Search
  • Follow NativePlanet
Share
» »ವಾರದ ರಜೆಯಲ್ಲಿ ನದಿಗಳತ್ತ ಪಯಣ

ವಾರದ ರಜೆಯಲ್ಲಿ ನದಿಗಳತ್ತ ಪಯಣ

ಕರ್ನಾಟಕ ಎಂದೊಡನೆ ನೆನಪಿಗೆ ಬರುವುದು ಸಮುದ್ರ ತೀರ ಹಾಗೂ ಗಿರಿಧಾಮಗಳು. ವಾಸ್ತವವಾಗಿ ಹೇಳುವುದಾದರೆ ಕರ್ನಾಟಕದಲ್ಲಿರುವ ಪ್ರಸಿದ್ಧ ಪ್ರವಾಸ ತಾಣಗಳೆಲ್ಲಾ ನದಿ ತೀರಗಳಲ್ಲಿಯೇ ಇವೆ.

By Divya

ಕರ್ನಾಟಕ ಎಂದೊಡನೆ ನೆನಪಿಗೆ ಬರುವುದು ಸಮುದ್ರ ತೀರ ಹಾಗೂ ಗಿರಿಧಾಮಗಳು. ವಾಸ್ತವವಾಗಿ ಹೇಳುವುದಾದರೆ ಕರ್ನಾಟಕದಲ್ಲಿರುವ ಪ್ರಸಿದ್ಧ ಪ್ರವಾಸ ತಾಣಗಳೆಲ್ಲಾ ನದಿತೀರಗಳಲ್ಲಿಯೇ ಇವೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದಕ್ಕೆಲ್ಲಾ ವೇದಿಕೆ ಕಲ್ಪಿಸಿಕೊಟ್ಟಿರುವುದು ಇಲ್ಲಿ ಹರಿಯುವ ನದಿ ನದಿ ತೀರಗಳು. ಕರ್ನಾಟಕದಲ್ಲಿ ಹರಿಯುವ ಸುಂದರ ನದಿತೀರಗಳು ರಾಜ್ಯದ ಹಿರಿಮೆಯನ್ನು ಹೆಚ್ಚಿಸುವಲ್ಲೂ ಪ್ರಮುಖ ಸ್ಥಾನವನ್ನು ಪಡೆದಿವೆ.

ಈ ನದಿಗಳ ಬಗ್ಗೆ ನಿಮಗೆ ಗೊತ್ತೇ?

ನದಿ ತೀರಗಳು ಕೇವಲ ಪ್ರವಾಸೋದ್ಯಮದ ವಿಚಾರಗಳಿಗಷ್ಟೇ ಸೀಮಿತವಾಗಿಲ್ಲ. ಕೃಷಿ ಚಟುವಟಿಕೆಗಳಿಗೆ, ಜನರದ ದಿನನಿತ್ಯದ ಅಗತ್ಯಗಳಿಗೂ ಆಸರೆಯಾಗಿ ನಿಂತಿವೆ. ಸದಾ ತ್ಯಾಗದಲ್ಲೇ ಜೀವಿಸುವ ಜೀವ ನದಿಗಳ ಸುಂದರ ತಾಣದ ಪರಿಚಯ ಮಾಡಿಕೊಳ್ಳಲೇ ಬೇಕು. ಈ ತಾಣಗಳು ಬೆಂಗಳೂರಿಗೆ ಹತ್ತಿರದಲ್ಲೇ ಇರುವುದರಿಂದ, ವಾರದ ರಜೆಯಲ್ಲಿ ಇಲ್ಲಿಗೆ ಹೋಗಬಹುದು.

ಕಾವೇರಿ ನದಿ

ಕಾವೇರಿ ನದಿ

ದಕ್ಷಿಣ ಭಾರತದಲ್ಲಿರುವ ಒಂದು ದೊಡ್ಡ ನದಿ ಕಾವೇರಿ. ಕೊಡಗು ಜಿಲ್ಲೆಯಲ್ಲಿ ಹುಟ್ಟುವ ಈ ನದಿ ಪಶ್ಚಿಮ ಘಟ್ಟದ ಸಾಲುಗಳಲ್ಲಿ ಹರಿಯುತ್ತದೆ. ಕೇವಲ ತನ್ನ ನಾಡಿಗಷ್ಟೇ ಸೀಮಿತವಾಗಿರದೆ, ನೆರೆ ರಾಜ್ಯದ ಜನರಿಗೂ ಜೀವನಾಡಿಯಾಗಿದೆ. ಈ ನದಿಯು ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು, ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ದಕ್ಷಿಣ ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು 765 ಕಿ.ಮೀ.ಅಷ್ಟು ಉದ್ದವಾಗಿದೆ. ಬೆಂಗಳೂರಿನಿಂದ 306 ಕಿ.ಮೀ. ದೂರದಲ್ಲಿದೆ.
PC: wikimedia.org

ಭದ್ರಾನದಿ

ಭದ್ರಾನದಿ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ಈ ನದಿಗೆ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ನದಿಯು ಕರ್ನಾಟಕವನ್ನು ದಾಟಿ, ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ಪ್ರಮುಖ ಉಪನದಿಯಾಗಿ, ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕುದುರೆಮುಖದ ಹತ್ತಿರ ಇರುವ ಈ ನದಿಯ ದಡಕ್ಕೆ ಬಂದರೆ, ತಂಪಾದ ವಾತಾವರಣದಲ್ಲಿ ಹೆಚ್ಚು ಆನಂದವನ್ನು ಪಡೆಯಬಹುದು. ಬೆಂಗಳೂರಿನಿಂದ ಇಲ್ಲಿಗೆ 331 ಕಿ.ಮೀ. ದೂರ ಆಗುವುದು.
PC: wikimedia.org

