Search
  • Follow NativePlanet
Share
» »ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?

ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?

By Vijay

ಗಡ..ಗಡ...ಎಂದು ಮೈ ನಡುಗಿಸುವ ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಎಲ್ಲರೂ ಬೆಚ್ಚನೆಯ ಕಂಬಳಿ, ಚಾದರುಗಳನ್ನು ಮೈ ಮೇಲೇರಿಸುತ್ತ ಕೊಣೆಯ ಬೆಚ್ಚನೆಯ ಮೂಲೆಯೊಂದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ, ನಿಮಗಿದು ಗೊತ್ತೆ...ಎಷ್ಟೊ ಹವ್ಯಾಸಿ ಹಾಗೂ ಸಾಹಸ ಪ್ರವೃತ್ತಿಯ ಯುವ ಪ್ರವಾಸಿಗರು ವರ್ಷಪೂರ್ತಿ ಈ ಕಾಲಕ್ಕೆಂದೆ ಎದುರು ನೋಡುತ್ತಿರುತ್ತಾರೆ. ಕಾರಣ ಈ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುವ ಸಾಹಸಮಯ ಕ್ರೀಡೆಗಳು ಹಾಗೂ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಪರೀಕ್ಷಿಸುವ ಚಟುವಟಿಕೆಗಳು.

ಹೌದು, ಚಳಿಗಾಲವು ಮುಖ್ಯವಾಗಿ ಚಳಿಗಾಲದ ಕ್ರೀಡೆಗಳಿಗೆಂದು ಪ್ರಸಿದ್ಧವಾಗಿದ್ದು ಈ ಕ್ರೀಡೆಗಳು ಸಾಮಾನ್ಯವಾಗಿ ಭಾರತದ ಹಿಮಾಲಯ ಭಾಗದ ಪ್ರದೇಶಗಳಲ್ಲಿ ಜರುಗುತ್ತವೆ. ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ನಿಮಗಿದೆಯೆ? ಚಳಿಗೆ ಚಳಿ ಬಿಡಿಸುವಂತಹ ಧೈರ್ಯ, ಕೆಚ್ಚು ನಿಮ್ಮಲ್ಲಿದೆಯೆ? ಇದೆ ಸಮಯದಲ್ಲಿ ಮಂಜುಗಟ್ಟಿರುವ ನದಿಗಳ, ಜಲಗಳ ಮೇಲೆ ಸಾಗುತ್ತ ಚಾರಣ ಮಾಡುವ ಗಟ್ಟಿ ಗುಂಡಿಗೆ ನಿಮ್ಮಲ್ಲಿದೆಯೆ? ಹಾಗಿದ್ದರೆ ಇಂತಹ ಕ್ರೀಡೆಗಳು ಹಾಗೂ ಚಾರಣ ಪಥಗಳಲ್ಲೊಮ್ಮೆ ಪಾಲ್ಗೊಳ್ಳಿ. ನಿಮಗಾಗುವ ರೋಮಾಂಚನ ಅಷ್ಟಿಷ್ಟಲ್ಲ!

ವಿಶೇಷ ಲೇಖನ : ಭಾರತದ ಕೆಲವು ಅತ್ಯದ್ಭುತ ಹಾಗೂ ಅಪಾಯಕಾರಿ ಟ್ರೆಕ್ಕುಗಳು

ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚಿನ ಉತ್ಸಾಹಿ ಯುವ ಪ್ರವಾಸಿಗರು ಆಡ ಬಯಸುವುದು ಸ್ಕೀಯಿಂಗ್/ಸ್ಕೇಟಿಂಗ್ ಕ್ರೀಡೆಯನ್ನ. ಅಂದರೆ ಹಿಮದ ರಾಶಿಯ ಮೇಲೆ ವೇಗವಾಗಿ ಜಾರುತ್ತ ಸಾಗುವುದು. ಈ ಕ್ರೀಡೆಯಲ್ಲಿ ಕಾಲುಗಳಿಗೆ ವಿಶೇಷವಾಗಿ ತಯಾರಿಸಲ್ಪಟ್ಟ ಉಪಕರಣಗಳನ್ನು ಕ್ರಮಬದ್ಧವಾಗಿ ಸಿಕ್ಕಿಸಿಕೊಂಡು, ಕೈಗಳಲ್ಲಿ ಎರಡು ಊರುಗೋಲುಗಳ ಹಿಡಿದು ಅದರ ಸಹಾಯದಿಂದ ವೇಗವಾಗಿ ಹಿಮದಲ್ಲಿ ದೇಹದ ಸಮತೋಲನ ಕಾಯ್ದುಕೊಳ್ಳುತ್ತ ಸಾಗುವುದು. ಈ ಕ್ರೀಡೆ ವಿವರಿಸಿದಷ್ಟು ಸರಳವಲ್ಲವಾದರೂ ಕಲಿಯಲು ಅತಿ ಕಷ್ಟವಂತೂ ಅಲ್ಲ. ಇದಕ್ಕಾಗಿಯೆ ತರಬೇತಿ ಶಿಬಿರಗಳೂ ಸಹ ಲಭ್ಯವಿರುತ್ತವೆ.

