

ಶಿಖರದ ಸುತ್ತ

ಶಿಖರದ ಸುತ್ತ

ತುಂಗನಾಥ ಪರ್ವತ ಶ್ರೇಣಿಯು ಮಂದಾಕಿನಿ ನದಿಯ ಹರಿವನ್ನು ಒಳಗೊಂಡಿದೆ. ಈ ಶಿಖರವನ್ನು ಹತ್ತಲು ಚೊಪ್ಟಾ ಪ್ರದೇಶವೇ ಮಹಾದ್ವಾರ.

PC: en.wikipedia.org

ಚಾರಣದ ಪರಿ

ಚಾರಣದ ಪರಿ

ಸುಂದರ ಹಸಿರು ಸಿರಿ ಹಾಗೂ ನದಿ ತೊರೆಗಳಿಂದ ಕೂಡಿರುವ ಈ ತಾಣದಲ್ಲಿ ವಿಶಿಷ್ಟ ಬಗೆಯ ಪ್ರಾಣಿ ಪಕ್ಷಿಗಳನ್ನು ಕಾಣಬಹುದು. ಇವುಗಳ ದರ್ಶನ ಚಾರಣದ ಆಯಾಸವನ್ನು ಮರೆಸುತ್ತವೆ.

PC: en.wikipedia.org

ಕಣಿವೆಯ ಸುತ್ತ

ಕಣಿವೆಯ ಸುತ್ತ

ಈ ಕಣಿವೆಗಳು ಸಮೃದ್ಧವಾದ ಆಲ್ಪೈನ್ ಹುಲ್ಲುಗಾವಲು, ಗುಲ್ಮ ಹೂಗಳ ಸೊಬಗು ಹಾಗೂ ಕೃಷಿ ಭೂಮಿಗಳ ಆಕರ್ಷಣೆಯಿಂದ ಕೂಡಿವೆ.

PC: flickr.com

ಬಣ್ಣದ ಹೂಗಳು

ಬಣ್ಣದ ಹೂಗಳು

ಈ ಹೂವುಗಳು ಮಾರ್ಚ್ ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಅರಳುತ್ತವೆ. ದಟ್ಟವಾಗಿ ಪಸರಿಸಿಕೊಳ್ಳುವ ಈ ಹೂಗಳ ಪರಿಯಿಂದ ಸುತ್ತಲ ಪ್ರದೇಶವೂ ಬಣ್ಣ ಬಣ್ಣದಿಂದ ಕೂಡಿರುವಂತೆ ಶೋಭಿಸತ್ತವೆ.

PC: flickr.com

ದಾರಿ ಮಧ್ಯೆ

ದಾರಿ ಮಧ್ಯೆ

ಈ ಮಾರ್ಗದಲ್ಲಿ ಗರ್ವಾಲ್ ವಿಶ್ವ ವಿದ್ಯಾನಿಲಯದ ಬೊಟಾನಿಕಲ್ ಕೇಂದ್ರ ಹಾಗೂ ದುಗಲಿಬೆಟ್ಟ ಎನ್ನುವ ಚಾರಣ ಧಾಮವಿದೆ. ಇಲ್ಲಿ ನಿಂತು ತುಂಗನಾಥ ದೇಗುಲದ ಸುಂದರ ದೃಶ್ಯವನ್ನು ಸೆರೆಹಿಡಿಯಬಹುದು.

PC: flickr.com

ವನ್ಯ ಧಾಮ

ವನ್ಯ ಧಾಮ

ಕೇದಾರನಾಥ ಶ್ರೇಣಿಯ ವಿರುದ್ಧ ದಿಕ್ಕಿಗೆ ಕೇದಾರನಾಥ ವನ್ಯ ಜೀವಿಧಾಮ ಇರುವುದನ್ನು ನೋಡಬಹುದು. ಇದನ್ನು ಕಸ್ತೂರಿ ಮೃಗ ಅಭಯಾರಣ್ಯ ಎಂತಲೂ ಕರೆಯುತ್ತಾರೆ.

