Search
  • Follow NativePlanet
Share
» »ರೋಮಾಂಚನಗೊಳಿಸುವ ರಹಸ್ಯಮಯ ಕಡಲ ತೀರಗಳು

ರೋಮಾಂಚನಗೊಳಿಸುವ ರಹಸ್ಯಮಯ ಕಡಲ ತೀರಗಳು

By Vijay

ಕಿರಿಯರಿಂದ ಹಿಡಿದು ಹಿರಿಯರವರೆಗೆ ಬಹುತೇಕ ಎಲ್ಲರೀಗೂ ರೋಮಾಂಚನ, ಉತ್ಸಾಹ ಕರುಣಿಸುವ ತಾಣಗಳೆಂದರೆ ಕಡಲ ತೀರಗಳು. ಕಣ್ಣು ಹಾಯಿಸಿದಷ್ಟೂ ಕೊನೆಯೆ ಇಲ್ಲವೆಂಬಂತೆ ವಿಶಾಲವಾಗಿರುವ ನೀಲ ಜಲ, ತನ್ನದೆ ಆದ ವಿಶಿಷ್ಟ ಲಯದ ಸದ್ದುಗಳೊಂದಿಗೆ ದಡಕ್ಕಪಳಿಸುವ ಬುರುಗು ಬುರುಗು ಬಿಳಿ ಅಲೆಗಳು, ನಗರ ಗೌಜು ಗದ್ದಲಗಳಿಲ್ಲದ ಶಾಂತ ಪರಿಸರ.

ಅಷ್ಟೆ ಏಕೆ, ಜೋರಾಗಿ ಓಡದ ಹಾಗೆ ಮರುಳು ಮಾಡುವ ಮರಳು, ಅಲ್ಲಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ನಿಂತು ಸಮುದ್ರಕ್ಕೆ ಸಲಾಂ ಹೊಡೆಯುವ ತೆಂಗಿನ ಹಾಗೂ ಪಾಮ್ ಮರಗಳು, ಇವೆಲ್ಲವೂ ಕಡಲ ತೀರಗಳ ಮುಖ್ಯ ಗುಣಲಕ್ಷಣಗಳಾಗಿದ್ದು ಪ್ರತಿಯೊಬ್ಬರನ್ನೂ ತನ್ನೆಡೆ ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ.

ನಿಮಗಿಷ್ಟವಾಗಬಹುದಾದ : ಗೋವಾಗೆ ಹೋದರೆ ಈ ಬೀಚುಗಳನ್ನು ಮಿಸ್ ಮಾಡಲೇಬೇಡಿ!

ಸಾಮಾನ್ಯವಾಗಿ ಕಡಲ ತಡಿಗಳು ಜನಪ್ರೀಯ ಪ್ರವಾಸಿ ತಾಣಗಳು. ಹೀಗಾಗಿ ಭಾರತದಲ್ಲಿ ಸಾಕಷ್ಟು ಹೆಸರುವಾಸಿ ಕಡಲ ತೀರಗಳನ್ನು ಕಾಣಬಹುದು. ಆದರೆ ನಿಮಗಿದು ಗೊತ್ತೆ ಕೆಲವು ಕಡಲ ತೀರಗಳು ರಹಸ್ಯಮಯವಾಗಿ ಸ್ಥಿತವಿದ್ದು ಬಹುತೇಕ ಪ್ರವಾಸಿಗರ ಕಣ್ಣಿಗೆ ಬೀಳದ ಹಾಗೆ ನೆಲೆಸಿವೆ. ಇಲ್ಲಿ ಭೇಟಿ ನೀಡುವವರ ಸಂಖ್ಯೆಯೂ ಅತಿ ವಿರಳ. ವಾಣಿಜ್ಯಕರಣವಂತೂ ಇಲ್ಲವೆ ಇಲ್ಲ.