ಪ್ರಸ್ತುತ ಲೇಖನದ ಮೂಲಕ ಚಳಿಗಾಲದ ಸಮಯದಲ್ಲಿ ಭಾರತದ ಯಾವೆಲ್ಲ ಸ್ಥಳಗಳಲ್ಲಿ ರೋಮಾಂಚನವನ್ನುಂಟು ಮಾಡುವ ಈ ಕ್ರೀಡೆಗಳು ಜರುಗುತ್ತವೆ, ಅಲ್ಲಿನ ಪರಿಸರ ಇಂತಹ ಸಂದರ್ಭದಲ್ಲಿ ಹೇಗೆ ಸಿಂಗರಿಸಿಕೊಳ್ಳುತ್ತದೆ ಹಾಗೂ ಯಾವೆಲ್ಲ ಚಾರಣ ಮಾರ್ಗಗಳು (ಕೆಲವೆ ಕೆಲವು ಆಯ್ದ) ಸಾಹಸಿಗ ಪ್ರವಾಸಿಗರಿಗೆ ಸವಾಲೆಸೆಯುತ್ತ ಕರೆಯುತ್ತವೆ ಎಂಬುದರ ಕುರಿತು ತಿಳಿಯಿರಿ. ನಿಮಗೂ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಹುಟ್ಟಿದರೆ ಒಮ್ಮೆ ಪ್ರಯತ್ನಿಸಿ ನೋಡಿ. ಆದರೆ ಇದರಲ್ಲಿ ಪರಿಣಿತರ ಸಲಹೆ, ಸೂಚನೆಗಳು ಹಾಗೂ ತರಬೇತಿಗಳನ್ನು ಪಡೆದುಕೊಳ್ಳುವುದು ಅವಶ್ಯಕ ಎಂಬುದು ನಮ್ಮ ಅನಿಸಿಕೆ.

ಚಳಿಗಾಲದ ಪ್ರವಾಸಿ ಕೇಂದ್ರಗಳು:

ಚಳಿಗಾಲದ ಪ್ರವಾಸಿ ಕೇಂದ್ರಗಳು:

ಗುಲ್ಮಾರ್ಗ್ : ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಗುಲ್ಮಾರ್ಗ್ ಒಂದು ಸುಂದರ ಗಿರಿಧಾಮವಾಗಿದ್ದು ಸ್ಕಿಯಿಂಗ್ ಕ್ರೀಡೆಗೆ ಭಾರತದಲ್ಲೆ ಅತಿ ಹೆಚ್ಚು ಪ್ರಸಿದ್ಧಿಗಳಿಸಿದ ಪ್ರದೇಶವಾಗಿದೆ. ಏಷಿಯಾ ಖಂಡದಲ್ಲೆ ಸ್ಕಿಯಿಂಗ್ ಕ್ರೀಡೆಗೆ ಏಳನೇಯ ಶ್ರೇಷ್ಠ ಸ್ಥಳ ಎಂಬ ಕೀರ್ತಿಗೆ ಗುಲ್ಮಾರ್ಗ್ ಪಾತ್ರವಾಗಿದೆ. ಬೇಸಿಗೆಯ ರಾಜಧಾನಿ ನಗರವಾದ ಶ್ರೀನಗರಕ್ಕೆ ಅತಿ ಹತ್ತಿರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿರುವುದರಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Peter

