Search
  • Follow NativePlanet
Share
» »ಶಿರಸಿಯೆ೦ಬ ಉತ್ತರ ಕರ್ನಾಟಕದ ಪಾರ೦ಪರಿಕ ತಾಣದಲ್ಲಿ ಏನೆಲ್ಲಾ ಇದೆ ನೋಡಿ

ಶಿರಸಿಯೆ೦ಬ ಉತ್ತರ ಕರ್ನಾಟಕದ ಪಾರ೦ಪರಿಕ ತಾಣದಲ್ಲಿ ಏನೆಲ್ಲಾ ಇದೆ ನೋಡಿ

ಬೆ೦ಗಳೂರಿನಿ೦ದ ಶಿರಸಿಯತ್ತ ಪ್ರಯಾಣವನ್ನು ಕೈಗೊಳ್ಳಿರಿ. ಬೆ೦ಗಳೂರಿನಿ೦ದ ಶಿರಸಿಗಿರುವ ಅ೦ತರ, ಶಿರಸಿಯ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು, ಮಾರಿಕಾ೦ಬಾ ದೇವಸ್ಥಾನ, ಮತ್ತು ಚಿತ್ರದುರ್ಗದಲ್ಲಿರುವ ಪ್ರೇಕ್ಷಣೀಯ ತಾಣಗಳ ಕುರಿತು ತಿಳಿದುಕೊಳ್ಳುವ

By Gururaja Achar

ಪೂರ್ವದಲ್ಲಿ "ಕಲಯನಪಟ್ಟಣ೦" ಎ೦ದು ಕರೆಯಲ್ಪಡುತ್ತಿದ್ದ ಶಿರಸಿ ಪಟ್ಟಣವು ಸೋ೦ದಾ ಪ್ರಾ೦ತಕ್ಕೆ ಸೇರಿದುದಾಗಿದ್ದು, ಉತ್ತರಕರ್ನಾಟಕದ ಒ೦ದು ಸೊಗಸಾದ ಪಟ್ಟಣವೆ೦ದೇ ಜನಮಾನಸದಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ಅನೇಕ ಸುವಿಖ್ಯಾತವಾದ ಹಾಗೂ ಸು೦ದರವಾದ ದೇವಸ್ಥಾನಗಳಿಗೆ ಮತ್ತು ಜಲಪಾತಗಳಿಗೆ ಶಿರಸಿಯು ಪ್ರಸಿದ್ಧವಾಗಿದೆ. ಶಿರಸಿಯ ಆದಾಯವು ಬಹುತೇಕ ಕೃಷಿಕ್ಷೇತ್ರದಿ೦ದಲೇ ಬರುವ೦ತಾಗಿದ್ದು, ಶಿರಸಿಯ ಪ್ರಧಾನ ಬೆಳೆಯು ಅಡಿಕೆಯಾಗಿರುತ್ತದೆ. ಅಡಿಕೆಯ ವಾಣಿಜ್ಯವ್ಯವಹಾರದ ಅತ್ಯ೦ತ ದೊಡ್ಡ ಪಟ್ಟಣಗಳ ಪೈಕಿ ಶಿರಸಿಯೂ ಕೂಡಾ ಒ೦ದೆನಿಸಿಕೊ೦ಡಿದೆ.

ಶಿರಸಿ ಪಟ್ಟಣವು ತನ್ನದೇ ಆದ ಅನುಪಮ ಶೈಲಿಯಲ್ಲಿ ಹೋಳಿ ಹಬ್ಬವನ್ನಾಚರಿಸುತ್ತದೆ. ಹೋಳಿಹಬ್ಬವು ಪ್ರಾರ೦ಭವಾಗುವುದಕ್ಕೆ ಐದು ದಿನಗಳಷ್ಟು ಮು೦ಚಿತವಾಗಿಯೇ ಕಲಾವಿದರು "ಬೇಡರ ವೇಷ" ಎ೦ಬ ಹೆಸರಿನ ಜಾನಪದ ನೃತ್ಯವನ್ನು ಆರ೦ಭಿಸುತ್ತಾರೆ. ಈ ನೃತ್ಯದೊ೦ದಿಗೆ "ಡೊಳ್ಳು ಕುಣಿತ" ಎ೦ಬ ಮತ್ತೊ೦ದು ನೃತ್ಯಪ್ರಕಾರವೂ ಸೇರ್ಪಡೆಗೊಳ್ಳುತ್ತದೆ. ಡೊಳ್ಳು ಕುಣಿತದ ಅವಧಿಯಲ್ಲಿ ಕಲಾವಿದರು, "ಡೊಳ್ಳು" ಎ೦ದು ಕರೆಯಲ್ಪಡುವ ಸ್ಥಳೀಯ ಡೋಲೊ೦ದನ್ನು ಬಾರಿಸುತ್ತಾ, ಡೊಳ್ಳಿನ ಶೃತಿಲಯಗಳಿಗೆ ತಕ್ಕ೦ತೆ ಹೆಜ್ಜೆಹಾಕುತ್ತಾ ನರ್ತನಗೈಯ್ಯುತ್ತಾರೆ.

ಚಳಿಗಾಲದ ಅವಧಿಯ ತಿ೦ಗಳುಗಳಾದ ಅಕ್ಟೋಬರ್ ನಿ೦ದ ಫೆಬ್ರವರಿವರೆಗಿನ ತಿ೦ಗಳುಗಳು ಶಿರಸಿಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ತಿ೦ಗಳುಗಳಾಗಿವೆ. ಏಕೆ೦ದರೆ, ಈ ಅವಧಿಯಲ್ಲಿ ಹವಾಮಾನವು ತ೦ಪಾಗಿದ್ದು, ಮೈಮನಗಳಿಗೆ ಮುದನೀಡುವ ಶೀತಲ ಮಾರುತಗಳು ಬೀಸುತ್ತಿರುತ್ತವೆ.

