Search
  • Follow NativePlanet
Share
» »ಇವೆ ಭಾರತದ 25 ಶ್ರೀಮಂತ ನಗರಗಳು!

ಇವೆ ಭಾರತದ 25 ಶ್ರೀಮಂತ ನಗರಗಳು!

Top 25 richest cities in India

By Vijay

ಇಂದು ಪ್ರಪಂಚದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತವು ಉನ್ನತ ಸ್ಥಾನದಲ್ಲಿರುವ ದೇಶಗಳಲ್ಲಿ ಪರಿಗಣಿಸಲ್ಪಡುತ್ತದೆ. ಭಾರತದಲ್ಲಿರುವ ಪ್ರತಿಯೊಂದು ನಗರಗಳು ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಆ ಕಾರಣದಿಂದಾಗಿಯೆ ಭಾರತವು ಒಟ್ಟಾರೆಯಾಗಿ ಸಾಕಷ್ಟು ಬೆಳೆಯುತ್ತಿದೆ.

ಕೆಲವು ಆರ್ಥಿಕ ಅಂಕಿ ಅಂಶಗಳು ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಉತ್ತಮವಾಗಿ ಬೆಳೆಯುತ್ತಿದೆ ಎಂದು ಈಗಾಗಲೆ ದೃಢಪಡಿಸಿವೆ. ಅದರಂತೆ ಭಾರತದಲ್ಲಿರುವ ಕೆಲವು ನಗರಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬೆಳೆಯುತ್ತಿದ್ದು ಹೆಚ್ಚಿನ ಜಿಡಿಪಿಯ ಕೊಡುಗೆ ನೀಡುತ್ತಿರುವುದೂ ಸಹ ಭಾರತದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ.

ರಾಷ್ಟ್ರೀಯ ಉತ್ಪನ್ನ ಅಥವಾ ಜಿಡಿಪಿ ಅರ್ಥ ವ್ಯವಸ್ಥೆಯ ಸಾಮರ್ಥ್ಯವನ್ನಳಿಯುವ ಮಾಪನ. ಜಾಗತಿಕ ಮಟ್ಟದಲ್ಲಿ ದೇಶಗಳ ಜಿಡಿಪಿಯನ್ನು ಗಣನೆಗೆ ತೆಗೆದುಕೊಂಡರೆ, ದೇಶದಲ್ಲಿ ಪ್ರಮುಖ ನಗರಗಳ ಜಿಡಿಪಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಹೆಚ್ಚಿನ ಜಿಡಿಪಿ ನೀಡುವ ನಗರಗಳು ಸಾಮಾನ್ಯವಾಗಿಯೆ ಶ್ರೀಮಂತ ಅಥವಾ ಸಂಪದ್ಭರಿತ ನಗರಗಳಾಗಿವೆ.

ಇನ್ನೂ ಶ್ರೀಮಂತ ನಗರಾಗಳೆಂದಾಗ ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳು, ವ್ಯವಸ್ಥೆಗಳು ಇರುವುದು ಸಾಮಾನ್ಯ. ಹಾಗಾಗಿ ಆ ನಗರಗಳು ವಾಸಿಸಲೂ ಸಹ ಪ್ರಶಸ್ತವಾದ ಹಾಗೂ ಪ್ರವಾಸ ಮಾಡಲು ಯೋಗ್ಯವಾದ ನಗಾರಗಳಾಗಿ ಜನರನ್ನು ಆಕರ್ಷಿಸುವುದು ಸರ್ವೆ ಸಾಮಾನ್ಯ. ಪ್ರಸ್ತುತ ಲೇಖನದಲ್ಲಿ ಭಾರತದ ಮೊದಲ 25 ಶ್ರೀಮಂತ ಅಥವಾ ಸಂಪದ್ಭರಿತ ನಗರಗಳ ಕುರಿತು ತಿಳಿಸಲಾಗಿದೆ. ನಿಮಗೆ ಭಾರತದ ಶ್ರೀಮಂತ ನಗರಗಳಲ್ಲಿ ಸುತ್ತಾಡುವ ಅಥವಾ ಪ್ರವಾಸ ಮಾಡುವ ಬಯಕೆ ಇದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ.