ಗುಲ್ಮಾರ್ಗ್

ಗುಲ್ಮಾರ್ಗ್

ಗುಲ್ಮಾರ್ಗ್ ಎಲ್ಲ ಕಾಲದಲ್ಲಿಯೂ ಭೇಟಿ ನೀಡಲು ಅತಿ ಯೋಗ್ಯವಾದ ಸ್ಥಳವಾದರೂ ಚಳಿಗಾಲದಲ್ಲಿ ನಡೆಯುವ ಸ್ಕಿಯಿಂಗ್ ಕ್ರೀಡೆಗಳಲ್ಲಿ ಪಾಲ್ಗೊಳ್ಳಲೆಂದು ಬರುವ ಯುವ ಪ್ರವಾಸಿಗರಿಂದ ಅದರಲ್ಲೂ ವಿಶೇಷವಾಗಿ ವಿದೇಶಿಗರಿಂದ ಹೆಚ್ಚು ಕಳೆ ಪಡೆಯುತ್ತದೆ. ಜಗತ್ತಿನ ಅತಿ ಎತ್ತರದ ಗೊಂಡೋಲಾ ಲಿಫ್ಟ್ ಮೂಲಕವೂ ಸಹ ಹಿಮಾಲಯ ಪರ್ವತಗಳ ಅತಿ ರಮಣೀಯ ಹಾಗೂ ಎಂದು ಮರೆಯಲಾಗದ ಅದ್ವಿತೀಯ ದೃಶ್ಯಾವಳಿಗಳನ್ನು ಸವಿಯಬಹುದು.

ಚಿತ್ರಕೃಪೆ: Peter

ಗುಲ್ಮಾರ್ಗ್

ಗುಲ್ಮಾರ್ಗ್

ಜನವರಿ ಆರಂಭದಿಂದ ಮಾರ್ಚ್ ಮಧ್ಯದವರೆಗೆ ಗುಲ್ಮಾರ್ಗ್ ಹಿಮಪಾತವನ್ನು ಅನುಭವಿಸುತ್ತದೆ. ಈ ಕಾಲಮಾನವು ಸ್ಕಿಯಿಂಗ್ ಕ್ರೀಡೆಗೆ ಹೇಳಿ ಮಾಡಿಸಿದಂತಿರುತ್ತದೆ. ಪ್ರಕೃತಿಯ ವಿವಿಧ ಬಣ್ಣಗಳಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು, ಹಸಿರು ಮರಗಳು, ಬಣ್ಣ ಬಣ್ಣದ ಹೂವು ಉದ್ಯಾನಗಳು ಈ ಸ್ಮಯದಲ್ಲಿ ಶ್ವೇತ ವರ್ಣದ ಪದರನ್ನು ಇನ್ನೊಂದು ಬಗೆಯ ವಿಶೀಷ್ಟತೆಯಿಂದ ಕೂಡಿರುತ್ತದೆ.

ಚಿತ್ರಕೃಪೆ: Colin Tsoi

ಗುಲ್ಮಾರ್ಗ್

ಗುಲ್ಮಾರ್ಗ್

ಈ ಸಂದರ್ಭದಲ್ಲಿ ಭೇಟಿ ನೀಡುವ ಪ್ರವಾಸಿಗರು ಗುಲ್ಮಾರ್ಗ್ ಕೇಂದ್ರದಿಂದ ಇಳಿಜಾರಿನ ಮುಖದಲ್ಲಿ ಹಿಮದಲ್ಲಿ ಜಾರುತ್ತ ಗುಲ್ಮಾರ್ಗ್ ನಿಂದ ಕಡಿಮೆ ಎತ್ತರದಲ್ಲಿ ನೆಲೆಸಿರುವ ವಿವಿಧ ಹಳ್ಳಿಗಳಿಗೆ ಭೇಟಿ ನೀಡುತ್ತ ಸಾಗಬಹುದು. ಇದೊಂದು ವಿನೂತನ ಅನುಭವವನ್ನು ಕರುಣಿಸುವಲ್ಲಿ ಯಾವುದೆ ಸಂಶಯವಿಲ್ಲ. ವಿವಿಧ ರಿಸಾರ್ಟುಗಳು ಸ್ಕೀ ಸೇವೆಗಳನ್ನೊದಗಿಸುವ ಹೋಟೆಲುಗಳು ಗುಲ್ಮಾರ್ಗಿನಲ್ಲಿದ್ದು ಅವುಗಳಲ್ಲಿರುವ ನಿಪುಣ ಪರಿಣಿತರ ಸಹಾಯದೊಂದಿಗೆ ನೀವು ಅದ್ಭುತವಾದ ಸ್ಕಿಯಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Ankur P

