Search
  • Follow NativePlanet
Share
» »ಭಾರತದ 50 ಅತ್ಯದ್ಭುತ ಪ್ರವಾಸ ಚಿತ್ರಗಳು

ಭಾರತದ 50 ಅತ್ಯದ್ಭುತ ಪ್ರವಾಸ ಚಿತ್ರಗಳು

By Vijay

ಕೆ.ಎಸ್ ನರಸಿಂಹಸ್ವಾಮಿಯವರ ಕವನ, "ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ ಚೆಂದ ನಿನಗಾವುದೆಂದು" ಎಂಬಂತೆ ಈ ಊರು ಚೆಂದವೋ ಆ ಊರು ಚೆಂದವೋ...ಯಾವ ಸ್ಥಳಕ್ಕೆ ಭೇಟಿ ನೀಡಲಿ...ಎಂಬ ಗೊಂದಲದ ಹುಳುಗಳು ಪ್ರವಾಸ ಹೋಗ ಬೇಕೆಂದು ಮನಸು ಬಯಸಿದಾಗ ನಿಮ್ಮನ್ನು ಆವರಿಸುವುದು ಖಂಡಿತ. ಕೆಲ ಸ್ಥಳಗಳು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದರೆ, ಇನ್ನೂ ಕೆಲವು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತ ಚುಂಬಕದಂತೆ ಸೆಳೆಯುತ್ತವೆ. ಆದರೆ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಸ್ಥಳಗಳು ನಿಗದಿಗೊಳಿಸಲ್ಪಡುತ್ತವೆ.

ಪ್ರವಾಸದ ಪ್ರಥಮ ಉದ್ದೇಶವೆಂದರೆ ನಮ್ಮ ಮನದ ಒತ್ತಡವನ್ನು ಕಡಿಮೆ ಮಾಡಿಕೊಂಡು ಮತ್ತೆ ಉತ್ಸಾಹ ಹಾಗೂ ಸಂತೋಷವನ್ನು ಪಡೆಯುವುದಾಗಿರುತ್ತದೆ. ದ್ವಿತೀಯವಾಗಿ ಸ್ಥಳದ ಮನಮೋಹಕತೆ, ಹಿತಕರವಾದ ಪರಿಸರ ನಮ್ಮವರೊಂದಿಗೆ ಬೆರೆತು ಅನುಭವಿಸುವುದಾಗಿರುತ್ತದೆ. ಇಂದಿನ ರಭಸದ ಜೀವನದಲ್ಲಿ ಮುಖದ ಮೇಲಿನ ನಗೆ, ಆತ್ಮೀಯರೊಂದಿಗಿನ ಬಾಂಧವ್ಯದ ಸಂಕೋಲೆಯನ್ನು ಮರೆತಿರುವ ನಮಗೆ ಪ್ರವಾಸವೊಂದೆ ಅತಿ ಶೀಘ್ರ ಪರಿಣಾಮ ಒದಗಿಸಬಲ್ಲ ಚೇತೋಹಾರಿ ಪರಿಹಾರವಾಗಿದೆ. ಹೌದು, ಮನುಷ್ಯ ಏಷ್ಟೆ ಆಗಲಿ ಸಂಘ ಜೀವಿ ಅಲ್ಲವೆ? ಪ್ರೀತಿ ಹಾಗೂ ಸಂತೋಷವನ್ನೆ ತಮ್ಮವರಿಂದ ಬಯಸುತ್ತಾನಲ್ಲವೆ? ಇವೆಲ್ಲವೂ ಪರಿಣಾಮಾತ್ಮಕವಾಗಿ ಸಿಗುವುದು ಪ್ರವಾಸದಲ್ಲಿ ಮಾತ್ರ.

