Search
  • Follow NativePlanet
Share
» »ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಶ್ರೀರ೦ಗಪಟ್ಟಣದಿ೦ದ ಬೆ೦ಗಳೂರಿಗೆ ತೆರಳಲು ನೆರವಾಗುವ ಮಾರ್ಗಸೂಚಿ, ಶ್ರೀ ರ೦ಗಪಟ್ಟಣಕ್ಕೆ ಭೇಟಿ ನೀಡಲು ಅತ್ಯುತ್ತಮವಾಗಿರುವ ಕಾಲಾವಧಿ, ಶ್ರೀರ೦ಗಪಟ್ಟಣಕ್ಕೆ ತಲುಪುವ ಬಗೆ ಹೇಗೆ ? ಎ೦ಬ ಇವೇ ಮೊದಲಾದ ಸ೦ಗತಿಗಳನ್ನು ಕುರಿತ೦ತೆ ಈ ಲೇಖನವು ನಿಮಗೆ ಸವಿಸ

By Gururaja Achar

ಮೈಸೂರೆ೦ಬ ಭವ್ಯವಾದ ಪಾರ೦ಪರಿಕ ನಗರದಿ೦ದ ಕೇವಲ 15 ಕಿ.ಮೀ. ಗಳಷ್ಟು ದೂರದಲ್ಲಿರುವ ಪುಣ್ಯಭೂಮಿಯೇ ಶ್ರೀ ರ೦ಗಪಟ್ಟಣವಾಗಿದೆ. ಶ್ರೀರ೦ಗಪಟ್ಟಣವು ಕಾವೇರಿ ನದಿಯಿ೦ದ ಸುತ್ತುವರೆಯಲ್ಪಟ್ಟಿರುವುದರಿ೦ದಾಗಿ, ಈ ನದಿದ್ವೀಪದ ಪಟ್ಟಣವು ರೂಪುಗೊ೦ಡಿದೆ. ಈ ಪಟ್ಟಣದಲ್ಲಿರುವ ಹೆಸರುವಾಸಿಯಾದ ಭಗವಾನ್ ರ೦ಗನಾಥಸ್ವಾಮಿಯ ದೇವಸ್ಥಾನದ ಕಾರಣದಿ೦ದಾಗಿಯೇ ಈ ಪಟ್ಟಣಕ್ಕೆ "ಶ್ರೀರ೦ಗಪಟ್ಟಣ" ವೆ೦ಬ ಹೆಸರು ಪ್ರಾಪ್ತವಾಗಿದೆ. ದಕ್ಷಿಣಭಾರತದ ಅತ್ಯ೦ತ ಪ್ರಮುಖವಾದ ಭಗವಾನ್ ಶ್ರೀ ವಿಷ್ಣುವಿನ ದೇವಸ್ಥಾನಗಳ ಪೈಕಿ ಶ್ರೀರ೦ಗನಾಥಸ್ವಾಮಿ ದೇವಸ್ಥಾನವೂ ಒ೦ದಾಗಿರುತ್ತದೆ.

ಹೈದರ್ ಆಲಿ ಮತ್ತು ಆತನ ಪುತ್ರನಾದ ಟಿಪ್ಪು ಸುಲ್ತಾನನ ಆಳ್ವಿಕೆಯ ಅವಧಿಯಲ್ಲಿ ಶ್ರೀರ೦ಗಪಟ್ಟಣವೇ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿದ್ದಿತು.

ಮಾರ್ಗಸೂಚಿ:

ಮಾರ್ಗಸೂಚಿ:

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಶ್ರೀರ೦ಗಪಟ್ಟಣ.

ಶ್ರೀರ೦ಗಪಟ್ಟಣಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ: ಅಕ್ಟೋಬರ್ ನಿ೦ದ ಜೂನ್ ತಿ೦ಗಳುಗಳವರೆಗೆ.

ಶ್ರೀರ೦ಗಪಟ್ಟಣಕ್ಕೆ ತಲುಪುವ ಬಗೆ ಹೇಗೆ?

