Search
  • Follow NativePlanet
Share
» »ಪ್ರವಾಸ ಹೊರಡುವ ಮುನ್ನ...

ಪ್ರವಾಸ ಹೊರಡುವ ಮುನ್ನ...

By Vijay

ಸಾಮಾನ್ಯವಾಗಿ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. ಏಕೆಂದರೆ ಒಂದೆ ಸ್ಥಳದಲ್ಲಿ ವಾಸಿಸುತ್ತಿದ್ದು ಏಕ ರೀತಿಯ ಚಟುವಟಿಕೆಗಳಿಂದ ಆಗಾಗ ಮನಸ್ಸು ಆಯಾಸ ಹಾಗೂ ಬೇಸರಗೊಳ್ಳುವುದುಂಟು. ಹೀಗೆ ಮನಸ್ಸು ಒತ್ತಡದಿಂದ ಕೂಡಿದಾಗ ಉತ್ಸಾಹ ಕುಗ್ಗಿ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ಮನಸ್ಸಿಗೆ ಹಿತ ಎನಿಸುವ, ಉತ್ಸಾಹ ಇಮ್ಮಡಿಗೊಳಿಸುವ ಯಾವುದಾದರೂ ಒಂದು ಚಟುವಟಿಕೆ ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ.

ಮೇಲಿನ ಈ ಸಮಸ್ಯೆಗೆ ಇತರೆ ಹಲವಾರು ಪರಿಹಾರಗಳನ್ನು ಕೊಂಡುಕೊಳ್ಳಬಹುದಾಗಿದ್ದರೂ, ಪ್ರವಾಸ ಎಂಬುದು ಅತ್ಯಂತ ಪರಿಣಾಮಕಾರಿಯಾದ ಒಂದು ಚಟುವಟಿಕೆ ಎಂದೆ ಹೇಳಬಹುದು. ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ವಾಸದ ನೆಲೆಯಿಂದ ಕೆಲ ಕಾಲ ದೂರ ಹೋಗಿ, ಕಾಣದ ನೆಲೆಯಲ್ಲಿ ಪ್ರಕೃತಿಯ ವೈಭವ ಸವಿಯುತ್ತ, ಅಲ್ಲಿನ ವಿಶೇಷ ಆಕರ್ಷಣೆಗಳನ್ನು ಅನುಭವಿಸುತ್ತ, ಅಪರಿಚಿತ ಮುಖಗಳ ನಡುವೆ ಒಂದು ರೀತಿಯ ನಮ್ಮತನವನ್ನು ಕಾಣುತ್ತ ಒಂದು ಆತ್ಮೀಯವಾದ ವಿರಾಮದ ವಿಹಾರ ಒತ್ತಡದ ಮನಸ್ಸಿಗೆ ಸುತ್ತಿಗೆಯ ಪೆಟ್ಟು ನೀಡಿ ಹಗುರಗೊಳಿಸುತ್ತದೆ.