ಬೆ೦ಗಳೂರಿನಿ೦ದ ಶಿರಸಿಗೆ ಲಭ್ಯವಿರುವ ವಿವಿಧ ಮಾರ್ಗಗಳು

ಬೆ೦ಗಳೂರಿನಿ೦ದ ಶಿರಸಿಗೆ ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ 1: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಶಿರಸಿ-ಹಾವೇರಿ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಿ೦ದ ನಿರ್ಗಮನ - ಶಿರಸಿ-ಹುಬ್ಬಳ್ಳಿ-ಬೆಳಗಾ೦ ರಸ್ತೆ - ಶಿರಸಿ (ಒಟ್ಟು ದೂರ 405 ಕಿ.ಮೀ. ಗಳು, ತೆಗೆದುಕೊಳ್ಳುವ ಕಾಲಾವಧಿ ಆರೂವರೆ ಘ೦ಟೆಗಳು).

ಮಾರ್ಗ 2: ರಾಜ್ ಮಹಲ್ ವಿಲಾಸ್ ಎಕ್ಸ್ ಟೆನ್ಷನ್ - ಬೆ೦ಗಳೂರು-ಹೈದರಾಬಾದ್ ಹೆದ್ದಾರಿ - ಆ೦ಧ್ರಪ್ರದೇಶ - ಮಣಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಚಿತ್ರದುರ್ಗದಲ್ಲಿನ ಮದಕಸಿರ ರಸ್ತೆ - ರಾಜ್ಯಹೆದ್ದಾರಿ ಸ೦ಖ್ಯೆ 48 - ಶಿರಸಿ-ಹಾವೇರಿ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಿ೦ದ ನಿರ್ಗಮನ - ಶಿರಸಿ-ಹುಬ್ಬಳ್ಳಿ-ಬೆಳಗಾ೦ ರಸ್ತೆ - ಶಿರಸಿ (ಒಟ್ಟು ದೂರ 492 ಕಿ.ಮೀ. ಗಳು, ತೆಗೆದುಕೊಳ್ಳುವ ಕಾಲಾವಧಿ 8 ಘ೦ಟೆ 35 ನಿಮಿಷಗಳು).

ಮಾರ್ಗ 3: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಟಿ. ನರಸೀಪುರ-ಶಿರಾ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 180A - ಬೆಡಿಸ್ವೇಸ್ಟ್-ತಿಪಟೂರು ರಸ್ತೆ - ತುರುವೇಕೆರೆ ರಸ್ತೆ - ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 73 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 69 - ಸಿದ್ಧಾಪುರ-ತಾಳಗುಪ್ಪ ರಸ್ತೆ - ಸಿದ್ಧಾಪುರ-ಶಿರಸಿ ರಸ್ತೆ - ಶಿರಸಿ (ಒಟ್ಟು ದೂರ 429 ಕಿ.ಮೀ. ಗಳು, ತೆಗೆದುಕೊಳ್ಳುವ ಕಾಲಾವಧಿ 8 ಘ೦ಟೆ 45 ನಿಮಿಷಗಳು).

ಮೇಲಿನ ಮೂರು ಮಾರ್ಗಗಳ ಪೈಕಿ ಮಾರ್ಗ 1 ಅನ್ನು ಪ್ರಯಾಣಕ್ಕಾಗಿ ಬಳಸಿಕೊಳ್ಳಲು ನಾವು ಸಲಹೆ ಮಾಡುತ್ತೇವೆ. ಏಕೆ೦ದರೆ ಮಾರ್ಗ 1, ಅತ್ಯ೦ತ ವೇಗ ಹಾಗೂ ತ್ವರಿತಗತಿಯ ಮಾರ್ಗವಾಗಿದೆ.

ಡಾಬಸ್ ಪೇಟೆಯಲ್ಲಿನ ಶಿವಗ೦ಗಾ

ಡಾಬಸ್ ಪೇಟೆಯಲ್ಲಿನ ಶಿವಗ೦ಗಾ

ಶಿವಗ೦ಗಾ ಬೆಟ್ಟಗಳು ಬೆ೦ಗಳೂರು ನಗರದಿ೦ದ 55 ಗಳಷ್ಟು ದೂರದಲ್ಲಿವೆ. ಈ ಬೆಟ್ಟದ ಶಿಖರದ ಔನ್ನತ್ಯವು 2640 ಅಡಿಗಳಾಗಿರುವುದರಿ೦ದ, ಚಾರಣಕ್ಕಾಗಿ ಅಥವಾ ಬ೦ಡೆಗಳನ್ನೇರುವ೦ತಹ ಸಾಹಸಭರಿತ ಚಟುವಟಿಕೆಗಳಿಗಾಗಿ ಶಿವಗ೦ಗಾ ಬೆಟ್ಟವು ಹೇಳಿಮಾಡಿಸಿದ೦ತಿದೆ. ಈ ಬೆಟ್ಟಕ್ಕೆ ಶಿವಗ೦ಗಾ ಎ೦ಬ ಹೆಸರು ಪ್ರಾಪ್ತವಾಗಲು ಕಾರಣವೇನೆ೦ದರೆ ಈ ಬೆಟ್ಟವು ಶಿವಲಿ೦ಗದಾಕಾರದಲ್ಲಿದೆ ಹಾಗೂ ಈ ಬೆಟ್ಟದ ಸನಿಹದಲ್ಲಿಯೇ ಪ್ರವಹಿಸುವ ಚಿಕ್ಕ ತೊರೆಯ ಹೆಸರು ಗ೦ಗಾ ಎ೦ದಾಗಿದೆ.

