ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಹುಲಿಯಿಲ್ಲದ ಹುಲಿ ಬೆಟ್ಟ

Written by: Divya Pandit
Updated: Wednesday, February 8, 2017, 11:20 [IST]
Share this on your social network:
   Facebook Twitter Google+ Pin it  Comments

ಗಿರಿಗಳ ರಾಣಿ ಎಂದು ಕರೆಯಿಸಿಕೊಳ್ಳುವ ನೀಲಗಿರಿ ಪರಿಸರ ಪ್ರೇಮಿಗಳಿಗೊಂದು ರಮಣೀಯ ತಾಣ. ಅನೇಕ ಗಿರಿಧಾಮಗಳಿರುವ ಇಲ್ಲಿ ವರ್ಷಪೂರ್ತಿ ತಂಪಾದ ಹವಾಮಾನ ಇರುವುದನ್ನು ಕಾಣಬಹುದು. ಇಂತಹ ಜಾಗದಲ್ಲಿ ಚಾರಣ ಮಾಡಿದರೆ ಅದೊಂದು ಸುಂದರ ಅನುಭವ ನಮ್ಮ ಪಾಲಾಗುತ್ತದೆ. ಚುಮು ಚುಮು ಚಳಿಯಲ್ಲಿ ಬೆಟ್ಟ ಹತ್ತುವುದು, ಅಲ್ಲಿರುವ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುವುದು ಎಂದರೆ ಅದೇನೋ ಒಂದು ಖುಷಿ. ನಿಜ, ಈ ಸುಂದರ ತಾಣಕ್ಕೆ ಒಮ್ಮೆ ಬಂದರೆ ನಮ್ಮ ಹೃದಯ ಕಳೆದು ಹೋಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಎಷ್ಟು ನೋಡಿದರೂ ಸಾಲದಷ್ಟು ತಾಣಗಳು ಇಲ್ಲಿವೆ. ಅದರಲ್ಲಿ ಎಲೆಮರೆಯ ಕಾಯಂತಿರುವ ಹುಲಿ ಬೆಟ್ಟವೂ ಒಂದು.

ಹುಲಿಯ ಬೆಟ್ಟ
ಊಟಿಯ ಪೂರ್ವಭಾಗದಲ್ಲಿ ಬರುವ ಈ ಬೆಟ್ಟ, ಸಿಟಿಯ ಮಧ್ಯ ಭಾಗದಿಂದ 16 ಕಿ.ಮೀ. ದೂರದಲ್ಲಿದೆ. ಈ ಬೆಟ್ಟಕ್ಕೆ ಒಮ್ಮೆ ಬಂದರೆ ಇದರ ಸೆರೆಯಾಳು ಆಗಿಬಿಡುತ್ತೇವೆ. ನಿಶ್ಯಬ್ದವಾದ ಬೆಟ್ಟ, ಎಲ್ಲೆಲ್ಲೂ ಹಸಿರು ಸಿರಿ, ಸುತ್ತಲೂ ಮೋಡಗಳಿಂದ ಜಿನುಗುತ್ತಲಿರುವ ಇಬ್ಬನಿ, ಚಾರಣ ಮಾಡುತ್ತಿದ್ದರೆ ದಣಿವಾದ ಅನುಭವವೇ ಆಗುವುದಿಲ್ಲ. ಹುಲಿಯ ಬೆಟ್ಟ ಎಂದಾಕ್ಷಣ ಇಲ್ಲಿ ಹುಲಿಯವಾಸ ಹೆಚ್ಚಾಗಿರಬಹುದು ಎಂದು ಭಾವಿಸಬೇಡಿ. ಹಿಂದೆ ಇಲ್ಲಿ ಹುಲಿಗಳ ವಾಸ ಹೆಚ್ಚಿತ್ತೆಂಬ ಮಾತಿದೆಯಷ್ಟೆ. ಅದಕ್ಕಾಗಿಯೇ ಈ ಬೆಟ್ಟದ ಹೆಸರು ಹುಲಿಬೆಟ್ಟ ಎಂದು ಕರೆಯುತ್ತಾರೆ ಎನ್ನುತ್ತಾರೆ ಇಲ್ಲಿಯ ಸ್ಥಳೀಯರು.