ಗುಲ್ಮಾರ್ಗ್

ಗುಲ್ಮಾರ್ಗ್

ಈ ಸಂದರ್ಭದಲ್ಲಿ ಗುಲ್ಮಾರ್ಗ್ ಅತಿ ಸ್ಪಷ್ಟವಾದ ಮೋಡಗಳಿಲ್ಲದ ಆಗಸ ಹೊಂದಿದ್ದು ರಾತ್ರಿಯ ಸಮಯದಲ್ಲಿ ಮಿನುಗುವ ನಕ್ಷತ್ರಗಳ ಸಮೇತ ಮಾನವ ನಿರ್ಮಿತ ಪ್ರಕಾಶದಲ್ಲಿ ತನ್ನದೆ ಆದ ಒಂದು ಸುಂದರತೆಯನ್ನು ಪಡೆಯುತ್ತದೆ. ಒಮ್ಮೆಯಾದರೂ ಇಂತಹ ಸುಂದರ ದೃಶ್ಯ ನೋಡಲೇಬೇಕೆನ್ನುತ್ತದಲ್ಲವೆ ಮನಸ್ಸು?

ಚಿತ್ರಕೃಪೆ: Peter

ಗುಲ್ಮಾರ್ಗ್

ಗುಲ್ಮಾರ್ಗ್

ಮೋಟಾರು ವಾಹನದ ಮೇಲೆ ಸ್ಕಿಯಿಂಗ್ ಕ್ರೀಡೆಯನ್ನು ಸಂತಸದಿಂದ ಆಸ್ವಾದಿಸುತ್ತಿರುವ ಒಂದು ಪ್ರವಾಸಿ ಕುಟುಂಬ.

ಚಿತ್ರಕೃಪೆ: Ankur P

ಔಲಿ

ಔಲಿ

ಔಲಿ : ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದಲ್ಲಿರುವ ಔಲಿಯು ಒಂದು ಗಿರಿಧಾಮ ಪ್ರದೇಶವಾಗಿದ್ದು ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ನೆಲೆಸಿದೆ. ಇದು ಹಿಮಜಾರು ಬಂಡಿ ಆಟಗಳಿಗೆ (ಸ್ಕೀಯಿಂಗ್) ಜನಪ್ರಿಯವಾಗಿದೆ.

ಚಿತ್ರಕೃಪೆ: Ishan Manjrekar

ಔಲಿ

ಔಲಿ

ಔಲಿ ಗಿರಿಧಾಮ ಪ್ರದೇಶವು ತನ್ನ ಸುತ್ತಲೂ ಓಕ್ ಮರಗಳ ಕಾಡಿನಿಂದ ಕೂಡಿದೆ. ಅಷ್ಟೆ ಅಲ್ಲ ಪ್ರದೇಶವು ಹತ್ತಿರದಲ್ಲೆ ಗೋಚರಿಸುವ ಹಿಮಾಲಯದ ಅದ್ಭುತ, ರೋಮಾಂಚನಗೊಳಿಸುವಂತಹ ದೃಶ್ಯಾವಳಿಗಳನ್ನು ಕರುಣಿಸುತ್ತದೆ.

ಚಿತ್ರಕೃಪೆ: Ishan Manjrekar

ಔಲಿ

ಔಲಿ

ಔಲಿಯಲ್ಲಿ ಕಂಡುವ ಇಳಿಜಾರು, ತಗ್ಗು ಪ್ರದೇಶಗಳು ಹಿಮದಲ್ಲಿ ಜಾರುವ ಆಟಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡಿದೆ. ಈ ಒಂದು ಹಿಮಜಾರು (ಸ್ಕೀಯಿಂಗ್) ಆಟವನ್ನು ಭಾರತದಲ್ಲಿ ಜನಪ್ರಿಯಗೊಳಿಸುವ ದೃಷ್ಟಿಯಿಂದ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಚಳಿಗಾಲದಲ್ಲಿ ವಿಶೇಷ ಸ್ಕೀಯಿಂಗ್ ಸ್ಪರ್ಧೆಗಳನ್ನು ಏರಪಡಿಸುತ್ತದೆ.