ಕೇವಲ ಕೇವಲ ಕೆಲವೆ ಕೆಲವು ಜನರಿಗೆ ಮಾತ್ರ ತಿಳಿದಿರುವ ಈ ಕಡಲ ತೀರಗಳು ಹೆಚ್ಚು ಅನ್ವೇಷಿಸಲ್ಪಡದ ಬೀಚುಗಳಾಗಿದ್ದು ಖಮ್ಡಿತವಾಗಿಯೂ ಭೇಟಿ ನೀಡುವವರನ್ನು ಮಂತ್ರಮುಗ್ಧಗೊಳಿಸುತ್ತದೆ. ಏಕೆಂದರೆ ಇಲ್ಲಿ ಇತರೆ ಬೀಚುಗಳಲ್ಲಿ ಕಂಡುಬರುವಂತೆ ಪ್ರವಾಸಿಗರ ಸದ್ದು ಗದ್ದಲಗಳಿಲ್ಲ. ವ್ಯಾಪಾರವೂ ಇಲ್ಲ. ಕೇವಲ ನೀವು ಹಾಗೂ ವಿಶಾಲವಾದ ಸಮುದ್ರ.

ಇಂತಹ ಕಡಲ ತೀರಗಳಿಗೆ ಒಂದೊಮ್ಮೆಯಾದರೂ ಸರಿ ಭೇಟಿ ನೀಡಲೇಬೇಕೆಂಬ ಆಸೆ ಪ್ರತಿಯೊಬ್ಬ ಪ್ರವಾಸಿಗರಲ್ಲೂ ಮೂಡುವುದು ಸಹಜ. ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಕೆಲವು ಆಯ್ದ, ಕೇವಲ ಕೆಲವೆ ಜನರಿಗೆ ತಿಳಿದಿರುವ ಕೆಲವು ವಿಶಿಷ್ಟವಾದ ಭಾರತದಲ್ಲಿ ಕಂಡುಬರುವ ಕಡಲ ತೀರಗಳ ಕುರಿತು ತಿಳಿಯಿರಿ.

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಯರಾಡಾ ಕಡಲ ತೀರ : ಆಂಧ್ರಪ್ರದೇಶದ ಬಂದರು ನಗರಿ ವೈಜಾಗ್/ವಿಶಾಖಾಪಟ್ಟಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಯರಾಡಾ ಕರಾವಳಿ ಗ್ರಾಮದ ಕಡಲ ತೀರ ಇದಾಗಿದ್ದು ಪ್ರವಾಸಿಗರಿಂದ ಹೆಚ್ಚು ಅನ್ವೇಷಣೆಗೊಳಪಟ್ಟಿಲ್ಲ. ಇಲ್ಲಿನ ಕಡಲ ಪರಿಸರವು ಶಾಂತಮಯವಾಗಿದ್ದು ಯಾವುದೆ ಮಾರಾಟ ವ್ಯಾಪರಗಳಿಲ್ಲ. ಕೇವಲ ಸ್ಥಳೀಯ ಮೀನುಗಾರರ ಕುಟುಂಬಗಳ ಮಾತ್ರವಿದ್ದು ಭೇಟಿ ನೀಡುವವರಿಗೆ ಪ್ರಶಾಂತ ವಾತಾವರಣ ನೀಡುತ್ತದೆ.

ಚಿತ್ರಕೃಪೆ: Rajib Ghosh

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಅಂತರ್ವೇದಿ : ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇತಿಪಲ್ಲಿ ತಾಲೂಕಿನ ಅಂತರ್ವೇದಿ ಗ್ರಾಮವೂ ಸಹ ತನ್ನಲ್ಲಿರುವ ಹೆಚ್ಚು ಜನಪ್ರೀಯವಲ್ಲದ ಕಡಲ ತೀರ ಹೊಂದಿದ್ದು ಅದು ಅಂತರ್ವೇದಿ ಕಡಲ ತೀರ ಎಂದೆ ಕರೆಸಿಕೊಳ್ಳುತ್ತದೆ. ಇದೊಂದು ನರಸಿಂಹ ಕ್ಷೇತ್ರವಾಗಿದ್ದು ಗೋದಾವರಿಯ ಉಪನದಿಯಾದ ವಸಿಷ್ಠ ಗೋದಾವರಿಯು ಬಂಗಾಳಕೊಲ್ಲಿಯೊಂದಿಗೆ ಸೇರುವ ಸ್ಥಳವೂ ಸಹ ಆಗಿದೆ.