ಕಾಳಿ ನದಿ

ಕಾಳಿ ನದಿ

ದಾಂಡೇಲಿ ಜಿಲ್ಲೆಯಲ್ಲಿ ಹುಟ್ಟುವ ಈ ನದಿಗೆ ಹಲವೆಡೆ ಅಣೆಕಟ್ಟುಅನ್ನು ನಿರ್ಮಿಸಲಾಗಿದೆ. ಇದರಿಂದ ಸ್ಥಳೀಯರ ದಿನನಿತ್ಯದ ಬಳಕೆಗೆ, ಕೃಷಿ ಚಟುವಟಿಕೆಗೆ ಸಹಾಯವಾಗಿದೆ. ಇದು ಪಶ್ಚಿಮ ಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಬೆಂಗಳೂರಿನಿಂದ 461 ಕಿ.ಮೀ. ದೂರದಲ್ಲಿರುವ ಈ ನದಿ ತೀರಕ್ಕೆ ಬಂದರೆ, ಹತ್ತಿರದ ಅಭಯಾರಣ್ಯಕ್ಕೆ ಭೇಟಿ ನೀಡಬಹುದು.
PC: wikimedia.org

ಕಬಿನಿ ನದಿ

ಕಬಿನಿ ನದಿ

ಕಬಿನಿ ಮತ್ತು ಕಪಿಲಾ ಎಂದು ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಹರಿದು, ಬಂಗಾಳಕೊಲ್ಲಿಯನ್ನು ಸೇರುತ್ತದೆ. ಸರ್ಗೂರು ಪಟ್ಟಣದ ಹತ್ತಿರ ಬೃಹತ್ ಕಬಿನಿ ಅಣೆಟ್ಟಿನಲ್ಲಿ ಸಂಗ್ರವಾಗುತ್ತದೆ. ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇದೆ. ಇಲ್ಲಿಗೆ ಒಮ್ಮೆ ಬಂದರೆ ವನ್ಯಜೀವಿ ದಾಮಕ್ಕೂ ಭೇಟಿ ನೀಡಬಹುದು. ವಾರದ ರಜೆಯೂ ಸಾರ್ಥಕವಾಗುತ್ತದೆ. ಬೆಂಗಳೂರಿನಿಂದ ಇಲ್ಲಿಗೆ 18.7 ಕಿ.ಮೀ. ದೂರ.
PC: wikimedia.org

ಸೌಪರ್ಣಿಕ ನದಿ

ಸೌಪರ್ಣಿಕ ನದಿ

ಕರ್ನಾಟಕದಲ್ಲಿರುವ ಒಂದು ಮಹಾನ್ ನದಿ ಸೌಪರ್ಣಿಕ. ಕುಂದಾಪುರದಲ್ಲಿ ಹುಟ್ಟಿ ಅರಬ್ಬಿ ಸಮುದ್ರವನ್ನು ಸೇರುವ ಈ ನದಿ ಹೆಚ್ಚು ಪಾವಿತ್ರ್ಯತೆಯನ್ನು ಹೊಂದಿದೆ. ಈ ನದಿಯ ನೀರಿನಲ್ಲಿ ಒಮ್ಮೆ ಸ್ನಾನ ಮಾಡಿದರೆ ಅನೇಕ ಚರ್ಮ ರೋಗಗಳು ಗುಣಮುಖವಾಗುತ್ತದೆ ಎನ್ನಲಾಗುತ್ತದೆ. ಬೆಂಗಳೂರಿನಿಂದ 416 ಕಿ.ಮೀ. ದೂರ ಬರಬೇಕು.
PC: wikimedia.org

ಗುರುಪುರ ನದಿ

ಗುರುಪುರ ನದಿ

ಈ ನದಿಯ ಇನ್ನೊಂದು ಹೆಸರು ಫಾಲ್ಗುಣಿ. ಪಶ್ಚಿಮಾಭಿಮುಖವಾಗಿ ಹರಿದು, ಅರಬ್ಬಿ ಸಮುದ್ರವನ್ನು ಸೇರುತ್ತದೆ. ಮಂಗಳೂರಿಗೆ ಹತ್ತಿರ ಇರುವ ಗುರುಪುರದಲ್ಲಿಯೇ ಈ ನದಿ ಹುಟ್ಟುವುದರಿಂದ ಗುರುಪುರ ನದಿ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಇದು ಬೆಂಗಳೂರಿನಿಂದ 345 ಕಿ.ಮೀ. ದೂರದಲ್ಲಿದೆ.
PC: wikimedia.org

ತುಂಗಭದ್ರಾ ನದಿ

ತುಂಗಭದ್ರಾ ನದಿ

ತುಂಗಭದ್ರಾ ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು. ಇದು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಭದ್ರಾನದಿಯನ್ನು ಸೇರುತ್ತದೆ. ಮುಂದೆ ಆಂಧ್ರ ಪ್ರದೇಶದ ಕರ್ನೂಲು ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ 610 ಕಿ.ಮೀ. ನದಿಯ ಸುತ್ತ ಸುಂದರವಾದ ಪ್ರಕೃತಿ ಸೌಂದರ್ಯ ಹಾಗೂ ತಂಪಾದ ವಾತಾವರಣ ಇರುವುದರಿಂದ ಕುಟುಂಬದವರೊಂದಿಗೆ ವಿಹಾರಕ್ಕೆ ಬರಲು ಸೂಕ್ತ ಸ್ಥಳ. ಬೆಂಗಳೂರಿನಿಂದ 293 ಕಿ.ಮೀ. ದೂರದಲ್ಲಿದೆ.
PC: wikimedia.org

Read more about: kodagu mangalore bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X