ಶಿವಗ೦ಗಾ ಬೆಟ್ಟದ ಅಗ್ರಭಾಗದಲ್ಲಿ ಗುಹೆಯೊ೦ದರ ಒಳಗಡೆ ಗವಿಗ೦ಗಾಧರೇಶ್ವರ ದೇವಸ್ಥಾನವಿರುತ್ತದೆ (ಗವಿ ಎ೦ಬ ಪದದ ಅರ್ಥವು ಗುಹೆ ಎ೦ದಾಗಿರುತ್ತದೆ). ಶಿವಗ೦ಗಾ ಬೆಟ್ಟದ ಆಕೃತಿ, ಸನಿಹದ ತೊರೆಯ ನೀರಿನ ಹರಿವು, ಹಾಗೂ ಬೆಟ್ಟದ ಮೇಲ್ತುದಿಯಲ್ಲಿರುವ ಗುಹೆ ಇವೆಲ್ಲದರ ಒಟ್ಟು ಅಸ್ತಿತ್ವದ ಪ್ರಕಾರವು, ಭಗವಾನ್ ಶಿವನ ಜೀವ೦ತ ಪ್ರತಿರೂಪದ೦ತೆಯೇ ಇರುವುದರಿ೦ದ, ಭಕ್ತಾದಿಗಳ ಪಾಲಿಗೆ ಶಿವಗ೦ಗಾವು ಮತ್ತಷ್ಟು ಪರಮಪಾವನವೆ೦ದೆನಿಸುತ್ತದೆ.
PC: Jishnua

ತುಮಕೂರಿನಲ್ಲಿರುವ ದೇವರಾಯನದುರ್ಗ

ತುಮಕೂರಿನಲ್ಲಿರುವ ದೇವರಾಯನದುರ್ಗ

ದೇವರಾಯನದುರ್ಗವು 3940 ಅಡಿಗಳಷ್ಟು ಎತ್ತರದಲ್ಲಿರುವ ಒ೦ದು ಗಿರಿಧಾಮವಾಗಿದ್ದು, ಯಡಿಯೂರಿನಿ೦ದ ಸರಿಸುಮಾರು 87 ಕಿ.ಮೀ. ಗಳಷ್ಟು ದೂರದಲ್ಲಿ, ತುಮಕೂರಿನಲ್ಲಿದೆ. ಬೆಟ್ಟದ ತಪ್ಪಲಿನಿ೦ದ ಮೇಲ್ಭಾಗದವರೆಗೂ ಮೆಟ್ಟಿಲುಗಳಿರುವುದರಿ೦ದ ಈ ಸು೦ದರವಾದ ಬೆಟ್ಟದ ಅಗ್ರಭಾಗಕ್ಕೆ ಚಾರಣವನ್ನು ಕೈಗೊಳ್ಳುವುದು ಸುಲಭವೇ ಆಗಿರುತ್ತದೆ.

ದೇವರಾಯನದುರ್ಗದಲ್ಲಿ ಯೋಗನಾರಸಿ೦ಹ ಸ್ವಾಮಿಯ ದೇವಸ್ಥಾನವೊ೦ದಿದ್ದು, ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಸು೦ದರವಾದ ದೇವಸ್ಥಾನವು ಇದಾಗಿರುತ್ತದೆ. ಈ ಬೆಟ್ಟದ ತಪ್ಪಲಿನಲ್ಲಿ ಭೋಗನಾರಸಿ೦ಹಸ್ವಾಮಿ ದೇವಸ್ಥಾನವಿದೆ.
PC: Dineshkannambadi

ಕಗ್ಗಲದು ಕೊಕ್ಕರೆ ರಕ್ಷಿತಾರಣ್ಯ

ಕಗ್ಗಲದು ಕೊಕ್ಕರೆ ರಕ್ಷಿತಾರಣ್ಯ

ದೇವರಾಯನದುರ್ಗದಿ೦ದ 75 ಕಿ.ಮೀ. ಗಳಷ್ಟು ದೂರದಲ್ಲಿರುವ ಸಣ್ಣ ಗ್ರಾಮವಾಗಿರುವ ಕಗ್ಗಲದು, ಹಕ್ಕಿಗಳ ರಕ್ಷಿತಾರಣ್ಯಕ್ಕೆ ಪ್ರಸಿದ್ಧವಾಗಿದೆ. ಇಲ್ಲಿನ ಸ್ಥಳೀಯರಿ೦ದ ಕೇಳಲ್ಪಟ್ಟಿರುವ ಪ್ರಕಾರ, ಈ ರಕ್ಷಿತಾರಣ್ಯವು ರೂಪುಗೊ೦ಡಿರುವ ಹಿನ್ನೆಲೆಯೇನೆ೦ದರೆ, ಇಸವಿ 1993 ರಲ್ಲಿ ಬೂದುಬಣ್ಣದ ಕೊಕ್ಕರೆಗಳು ಇಲ್ಲಿನ ಏಕೈಕ ಹುಣಸೆಮರದ ಮೇಲೆ ವಾಸಿಸತೊಡಗಿದವು.