ಪ್ರವಾಸದ ಮತ್ತೊಂದು ಪ್ರಮುಖ ಆಯಾಮವೆಂದರೆ ನಾವು ಯಾವುದೆ ಸ್ಥಳಗಳಿಗೆ ಭೇಟಿ ನೀಡಲಿ ಅಲ್ಲಿನ ಸೌಂದರ್ಯವು ಸದಾ ನೆನಪಿನಲ್ಲುಳಿಯುವಂತೆ ಮಾಡಿಕೊಳ್ಳುವುದು. ಅದಕ್ಕಾಗಿಯೆ ಬಹುತೇಕ ಜನರು ಕ್ಯಾಮೆರಾಗಳಿಲ್ಲದೆ ಪ್ರವಾಸ ಮಾಡುವುದೆ ಇಲ್ಲ. ಮೊದಲೇ ಪ್ರವಾಸ ಹೊರಡುವುದೆಂದರೆ ಇಷ್ಟ ಅದರಲ್ಲೂ ಸ್ಥಳಗಳ ಚಿತ್ರಗಳನ್ನು ಸ್ನೇಹಿತರೊಂದಿಗೆ, ಬಂಧುಗಳೊಂದಿಗೆ ಹಂಚಿಕೊಳ್ಳುವುದೆಂದರೆ...ಆಗುವ ಆನಂದ ಅಷ್ಟಿಷ್ಟಲ್ಲ. ಆದರೆ ಪ್ರವಾಸಿ ಸ್ಥಳಗಳ ಅಂದ ಚೆಂದವನ್ನು ಪರಿಣಾಮಾತ್ಮಕವಾಗಿ ಕ್ಯಾಮೆರಾ ಕಣ್ಣುಗಳಲ್ಲಿ ಹಿಡಿಯುವುದೂ ಒಂದು ಸವಾಲು. ಅದಕ್ಕೆ ಸಾಕಷ್ಟು ಸಂಯಮ, ತಾಳ್ಮೆಗಳಲ್ಲದೆ ಕಲಾತ್ಮಕತೆಯ ಮನಸ್ಸು ಇರಬೇಕು.

ಪ್ರಸ್ತುತ ಲೆಖನವು ಭಾರತದ ವಿವಿಧ ಸ್ಥಳಗಳ ಸೌಂದರ್ಯದ ಪರಾಕಾಷ್ಟೆಯನ್ನು ಸಾರುವ 50 ಅದ್ಭುತ ಪ್ರವಾಸಿ ಚಿತ್ರಗಳ ಸವಾರಿಯನ್ನು ನಿಮಗೆ ಮಾಡಿಸುತ್ತದೆ. ನೀವು ನೋಡಿ ಆನಂದಿಸಿ.

ಬಂಕಾಪುರ ನವಿಲು ಧಾಮ:

ಬಂಕಾಪುರ ನವಿಲು ಧಾಮ:

ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿನ ನವಿಲು ಧಾಮದಲ್ಲಿ ಕಂಡು ಬಂದ ಗಂಡು ನವಿಲಿನ ಸುಂದರ ಚಿತ್ರ.

ಚಿತ್ರಕೃಪೆ: Dineshkannambadi

ಕಾಯಾಕಿಂಗ್:

ಕಾಯಾಕಿಂಗ್:

ಶ್ರೀನಗರದ ಸುಂದರ ದಾಲ್ ಕೆರೆಯಲ್ಲಿ ಕಾಯಾಕಿಂಗ್ ಚಟುವಟಿಕೆಯಲ್ಲಿ ನಿರತರಾದ ಉತ್ಸಾಹಿಗಳು.

ಜಿಂಕೆ ಉದ್ಯಾನ:

ಜಿಂಕೆ ಉದ್ಯಾನ:

ಜಮ್ಮು ಕಾಶ್ಮೀರದ ಜಿಂಕೆ ಉದ್ಯಾನದ ವಿಹಂಗಮ ನೋಟ.

ಕುಂಭ ಮೇಳ:

ಕುಂಭ ಮೇಳ:

ಜಗದ್ವಿಖ್ಯಾತ ವಾರಣಾಸಿಯ ಕುಂಭ ಮೇಳದಲ್ಲಿ ಕಂಡು ಬಂದ ನಾಗಾ ಸಾಧು.