ಚಿತ್ರಕೃಪೆ: Anuj Kumar Garg

ಔಲಿ

ಔಲಿ

ಔಲಿಯು ತನ್ನಲ್ಲಿರುವ ಕೇಬಲ್ ಕಾರ್ ಗೂ ಸಹ ಪ್ರಖ್ಯಾತಿ ಗಳಿಸಿದೆ. ನಾಲ್ಕು ಕಿ.ಮೀ ಉದ್ದವಿರುವ ಈ ಕೇಬಲ್ ಕಾರ್ ಏಷಿಯಾ ಖಂಡದಲ್ಲೆ ಉದ್ದವಾಗಿದೆ. ಇದರಲ್ಲಿ ಕುಳಿತು ಸಾಗುವಾಗ ರೋಮಾಂಚನ ಉಂಟಾಗುವುದು ಖಂಡಿತ ಹಾಗೂ ಜೊತೆ ಜೊತೆಗೆ ಪ್ರದೇಶದ ಅವಿಸ್ಮರಣೀಯ ಸೌಂದರ್ಯವನ್ನೂ ಸಹ ಆಸ್ವಾದಿಸಬಹುದು. ಇದಕ್ಕೆ ಗೊಂಡೋಲಾ ಸವಾರಿ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Anuj Kumar Garg

ಔಲಿ

ಔಲಿ

ಹಿಮಾಲಯಾದ ಬೆಟ್ಟ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇದು ಹೆಸರಾಂತ ಪ್ರದೇಶವಾಗಿದೆ. ಪ್ರವಾಸಿಗರು ಇಲ್ಲಿನ ಜೋಶಿಮಠ ಟ್ರೆಕ್ಕಿಂಗ್ ಮಾರ್ಗ ಅತ್ಯಂತ ಹೆಸರುವಾಸಿಯಾಗಿದ್ದು ಒಂದು ಸಲ ಪ್ರಯತ್ನಿಸಬಹುದಾಗಿದೆ. ಎತ್ತರವಾದ ಪ್ರದೇಶಗಳಾದ ಕಾಮಿಟ್, ನಂದಾ ದೇವಿ, ಮನ ಪರ್ವತ ಹಾಗೂ ದುನಗಿರಿ ಪ್ರದೇಶಗಳನ್ನು ಈ ಟ್ರೆಕ್ಕಿಂಗ್ ಸಮುಯದಲ್ಲಿ ಕಾಣಬಹುದು.

ಚಿತ್ರಕೃಪೆ: Michael Scalet

ಔಲಿ

ಔಲಿ

ಪ್ರವಾಸಿಗರು ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಮೂಲಕ ಈ ನಗರವನ್ನು ತಲುಪಬಹುದು. ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹಾಗೂ ಹರಿದ್ವಾರದ ರೈಲು ನಿಲ್ದಾಣ, ಔಲಿ ತಲುಪಲು ಹತ್ತಿರದ ನಿಲ್ದಾಣಗಳಾಗಿವೆ. ಔಲಿಗೆ ಹತ್ತಿರದಲ್ಲಿರುವ ನಗರಗಳಿಂದ ಅನೇಕ ಬಸ್ ಸೌಕರ್ಯಗಳಿವೆ.

ಚಿತ್ರಕೃಪೆ: Ishan Manjrekar

ಜ್ಯೋತಿರ್ಮಠ

ಜ್ಯೋತಿರ್ಮಠ

ಜ್ಯೋತಿರ್ಮಠ : ಜೋಶಿಮಠ ಎಂತಲೂ ಸಹ ಕರೆಯಲ್ಪಡುವ ಈ ಸ್ಥಳವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ ಹಾಗೂ ಔಲಿ ಗಿರಿಧಾಮಕ್ಕೆ ಬಹು ಹತ್ತಿರದಲ್ಲಿದೆ. ಔಲಿಯ ಕೇಬಲ್ ಕಾರಿನ ಮೂಲಕ ಜೋಶಿಮಠಕ್ಕೆ ತಲುಪಬಹುದಾಗಿದೆ.

