Search
  • Follow NativePlanet
Share
» »ಭಾರತದ ಟಾಪ್ 10 ಐಷಾರಾಮಿ ಶಾಪಿಂಗ್ ಮಾಲ್‍ಗಳು.

ಭಾರತದ ಟಾಪ್ 10 ಐಷಾರಾಮಿ ಶಾಪಿಂಗ್ ಮಾಲ್‍ಗಳು.

ವಾರಾಂತ್ಯ ಬಂದರೆ ಸಾಕು ಶಾಪಿಂಗ್ ಮಾಡಲು ತಟ್ಟನೆ ಹೊರಟು ಬಿಡುತ್ತೇವೆ. ಆದರೆ ಪ್ರವಾಸಕ್ಕೆಂದು ಬೇರೆ ರಾಜ್ಯಗಳಿಗೆ ಹೊರಟಾಗ ಅಲ್ಲಿನ ಮಾಲ್‍ಗಳಿಗೊಮ್ಮೆ ಭೇಟಿ ನೀಡಬೇಕು ಎಂದು ಎನಿಸದಿರದು.

ಶಾಪಿಂಗ್ ಮಾಡಬೇಕು ಎಂದರೇ ಎಲ್ಲಾರಿಗೂ ಅಚ್ಚುಮೆಚ್ಚು. ಬೆಂಗಳೂರಿನಲ್ಲಿ ಸಹಜವಾಗಿ ಹಲವಾರು ಪ್ರಸಿದ್ದವಾದ ಶಾಪಿಂಗ್ ಮಾಲ್‍ಗಳಿವೆ. ಕುಟುಂಬದವರೊಡನೆ ಹಾಗೂ ಸ್ನೇಹಿತರೊಡನೆ ಶಾಪಿಂಗ್ ಮಾಡಲು ಹೋಗುತ್ತಿರುತ್ತೇವೆ. ಒಂದೇ ಸೂರಿನ ಅಡಿ ಎಲ್ಲವೂ ದೊರೆಯುವುದೇ ಶಾಪಿಂಗ್ ಮಾಲ್. ವಾರಾಂತ್ಯ ಬಂದರೆ ಸಾಕು ಶಾಪಿಂಗ್ ಮಾಡಲು ತಟ್ಟನೆ ಹೊರಟು ಬಿಡುತ್ತೇವೆ. ಆದರೆ ಪ್ರವಾಸಕ್ಕೆಂದು ಬೇರೆ ರಾಜ್ಯಗಳಿಗೆ ಹೊರಟಾಗ ಅಲ್ಲಿನ ಮಾಲ್‍ಗಳಿಗೊಮ್ಮೆ ಭೇಟಿ ನೀಡಬೇಕು ಎಂದು ಎನಿಸದಿರದು. ಭಾರತದ ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ಹಲವಾರು ಬೃಹತ್ ಶಾಪಿಂಗ್ ಮಾಲ್‍ಗಳಿವೆ ಒಮ್ಮೆ ಭೇಟಿ ಕೊಟ್ಟಾಗ ಶಾಪಿಂಗ್ ಮಾಡಿ ಬನ್ನಿ. ಪ್ರಸುತ್ತ ಲೇಖನದಲ್ಲಿ ಭಾರತದ ಬೃಹತ್ ಶಾಪಿಂಗ್ ಮಾಲ್‍ಗಳ ಬಗ್ಗೆ ತಿಳಿಯೋಣ.

