Search
  • Follow NativePlanet
Share
» »ನೃತ್ಯಗ್ರಾಮದ ಒಂದು ನೋಟ

ನೃತ್ಯಗ್ರಾಮದ ಒಂದು ನೋಟ

ದಿನ ನಿತ್ಯದ ಒತ್ತಡದ ಜೀವನದಲ್ಲಿ ನಮ್ಮ ಆಸಕ್ತಿಗಳಿಗೆ ಮಣೆ ಹಾಕುವುದನ್ನೇ ಮರೆತು ಬಿಡುತ್ತೇವೆ. ವಾರದ ರಜೆಯಲ್ಲಿ ನಿಮ್ಮ ಆಸಕ್ತಿಗಳಿಗೆ ಒಮ್ಮೆಯಾದರೂ ಜೀವ ತುಂಬಬೇಕೆನಿಸಿದರೆ ಒಮ್ಮೆ ಇಂತಹ ಜಾಗಕ್ಕೆ ಬನ್ನಿ.

By Divya

ದಿನ ನಿತ್ಯದ ಒತ್ತಡದ ಜೀವನದಲ್ಲಿ ನಮ್ಮ ಆಸಕ್ತಿಗಳಿಗೆ ಮಣೆ ಹಾಕುವುದನ್ನೇ ಮರೆತು ಬಿಡುತ್ತೇವೆ. ವಾರದ ರಜೆಯಲ್ಲಿ ನಿಮ್ಮ ಆಸಕ್ತಿಗಳಿಗೆ ಒಮ್ಮೆಯಾದರೂ ಜೀವ ತುಂಬಬೇಕೆನಿಸಿದರೆ ಒಮ್ಮೆ ಇಂತಹ ಜಾಗಕ್ಕೆ ಬನ್ನಿ. ಶಾಂತವಾದ ವಾತಾವರಣ, ಸುತ್ತಲೂ ಹಸಿರು ಉದ್ಯಾನವನ ಹಾಗೂ ಸುಂದರ ನೃತ್ಯ ದೃಶ್ಯ ಎಲ್ಲವೂ ಮನಸ್ಸನ್ನು ತಿಳಿಗೊಳಿಸುತ್ತವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರುಘಟ್ಟದಲ್ಲಿ ನೆಲೆಗೊಂಡಿರುವ ಈ ತಾಣ ನೃತ್ಯಗಾರರನ್ನು ಹೆಚ್ಚು ಆಕರ್ಷಿಸುತ್ತದೆ. ಏಕೆಂದರೆ ಇದೊಂದು ನೃತ್ಯಗ್ರಾಮ. ನೃತ್ಯಗಾರ್ತಿ ಪ್ರೂತಿಮಾ ಬೇಡಿಯವ ಸಾರಥ್ಯದಲ್ಲಿ 1990ರಂದು ನಿರ್ಮಾಣಗೊಂಡ ಗ್ರಾಮ ಇದು. ಕರ್ನಾಟಕದ ಕಲೆ ಮತ್ತುಸಂಸ್ಕೃತಿಗೆ ಹೆಸರಾದ ತಾಣವಿದು.

Places to Visit Near Nrityagram

PC: wikipedia.org

ಏನೇನಿದೆ?
ನೃತ್ಯ ಗ್ರಾಮವು ಅಲ್ಲಲ್ಲಿ ಪುಟ್ಟ ಪುಟ್ಟ ಮಣ್ಣಿನ ಮನೆಗಳು, ಒಂದು ಸುಂದರವಾದ ದೇವಾಲಯ, ಯೋಗ ಕೇಂದ್ರ ಹಾಗೂ ಅತಿಥಿ ಗೃಹಗಳನ್ನು ಹೊಂದಿದೆ.

Places to Visit Near Nrityagram

PC: wikipedia.org

ವಿಶೇಷತೆ ಏನು?
ಇಲ್ಲಿಗೆ ಬಂದ ಪ್ರವಾಸಿಗರು ಗುರುಕುಲಕ್ಕೆ ಭೇಟಿ ನೀಡಿಯೇ ಹೋಗಬೇಕು. ಗುರುಕುಲಗಳು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕುಚಿಪುಡಿ, ಕಥಕ್ಕಳಿ ಮತ್ತು ಮಣಿಪುರಿ ಪ್ರಕಾರಗಳಿಗೆ ತರಬೇತಿ ನೀಡುತ್ತವೆ. ಇಲ್ಲಿ ಪುರಾತನ ಕಾಲದ ಗುರು-ಶಿಷ್ಯ ಪರಂಪರೆಯನ್ನು ಪಾಲಿಸಲಾಗುತ್ತದೆ.

Places to Visit Near Nrityagram

PC: wikipedia.org

ಇತರ ಆಕರ್ಷಣೆ
ನೃತ್ಯ ಗ್ರಾಮವು ಬೆಂಗಳೂರು ನಗರ ದಿಂದ 34.8 ಕಿ.ಮೀ. ದೂರದಲ್ಲಿದೆ. ಆಧುನಿಕ ಕುದುರೆ ಸವಾರಿ ಶಾಲೆ, ರಮಣೀಯ ಮ್ಯೂಸಿಯಂ, ರಾಕ್‍ಲೈನ್ ಮಾಲ್‍ಗಳು ಇದಕ್ಕೆ ಹತ್ತಿರವೇ ಇರುವುದರಿಂದ ಇಲ್ಲಿಗೂ ಒಮ್ಮೆ ಭೇಟಿ ನೀಡಬಹುದು.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X