PC: flickr.com

ವಿಶ್ರಾಂತಿ ತಾಣ

ವಿಶ್ರಾಂತಿ ತಾಣ

ದೀರ್ಘ ಚಾರಣದಿಂದ ಆಯಾಸವಾದವರು ದೇವದರ್ಶಿನಿ ಎಂಬಲ್ಲಿ ಕೊಂಚ ವಿಶ್ರಾಂತಿ ಪಡೆಯಲು ಸೂಕ್ತ ತಾಣ. ಇಲ್ಲಿ ಲಘು ಆಹಾರ ವ್ಯವಸ್ಥೆಯನ್ನು ಪಡೆಯಬಹುದು.

PC: flickr.com

ಚಂದ್ರಶಿಲಾ ಶಿಕರ

ಚಂದ್ರಶಿಲಾ ಶಿಕರ

ತುಂಗನಾಥದಿಂದ 1.5 ಕಿ.ಮೀ. ಸಾಗಿದರೆ ಚಂದ್ರಶಿಲಾ ಶಿಖರ ಸಿಗುವುದು. ಈ ಸುಂದರವಾದ ಶಿಖರ ಹಿಮದಿಂದಲೇ ಆವೃತ್ತವಾಗಿರುತ್ತದೆ. ಇಲ್ಲಿ ಪ್ರಕೃತಿಯ ಸುಂದರ ದೃಶ್ಯಗಳನ್ನು ಸೆರೆಹಿಡಿದು ಆನಂದಿಸಬಹುದು. ತುಂಗನಾಥ ಶ್ರೇಣಿಯಿಂದಲೂ ಸುತ್ತಲ ಶಿಖರ ಪರ್ವತಗಳನ್ನು ಮನದಣಿಯುವಷ್ಟು ಹೊತ್ತು ನೋಡಬಹುದು.

PC: en.wikipedia.org

ಮಾರ್ಗ ವಿವರ

ಮಾರ್ಗ ವಿವರ

ಬೆಂಗಳೂರಿನಿಂದ ದೆಹಲಿಗೆ ತಲುಪಿದರೆ ಅಲ್ಲಿಂದ ಶತಾಬ್ದಿ ರೈಲು ಮಾರ್ಗದಲ್ಲಿ ತುಂಗನಾಥ ದೇಗುಲಕ್ಕೆ ತಲುಪಬಹುದು. ದೆಹಲಿಯಿಂದ 212 ಕಿ.ಮೀ ದೂರದಲ್ಲಿರುವ ಚೊಪ್ಪಾಕ್ಕೆ ತಲುಪ ಬೇಕು. ಅಲ್ಲಿಂದ 5 ಕಿ.ಮೀ. ಚಾರಣದ ಮೂಲಕ ದೇಗುಲದ ಬಾಗಿಲಿಗೆ ಹೋಗಬಹುದು.

ಈ ತಾಣಕ್ಕೆ ಇನ್ನೊಂದು ಸಮೀಪದ ಸ್ಥಳವೆಂದರೆ ಹರಿದ್ವಾರ. ಹರಿದ್ವಾರದಿಂದ 225 ಕಿ.ಮೀ. ಕ್ರಮಿಸಿ ಚೊಪ್ಟಾ ತಲುಪಬೇಕು. ಅಲ್ಲಿಂದ ಅನೇಕ ವಾಹನ ವ್ಯವಸ್ಥೆಗಳಿರುತ್ತವೆ. ಆ ನಂತರ ಚೊಪ್ಟಾದಿಂದ ಚಾರಣಮಾಡಿಯೇ ತುಂಗನಾಥ ಪುಣ್ಯ ಕ್ಷೇತ್ರಕ್ಕೆ ತಲುಪಬೇಕು.

PC: flickr.com

Read more about: ಉತ್ತರಾಖಂಡ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X