ಲಾಲು ಇಂಟರ್ ನ್ಯಾಷನಲ್ ಶಾಪಿಂಗ್ ಮಾಲ್, ಕೊಚ್ಚಿ

ಲಾಲು ಇಂಟರ್ ನ್ಯಾಷನಲ್ ಶಾಪಿಂಗ್ ಮಾಲ್, ಕೊಚ್ಚಿ

ಭಾರತದ ಅತ್ಯಂತ ದೊಡ್ಡದಾದ ಶಾಪಿಂಗ್ ಮಾಲ್ ಎಂದರೆ ಅದು ಲಾಲು ಇಂಟರ್ ನ್ಯಾಷನಲ್ ಶಾಪಿಂಗ್ ಮಾಲ್ ಇದು ಕೇರಳ ರಾಜ್ಯದ ಹೃದಯ ಭಾಗವಾದ ಕೊಚ್ಚಿಯಲ್ಲಿದೆ. ಇದರ ನಿರ್ಮಾಣವನ್ನು ಮಾಡಿದವರು ಎಮ್,ಎ ಯೊಸೆಪ್ ಅಲಿ. ಈತ ಬಹಳ ದೊಡ್ಡ ಉದ್ಯಮಿಯಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಈ ಶಾಪಿಂಗ್ ಮಾಲ್ 2013 ರ ಮಾರ್ಚ್ 10 ರಂದು ಉದ್ಘಟಿಸಲಾಯಿತು. ಈ ಶಾಪಿಂಗ್ ಮಲ್ 5 ಮಹಡಿಯನ್ನು ಹೊಂದಿದ್ದು ಅತ್ಯಂತ ಸುಂದರವಾಗಿದೆ. ಈ ಶಾಪಿಂಗ್ ಮಾಲ್‍ನ ವಿಶೇಷತೆ ಏನೆಂದರೆ 17,00,000 ಚದರ ಅಡಿಯಷ್ಟು ಬೃಹತ್ತಾಗಿದೆ.

PC:Vivekobey

ಫೋನಿಕ್ಸ್ ಮಾರ್ಕೆಟ್ ಸಿಟಿ, ಮುಂಬೈ

ಫೋನಿಕ್ಸ್ ಮಾರ್ಕೆಟ್ ಸಿಟಿ, ಮುಂಬೈ

ಭಾರತದ ಎರಡನೇ ದೊಡ್ಡ ಶಾಪಿಂಗ್ ಮಾಲ್ ಎಂದರೆ ಅದು ಫೋನಿಕ್ಸ್ ಮಾರ್ಕೆಟ್ ಸಿಟಿ. ಈ ಮಾಲ್ ಮುಂಬೈ ಮಹಾನಗರದ ಕುರ್‍ಲಾದಲ್ಲಿನ ಲಾಲ್ ಬಹುದ್ದುರ್ ಶಾಸ್ತ್ರಿಯ ಮಾರ್ಗದಲ್ಲಿದೆ. ಇಲ್ಲಿ ಸುಮಾರು 600 ಕಿಂತ ಹೆಚ್ಚಿನ ಬ್ರ್ಯಾಂಡ್‍ಗಳನ್ನು ಕಾಣಬಹುದು. ಈ ಮಾಲ್ ಬೆಳಗ್ಗೆ 11 ರಿಂದ ರಾತ್ರಿ 11:30 ರವರೆಗೆ ತೆರೆದಿರಲಾಗಿರುತ್ತದೆ. ಲಾಲು ಇಂಟರ್ ನ್ಯಾಷನಲ್ ಶಾಪಿಂಗ್‍ಗಿಂತ ಮುಂಚೆ ಫೋನಿಕ್ಸ್ ಮಾರ್ಕೆಟ್ ಸಿಟಿಯು ಮೊದಲನೇ ಸ್ಥಾನವನ್ನು ಅಲಂಕರಿಸಿತ್ತು. ಈ ಫೋನಿಕ್ಸ್ ಶಾಪಿಂಗ್ ಮಾಲ್‍ಗೆ ಭೇಟಿ ನೀಡಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಇಲ್ಲಿ ಸುಮಾರು 20 ಕ್ಕಿಂತ ಅಧಿಕ ರೆಸ್ಟೋರೆಂಟ್‍ಗಳಿವೆ.