ಪ್ರವಾಸ ಹೊರಡುವುದೆಂದರೇನೊ ಸಂತಸದ ವಿಷಯ. ಆದರೆ ಹೊರಡುವುದಕ್ಕಿಂತ ಮುಂಚೆ ಕೆಲ ಮುಂಜಾಗ್ರತೆಗಳನ್ನು ವಹಿಸುವುದು ಅವಶ್ಯಕವಾಗಿದೆ. ಇದರಿಂದ ನೀವು ನಿಮ್ಮ ಪ್ರವಾಸವನ್ನು ಕೇವಲ ಶತಪ್ರತಿಶತದಷ್ಟು ಪೂರ್ಣಪ್ರಮಾಣದಲ್ಲಿ ಅನುಭವಿಸುವುದೂ ಅಲ್ಲದೆ ಒಂದು ಅವಿಸ್ಮರಣೀಯ ಅನುಭವವಂತೆಯೂ ಕಾಣಬಹುದು. ಇಲ್ಲಿ ನೀಡಲಾಗಿರುವ ಪ್ರತಿಯೊಂದು ಮುಂಜಾಗ್ರತಾ ಕ್ರಮಗಳು ನಿಮ್ಮ ಪ್ರವಾಸವನ್ನು ಒಂದು ಸುಂದರ ಅನುಭವವನ್ನಾಗಿಸುತ್ತದೆ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಪ್ರವಾಸ ಎಲ್ಲಿಗೆ ಹೊರಡಬೇಕೆಂದು ಮೊದಲೆ ಯೋಜಿಸಿಕೊಳ್ಳಿ. ಈ ನಿರ್ಣಯವು ಸ್ಥಳದಲ್ಲಿ ಅನುಭವಿಸಬಹುದಾದ ಹಿತಕರವಾದ ವಾತಾವರಣದ ಮೇಲೆ ಅವಲಂಬಿತವಾಗಿರಲಿ. ಅಂದರೆ ಹೊರಡಲಿರುವ ಸ್ಥಳವು ಸದ್ಯ ಭೇಟಿ ನೀಡಲು ಒಳ್ಳೆಯ ಸಮಯವೆ ಎಂದು ಪರಿಶೀಲಿಸಿಕೊಳ್ಳಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಅದರಂತೆ ಅಲ್ಲಿಗೆ ತೆರಳಲು ರೈಲು, ಬಸ್ಸುಗಳ ಲಭ್ಯತೆಯ ಕುರಿತು ಮೊದಲೆ ತಿಳಿದುಕೊಳ್ಳಿ. ಇದರಿಂದ ಕೊನೆ ಕ್ಷಣದಲ್ಲಿ ಆತುರದಿಂದ ತೆಗೆದುಕೊಳ್ಳುವಂತಹ ನಿರ್ಣಯವನ್ನು ತಪ್ಪಿಸಬಹುದು. ಅಲ್ಲದೆ ನಿಮಗೆ ಲಭ್ಯವಾಗಿರುವ ಸಮಯವನ್ನು ಸಾರ್ಥಕತೆಯಿಂದ ಬಳಸಬಹುದು.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಭೇಟಿ ನೀಡುವ ಸ್ಥಳಕ್ಕೆ ತೆರಳಲು ಮೊದಲೆ ಟಿಕೆಟ್ ಕೊಂಡು ಕಾಯ್ದಿರಿಸುವ ಸೌಲಭ್ಯವಿದ್ದರೆ ಹಾಗೆ ಮಾಡಿ. ಇದರಿಂದ ಕೊನೆ ಘಳಿಗೆಯಲ್ಲಿ ಟಿಕೆಟ್ ಗಾಗಿ ಪರಿತಪಿಸುವುದನ್ನು ತಪ್ಪಿಸಬಹುದು.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಸಾಧ್ಯವಾದರೆ ನಿಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಚಿಟಿಗಳಲ್ಲಿ ನಮೂದಿಸಿ ಮಕ್ಕಳ ಬ್ಯಾಗುಗಳಲ್ಲಿಡಿ.