ಹುಲಿಯಿಲ್ಲದ ಹುಲಿ ಬೆಟ್ಟ

PC : Vineeth Mohan

ಬೆಟ್ಟದಲ್ಲಿ ಏನಿದೆ?
ಹುಲಿ ಬೆಟ್ಟ ಹತ್ತಿ ಮೇಲೆ ಸಾಗಿದರೆ ಬೆಟ್ಟದ ತುದಿಯಲ್ಲಿ ಒಂದು ನೀರಿನ ಕೆರೆ ಇರುವುದನ್ನು ಕಾಣಬಹುದು. ಈ ನೀರು ವರ್ಷ ಪೂರ್ತಿ ಹೀಗೆ ತುಂಬಿರುತ್ತದೆ. ಇದನ್ನು ಇಲ್ಲಿಯ ಸ್ಥಳೀಯ ಜನರು ದಿನ ಬಳಕೆಗೆ ಉಪಯೋಗಿಸುತ್ತಾರೆ ಎನ್ನುತ್ತಾರೆ. ಈ ಬೆಟ್ಟದಲ್ಲಿ ಎತ್ತರವಾದ ಹಸಿರು ಪೊದೆಗಳು, ದೊಡ್ಡ ದೊಡ್ಡ ಬಂಡೆಗಳು, ಆಳವಾದ ಕಂದಕಗಳನ್ನು ಕಾಣಬಹುದು. ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಹಸಿರು ಸಸ್ಯಗಳ ಮಧ್ಯೆ ನಾವು ಒಬ್ಬರಾಗಿರುವಂತೆ ಭಾಸವಾಗುತ್ತದೆ. ಬೊಟಾನಿಕಲ್ ಗಾರ್ಡನ್ಸ್, ಊಟಿ 

ಹುಲಿಯಿಲ್ಲದ ಹುಲಿ ಬೆಟ್ಟ

PC : Vineeth Mohan

ಬೆಟ್ಟದ ಇತಿಹಾಸ
ಈ ಬೆಟ್ಟಕ್ಕೆ ಒಂದು ಇತಿಹಾಸದ ಕಥೆ ಹೆಣೆದುಕೊಂಡಿದೆ. ಕಥೆಯ ಪ್ರಕಾರ ಇಲ್ಲಿ ಹತ್ತಿರದಲ್ಲೇ ಒಂದು ಪುರಾತನ ಗುಹೆಯಿದೆ. ಋಷಿಮುನಿಗಳು ಈ ಪ್ರಶಾಂತ ವಾತಾವರಣದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಇಂದಿಗೂ ಈ ಬೆಟ್ಟ ಬಹಳ ನಿಶ್ಯಬ್ದದಿಂದ ಕೂಡಿದೆ. ಧ್ಯಾನ ಮಾಡ ಬಯಸುವವರು ಇಲ್ಲಿಗೆ ಬರಬಹುದು.
ಊಟಿ - ಪರ್ವತಗಳ ರಾಣಿ 

ಹುಲಿಯಿಲ್ಲದ ಹುಲಿ ಬೆಟ್ಟ

PC : Vineeth Mohan

ಹತ್ತಿರದ ಆಕರ್ಷಣೆ
ಈ ಬೆಟ್ಟದ ಹತ್ತಿರದಲ್ಲಿ ರೋಸ್ ಗಾರ್ಡನ್, ದೊಡ್ಡ ಬೆಟ್ಟ, ಫನ್ ಸಿಟಿ, ಹಿಡನ್ ವ್ಯಾಲಿ ಜಂಗಲ್, ಟೀ ಫ್ಯಾಕ್ಟರಿ, ನೀಲಗಿರಿ ಮೌಂಟೇನ್ ರೈಲ್ವೇ, ಬೊಟಾನಿಕಲ್ ಗಾರ್ಡನ್‍ಗಳಿಗೂ ಭೇಟಿ ನೀಡಬಹುದು.

ಸೂಕ್ತ ಸಮಯ
ಈ ಬೆಟ್ಟಕ್ಕೆ ಹೋಗಲು ನವೆಂಬರ್ ನಿಂದ ಮಾರ್ಚ್ ಸೂಕ್ತ ಕಾಲ.

Read more about: ooty
English summary

Tiger Hills in Ooty- a perfect destination for nature lovers

Ooty or Ootacamund is a very popular hill station located in the Nilgiri hills of Tamil Nadu. Affectionately called the Queen of hill stations.
Please Wait while comments are loading...