PC:Trinidade

ಫೋನಿಕ್ಸ್ ಮಾರ್ಕೆಟ್ ಸಿಟಿ, ಪುಣೆ

ಫೋನಿಕ್ಸ್ ಮಾರ್ಕೆಟ್ ಸಿಟಿ, ಪುಣೆ

ಈ ಶಾಪಿಂಗ್ ಮಾಲ್ ಕೂಡ ಮಹಾರಾಷ್ಟ್ರದ ಪುಣೆಯಲ್ಲಿದೆ. ಈ ಫೋನಿಕ್ಸ್ ಮಾರ್ಕೆಟ್ ಸಿಟಿಯು ಭಾರತದ ಮೂರನೇ ದೊಡ್ಡದಾದ ಶಾಪಿಂಗ್ ಮಾಲ್ ಆಗಿದೆ. ಈ ಶಾಪಿಂಗ್ ಮಾಲ್ ಅತ್ಯಂತ ಸುಸಜ್ಜಿತವಾದ ಹಾಗೂ ಸುಂದರವಾಗಿದೆ. ಪುಣೆ ನಗರಕ್ಕೆ ಬರುವ ಅದೇಷ್ಟೂ ಪ್ರವಾಸಿಗರು ಈ ಮಾಲ್ ಅನ್ನು ಭೇಟಿ ನೀಡದೇ ಇರಲಾರರು. ಇದು ಒಂದು ಪ್ರವಾಸಿ ತಾಣವಾಗಿದೆ. ಈ ಮಾಲ್ ಸುಮಾರು 34,00,000 ಚದರ ಅಡಿ ಹೊಂದಿದ್ದು ಸುಂದರವಾಗಿದೆ.

PC:Naikshweta747

ಫೋನಿಕ್ಸ್ ಮಾರ್ಕೆಟ್ ಸಿಟಿ, ಚೆನೈ

ಫೋನಿಕ್ಸ್ ಮಾರ್ಕೆಟ್ ಸಿಟಿ, ಚೆನೈ

ಚೆನೈ ತಂತ್ರಜ್ಞಾನದಲ್ಲಿ ಮುಂಚುಣಿಯಲ್ಲಿರುವ ನಗರವಾಗಿದೆ. ತಮಿಳುನಾಡು ಪ್ರವಾಸತಾಣವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ಈ ಫೋನಿಕ್ಸ್ ಮಾರ್ಕೆಟ್ ಸಿಟಿಯು ಅತ್ಯಂತ ಆಕರ್ಷಕತೆಯನ್ನು ಉಂಟು ಮಾಡಿದೆ. ಚೆನೈನಲ್ಲಿ ಫೋನಿಕ್ಸ್ ಪ್ರಖ್ಯಾತವಾದ, ಬಹುದೊಡ್ಡದಾದ ಶಾಪಿಂಗ್ ಮಾಲ್ ಆಗಿದೆ. ಈ ಶಾಪಿಂಗ್ ಮಾಲ್ 300 ಅಂಗಡಿಗಳನ್ನು ಹೊಂದಿದ್ದು ಉತ್ತಮ ದರ್ಜೆಯ ಆಹಾರವನ್ನು, ಸೌಲಭ್ಯವನ್ನು ಒದಗಿಸುತ್ತದೆ.

