Search
  • Follow NativePlanet
Share
» »ಆಂಧ್ರದ 9 ಮುಖ್ಯ ಲಕ್ಷ್ಮಿನರಸಿಂಹ ದೇವಾಲಯಗಳು

ಆಂಧ್ರದ 9 ಮುಖ್ಯ ಲಕ್ಷ್ಮಿನರಸಿಂಹ ದೇವಾಲಯಗಳು

By Vijay

ಆಂಧ್ರಪ್ರದೇಶವು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ರಾಜ್ಯವಾಗಿದೆ. ಕಡಲ ತೀರದಿಂದ ಹಿಡಿದು ಚಾರಣದಂತಹ ಚಟುವಟಿಕೆಗಳನ್ನು ಆಸ್ವಾದಿಸಬಹುದಾದ ಅನೇಕ ಸೊಗಸಾದ ಪ್ರವಾಸಿ ತಾಣಗಳನ್ನು ರಾಜ್ಯದಲೆಲ್ಲ ಕಾಣಬಹುದು. ಅದರಂತೆ ಧಾರ್ಮಿಕ ಆಕರ್ಷಣೆಗಳಿಗೂ ಇಲ್ಲೇನೂ ಕೊರತೆ ಇಲ್ಲ.

ಸಿಂಹಾಚಲಂ ಹಾಗೂ ಭದ್ರಾಚಲಂ ವಿಶೇಷತೆ

ಲಕ್ಷ್ಮಿ ನರಸಿಂಹನ ದೇವಾಲಯಗಳು ಮೊದಲಿನಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದ ಸ್ಥಳಗಳಾಗಿವೆ. ಶೈವರಾಗಲಿ, ವೈಷ್ಣವರಾಗಲಿ ಎಲ್ಲರೂ ಈ ದೇವಾಲಯಗಳಿಗೆ ನಡೆದುಕೊಳ್ಳುತ್ತಾರೆ. ದಂತ ಕಥೆಯ ಪ್ರಕಾರವಾಗಿ ಭೂಮಿಯಲ್ಲಿ ಹಿರಣ್ಯಕಶಿಪುವಿನ ಕೃರತನ ಹೆಚ್ಚಾಗಿ ಆತನನ್ನು ಸಂಹರಿಸಲು ಮಹಾ ವಿಷ್ಣು ಸ್ವತಃ ಅರ್ಧ ಸಿಂಹ ಹಾಗೂ ಅರ್ಧ ಮನುಷ್ಯನ ರೂಪದ ನರಸಿಂಹನಾಗಿ ಜನ್ಮ ಎತ್ತಿದ್ದು ಎಲ್ಲರಿಗೂ ಗೊತ್ತು.

ಹೀಗಾಗಿ ಸದಾ ಸೌಮ್ಯ ಮುಖದಿಂದ ಕೂಡಿರುವ ವಿಷ್ಣುವಿನ ಭಯಂಕರ ರೂಪವು ನರಸಿಂಹನ ರೂಪದಲ್ಲಿ ಅನಾವರಣಗೊಳ್ಳುತ್ತದೆ ಮತ್ತು ನರಸಿಂಹ ದೇವರಿಗೆ ಮುಡಿಪಾದ ಸಾಕಷ್ಟು ದೇವಾಲಯಗಳು ಭಾರತದಾದ್ಯಂತ ಇರುವುದನ್ನು ಕಾಣಬಹುದು. ಆದಾಗ್ಯೂ ಆಂಧ್ರದಲ್ಲಿರುವ ಲಕ್ಷ್ಮಿ ಸಮೇತನಾಗಿ ನೆಲೆಸಿರುವ ಒಂಭತ್ತು ಮುಖ್ಯ ದೇವಾಲಯಗಳಿದ್ದು ಅವುಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ವಿ.ಸೂ: ಇದರಲ್ಲಿ ಎರಡು ದೇವಾಲಯಗಳು ಮಾತ್ರ ನೂತನವಾಗಿ ರೂಪಗೊಂಡ ತೆಲಂಗಾಣ ರಾಜ್ಯದಲ್ಲಿ ಬರುತ್ತವೆ.

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

1. ಅಹೋಬಿಲಂ : ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ ಹಿರಣ್ಯಕಶಿಪುವಿನನ್ನು ಸಂಹರಿಸಲು ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ನರಸಿಂಹನಾಗಿ ಅವತರಿಸಿದ್ದು ಈ ಸ್ಥಳದಲ್ಲಿಯೆ. "ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Skrishnankec

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಅಹೋಬಿಲಂ ಕ್ಷೇತ್ರದಲ್ಲಿ ವಿವಿಧ ದಿಕ್ಕುಗಳಲ್ಲಿ ನಿರ್ಮಿಸಲಾಗಿರುವ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಒಂಭತ್ತು ದೇವಾಲಯಗಳಿವೆ. ಇವುಗಳನ್ನು ನವ ನರಸಿಂಹ ಕ್ಷೇತ್ರಗಳೆಂದು ಕರೆಯುತ್ತಾರೆ. ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿರುವ ಈ ದೇವಾಲಯಗಳು ಅತ್ಯದ್ಭುತ ಶಿಲ್ಪಕಲೆಗೆ ಉದಾಹರಣೆಯಾಗಿದ್ದು ಸ್ತಪತಿಯರ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರಕೃಪೆ: RameshSharma1