ಚಿತ್ರಕೃಪೆ: christian0702

ಜ್ಯೋತಿರ್ಮಠ

ಜ್ಯೋತಿರ್ಮಠ

ಈ ಸ್ಥಳದ ಇನ್ನೊಂದು ವಿಶೇಷವೆಂದರೆ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಇದೂ ಸಹ ಒಂದು. ಉತ್ತರಾಮ್ನಾಯ ಮಠ ಇದಾಗಿದ್ದು ಅಥರ್ವವೇದಕ್ಕೆ ಮುಡಿಪಾಗಿದೆ. ಮಿಕ್ಕ ಮೂರು ಮಠಗಳು ಕರ್ನಾಟಕದ ಶೃಂಗೇರಿ, ಪುರಿ ಹಾಗೂ ದ್ವಾರಕೆಯಲ್ಲಿವೆ.

ಚಿತ್ರಕೃಪೆ: Raji.srinivas

ಜ್ಯೋತಿರ್ಮಠ

ಜ್ಯೋತಿರ್ಮಠ

ಈ ಸ್ಥಳವು ಮುಖ್ಯವಾಗಿ ಹಿಮಾಲಯದ ವಿವಿಧ ಚಾರಣ ಮಾರ್ಗಗಳಿಗೆ ಪ್ರವೇಶ ದ್ವಾರವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲದೆ ಪ್ರಖ್ಯಾತ ಬದರಿನಾಥ ಕ್ಷೇತ್ರಕ್ಕೆ ಹೊರಡಲು ದ್ವಾರ ಪ್ರದೇಶವಾಗಿಯೂ ಇದು ಸೇವೆ ಸಲ್ಲಿಸುತ್ತದೆ. ಯುವ ಉತ್ಸಾಹಿ ಚಾರಣಿಗರು ಈ ಸ್ಥಳದಿಂದ ಚಾರಣ ಹೊರಡಲು ಉತ್ಸುಕರಾಗಿರುತ್ತಾರೆ.

ಚಿತ್ರಕೃಪೆ: Michael Scalet

ಕುಫ್ರಿ

ಕುಫ್ರಿ

ಕುಫ್ರಿ : ಹಿಮಾಚಲಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿರುವ ಪುಟ್ಟ ಗಿರಿಧಾಮವಾಗಿದೆ ಕುಫ್ರಿ. ಸ್ಥಳೀಯವಾಗಿ ಮಾತನಾಡುವ ಭಾಷೆಯ ಕುಫ್ರ್ ಎಂಬ ಪದದಿಂದ ಈ ಸ್ಥಳಕ್ಕೆ ಕುಫ್ರಿ ಎಂಬ ಹೆಸರು ಬಂದಿದೆ. ಕುಫ್ರ್ ಎಂದ ಕೆರೆ ಅಥವಾ ಸರೋವರ ಎಂದಾಗಿದೆ. ಹಿಮಾಲಯನ್ ಪ್ರಾಣಿ ಸಂಗ್ರಹಾಲಯವನ್ನು ಕುಫ್ರಿ ಹೊಂದಿದ್ದು ಉತ್ತರಾಖಂಡದ ರಾಜ್ಯ ಪಕ್ಷಿಯಾದ ಹಿಮಾಲಯನ್ ಮೋನಲ್ ಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: timeflicks

ಕುಫ್ರಿ

ಕುಫ್ರಿ

ಕುಫ್ರಿಯೂ ಸಹ ಹಿಮ ಚಾದರಿನ ಮೇಲೆ ಸ್ಕಿಯಿಂಗ್ ಮಾಡಲು ಅವಕಾಶ ಒದಗಿಸುವ ತಾಣವಾಗಿದೆ. ಸ್ಕಿಯಿಂಗ್ ಸೇವೆಗಳನ್ನು ಒದಗಿಸುವ ಅನೇಕ ಶಿಬಿರಗಳು ಇಲ್ಲಿದ್ದು ಚಳಿಗಾಲದ ಸಮಯದಲ್ಲುಂಟಾಗುವ ಹಿಮಪಾತದ ಸಂದರ್ಭದಲ್ಲಿ ಇಲ್ಲಿ ಸ್ಕಿಯಿಂಗ್ ಚಟುವಟಿಕೆಯ ಆನಂದವನ್ನು ಅನುಭವಿಸಬಹುದು.