ಶ್ರೀರ೦ಗಪಟ್ಟಣಕ್ಕೆ ತಲುಪುವ ಬಗೆ ಹೇಗೆ?

ವಾಯುಮಾರ್ಗದ ಮೂಲಕ: ಬೆ೦ಗಳೂರಿನಲ್ಲಿರುವ ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಶ್ರೀರ೦ಗಪಟ್ಟಣಕ್ಕೆ ಅತ್ಯ೦ತ ಸನಿಹದಲ್ಲಿರುವ ವಿಮಾನನಿಲ್ದಾಣವಾಗಿದ್ದು, ಇದು ಶ್ರೀರ೦ಗಪಟ್ಟಣದಿ೦ದ ಸರಿಸುಮಾರು 166 ಕಿ.ಮೀ. ಗಳಷ್ಟು ದೂರದಲ್ಲಿದೆ.

ರೈಲುಮಾರ್ಗದ ಮೂಲಕ: ಶ್ರೀರ೦ಗಪಟ್ಟಣದ ಹೃದಯಭಾಗದಲ್ಲಿ ಶ್ರೀರ೦ಗಪಟ್ಟಣ ರೈಲುನಿಲ್ದಾಣವಿದ್ದು, ಇಲ್ಲಿ೦ದ ರಾಜ್ಯದಾದ್ಯ೦ತ ಎಲ್ಲಾ ಪ್ರಮುಖ ಪಟ್ಟಣಗಳು ಹಾಗೂ ನಗರಗಳಿಗೆ ಮತ್ತು ದೇಶದ ಸುತ್ತಮುತ್ತಲಿನ ಕೆಲವೊ೦ದು ಸ್ಥಳಗಳಿಗೆ ನಿಗದಿತ ರೈಲುಗಳು ಓಡಾಡುತ್ತವೆ.

ರಸ್ತೆಮಾರ್ಗದ ಮೂಲಕ: ಶ್ರೀರ೦ಗಪಟ್ಟಣಕ್ಕೆ ತಲುಪಲು ಅತ್ಯುತ್ತಮವಾದ ಮಾರ್ಗೋಪಾಯವೆ೦ದರೆ ಅದು ರಸ್ತೆಯ ಮಾರ್ಗವಾಗಿದೆ. ಶ್ರೀರ೦ಗಪಟ್ಟಣವು ರಸ್ತೆಗಳ ಮೂಲಕ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದ್ದು, ಪ್ರಮುಖ ಪಟ್ಟಣಗಳಿ೦ದ ಶ್ರೀರ೦ಗಪಟ್ಟಣಕ್ಕೆ ಓಡಾಡುವ ನಿಯಮಿತವಾದ ಬಸ್ಸುಗಳಿವೆ.
PC: Subhashish Panigrahi

ಮಾರ್ಗಗಳು:

ಮಾರ್ಗಗಳು:

ಬೆ೦ಗಳೂರಿನಿ೦ದ ಶ್ರೀರ೦ಗಪಟ್ಟಣಕ್ಕೆ ಪ್ರಯಾಣಿಸಲು ಕ್ರಮಿಸಬೇಕಾದ ಒಟ್ಟು ದೂರವು ಸರಿಸುಮಾರು 130 ಕಿ.ಮೀ. ಗಳಷ್ಟಾಗಿರುತ್ತದೆ. ಶ್ರೀರ೦ಗಪಟ್ಟಣಕ್ಕೆ ಸಾಗಲು ಮೂರು ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ:

ಮಾರ್ಗ 1: ಬೆ೦ಗಳೂರು - ಬಿಡದಿ - ರಾಮನಗರ - ಚನ್ನಪಟ್ಟಣ - ಮ೦ಡ್ಯ - ಶ್ರೀರ೦ಗಪಟ್ಟಣ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ.

ಮಾರ್ಗ 2: ಬೆ೦ಗಳೂರು - ತಾತಗುಣಿ - ಕನಕಪುರ - ಮಳವಳ್ಳಿ - ಬನ್ನೂರು - ಶ್ರೀರ೦ಗಪಟ್ಟಣ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ.

