Search
  • Follow NativePlanet
Share
» »ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ಭಾರತದಲ್ಲಿ ಅತ್ಯಂತ ದೊಡ್ಡದಾದ, ಪುರಾತನವಾದ ದೇವಾಲಯಗಳಿವೆ. ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಕಾಣಲು ಹಲವಾರು ಭಕ್ತರು ಭಕ್ತಿಯಿಂದ ಬರುವುದು ಸಾಮಾನ್ಯ ಸಂಗತಿಯೇ.ಆದರೆ ಆ ಮೂರ್ತಿಯೇ ದಿನ ದಿನಕ್ಕೆ ಮೂರ್ತಿಯ ಗಾತ್ರ ದೊಡ್ಡದಾಗುತ

ಭಾರತದಲ್ಲಿ ಅತ್ಯಂತ ದೊಡ್ಡದಾದ, ಪುರಾತನವಾದ ದೇವಾಲಯಗಳಿವೆ. ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಕಾಣಲು ಹಲವಾರು ಭಕ್ತರು ಭಕ್ತಿಯಿಂದ ಬರುವುದು ಸಾಮಾನ್ಯ ಸಂಗತಿಯೇ.

ಆದರೆ ಆ ಮೂರ್ತಿಯೇ ದಿನ ದಿನಕ್ಕೆ ಮೂರ್ತಿಯ ಗಾತ್ರ ದೊಡ್ಡದಾಗುತ್ತಿದ್ದರೆ ಆಶ್ಚರ್ಯವಾಗದೇ ಇರದು. ಸ್ವಯಂ ಭೂಮಿಯಿಂದ ಹುಟ್ಟಿದ ಅದೆಷ್ಟೂ ದೇವಾಲಯಗಳು ದಿನ ನಿತ್ಯ ಮೂರ್ತಿಯ ಮಹಿಮೆಯನ್ನು ನಾವು ಗುರುತಿಸುತ್ತೇವೆ. ಹಾಗೇಯೆ ನಿಮಗೆ ಚಕಿತಗೊಳಿಸುವ ದೇವಾಲಯದ ಮೂರ್ತಿ ಕೂಡ ಇದೆ.

ಅದೇನು? ಎಂದು ಕೇಳುತ್ತಿದೀರಾ? ವಾರಾಣಾಸಿಯಲ್ಲಿರುವ ತಿಲಬಂದೇಶ್ವರ ದೇವಾಲಯದಲ್ಲಿ ಮಾಹಾದೇವ ಶಿವನ ದೇವಾಲಯವಿದೆ. ಈ ದೇವಾಲಯವು ಸ್ವಯಂ ಭೂಮಿಯಲ್ಲಿ ಹುಟ್ಟಿದ್ದು ಸುಮಾರು 2000 ಕ್ಕಿಂತ ಹಳೆಯಾದಾದ ಶಿವಲಿಂಗವಾಗಿದೆ. ಇಲ್ಲಿ ಮಾಹಾ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ವಿಶೇಷವೆನೆಂದರೆ ಈ ದೇವಾಲಯದಲ್ಲಿರುವ ಶಿವಲಿಂಗವು ದಿನ ದಿನಕ್ಕೆ ಗಾತ್ರದಲ್ಲಿ ಹೆಚ್ಚಾಗುತ್ತಿರುವುದು.

ಪ್ರಸ್ತುತ ಲೇಖನದ ಮೂಲಕ ಈ ವೈಶಿಷ್ಟತೆ ಹೊಂದಿರುವ ದೇವಾಲಯದ ಬಗ್ಗೆ ತಿಳಿಯೋಣ.

ವಿಶೇಷ

ವಿಶೇಷ

ದಿನದಿಂದ ದಿನಕ್ಕೆ ಈ ದೇವಾಲಯದಲ್ಲಿರುವ ಶಿವಲಿಂಗದ ಗಾತ್ರವು ಹೆಚ್ಚಾಗುತ್ತಿದೆ ಇದೊಂದು ವಿಶೇಷವೇ ಸರಿ. ಪ್ರಸ್ತುತ ಲಿಂಗ 31/2 ಅಡಿ ಎತ್ತರವಿದೆ. ಆದರೆ ಲಿಂಗದ ಕೆಳಗೆ 20 ಅಡಿಗಳ ಆಳದಲ್ಲಿ ಇರಬಹುದು ಎಂದು ಭಾವಿಸುತ್ತಾರೆ.


PC:YOUTUBE

ವಿಜ್ಞಾನಿ

ವಿಜ್ಞಾನಿ

ಈ ಶಿವಲಿಂಗವು ದಿನದಿಂದ ದಿನಕ್ಕೆ ಹೀಗೆ ದೊಡ್ಡದಾಗುತ್ತಿರುವುದನ್ನು ಕಂಡು ಹಲವಾರು ವಿಜ್ಞಾನಿಗಳು ಈ ದೇವಾಲಯದ ಶಿವಲಿಂಗದ ಮೇಲೆ ಪ್ರಯೋಗ ಮಾಡಿದ್ದಾರೆ.

PC:YOUTUBE

ಶಿವ ಪುರಾಣ

ಶಿವ ಪುರಾಣ

ಈ ದೇವಾಲಯ ಬಗ್ಗೆ ಶಿವ ಪುರಾಣದಲ್ಲಿರುವುದನ್ನು ಕೂಡ ಉಲ್ಲೇಖವಿದೆ. ಕಣ್ಣಿಗೆ 31/2 ಅಡಿ ಹಾಗೂ ಭೂಮಿಯ ಒಳ ಭಾಗದಲ್ಲಿ 20 ಅಡಿ ಇರುವ ಮಹಾ ಶಿವನ ದರ್ಶನ ಭಾಗ್ಯ ಪಡೆಯುವುದು ಪೂರ್ವ ಜನ್ಮದ ಪುಣ್ಯ.


