Search
  • Follow NativePlanet
Share
» »ನೀನೊಬ್ಬಳೇ ಹೋಗಬಹುದು...

ನೀನೊಬ್ಬಳೇ ಹೋಗಬಹುದು...

ಕೆಲವೊಮ್ಮೆ ದುಃಖದಲ್ಲಿದ್ದಾಗ ಅಥವಾ ತುಂಬಾ ಖುಷಿಯಲ್ಲಿದ್ದಾಗ ಒಬ್ಬಂಟಿಯಾಗಿರಬೇಕು ಎಂದನಿಸುತ್ತದೆ. ಎಲ್ಲಾದರೂ ದೂರ ಪ್ರವಾಸ ಕೈಗೊಳ್ಳಬೇಕು ಎನ್ನುವ ಭಾವನೆ ಕಾಡುವುದೂ ಉಂಟು.

By Divya

ಕೆಲವೊಮ್ಮೆ ದುಃಖದಲ್ಲಿದ್ದಾಗ ಅಥವಾ ತುಂಬಾ ಖುಷಿಯಲ್ಲಿದ್ದಾಗ ಒಬ್ಬಂಟಿಯಾಗಿರಬೇಕು ಎಂದನಿಸುತ್ತದೆ. ಎಲ್ಲಾದರೂ ದೂರ ಪ್ರವಾಸ ಕೈಗೊಳ್ಳಬೇಕು ಎನ್ನುವ ಭಾವನೆ ಕಾಡುವುದೂ ಉಂಟು. ಆದರೆ ಸುತ್ತಲಿನ ಜನರು ಆಡುವ ಮಾತು ಅಥವಾ ತಿಳಿಯದ ಊರಿನ ಪರಿಸರ ಒಮ್ಮೆ ಭಯವನ್ನುಂಟುಮಾಡಿ ಬಿಡುತ್ತವೆ. ಪುರುಷರಾದರೆ ಯಾರ ಹಂಗಿಲ್ಲದೆ ಹೋಗಬಹುದು. ಅದೇ ಮಹಿಳೆ ಎಂದರೆ ಕೊಂಚ ಭಯ.

ನಿಜ, ಇಂತಹ ಭಾವನೆಗಳನ್ನು ಗಾಳಿಗೆ ತೂರಿಬಿಟ್ಟು ಒಂಟಿಯಾಗಿ ಪ್ರವಾಸ ಕೈಗೊಳ್ಳಲು ಕರ್ನಾಟಕದೆಲ್ಲೆಡೆ ಹಲವು ಪ್ರದೇಶಗಳಿವೆ. ಅವುಗಳನ್ನು ನೋಡಲು ಹೊರಡುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಸಾಕು.

* ಎಲ್ಲೆಲ್ಲಿಗೆ ಹೋಗಬೇಕು ಎನ್ನುವ ರಸ್ತೆ ಮಾರ್ಗವನ್ನು ಮೊದಲು ತಿಳಿದುಕೊಳ್ಳಬೇಕು.
* ಚಾರಣಕ್ಕೆ ಬೇಕಾದ ಉಡುಗೆ, ದೇಗುಲಕ್ಕೆ ಬೇಕಾದ ಸಾಂಪ್ರದಾಯಿಕ ಉಡುಗೆಯನ್ನು ತೆಗೆದುಕೊಳ್ಳಲು ಮರೆಯಬಾರದು.
* ವಸತಿ ವ್ಯವಸ್ಥೆಗೆ ಮೊದಲೇ ಮೀಸಲು ವ್ಯವಸ್ಥೆ ಮಾಡಿರಬೇಕು.
* ಕೆಲವು ಅಗತ್ಯ ಸಲಕರಣೆಗಳನ್ನು ಕೊಂಡೊಯ್ಯಲು ಮರೆಯಬಾರದು.

ಹಂಪಿ

ಹಂಪಿ

ವಿಶ್ವ ಪರಂಪರೆಯ ತಾಣ ಹಂಪಿ. ಕರ್ನಾಟಕದಲ್ಲಿ ನೋಡಲೇ ಬೇಕಾದ ಈ ಸ್ಥಳ ಸುಂದರ ಇತಿಹಾಸವನ್ನು ಹೊಂದಿದೆ. ಇಲ್ಲಿರುವ ಮಂದಿಗಳು ಹೆಚ್ಚು ಸ್ನೇಹ ಜೀವಿಗಳಾಗಿರುವುದರಿಂದ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಗೌರವವನ್ನು ತೋರಿಸುತ್ತಾರೆ. ಹಾಗಾಗಿ ಮಹಿಳೆಯರು ಯಾವುದೇ ಅಂಜಿಕೆಯಿಲ್ಲದೆ ಹಂಪಿಯನ್ನು ಸುತ್ತಬಹುದು. ಇಲ್ಲಿರುವ ಆನೆಗುಂಡಿ, ವಿರೂಪಾಕ್ಷ ದೇಗುಲ ಹಾಗೂ ಕಡಲೆಕಾಳು ಗಣಪತಿ ದೇವಸ್ಥಾನ ನೋಡುವಂತಿದೆ. ಹೋಟೆಲ್ ಹಾಗೂ ಅತಿಥಿ ಗೃಹಗಳು ಹೇರಳವಾಗಿರುವುದರಿಂದ ಅನುಕೂಲಕ್ಕೆ ತಕ್ಕಂತೆ ಇರಬಹುದು.