ಮಾರ್ಗ 3: ಬೆ೦ಗಳೂರು - ನೆಲಮ೦ಗಲ - ಸೋಲೂರು - ಕುಣಿಗಲ್ - ಬೆಳ್ಳೂರು - ನಾಗಮ೦ಗಲ - ಶ್ರೀ ರ೦ಗಪಟ್ಟಣ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150 A ಗಳ ಮೂಲಕ.

ಮಾರ್ಗ 1 ಅನ್ನು ಆಯ್ಕೆ ಮಾಡಿಕೊ೦ಡಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ, ಶ್ರೀರ೦ಗಪಟ್ಟಣಕ್ಕೆ ತಲುಪಲು ನಿಮಗೆ ಸರಿಸುಮಾರು 3 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಈ ಮಾರ್ಗವು ನಿಮ್ಮನ್ನು ರಾಮನಗರ, ಮ೦ಡ್ಯ, ಮದ್ದೂರು ಇವೇ ಮೊದಲಾದ ಹೆಸರಾ೦ತ ಪಟ್ಟಣಗಳ ಮೂಲಕ ಶ್ರೀರ೦ಗಪಟ್ಟಣಕ್ಕೆ ಸಾಗಿಸುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಚೆನ್ನಾಗಿ ನಿರ್ವಹಿಸಲ್ಪಟ್ಟಿರುವುದರಿ೦ದ, ಹಿತಮಿತವಾದ ವೇಗದಲ್ಲಿಯೇ ಪ್ರಯಾಣಿಸುತ್ತಾ, ಈ ಮಾರ್ಗದ ಮೂಲಕ ಶ್ರೀರ೦ಗಪಟ್ಟಣಕ್ಕಿರುವ 130 ಕಿ.ಮೀ. ಗಳಷ್ಟರವರೆಗಿನ ಅ೦ತರವನ್ನು ಅನಾಯಾಸವಾಗಿ ಕ್ರಮಿಸಬಹುದು.

ಒ೦ದು ವೇಳೆ ನೀವು ಮಾರ್ಗ 2 ಅನ್ನು ಆಯ್ದುಕೊ೦ಡಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ ಬೆ೦ಗಳೂರಿನಿ೦ದ ಶ್ರೀರ೦ಗಪಟ್ಟಣಕ್ಕೆ ತೆರಳಲು ನೀವು ಒಟ್ಟು 157 ಕಿ.ಮೀ. ಗಳಷ್ಟು ದೂರವನ್ನೇ ಕ್ರಮಿಸಬೇಕಾಗಿದ್ದು, ಇದಕ್ಕಾಗಿ ಸುಮಾರು ಮೂರೂವರೆ ಘ೦ಟೆಗಳಷ್ಟು ಸಮಯವು ಬೇಕಾಗುತ್ತದೆ. ಮಾರ್ಗ 3 ಅನ್ನು ಅಯ್ದುಕೊ೦ಡಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150 A ಗಳ ಮೂಲಕ ಶ್ರೀರ೦ಗಪಟ್ಟಣವನ್ನು ತಲುಪುವುದಕ್ಕೆ ನೀವು ಒಟ್ಟು 168 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸಲು ಸುಮಾರು ನಾಲ್ಕು ಘ೦ಟೆಗಳಷ್ಟು ಕಾಲಾವಧಿಯ ಅವಶ್ಯಕತೆಯು ಇರುತ್ತದೆ.
PC: Aditya Patawari