ಚಿತ್ರಕೃಪೆ: Rajib Ghosh

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಮಂದಾರಮಣಿ : ಬಂಗಾಳಕೊಲ್ಲಿ ಸಮುದ್ರದ ಉತ್ತರಕ್ಕೆ ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿರುವ ಮಂದಾರಮಣಿ ಗ್ರಾಮದ ಕಡಲ ತೀರವು ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮೂಲತಃ ರಿಸಾರ್ಟ್ ಪಕ್ಕದ ಕಡಲ ತೀರವಾಗಿದ್ದು ಹೋಟೆಲಿನ ಹಿಂಭಾಗದಿಂದ ಪ್ರವಾಸಿಗರು ಕಡಲ ತೀರವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Abhijit Kar Gupta

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಬಟರ್ ಫ್ಲೈ : ಪಾತರಗಿತ್ತಿ ಅಥವಾ ಚಿಟ್ಟೆ ಎಂಬ ಅರ್ಥ ಕೊಡುವ ಬಟರ್ ಫ್ಲೈ ಕಡಲ ತೀರವಿರುವುದು ಪ್ರಖ್ಯಾತ ಕಡಲ ಪಟ್ಟಣ ಗೋವಾದಲ್ಲಿ. ಆದಾಗ್ಯೂ ಈ ಕಡಲ ತೀರದ ಕುರಿತು ಅನೇಕರಿಗೆ ನೋಡುವುದಿರಲಿ ತಿಳಿದೇ ಇಲ್ಲ. ಇತರೆ ಪ್ರಸಿದ್ಧ ಕಡಲ ತೀರಗಳಿಂದ ಫೆರ್‍ರಿಯ ಮೂಲಕ ಮಾತ್ರವೆ ಇದನ್ನು ತಲುಪಬಹುದು ಹಾಗೂ ಇದು ತನ್ನಲ್ಲಿರುವ ಕಲ್ಲು ಬಂಡೆಗಳು, ದಟ್ಟ ಹಸಿರು ಹಾಗೂ ಚಿಟ್ಟೆಗಳಿಗಾಗಿ ಆಕರ್ಷಣೆಯಾಗಿದೆ. ವಿದೇಶಿ ಪ್ರವಾಸಿಗರೆ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಚಿತ್ರಕೃಪೆ: Gili Chupak

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಗಲ್ಗಿಬಾಗಾ ಕಡಲ ತೀರ : ದಕ್ಷಿಣ ಗೋವಾದ ಕಣಕೋಣದಲ್ಲಿರುವ ಗಲ್ಗಿಬಾಗಾ ಕಡಲ ತೀರ ಯಾವುದೆ ವಾಣಿಜ್ಯೀಕರಣಕ್ಕೊಳಪಡದ ಕೇವಲ ಸ್ಥಳೀಯರು ಮಾತ್ರ ಇರುವ ಕಡಲ ತೀರವಾಗಿದೆ. ಅಪರೂಪ ಆಲೀವ್ ರಿಡ್ಲೆ ಸಮುದ್ರದಾಮೆಗಳು ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Fredericknoronha

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಗುಹಾಘರ್ ಕಡಲತೀರ : ಗುಹಾಘರ್ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಆಪೂಸು ಮಾವಿನ ಹಣ್ಣು ಹಾಗೂ ತೆಂಗಿನಕಾಯಿಗಳಿಗೆ ಹೆಸರುವಾಸಿಯಾದ ಗುಹಾಘರ್ ತನ್ನಲ್ಲಿರುವ ಕಡಲ ತೀರಕ್ಕೆ ತನ್ನದೆ ಆದ ಹೆಸರುಗಳಿಸಿದೆ. ಅಂದರೆ ಹೆಚ್ಚು ಪ್ರವಾಸಿಗರ ಚಲನವಲನವಿಲ್ಲದ ಶಾಂತ ಪರಿಸರದಿಂದ ಕೂಡಿದ ಕಡಲ ಕಿನಾರೆ ಗುಹಾಘರ್ ನಲ್ಲಿ ಕಾಣಬಹುದು.