ವಿ.ಸೂ: ವರ್ಷದಿಂದ ವರ್ಷಕ್ಕೆ ಆಗುವ ಪ್ರಗತಿಯ ಆಧಾರದ ಮೇಲೆ ಈ ನಗರಗಳ ಕ್ರಮಾಂಕಗಳೂ ಸಹ ಬದಲಾಗಬಹುದು ಅಥವಾ ಹೊಸನಗರಗಳು ಸೇರ್ಪಡೆಗೊಳ್ಳಬಹುದು.

25

25

ತಮಿಳುನಾಡು ರಾಜ್ಯದ ದೇವಾಲಯಾಗಳ ಪಟ್ಟಣ ಎಂದೆ ಖ್ಯಾತಿ ಪಡೆದ ಮದುರೈ ಈ ಪಟ್ಟಿಯಲ್ಲಿರುವ ಶ್ರೀಮಂತ ನಗರಗಳ ಪೈಕಿ ಒಂದಾಗಿದೆ. ಜನಸಂಖ್ಯೆಯ ಆಧಾರದಲ್ಲೂ ಭಾರತದ ಮೊದಲ ಐವತ್ತು ನಗರಗಳಲ್ಲೊಂದಾಗಿರುವ ಮದುರೈ ಸಾಕಷ್ಟು ಅಭಿವೃದ್ಧಿಗೊಳ್ಳುತ್ತಿರುವ ನಗರವಾಗಿದೆ. ಮದುರೈ ಪ್ರಮುಖವಾಗಿ ಧಾರ್ಮಿಕ ಮಹತ್ವವುಳ್ಳ ಪ್ರವಾಸಿ ಕ್ಷೇತ್ರವಾಗಿದೆ. ಮೀನಾಕ್ಷಿ ಅಮ್ಮನವರ ಸೇರಿದಂತೆ ಹಲವು ಅದ್ಭುತ ಹಾಗೂ ಮಹತ್ವದ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಇದನ್ನು ಎಂದಿಗೂ ನಿದ್ರಿಸಲಾರದ ನಗರ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Alessandro Malatesta

24

24

ರಾಷ್ಟ್ರದ ರಾಜಧಾನಿ ದೆಹಲಿಗೆ ಹತ್ತಿರವಾಗಿರುವ ಉತ್ತರ ಪ್ರದೇಶ ರಾಜ್ಯದ ಆಗ್ರಾ ನಗರವು ಭಾರತದ ಶ್ರೀಮಂತ ನಗರಗಳಲ್ಲೊಂದಾಗಿದೆ. ಇನ್ನೂ ಪ್ರವಾಸಿ ದೃಷ್ಟಿಯಿಂದಲೂ ಸಹ ಆಗ್ರಾ ಉತ್ತರ ಭಾರತದ ಬಲು ಮಂಚೂಣಿಯಲ್ಲಿರುವ ನಗರವಾಗಿದೆ. ಆಗ್ರಾದಲ್ಲಿರುವ ಪ್ರಖ್ಯಾತ ತಾಜ್ ಮಹಲ್ ವಿಶ್ವ ವಿಖ್ಯಾತಿಗಳಿಸಿದ ಆಕರ್ಷಕ ಸ್ಮಾರಕವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲದೆ ಆಗ್ರಾ ಆಗ್ರಾ ಪೇಠಾ ಎಂಬ ಕುಂಬಳಕಾಯಿಯಿಂದ ಮಾಡಲಾಗುವ ವಿಶಿಷ್ಟ ಸಿಹಿ ಖಾದ್ಯಕ್ಕೆ ದೇಶದಲ್ಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Diego Delso

23

23

ನೊಯ್ಯಲ್ ನದಿ ತಟದಲ್ಲಿ ನೆಲೆಸಿರುವ ಕೊಯಮತ್ತೂರು ತಮಿಳುನಾಡು ರಾಜ್ಯದ ಪ್ರಮುಖ ನಗರಗಳಲ್ಲೊಂದಾಗಿದೆ. ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿರುವ ಕೊಯಮತ್ತೂರು ತಮಿಳುನಾಡು ರಾಜ್ಯದ ಎರಡನೇಯ ದೊಡ್ಡ ನಗರವಾಗಿ ಪ್ರಸಿದ್ಧಿಗಳಿಸಿದೆ. ಅಲ್ಲದೆ ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದಿರುವ ನಗರ ಇದಾಗಿದೆ.