ಕೂರ್ಗ್

ಕೂರ್ಗ್

ಮಹಿಳೆ ಒಬ್ಬಂಟಿಯಾಗಿ ಪ್ರವಾಸ ಕೈಗೊಳ್ಳಲು ಕೂರ್ಗ್ ಒಂದು ಅದ್ಭುತವಾದ ಆಯ್ಕೆ. ದಾರಾಳವಾಗಿ ಸಿಗುವ ವಸತಿ ಹಾಗೂ ವಾಹನ ವ್ಯವಸ್ಥೆಯಿಂದ ಆರಾಮವಾಗಿ ಸುತ್ತಾಡಬಹುದು. ಅದ್ಭುತ ಹಾಗೂ ವಿಭಿನ್ನ ಶೈಲಿಯ ಸಸ್ಯಹಾರಿ ಊಟಗಳು ಬಾಯಲ್ಲಿ ನೀರು ತರಿಸುತ್ತವೆ. ನೋಡಲೇ ಬೇಕಾದ ಸ್ಥಳವೆಂದರೆ ರಾಜಾ ಸೀಟ್, ಇರುಪ್ಪು ಜಲಪಾತ, ಅಬ್ಬೆ ಜಲಪಾತ ಮತ್ತು ತಲಕಾವೇರಿ.
PC: flickr.com

ಮೈಸೂರು

ಮೈಸೂರು

ಒಬ್ಬಂಟಿ ಮಹಿಳೆ ಹೋಗಬಹುದಾದ ಇನ್ನೊಂದು ಸುಂದರ ತಾಣ ಸಾಂಸ್ಕøತಿಕ ನಗರ ಮೈಸೂರು. ಮೃದು ಮಾತಿನ ಜನಗಳು ಹಾಗೂ ಅಷ್ಟೇ ಸೊಗಸಾದ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ನೋಡಬಹುದು. ಅನುಕೂಲಕರ ದರದಲ್ಲಿಯೇ ಆಟೋ ಹಾಗೂ ಟ್ಯಾಕ್ಸಿಗಳು ಸಿಗುವುದರಿಂದ ಯಾವ ಗೊಂದಲವಿಲ್ಲದೆ ಖುಷಿಯಲ್ಲಿ ಓಡಾಡಬಹುದು. ಇಲ್ಲಿಯ ಮೈಸೂರು ಅರಮನೆ, ಪ್ರಾಣಿ ಸಂಗ್ರಹಾಲಯ, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಬೃಂದಾವನ ಉದ್ಯಾನವನವನ್ನು ಮಿಸ್ ಮಾಡದೇ ನೋಡಬೇಕು. ಹೋಮ್ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಯಾವುದು ಬೇಕಾದರೂ ಪಡೆಯಬಹುದು.
PC: flickr.com

ಚಿಕ್ಕಮಗಳೂರು

ಚಿಕ್ಕಮಗಳೂರು

ಕರ್ನಾಟಕದ ಕಾಫಿ ತೋಟ ಎಂದೇ ಪ್ರಸಿದ್ಧಿ ಪಡೆದ ಚಿಕ್ಕಮಗಳೂರು, ಒಬ್ಬಂಟಿಯಾಗಿ ಪ್ರವಾಸ ಗೈವ ಮಹಿಳಾ ಮಣಿಗಳಿಗೊಂದು ಸುಂದರ ತಾಣ. ಇದು ಕೇವಲ ಹಸಿರು ಸಿರಿಗಳಿಗೊಂದೇ ಪ್ರಸಿದ್ಧ ತಾಣವಲ್ಲ. ಇಲ್ಲಿಯ ಜನರು ಹೆಚ್ಚು ಶಾಂತ ಹಾಗೂ ಸ್ನೇಹ ಸ್ವಭಾವದ ಮಂದಿಗಳಿಗೂ ಇದು ಹೆಸರುವಾಸಿ. ಕಾಫಿ ಗಿಡಗಳ ನಡುವೆ ಮುಂಜಾನೆ ನಡೆದು ಸಾಗುತ್ತಿದ್ದರೆ ಅದರಲ್ಲಿರುವ ಆನಂದದ ಪರಿಯೇ ಬೇರೆ. ಇಲ್ಲಿರುವ ಬಾಬಾ ಬುಡನ್ ಗಿರಿ, ಮುಳ್ಳಯ್ಯನ ಗಿರಿ, ಕುದುರೆ ಮುಖ, ಕಲ್ಲಟ್ಟಿ ಜಲಪಾತವು ನಯನ ಮನೋಹರವಾಗಿದೆ.
PC: flickr.com

