Search
  • Follow NativePlanet
Share
» »ಹೈದ್ರಾಬಾದ್ ನಗರದ ಆಕರ್ಷಣೆಗಳು

ಹೈದ್ರಾಬಾದ್ ನಗರದ ಆಕರ್ಷಣೆಗಳು

By Vijay

ಹೈದ್ರಾಬಾದ್ ಸಿಟಿ ಬಗ್ಗೆ ಸಾಕಷ್ಟು ಕೇಳಿರುತ್ತೀರಿ, ಕೆಲವರು ವಿಸಿಟ್ ಕೂಡ ಕೊಟ್ಟಿರುತ್ತೀರಿ. ಹೈದ್ರಾಬಾದ್ ಸಿಟಿ ಅನೇಕ ವಿಷಯದಲ್ಲಿ ವಿಶೇಷ ಅನಿಸುತ್ತದೆ, ಅವುಗಳಲ್ಲೊಂದು ಇಲ್ಲಿಯ ಸಂಸ್ಕೃತಿ! ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿ ಮಿಶ್ರವಾಗಿರುವ ನಾಡೆಂದರೆ ಹೈದ್ರಾಬಾದ್. ಇಲ್ಲಿಯ ಭಾಷೆಯಲ್ಲಿ ಸ್ವಲ್ಪ ಪರ್ಶಿಯನ್ ಭಾಷೆಯ ಛಾಯೆ ಇರುವುದನ್ನು ನೀವು ಗಮನಿಸಿರಬಹುದು.

ಇಲ್ಲಿಯ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರಗಳು, ಆಹಾರ, ಸುಂದರ ಸ್ಥಳಗಳು ಎಲ್ಲವೂ ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುವಂತಹ ಅಯಸ್ಕಾಂತೀಯ ಗುಣ ಹೊಂದಿದೆ. ನೀವು ಹೈದ್ರಾಬಾದ್ ಗೆ ಹೋದರಂತೂ ಈ 10 ಸ್ಥಳಗಳನ್ನು ನೋಡಲು ಮಿಸ್ ಮಾಡ್ಕೋಬೇಡಿ:

ಚಾರ್ಮಿನಾರ್:

ಚಾರ್ಮಿನಾರ್:

ಚಾರ್ಮಿನಾರ್ ಹೈದ್ರಾಬಾದ್ ನ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ. ಸಾಮಾನ್ಯವಾಗಿ ಟೂರಿಸ್ಟ್ ಸ್ಪಾಟ್ ಗಳಲ್ಲಿ ವಸ್ತುಗಳ ಬೆಲೆ ದುಬಾರಿಯಾಗಿರುತ್ತದೆ. ಆದರೆ ಈ ಸ್ಥಳದಲ್ಲಿ ಮಾರುವ ವಸ್ತುಗಳ ಬೆಲೆಯೂ ಕೂಡ ನಿಮ್ಮನ್ನು ಆಕರ್ಷಿಸುವಂತಿರುವುದು ಇದರ ಮತ್ತೊಂದು ವಿಶೇಷ.

ಚಿತ್ರಕೃಪೆ: Arvind.vindhu

ಗೊಲ್ಕೊಂಡಾ ಕೋಟೆ:

ಗೊಲ್ಕೊಂಡಾ ಕೋಟೆ:

ಗೊಲ್ಕೊಂಡಾ ಕೋಟೆಯು ಭಾರತದ ಅತ್ಯಂತ ಮಹತ್ವದ ಕೋಟೆ ಸಂಕೀರ್ಣಗಳಲ್ಲಿ ಒಂದು. ಈ ಕೋಟೆ ತನ್ನ ಪ್ರಾಚೀನ ಸೌಂದರ್ಯದಿಂದ ಪ್ರೇಕ್ಷಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಬೆಟ್ಟದ ಒಂದು ಕಡೆಯಲ್ಲಿ ನೆಲೆಗೊಂಡಿದೆ ಮತ್ತು ಇತರ ಕಡೆಗಳಲ್ಲಿ ಕೋಟೆ ಸುರುಳಿಯಾಕಾರದಲ್ಲಿದೆ. ಇದರ ಸ್ಥಳ ಮತ್ತು ಆಂತರಿಕ ವಿನ್ಯಾಸದಿಂದ ಇದನ್ನು ವಿಶ್ವದ ಬೃಹತ್ ಕೋಟೆಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Shantanu86

ಬಿರ್ಲಾ ಮಂದಿರ:

ಬಿರ್ಲಾ ಮಂದಿರ:

ನಗರದ ಕಾಲಾ ಪಹಾಡ್ ಎಂಬಲ್ಲಿ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಲಾದ ಈ ಭವ್ಯ ದೇವಾಲಯವಿದೆ. ತಿರುಪತಿ ತಿರುಮಲ ದೇವಸ್ಥಾನದ ವೆಂಕಟೇಶ್ವರನ ವಿಗ್ರಹದ ತದ್ರೂಪ ವಿಗ್ರಹವು ಈ ಮಂದಿರದಲ್ಲಿದೆ. ಇದೊಂದು ನಗರದ ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Rahul563

ಹೈಟೆಕ್ ಸಿಟಿ:

ಹೈಟೆಕ್ ಸಿಟಿ:

ಹೈದ್ರಾಬಾದ್ ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಸಿಟಿಯು ನಗರದ ಹೃದಯವೆಂದೆ ಹೇಳಬಹುದು. ತಾಂತ್ರಿಕತೆಯ ಹಾಗು ವಾಣಿಜ್ಯದ ಪ್ರತೀಕವಾಗಿರುವ ಈ ಪ್ರದೇಶವು ನಗರದ ವಿನೂತನ ಪ್ರತಿಷ್ಠೆಗೆ ಕಾರಣವಾಗಿದೆ.