ಚಿತ್ರಕೃಪೆ: Ragunathan

22

22

ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಾಗಳ ಪೈಕಿ ಒಂದಾಗಿರುವ ಅಮೃತ್ಸರ್ ಶ್ರೀಮಂತ ನಗರಗಳ ಪೈಕಿಯೂ ಸಹ ಒಂದಾಗಿದೆ. ಪಾಕಿಸ್ತಾನದ ಗಡಿಗೆ ಬಲು ಹತ್ತಿರದಲ್ಲಿರುವ ಅಮೃತ್ಸರ್ ತನ್ನಲ್ಲಿರುವ ಕೆಲವು ಅದ್ಭುತ ಪ್ರವಾಸಿ ಆಕರ್ಷಣೆಗಳಿಗಾಗಿ ಹೆಸರುವಾಸಿಯಾಗಿದೆ. ಗೋಲ್ಡನ್ ಟೆಂಪಲ್, ಜಲಿಯನ್ವಾಲಾ ಬಾಗ್ ಸ್ಮಾರಕ, ವಾಗಾ ಗಡಿ ಹೀಗೆ ಹಲವು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Jasleen Kaur

21

21

ಹಿಂದೆ ಬರೋಡಾ ಎಮ್ಬ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಇಂದಿನ ವಡೋದರಾ ಗುಜರಾತ್ ರಾಜ್ಯದ ಶ್ರೀಮಂತ ನಗಾರಗಳಲ್ಲೊಂದಾಗಿದ್ದು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಿತಿಯಿಂದ ಸಂಬೋಧಿಸಲ್ಪಡುತ್ತದೆ. ಸಾಕಷ್ಟು ರಾಜವೈಭವ ಹೊಂದಿರುವ ಈ ನಗರ ಹಿಂದೆ ರಾಜರುಗಳ ಕಾರ್ಯಾಭಾರವಿದ್ದ ಮುಖ್ಯ ನಗರವಾಗಿತ್ತು. ಮೂಲತಃ ವಟೋದರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿ ವಡೋದರ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Tanay Bhatt

20

20

ಮಹಾರಾಷ್ಟ್ರದ ಪುಣೆಯ ಭಾಗವಾಗಿರುವ ಪಿಂಪ್ರಿ-ಚಿಂಚ್ವಾಡ್ ಇತ್ತೀಚಿನ ರಭಸವಾಗಿ ಬೆಳೆಯುತ್ತಿರುವ ಅರ್ಬನ್ ಮಾದರಿಯ ನಗರ ಪ್ರದೇಶವಾಗಿದೆ ಹಾಗೂ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ.

ಚಿತ್ರಕೃಪೆ: Vaibhav Madhav Naikare

19

19

ಮಧ್ಯಪ್ರದೇಶ ರಾಜ್ಯದ ರಾಜಧಾನಿ ನಗರವಾದ ಭೋಪಾಲವು ದೇಶದ ಶ್ರೀಮಂತ ನಗರಗಳಲ್ಲೊಂದಾಗಿ ಪರಿಗಣಿಸಲ್ಪಡುತ್ತದೆ. ಕೆರೆಗಳ ನಗರ ಎಂತಲೂ ಕರೆಯಲ್ಪಡುವ ಭೋಪಾಲ್ ದೇಶದ ಹದಿನೇಳನೆಯ ದೊಡ್ಡ ನಗರವಾಗಿದ್ದು ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಪ್ರಸಿದ್ಧಿ ಪಡೆದಿರುವ ನಗರವಾಗಿದೆ.

ಚಿತ್ರಕೃಪೆ: Deepak sankat

18

18

ಕೈಗಾರಿಕೆಗಳಿಂದ ತುಂಬಿರುವ ಉತ್ತರ ಪ್ರದೇಶದ ಕಾನಪುರವು ಶ್ರೀಮಂತ ನಗರಗಳಲ್ಲೊಂದಾಗಿ ಪರಿಗಣಿಸಲ್ಪಡುತ್ತದೆ. ಉತ್ತರ ಭಾರತದಲ್ಲಿ ದೆಹಲಿಯ ನಂತರ ಎರಡನೇಯ ದೊಡ್ಡ ಕೈಗಾರಿಕಾ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾನಪುರ್.

ಚಿತ್ರಕೃಪೆ: Mohd1998.knp

17

17

ಕೇರಲ ರಾಜ್ಯದ ಬೆಳೆಯುತ್ತಿರುವ ಹಾಗು ದೊಡ್ಡ ನಗರವಾಗಿದೆ ಕೊಚ್ಚಿ. ಧಾರ್ಮಿಕ ಹಾಗೂ ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವ ಕೊಚ್ಚಿಯು ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿದೆ ಹಾಗೂ ತನ್ನ ಕಡಲ ಕಿನಾರೆಗಳಿಂದ ಸುಂದರ ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತದೆ.

