Search
  • Follow NativePlanet
Share
» »ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ಮನಸ್ಸು ಚಟಪಡಿಸುತ್ತಿರುತ್ತದೆ.

By dIVYA

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ಮನಸ್ಸು ಚಟಪಡಿಸುತ್ತಿರುತ್ತದೆ. ಇಂತಹ ಬಯಕೆ ನಿಮ್ಮನ್ನು ಕಾಡುತ್ತಿದ್ದರೆ ಈ ಕೆಳಗಿನ ಪಾರ್ಕ್‍ಗಳಿಗೆ ಹೋಗಿ. ಸುಂದರ ಪರಿಸರದಲ್ಲಿ ಯಥೇಚ್ಛವಾಗಿ ನೀರಿನ ಆಟವನ್ನು ಆಡಿ ದಣಿವಾರಿಸಿಕೊಳ್ಳಬಹುದು.

ಬೆಂಗಳೂರು ಆವೃತ್ತಿಯಲ್ಲಿರುವ ಈ ವಾಟರ್ ಪಾರ್ಕ್‍ಗಳು ಬೇಸಿಗೆಯಲ್ಲಿ ಕೊಂಚ ಖುಷಿಯನ್ನು ನೀಡಬಲ್ಲದು. ನೈಸರ್ಗಿಕವಾಗಿರುವ ಕೆರೆ ಅಥವಾ ಹೊಳೆಗಳಲ್ಲಿ ಮಕ್ಕಳನ್ನು ಆಡಲು ಬಿಡುವುದಕ್ಕಿಂತ, ಇಂತಹ ಪಾರ್ಕ್‍ಗಳಲ್ಲಿ ಆಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

Top 5 Water Parks in Bangalore

PC: wikimedia.org

ವಂಡರ್ ಲಾ
ಬೆಂಗಳೂರಿನಲ್ಲಿರುವ ವಾಟರ್ ಪಾರ್ಕ್‍ಗಳಲ್ಲಿ ಮೊದಲನೇ ಸ್ಥಾನವನ್ನು ವಂಡರ್ ಲಾ ಪಡೆದುಕೊಂಡಿದೆ. ಏಷ್ಯಾದಲ್ಲಿ 7ನೇ ಸ್ಥಾನದ ಹಿರಿಮೆಯನ್ನು ಪಡೆದಿದೆ. 33 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನದಲ್ಲಿ ವಿವಿಧ ಬಗೆಯ ನೀರಿನ ಆಟಗಳಿವೆ. ಮಕ್ಕಳಿಗೆ ಹಾಗೂ ದೊಡ್ಡವರಿಗೆ ಎಂತಲೂ ವಿಭಾಗಿಸಿರುವ ನೀರಿನ ಆಟಗಳು ಹಾಗೂ ಸಾಹಸ ಆಟಗಳು ಇವೆ. ಬೇಸಿಗೆಯಲ್ಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಬೆಂಗಳೂರಿನ ಹೃದಯ ಭಾಗದಿಂದ 28 ಕಿ.ಮೀ. ಇರುವ ಈ ಉದ್ಯಾನಕ್ಕೆ ಪ್ರವೇಶ ಶುಲ್ಕವಿದೆ. ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 6ರ ವರೆಗೆ ಪ್ರವೇಶಕ್ಕೆ ಅನುಮತಿ ಇರುತ್ತದೆ. ವಾರದ ರಜೆಯಲ್ಲಿ ಬೆಳಗ್ಗೆ 11 ರಿಂದ ಸಂಜೆ 7ರ ವರೆಗೆ ಪ್ರವೇಶಕ್ಕೆ ಅನುಮತಿ.

<strong>ವಂಡರ್ಲಾ ಬಗ್ಗೆ ಮತ್ತಿಷ್ಟು ಓದುವ ಕುತೂಹಲವೇ? </strong>ವಂಡರ್ಲಾ ಬಗ್ಗೆ ಮತ್ತಿಷ್ಟು ಓದುವ ಕುತೂಹಲವೇ?