ಚಿತ್ರಕೃಪೆ: Joshi detroit

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಳವಾನ್ ತಾಲೂಕಿನ ತರ್ಕಾರ್ಲಿಯು ತನ್ನದೆ ಆದ ಸುಂದರ ಕಡಲ ತೀರ ಹೊಂದಿದೆ. ವಿಶೇಷವೆಂದರೆ ಭಾರತದ ಏಕೈಕ ಸ್ಕೂಬಾ ಡವಿವಿಂಗ್ ತರಬೇತಿ ಕೇಂದ್ರವು ಇಲ್ಲಿದೆ. ಅಲ್ಲದೆ ಈ ಕಡಲ ತೀರವು ಹವಳದ ದಿಬ್ಬಗಳಿಗೆ ಹೆಸರುಗಳಿಸಿದ್ದು ಸುಮಾರು 20 ಅಡಿಗಳವರೆಗಿನ ನೀರಿನಾಳವನ್ನು ಬರಿಗಣ್ಣಿನಿಂದ ಸ್ಪಷ್ಟವಾಗಿ ಕಾಣಬಹುದು. ಈ ಕಡಲ ತಡಿಗೆ ಭೆಟಿ ನೀಡುವವರ ಸಂಖ್ಯೆ ವಿರಳ.

ಚಿತ್ರಕೃಪೆ: Rohit Keluskar

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ತಿಲ್ ಮಾಟಿ : ಕರ್ನಾಟಕದ ಕಾರವಾರದಲ್ಲಿರುವ ಬಹುತೇಕ ಜನರಿಗೆ ತಿಳಿಯದಾದ ಸುಂದರ ಕಡಲ ತೀರ ಇದಾಗಿದೆ. ಏಕಾಂತ ಬಯಸುವ ಪ್ರವಾಸಿಗರಿಗೆ ಇದೊಂದು ಆದರ್ಶಮಯ ಕಡಲ ತೀರವಾಗಿದೆ. ಕಾರವಾರ ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಮಜಲಿಯಿಂದ ಒಂದು ಕಿ.ಮೀ ಚಾರಣದ ಮೂಲಕ ಈ ಕಡಲತಡಿಯನ್ನು ತಲುಪಬಹುದಾಗಿದೆ. ಇದು ಕರ್ನಾಟಕ-ಗೋವಾದ ಗಡಿಗಳ ಬಳಿ ಸ್ಥಿತವಿದೆ.

ಚಿತ್ರಕೃಪೆ: Abhijeet Rane

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಈ ಕಡಲ ತೀರದ ವಿಶಿಷ್ಟತೆಯೆಂದರೆ ಇದರ ನೂರು ಮೀ. ಉದ್ದದ ಈ ಕಡಲ ತೀರದ ಮರಳು ಮಾತ್ರ ಕಪ್ಪು ಬಣ್ಣದಿಂದ ಕೂಡಿದ್ದು ಕಣಗಳು ಅಕ್ಷರಶಃ ಎಳ್ಳಿನ ಆಕಾರದಲ್ಲಿವೆ. ತಿಲ್ ಎಂದರೆ ಎಳ್ಳು ಎಂತಲೂ ಮಾಟಿ ಎಂದರೆ ಮರುಳು/ಮಣ್ಣು ಎಂತಲೂ (ಮರಾಠಿ ಹಾಗೂ ಕೊಂಕಣಿಗಳಲ್ಲಿ) ಅರ್ಥ ಬರುವುದರಿಂದ ಇದಕ್ಕೆ ತಿಲ್ ಮಾಟಿ ಕಡಲ ತೀರ ಎಂಬ ಹೆಸರು ಬಂದಿದೆ. ಕಾರವಾರ ನಗರ ಕೇಂದ್ರದಿಂದ ಮಜಲಿಯವರೆಗೆ ವಾಹನಗಳಿದ್ದು ಮಜಲಿಯಿಂದ ಒಂದು ಕಿ.ಮೀ ಚಿಕ್ಕದಾದ ದಿಬ್ಬುಗಳ ಮೂಲಕ ಚಾರಣ ಮಾಡುತ್ತ ತಲುಪಬಹುದು.

ಚಿತ್ರಕೃಪೆ: Abhijeet Rane

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಕೀಳುನ್ನಾ ಕಡಲ ತೀರ : ಕೇರಳದ ಕಣ್ಣೂರು ಜಿಲ್ಲೆಯ ಕೀಳುನ್ನಾ ಗ್ರಾಮದಲ್ಲಿರುವ ಕಡಲ ತೀರ ಇದಾಗಿದೆ. ಈ ಕಡಲ ತೀರವೂ ಸಹ ಸಾಕಷ್ಟು ಪ್ರವಾಸಿಗರನ್ನು ಪಡೆಯುವುದಿಲ್ಲ ಹೀಗಾಗಿ ಸಾಕಷ್ಟು ಶಾಂತ ವಾತಾವರಣವನ್ನು ಇದು ಹೊಂದಿದೆ.