ಚಿತ್ರಕೃಪೆ: Anand Venugopal

16

16

ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿರುವ ಹಾಗೂ ಭಾರತದ ಮೊದಲ ಯೋಜನಾಬದ್ಧ ನಗರಿ ಎಂಬ ಬಿರುದಿಗೆ ಪಾತ್ರವಾಗಿರುವ ಚಂಡೀಗಡ್ ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಹೆಸರುವಾಸಿಯಾಗಿದೆ ಈ ನಗರ.

ಚಿತ್ರಕೃಪೆ: Rishabh Mathur

15

15

ಬಿಹಾರ್ ರಾಜ್ಯದ ರಾಜಧಾನಿ ನಗರವಾದ ಪಾಟ್ನಾ ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿದೆ. ನಿರಮ್ತರ ಜನವಸತಿಯಿರುವ ಜಗತ್ತಿನ ಪುರಾತನ ನಗರಗಳ ಪೈಕಿ ಒಂದಾಗಿರುವ ಪಾಟ್ನಾ ಅದ್ಭುತ ಐತಿಹಾಸಿಕ ಶ್ರೀಮಂತಿಕೆಯನ್ನೂ ಸಹ ಹೊಂದಿದೆ. ಇಂದಿನ ಪಾಟ್ನಾ ಹಿಂದೆ ಮಗಧ ಸಾಮ್ರಾಜ್ಯದ ರಾಜಧಾನಿ ಪಾಟಲಿಪುತ್ರವಾಗಿ ಮೆರೆದಿತ್ತು. ಹಾಗಾಗಿ ಐತಿಹಾಸಿಕ ಮಹತ್ವವುಳ್ಳ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಇಂದು ಪಾಟ್ನಾದಲ್ಲಿ ನೋಡಬಹುದಾಗಿದೆ.

ಚಿತ್ರಕೃಪೆ: Oliver gedin

14

14

ಮಧ್ಯಪ್ರದೇಶದಲ್ಲೆ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಇಂದೋರ್, ಅಲ್ಲದೆ ದೇಶದ ಶ್ರೀಮಂತ ನಗರಗಳ ಪೈಕಿಯೂ ಸಹ ಒಂದಾಗಿದೆ ಇಂದೋರ್. ವೈವಿಧ್ಯಮಯ ಕೈಗಾರಿಕೆಗಳು, ಉದ್ದಿಮೆಗಳನ್ನು ಹೊಂದಿರುವ ಇಂದೋರ್ ನಗರವು ಆಕರ್ಷಕ ಪ್ರವಾಸಿ ತಾಣಗಳಿಗಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: John Hoey

13

13

ಮಹಾರಾಷ್ಟ್ರದ ಮೂರನೇಯ ದೊಡ್ಡ ನಗರ ನಾಗ್ಪುರ್. ಅಲ್ಲದೆ ರಾಜ್ಯದ ಚಳಿಗಾಲದ ರಾಜಧಾನಿ ಎಂತಲೆ ಗುರುತಿಸಲ್ಪಡುತ್ತದೆ. ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿರುವ ನಾಗ್ಪುರವು ಆರೆಂಜ್ ಹಣ್ಣುಗಳಿಗಾಗಿ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿದೆ. ಅಂತೆಯೆ ಇದನ್ನು ಆರೆಂಜ್ ಸಿಟಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: anurag peshne

12

12

ರಾಜಮನೆತನಗಳ, ಮುಸ್ಲಿಮ್ ಸಮುದಾಯದ ಘರಾನಾ ಅಥವಾ ಕುಟುಂಬಗಳ ಹಾಗೂ ರಾಜರುಗಳ ವೈಭವ, ಸಾಂಸ್ಕೃತಿಕತೆಯನ್ನು ಇಂದಿಗೂ ಸಾರುವ ಉತ್ತರ ಪ್ರದೇಶದ ಸಾಂಸ್ಕೃತಿಕ ನಗರವಾದ ಲಖನೌ ದೇಶದ ದೊಡ್ಡ ನಗರಗಳ ಪೈಕಿ ಒಂದಾಗಿರುವುದಲ್ಲದೆ ಶ್ರೀಮಂತ ನಗರಗಳಲ್ಲಿಯೂ ಸಹ ಒಂದಾಗಿ ಗುರುತಿಸಲ್ಪಡುತ್ತದೆ. ಪ್ರವಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದ ಸ್ಥಳ ಇದಾಗಿದೆ. ಚಿಕನ್ ಕಬಾಬ್ ಲಖನೌ ನಗರದ ಅದ್ಭುತ ಆಹಾರ ಖಾದ್ಯವಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Mohit