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಇಲ್ಲಿನ ಕೆಲವು ದೇವಾಲಯಗಳು ಗುಹೆಗಳೊಳಗಿದ್ದರೆ ಇನ್ನಿತರೆ ದೇವಾಲಯಗಳನ್ನು ಟ್ರೆಕ್ ಮಾಡಿ ತಲುಪಬಹುದಾಗಿದೆ. ಟ್ರೆಕ್ ಸಮಯದಲ್ಲಿ ಪ್ರದೇಶದ ಸುಂದರ ಪರಿಸರವನ್ನು ಕಣ್ತುಂಬ ಸವಿಯುತ್ತ ಸಾಗಬಹುದು. ಆದರೆ ಗಮನವಿರಲಿ ಕೆಲವು ಟ್ರೆಕ್ ಗಳು ಕಠಿಣವಾಗಿವೆ.

ಚಿತ್ರಕೃಪೆ: Gopal Venkatesan

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಮನುಷ್ಯನ ಜೀವನ ನಿರ್ಧರಿಸುವ 9 ಗೃಹಗಳು ತಮಗಂಟಿದ ಶಾಪಗಳು ಹಾಗೂ ಶತ್ರುಗಳಿಂದ ಮುಕ್ತಿ ಪಡೆಯಲು ಇಲ್ಲಿನ ಈ ಒಂಭತ್ತು ನರಸಿಂಹ ಸ್ಥಾನಗಳನ್ನು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಅಹೋಬಿಲಂ ಆಂಧ್ರದ ಕರ್ನೂಲ್ ಜಿಲ್ಲೆಯ ಅಲ್ಲಗಡ್ಡ ತಾಲೂಕಿನಲ್ಲಿದೆ.

ಚಿತ್ರಕೃಪೆ: Gopal Venkatesan

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

2. ಯದಗಿರಿಗುಟ್ಟ : ತೆಲಂಗಾಣ ರಾಜ್ಯದ ಯದಗಿರಿಗುಟ್ಟಾದಲ್ಲಿರುವ ಲಕ್ಷ್ಮಿ ನರಸಿಂಹ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿ ವರ್ಷ ಜರುಗುವ ಬ್ರಹ್ಮೋತ್ಸವವು ಸಾಕಷ್ಟು ವಿಜೃಂಭಣೆಯಿಂದ ಕೂಡಿರುತ್ತದೆ.

ಚಿತ್ರಕೃಪೆ: Adityamadhav83

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

3. ಮಲ್ಯಾದ್ರಿ : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಲಕೊಂಡ ಎಂಬಲ್ಲಿರುವ ಮಲ್ಯಾದ್ರಿ ಲಕ್ಷ್ಮಿ-ನರಸಿಂಹಸ್ವಾಮಿ ದೇವಾಲಯವು ನರಸಿಂಹ ದೇವರು ನೆಲೆಸಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Bshankar31

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

4. ಸಿಂಹಾಚಲಂ : ಆಂಧ್ರದಲ್ಲಿರುವ ಸಿಂಹಾಚಲಂ ಶ್ರೀಕ್ಷೇತ್ರವು ವಿಷ್ಣುವಿನ ಉಗ್ರಾವತಾರವಾದ ನರಸಿಂಹ (ಮಾನವ ದೇಹ ಸಿಂಹದ ಮುಖ) ದೇವರಿಗೆ ಮುಡಿಪಾದ ದೇವಾಲಯದಿಂದ ಮಹತ್ವ ಪಡೆದಿದೆ. ಸಿಂಹಾಚಲಂ, ಆಂಧ್ರದ ಪ್ರಮುಖ ಬಂದರು ಪಟ್ಟಣ ವಿಶಾಖಾಪಟ್ಟಣಂ (ವೈಜಾಗ್) ನಲ್ಲಿದ್ದು ನಗರ ಕೇಂದ್ರದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Sureshiras

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಸಿಂಹಾಚಲಂ ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ ವೈಜಾಗ್ ನಗರ ವಲಯದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಸ್ಥಳವು ವಿಷ್ಣು ಭಕ್ತರಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ವಿಷ್ಣುವಿನ ಅವತಾರವಾದ ಉಗ್ರನರಸಿಂಹನ ದರ್ಶನ ಕೋರಿ ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿರುವ ಸಿಂಹಾಲಂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Santoshvatrapu

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಸಿಂಹಾಚಲಂನಲ್ಲಿರುವ ನರಸಿಂಹ ದೇವರಿಗೆ ಮುಡಿಪಾದ ದೇವಾಲಯವು ಹದಿನೆಂಟು ನರಸಿಂಹ ಕ್ಷೇತ್ರಗಳ ಪೈಕಿ ಒಂದಾಗಿದೆ. ನರಸಿಂಹ ಒಂದು ವಿಶಿಷ್ಟವಾದ ವಿಷ್ಣುವಿನ ಅವತಾರದ ದೇಹ ರಚನೆಯಾಗಿದೆ. ದೇಹವು ಸದೃಢವಾದ ಮಾನವ ಶರೀರ ಹೊಂದಿದ್ದರೆ, ತಲೆಯ ಭಾಗವು ಸಿಂಹದ ಮುಖ ಹೊಂದಿದೆ.