ವೈಜಾಗ್:

ವೈಜಾಗ್:

ವೈಜಾಗ್ ಅಥವಾ ವಿಶಾಖಾಪಟ್ಟಣದ ಕಡಲ ತಡಿಯ ಸುಂದರ ದಾರಿ.

ದ್ರಾಸ್ ಕಣಿವೆ:

ದ್ರಾಸ್ ಕಣಿವೆ:

ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ದ್ರಾಸ್ ಕಣಿವೆಯ ಸುಂದರ ನೋಟ.

ವಿಕ್ಟೋರಿಯಾ ಸ್ಮಾರಕ ಭವನ:

ವಿಕ್ಟೋರಿಯಾ ಸ್ಮಾರಕ ಭವನ:

ಕೊಲ್ಕತ್ತದಲ್ಲಿರುವ ವಿಕ್ಟೋರಿಯಾ ಸ್ಮಾರಕ ಭವನದ ಸುಂದರ ನೋಟ.

ಚಿತ್ರಕೃಪೆ: Indianhilbilly

ಅತ್ತಿರಪಲ್ಲಿ:

ಅತ್ತಿರಪಲ್ಲಿ:

ಕೇರಳದ ಸುಂದರ ಅತ್ತಿರಪಲ್ಲಿ ಜಲಪಾತದ ಸುಂದರ ನೋಟ. ಇದು ತ್ರಿಶೂರ್ ನಿಂದ 60 ಕಿ.ಮೀ ಹಾಗೂ ಕೊಚ್ಚಿಯಿಂದ 70 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: NIHAL JABIN

ಮೊಸಳೆ ಉದ್ಯಾನ:

ಮೊಸಳೆ ಉದ್ಯಾನ:

ತಮಿಳುನಾಡಿನ ಮಹಾಬಲಿಪುರಂ ನಿಂದ 14 ಕಿ.ಮೀ ದೂರದಲ್ಲಿರುವ ಮೊಸಳೆ ಸಂಗ್ರಹಾಲಯದಲ್ಲಿ ಕಂಡು ಬಂದ ದೃಶ್ಯ.

ಚಿತ್ರಕೃಪೆ: Adam63

ಅಂಜಾವ್:

ಅಂಜಾವ್:

ಅರುಣಾಚಲ ಪ್ರದೇಶದ ಅಂಜಾವ್ ಪ್ರದೇಶದ ಸುಂದರ ಭೂದೃಶ್ಯಾವಳಿ.

ಚಿತ್ರಕೃಪೆ: Arif Siddiqui

ಬೇತಾಬ್ ಕಣಿವೆ:

ಬೇತಾಬ್ ಕಣಿವೆ:

ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬೇತಾಬ್ ಕಣಿವೆಯ ದೃಶ್ಯ. ಇದು ಪಹಲ್ಗಾಮ್ ನಿಂದ 15 ಕಿ.ಮೀ ದೂರದಲ್ಲಿದೆ.

ಪುಷ್ಕರ್ ಕೆರೆ:

ಪುಷ್ಕರ್ ಕೆರೆ:

ರಾಜಸ್ಥಾನದಲ್ಲಿರುವ ಪುಷ್ಕರ್ ಕೆರೆಯ ಸುಂದರವಾದ ದೃಶ್ಯ.

ಅಂಡಮಾನ್ ಮತ್ತು ನಿಕೋಬಾರ್:

ಅಂಡಮಾನ್ ಮತ್ತು ನಿಕೋಬಾರ್:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುಂದರ ಪಾಕ್ಷಿಕ ನೋಟ.

ಚಿತ್ರಕೃಪೆ: Venkatesh K

ಬೃಹದೀಶ್ವರ ದೇವಸ್ಥಾನ:

ಬೃಹದೀಶ್ವರ ದೇವಸ್ಥಾನ:

ತಮಿಳುನಾಡಿನ ತಂಜಾವೂರಿನಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಬೃಹದೀಶ್ವರ ದೇವಾಲಯ.