11

11

ರಾಜಸ್ಥಾನದ ಅತಿ ದೊಡ್ಡ ಹಾಗೂ ರಾಜಧಾನಿ ನಗರವಾಗಿರುವ ಜೈಪುರವು ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿದೆ. ತನ್ನದೆ ಆದ ವಿಶಿಷ್ಟ ಸಂಪ್ರದಾಯ ಹಾಗೂ ಆಚರಣೆಗಳಿಂದ ಜಾಗತಿಕ ಮಟ್ಟದ ಪ್ರವಾಸೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಜೈಪುರವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಭಾರತದ ಆಕರ್ಷಕ ಪ್ರವಾಸಿ ನಗರಗಳಲ್ಲಿಯೂ ಸಹ ಒಂದಾಗಿದೆ.

ಚಿತ್ರಕೃಪೆ: Yiqun Ding

10

10

ಗುಜರಾತ್ ರಾಜ್ಯದ ಆರ್ಥಿಕ ರಾಜಧಾನಿ ಎಂತಲೆ ಇದನ್ನು ಕರೆಯಲಾಗುತ್ತದೆ. ಹಲವಾರು ವೈವಿಧ್ಯಮಯ ಉದ್ಯಮಗಳು ಸೂರತ್ ನಗರದಲ್ಲಿವೆ. ಅದರಲ್ಲೂ ವಿಶೇಷವಾಗಿ ವಜ್ರಗಳು ಹಾಗೂ ಸೀರೆಗಳಿಗೆ ಸಂಬಂಧಿಸಿದಂತೆ ಅನೇಕ ಕಾರ್ಖಾನೆಗಳು ಸೂರತ್ ನಗರದಲ್ಲಿವೆ.

ಚಿತ್ರಕೃಪೆ: Rahul Bhadane

9

9

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದಲ್ಲಿರುವ ಕೆಲವು ಮಹಾ ನಗರಗಳ ಪೈಕಿ ಮಹಾರಾಷ್ಟ್ರದ ಪುಣೆ ನಗರವೂ ಸಹ ಒಂದು. ಪುಣ್ಯ ಕೊಡುವ ಪುಣ್ಯನಗರಿಯಿಂದ ಪ್ರಸ್ತುತ ಪುಣೆ ಎಂದಾಗಿರುವ ಈ ನಗರವು ಮಹಾರಾಷ್ಟ್ರದ ಎರಡನೇಯ ದೊಡ್ಡ ನಗರ ಹಾಗೂ ದೇಶದ ಶ್ರೀಮಂತ ನಗರಗಳಲ್ಲೊಂದಾಗಿದೆ. ಧಾರ್ಮಿಕವಾಗಿಯೂ ಸಾಕಷ್ಟು ಮಹತ್ವ ಪಡೆದಿರುವ ಪುಣೆ ಹಾಗೂ ಸುತ್ತಮುತ್ತಲಿನಲ್ಲಿ ಹಲವಾರು ಧಾರ್ಮಿಕ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Soham Banerjee

8

8

ಅಧಿಕೃತವಾಗಿ ವೈಜಾಗ್ ಎಂದೆ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಮಹಾ ಬಂದರು ನಗರಿಯಾಗಿರುವುದಲ್ಲದೆ ಸಾಕಷ್ಟು ಮಹತ್ವ ಪಡೆದಿರುವ ಆರ್ಥಿಕ ನಗರಿಯಾಗಿಯೂ ಗಮನಸೆಳೆಯುತ್ತದೆ. ಬಂಗಾಳ ಕೊಲ್ಲಿಯ ಹಲವು ಅದ್ಭುತ ಕಡಲ ತೀರಗಳನ್ನು ಹೊಂದಿರುವ ವಿಶಾಖಾಪಟ್ಟಣಂ ದೇಶದ ಶ್ರೀಮಂತ ನಗರಗಳಲ್ಲಿ ಒಂದಾಗಿ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Adityamadhav83