PC:Nandhinikandhasamy

ಮಂತ್ರಿ ಮಾಲ್ ,ಬೆಂಗಳೂರು

ಮಂತ್ರಿ ಮಾಲ್ ,ಬೆಂಗಳೂರು

ಬೆಂಗಳೂರಿನ ಅತ್ಯಂತ ದೊಡ್ಡದಾದ ಶಾಪಿಂಗ್ ಮಾಲ್ ಎಂದರೆ ಮಂತ್ರಿ ಮಹಲ್. ಬೆಂಗಳೂರು ನಗರಿಯಲ್ಲಿ ಹಲವಾರು ದೇಶ, ವಿದೇಶಗಳಿಂದಲೂ ಜನರು ಇಲ್ಲಿನ ಪ್ರವಾಸ ತಾಣಕ್ಕೆ ಬರುವುದರಿಂದ ಶಾಪಿಂಗ್ ಮಾಡಲು ಅತ್ಯುತ್ತಮವಾದ ಸ್ಥಳ ಇದಾಗಿದೆ. ಬೆಂಗಳೂರಿನಲ್ಲಿ ಹಲವಾರು ಪ್ರಸಿದ್ದ ಮಾಲ್‍ಗಳಿವೆ ಅವುಗಳಲ್ಲಿ ಈ ಮಾಲ್ ಅತ್ಯಂತ ಆಕರ್ಷಕ ಹಾಗೂ ದೊಡ್ಡದಾಗಿದೆ. ಮಂತ್ರಿ ಮಾಲ್ ಗೆ ಶಾಪಿಂಗ್ ಮಾಡಲು ಬರುವವರಿಗೆ ಉತ್ತಮವಾದ ಅನುಭವ ಉಂಟು ಮಾಡುತ್ತದೆ. ಇದು ಸರಾಸರಿ 17,00,000 ಚದರ ಅಡಿ ಹಾಗೂ 240 ಕ್ಕೂ ಹೆಚ್ಚು ಅಂಗಡಿಗಳು, 11,000 ಕ್ಕಿಂತ ಹೆಚ್ಚು ಬ್ರ್ಯಾಂಡ್‍ಗಳನ್ನು ಹೊಂದಿದೆ. ಒಂದು ತಿಂಗಳಿಗೆ ಈ ಮಾಲ್‍ಗೆ ಭೇಟಿ ನೀಡುವವರ ಸಂಖ್ಯೆ ಸುಮಾರು 1.6 ಮಿಲಿಯನ್‍ಗಿಂತಲೂ ಅಧಿಕ.

PC:Ashwin Kumar

Z ಸ್ಕ್ವೇರ್ ಶಾಪಿಂಗ್ ಮಾಲ್, ಕಾನ್ಪೂರ್

Z ಸ್ಕ್ವೇರ್ ಶಾಪಿಂಗ್ ಮಾಲ್, ಕಾನ್ಪೂರ್

ಈ ಶಾಪಿಂಗ್ ಮಾಲ್ ಉತ್ತರ ಪ್ರದೇಶದ ಕಾನ್ಪೂರದಲ್ಲಿದೆ. ಉತ್ತರ ಪ್ರದೇಶ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಹಾಗಾಗಿ ಶಾಪಿಂಗ್ ಪ್ರೇಮಿಗಳು ಹೆಚ್ಚಾಗಿಯೇ ಇರುತ್ತಾರೆ. ಕಾನ್ಪೂರ ಅತ್ಯಂತ ದೊಡ್ಡದಾದ ಮಾಲ್ ಎಂದರೆ ಅದು ಈ ಸ್ಕ್ವೇರ್ ಶಾಪಿಂಗ್ ಮಾಲ್ ಆಗಿದೆ. ಈ ಮಾಲ್‍ನ್ನು 2010 ರಲ್ಲಿ ನಿರ್ಮಾಣ ಮಾಡಲಾಯಿತು. ಇದು 15,00,000 ಚದರ ಅಡಿಯಷ್ಟು ದೊಡ್ಡದಾಗಿದೆ. ಇಲ್ಲಿ ಹಲವಾರು ರೀತಿಯ ಸ್ವಾಧಿಷ್ಟ ಆಹಾರಗಳು, ಬಣ್ಣ ಬಣ್ಣದ ಉಡುಪುಗಳು ಇನ್ನೂ ಹಲವಾರು ರೀತಿಯ ಸೌಲಭ್ಯಗಳನ್ನು ಈ ಮಾಲ್ ಕೂಡ ಹೊಂದಿದೆ.