ಚಿತ್ರಕೃಪೆ: Pkdinuu

ಡಾಲ್ಫೀನ್ ನೋಸ್:

ಡಾಲ್ಫೀನ್ ನೋಸ್:

ಕೊಡೈಕೆನಲ್ ಗಿರಿಧಾಮದಲ್ಲಿರುವ ಡಾಲ್ಫೀನ್ ನೋಸ್ ವೀಕ್ಷಣಾ ತಾಣ.

ಬಹಾಯ್ ಮಂದಿರ:

ಬಹಾಯ್ ಮಂದಿರ:

ದೆಹಲಿಯಲ್ಲಿರುವ ಸುಪ್ರಸಿದ್ಧ ಬಹಾಯ್ ಅಥವಾ ಲೋಟಸ್ ಟೆಂಪಲ್.

ಚಿತ್ರಕೃಪೆ: nikkul

ಜಲ್ಲಿಕಟ್ಟು:

ಜಲ್ಲಿಕಟ್ಟು:

ತಮಿಳುನಾಡಿನ ಅಲಂಗನಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಆಟದ ಒಂದು ನೋಟ.

ಚಿತ್ರಕೃಪೆ: Iamkarna

ದೂಧ್ ಸಾಗರ್:

ದೂಧ್ ಸಾಗರ್:

ಗೋವಾದಲ್ಲಿರುವ ದೂಧ್ ಸಾಗರ್ ಜಲಪಾತದ ಅವಿಸ್ಮರಣೀಯ ನೋಟ.

ಚಿತ್ರಕೃಪೆ: Purshi

ವೇಡಂತಾಂಗಳ್:

ವೇಡಂತಾಂಗಳ್:

ವೇಡಂತಾಂಗಳ್ ನಲ್ಲಿ ಕಂಡುಬರುವ ಫ್ಲೆಮಿಂಗೊ ವಲಸೆ ಪಕ್ಷಿಗಳ ಸುಂದರ ನೋಟ.

ಚಿತ್ರಕೋಟ:

ಚಿತ್ರಕೋಟ:

ಛತ್ತೀಸಗಡ್ ರಾಜ್ಯದ ಬಸ್ತಾರ್ ಜಿಲ್ಲೆಯ ಜಗ್ದಲ್ಪುರ್ ಬಳಿಯಿರುವ ಚಿತ್ರಕೋಟ ಜಲಪಾತದ ದೃಶ್ಯ.

ಚಿತ್ರಕೃಪೆ: Iamg

ನೆಲ್ಲಿಯಂಬಾಡಿ:

ನೆಲ್ಲಿಯಂಬಾಡಿ:

ಕೇರಳದ ಪಾಲಕ್ಕಾಡ್ ನಿಂದ 60 ಕಿ.ಮೀ ದೂರದಲ್ಲಿರುವ ನೆಲ್ಲಿಯಂಬಾಡಿ ಗಿರಿಧಾಮ.

ಲಕ್ಷ್ಮಣ ಝೂಲಾ:

ಲಕ್ಷ್ಮಣ ಝೂಲಾ:

ರಿಷಿಕೇಶನಲ್ಲಿರುವ ಲಕ್ಷ್ಮಣ ಝೂಲಾ ಸೇತುವೆಯ ನೋಟ.

ಚಿತ್ರಕೃಪೆ: Tylersundance

ಗಿರ್ ರಾಷ್ಟ್ರೀಯ ಉದ್ಯಾನ:

ಗಿರ್ ರಾಷ್ಟ್ರೀಯ ಉದ್ಯಾನ:

ರಾಜಸ್ಥಾನದ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬಂದ ಮೃಗರಾಜ ಸಿಂಹದ ದೃಶ್ಯ.

ಚಿತ್ರಕೃಪೆ: Asim Patel

ಜೋಗ ಜಲಪಾತ:

ಜೋಗ ಜಲಪಾತ:

ಮಳೆಗಾಲದ ಸಂದರ್ಭದಲ್ಲಿ ಮೈಮನ ರೋಮಾಂಚನಗೊಳಿಸುವ ಶಿವಮೊಗ್ಗ ಜಿಲ್ಲೆಯ ಜೋಗದ ಬಳಿಯಿರುವ ಜೋಗ ಜಲಪಾತದ ಸಿರಿ.