7

7

ಗುಜರಾತ್ ರಾಜ್ಯದಲ್ಲಿರುವ ಅಹ್ಮದಾಬಾದ್ ಪ್ರಸ್ತುತ ದೇಶದಲ್ಲಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ದೊಡ್ಡ ನಗರ ಕೇಂದ್ರವಾಗಿದೆ. ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಸೇರಿರುವ ಈ ನಗರ ತನ್ನದೆ ಆದ ಜಿಡಿಪಿಯನ್ನು ದೇಶಕ್ಕೆ ಕೊಡುತ್ತಿದ್ದು ಉತ್ತಮವಾಗಿ ಬೆಳೆಯುತ್ತಿದೆ. ಗುಜರಾತ್ ರಾಜ್ಯದ ಅತಿ ದೊಡ್ಡ ನಗರವಾಗಿರುವ ಅಹ್ಮದಾಬಾದ್ ಪ್ರವಾಸೋದ್ಯಮ ದೃಷ್ಟಿಯಿಂದಲೂ ಸಹ ಸಾಕಷ್ಟು ಪ್ರಸಿದ್ಧಿಗಳಿಸಿರುವ ನಗರವಾಗಿದೆ.

ಚಿತ್ರಕೃಪೆ: wake4jake

6

6

ತಮಿಳುನಾಡು ರಾಜ್ಯದ ರಾಜಧಾನಿ ಹಾಗೂ ದೇಶದ ನಾಲ್ಕು ಮಹಾನಗರಗಳಲ್ಲಿ ಒಂದಾಗಿರುವ ಚೆನ್ನೈ ನಗರವು ಶ್ರೀಮಂತ ನಗರಗಳಲ್ಲಿ ಒಂದಾಗಿದೆ. ಆಧುನಿಕ ಜೀವನಶೈಲಿ ಹಾಗೂ ವಿಶಿಷ್ಟಮಯ ತಮಿಳು ಸಂಪ್ರದಾಯಗಳಿಂದ ಕೂಡಿರುವ ಈ ಮಹಾನಗರ ಸಾಕಷ್ಟು ಕಚೇರಿಗಳನ್ನು, ಕೈಗಾರಿಕೆಗಳನ್ನು ಹೊಂದಿರುವುದಲ್ಲದೆ ಪ್ರವಾಸಿಗರ ನೆಚ್ಚಿನ ನಗರವಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Aleksandr Zykov

5

5

ನೂತನವಾಗಿ ರಚಿತವಾದ ತೆಲಂಗಾಣ ರಾಜ್ಯದ ರಾಜಧಾನಿ ನಗರವಾಗಿರುವ ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ನಗರ. ದೇಶದ ಶ್ರೀಮಂತ ನಗರಗಳ ಪೈಕಿ ಒಂದಾಗಿರುವ ಹೈದರಾಬಾದ್ ನಿಜಾಮ ಸಂಸ್ಕೃತಿಯನ್ನು ಅನಾವರಣಗೊಳಿಸುವ ಅದ್ಭುತ ಐತಿಹಾಸಿಕ ನಗರವಾಗಿದೆ. ನಗರದಲ್ಲಿ ಗುರುತರವಾದ ಪ್ರವಾಸಿ ಕೇಂದ್ರಗಳಿದ್ದು ಸಕಲ ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Siddhesh Dhupe

4

4

ಭಾರತದ ಆಧುನಿಕ ಮುಖ, ಭಾರತದ ಸಿಲಿಕಾನ್ ಕಣಿವೆ ಹಾಗೂ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬ ಅಭಿದಾನಗಳಿಗೆ ಪಾತ್ರವಾದ ಬೆಂಗಳೂರು ನಗರ ದೇಶದ ಶ್ರೀಮಂತ ನಗರಗಳಲ್ಲೊಂದಾಗಿದೆ. ಕರ್ನಾಟಕ ರಾಜ್ಯದ ರಾಜಧಾನಿ ನಗರವಾಗಿರುವ ಬೆಂಗಳೂರು ಮೊದಲಿನಿಂದಲೂ ಹಿತಕರವಾದ ವಾತಾವರಣ ಹೊಂದಿದ್ದು ಉದ್ಯಾನಗಳ, ಕೆರೆಗಳ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಮೊದಲೆ ಸಾಕಷ್ಟು ಹೆಸರುವಾಸಿಯಾಗಿದ್ದ ಈ ನಗರ ಅಂತಾರಾಷ್ಟ್ರೀಯ ವಲಯದಲ್ಲಿ ಗುರುತಾದಾಗಿಂದ ಇಲ್ಲಿನ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿಗೊಂಡಿದೆ. ಬೆಂಗಳೂರು ಅನೇಕ ಪ್ರವಾಸಿ ಆಕರ್ಷಣೆಫ಼್ಗಳಿಗೆ ತವರಾಗಿದೆ.