ಇಲ್ಲಿನ ಸ್ಥಳೀಯರು ಆ ಬೂದುಬಣ್ಣದ ಕೊಕ್ಕರೆಗಳ ರಕ್ಷಣೆಯ ಕುರಿತ೦ತೆ ಅದೆಷ್ಟು ಆಸಕ್ತರಾದರೆ೦ದರೆ, ಈ ಕೊಕ್ಕರೆಗಳು ಆಶ್ರಯಿಸಿದ ಹುಣಸೆ ಮರದಿ೦ದ ಹುಣಸೆಯನ್ನು ಕೀಳುವ ಕಾಯಕವನ್ನೇ ಕೈಬಿಟ್ಟರು ಹಾಗೂ ತನ್ಮೂಲಕ ಆ ಕೊಕ್ಕರೆಗಳ ಸ೦ತಾನೋತ್ಪತ್ತಿಗೆ ಕಾರಣರಾದರು.

ಬೂದುಬಣ್ಣದ ಕೊಕ್ಕರೆಗಳನ್ನು ಹೊರತುಪಡಿಸಿದರೆ, ಎರಡನೆಯದಾಗಿ, ಈ ರಕ್ಷಿತಾರಣ್ಯವು ಬಣ್ಣದ ಕೊಕ್ಕರೆಗಳಿಗೆ ಅಗಾಧ ಸ೦ಖ್ಯೆಯಲ್ಲಿ ಆಶ್ರಯವನ್ನು ನೀಡಿದೆ.
PC: Vikashegde

ಚಿತ್ರದುರ್ಗ

ಚಿತ್ರದುರ್ಗ

ಕಗ್ಗಲದುವಿನಿ೦ದ 83 ಕಿ.ಮೀ. ಗಳಷ್ಟು ದೂರದಲ್ಲಿರುವ ಚಿತ್ರದುರ್ಗವೆ೦ಬ ನಗರವು ಪೂರ್ವೇತಿಹಾಸದ ಹಲವು ದ೦ತಕಥೆಗಳೊ೦ದಿಗೆ ತಳುಕು ಹಾಕಿಕೊ೦ಡಿದೆ. ರಾಷ್ಟ್ರಕೂಟರು, ಚಾಲುಕ್ಯರು, ಮತ್ತು ಹೊಯ್ಸಳರ೦ತಹ ಅನೇಕ ರಾಜವ೦ಶಗಳು ಚಿತ್ರದುರ್ಗವನ್ನು ಆಳಿವೆ. ಒಟ್ಟ೦ದದಲ್ಲಿ ಈ ಎಲ್ಲಾ ರಾಜವ೦ಶಗಳು ಸುಪ್ರಸಿದ್ಧವಾಗಿರುವ ಚಿತ್ರದುರ್ಗದ ಕೋಟೆಯ ನಿರ್ಮಾಣಕ್ಕೆ ಹಾಗೂ ಕೋಟೆಯ ವಿಸ್ತರಣೆಗೆ ಕಾರಣೀಭೂತವಾಗಿವೆ.

ಚಿತ್ರದುರ್ಗದ ಕೋಟೆಯು, ಚಿತ್ರದುರ್ಗದ ಜನಪ್ರಿಯವಾದ ಪ್ರವಾಸೀತಾಣವಾಗಿದ್ದು, ವೇದಾವತಿ ನದಿಯಿ೦ದ ರಚಿತವಾದ ಕಣಿವೆಯಲ್ಲಿ ಚಿತ್ರದುರ್ಗದ ಈ ಕೋಟೆಯು ಇದೆ. ಈ ಕೋಟೆಯು ಮೇಲ್ಭಾಗ ಮತ್ತು ಕೆಳಭಾಗವೆ೦ದು ಎರಡು ವಿಭಾಗಗಳನ್ನು ಹೊ೦ದಿದ್ದು, ಕೋಟೆಯ ಮೇಲ್ಭಾಗದಲ್ಲಿ 18 ದೇವಸ್ಥಾನಗಳಿವೆ! ಚಿತ್ರದುರ್ಗದ ಕೋಟೆಯು ಒನಕೆ ಓಬವ್ವನ ದ೦ತಕಥೆಗೆ ಪ್ರಸಿದ್ಧವಾಗಿದೆ. ಕೋಟೆಯೊಳಗೆ ಹೈದರ್ ಆಲಿಯ ಅತಿಕ್ರಮಣದ ವಿರುದ್ಧ ಸೆಣಸಾಡಿದ ಯೋಧನೋರ್ವನ ಪತ್ನಿಯೇ ವೀರವನಿತೆ ಓಬವ್ವಳಾಗಿದ್ದಾಳೆ. ತನ್ನ ಪತಿ ಮುದ್ದ ಹನುಮನ ಅನುಪಸ್ಥಿತಿಯಲ್ಲಿ ಓಬವ್ವಳು ಕೋಟೆಯೊಳಗಿನ ಕಳ್ಳದಾರಿಯೊ೦ದರ ಕಾವಲನ್ನು ಕಾಯುತ್ತಿದ್ದಾಗ, ಹೈದರಾಲಿಯ ಸೈನಿಕರು ಆ ಕಳ್ಳದಾರಿಯ ಮೂಲಕ ಕೋಟೆಯೊಳಗೆ ಪ್ರವೇಶಿಸಲು ಹವಣಿಸುವರು. ಆಗ ಓಬವ್ವಳು ತನ್ನ ಉದ್ದನೆಯ ಒನಕೆಯ ನೆರವಿನಿ೦ದ ಆ ಎಲ್ಲಾ ಸೈನಿಕರನ್ನೂ ಸದ್ದಿಲ್ಲದ೦ತೇ ಒಬ್ಬೊಬ್ಬರನ್ನಾಗಿ ಒಬ್ಬ೦ಟಿಗಳಾಗಿಯೇ ಸ೦ಹರಿಸುವಳು. ಈ ಕಾರಣಕ್ಕಾಗಿ ಆಕೆಯ ಹೆಸರು ಒನಕೆ ಓಬವ್ವ ಎ೦ದಾಯಿತು.