ಚಿತ್ರಕೃಪೆ: Vmjmalali

ತಲಯನೈ ಜಲಾಶಯ:

ತಲಯನೈ ಜಲಾಶಯ:

ತಿರುನೆಲ್ವೆಲಿಯಲ್ಲಿರುವ ತಲಯನೈ ಜಲಾಶಯದ ಸುಂದರ ದೃಶ್ಯ.

ಚಿತ್ರಕೃಪೆ: Sukumaran sundar

ಪದ್ಮಸಂಭವ:

ಪದ್ಮಸಂಭವ:

ಹಿಮಾಚಲ ಪ್ರದೇಶದ ರೇವಲ್ಸರ್ ಕೆರೆಯ ಬಳಿಯಿರುವ ಪದ್ಮಸಂಭವ ವಿಗ್ರಹದ ದೃಶ್ಯ.

ಚಿತ್ರಕೃಪೆ: John Hill

ಮಜುಲಿ:

ಮಜುಲಿ:

ಅಸ್ಸಾಂ ರಾಜ್ಯದ ಸುಂದರ ದ್ವೀಪ ಮಜುಲಿ. ಇದು ದೇಶದ ಅತಿ ದೊಡ್ಡ ನದಿ ದ್ವೀಪವೂ ಹೌದು.

ಚಿತ್ರಕೃಪೆ: Kalai Sukanta

ಇರುಪು ಜಲಪಾತ:

ಇರುಪು ಜಲಪಾತ:

ಕೊಡಗಿನಲ್ಲಿರುವ ಇರುಪು ಜಲಪಾತದ ಸುಂದರ ದೃಶ್ಯ.

ಚಿತ್ರಕೃಪೆ: Philanthropist 1

ಪ್ಯಾಂಗಾಂಗ್:

ಪ್ಯಾಂಗಾಂಗ್:

ಲಡಾಖ್ ಪ್ರದೇಶದಲ್ಲಿರುವ ಸುಂದರ ಪ್ಯಾಂಗಾಂಗ್ ಕೆರೆಯ ನೋಟ.

ಚಿತ್ರಕೃಪೆ: Sidharthkochar

ತಾಜ್ ಮಹಲ್:

ತಾಜ್ ಮಹಲ್:

ಆಗ್ರಾ ಪಟ್ಟಣದಲ್ಲಿರುವ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಪ್ರೇಮ ಸ್ಮಾರಕ ತಾಜ್ ಮಹಲ್ ನ ಒಂದು ನೋಟ.

ಮುನ್ನಾರ್:

ಮುನ್ನಾರ್:

ಹನಿಮೂನ್ ತಾಣವಾದ ಮುನ್ನಾರ್ ಗಿರಿಧಾಮದ ಸುಂದರ ದೃಶ್ಯ.

ಚಿತ್ರಕೃಪೆ: Bimal K C

ಪಂಬನ್ ಸೇತುವೆ:

ಪಂಬನ್ ಸೇತುವೆ:

ಜ್ಯೋತಿರ್ಲಿಂಗ ಕ್ಷೇತ್ರ ರಾಮೇಶ್ವರಂ ಬಳಿಯಿರುವ ಪಂಬನ್ ಸೇತುವೆಯ ದೃಶ್ಯ.

ಚಿತ್ರಕೃಪೆ: Sriram Natrajhen

ಹೌಸ್ ಬೋಟ್:

ಹೌಸ್ ಬೋಟ್:

ಕೇರಳದ ಸುಪ್ರಸಿದ್ಧ ಹಿನ್ನೀರಿನಲ್ಲಿ ಪಯಣಿಸುವ ದೋಣಿ ಮನೆಯ ಒಂದು ದೃಶ್ಯ.

ಔಲಿ:

ಔಲಿ:

ಜಮ್ಮು ಕಾಶ್ಮೀರದ ಔಲಿ ಪ್ರದೇಶದಲ್ಲಿ ಕಂಡುಬರುವ ಸುಂದರ ದೃಶ್ಯಾವಳಿ ಹಾಗೂ ಕೇಬಲ್ ಕಾರ್.

