Search
  • Follow NativePlanet
Share
» »ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

By Vijay

ಮಲಯಾಳಿ ಭಾಷಿಗರು ಅದರಲ್ಲೂ ವಿಶೇಷವಾಗಿ ಹಿಂದು ಸಮುದಾಯದವರು ಅತಿ ಹೆಚ್ಚು ಸಂಭ್ರಮ-ಸಡಗರಗಳಿಂದ ಆಚರಿಸುವ ಉತ್ಸವವೆ ತ್ರಿಶ್ಶೂರ್ ಪೂರಂ ಉತ್ಸವ ಆಗಿದೆ. ಮಲಯಾಳಿ ಸಂಸ್ಕೃತಿಯಂತೆ ಯಾವ ದಿನ ಚಂದ್ರನು ಮೇಡಂ (ಮೇಷ) ಮಾಸದಲ್ಲಿ ಯಾವ ದಿನ ಆಗಸದಲ್ಲಿ ಪೂರಂ ನಕ್ಷತ್ರದೊಂದಿಗೆ ಉದಯಿಸುವನೋ ಅದೇ ದಿನ ಈ ಉತ್ಸವದ ದಿನವಾಗಿರುತ್ತದೆ.

ಸಾಮಾನ್ಯವಾಗಿ ಕೇರಳದಲ್ಲಿ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಜರುಗುವ ಉತ್ಸವಗಳನ್ನು ಪೂರಂ ಎಂತಲೂ ಸಂಭೋದಿಸುತ್ತಾರೆ. ನಾವು ಇಲ್ಲಿ ಅದನ್ನು ಜಾತ್ರೆ, ರಥೋತ್ಸವ ಮುಂತಾದ ಹೆಸರುಗಳಿಂದ ಕರೆಯುತ್ತೇವಷ್ಟೆ. ಈ ತ್ರಿಶ್ಶೂರ್ ಪೂರಂ ಕೇರಳದಲ್ಲೆ ಆಚರಿಸಲಾಗುವ ಎಲ್ಲ ಪೂರಂಗಳ ಪೈಕಿ ಬಹಳ ಜನಪ್ರೀಯ ಹಾಗೂ ಮಹತ್ವವಾದದ್ದಾಗಿದೆ. ಅಂತೆಯೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ನಿಮಗಿಷ್ಟವಾಗಬಹುದಾದ : ರೋಮಾಂಚನಗೊಳಿಸುವ ಬೆಂಗಳೂರು ಕರಗ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಈ ಉತ್ಸವದ ಪ್ರಮುಖ ಆಕರ್ಷಣೆಗಳೆಂದರೆ ಕುಡಮಾಟಂ ಹಾಗೂ ರೋಮಾಂಚನಗೊಳಿಸುವ ಸಿಡಿಮದ್ದುಗಳ ಪ್ರದರ್ಶನ. ಈ ಉತ್ಸವವು ಮುಖ್ಯವಾಗಿ ಶಿವನಿಗೆ ಮುಡಿಪಾದ ತ್ರಿಶ್ಶೂರಿನ ಪ್ರಸಿದ್ಧ ವಡಕ್ಕುನಾಥನ್ ದೇವಾಲಯದಲ್ಲಿ ಜರುಗುತ್ತದೆ.

ಪ್ರಸ್ತುತ ಲೇಖನದ ಮೂಲಕ ಇದರ ಇತಿಹಾಸ, ಉತ್ಸವ ನಡೆಯುವ ಬಗೆ ಹಾಗೂ ಈ ಪೂರಂ ನಡೆಯುವಾಗ ನೆರೆದವರಲ್ಲಿ ವಿದ್ಯುತ್ ಸಂಚಲನ ಉಂಟು ಮಾಡುವಂತಹ ಅದ್ಭುತ ವಾತಾವರಣದ ಕಳೆಯನ್ನು ತೋರಿಸುವ ಚಿತ್ರಗಳ ಪ್ರವಾಸ ಮಾಡಿ.