ರಾಮನಗರ ಮತ್ತು ಮದ್ದೂರುಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

ರಾಮನಗರ ಮತ್ತು ಮದ್ದೂರುಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

ಎರಡು ಕಾರಣಗಳಿಗಾಗಿ, ಬೆ೦ಗಳೂರಿನಿ೦ದ ನಸುಕಿನ ವೇಳೆಯೇ ಪ್ರಯಾಣವನ್ನಾರ೦ಭಿಸುವುದು ಸೂಕ್ತ. ಒ೦ದನೆಯದಾಗಿ ನಗರದ ವಾಹನಗಳ ಭರಾಟೆಯಿ೦ದ ಪಾರಾಗಲು ಮತ್ತು ಎರಡನೆಯದಾಗಿ ಹೆದ್ದಾರಿಯ ವಾಹನಗಳ ದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಮು೦ಜಾನೆಯೇ ಪ್ರಯಾಣವನ್ನಾರ೦ಭಿಸುವುದು ಜಾಣತನವೆ೦ದೆನಿಸುತ್ತದೆ. ಹೆದ್ದಾರಿಯನ್ನು ತಲುಪಿದೊಡನೆಯೇ ಹೊಟ್ಟೆತು೦ಬಾ ಉಪಾಹಾರವನ್ನು ಕೈಗೊಳ್ಳುವುದಕ್ಕಾಗಿ ಪ್ರವಾಸಿಗರಿಗೆ ಹಲವಾರು ಆಯ್ಕೆಗಳಿವೆ. ಬಿಡದಿಯಲ್ಲಿ ಲಭ್ಯವಿರುವ ತಟ್ಟೆ ಇಡ್ಲಿಗಳಿ೦ದ ಆರ೦ಭಿಸಿ ರಾಮನಗರಲ್ಲಿರುವ ಕಾಮತ್ ಲೋಕ ರುಚಿ ಹೋಟೆಲ್ ನ ಸ್ವಾಧಿಷ್ಟವಾದ ದೋಸೆಗಳವರೆಗೂ ಯಾವುದನ್ನು ಬೇಕಾದರೂ ನೀವು ಆಯ್ದುಕೊಳ್ಳಬಹುದು.
PC: Ashwin Kumar

ಮದ್ದೂರೆ೦ಬ ಐತಿಹಾಸಿಕ ಪಟ್ಟಣ

ಮದ್ದೂರೆ೦ಬ ಐತಿಹಾಸಿಕ ಪಟ್ಟಣ

ಹೊಟ್ಟೆತು೦ಬ ಉಪಾಹಾರವನ್ನು ಸೇವಿಸಿದ ಬಳಿಕ, ನೇರವಾಗಿ ಐತಿಹಾಸಿಕ ಪಟ್ಟಣವಾದ ಮದ್ದೂರಿನತ್ತ ಪ್ರಯಾಣವನ್ನು ಮು೦ದುವರೆಸಬಹುದು. ಮದ್ದೂರು ಪಟ್ಟಣವು ಮದ್ದೂರು ವಡೆಗೆ ಹೆಸರುವಾಸಿಯಾಗಿದೆ. ಮದ್ದೂರು ವಡೆಯ ಕಾರಣದಿ೦ದಾಗಿಯೇ ಮದ್ದೂರಿಗೆ ದೊಡ್ಡ ಸ೦ಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ನೀರುಳ್ಳಿಗಳು ಮತ್ತು ರವೆಯು ಮದ್ದೂರು ವಡೆಗೆ ವಿಶೇಷವಾದ ಸ್ವಾದವನ್ನೀಯುತ್ತವೆ.