ಚಿತ್ರಕೃಪೆ: Ks.mini

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಮೂಲತಃ ಕೀಳುನ್ನಾ-ಏಳರ ಎಂಬ ಎರಡು ದ್ವಿವಳಿ ತೀರ ಇದಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುತ್ತವೆ.

ಚಿತ್ರಕೃಪೆ: Ks.mini

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಕೀಳುನ್ನಾ ಕಡಲ ತೀರದಿಂದ ಕೇವಲ ಅರ್ಧ ಘಂಟೆಯಷ್ಟು ಪ್ರಯಾಣಾವಧಿಯಷ್ಟು ದೂರದಲ್ಲಿ ಸ್ವಾಮಿ ಗುಹಾ ತಲುಪಬಹುದು. ಇದೊಂದು ಕುತೂಹಲ ಮೂಡಿಸುವ ತಾಣವಾಗಿದ್ದು ಇಲ್ಲಿ ಭಕ್ತಾದಿಗಳು ಗುಹೆಯಲ್ಲಿ ದೀಪಗಳನ್ನು ಬೆಳಗಿಸುತ್ತಾರೆ.

ಚಿತ್ರಕೃಪೆ: Ks.mini

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಕಾಪ್ಪಿಲ್ ಕಡಲ ತೀರ : ಕೇರಳದ ತಿರುವನಂತಪುರಂ ಜಿಲ್ಲೆಯ ಗಡಿಯ ವಾಯವ್ಯಕ್ಕೆ ಹೊಂದಿಕೊಂಡಂತೆ ನೆಲೆಸಿರುವ ಕಾಪ್ಪಿಲ್ ಪಟ್ಟಣದ ಕಡಲ ತೀರವು ರಮಣೀಯವಾದ ಏಕಾಂತದ ಪರಿಸರವನ್ನು ಹೊಂದಿದ್ದು ಆಕರ್ಷಕವಾಗಿ ಕಂಡುಬರುತ್ತದೆ. ಹೆಚ್ಚು ಸದ್ದು ಗದ್ದಲಗಳಿಲ್ಲದ, ಏಕಾಂತ ಬಯಸುವ ಪ್ರವಾಸಿಗರಿಗೆ ಈ ಕಡಲ ತೀರದ ಭೇಟಿ ಆದರ್ಶಮಯವೆಂದು ಹೇಳಬಹುದು. ಇನ್ನೂ ಮಳೆಗಾಲದ ಸಂದರ್ಭದಲ್ಲಿ ಕಾಪ್ಪಿಲ್ ಕೆರೆಯು ಸಾಕಷ್ಟು ವಿಸ್ತಾರಗೊಂಡು ತನ್ನ ತಾಯಿಯನ್ನು ತಬ್ಬಿಕೊಳ್ಳಲು ಧಾವಿಸುವಂತೆ ಕಡಲ ಬಳಿಯೆ ಬರುವುದು ವಿಶೇಷ.

ಚಿತ್ರಕೃಪೆ: Ikroos

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ರಾಮಚಂಡಿ ಕಡಲತೀರ: ಒಡಿಶಾದ ಪ್ರಖ್ಯಾತ ಕೋನಾರ್ಕ್ ಸೂರ್ಯ ದೇವಸ್ಥಾನದ ಬಳಿ ಇರುವ ರಾಮಚಂಡಿ ಕಡಲ ತೀರವು ಹೆಚ್ಚು ಅನ್ವೇಷಿಸಲ್ಪಡದ ಅಥವಾ ಭೇಟಿ ನೀಡಲ್ಪಡದ ಭಾರತದ ಕಡಲ ತೀರಗಳ ಪೈಕಿ ಒಂದಾಗಿದೆ. ಕಡಲ ತಡಿಯ ಬಳಿ ರಾಮಚಂಡಿಯ ದೇವಸ್ಥಾನವಿದ್ದುದರಿಂದ ಇದಕ್ಕೆ ರಾಮಚಂಡಿ ಕಡಲ ತೀರ ಎಂಬ ಹೆಸರು ಬಂದಿದೆ. ಕಡಲ ಬಳಿ ನೆಲೆಸಿರುವ ಮೀನುಗಾರರು ಮಾತ್ರ ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಕುಶಭದ್ರಾ ನದಿಯು ಇಲ್ಲಿಯೆ ಬಾಯಿ ತೆರೆದುಕೊಳ್ಳುತ್ತದೆ.