ಶಿವಮೊಗ್ಗ

ಶಿವಮೊಗ್ಗ

ಹಸಿರು ಸಿರಿಯಲ್ಲಿ ಕುಳಿತಿರುವ ಈ ತಾಣಕ್ಕೆ ಹೋಗುವುದು ಸುಲಭ. ಅನೇಕ ಐತಿಹಾಸಿಕ ಸ್ಥಳಗಳು, ನಿಸರ್ಗದ ಸುಂದರ ದೃಶ್ಯಗಳನ್ನು ಹೊಂದಿರುವ ಇಲ್ಲಿ ವಸತಿ ವ್ಯವಸ್ಥೆಯೂ ಸುಲಭವಾಗಿ ದೊರೆಯುತ್ತದೆ. ಇಲ್ಲಿ ಕಣ್‍ಸೂರೆಗೊಳಿಸುವ ಜೋಗ ಜಲಪಾತ, ಕೆಳದಿ, ಇಕ್ಕೇರಿ, ಕವಳೆದುರ್ಗ, ಕೊಡಚಾದ್ರಿಯನ್ನು ತಪ್ಪದೆ ನೋಡಬೇಕು.
PC: flickr.com

ಉಡುಪಿ

ಉಡುಪಿ

ಉಡುಪಿ ಎಂದಿಗೂ ಸ್ನೇಹಮಯಿಯಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಅನೇಕ ಸಮುದ್ರ ತೀರಗಳು ಹಾಗೂ ಪವಿತ್ರ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು. ಕೆಲವೊಂದು ದೇಗುಲಗಳಲ್ಲಿ ಮಹಿಳೆಯರು ಜೀನ್ಸ್, ಶಾಟ್ರ್ಸ್‍ಗಳನ್ನು ಧರಿಸುವಂತಿಲ್ಲ. ಉಡುಪಿಯ ಶ್ರೀಕೃಷ್ಣ ದೇಗುಲದಲ್ಲಿ ದೊರೆಯುವ ಊಟವನ್ನು ಮಿಸ್ ಮಾಡ್ಕೋಬೇಡಿ. ಇಲ್ಲಿರುವ ಉಡುಪಿ ಕೃಷ್ಣ ದೇಗುಲ, ಮಲ್ಪೆ ಸಮುದ್ರ, ಕಾಪು ಸಮುದ್ರ ತೀರ, ಕುಡ್ಲು ಜಲಪಾತ, ಅನಂತೇಶ್ವರ ದೇಗುಲವು ಹೆಚ್ಚು ಪ್ರಸಿದ್ಧಿ ಪಡೆದಿದೆ.
PC: flickr.com

ಉತ್ತರ ಕನ್ನಡ

ಉತ್ತರ ಕನ್ನಡ

ಸಹ್ಯಾದ್ರಿಯ ಸಾಲು ಹಾಗೂ ಕರಾವಳಿ ತೀರ ಎರಡನ್ನೂ ಒಳಗೊಂಡ ಉತ್ತರ ಕನ್ನಡದಲ್ಲಿ ಜಲಧಾರೆಗಳು, ಸಮುದ್ರ ತೀರಗಳು, ದೇವಾಲಯಗಳು ಹಾಗೂ ಚಾರಣ ಮಾಡುವ ತಾಣಗಳು ಹಲವಾರಿವೆ. ಇಲ್ಲಿಗೆ ಬಂದರೆ ಯಾವುದು ನೋಡಬೇಕು, ಯಾವುದು ಬಿಡಬೇಕು ಎನ್ನುವ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಸ್ನೇಹ ಜೀವಿಗಳಾದ ಇಲ್ಲಿಯ ಮಂದಿ ಪ್ರವಾಸಿಗರನ್ನು ಹೆಚ್ಚು ಗೌರವದಿಂದ ಕಾಣುತ್ತಾರೆ. ಸಾರಿಗೆ ವ್ಯವಸ್ಥೆ, ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಗೋಕರ್ಣ, ಮುರುಡೇಶ್ವರ, ಮಾಗೋಡು ಜಲಪಾತ, ಶಿರಸಿ ಮಾರಿಕಾಂಬ ಹಾಗೂ ಯಾಣ ನೋಡುವಂತಹ ಸ್ಥಳಗಳು.
PC: wikimedia.org

Read more about: udupi hampi coorg mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X