ಚಿತ್ರಕೃಪೆ: ian munroe

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ನೆನಪಿರಲಿ ನೀವು ಹೊರಡುತ್ತಿರುವುದು ಪ್ರವಾಸಕ್ಕೆ, ಮದುವೆ, ಮುಂಜಿಗಳಂತಹ ಸಮಾರಂಭಕ್ಕಲ್ಲ. ಆದ್ದರಿಂದ ಬೆಲೆಯುಳ್ಳ ಆಭಾರಣಾದಿಗಳನ್ನು ಒಯ್ಯದಿರಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ನೀರೇಯರಿಗೆ ಮೆರುಗು ನೀಡುತ್ತ ಮೈಗೆ ಭಾರವೆನಿಸುವ ರೇಷ್ಮೆ ಸೀರೆ ಮುಂತಾದ ಭಾರವಿರುವ ಬಟ್ಟೆಗಳನ್ನು ತಪ್ಪಿಸಿ. ನೀವು ದಿನಂಪ್ರತಿ ಬಳಸುವ ಉಡುಗೆಗಳನ್ನೆ ಬಳಸಿ. ಹತ್ತಿಯ ಬಟ್ಟೆಗಳಿದ್ದಷ್ಟು ಉತ್ತಮ. ತೆಗೆದುಕೊಂಡು ಹೋಗುವ ಬ್ಯಾಗುಗಳ ಸಂಖ್ಯೆಯು ಮಿತವ್ಯಯ ಪ್ರಮಾಣದಲ್ಲಿರಲಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಪ್ರವಾಸ ಹೊರಡುತ್ತಿರುವ ಸ್ಥಳದಲ್ಲಿ ಲಭ್ಯವಿರುವ ಹೋಟೆಲುಗಳ ಗುಣಮಟ್ಟದ ಕುರಿತು ಮೊದಲೆ ಅಂತರ್ಜಾಲ ಬಳಸಿ ತಿಳಿದುಕೊಳ್ಳಿ. ಇಂದು ಇದು ಕಷ್ಟವಾದ ಕೆಲಸವೇನೂ ಅಲ್ಲ. ಸಾಧ್ಯವಾದರೆ ರೂಮುಗಳನ್ನು ಅವಶ್ಯಕತೆಗನುಗುಣವಾಗಿ ಕಾಯ್ದಿರಿಸಿ. ಇದರಿಂದ ರೂಮುಗಳು ದೊರೆಯುತ್ತಿಲ್ಲ ಎಂಬ ಚಿಂತೆಯಿಂದ ತೊಂದರೆಪಡುವುದನ್ನು ತಪ್ಪಿಸಬಹುದು.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಹೋದಾಗ ಮಕ್ಕಳು ಅದು ಇದು ಬೇಕೆನ್ನುವುದು ಸಾಮಾನ್ಯ. ಪ್ರಸ್ತುತ ಆಧುನಿಕ ಯುಗದಲ್ಲಿ ಎಲ್ಲ ವಸ್ತುಗಳು ಎಲ್ಲೆಡೆ ದೊರೆಯುವುದರಿಂದ, ಮಕ್ಕಳಿಗೆ ಇದರ ಕುರಿತು ಈ ಮೊದಲೆ ತಿಳಿ ಹೇಳಿ ಹಾಗೂ ಅನವಶ್ಯಕವಾದ ವಸ್ತುಗಳನ್ನು ಕೊಂಡು ನಿಮ್ಮ ಬ್ಯಾಗುಗಳನ್ನು ಮತ್ತಷ್ಟು ಭಾರಗೊಳಿಸದಿರಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಕ್ಯಾಮೆರಾ ಹಾಗೂ ಒಂದು ನೋಟ್ ಪ್ಯಾಡ್ ಇದ್ದರೆ ಇನ್ನೂ ಒಳಿತು. ಆಯಾ ಸ್ಥಳಕ್ಕೆ ಭೇಟಿ ನೀಡಿದಾಗ ಆ ಸ್ಥಳಗಳ ವಿಶೇಷತೆ ಕುರಿತು ಸಂಕ್ಷೀಪ್ತವಾಗಿ ಬರೆದಿಟ್ಟುಕೊಳ್ಳಿ. ಹಾಗೆಯೆ ಕ್ಯಾಮೆರಾದ ಮುಖಾಂತರ ಸ್ಥಳಗಳ ಪ್ರಕೃತಿ ಸೌಂದರ್ಯವನ್ನು ಅಥವಾ ಐತಿಹಾಸಿಕ ಸ್ಮಾರಕಗಳನ್ನು ಸೆರೆ ಹಿಡಿದಿಟ್ಟುಕೊಳ್ಳಿ. ಇದರಿಂದ ಮುಂದೆ ಮಕ್ಕಳಿಗೆ ಈ ಸ್ಥಳಗಳ ಕುರಿತು ಮಾಹಿತಿ ನೀಡಿ ಅವರ ಸಾಮಾನ್ಯ ಜ್ಞಾನವನ್ನು ವೃದ್ಧಿಸಬಹುದು.