ಚಿತ್ರಕೃಪೆ: Sujit kumar

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ತಲಸಾರಿ ಕಡಲತೀರ : ಒಡಿಶಾದ ಉತ್ತರಕ್ಕೆ ಹೊಂದಿಕೊಂಡಂತಿರುವ ಬಂಗಾಳ ಕೊಲ್ಲಿಯ ಕಡಲ ತೀರಗಳ ಪೈಕಿ ತಲಸಾರಿ ಕಡಲ ತೀರ ಕೊನೆಯದು. ರೈಲು ನಿಲ್ದಾಣವಿರುವ ಜಲೇಶ್ವರದಿಂದ ತಲಾಸಾರಿ ಕೇವಲ 36 ಕಿ.ಮೀ ದೂರವಿದ್ದು ಸುಂದರವಾದ ಕಡಲ ತೀರ ಹೊಂದಿದೆ. ಬಾಲೇಶ್ವರ ಜಿಲ್ಲೆಯ ಈ ಕಡಲ ತೀರದ ವಿಶೇಷವೆಂದರೆ ಇದರ ಸುತ್ತಲೂ ಹಸಿರಿನ ಗದ್ದೆಗಳು, ಸಾಲಾಗಿ ನಿಂತಿರುವ ಪಾಮ್ ಮರಗಳು ಹಾಗೂ ಹಿನ್ನೀರಿನ ಮೂಲಗಳನ್ನು ಕಾಣಬಹುದು.

ಚಿತ್ರಕೃಪೆ: Psubhashish

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಇದರ ನೀರು ಅಷ್ಟೊಂದು ಆಳವಿಲ್ಲ, ಇತರೆ ಪ್ರವಾಸಿಗರ ಸದ್ದುಗದ್ದಲಗಳಿಲ್ಲ, ವ್ಯಾಪಾರ-ಖರೀದಿಗಳಂತೂ ಇಲ್ಲವೆ ಇಲ್ಲ. ಕೇವಲ ಇದರ ಕುರಿತು ತಿಳಿದಿರುವ ಕೆಲವೆ ಕೆಲವು ಬಂಗಾಳಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಹಿನ್ನೀರು ಬಹುವಾಗಿ ಆಕ್ರಮಿಸುವುದರಿಂದ ದೋಣಿಯ ಮೂಲಕ ಮುಖ್ಯ ತೀರವನ್ನು ತಲುಪಬಹುದಾಗಿದ್ದು ಉಳಿದ ಸಮಯದಲ್ಲಿ ಹಿನ್ನೀರಿನ ಒಣಗಿದ ಭೂಮಿಯ ಮೇಲೆ ನಡೆಯುತ್ತಲೆ ತೀರ ತಲುಪಬಹುದು.

ಚಿತ್ರಕೃಪೆ: Tuli 100986

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಇನ್ನೊಂದು ವಿಷಯವೆಂದರೆ ಈ ತೀರದಲ್ಲಿ ಕೆಂಪು ಬಣ್ಣದ ಆಕರ್ಷಕ ಏಡಿಗಳ ಉಪಟಳ ಸ್ವಲ್ಪ ಜಾಸ್ತಿ. ನಿಮ್ಮ ಜೊತೆ ಈ ಏಡಿಗಳು ಕಣ್ಣಾಮುಚ್ಚಾಲೆ ಆಡಲು ಬಯಸುತ್ತಿವೆಯೋ ಅನ್ನೊ ತರಹ ಕಂಡುಬರುತ್ತದೆ. ಅಲ್ಲದೆ ಸಮುದ್ರದಲೆಗಳು ಅಬ್ಬರವೂ ಇಲ್ಲವಾದ್ದರಿಂದ ಸುಂದರವಾದ ಹಾಯಾದ ಸಮಯವನ್ನು ಇಲ್ಲಿ ಕಳೆಯಬಹುದು.