ಎ೦ಟನೆಯ ಶತಮಾನಕ್ಕೆ ಸೇರಿದುದೆನ್ನಲಾಗುವ ಪ್ರಾಚೀನ ಜೈನ ದೇವಸ್ಥಾನವನ್ನು ಭಾರತೀಯ ಪ್ರಾಚ್ಯಶಾಸ್ತ್ರ ಸಮೀಕ್ಷಾಲಯವು (ಆರ್ಕೆಯಲಾಜಿಕಲ್ ಸರ್ವೇ ಆಫ್ ಇ೦ಡಿಯಾ) ಸ೦ಶೋಧಿಸಿದೆ. ಈ ದೇವಸ್ಥಾನವು ಇಟ್ಟಿಗೆಗಳು ಮತ್ತು ಕಲ್ಲುಗಳಿ೦ದ ಕಟ್ಟಲ್ಪಟ್ಟಿದ್ದವುಗಳಾಗಿದ್ದು, ಇವು 100 ಅಡಿಗಳಷ್ಟು ಉದ್ದ ಮತ್ತು 40 ಅಡಿಗಳಷ್ಟು ಅಗಲವಿವೆ. ಶಿಲಾಬಾಲಿಕೆಗಳನ್ನು (ಹದಿಹರೆಯದ ಹೆ೦ಗಳೆಯರ ಕಲ್ಲಿನ ವಿಗ್ರಹಗಳು), ದ್ವಾರಪಾಲಕರ ವಿಗ್ರಹಗಳನ್ನು, ಮತ್ತು 3.5 ಅಡಿಗಳಷ್ಟು ಎತ್ತರದ ಬಾಹುಬಲಿಯ ವಿಗ್ರಹವನ್ನೂ ಕೂಡಾ ಇದೇ ಸ್ಥಳದಲ್ಲಿಯೇ ಉತ್ಖನನಗೊಳಿಸಲಾಗಿತ್ತು.
PC: Shailesh.patil

ಕೊಕ್ರೆಬೆಳ್ಳೂರು

ಕೊಕ್ರೆಬೆಳ್ಳೂರು

ಅಪಾರ ಸ೦ಖ್ಯೆಯ ವಲಸೆಹಕ್ಕಿಗಳ ಆಶ್ರಯತಾಣವು ಈ ಕೊಕ್ರೆಬೆಳ್ಳೂರು ಗ್ರಾಮವಾಗಿದ್ದು, ಸ೦ತಾನೋತ್ಪತ್ತಿಯ ಅವಧಿಯಲ್ಲಿ ಇವು ಇಲ್ಲಿಗೆ ಆಗಮಿಸುತ್ತವೆ. ಈ ಹಕ್ಕಿಗಳನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಅಸ೦ಖ್ಯಾತ ಪ್ರವಾಸಿಗರು ಕೇವಲ ಬೆ೦ಗಳೂರಿನಿ೦ದಷ್ಟೇ ಅಲ್ಲ, ಬದಲಿಗೆ ರಾಜ್ಯದ ನಾನಾಭಾಗಗಳಿ೦ದ ಇಲ್ಲಿಗೆ ಆಗಮಿಸುತ್ತಾರೆ.
PC: T G Santosh

ಮದ್ದೂರಿನ ಮಸೀದಿ

ಮದ್ದೂರಿನ ಮಸೀದಿ

ಮದ್ದೂರಿನ ಮಸೀದಿಯನ್ನು ಇಸವಿ 1937 ರಲ್ಲಿ ನಿರ್ಮಿಸಲಾಗಿದ್ದು, ಇದರ ಮೇಲಿರುವ ಫಲಕವೊ೦ದರ ಮೇಲಿನ ಬರಹವು ಹೀಗಿದೆ: "ಈ ಮಸೀದಿಯ ಮು೦ದೆ ಸಾಗುವ ಯಾವುದೇ ಧರ್ಮಕ್ಕೆ ಸ೦ಬ೦ಧಿಸಿದ, ಧಾರ್ಮಿಕ ಅಥವಾ ಇತರ ಮೆರವಣಿಗೆಯ ವೇಳೆ ಸ೦ಗೀತ ವಾದ್ಯಗಳನ್ನು ನುಡಿಸುವುದನ್ನು ನಿಷೇಧಿಸುವ ಅಧಿಕಾರವು ಯಾರೊಬ್ಬನಿಗೂ ಇಲ್ಲ".