ಚಿತ್ರಕೃಪೆ: Kailash Naik

3

3

ದೇಶದ ನಾಲ್ಕು ಮಹಾನಗರಗಳಲ್ಲಿ ಒಂದಾದ ಕೊಲ್ಕತ್ತಾ ಪಶ್ಚಿಮ ಬಂಗಾಳದ ರಾಜಧಾನಿಯಾಗಿದ್ದು ಶತಮಾನಗಳ ಶ್ರೀಮಂತ ಇತಿಹಾಸ ಹೊಂದಿದೆ. ಇಲ್ಲಿನ ಸಂಸ್ಕೃತಿ-ಸಮ್ಪ್ರದಾಯಗಳು ವಿಶಿಷ್ಟವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಹಿಂದೊಮ್ಮೆ ದೇಶದ ರಾಜಧಾನಿಯಾಗಿದ್ದ ಕಲ್ಕತ್ತಾ (ಇಂದಿನ ಕೊಲ್ಕತ್ತಾ) ದೇಶದ ಶ್ರೀಮಂತ ನಗರಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Abhijit Kar Gupta

2

2

ಪ್ರಸ್ತುತ ಭಾರತ ದೇಶದ ರಾಜಧಾನಿ ನಗರವಾಗಿರುವ ದೆಹಲಿ ಸಾಕಷ್ಟು ಅಭಿವೃದ್ಧಿ ಹೊಂದಿದ ನಗರವಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟಡಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಪಡೆಯುವ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಅದ್ಭುತ ಹಾಗೂ ವೈಭವದ ಇತಿಹಾಸ ಹೊಂದಿರುವ ದೆಹಲಿಯಲ್ಲಿ ನೋಡಲು ಅನೇಕ ಆಕರ್ಷಕ ಐತಿಹಾಸಿಕ ಸ್ಮಾರಕಗಳಿವೆ. ಅಲ್ಲದೆ ದೇಶದ ಶ್ರೀಮಂತ ನಗರಗಳ ಪೈಕಿ ಎರಡನೆಯ ಸ್ಥಾನದಲ್ಲಿ ದೆಹಲಿ ನಿಂತಿದೆ.

ಚಿತ್ರಕೃಪೆ: Arian Zwegers

1

1

ಜಿಡಿಪಿ ಲೆಕ್ಕಾಚಾರದಲ್ಲಿ ದೇಶದ ಮೊದಲ ಶ್ರೀಮಂತ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ ಮುಂಬೈ. ಮಹಾರಾಷ್ಟ್ರದ ರಾಜಧಾನಿ ಮುಂಬೈ ಸಾವಿರಾರು ಸಂಖ್ಯೆಯಲ್ಲಿ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ಹೊಂದಿರುವ ನಗರವಾಗಿದ್ದು ಭಾರತೀಯ ಚಲನಚಿತ್ರ ಭೂಮಿಯಾದ ಬಾಲಿವುಡ್ ನ ಕೇಂದ್ರಸ್ಥಾನವಾಗಿಯೂ ಹೆಸರುವಾಸಿಯಾಗಿದೆ. ಅಲ್ಲದೆ ಭಾರತದ ಆರ್ಥಿಕ ಕ್ಷೇತ್ರದ ರಾಜಧಾನಿ ಎಂತಲೂ ಇದನ್ನು ಕರೆಯಲಾಗುತ್ತದೆ. ಅದರಂತೆ ಮುಂಬೈ ನಗರವು ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಹೆರ್ಸರುವಾಸಿಯಾಗಿದೆ. ಇಲ್ಲಿನ ಕಡಲ ತೀರಗಳು, ಚಿತ್ರನಗರ, ಶಾಪಿಂಗ್ ಮಾಲುಗಳು, ದೇವಾಲಯಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ.

ಚಿತ್ರಕೃಪೆ: Cididity Hat

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X