ಚಿತ್ರಕೃಪೆ: SupernovaExplosion

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ಅಂಡಮಾನ್ ಸಮೂಹದಲ್ಲಿ ರಾಜಧಾನಿಯಾದ ಪೋರ್ಟ್ ಬ್ಲೇರ್ ನ ಉತ್ತರಕ್ಕೆ ನೆಲೆಸಿರುವ ಬಾರಾಟಾಂಗ್ ನಡುಗಡ್ಡೆಯ ಬಲುದೇರಾ ಕಡಲತೀರ ಏಕಾಂತ ಬಯಸುವ, ರಹಸ್ಯವಾಗಿ ನೆಲೆಸಿರುವ ಸುಂದರ ಕಡಲ ತೀರವಾಗಿದೆ. ಮಧುಚಂದ್ರ ಅರಸಿ ಹೋಗುವ ನವದಂಪತಿಗಳಿಗಂತೂ ಇದು ಸ್ವರ್ಗವೆ ಸರಿ. ಹಿನ್ನೀರು, ಹಚ್ಚಹಸಿರಾದ ಸುತ್ತಲಿನ ದಟ್ಟ ಕಾಡು, ತಂಗಲು ಟ್ರೀ ಹೌಸ್ ನಂತಹ ವಿಶೇಷತೆಗಳು ಇಲ್ಲಿ ದೊರೆಯುತ್ತವಾದರೂ ಭೇಟಿ ನೀಡುವವರ ಸಂಖ್ಯ ಅತಿ ಕಡಿಮೆ ಅಂತಲೆ ಹೇಳಬಹುದು.

ಚಿತ್ರಕೃಪೆ: Gangulybiswarup

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಬೀಚ್ ನಂಬರ್ ಸೆವೆನ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹ್ಯಾವ್ಲಾಕ್ ನಡುಗಡ್ಡೆಯಲ್ಲಿರುವ ಸ್ಥಳೀಯರಿಂದ ರಾಧಾನಗರ ಬೀಚ್ ಎಂದು ಕರೆಯಲ್ಪಡುವ ಬೀಚ್ ನಂಬರ್ ಸೆವೆನ್ ವಾಣಿಜ್ಯೀಕರಣದಿಂದ ಮುಕ್ತಿ ಪಡೆದ, ಏಕಾಂತದಿಂದ ಕೂಡಿದ ಸುಂದರ ಕಡಲ ತೀರವಾಗಿದೆ. ಹೆಚ್ಚು ಜನರಿಲ್ಲದ ಕಾರಣ ಈ ಕಡಲ ತೀರವು ಸಾಕಷ್ಟು ಶಾಂತಿಯುತ ಪರಿಸರ ಹೊಂದಿದ್ದು ಭೇಟಿ ನೀಡುವವರಿಗೆ ಮುದ ನೀಡುತ್ತದೆ.

ಚಿತ್ರಕೃಪೆ: Harvinder Chandigarh

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಸಿಕ್ರೇಟ್ ಬೀಚ್ : ಕೇರಳದ ಅಲಪುಳಾ ಪ್ರಖ್ಯಾ ಪ್ರವಾಸಿ ತಾಣ. ಹಿನ್ನೀರಿಗೆ ಜನಪ್ರೀಯತೆ ಪಡೆದ ಸುಂದರ ಸ್ಥಳ. ಹೀಗಾಗ್ಯೂ ಇಲ್ಲಿರುವ ಸಿಕ್ರೇಟ್ ಬೀಚ್ (ರಹಸ್ಯ ಕಡಲತೀರ) ಕುರಿತು ಹಲವರಿಗೆ ತಿಳಿದಿಲ್ಲ. ಇದು ಅಲೆಪ್ಪಿಯ ಬಳಿಯಲ್ಲೆ ಸ್ಥಿತವಿದ್ದು ಸ್ಥಳೀಯ ಜನರ ಸಹಾಯ/ಮಾರ್ಗದರ್ಶನ ಪಡೆದು ತೆರಳಬಹುದು. ಕಡಲ ತೀರ ನಯನ ಮನೋಹರವಾಗಿದ್ದು ಏಕಾಂತವು ಸಂತಸ ನೀಡುತ್ತದೆ.

