Search
  • Follow NativePlanet
Share
» »ಭಾರತದ ದೊಡ್ಡದಾದ 5 ಆಣೆಕಟ್ಟುಗಳು

ಭಾರತದ ದೊಡ್ಡದಾದ 5 ಆಣೆಕಟ್ಟುಗಳು

By Vijay

ರಭಸದಿಂದ ಹರಿಯುವ ನದಿಯ ನೀರಿಗೆ ಅಡ್ಡಲಾಗಿ ಸದೃಢ ರಚನೆಯೊಂದನ್ನು ನಿರ್ಮಿಸಿ ನೀರನ್ನು ಹಿಡಿದಿಟ್ಟು ಸುತ್ತಮುತ್ತಲ ಪ್ರದೇಶದಲ್ಲಿರುವ ಹೊಲ ಗದ್ದೆಗಳಿಗೆ ನೀರು ಪುರೈಸಲೊ, ಜನರ ಕುಡಿಯುವ ನೀರಿನ ಬವಣೆಯನ್ನು ಬಗೆಹರಿಸಲೊ ಅಥವಾ ಕಸದಿಂದ ರಸ ಎಂಬಂತೆ ನೀರಿನಿಂದ ವಿದ್ಯುತ್ ಉತ್ಪಾದಿಸಲೊ ಇಲ್ಲವೆ ಹೇಳಿದ ಎಲ್ಲ ಅವಶ್ಯಕತೆಗಳನ್ನು ಪುರೈಸಲೊ ಕಟ್ಟಲಾಗುವ ರಚನೆಗಳನ್ನೆ ನಾವು ಆಣೆಕಟ್ಟು ಎನ್ನುತ್ತೇವೆ. ಆಣೆಕಟ್ಟುಗಳು ನಿಜವಾಗಿಯು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಅದರಂತೆ ಇವುಗಳ ನಿರ್ಮಾಣವು ಕೂಡ ಇತರೆ ಕಟ್ಟಡಗಳ ನಿರ್ಮಾಣದಂತೆ ಅಷ್ಟೊಂದು ಸುಲಭವೇನಲ್ಲ.

ಭಾರತದಲ್ಲಿ ಹೆಚ್ಚುಕಡಿಮೆ ಎಲ್ಲ ರಾಜ್ಯಗಳಲ್ಲೂ ಆಣೆಕಟ್ಟುಗಳು ಕಂಡುಬರುತ್ತವೆ. ಆಣೆಕಟ್ಟುಗಳು ರಾಜ್ಯಗಳ ಸರ್ವತೋಮುಖ ಬೆಳವಣಿಗೆಗಳಲ್ಲೂ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಈ ಲೇಖನದಲ್ಲಿ ಭಾರತದ ದೊಡ್ಡ ಆಣೆಕಟ್ಟುಗಳ ಕುರಿತು ತಿಳಿಸಲಾಗಿದೆ.

ತೆಹರಿ ಆಣೆಕಟ್ಟು:

ತೆಹರಿ ಆಣೆಕಟ್ಟು:

ಉತ್ತರಾಖಂಡ ರಾಜ್ಯದ ತೆಹರಿ ಎಂಬಲ್ಲಿ ಭಾಗೀರತಿ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಭಾರತದ ಅತ್ಯಂತ ಎತ್ತರದ ಆಣೆಕಟ್ಟಾಗಿರುವ ಇದು 855 ಅಡಿಗಳ ಎತ್ತರವನ್ನು ಹೊಂದಿದೆ ಹಾಗು 1886 ಅಡಿಗಳಷ್ಟು ಅಗಲವಾಗಿದೆ. 2.6 ಕ್ಯೂ.ಕಿ.ಮೀ ಗಳಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯ ಇದಕ್ಕಿದೆ.

ಚಿತ್ರಕೃಪೆ

ಭಾಕ್ರಾ ನಾಂಗಲ್ ಆಣೆಕಟ್ಟು:

ಭಾಕ್ರಾ ನಾಂಗಲ್ ಆಣೆಕಟ್ಟು:

ಹಿಮಾಚಲ ಪ್ರದೇಶದ ಬಿಲಾಸಪುರ್ ನಲ್ಲಿ ಸಟ್ಲೆಜ್ ನದಿಗೆ ಅಡ್ಡಲಾಗಿ ಈ ಬೃಹತ್ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಭಾರತದ ಎರಡನೆಯ ಅತಿ ಎತ್ತರದ ಆಣೆಕಟ್ಟಾಗಿದ್ದು, 741 ಅಡಿ ಎತ್ತರ ಹಾಗು 1700 ಅಡಿ ಅಗಲವನ್ನು ಹೊಂದಿದೆ.

ಚಿತ್ರಕೃಪೆ: Apar Singh Bataan

ಹಿರಾಕುಡ್ ಆಣೆಕಟ್ಟು:

ಹಿರಾಕುಡ್ ಆಣೆಕಟ್ಟು:

ಬುಡಕಟ್ಟು ರಾಜ್ಯ ಒಡಿಶಾದ ಮಹಾನದಿಗೆ ನಿರ್ಮಿಸಲಾಗಿರುವ ಈ ಆಣೆಕಟ್ಟು ಜಗತ್ತಿನ ಅತಿ ಉದ್ದದ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಒಟ್ಟಾರೆ 26 ಕಿ.ಮೀ ಗಳಷ್ಟು ಉದ್ದವಿರುವ ಈ ಆಣೆಕಟ್ಟು ಗಾಂಧಿ ಮೀನಾರ್ ಹಾಗು ನೆಹರು ಮೀನಾರ್ ಗಳೆಂಬ ಎರಡು ವೀಕ್ಷಣಾ ಗೋಪುರಗಳನ್ನು ಹೊಂದಿದೆ.

ಚಿತ್ರಕೃಪೆ

ನಾಗಾರ್ಜುನ ಸಾಗರ್ ಆಣೆಕಟ್ಟು:

ನಾಗಾರ್ಜುನ ಸಾಗರ್ ಆಣೆಕಟ್ಟು:

ಆಂಧ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಾಗಾರ್ಜುನ ಸಾಗರ್ ಆಣೆಕಟ್ಟು ಗಾರೆ ಕೆಲಸದ (ಮೇಸನ್ರಿ) ಜಗತ್ತಿನ ದೊಡ್ಡ ಆಣೆಕಟ್ಟುಗಳ ಪೈಕಿ ಒಂದಾಗಿದೆ. 490 ಅಡಿ ಎತ್ತರ ಹಾಗು 1.6 ಕಿ.ಮೀ ಉದ್ದವಿರುವ ಈ ಆಣೆಕಟ್ಟು 26 ಕ್ರಸ್ಟ್ ಗೇಟ್ ಗಳನ್ನು ಒಳಗೊಂಡಿದೆ.

ಸರ್ದಾರ್ ಸರೋವರ್ ಡ್ಯಾಮ್:

ಸರ್ದಾರ್ ಸರೋವರ್ ಡ್ಯಾಮ್:

ಗುಜರಾತಿನ ನವಾಗಮ್ ಬಳಿ ನರ್ಮದಾ ನದಿಗೆ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದರ ಎತ್ತರ 535 ಅಡಿಗಳು ಹಾಗು ಉದ್ದ 1.2 ಕಿ.ಮೀಗಳು.

ಚಿತ್ರಕೃಪೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X