Search
  • Follow NativePlanet
Share
» »ಭಾರತದ 10 ದೇವಾಲಯಗಳ ವಿಭಿನ್ನವಾದ ಆಚಾರಗಳು

ಭಾರತದ 10 ದೇವಾಲಯಗಳ ವಿಭಿನ್ನವಾದ ಆಚಾರಗಳು

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ ಅದರದೇ ಆದ ವಿಶಿಷ್ಟತೆಗಳಿವೆ. ಪೂರ್ವದಲ್ಲಿ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಮೊದಲು ಆ ದೇಗುಲಕ್ಕೆ ಒಂದು ಪ್ರತ್ಯೇಕವಾದ ಲಕ್ಷಣವಿರಬೇಕೆಂದು ಕೆಲವು ಅದ್ಭುತಗ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ ಅದರದೇ ಆದ ವಿಶಿಷ್ಟತೆಗಳಿವೆ. ಪೂರ್ವದಲ್ಲಿ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಮೊದಲು ಆ ದೇಗುಲಕ್ಕೆ ಒಂದು ಪ್ರತ್ಯೇಕವಾದ ಲಕ್ಷಣವಿರಬೇಕೆಂದು ಕೆಲವು ಅದ್ಭುತಗಳನ್ನು ಸೃಷ್ಟಿಸುತ್ತಿದ್ದರು.

ಅವುಗಳಲ್ಲಿ ಕೆಲವು ಹೇಗೆ ಮಾಡಿದರೊ ಎಂಬುದಕ್ಕೆ ಉತ್ತರ ಸಿಕ್ಕಿದ್ದರೆ ಇನ್ನೂ ಕೆಲವು ಅದ್ಭುತಗಳಿಗೆ ಉತ್ತರ ಸಿಗದೆ ರಹಸ್ಯವಾಗಿಯೇ ಉಳಿದಿದೆ. ಆದರೆ ಕೆಲವು ದೇವಾಲಯಗಳು ವಿಭಿನ್ನವಾದ ಆಚಾರಗಳಿಗೂ ವಿಶಿಷ್ಟತೆ ಹೊಂದಿವೆ. ಆಯಾ ದೇವಾಲಯಗಳಿಗೆ ತನ್ನದೇ ಆದ ಆಚಾರ ವಿಚಾರಗಳಿಂದ ಪ್ರಸಿದ್ಧಿ ಪಡೆದಿದೆ. ಅಂತಹ 10 ದೇವಾಲಯಗಳ ಬಗ್ಗೆ ಹಾಗೂ ವಿಭಿನ್ನತೆಯ ಬಗ್ಗೆ ತಿಳಿಯೋಣ.

ಪ್ರಸ್ತುತ ಲೇಖನದಲ್ಲಿ 10 ವಿಭಿನ್ನ ದೇವಾಲಯಗಳ ಬಗ್ಗೆ ತಿಳಿಯೋಣ.

ಚಿದಂಬರಂ ನಟರಾಜ ದೇವಾಲಯ

ಚಿದಂಬರಂ ನಟರಾಜ ದೇವಾಲಯ

ಈ ದೇವಾಲಯವು ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಈ ದೇವಾಲಯವು ತಮಿಳುನಾಡಿನಲ್ಲಿದೆ. ಈ ದೇವಾಲಯದಲ್ಲಿ ಅದ್ವೀತಿಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಈ ವಿಗ್ರಹವು ಭರತನಾಟ್ಯ ದೇವರಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕøಷ್ಟವಾದ ಲಿಂಗ ರೂಪದ ಬದಲಾಗಿ ಮಾನವತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಸಾಮಾನ್ಯವಾಗಿ ಪ್ರಸಿದ್ಧವಾದ ಪುಣ್ಯ ಕ್ಷೇತ್ರಗಳಲ್ಲಿ ಉತ್ಸವ ಮಾಡುವ ಸಮಯದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಕೊಂಡ್ಯುವುದು ಪ್ರತೀತಿ. ಆದರೆ ಈ ಚಿದಂಬರಂ ನಟರಾಜ ದೇವಾಲಯದಲ್ಲಿ ಉತ್ಸವ ವಿಗ್ರಹವಿರುವುದಿಲ್ಲ. ಬದಲಾಗಿ ಗರ್ಭಗುಡಿಯಲ್ಲಿರುವ ಮೂಲ ಗುಡಿಯ ದೇವರನ್ನೇ ಉತ್ಸವ ಮೂರ್ತಿಯಾಗಿ ಬಳಸುತ್ತಾರೆ.