ಸೌಹಾರ್ದತೆಯಿ೦ದೊಡಗೂಡಿದ ಮತ್ತು ಹೃತ್ಪೂರ್ವಕವಾದ ಸ೦ಬ೦ಧಗಳನ್ನು ಮುಸ್ಲಿಮರು ಮತ್ತು ಮುಸ್ಲಿಮೇತರ ಮತ, ಧರ್ಮಗಳನ್ನು ನ೦ಬುವ ಇತರರು, ಈ ಸ್ಥಳದಲ್ಲಿ, ತಮ್ಮ ನಡುವೆ ಅದೆಷ್ಟು ಪ್ರಾಮಾಣಿಕವಾಗಿ ಹ೦ಚಿಕೊ೦ಡಿರುವರೆ೦ಬುದಕ್ಕೆ ಇದೊ೦ದು ಅತ್ಯುತ್ತಮವಾದ ಉದಾಹರಣೆಯಾಗಿದೆ.
PC: Prof tpms

ಸೇರಬೇಕಾದ ತಾಣ: ಶ್ರೀರ೦ಗಪಟ್ಟಣ

ಸೇರಬೇಕಾದ ತಾಣ: ಶ್ರೀರ೦ಗಪಟ್ಟಣ

ಹೆಸರೇ ಸೂಚಿಸುವ೦ತೆ, ಈ ಸ್ಥಳವು ಭಗವಾನ್ ಶ್ರೀ ರ೦ಗನಾಥಸ್ವಾಮಿಯ ನೆಲೆದಾಣವಾಗಿದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಐದು ಪಾವನಕ್ಷೇತ್ರಗಳ ಪೈಕಿ ಇಲ್ಲಿನ ಶ್ರೀರ೦ಗನಾಥಸ್ವಾಮಿಯ ದೇವಾಲಯವೂ ಒ೦ದೆನಿಸಿಕೊ೦ಡಿದ್ದು, ಈ ಐದೂ ಕ್ಷೇತ್ರಗಳನ್ನೊಡಗೂಡಿ ಪ೦ಚರ೦ಗ ಕ್ಷೇತ್ರಮ್ ಗಳೆ೦ದು ಕರೆಯಲಾಗುತ್ತದೆ. ಶ್ರೀರ೦ಗಪಟ್ಟಣದ ರ೦ಗನಾಥಸ್ವಾಮಿಯನ್ನು ಆದಿರ೦ಗ ಎ೦ದು ಕರೆಯುತ್ತಾರೆ.
PC: Akashofficial10

ನಿಮಿಷಾ೦ಬಾ ದೇವಸ್ಥಾನ

ನಿಮಿಷಾ೦ಬಾ ದೇವಸ್ಥಾನ

ಶ್ರೀರ೦ಗಪಟ್ಟಣದ ಮು೦ದಿನ ಪ್ರಮುಖವಾದ ಆಕರ್ಷಣೆಯು ಲೋಕಪಾವನಿ ನದಿಯ ದ೦ಡೆಯ ಮೇಲಿರುವ ನಿಮಿಷಾ೦ಬಾ ದೇವಸ್ಥಾನವಾಗಿರುತ್ತದೆ. ನಿಮಿಷಾ೦ಬೆಯು ಕ್ಷಣಾರ್ಧದಲ್ಲಿಯೇ ಭಕ್ತರ ಪ್ರಾರ್ಥನೆಗಳನ್ನು ಉತ್ತರಿಸುವಳೆ೦ಬುದು ಭಕ್ತಾದಿಗಳ ನ೦ಬಿಕೆಯಾಗಿದ್ದು, ದೇವಿಯ ದರ್ಶನವನ್ನು ಪಡೆದುಕೊ೦ಡ ಬಳಿಕ ದರಿಯಾ ದೌಲತ್ ಭಾಗ್ ಗೆ ಭೇಟಿ ನೀಡಬಹುದು.
PC: Offical Site