ಚಿತ್ರಕೃಪೆ: Travels Tips

ಕುಫ್ರಿ

ಕುಫ್ರಿ

ಇಲ್ಲಿ ಸಾಮಾನ್ಯವಾಗಿ ಆಲುಗಡ್ಡೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಚಳಿಗಾಲದ ಸಂದರ್ಭದಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದಿರುವ ಆಲುಗಡ್ಡೆ ತೋಟಗಳು ಹಿಮ ಬಂಡೆಗಳಾಗಿ ಪರಿವರ್ತಿತಗೊಂಡು ಭೇಟಿ ನೀಡುವ ಪ್ರವಾಸಿಗರಿಗೆ ಸ್ಕಿಯಿಂಗ್ ಮಾಡಲು ಅವಕಾಶಗಳನ್ನು ಒದಗಿಸುತ್ತದೆ.

ಚಿತ್ರಕೃಪೆ: Travels Tips

ಸೋಲಂಗ್ ಕಣಿವೆ

ಸೋಲಂಗ್ ಕಣಿವೆ

ಸೋಲಂಗ್ ಕಣಿವೆ : ಸ್ಥಳೀಯವಾಗಿ ಸೋಲಂಗ್ ನಾಲಾ ಎಂದು ಕರೆಯಲ್ಪಡುವ ಈ ಕಣಿವೆಯು ಪ್ರಸಿದ್ಧ ಕುಲ್ಲು ಕಣಿವೆಯ ಮೇಲೆ ಬದಿಯೊಂದರಲ್ಲಿ ನೆಲೆಸಿದ್ದು ರೋಹ್ತಂಗ್ ಪಾಸ್ ಗೆ ಹೋಗುವ ಮಾರ್ಗದಲ್ಲಿ ಮತ್ತೊಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಯ ಪಟ್ಟಣವಾದ ಮನಾಲಿಯಿಂದ ಕೇವಲ 14 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Harvinder Chandigarh

ಸೋಲಂಗ್ ಕಣಿವೆ

ಸೋಲಂಗ್ ಕಣಿವೆ

ಈ ಸ್ಥಳವು ಹಿತಕರವಾದ ವಾತಾವರಣವನ್ನು ಹೊಂದಿದ್ದು ಬೇಸಿಗೆ ಸಮಯಕ್ಕೂ ಹಾಗೂ ಚಳಿಗಾಲದ ಸಮಯದಲ್ಲಿ ಚಳಿಗಾಲದ ವಿಶೇಷ ಕ್ರೀಡೆಗಳಿಗೂ ಹೆಸರುವಾಸಿಯಾಗಿದೆ. ಪ್ಯಾರಾ ಗ್ಲೈಡಿಂಗ್, ಪ್ಯಾರಾಚೂಟ್, ಸ್ಕೇಟಿಂಗ್ ಹಾಗೂ ಜಾರ್ಬಿಂಗ್ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Arupamdas

ಜಾರ್ಬಿಂಗ್

ಜಾರ್ಬಿಂಗ್

ಜಾರ್ಬಿಂಗ್ ಅಥವಾ ಬಾಲ್/ಗ್ಲೋಬ್ ರೈಡಿಂಗ್ ಎಂದೂ ಕರೆಯಲ್ಪಡುವ ಈ ಕ್ರೀಡೆ ಒಂದು ವಿಶೇಷ ರೀತಿಯದ್ದಾಗಿದ್ದು ಪ್ಲ್ಯಾಸ್ಟಿಕ್ ನಿಂದ ತಯಾರಿಸಲಾದ ಗೋಲವೊಂದರಲ್ಲಿ ಮನುಷ್ಯನು ಸೇರಿ ಇಳಿಜಾರಿನಲ್ಲಿ ಉರುಳುವ ಕ್ರೀಡೆಯಾಗಿದೆ. ಐರೋಪ್ಯ ದೇಶಗಳಲ್ಲಿ ಇದೊಂದು ಜನಪ್ರೀಯ ಕ್ರೀಡೆಯಾಗಿದ್ದು ಭಾರತದ ಮಟ್ಟಿಗೆ ಒಂದು ವಿನೂತನ ಕ್ರೀಡೆ ಎಂದೆ ಹೇಳಬಹುದು.