ಚಿತ್ರಕೃಪೆ: Ranvesh

ಸಲಾರ್ ಜಂಗ್ ವಸ್ತು ಸಂಗ್ರಹಾಲಯ

ಸಲಾರ್ ಜಂಗ್ ವಸ್ತು ಸಂಗ್ರಹಾಲಯ

ಈ ವಸ್ತುಸಂಗ್ರಹಾಲಯ ವಿಶ್ವದ ಅತಿ ದೊಡ್ಡ ಪುರಾತನ ಅವಶೇಷಗಳ ಏಕ-ವ್ಯಕ್ತಿ ಸಂಗ್ರಹವಾಗಿದೆ. ಈ ಸಂಗ್ರಹಾಲಯದಲ್ಲಿ ರವಿವರ್ಮನ ಪೇಯಿಂಟಿಂಗ್ ಇದ್ದು, ಈ ಸಂಗ್ರಹಾಲಯವನ್ನು ಸಂಪೂರ್ಣವಾಗಿ ಸುತ್ತಿ ನೋಡಲು ಸಂಪೂರ್ಣವಾಗಿ ಒಂದು ದಿನ ಮೀಸಲಿಡಬೇಕಾಗುತ್ತದೆ.

ಚಿತ್ರಕೃಪೆ: Neeresh.kr

ಹುಸೈನ್ ಸಾಗರ್ ಜಲಾಶಯ:

ಹುಸೈನ್ ಸಾಗರ್ ಜಲಾಶಯ:

ಹಜ್ರತ್ ಹುಸೈನ್ ಷಾ ವಾಲಿ ಎಂಬುವರು ಇದನ್ನು ನಿರ್ಮಿಸಿದರು. ಇದು ನಗರದ ಹೃದಯಭಾಗದಲ್ಲಿದ್ದು , ಕೆರೆಯ ಮಧ್ಯದಲ್ಲಿರುವ ರಾಕ್ ಆಫ್ ಗಿಬ್ರಲ್ಟರ್ ಎಂದು ಕರೆಯುವ ದ್ವೀಪ ದಿಬ್ಬದಲ್ಲಿರುವ 19-ಮೀಟರ್ ಉದ್ದದ ಬುದ್ಧನ ಪ್ರತಿಮೆ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Cephas 405

ಫಾಲಕ್ನುಮಾ ಅರಮನೆ:

ಫಾಲಕ್ನುಮಾ ಅರಮನೆ:

ಇಟಾಲಿಯನ್ ವಾಸ್ತುಶಿಲ್ಪ ನವಾಬ್ ವಿಕ್ವಾರ್ ಆಲ್-ಉಮ್ರಾರವರ ಕಲೆಯಲ್ಲಿ ಅರಳಿದ ಅರಮನೆಯಿದು. ಈ ಅರಮನೆಯನ್ನು ಇಟಾಲಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ. ಚಾರ್ಮಿನಾರ್ ನಿಂದ 5 ಕಿ. ಮೀ ದೂರದಲ್ಲಿ ಈ ಅರಮನೆಯಿದೆ.

ಚಿತ್ರಕೃಪೆ: Rachna 13

ಪ್ಯಾರಾಡೈಸ್:

ಪ್ಯಾರಾಡೈಸ್:

ಹೈದ್ರಾಬಾದ್ ಶೈಲಿ ಅಡುಗೆಯ ರುಚಿ ನೋಡಬೇಕೆಂದು ಬಯಸುವುದಾದರೆ ಈ ಹೋಟೆಲ್ ಗೆ ಭೇಟಿ ಕೊಡಲು ಮರೆಯಬೇಡಿ.

ಚಿತ್ರಕೃಪೆ: Garrett Ziegler

ಮೆಕ್ಕಾ ಮಸೀದಿ:

ಮೆಕ್ಕಾ ಮಸೀದಿ:

ಮೆಕ್ಕಾ ಮಸೀದಿ ಭಾರತದ ಪುರಾತನವಾದ ಮಸೀದಿಗಲಲ್ಲಿ ಒಂದಾಗಿದ್ದು, ಹೈದ್ರಾಬಾದ್ ನ ಅತೀ ದೊಡ್ಡ ಮಸೀದಿ ಇದಾಗಿದೆ. ಈ ಮಸೀದಿಯ ಮತ್ತೊಂದು ವಿಶೇಷವೆಂದರೆ ಮೆಕ್ಕಾದಿಂದ ತಂದ ಪವಿತ್ರ ಮಣ್ಣಿನಿಂದ ಇಟ್ಟಿಗೆ ಮಾಡಿ, ಈ ಮಸೀದಿ ನಿರ್ಮಾಣದಲ್ಲಿ ಬಳಲಾಯಿತು.

ಚಿತ್ರಕೃಪೆ: Rakeshnandi1990

ಚೌಮಹಲ್ಲಾ ಅರಮನೆ:

ಚೌಮಹಲ್ಲಾ ಅರಮನೆ:

ಇದು ಆಸಫ್ ಜಹಿ ರಾಜವಂಶದ ಆಸನವಾಗಿ. ಇದು ನಿಜಾಮ್ ನ ಮನರಂಜಾನ ತಾಣವಾಗಿತ್ತು. ಬ್ರಿಟಿಷ್ ರ ಕಾಲದಲ್ಲೂ ಅದ್ದೂರಿ ಪಾರ್ಟಿಗಳನ್ನಿ ಇಲ್ಲಿಯೇ ನಡೆಸಲಾಗುತ್ತಿತ್ತು.

ಚಿತ್ರಕೃಪೆ: Gopikrishna Narla

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X