ಚಿತ್ರಕೃಪೆ: Adityamadhav83

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

5. ಧರ್ಮಪುರಿ ಭಾರ್ಗವ ನರಸಿಂಹ : ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯಲ್ಲಿರುವ ಧರ್ಮಪುರಿ ಪಟ್ಟಣದಲ್ಲಿ ಭಾರ್ಗವ ಲಕ್ಷ್ಮಿ ನರಸಿಇಂಹನ ದೇವಾಲಯ್ಯವಿದೆ. ನರಸಿಂಹನ ದರ್ಶನ ಕೋರಿ ಅಕ್ಕ ಪಕ್ಕದ ರಾಜ್ಯಗಳಿಂದ ಸಾಕಷ್ಟು ಜನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Bshankar31

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

6. ವೇದಾದ್ರಿ ಲಕ್ಷ್ಮಿ ನರಸಿಂಹ : ವೇದಾದ್ರಿ ಆಂಧ್ರಪ್ರದೇಶ ರಾಜ್ಯದ ಕೃಷ್ಣಾ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಇಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿಯ ದೇವಾಲಯವು ಸಾಕಷ್ಟು ಪ್ರಸಿದ್ಧಿಗಳಿಸಿದೆ ಹಾಗೂ ಪ್ರತಿ ವರ್ಷ ಈ ದೇವಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ದೇವಾಲಯವು ಕೃಷ್ಣಾ ನದಿ ತಟದಲ್ಲಿದೆ.

ಚಿತ್ರಕೃಪೆ: Nagasrinivasarao

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

7. ಲಕ್ಷ್ಮಿ ನರಸಿಂಹ ದೇವಾಲಯ, ಅಂತರ್ವೇದಿ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಸಖಿನೇತಿ ಪಲ್ಲಿಯಲ್ಲಿರುವ ಅಂತರ್ವೇದಿ ಒಂದು ಕರಾವಳಿ ಗ್ರಾಮ. ಇದು ತನ್ನಲ್ಲಿರುವ ಲಕ್ಷ್ಮಿ ನರಸಿಂಹ ದೇವಾಲಯ ಹಾಗೂ ಕಡಲ ತೀರದಿಂದಾಗಿ ಆಕರ್ಷಕ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: { pranav }

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಗೋದಾವರಿಯ ಉಪನದಿಯಾದ ವಸಿಷ್ಠ ನದಿಯು ಬಂಗಾಳ ಕೊಲ್ಲಿಯಲ್ಲಿ ಸೇರುವ ಸ್ಥಳದಲ್ಲಿ ಲಕ್ಷ್ಮಿ-ನರಸಿಂಹರ ಈ ದೇವಾಲಯವಿದ್ದು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಕಡಲ ತೀರವೂ ಇರುವುದರಿಂದ ಕೌಟುಂಬಿಕ ಪ್ರವಾಸಕ್ಕೂ ಸಹ ಉತ್ತಮವಾಗಿದೆ.

ಚಿತ್ರಕೃಪೆ: kiran kumar

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

8. ಮಂಗಳಗಿರಿ ಲಕ್ಷ್ಮಿ ನರಸಿಂಹ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಮಂಗಳಗಿರಿಯು ಒಂದು ಪಟ್ಟಣ ಪ್ರದೇಶವಗಿದ್ದು ಇಲ್ಲಿರುವ ಲಕ್ಷ್ಮಿ ನರಸಿಂಹ ದೇವಾಲಯವು ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Adityamadhav83

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

ಪ್ರಮುಖ 9 ಲಕ್ಷ್ಮಿ-ನರಸಿಂಹ ದೇವಾಲಯಗಳು:

9. ಪೆಂಚಲಕೋನ ನರಸಿಂಹಸ್ವಾಮಿ : ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪೂರು ತಾಲೂಕಿನಲ್ಲಿರುವ ಪೆಂಚಲಕೋನ ಎಂಬ ಗ್ರಾಮದಲ್ಲಿರುವ ನರಸಿಂಹಸ್ವಾಮಿಯ ದೇವಾಲಯ ಇದಾಗಿದೆ. ಪ್ರತೀತಿಯಂತೆ ಹಿರಣ್ಯಕಶಿಪುವನ್ನು ಕೊಂದ ನರಸಿಂಹನು ಉಗ್ರನಾಗಿ ಅರಚುತ್ತ ಈ ಸ್ಥಳಕ್ಕೆ ಬಂದು ಶಾಂತನಾಗಿ ತನ್ನ ನರಸಿಂಹ ಅವತಾರದಿಂದ ಹೊರಬಂದನೆಮ್ದು ಹೇಳಲಾಗುತ್ತದೆ.

ಚಿತ್ರಕೃಪೆ: Chandu3782

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X