PC:YOUTUBE

ಆರತಿ ಸಮಯ

ಆರತಿ ಸಮಯ

ಈ ದೇವಾಲಯದಲ್ಲಿ ಶಿವಲಿಂಗವನ್ನು ಆರತಿ ಮಾಡುವ ಸಮಯದಲ್ಲಿ ದರ್ಶನ ಮಾಡಬೇಕಂತೆ ಇದರಿಂದ ಹಲವಾರು ಕಷ್ಟಗಳು ಪರಿಹಾರವಾಗಿ, ಸುಖ ಶಾಂತಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

PC:YOUTUBE

ಭೂ ಸ್ಥಾಪಿತ

ಭೂ ಸ್ಥಾಪಿತ

ಶ್ರೀ ತಿಲಬಂದೇಶ್ವರ ಮಂದಿರವು ವಾರಾಣಾಸಿಯ ಪವಿತ್ರವಾದ ನಗರದ ಅತ್ಯಂತ ಹಳೆಯ ಹಾಗೂ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಧಾರ್ಮಿಕ ಪ್ರಸಿದ್ಧಿ ಹೊಂದಿರುವ ಶಿವಾಲಯ. 18 ನೇ ಶತಮಾನದಲ್ಲಿ ಭೂ ಸ್ಥಾಪಿತವಾಗಿರಬಹುದು ಎಂದು ಗುರುತಿಸಲಾಗಿದೆ.

PC:YOUTUBE

ಎಲ್ಲಿದೆ?

ಎಲ್ಲಿದೆ?

ಈ ಮಹಿಮಾನ್ವಿತ ದೇವಾಲಯವು ಮಂದಿರ ಪಾಂಡೆ ಹವೇಲಿ, ಬೇಲ್ ಪುರ್ ಬಂಗಾಳಿ ಟೊಲ್ ಇಂಡರ್ ಕಾಲೇಜ್ ಪಕ್ಕದಲ್ಲಿದೆ. ಗಂಗ ನದಿಯು 500 ಮೀಟರ್ ಪೂರ್ವದಲ್ಲಿ, 3.2 ಕಿ,ಮೀ ಉತ್ತರ ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ಮತ್ತು 1.5 ಕಿ,ಮೀ ನೈಋತ್ಯದಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಾಲಯ ನೆಲೆಗೊಂಡಿದೆ.

PC:YOUTUBE

ವಿಶೇಷ ಪೂಜೆ

ವಿಶೇಷ ಪೂಜೆ

ಈ ದೇವಾಲಯದಲ್ಲಿ ಸೋಮವಾರದಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಹಾಗೇಯೆ ನವರಾತ್ರಿಯ ದಿನದಂದು ಅದ್ಭುತವಾಗಿ ಸಂಭ್ರಮಾಚಾರಣೆಯನ್ನು ಮಾಡಲಾಗುತ್ತದೆ. ಶ್ರಾವಣ, ನವರಾತ್ರಿ, ಮಕರ ಸಂಕ್ರಾಂತಿ, ಅಯ್ಯಪ್ಪ ಹಬ್ಬಗಳನ್ನು ಇನ್ನೂ ಹಲವಾರು ಹಬ್ಬಗಳನ್ನು ಈ ದೇವಾಲಯದಲ್ಲಿ ವಿಜೃಭಣೆಯಿಂದ ಆಚರಿಸಲಾಗುತ್ತದೆ.

PC:YOUTUBE

ಇತರ ದೇವತಾ ಮೂರ್ತಿಗಳು

ಇತರ ದೇವತಾ ಮೂರ್ತಿಗಳು

ಈ ವಿಶಿಷ್ಟ ದೇವಾಲಯದಲ್ಲಿ ಪಾರ್ವತಿ, ವಿಭಂದೇಶ್ವರ, ಭೈರವ ಮತ್ತು ಅಯ್ಯನ ಮೂರ್ತಿಗಳನ್ನು ಕಾಣಬಹುದಾಗಿದೆ.

PC:YOUTUBE

ಭಕ್ತರು

ಭಕ್ತರು

ಈ ವೈಶಿಷ್ಟತೆ ಇರುವ ದೇವಾಲಯದಲ್ಲಿನ ಶಿವ ಲಿಂಗದ ದರ್ಶನ ಭಾಗ್ಯ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ.

PC:YOUTUBE

ಪ್ರವೇಶ ಸಮಯ

ಪ್ರವೇಶ ಸಮಯ

ಈ ಮಾಹಿಮಾನ್ವಿತ ದೇವಾಲಯವು 24 ಗಂಟೆಯು ತೆರೆದಿರಲಾಗುತ್ತದೆ. ಸದಾ ಭಕ್ತರಿಗೆ ದರ್ಶನದ ಭಾಗ್ಯವನ್ನು ಮಾಹಾ ಶಿವನು ನೀಡುತ್ತಾನೆ.


PC:YOUTUBE

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ದೇವಾಲಯವು ಉತ್ತರ ಪ್ರದೇಶದ ವಾರಾಣಾಸಿಯಲ್ಲಿರುವುದರಿಂದ ಸಮೀಪದ ವಿಮಾನ ನಿಲ್ದಾಣವೆಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ಇಂಟರ್ ನ್ಯಾಷನಲ್ ಏರ್ಪೋಟ್. ಇಲ್ಲಿಂದ ಸುಮಾರು 1 ಗಂಟೆ 30 ನಿಮಿಷದಲ್ಲಿ ಈ ದೇವಾಲಯಕ್ಕೆ ತಲುಪಬಹುದಾಗಿದೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X