ಚಿತ್ರಕೃಪೆ: Aman Gupta

ಮನಾಲಿ

ಮನಾಲಿ

ಇನ್ನೂ ಮನಾಲಿಯೂ ಸಹ ಚಳಿಗಾಲದ ಸಂದರ್ಭದಲ್ಲಿ ಸ್ಕೇಟಿಂಗ್ ಕ್ರೀಡೆಗೆ ಇನ್ನಿಲ್ಲದ ಅವಕಾಶ ಒದಗಿಸುತ್ತದೆ. ನೀವು ಹಿಮದಲ್ಲಿ ಸ್ಕೇಟಿಂಗ್ ಮಾಡಲು ಬಯಸಿದ್ದರೆ ಮನಾಲಿಯನ್ನು ಮೊದಲು ಆಯ್ಕೆ ಮಾಡಬಹುದಾಗಿದೆ. ಏಕೆಂದರೆ ಇಲ್ಲಿನ ಸ್ಕೇಟಿಂಗ್ ಮೈದಾನ ಸರಳವಾಗಿದ್ದು ಮೊದಲ ಬಾಅರಿ ಸ್ಕೇಟಿಂಗ್ ಮಾಡುವವರನ್ನೂ ಸಹ ಪ್ರೋತ್ಸಾಹಿಸುವ ಹಾಗೂ ತರಬೇತಿ ನೀಡುವ ಸ್ಥಳವಾಗಿದೆ.

ಚಿತ್ರಕೃಪೆ: Saurc zlunag

ಯುಮ್ಥಾಂಗ್

ಯುಮ್ಥಾಂಗ್

ಯುಮ್ಥಾಂಗ್ : ಸಿಕ್ಕಿಂ ರಾಜ್ಯದಲ್ಲಿರುವ ಭವ್ಯ ಪ್ರಕೃತಿ ಸೊಬಗನ್ನು ಹೊಂದಿರುವ ಸುಂದರ ಹಾಗೂ ನಯನ ಮನೋಹರವಾದ ಕಣಿವೆ ಪ್ರದೇಶ ಇದಾಗಿದೆ. ಉತ್ತರ ಸಿಕ್ಕಿಂ ಜಿಲ್ಲೆಯ ಲಾಚುಂಗ್ ಪಟ್ಟಣಕ್ಕೆ ಹತ್ತಿರದಲ್ಲಿರುವ ಈ ಕಣಿವೆ ಹಿಮಾಲಯದ ಪರ್ವತಗಳ ಅದ್ವಿತೀಯ ನೋಟಗಳನ್ನು ಒದಗಿಸುತ್ತದೆ.

ಚಿತ್ರಕೃಪೆ: Lisa.davis

ಸ್ಕಿಯಿಂಗ್

ಸ್ಕಿಯಿಂಗ್

ಡಿಸೆಂಬರ್ ಹಾಗೂ ಮಾರ್ಚ್ ಮಧ್ಯದ ಸಮಯದಲ್ಲಿ ವಿಪರೀತ ಹಿಮಪಾತವಿರುವುದರಿಂದ ಈ ಸ್ಥಳ ಅಕ್ಷರಶಃ ಮುಚ್ಚಿರುತ್ತದೆ. ಆದರೂ ಇತ್ತೀಚಿನ ದಿನಗಳಲ್ಲಿ ಸ್ಕಿಯಿಂಗ್ ಇಲ್ಲಿ ಜನಪ್ರೀಯವಾಗುತ್ತಿದೆ. ಇದಕ್ಕೆ ಹತ್ತಿರದಲ್ಲಿರುವ ಲಾಚುಂಗ್ ಜನವಸತಿಯಿರುವ ಪ್ರದೇಶವಾಗಿದೆ.

ಚಿತ್ರಕೃಪೆ: Sayan Bhattacharjee

ಯುಮ್ಥಾಂಗ್

ಯುಮ್ಥಾಂಗ್

ಯುಮ್ಥಾಂಗ್ ಗೆ ತೆರಳಲು ಹತ್ತಿರದಲ್ಲಿರುವ ಪ್ರಮುಖ ನಗರ ಎಂದರೆ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್. ಗ್ಯಾಂಗ್ಟಕ್ ನಿಂದ 125 ಕಿ.ಮೀ ದೂರದಲ್ಲಿರುವ ಲಾಚುಂಗ್ ಗೆ ಮೊದಲು ತೆರಳಿ ಅಲ್ಲಿಂದ ಎರಡು ಘಂಟೆಗಳಷ್ಟು ಪ್ರಯಾಣಾವಧಿಯ ಬಳಿಕ ಯುಮ್ಥಾಂಗ್ ತಲುಪಬಹುದಾಗಿದೆ.

ಚಿತ್ರಕೃಪೆ: AmyNorth

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X