PC:YOUTUBE

ಐರಾವತೇಶ್ವರ ದೇವಾಲಯ

ಐರಾವತೇಶ್ವರ ದೇವಾಲಯ

ತಮಿಳುನಾಡಿನ ಕುಂಭಕುಣಂನಲ್ಲಿ ತಾರಾಸುರ ಎಂಬ ಗ್ರಾಮದಲ್ಲಿ ಐರಾವತೇಶ್ವರ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಇಲ್ಲಿನ ಶಿಲ್ಪಕಲಾ ಚಾರ್ತುಯತೆಗೆ ಅತ್ಯಂತ ಪ್ರಖ್ಯಾತ ಹೊಂದಿದ ದೇವಾಲಯವಾಗಿದೆ. ಇಲ್ಲಿ 2 ಸ್ತಂಭಗಳಲ್ಲಿ ವಾಲಿ ಹಾಗೂ ಸುಗ್ರೀವರ ಯುದ್ಧದಲ್ಲಿ ರಾಮ ವಾಲಿಯನ್ನು ಕೊಲ್ಲುವ ಸನ್ನಿವೇಶವನ್ನು ಚಿತ್ರಿಸಿದ್ದಾರೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ವಿಶೇಷವೆನೆಂದರೆ ಈ ಶಿಲ್ಪಗಳನ್ನು ಒಂದು ಸ್ತಂಭದಿಂದ ನೋಡಿದರೆ ವಾಲಿ ಹಾಗೂ ಸುಗ್ರೀವರ ಯುದ್ಧ ಕಾಣುತ್ತದೆ. ಇನ್ನೊಂದು ಸ್ತಂಭದಿಂದ ನೋಡಿದರೆ ವಾಲಿ ಸುಗ್ರೀವರ ಯುದ್ಧದ ಸಮಯದಲ್ಲಿ ಬಾಣಗಳನ್ನು ಹಿಡಿದಿರುವ ರಾಮನ ಚಿತ್ರ ಕಾಣುತ್ತದೆ. ಇಲ್ಲಿನ ವಿಶಿಷ್ಟತೆ ಏನೆಂದರೆ ಒಂದು ಸ್ತಂಭದಿಂದ ನೋಡಿದರೆ ವಾಲಿ ಸುಗ್ರೀವ ಮಾತ್ರ ಕಾಣುತ್ತಾರೆ. ಇನ್ನೊಂದು ಸ್ತಂಭದಿಂದ ನೋಡಿದರೆ ರಾಮ ಸ್ಪಷ್ಟವಾಗಿ ಕಾಣುತ್ತಾನೆ. ಇದು ಅಂದಿನ ಶಿಲ್ಪಿಗಳ ಮಹೋನ್ನತ ಕಲಾ ಕೌಶಲ್ಯಕ್ಕೆ ಸಾಕ್ಷಿ ಎನ್ನಬಹುದಾಗಿದೆ.


PC:YOUTUBE

ಕೊಯಮತ್ತೂರು ವನನಾಥ ಸ್ವಾಮಿ

ಕೊಯಮತ್ತೂರು ವನನಾಥ ಸ್ವಾಮಿ

ಸಾಧಾರಣಾವಾಗಿ ಹಲವು ದೇವಾಲಯದಲ್ಲಿನ ಪ್ರಧಾನವಾದ ಗರ್ಭಗುಡಿಯಲ್ಲಿ ಮೂಲ ವಿರಾಟ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸುವುದನ್ನು ಕಾಣುತ್ತೇವೆ. ಆದರೆ ಕೊಯಮತ್ತೂರು ಸಮೀಪದಲ್ಲಿನ ಕೊಳಿತ್ತಲೈನ ಸಮೀಪದಲ್ಲಿ ಕಂದಂಬವನನಾಥ ಸ್ವಾಮಿ ದೇವಾಲಯವಿದೆ. ಆ ದೇವಾಲಯದ ಗರ್ಭಗುಡಿಯಲ್ಲಿ 2 ನಟರಾಜಸ್ವಾಮಿ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ. ಪೂಜ ಕೈಂಕರ್ಯವನ್ನು ಆ 2 ಮೂರ್ತಿಗಳಿಗೂ ಒಂದೇ ಸಲ ಮಾಡುತ್ತಾರೆ.