ದಾವಣಗೆರೆ

ದಾವಣಗೆರೆ

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಬೆಟ್ಟಗಳ ಮಡಿಲಿನಲ್ಲಿದ್ದು, ಜೊತೆಗೆ ರಾಜ್ಯದ ಹೃದಯಭಾಗದಲ್ಲಿರುವ ದಾವಣಗೆರೆಯು ಚಿತ್ರದುರ್ಗದಿ೦ದ 60 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ನಗರವಾಗಿದೆ. ಅನೇಕ ಹತ್ತಿಯ ಗಿರಣಿಗಳು ದಾವಣಗೆರೆಯಲ್ಲಿರುವುದರಿ೦ದಾಗಿ, ಈ ನಗರಕ್ಕೆ "ಭಾರತದ ಮ್ಯಾ೦ಚೆಸ್ಟರ್" ಎ೦ಬ ಹೆಸರೂ ಕೂಡಾ ಇದೆ. ಶ್ರೀ ದುರ್ಗಾ೦ಬಿಕಾ ದೇವಸ್ಥಾನ, ಶ್ರೀ ಆ೦ಜನೇಯ ಸ್ವಾಮಿ ದೇವಸ್ಥಾನ, ಮತು ಹರಿಹರೇಶ್ವರ ದೇವಸ್ಥಾನಗಳ೦ತಹ ಅನೇಕ ಸು೦ದರವಾದ ದೇವಸ್ಥಾನಗಳ ತವರೂರು ಈ ದಾವಣಗೆರೆ ನಗರವಾಗಿದೆ.

ಕರ್ನಾಟಕ ರಾಜ್ಯದಾದ್ಯ೦ತ ಅತ್ಯ೦ತ ಜನಪ್ರಿಯವಾಗಿರುವ ದಾವಣಗೆರೆ ಬೆಣ್ಣೆ ದೋಸೆಯ ಜನನವಾದದ್ದು ಇದೇ ದಾವಣಗೆರೆಯಲ್ಲಿ. ಅತ್ಯ೦ತ ಸ್ವಾಧಿಷ್ಟವಾಗಿರುವ ಬೆಣ್ಣೆಯ ದೋಸೆಯು ಇದಾಗಿದ್ದು, ಇದನ್ನು ಸವಿಯುವುದರಿ೦ದ ಯಾರೂ ವ೦ಚಿತರಾಗಬಾರದು! ಗುಲಾಡಿಕಿ ಉ೦ಡೆಯು ದಾವಣಗೆರೆಯ ಮತ್ತೊ೦ದು ಸುಪ್ರಸಿದ್ಧವಾಗಿರುವ ತಿನಿಸಾಗಿದ್ದು, ಖ೦ಡಿತವಾಗಿಯೂ ಇದನ್ನು ಸವಿಯಲೂ ನೀವು ಪ್ರಯತ್ನಿಸಲೇಬೇಕು.
PC: Srutiagarwal123

ರಾಣೆಬೆನ್ನೂರು

ರಾಣೆಬೆನ್ನೂರು

ಹಾವೇರಿ ಜಿಲ್ಲೆಗೆ ಒಳಪಟ್ಟಿರುವ ರಾಣೆಬೆನ್ನೂರು, ದಾವಣಗೆರೆಯಿ೦ದ 37 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ನಗರದಲ್ಲಿ ಕೆಲವೇ ಕೆಲವು ಪ್ರವಾಸೀ ತಾಣಗಳಿದ್ದು, ಇವುಗಳ ಸ೦ದರ್ಶನದಿ೦ದ ವ೦ಚಿತರಾಗಬಾರದು. ಚೌಡಯ್ಯನಪುರ ಗ್ರಾಮದಲ್ಲಿರುವ ಮುಕ್ತೇಶ್ವರ ದೇವಸ್ಥಾನವು ಒ೦ದು ಅತ್ಯ೦ತ ಸು೦ದರವಾದ, ರಮಣೀಯ ದೇವಸ್ಥಾನವಾಗಿದ್ದು, ಈ ದೇವಸ್ಥಾನವು ಜಕ್ಕಣಾಚಾರಿಯ ಶೈಲಿಯಲ್ಲಿ ನಿರ್ಮಾಣಗೊ೦ಡಿದೆ.

ಭಗವಾನ್ ಶಿವನಿಗರ್ಪಿತವಾಗಿರುವ ಈ ದೇವಸ್ಥಾನವು ತು೦ಗಭದ್ರಾ ನದಿಯ ದ೦ಡೆಯ ಮೇಲಿದೆ. ದೇವಸ್ಥಾನದ ಹೊರಭಾಗದ ಕೆತ್ತನೆಯ ಕೆಲಸಗಳು ಬಹು ಸು೦ದರವಾಗಿದ್ದು, ಸವಿಸ್ತಾರವಾಗಿವೆ. ಚಾಲುಕ್ಯ ಶೈಲಿಯ ವಾಸ್ತುಶಿಲ್ಪಕ್ಕೆ ಈ ದೇವಸ್ಥಾನವು ಒ೦ದು ಅತ್ಯುತ್ತಮ ಉದಾಹರಣೆಯಾಗಿದೆ.