ಚಿತ್ರಕೃಪೆ: Christian Haugen

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಕೇವಲ ಕೆಲವು ಮೀನುಗಾರರ ಕುಟುಂಬಗಳು ಮಾತ್ರ ಈ ತೀರದಲ್ಲಿ ಕಂಡುಬರುತ್ತವೆ. ಅಲ್ಲದೆ ಈ ಕಡಲ ತೀರ ಸಾಕಷ್ಟು ವರ್ಣಮಯ ಏಡಿಗಳನ್ನು ಹೊಂದಿದ್ದು ಅವುಗಳು ಎಲ್ಲೆಂದರಲ್ಲಿ ಹಾಯಾಗಿ ವಿಹರಿಸುತ್ತಿರುವುದನ್ನು ನೋಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Christian Haugen

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಮಾರಾರಿ ಕಡಲತೀರ : ಕೇರಳದ ಪ್ರಖ್ಯಾತ ಪ್ರವಾಸಿ ತಾಣ ಅಲ್ಲೆಪ್ಪಿ (ಅಲಪುಳಾ)ಯಿಂದ ಸುಮಾರು 11 ಕಿ.ಮೀ ದೂರದಲ್ಲಿ ಕೊಚ್ಚಿಯ ಬಳಿ ಸ್ಥಿತವಿದೆ. ತುಂಬ ಕಡಿಮೆ ಸಂಖ್ಯೆಯಲ್ಲಿ ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಏಕಾಂತದ ಸುಂದರ ಕಡಲ ತೀರ ಇದಾಗಿದೆ.

ಚಿತ್ರಕೃಪೆ: Mahendra M

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಬಂಗಾರಂ ಕಡಲತೀರ: ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾದ ಲಕ್ಷದ್ವೀಪದ ಬಂಗಾರಂ ನಡುಗಡ್ಡೆಯ ಕಡಲ ತೀರವು ಅಪರುಪದ ಹವಳದ ದಿಬ್ಬಗಳಿಂದ ಸುತ್ತುವರೆದಿದ್ದು ಏಕಾಂತತೆಯ ಮಡಿಲಲ್ಲಿ ಶಾಂತಿಯಿಂದ ನೆಲೆಸಿದ ಸುಂದರ ಕಡಲ ತೀರವಾಗಿದೆ. ಕೇರಳದಿಂದ ಲಕ್ಷದ್ವೀಪದ ಆಗತ್ತಿ ದ್ವೀಪಕ್ಕೆ ವಿಮಾನ ಸಂಚಾರ ಲಭ್ಯವಿದ್ದು ಅಲ್ಲಿಂದ ಬಂಗಾರಂಗೆ ಭೇಟಿ ನೀಡಬಹುದು.

ಚಿತ್ರಕೃಪೆ: Ekabhishek

ರಹಸ್ಯಮಯ ಕಡಲ ತೀರಗಳು:

ರಹಸ್ಯಮಯ ಕಡಲ ತೀರಗಳು:

ಪ್ಯಾರಡೈಸ್ ಬೀಚ್ : ಪಾಂಡಿಚೆರಿ ನಗರ ಕೇಂದ್ರದಿಂದ ತುಸು ದೂರದಲ್ಲಿ ನೆಲೆಸಿರುವ ಈ ಖಾಸಗಿ ಕಡಲ ತೀರದ ಕುರಿತು ಬಹುತೇಕರಿಗೆ ತಿಳಿದಿರಿಲಿಕ್ಕಿಲ್ಲ. ಹೆಸರು ಸೂಚಿಸುವಂತೆಯೆ ಈ ಕಡಲ ತೀರ ಯಾವ ಸ್ವರ್ಗಕ್ಕೂ ಕಮ್ಮಿ ಇಲ್ಲ. ಶಾಂತ ಪರಿಸರ, ತಂಗಲು ಕುಟಿರಗಳು, ತಿನ್ನಲು, ಹೀರಲು ತಿಂಡಿ ತೀರ್ಥಗಳು, ದೋನಿ ಸವಾರಿ ಎಲ್ಲವೂ ಲಭ್ಯ. ಇನ್ನೊಂದು ವಿಶೇಷವೆಂದರೆ ಹಿನ್ನೀರಿನಲ್ಲಿ ದೋಣಿಯ ಮುಲಕವೆ ಈ ತೀರವನ್ನು ತಲುಪಬಹುದು.

ಚಿತ್ರಕೃಪೆ: SEN

Read more about: ಕಡಲ ತೀರ beach
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X