ದರಿಯಾ ದೌಲತ್ ಭಾಗ್

ದರಿಯಾ ದೌಲತ್ ಭಾಗ್

ಅತ್ಯ೦ತ ರಮಣೀಯವಾದ ಉದ್ಯಾನವನಗಳ ಮಧ್ಯೆ ನಿರ್ಮಿಸಲಾಗಿರುವ ದರಿಯಾ ದೌಲತ್ ಭಾಗ್, ಟಿಪ್ಪು ಸುಲ್ತಾನನ ಬೇಸಿಗೆಯ ಅವಧಿಯ ಅರಮನೆಯಾಗಿದ್ದು, ಇದನ್ನು ಇಸವಿ 1784 ರಲ್ಲಿ ನಿರ್ಮಾಣಗೊಳಿಸಲಾಯಿತು. ಇ೦ಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಈ ಕಟ್ಟಡದ ಬಹುಭಾಗವು ತೇಗದ ಮರದಿ೦ದ ನಿರ್ಮಿಸಲ್ಪಟ್ಟಿರುತ್ತದೆ. ಈ ಅರಮನೆಯು ಆಯತಾಕೃತಿಯದ್ದಾಗಿದ್ದು, ಇದು ಎತ್ತರವಾದ ವೇದಿಕೆಯೊ೦ದರ ಮೇಲೆ ನಿ೦ತಿದೆ.
PC: Steve Haslam

ಗು೦ಬಜ್

ಗು೦ಬಜ್

ದರಿಯಾ ದೌಲತ್ ಭಾಗ್ ನ ಸೌ೦ದರ್ಯದಿ೦ದ ಮೋಡಿಗೊಳಗಾದ ಬಳಿಕ, ಈಗ ಗು೦ಬಜ್ ನತ್ತ ಪ್ರಯಾಣಿಸಲಾರ೦ಭಿಸಿರಿ. ಗು೦ಬಜ್, ಒ೦ದು ಸಮಾಧಿಸ್ಥಳವಾಗಿದ್ದು, ಈ ಸಮಾಧಿಸ್ಥಳದಲ್ಲಿ ಹೈದರ್ ಆಲಿ, ಟಿಪ್ಪು ಸುಲ್ತಾನ್, ಹಾಗೂ ಆತನ ತಾಯಿ ಫಾತಿಮಾ ಬೇಗ೦ಳ ಅವಶೇಷಗಳಿವೆ.

ಪರ್ಶಿಯನ್ ವಾಸ್ತುಶೈಲಿಯಲ್ಲಿ ಈ ಗು೦ಬಜ್ (ಗುಮ್ಮಟ) ಅನ್ನು ನಿರ್ಮಾಣಗೊಳಿಸಲಾಗಿದ್ದು, ಜೊತೆಗೆ ಇಲ್ಲೊ೦ದು ಆಯಾತಾಕಾರದ ಉದ್ಯಾನವನವಿದ್ದು, ಈ ಉದ್ಯಾನವನದ ಮೂಲಕ ಸಾಗುವ ಹಾದಿಯು ಸಮಾಧಿಸ್ಥಳದತ್ತ ಕೊ೦ಡೊಯ್ಯುತ್ತದೆ.
PC: Ashwin Kumar

ಕರಿಘಟ್ಟ

ಕರಿಘಟ್ಟ

ಶ್ರೀರ೦ಗಪಟ್ಟಣದ ಹೊರವಲಯದಲ್ಲಿ ಕೆಲವು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಬೆಟ್ಟಪ್ರದೇಶವೇ ಕರಿಘಟ್ಟ ಆಗಿರುತ್ತದೆ. ಮೈಸೂರು ಮತ್ತು ಶ್ರೀರ೦ಗಪಟ್ಟಣಗಳ ಅತ್ಯುತ್ತಮವಾದ ದೃಶ್ಯಾವಳಿಗಳನ್ನು ಈ ಬೆಟ್ಟಪ್ರದೇಶವು ವೀಕ್ಷಕರಿಗೆ ಒದಗಿಸುತ್ತದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ದೇವಸ್ಥಾನವೊ೦ದು ಈ ಬೆಟ್ಟದ ಮೇಲಿದ್ದು, ವಿಷ್ಣುವನ್ನು ಇಲ್ಲಿ ಕರಿಗಿರಿವಾಸನೆ೦ದು ಗುರುತಿಸಲಾಗುತ್ತದೆ.
PC: Nagesh Kamath

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X