ಚಿತ್ರಕೃಪೆ: mjtmail (tiggy)

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಹೋದಾಗ ಕಂಡ ಕಡೆಯಲ್ಲೆಲ್ಲ, ಹಾದಿ ಬೀದಿಗಳ ತಿನಿಸುಗಳನ್ನು ತಿನ್ನುವುದನ್ನು ತಪ್ಪಿಸಿ. ಉತ್ತಮ ಎನ್ನಬಹುದಾದ ಉಪಹಾರಗೃಹಗಳಲ್ಲಿ ಮಾತ್ರ ಆಹಾರ ತೆಗೆದುಕೊಳ್ಳಿ. ಹೆಚ್ಚು ಮಸಾಲೆಯುಕ್ತ ಆಹಾರ ತ್ಯಜಿಸಿದರೆ ಉತ್ತಮ. ಶುಚಿಯಾದ ನೀರನ್ನು ಮಾತ್ರ ಸೇವಿಸಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಕೆಲವರಿಗೆ ಸ್ಥಳ ಬದಲಾವಣೆಯು ಜ್ವರ, ಶೀತ, ಕೆಮ್ಮು, ತಲೆ ನೋವಿನಂತಹ ಸಾಮಾನ್ಯ ಕಾಯಿಲೆಗಳನ್ನು ತಂದೊಡ್ಡುತ್ತವೆ. ಆದ್ದರಿಂದ ಪ್ರಥಮ ಚಿಕಿತ್ಸೆಗೆಂದು ಅವಶ್ಯಕವಾದ ಔಷಧೋಪಚಾರಗಳು ನಿಮ್ಮಲ್ಲಿರುವುದು ಉತ್ತಮ. ವಿಶೇಷವಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಬಹು ಅವಶ್ಯಕವಾಗಿದೆ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಭೇಟಿ ನೀಡುವ ಸ್ಥಳದ ನಕ್ಷೆಯಿದ್ದರೆ ಒಳಿತು. ಇದರಿಂದ ಆ ತಾಣದ ಆಕರ್ಷಣೆಗಳ ಕುರಿತು ಭೇಟಿ ನೀಡುವುದರ ಬಗ್ಗೆ ಪರಿಣಾಮಾತ್ಮಕವಾಗಿ ಯೋಜನೆ ಹಾಕಬಹುದು. ಇದರಿಂದ ಅನಾವಶ್ಯಕವಾಗಿ ಸಮಯ ಹಾಳು ಮಾಡದೆ ಬದಲಾಗಿ ಸಮಯದ ಪೂರ್ಣ ಲಾಭವನ್ನು ಪಡೆಯಬಹುದು.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಈ ಮೊದಲೆ ನೀವು ಭೇಟಿ ನೀಡಬಯಸಿರುವ ಸ್ಥಳಕ್ಕೆ, ನಿಮ್ಮ ನೆಂಟರೊ ಅಥವಾ ಸ್ನೇಹಿತರೊ ಹೋಗಿ ಬಂದಿದ್ದಲ್ಲಿ ಅವರಲ್ಲಿ ಆ ಸ್ಥಳದ ಕುರಿತು ಅವರ ಅನಿಸಿಕೆಗಳನ್ನು ಪಡೆಯಿರಿ. ಇದರಿಂದ ನಿಮ್ಮ ಪ್ರವಾಸ ಮತ್ತಷ್ಟು ಹಗುರ ಹಾಗೂ ಸುಲಲಿತವಾಗಬಹುದು.