PC:YOUTUBE

ಚೈನನ ಶ್ರೀ ಪೆರುಂಬುದೂರ್

ಚೈನನ ಶ್ರೀ ಪೆರುಂಬುದೂರ್

ಶ್ರೀ ಪೆರುಂಬುದೂರ್ ದೇವಾಲಯವು ತಮಿಳಿನಾಡು ರಾಜ್ಯದ ಚೆನ್ನೈ ನಗರದ ನೈರುತ್ಯ ಭಾಗದಲ್ಲಿದೆ. ಈ ದೇವಾಲಯವು ಹಿಂದೂ ವೈಷ್ಣವ ಸಂತರ ದೇಗುಲ. ಇದು ಶ್ರೀ ರಾಮನುಜರವರ ಜನ್ಮಸ್ಥಾನವಾಗಿದೆ.

PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಈ ದೇವಾಲಯದ ಮೂರ್ತಿಯು ಕಂಚು ಅಥವಾ ಪಂಚ ಲೋಹದಲ್ಲಿರದೇ ಕರ್ಪೂರ, ಕುಂಕುಮ ಹಾಗೂ ಹೂ ವನಗಳ ಗಿಡ ಮೂಲಿಕೆಗಳಿಂದ ಮಾಡಿರುವ ಮೂರ್ತಿಯಾಗಿದೆ.


PC:YOUTUBE

ನಿತ್ಯ ಕಲ್ಯಾಣಿ ಸಮೇತ ವಿಶ್ವನಾಥಸ್ವಾಮಿ ದೇವಾಲಯ

ನಿತ್ಯ ಕಲ್ಯಾಣಿ ಸಮೇತ ವಿಶ್ವನಾಥಸ್ವಾಮಿ ದೇವಾಲಯ

ಈ ದೇವಾಲಯವು ಕೂಡ ತಮಿಳುನಾಡಿನ ತಿರುನೆಲ್‍ವೇಲಿ ಎಂಬ ಪಟ್ಟಣಕ್ಕೆ ಕಡಯಂ ಎಂಬ ಮಾರ್ಗ ಮಧ್ಯೆದಲ್ಲಿರುವುದೇ ಈ ನಿತ್ಯ ಕಲ್ಯಾಣಿ ಸಮೇತ ವಿಶ್ವನಾಥ ಸ್ವಾಮಿ ದೇವಾಲಯ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಈ ದೇವಾಲಯದ ಪ್ರಾಂಗಣದಲ್ಲಿ ಒಂದು ಮಹಾ ಬಿಂಬ ವೃಕ್ಷವಿದೆ. ಈ ಪವಿತ್ರ ವೃಕ್ಷದಲ್ಲಿ ಬೆಳೆಯುವ ಬಿಲ್ವ ಕಾಯಿ ಸಾಧಾರಣಾ ಬಿಲ್ವ ಕಾಯಿಯ ಹಾಗೆ ಇರದೇ ಲಿಂಗ ಸ್ವರೂಪದಲ್ಲಿ ಬೆಳೆಯುತ್ತದೆ. ಆದ್ದರಿಂದ ಭಕ್ತರು ಈ ವೃಕ್ಷವನ್ನು ಸಾಕ್ಷಾತ್ ಶಿವನ ಸ್ವರೂಪ ಎಂದು ಆರಾಧಿಸುತ್ತಾರೆ.