ಚಿತ್ರಕೃಪೆ: Mandeep Thander

ಹಂಪಿ:

ಹಂಪಿ:

ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಅತಿ ವೈಭವದ ನಾಡು ಹಂಪಿಯ ಪಾಕ್ಷಿಕ ನೋಟ.

ಚಿತ್ರಕೃಪೆ: Bjørn Christian Tørrissen

ಹುಸೇನ್ ಸಾಗರ್ ಬುದ್ಧ ಪ್ರತಿಮೆ:

ಹುಸೇನ್ ಸಾಗರ್ ಬುದ್ಧ ಪ್ರತಿಮೆ:

ಹೈಟೆಕ್ ಸಿಟಿ ಹೈದರಾಬಾದಿನ ಹುಸೇನ್ ಸಾಗರ್ ಕೆರೆಯ ಮಧ್ಯದಲ್ಲಿರುವ ಬುದ್ಧನ ಪ್ರತಿಮೆಯ ನೋಟ.

ಚಿತ್ರಕೃಪೆ: Alosh Bennett

ಮಹಾಬಲೇಶ್ವರ:

ಮಹಾಬಲೇಶ್ವರ:

ಮಹಾರಾಷ್ಟ್ರದ ರುದ್ರ ರಮಣೀಯ ಗಿರಿಧಾಮವಾದ ಮಹಾಬಲೇಶ್ವರದ ಸುಂದರ ನೋಟ.

ಮೆಹ್ರಾನಗಡ್ ಕೋಟೆ:

ಮೆಹ್ರಾನಗಡ್ ಕೋಟೆ:

ರಾಜಸ್ಥಾನದ ಜೋಧಪುರ್ ನಲ್ಲಿರುವ ಮೆಹ್ರಾನಗಡ್ ಕೋಟೆಯ ಒಂದು ದೃಶ್ಯ.

ಚಿತ್ರಕೃಪೆ: Tim Dellmann

ವಾಟರ್ ರಾಫ್ಟಿಂಗ್:

ವಾಟರ್ ರಾಫ್ಟಿಂಗ್:

ರಿಷಿಕೇಶ್ ನಲ್ಲಿ ಮಾಡಬಹುದಾದ ಸಾಹಸಭರಿತ ವ್ಹೈಟ್ ವಾಟರ್ ದೋಣಿ ಸವಾರಿಯ ಒಂದು ನೋಟ.

ಚಿತ್ರಕೃಪೆ: AbinoamJr

ಕಳಾರಿ:

ಕಳಾರಿ:

ಕೇರಳದ ಸಾಂಸ್ಕೃತಿಕ ಆಟ ಕಳಾರಿಯ ಒಂದು ದೃಶ್ಯ.

ಕಂಚನಜುಂಗಾ:

ಕಂಚನಜುಂಗಾ:

ಕಂಚನ ಜುಂಗಾ ಹಿಮ ಪರ್ವತದ ಒಂದು ಅದ್ಭುತ ದೃಶ್ಯ.

ಚಿತ್ರಕೃಪೆ: Partha Sarathi Sahana

ಟಾಯ್ ಟ್ರೈನ್:

ಟಾಯ್ ಟ್ರೈನ್:

ದಾರ್ಜೀಲಿಂಗ್ ಹಿಮಾಲಯನ್ ಟಾಯ್ ಟ್ರೈನಿನ ಒಂದು ನೋಟ.

ಖಜುರಾಹೊ:

ಖಜುರಾಹೊ:

ಮಧ್ಯ ಪ್ರದೇಶದ ಖಜುರಾಹೊ ಶಿಲ್ಪ ಕಲೆಗಳ ಸುಂದರ ನೋಟ.

ಆಗ್ರಾ ಕೋಟೆ:

ಆಗ್ರಾ ಕೋಟೆ:

ಆಗ್ರಾ ಪಟ್ಟಣದಲ್ಲಿರುವ ಆಗ್ರಾ ಕೋಟೆಯ ಒಂದು ಸುಂದರ ನೋಟ.