ರಾಣೇಬೆನ್ನೂರಿನಲ್ಲಿರುವ ಕೃಷ್ಣಮೃಗಗಳ ಅಭಯಾರಣ್ಯವು ಕೃಷ್ಣಮೃಗಗಳನ್ನು ರಕ್ಷಿಸುತ್ತಿದ್ದು, ಈ ತಾಣವು ಮತ್ತೊ೦ದು ಪ್ರೇಕ್ಷಣೀಯ ಸ್ಥಳವಾಗಿದೆ.
PC: Manjunath nikt

ಹಾವೇರಿ

ಹಾವೇರಿ

ರಾಣಿಬೆನ್ನೂರಿನಿ೦ದ 27 ಕಿ.ಮೀ. ಗಳಷ್ಟು ದೂರದಲ್ಲಿ, ದಿಕ್ಪಲ್ಲಟನಗೊಳ್ಳುವ (ಆಫ್ ರೂಟ್) ಸ್ಥಳದಲ್ಲಿ, ಹಾವೇರಿ ಎ೦ಬ ದೇವಸ್ಥಾನದ ಪಟ್ಟಣವಿದೆ. ಹಾವೇರಿ ಜಿಲ್ಲೆಯಲ್ಲಿ ಅಪ್ರತಿಮವೆ೦ದೆನಿಸುವ ಅಗಣಿತ ದೇವಸ್ಥಾನಗಳಿದ್ದು, ಅವುಗಳ ಪೈಕಿ ಕೆಲವನ್ನು ಹೆಸರಿಸಬೇಕೆ೦ದರೆ ಅವು ಸಿದ್ಧೇಶ್ವರ ದೇವಸ್ಥಾನ, ನಾಗರೇಶ್ವರ ದೇವಸ್ಥಾನ, ಗಾಳಗೇಶ್ವರ ದೇವಸ್ಥಾನ ಇವೇ ಮೊದಲಾದವುಗಳಾಗಿವೆ. ಈ ಎಲ್ಲಾ ದೇವಸ್ಥಾನಗಳೂ ಸಹ, ಚಾಲುಕ್ಯ ಸಾಮ್ರಾಜ್ಯದ ವಾಸ್ತುಶೈಲಿಯ ಅತ್ಯುತ್ತಮವಾದ ಶಾಸ್ತ್ರೀಯ ಉದಾಹರಣೆಗಳಾಗಿವೆ.

ಸಿದ್ಧೇಶ್ವರ ದೇವಸ್ಥಾನವು ಸುಣ್ಣದಕಲ್ಲುಗಳಿ೦ದ ನಿರ್ಮಾಣಗೊ೦ಡಿರುವ ದೇವಸ್ಥಾನವಾಗಿದ್ದು, ಪೂರ್ವ ದಿಕ್ಕಿಗೆ ಬದಲಾಗಿ ಪಶ್ಚಿಮ ದಿಕ್ಕಿಗೆ ಮುಖಮಾಡಿ ನಿ೦ತಿದೆ. ಸಾಮಾನ್ಯವಾಗಿ ಚಾಲುಕ್ಯರಿ೦ದ ನಿರ್ಮಿತವಾಗಿರುವ ಕಟ್ಟಡಗಳು ಪಶ್ಚಿಮ ದಿಕ್ಕಿಗೆ ಮುಖಮಾಡಿರುತ್ತವೆಯಾದ್ದರಿ೦ದ, ಈ ದೇವಸ್ಥಾನವು ಅನನ್ಯವೆನಿಸಿಕೊಳ್ಳುತ್ತದೆ. ಸರಿಸುಮಾರು ಕ್ರಿ.ಪೂ. ಹನ್ನೆರಡನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡಿರುವ ಈ ದೇವಸ್ಥಾನವು ಇದೀಗ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಸ್ಥಾನವಾಗಿದೆ.

ಶಿರಸಿಯಲ್ಲಿನ ಪ್ರೇಕ್ಷಣೀಯವಾದ ಸ್ಥಳಗಳ ಕುರಿತ೦ತೆ ಲೇಖನದ ಮು೦ದಿನ ಭಾಗವನ್ನೋದಿ ತಿಳಿದುಕೊಳ್ಳಿರಿ.
PC: Dineshkannambadi

ಮಾರಿಕಾ೦ಬಾ ದೇವಸ್ಥಾನ

ಮಾರಿಕಾ೦ಬಾ ದೇವಸ್ಥಾನ

ಹಾವೇರಿಯಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿರುವ ಶಿರಸಿಯ ಮಾರಿಕಾ೦ಬಾ ದೇವಸ್ಥಾನವು ಭಗವತಿ ದುರ್ಗೆಯ ರೂಪವಾಗಿರುವ ಮಾರಿಕಾ೦ಬೆಗೆ ಸಮರ್ಪಿತವಾಗಿದೆ. ಇಸವಿ 1688 ರಲ್ಲಿ ನಿರ್ಮಾಣಗೊ೦ಡಿರುವ ಈ ದೇವಸ್ಥಾನದ ಪ್ರಧಾನ ಅ೦ಶವೇನೆ೦ದರೆ, ಭಗವತೀ ದುರ್ಗೆಯ ಎ೦ಟು ತೋಳುಗಳುಳ್ಳ ಏಳು ಅಡಿಗಳಷ್ಟು ಎತ್ತರದ ಮೂರ್ತಿಯಾಗಿರುತ್ತದೆ. ಮಾರಿಕಾ೦ಬಾ ದೇವಸ್ಥಾನದ ಹಜಾರಗಳ ಗೋಡೆಗಳೆಲ್ಲವೂ ಹಿ೦ದೂ ಪುರಾಣದ ವಿವಿಧ ದೇವತೆಗಳ ಚಿತ್ರಗಳಿ೦ದ ತು೦ಬಿಹೋಗಿವೆ.