Top 5 Water Parks in Bangalore

PC: wikipedia.org

ನೀಲಾದ್ರಿ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್
ಕುಟುಂಬದವರೊಡನೆ ಅಥವಾ ಸ್ನೇಹಿತರೊಡನೆ ಬರಬಹುದಾದ ಉತ್ತಮ ಉದ್ಯಾನವನ. ಮನರಂಜನಾ ಕ್ರೀಡೆ ಹಾಗೂ ಜಲ ಕ್ರೀಡೆ ಎರಡನ್ನೂ ಹೊಂದಿರುವ ಬೆಂಗಳೂರಿನಲ್ಲಿರುವ ಮೊದಲ ಪಾರ್ಕ್ ಎಂಬ ಹೆಸರಿಗೆ ಪಾತ್ರವಾಗಿದೆ. ಮನರಂಜನೆಗೆ ಸುಮಾರು 45 ಆಟಗಳು, ಜಲಕ್ರೀಡೆಗೆ ಎಂಟು ಬಗೆಯ ಆಟಗಳಿವೆ. ಮಕ್ಕಳು ಎಲ್ಲಾ ಆಟಗಳನ್ನು ಆಡಿ ಆನಂದಿಸಬಹುದು. ಆಟಕ್ಕೆ ಹೊಂದಿಕೆಯಾಗುವ ಸಂಗೀತವನ್ನು ಹಾಕುತ್ತಾರೆ. 30 ಎಕರೆ ವಿಸ್ತೀರ್ಣದಲ್ಲಿರುವ ಈ ಉದ್ಯಾನವನ ಹೊಸೂರು ರಸ್ತೆ ಮಾರ್ಗದಲ್ಲಿದೆ. ಬೆಂಗಳೂರು ನಗರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿದೆ. ಪ್ರವೇಶ ಶುಲ್ಕವೂ ಕಡಿಮೆ ಬೆಲೆಯಲ್ಲೇ ಇದೆ. ಒಮ್ಮೆ ಪ್ರವೇಶ ಶುಲ್ಕ ಪಡೆದರೆ ಕೆಲವು ಆಟಗಳನ್ನು ಉಚಿತವಾಗಿ ಆಡಬಹುದು. ಪ್ರತಿ ದಿನ ಬೆಳಗ್ಗೆ 11 ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ.

Top 5 Water Parks in Bangalore

PC: flickr.com

ಫನ್ ವರ್ಲ್ಡ್
ಬೆಂಗಳೂರಿನ ಜೆಸಿ ನಗರದಲ್ಲಿರುವ ಈ ಉದ್ಯಾನವನ 22 ಎಕರೆ ವಿಸ್ತೀರ್ಣದಲ್ಲಿದೆ. ಇದರಲ್ಲಿ ಮೂರು ಬಗೆಯ ವಿಭಾಗದಲ್ಲಿ ಆಟಗಳನ್ನು ಆಡಬಹುದು. 1. ಫನ್ ವರ್ಲ್ಡ್ , 2. ವಾಟರ್ ವರ್ಲ್ಡ್ , 3. ಸ್ಟಾರ್ ಸಿಟಿ. ಇಷ್ಟವಾಗುವ ಆಟಗಳ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ ಎಲ್ಲಾ ಆಟಗಳನ್ನೂ ಆಡಬಹುದು. ಪ್ರತಿಯೊಂದು ಆಯ್ಕೆಗೂ ವಿಭಿನ್ನ ಶುಲ್ಕವಿದೆ. ಪ್ರತಿದಿನ ಬೆಳಗ್ಗೆ 11 ಕ್ಕೆ ತೆರೆಯುವ ಈ ಉದ್ಯಾನವನ ಫನ್ ವರ್ಲ್ಡ್ ಸಂಜೆ 7.30 ರವರೆಗೆ, ವಾಟರ್ ವರ್ಲ್ಡ್ ಸಂಜೆ 4.30ರವರೆಗೆ, ಸ್ಟಾರ್ ಸಿಟಿ ಸಂಜೆ 8 ರವರೆಗೆ ತೆರೆದಿರುತ್ತದೆ.

Top 5 Water Parks in Bangalore

ಲುಂಬಿನಿ ಗಾರ್ಡನ್
ಬೆಂಗಳೂರಿನ ಹೆಬ್ಬಾಳದಲ್ಲಿರುವ ಈ ಪಾರ್ಕ್ ನಾಗವಾರ ಕೆರೆ ದಂಡೆಯ ಮೇಲಿದೆ. ಹೆಬ್ಬಾಳದ ರಿಂಗ್ ರಸ್ತೆಯ ಹತ್ತಿರ ಇರುವ ಈ ಉದ್ಯಾನವನದಲ್ಲಿ ಹಲವಾರು ನೀರಿನ ಆಟಗಳಿವೆ. ಊಟ ತಿಂಡಿಗಾಗಿ ಹೋಟೆಲ್‍ಗಳು ಇವೆ. ನೈಸರ್ಗಿಕವಾದ ಕರೆಯಲ್ಲಿ ದೋಣಿ ಪ್ರಯಾಣ ಮಾಡಬಹುದು. ಕೃತಕವಾಗಿ ನಿರ್ಮಿಸಿರುವ ಸಮುದ್ರದ ಅಲೆಗಳ ಆಟವೂ ಇಲ್ಲಿದೆ. ಸುಮಾರು 5000 ಜನರು ಒಮ್ಮೆಲೆ ಆಡುವಷ್ಟು ವಿಸ್ತೀರ್ಣವನ್ನು ಹೊಂದಿದೆ. ಕಡಿಮೆ ಬೆಲೆಯಲ್ಲೇ ಪ್ರವೇಶ ಶುಲ್ಕ ಇರುವುದರಿಂದ ಸಾಮಾನ್ಯ ಜನರು ಹೋಗಬಹುದು. ಇಲ್ಲಿ ಪ್ರತಿ ದಿನ ಬೆಳಗ್ಗೆ 11 ರಿಂದ ಸಂಜೆ 7ರ ವರೆಗೆ ತೆರೆದಿರುತ್ತದೆ.

Read more about: bangalore travel india wonderala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X