PC:YOUTUBE

ಸಾಮರಲ ಕೋಟೆ ಆಂಜನೇಯ ಸ್ವಾಮಿ

ಸಾಮರಲ ಕೋಟೆ ಆಂಜನೇಯ ಸ್ವಾಮಿ

ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಸಾಮರಲ ಕೋಟೆ ಎಂಬ ಊರು ಇದೆ. ಇಲ್ಲಿ 3 ಬೀದಿಯ ಕೊನೆಯಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಿಗ್ರಹ ಅತ್ಯಂತ ಎತ್ತರವಾಗಿರುತ್ತದೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಈ ಆಂಜನೇಯ ಸ್ವಾಮಿ ದೇವಾಲಯದ ವಿಶಿಷ್ಟತೆ ಏನೆಂದರೆ ಈ ಆಜಂನೇಯನ ಕಣ್ಣು ಹಾಗೂ ಭದ್ರಾಚಲ ಸ್ವಾಮಿಯ ಪಾದಕ್ಕೆ ಸಮಾನವಾಗಿರುವಂತೆ ಒಂದೇ ಎತ್ತರದಲ್ಲಿರುತ್ತದೆ.


PC:YOUTUBE

ಧರ್ಮಪುರಿ ಅಭಿಷ್ಟವರದಾ ಸ್ವಾಮಿ

ಧರ್ಮಪುರಿ ಅಭಿಷ್ಟವರದಾ ಸ್ವಾಮಿ

ತಮಿಳುನಾಡಿನ ಧರ್ಮಪುರಿ ಎಂಬ ಊರಿನಿಂದ 10 ಕಿ,ಮೀ ದೂರದಲ್ಲಿ ಅಭಿಷ್ಟವರದಾ ಸ್ವಾಮಿ ಎಂಬ ವಿಷ್ಣುವಿನ ದೇವಾಲಯವಿದೆ. ಈ ದೇವಾಲಯದಲ್ಲಿ ನವಗ್ರಹದ ಒಂದು ಸುಂದರವಾದ ಮಂಟಪವಿದೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಈ ನವಗ್ರಹ ಮಂಟಪದಲ್ಲಿರುವ ನವಗ್ರಹ ದೇವತೆಗಳೆಲ್ಲಾ ಸ್ರೀ ರೂಪದಲ್ಲಿರುವುದು ವಿಶೇಷವಾಗಿದೆ. ಇಂತಹ ನವಗ್ರಹಗಳ ಮೂರ್ತಿಗಳಂತೆ ಬೇರೆಲ್ಲೂ ಕಾಣಲಾಗುವುದಿಲ್ಲ.

PC:YOUTUBE

ಧನ ಪುದುರ್ ಶಿವಾಲಯ

ಧನ ಪುದುರ್ ಶಿವಾಲಯ

ಶಿವಾಲಯಗಳಲ್ಲಿ ಶಿವಲಿಂಗದ ಎದುರು ನಂದಿ ಇರುವುದು ಸಾಮಾನ್ಯ. ಲಿಂಗಕ್ಕೆ ನಮ್ಮ ವೇದಗಳಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ನಂದಿಗೂ ಇದೆ. ಹಾಗಾಗಿಯೇ ಪ್ರತಿ ಶಿವಲಿಂಗದ ಮುಂದೆ ನಂದಿ ನೆಲೆಸಿರುತ್ತಾನೆ. ನಂದಿ ಎಂದ ಕೂಡಲೇ ಸುಂದರವಾದ 2 ಕುಂಬುಗಳನ್ನು ಹೊಂದಿದ್ದು, ಶಾಂತಚಿತ್ತವಾಗಿ ಕುಳಿತು ನೋಡುತ್ತಿರುವ ವಿಗ್ರಹವನ್ನು ನಾವು ನೋಡುತ್ತೇವೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಆದರೆ ಮಧುರೈ ಜಿಲ್ಲೆಯ ವಿರುಗ ನಗರ ಸಮೀಪದಲ್ಲಿನ ಧನ ಪುದುರ್ ಎಂಬಲ್ಲಿನ ಶಿವಾಲಯದಲ್ಲಿ ನಂದಿಶ್ವರನಿಗೆ ಕೊಂಬು, ಕಿವಿ ಇಲ್ಲದೇ ಇರುವ ನಂದಿ ಮೂರ್ತಿ ಇದೆ. ಇಂತಹ ನಂದಿ ಪ್ರಪಂಚದ ಯಾವುದೇ ಶಿವಾಲಯಗಳಲ್ಲಿ ಇರುವುದಿಲ್ಲ.