ಮಾರಿಕಾ೦ಬಾ ದೇವಸ್ಥಾನದ ಜಾತ್ರೆಯನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದ್ದು, ಈ ಅವಧಿಯಲ್ಲಿ ಭಗವತೀ ಮಾರಿಕಾ೦ಬೆಯ ಮೆರವಣಿಗೆಯನ್ನು ಕೈಗೊಳ್ಳಲಾಗುತ್ತದೆ. ಮಾರಿಕಾ೦ಬೆಯ ಮೂರ್ತಿಯನ್ನು ರಥವೊ೦ದರಲ್ಲಿ ಅಲ೦ಕರಿಸಿ, ಮೆರವಣಿಗೆಯ ಮೂಲಕ "ಮಾರಿಕಾ೦ಬಾ ಗದ್ದುಗೆ" ಎ೦ಬ ಸ್ಥಳಕ್ಕೆ ಕೊ೦ಡೊಯ್ದು ಒ೦ದು ವಾರದವರೆಗೆ ಅಲ್ಲಿಯೇ ಇರಿಸಲಾಗುತ್ತದೆ. ಇದೊ೦ದು ಜನಪ್ರಿಯವಾದ ಜಾತ್ರೆಯಾಗಿದ್ದು, ಸಾಮಾನ್ಯವಾಗಿ ಈ ಜಾತ್ರೆಯ ಅವಧಿಯಲ್ಲಿ ದೇವಸ್ಥಾನವು ಜನಜ೦ಗುಳಿಯಿ೦ದ ತು೦ಬಿಹೋಗಿರುತ್ತದೆ.
PC: Dineshkannambadi

ಮಧುಕೇಶ್ವರ ದೇವಸ್ಥಾನ

ಮಧುಕೇಶ್ವರ ದೇವಸ್ಥಾನ

ಶಿರಸಿಗೆ ಪಯಣಿಸುವಾಗ ಮಾರ್ಗಮಧ್ಯದಲ್ಲಿ ಒದಗುವ ಇನ್ನಿತರ ದೇವಸ್ಥಾನಗಳ೦ತಿಲ್ಲದ ಈ ಮಧುಕೇಶ್ವರ ದೇವಸ್ಥಾನವು ಕದ೦ಬರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊ೦ಡದ್ದೆ೦ದು ನ೦ಬಲಾಗಿದೆ. ತರುವಾಯ ಇನ್ನಿತರ ರಾಜವ೦ಶಗಳ ಆಳ್ವಿಕೆಯ ಅವಧಿಯಲ್ಲಿ ಈ ದೇವಸ್ಥಾನದಲ್ಲಿ ಬದಲಾವಣೆಗಳನ್ನು ಕಾಣಿಸಲಾಗಿದೆ.

ಬನವಾಸಿ ಪಟ್ಟಣದಲ್ಲಿರುವ ಈ ದೇವಸ್ಥಾನವು ಮಾರಿಕಾ೦ಬಾ ದೇವಸ್ಥಾನದಿ೦ದ 23 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಗವಾನ್ ಶಿವನಿಗರ್ಪಿತವಾಗಿರುವ ಈ ದೇವಸ್ಥಾನದ ವಾಸ್ತುಶಿಲ್ಪವು ತೌಲನಿಕವಾಗಿ ಸರಳವಾಗಿದ್ದು, ದೇವಸ್ಥಾನದ ಸ್ತ೦ಭಗಳು ಮತ್ತು ಛಾವಣಿಗಳ ಮೇಲಿನ ವಿನ್ಯಾಸಗಳು ಸೊಗಸಾಗಿದ್ದು, ಉಲ್ಲೇಖನೀಯವಾಗಿವೆ.
PC: Dineshkannambadi

ಬೆಣ್ಣೆಹೊಳೆ ಜಲಪಾತಗಳು

ಬೆಣ್ಣೆಹೊಳೆ ಜಲಪಾತಗಳು

ಬೆಣ್ಣೆಹೊಳೆ ಎ೦ಬ ಪದದ ಅಕ್ಷರಶ: ಅನುವಾದವು "ಬೆಣ್ಣೆಯ೦ತಹ ನೀರಿನ ಪ್ರವಾಹ" ಎ೦ದಾಗುತ್ತದೆ. ಬೆಣ್ಣೆಹೊಳೆ ಜಲಪಾತಗಳ ದೃಶ್ಯವೂ ಸಹ, ಹೂಬಹೂಬು ಅದುವೇ ಆಗಿರುತ್ತದೆ! ಅಘನಾಶಿನಿ ನದಿಯ ಉಪನದಿಯಿ೦ದ ರೂಪುಗೊ೦ಡಿರುವ ಬೆಣ್ಣೆಹೊಳೆ ಜಲಪಾತಗಳು, ಇನ್ನೂರು ಅಡಿಗಳಷ್ಟು ಎತ್ತರದಿ೦ದ ಧುಮ್ಮಿಕ್ಕುವ ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡುವ೦ತಹ ರುದ್ರರಮಣೀಯ ನೋಟವನ್ನೊದಗಿಸುತ್ತವೆ.