ಚಿತ್ರಕೃಪೆ: Open Knowledge Foundation

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ನಿಮ್ಮದು ಬಹು ಸದಸ್ಯರ ಕುಟುಂಬ ಪ್ರವಾಸವಾಗಿದ್ದರೆ ಎಲ್ಲರೂ ಒಂದೇಡೆಯಲ್ಲೆ ಇರಲು ಪ್ರಯತ್ನಿಸಿ. ಒಟ್ಟಾಗಿಯೆ ಸಂಚರಿಸಿ ಆಕರ್ಷಣೆಗಳ ಆನಂದವನ್ನು ಅನುಭವಿಸಿ. ಆನಂದವನ್ನು ಹಂಚಿಕೊಂಡಷ್ಟು ವೃದ್ಧಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಅಲ್ಲದೆ ಕುಟುಂಬ ಸದಸ್ಯರು ಅಲ್ಲಿಲ್ಲಿ ಕಳೆದುಕೊಳ್ಳಬಹುದಾದ ಭೀತಿಯು ತಪ್ಪುತ್ತದೆ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಮೊದಲೆ ಯೋಜಿಸಿ ಚಿಲ್ಲರೆ ಕಾಸುಗಳನ್ನು ಇಟ್ಟು ಕೊಂಡಿದ್ದರೆ ಇನ್ನೂ ಉತ್ತಮ. ಸ್ಥಳೀಯವಾಗಿ ಸಂಚರಿಸುವಾಗ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಕೊಡಲು ಇದು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಕೆಲವೊಮ್ಮೆ 100, 500, 1000 ದ ನೋಟುಗಳನ್ನು ನೀಡಿ ಚಿಲ್ಲರೆಗಾಗಿ ಪರದಡಬೇಕಾದ ಸಂಭವ ಜಾಸ್ತಿಯಾಗಿರುತ್ತದೆ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಉದ್ಯಾನಗಳಂತಹ ಪ್ರದೇಶಗಳಿಗೆ ಭೇಟಿ ನೀಡಿದಾಗ ಅವಸರ ಪಡದೆ ಕುಟುಂಬ ಸದಸ್ಯರೊಡನೆ ಬೆರೆತು ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಕಳೆಯಿರಿ. ಏಕೆಂದರೆ ಮತ್ತೆ ನೀವು ಕೆಲಸಕ್ಕೆ ಮರಳಿದಾಗ ಈ ರೀತಿಯಾಗಿ ಒಟ್ಟಾಗಿ ಕುಳಿತು ಆನಂದ ಹೊಂದಲು ಸಮಯ ಸಿಗುವುದು ತೀರ ವೀರಳ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಕೆಲವು ಪ್ರದೇಶಗಳು ತಮ್ಮಲ್ಲಿ ದೊರೆಯುವ ವಿಶೇಷವಾದ ವಸ್ತುಗಳಿಗಾಗಿಯೆ ಹೆಚ್ಚು ಪ್ರಸಿದ್ಧಿಗಳಿಸಿರುತ್ತವೆ. ಇಂತಹ ವಸ್ತುಗಳು ಬೇರೆಡೆಯಲ್ಲೂ ದೊರೆಯಲಾರದೆಂದು ಅನಿಸಿದಾಗ ಮಾತ್ರವೆ ಕೊಂಡುಕೊಳ್ಳಿ.

ಪ್ರವಾಸಕ್ಕೆ ಮುಂಚೆ:

ಪ್ರವಾಸಕ್ಕೆ ಮುಂಚೆ:

ಈ ರೀತಿಯಾಗಿ ಮುಂಜಾಗ್ರತೆಗಳನ್ನು ತೆಗೆದುಕೊಂಡು ಯೋಜನಾಬದ್ಧವಾಗಿ ಕೂಡಿ ಮಾಡುವ ಪ್ರವಾಸ ಕುಟುಂಬ ಸದಸ್ಯರ ನಡುವಿನ ಪ್ರೀತಿ, ಸಂಬಂಧಗಳ ಬೇಸುಗೆಯನ್ನು ಬಲಪಡಿಸುವುದಲ್ಲದೆ, ಒಂದು ಅವಿಸ್ಮರಣೀಯ ಅನುಭವವನ್ನಾಗಿ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X