PC:Bob Ionescu

ಗ್ರೇಟ್ ಇಂಡಿಯಾ ಪ್ಲೇಸ್ ಶಾಪಿಂಗ್ ಮಾಲ್, ನಾಯ್ಡ್

ಗ್ರೇಟ್ ಇಂಡಿಯಾ ಪ್ಲೇಸ್ ಶಾಪಿಂಗ್ ಮಾಲ್, ನಾಯ್ಡ್

ಈ ಶಾಪಿಂಗ್ ಮಾಲ್ ಅತ್ಯಂತ ಸುಂದರವಾಗಿದ್ದು ಉತ್ತರ ಪ್ರದೇಶದ ಮತ್ತೊಂದು ಆರ್ಕಕವಾದ ಮಾಲ್. ಈ ಶಾಪಿಂಗ್ ಮಲ್ ಉತ್ತರ ಪ್ರದೇಶದ ಪ್ರಸಿದ್ದ ನಗರ ನಾಯ್ಡ್‍ದಲ್ಲಿದೆ. ಇದೂ ಕೂಡ 15,00,000 ಚದರ ಅಡಿಯಷ್ಟು ದೊಡ್ಡದಾದ ಮಾಲ್. ಇಲ್ಲಿ ಹಲವಾರು ಬಗೆಯ ಉಡುಪು, ಸಿನಿಮಾ ಕಾಂಪ್ಲೆಕ್ಸ್ ಹಾಗೂ ಮನರಂಜನೆಗೆ ಅತ್ಯುತ್ತಮವಾದ ಸ್ಥಳ ಇದಾಗಿದೆ. ಇದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಾಪಿಂಗ್ ಮಾಲ್‍ಗಳಲ್ಲಿ ಇದು ಒಂದು.

PC:Nikhilb239

ಸೆಲೆಕ್ಟ್ ಸಿಟಿ ವಾಕ್, ನವ ದೆಹಲಿ

ಸೆಲೆಕ್ಟ್ ಸಿಟಿ ವಾಕ್, ನವ ದೆಹಲಿ

ನವ ದೆಹಲಿ ಭಾರತದ ರಾಜಕೀಯ ತಾಣ. ಈ ರಾಜಕೀಯವಾದ ಚಟುವಟಿಕೆಯೇ ಅಲ್ಲದೇ ಉತ್ತಮ ಶಾಪಿಂಗ್ ಮಾಡಲು ಯೋಗ್ಯವಾದ ತಾಣ ಇದಾಗಿದೆ. ಈ ಸೆಲೆಕ್ಟ್ ಸಿಟಿ ವಾಕ್ ಶಾಪಿಂಗ್ ಮಾಲ್ ಜೀವನದಲ್ಲಿ ಎಂದೂ ಮರೆಯಲಾಗದ ಅನುಭವವನ್ನು ಉಂಟು ಮಾಡುತ್ತದೆ. ಈ ಮಾಲ್ ದೆಹಲಿಯ ಅತ್ಯಂತ ದೊಡ್ಡದಾದ ಶಾಪಿಂಗ್ ಮಾಲ್ ಆಗಿದೆ. ಸುಮಾರು 13.00,000 ಚದರ ಅಡಿ ಹೊಂದಿರುವ ಈ ಮಾಲ್ 2007 ರಲ್ಲಿ ಆರಂಭವಾಯಿತು. 130 ಕ್ಕಿಂತ ಅಧಿಕವಾದ ಅಂಗಡಿಗಳು ಹಾಗೂ 600 ಕ್ಕಿಂತ ಅಧಿಕ ಬ್ರ್ಯಾಂಡ್‍ಗಳನ್ನು ಈ ಮಾಲ್ ಹೊಂದಿದೆ.