ಚಿತ್ರಕೃಪೆ: Digvijay singh pundir

ಮೈಸೂರು ಅರಮನೆ:

ಮೈಸೂರು ಅರಮನೆ:

ದಸರಾ ಸಂಭ್ರಮದಲ್ಲಿ ದೀಪಾಲಂಕೃತದಿಂದ ಸಂಭ್ರಮಿಸುವ ಮೈಸೂರು ಅರಮನೆಯ ಒಂದು ಸುಂದರ ನೋಟ.

ಚೌಖಂಬಾ

ಚೌಖಂಬಾ

ಉತ್ತರಾಖಂಡ್ ರಾಜ್ಯದಲ್ಲಿ ಕಂಡುಬರುವ ಚೌಖಂಬಾ ಗಿರಿ ಶಿಖರದ ಸುಂದರ ನೋಟ.

ಚಿತ್ರಕೃಪೆ: Ishwari Rai

ದಾಲ್ ಕೆರೆ:

ದಾಲ್ ಕೆರೆ:

ಶ್ರೀನಗರದ ಸುಪ್ರಸಿದ್ಧ ದಾಲ್ ಕೆರೆಯ ಸುಂದರ ದೃಶ್ಯ.

ಚಿತ್ರಕೃಪೆ: Basharat Shah

ಮುರುಡೇಶ್ವರ:

ಮುರುಡೇಶ್ವರ:

ಅತಿ ಎತ್ತರದ ಶಿವನ ವಿಗ್ರಹಗಳಲ್ಲೊಂದಾದ ಮುರುಡೇಶ್ವರ ಶಿವನ ವಿಗ್ರಹ.

ಸೀ ಲಿಂಕ್ ಸೇತುವೆ:

ಸೀ ಲಿಂಕ್ ಸೇತುವೆ:

ಮುಂಬೈನಲ್ಲಿ ಕಂಡುಬರುವ ಸಮುದ್ರದಲ್ಲಿ ನಿರ್ಮಿಸಲಾದ ಸೀ ಲಿಂಕ್ ಸೇತುವೆಯ ಒಂದು ಸುಂದರ ನೋಟ.

ಗುರುವಾಯೂರು:

ಗುರುವಾಯೂರು:

ಪ್ರಸಿದ್ಧ ಶ್ರೀ ಕೃಷ್ಣ ಕ್ಷೇತ್ರವಾದ ಗುರುವಾಯೂರು ದೇವಸ್ಥಾನ.

ಕೇದಾರನಾಥೇಶ್ವರ ಗುಹೆ:

ಕೇದಾರನಾಥೇಶ್ವರ ಗುಹೆ:

ಮಹಾರಾಷ್ಟ್ರದ ಹರಿಶ್ಚಂದ್ರಗಡ್ ನಲ್ಲಿರುವ ಕೇದಾರನಾಥೇಶ್ವರ ಗುಹಾ ದೇವಸ್ಥಾನದ ಒಂದು ದೃಶ್ಯ.

ವಿಕ್ರಮಾದಿತ್ಯ:

ವಿಕ್ರಮಾದಿತ್ಯ:

ಭಾರತೀಯ ನೌಕಾ ಪಡೆಯ ಸುಪರ್ದಿಯಲ್ಲಿರುವ ಯುದ್ಧ ವಿಮಾನಗಳು ಹಾರಾಟ ಮಾಡಬಹುದಾದ ವಿಕ್ರಮಾದಿತ್ಯ ಜಲನೌಕೆಯ ಒಂದು ದೃಶ್ಯ.

ಚಿತ್ರಕೃಪೆ: Indian Navy

ಗೋಲ್ಡನ್ ಟೆಂಪಲ್:

ಗೋಲ್ಡನ್ ಟೆಂಪಲ್:

ಪಂಜಾಬ್ ನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ದೇವಾಲಯವಾದ ಹರ್ ಮಂದಿರ್ ಸಾಹಿಬ್ ಅಥವಾ ಗೋಲ್ಡನ್ ಟೆಂಪಲ್ ನ ಒಂದು ನೋಟ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X