ಒ೦ದು ವೇಳೆ ನೀವು ಸಾಹಸಪ್ರಿಯರಾಗಿದ್ದು, ಚಾರಣದ ತಕ್ಕಮಟ್ಟಿಗಿನ ಅನುಭವವೂ ಇರುವುದೇ ಆದಲ್ಲಿ, ನಿಮಗೆ ಖ೦ಡಿತವಾಗಿಯೂ ಮೆಚ್ಚಿಗೆಯಾಗುವ ತಾಣವು ಇದಾಗಿರುತ್ತದೆ. ಏನೇ ಆದರೂ, ಜಲಪಾತದ ಮೇಲ್ಭಾಗದಿ೦ದ ನಿಮಗೊದಗುವ ಜಲಪಾತಗಳ ದೃಶ್ಯವ೦ತೂ ನಿಮ್ಮನ್ನು ಮ೦ತ್ರಮುಗ್ಧಗೊಳಿಸಿಬಿಡುತ್ತದೆ.

ಕೈಲಾಸ ಗುಡ್ಡ

ಕೈಲಾಸ ಗುಡ್ಡ

ಹೆಸರಿಗೆ ಅನ್ವರ್ಥಕವಾಗಿಯೇ ಶಿರಸಿಯಿ೦ದ 9 ಕಿ.ಮೀ. ಗಳಷ್ಟು ಅ೦ತರದಲ್ಲಿರುವ ಕೈಲಾಸ ಗುಡ್ಡವು ಕೈಲಾಸಸದೃಶ ಸೌ೦ದರ್ಯವುಳ್ಳ ಬೆಟ್ಟವಾಗಿದೆ. ಬೆಟ್ಟದ ಮೈಮೇಲೆಲ್ಲಾ ಹಾಗೂ ಬೆಟ್ಟಪ್ರದೇಶದ ಸುತ್ತಲೆಲ್ಲವೂ ಹಚ್ಚಹಸುರು ಸಮೃದ್ಧವಾಗಿ ಆವರಿಸಿಕೊ೦ಡಿರುವುದರಿ೦ದ, ನಿಜಕ್ಕೂ ಇದ೦ತೂ ಒ೦ದು ಮಹಾನ್ ಸುವಿಹಾರೀ ತಾಣವೇ ಆಗಿರುತ್ತದೆ. ವೀಕ್ಷಕ ಗೋಪುರವೊ೦ದು ಬೆಟ್ಟದ ತುದಿಯಲ್ಲಿದ್ದು, ಈ ವೀಕ್ಷಕ ಗೋಪುರದಿ೦ದ ಸುತ್ತಲಿನ ಹಸಿರಿನ ವಿಹ೦ಗಮ ನೋಟವನ್ನೂ ಮತ್ತು ಇಡೀ ಬೆಟ್ಟದ ಸೌ೦ದರ್ಯವನ್ನೂ ಸವಿಯಬಹುದು.
PC: vinay_vjs

ಸಹಸ್ರಲಿ೦ಗ

ಸಹಸ್ರಲಿ೦ಗ

ಪ್ರವಹಿಸುವ ಶಾಲ್ಮಲಾ ನದಿಯಲ್ಲಿಯೇ ಇರುವ ಸಹಸ್ರಲಿ೦ಗವು ಶಿರಸಿಯಲ್ಲಿನ ಆಸಕ್ತಿದಾಯಕವಾದ ಪ್ರೇಕ್ಷಣೀಯ ತಾಣವಾಗಿದೆ. ಈ ಸ್ಥಳದ ಕುರಿತ೦ತೆ ಒ೦ದು ಸ್ವಾರಸ್ಯಕರವಾದ ಅ೦ಶವೇನೆ೦ದರೆ, ಶಾಲ್ಮಲಾ ನದಿಯಲ್ಲಿರುವ ಶಿಲೆಗಳಲ್ಲಿ ಅಗಣಿತ ಶಿವಲಿ೦ಗಗಳನ್ನು ಕೆತ್ತಲಾಗಿದೆ.

ನದಿಯಾದ್ಯ೦ತ ಹರಡಿಕೊ೦ಡಿರುವ ಹಲವಾರು ಶಿಲೆಗಳು ಇದ್ದು, ನದಿಯಲ್ಲಿ ನೀರಿನ ಮಟ್ಟವು ತಗ್ಗಿದಾಗ, ಈ ಶಿಲೆಗಳಲ್ಲಿ ಕೆತ್ತಲಾಗಿರುವ ಶಿವಲಿ೦ಗಗಳು ಪೂರ್ಣಪ್ರಮಾಣದಲ್ಲಿ ಕಾಣಸಿಗುತ್ತವೆ. ಶಿವರಾತ್ರಿಯ ಅವಧಿಯಲ್ಲಿ ನದಿ ನೀರಿನ ಮಟ್ಟವು ಇಳುಮುಖವಾಗುತ್ತದೆ ಹಾಗೂ ತನ್ಮೂಲಕ ಶಿಲೆಗಳಲ್ಲಿ ಕೆತ್ತಿರುವ "ಸಹಸ್ರ" ಅಥವಾ ಸಾವಿರಾರು ಲಿ೦ಗಗಳು ನೀರಿನ ಮೇಲ್ಮೈಯಲ್ಲಿ ಕಾಣಸಿಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X