PC:KuwarOnline

ಆಲ್ಫ್ ಒನ್ ಶಾಪಿಂಗ್ ಮಾಲ್, ಅಹಮೆದಾ ಬಾದ್

ಆಲ್ಫ್ ಒನ್ ಶಾಪಿಂಗ್ ಮಾಲ್, ಅಹಮೆದಾ ಬಾದ್

ಈ ಮಾಲ್ ಗುಜರಾತ್‍ನ ಅಹಮೆದಾ ಬಾದ್‍ನಲ್ಲಿ ಇದೆ. ಗುಜರಾತ್ ಭಾರತದಲ್ಲಿನ ಅಭಿವೃದ್ದಿ ಹೊಂದುತ್ತಿರುವ ರಾಜ್ಯಗಳಲ್ಲಿ ಇದು ಒಂದಾಗಿದ್ದು, ದೇಶ ಮತ್ತು ವಿದೇಶ ಮಟ್ಡದಲ್ಲಿ ಹಲವಾರು ವ್ಯಾಪಾರ ವ್ಯವಹಾರಗಳು ಈ ರಾಜ್ಯದಲ್ಲಿ ನಡೆಯುವುದರಿಂದ ಈ ಶಾಪಿಂಗ್ ಮಾಲ್ ಕೂಡ ಅತ್ಯಂತ ಪ್ರಸಿದ್ದವಾಗಿದೆ. ಆಲ್ಫ್ ಒನ್ ಶಾಪಿಂಗ್ ಮಾಲ್ 2011 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಾಗೂ ಸ್ಥಳಿಯರಿಗೆ ಅಚ್ಚು ಮೆಚ್ಚಿನ ಸ್ಥಳವೆಂದರೆ ಈ ಶಾಪಿಂಗ್ ಮಾಲ್. ಈ ಮಾಲ್ ಗುಜರಾತ್‍ನಲ್ಲಿನ ಅಹಮೆದಾ ಬಾದ್‍ನ ಅತಿ ದೊಡ್ಡ ಶಾಪಿಂಗ್ ಮಾಲ್. 12,00,000 ಚದರ ಅಡಿಯಷ್ಟು ದೊಡ್ಡದಾಗಿದ್ದು, 220 ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ.

PC:Tiia Monto

 ನೆಪ್ಚೂನ್ ಮ್ಯಾಗ್‍ನೆಟ್ ಮಾಲ್, ಮುಂಬೈ

ನೆಪ್ಚೂನ್ ಮ್ಯಾಗ್‍ನೆಟ್ ಮಾಲ್, ಮುಂಬೈ

ಮುಂಬೈನ ಬೃಹತ್ ಶಾಪಿಂಗ್ ಮಾಲ್ ಎಂದರೆ ಅದು ನೆಪ್ಚೂನ್ ಮ್ಯಾಗ್‍ನೆಟ್ ಮಾಲ್. ಮುಂಬೈ ಒಂದು ಅತ್ಯುತ್ತಮವಾದ ಪ್ರವಾಸಿ ತಾಣ. ಇಲ್ಲಿಗೆ ದೇಶ ವಿದೇಶಗಳಿಂದ ಹಲವಾರು ಪ್ರವಾಸಿಗರು ಬರುವುದರಿಂದ ಶಾಪಿಂಗ್ ಮಾಡಲು ಈ ಮಾಲ್ ಭೇಟಿ ನೀಡುತ್ತಾರೆ. ಈ ಮಾಲ್ ಕುಟುಂಬಿಕರೊಂದಿಗೆ ಮನರಂಜನಾತ್ಮಕವಾಗಿ ಶಾಪಿಂಗ್ ಎಂದೇ ಖ್ಯಾತವಾಗಿದೆ. ಆಕರ್ಷಕವಾದ ಸೊಬಗು ಹೊಂದಿರುವ ಈ ಮಾಲ್ ಮುಂಬೈನ ಐಷಾರಾಮಿ ಶಾಪಿಂಗ್ ಮಾಲ್ ಎಂದು ಹೆಸರುವಾಸಿ ಪಡೆದಿದೆ.

PC:KuwarOnline

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X