Search
  • Follow NativePlanet
Share
» »ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿರುವ ಆನಂದಗಿರಿ ಹಾಗೂ ಸಿದ್ಧೇಶ್ವರ ಗುಡ್ಡಗಳು ಆಕರ್ಷಕ ತಾಣಗಳಾಗಿದ್ದು ಚರಣಯೋಗ್ಯ ಆಕರ್ಷಣೆಗಳಾಗಿ ಗಮನಸೆಳೆಯುತ್ತವೆ

By Vijay

ಕರ್ನಾಟಕದ ಸುಂದರ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ಸೌಂದರ್ಯಭರಿತ ಪ್ರವಾಸಿ ತಾಣಗಳಿಂದ ಕೂಡಿದೆ. ಮಲೆನಾಡು ಮೊದಲೆ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಪ್ರದೇಶ. ಹಾಗಾಗಿ ಇಲ್ಲಿರುವ ಒಂದೊಂದು ಸ್ಥಳಗಳೂ ಸಹ ಒಂದೊಂದು ವಿಶೇಷತೆಯನ್ನು, ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರಿಗೆ ಕರುಣಿಸುತ್ತವೆ.

ಇಂತಹ ಸೊಬಗಿನ ನಾಡಿನಲ್ಲಿ ಅನೇಕ ಕ್ಷೇತ್ರಗಳಿದ್ದು ಅದರಲ್ಲಿ ತೀರ್ಥಹಳ್ಳಿ ಕ್ಷೇತ್ರವೂ ಸಹ ಒಂದು. ತುಂಗಾ ನದಿಯ ತಟದ ಮೇಲೆ ನೆಲೆಸಿರುವ ತೀರ್ಥಹಳ್ಳಿಯು ಪ್ರಾಕೃತಿಕವಾಗಿ ಮಾತ್ರವಲ್ಲದೆ ಧಾರ್ಮಿಅಕವಾಗಿಯೂ ಸಹ ಸಾಕಷ್ಟು ಪ್ರಾಮುಖ್ಯತೆಗಳಿಸಿದೆ. ಜೊತೆ ಜೊತೆಯಲ್ಲಿ ಕೆಲ ಉತ್ಸಾಹಿ ಪ್ರವಾಸಿಗರಿಗೆ ಚಾರಣಗ ಮಾರ್ಗಗಳನ್ನೂ ಒದಗಿಸುತ್ತದೆ.

ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ಆನಂದಗಿರಿ, ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎರಡು ವಿಶೇಷವಾದ ಗುಡ್ಡಗಳಿವೆ. ಅವೆ ಆನಂದಗಿರಿ ಹಾಗೂ ಸಿದ್ಧೇಶ್ವರ ಗುಡ್ಡ. ಒಂದು ಇನ್ನೂರು ಅಡಿಗಳಷ್ಟು ಎತ್ತರವಿದ್ದರೆ ಇನ್ನೊಂದು ಮುನ್ನೂರು ಅಡಿಗಳಷ್ಟು ಎತ್ತರವಿದೆ. ಅಲ್ಲದೆ ಎರಡೂ ಬೆಟ್ಟಗಳು ಚಾರಣದಂತಹ ಚಟುವಟಿಕೆಗೆ ಬಲು ಯೋಗ್ಯವಾದ ತಾಣಗಳಾಗಿವೆ. ಏರಲು ಸುಲಭವಾಗಿದ್ದು ರೋಮಾಂಚನ ಉಂಟು ಮಾಡುವುದು ಖಚಿತ.

ಆನಂದಗಿರಿಯು ತೀರ್ಥಹಳ್ಳಿ ಪಟ್ಟಣದಿಂದ ಸುಲಭವಾಗಿ ತಲುಪಬಹುದಾದಂತಹ ಗುಡ್ಡವಾಗಿದೆ. ಇದರ ಎತ್ತರ ಸುಮಾರು ಮುನ್ನೂರು ಅಡಿಗಳಷ್ಟು. ಏರಲೂ ಅನುಕೂಲಕರವಾಗಿದೆ. ತೀರ್ಥಹಳ್ಳಿ ನಗರ ಕೇಂದ್ರದಿಂದ ನಡೆಯುತ್ತಲೆ ಸುಲಭವಾಗಿ ಆನಂದಗಿರಿಯನ್ನು ತಲುಪಬಹುದಾಗ್ಗಿದು ಚಾರಣವನ್ನು ಕೈಗೊಳ್ಳಬಹುದಾಗಿದೆ.

ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ಸಿದ್ಧೇಶ್ವರ ಗುಡ್ಡ, ಚಿತ್ರಕೃಪೆ: Manjeshpv

ಒಂದೊಮ್ಮೆ ಆನಮ್ದಗಿರಿ ಬೆಟ್ಟವನ್ನೇರಿದರೆ ಸಾಕು ಅಲ್ಲಿಂದ ಕಂಡುಬರುವ ಸುಂದರ ದೃಶ್ಯಾವಳಿಗಳು ನೋಡುಗರು ಪರಮಾನಂದ ಹೊಂದುವಂತೆ ಮಾಡುತ್ತವೆ. ಬೆಟ್ಟದ ಮೇಲೆ ಗುಮ್ಮಟವುಳ್ಳ ಮಂಟಪವೊಂದಿದ್ದು ಅದರಲ್ಲಿ ಹಾಯಾಗಿ ವಿಶ್ರಾಂತಿ ಪಡೆಯಬಹುದು.

ಮೇಲಿನಿಂದ ತೀರ್ಥಹಳ್ಳಿ ಪಟ್ಟಣದ ನಯನಮನೋಹರ ದೃಶಗಳನ್ನು ಅದ್ಭುತವಾಗಿ ಸವಿಯಬಹುದಾಗಿದೆ. ಸೂರ್ಯೋದಯದ ಮುಂಚೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮುಳುಗುವ ಸೂರ್ಯನ ಅಥವಾ ಉದಯಿಸುವ ಸೂರ್ಯನ ಅತಿ ಸುಂದರ ನೋಟಗಳನ್ನು ಸವಿಯಬಹುದು.

ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ಸಿದ್ಧೇಶ್ವರ ಗುಡ್ಡದ ಮೇಲಿರುವ ಪುಟ್ಟ ದೇಗುಲ, ಚಿತ್ರಕೃಪೆ: Manjeshpv

ಇನ್ನೂ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಬಂದರಂತೂ ಭೂತಾಯಿಯ ಸುಂದರ ಹಸಿರಿನ ಹಾಸಿಗೆಯು ಎಲ್ಲೆಡೆ ಸುಶ್ರಾವ್ಯವಾಗಿ ವ್ಯಾಪಿಸಿರುವುದನ್ನು ಕಾಣಬಹುದು. ಬೆಳಗಿನ ಸಮಯದಲ್ಲಂತೂ ಮಂಜಿನಿಂದ ಮುಸುಕಿದ ವಾತಾವರಣ ನೋಡಿದಾಗ ಮೈಯಲ್ಲಿ ರೋಮಾಂಚನವಾಗದೆ ಇರಲಾರದು.

ಎರಡನೆಯದಾಗಿ ಸಿದ್ಧೇಶ್ವರ ಬೆಟ್ಟ ಅಥವಾ ಗುಡ್ಡವು ತೀರ್ಥಹಳ್ಳಿಯಲ್ಲಿರುವ ಮತ್ತೊಂದು ಸುಂದರ ಗುಡ್ಡವಾಗಿದೆ. ಆನಂದಗಿರಿಯು ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಸ್ಥಿತವಿದ್ದರೆ ಸಿದ್ಧೇಶ್ವರ ಗುಡ್ಡವು ತೀರ್ಥಹಳ್ಳಿ-ಆಗುಂಬೆ ರಸ್ತೆಯಲ್ಲಿ ಕಂಡುಬರುತ್ತದೆ ಹಾಗೂ ತೀರ್ಥಹಳ್ಳಿಯಿಂದ ಸುಲಭವಾಗಿ ಈ ಗುಡ್ಡವನ್ನು ತಲುಪಬಹುದಾಗಿದೆ.

ನೆನಪಿನಲ್ಲುಳಿಯುವ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ!

ಸುಮಾರು ಇನ್ನೂರು ಅಡಿಗಳಷ್ಟು ಎತ್ತರವಿರುವ ಸಿದ್ಧೇಶ್ವರ ಗುಡ್ಡವೂ ಸಹ ಚಾರಣ ಯೋಗ್ಯ ಬೆಟ್ಟವಾಗಿದ್ದು ಸಾಕಷ್ಟು ಚಾರಣಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಗುಡ್ಡದ ಮೇಲಿನಿಂದ ತೀರ್ಥಹಳ್ಳಿ ಪಟ್ಟಣದ ಸಮ್ಪೂರ್ಣ ನೋಟವನ್ನು ಆಸ್ವಾದಿಸಬಹುದು. ಅಲ್ಲದೆ ವಾತಾವರಣ ಸ್ಪಷ್ಟವಾಗಿದ್ದಾಗ ಕೊಡಚಾದ್ರಿ ಹಾಗೂ ಕುಂದಾದ್ರಿ ಬೆಟ್ಟಗಳನ್ನೂ ಸಹ ಇಲ್ಲಿಂದ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X