PC:YOUTUBE

ವೇಲೂರು ದೇವಾಲಯ

ವೇಲೂರು ದೇವಾಲಯ

ತಮಿಳುನಾಡಿನ ವೇಲೂರು ಎಂಬಲ್ಲಿ ಒಂದು ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತ್ಯೇಕವಾದ ಸನ್ ಡಯಾಲ್ ಇದೆ. ಈ ಸನ್ ಡಯಾಲ್ ದೇವಾಲಯದ ಸ್ತಂಭಗಳಲ್ಲಿ ಅರ್ಧಚಂದ್ರಕಾರದಂತೆ ಇದ್ದು 1 ರಿಂದ 6 ರವರೆ ಹಾಗೂ 6 ರಿಂದ 1 ರವರೆಗೆ ಸಂಖ್ಯೆಗಳಿರುತ್ತವೆ. ಅರ್ಧಚಂದ್ರಕಾರದ ಮೇಲೆ ಒಂದು ಹೂವು ಇಟ್ಟರೆ ಸಂಖ್ಯೆಗಳ ಮೇಲೆ ನೆರಳು ಬೀಳುತ್ತದೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ನೆರಳು ಯಾವ ಸಂಖ್ಯೆಯ ಮೇಲೆ ನೆರಳು ಬೀಳುತ್ತದೆಯೋ ಅದೇ ಗಡಿಯಾರದ ನಿರ್ಧಿಷ್ಟವಾದ ಸಮಯವಾಗಿರುತ್ತದೆ. ಒಂದು ಸ್ತಂಭ ನಿರ್ಧಿಷ್ಟವಾದ ಅವಧಿಯನ್ನು ತೋರಿಸುವುದು ಆಶ್ಚರ್ಯವೇ ಸರಿ.


PC:YOUTUBE

ಕುಂಭಕೋಣಂ ವಿಷ್ಣು ಮೂರ್ತಿ ದೇವಾಲಯ

ಕುಂಭಕೋಣಂ ವಿಷ್ಣು ಮೂರ್ತಿ ದೇವಾಲಯ

ಕುಂಣಕೋಣಂನ ನಾಚ್ಚಿಯಾರ್ ಕೋವೆಲ್ ಎಂಬ ಪ್ರದೇಶದಲ್ಲಿ ವಿಷ್ಣು ಮೂರ್ತಿ ದೇವಾಲಯವಿದೆ. ಅಲ್ಲಿನ ಉತ್ಸವದ ಸಮಯದಲ್ಲಿ ಸ್ವಾಮಿಯ ಉತ್ಸವ ವಿಗ್ರಹಗಳನ್ನು ಕಲ್ಲಿನಿಂದ ನಿರ್ಮಿಸಿದ ಗರುಡವಾಹನದ ಮೇಲೆ ಉತ್ಸವ ನಡೆಸುತ್ತಾರೆ.


PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಉತ್ಸವಕೆಂದು ಮೂರ್ತಿಯನ್ನು ಕೇವಲ 4 ಜನರು ತೆಗೆದುಕೊಂಡು ಬರುತ್ತಾರೆ. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಉತ್ಸವ ಮೂರ್ತಿಯು 8 ಜನರು ಹಿಡಿದುಕೊಳ್ಳಬೇಕಾದಷ್ಟು ಭಾರವಾಗುತ್ತದೆ. ನಂತರ 16 ಮಂದಿ ಕ್ರಮೇಣ 30 ಜನರು ನಂತರ 62 ಜನರು ಹಿಡಿದುಕೊಳ್ಳಬೇಕಾದ ಭಾರವಾಗುತ್ತಾ ಬರುತ್ತದೆ. ಉತ್ಸವ ಮೂರ್ತಿಯ ಭಾರವು ಕ್ರಮೇಣ ದುಪ್ಪಟ್ಟುವಾಗುತ್ತಾ ಹೋಗುತ್ತದೆ. ಇದು ನಂಬಲು ಅಸಾಧ್ಯವಾದರೂ ಇದು ನಿಜ.


PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X