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಹಿನ್ನಿಲೆ : ಈ ಉತ್ಸವದ ಹಿನ್ನಿಲೆಯು ತುಂಬ ಕುತೂಹಲಕರವಾಗಿದೆ. ಹಿಂದೆ ಅರಟ್ಟಪುಳ ಪೂರಂ ಎಂಬ ಉತ್ಸವವು ಕೇರಳದಲ್ಲಿ ತುಂಬ ದೊಡ್ಡದಾದ ಹಾಗೂ ಪ್ರಸಿದ್ಧವಾದ ಉತ್ಸವವಾಗಿತ್ತು. ಈ ಉತ್ಸವದಲ್ಲಿ ಇತರೆ ದೇವಸ್ಥಾನಗಳ ಜೊತೆಗೆ ತ್ರಿಶ್ಶೂರಿನಲ್ಲಿರುವ ಹಾಗೂ ಆಸು ಪಾಸಿನ ಎಲ್ಲ ದೇವಾಲಯಗಳೂ ಸಹ ಭಾಗವಹಿಸುತ್ತಿದ್ದವು.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಪೂರಂ ಕೇರಳದ ಉತ್ಸವದಲ್ಲಿ ಒಂದು ಪ್ರಮುಖ ದೇವಾಲಯದ ಬಳಿ ಎಲ್ಲ ಇತರೆ ದೇವಸ್ಥಾನಗಳ ಮೂಲ ವಿಗ್ರಹಗಳು ಒಂದೆಡೆ ಬೆರೆಯುವುದಾಗಿದೆ. ಈ ರೀತಿ ಇರುವಾಗ ಒಮ್ಮೆ ಅರಟ್ಟಪುಳ ಉತ್ಸವ ನಡೆಯುತ್ತಿತ್ತು. ಎಂದಿನಂತೆ ತ್ರಿಶ್ಶೂರಿನ ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳು ಆ ಉತ್ಸವದಲ್ಲಿ ಭಾಗಿಯಾಬೇಕಿರುವಾಗ ಅಪಾರ ಪ್ರಮಾಣದ ಮಳೆ, ಗಾಳಿ ಬೀಸಿದ್ದರಿಂದ ನಿಗದಿತ ಸ್ಥಳಕ್ಕೆ ತಲುಪುವುದು ತಡವಾಗಿತ್ತು.

ಚಿತ್ರಕೃಪೆ: Rameshng

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಇದರಿಂದ ಕೋಪಗೊಂಡಿದ್ದ ಅರಟ್ಟಪುಳ ಉತ್ಸವ ಮಂಡಳಿಯು ತ್ರಿಶ್ಶೂರಿನ ದೇವಸ್ಥಾನಗಳಿಗೆ ಭಾಗವಹಿಸಲು ನಿರಾಕರಿಸಿದರು. ಇದರಿಂದ ಬೇಸರಗೊಂಡ ತ್ರಿಶ್ಶೂರು ದೇವಸ್ಥಾನಗಳು ಕೊಚ್ಚಿ ಮಹಾರಾಜ ರಾಜ ರಾಮ ವರ್ಮನ ಮುಂದೆ ಅಲವತ್ತುಕೊಂಡರು.

ಚಿತ್ರಕೃಪೆ: Rameshng

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಇದರಿಂದ ಬೇಸರಗೊಂಡ ಮಹಾರಾಜ ಶಕ್ತನ್ ತಂಪುರನ್ (ರಾಜ ರಾಮ ವರ್ಮ) ತ್ರಿಶ್ಶೂರ್ ಪೂರಂ ಉತ್ಸವವನ್ನು ತ್ರಿಶ್ಶೂರಿನ ವಡಕ್ಕುನಾಥನ್ ದೇವಾಲಯದಲ್ಲಿ ಪ್ರಾರಂಭಿಸಿದನು. ಈ ಉತ್ಸವದಲ್ಲಿ ತ್ರಿಶ್ಶೂರಿನ ಆಸು ಪಾಸಿನಲ್ಲಿರುವ ದೇವಸ್ಥಾನಗಳೆಲ್ಲವೂ ಪಾಲ್ಗೊಳ್ಳುತ್ತದಾದರೂ ಮುಖ್ಯವಾಗಿ ಎರಡು ದೇವಾಲಯಗಳು ಇಲ್ಲಿ ಭಾಗವಹಿಸುತ್ತವೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಪರಮೇಕಾವು ಭಗವತಿ ದೇವಾಲಯ ಹಾಗೂ ತಿರುವಂಬಾಡಿ ಕೃಷ್ಣ ದೇವಾಲಯ ಈ ಉತ್ಸವದಲ್ಲಿ ಭಾಗವಹಿಸುವ ಎರಡು ಪ್ರಮುಖ ದೇವಾಲಯಗಳಾಗಿವೆ. ಅಲ್ಲದೆ ಎರಡು ಭಾಗಗಳನ್ನಾಗಿ ಈ ಉತ್ಸವದಲ್ಲಿ ವಿಭಾಗಿಸಲಾಗಿ ಒಂದನ್ನು ಪರಮೇಕಾವು ಭಾಗ ಇನ್ನೊಂದನ್ನು ತಿರುವಂಬಾಡಿ ಭಾಗ ಎಂದು ನಿಯೋಜಿಸಲಾಗುತ್ತದೆ. ಪರಮೇಕಾವು ದೇವಾಲಯ.

ಚಿತ್ರಕೃಪೆ: Challiyan

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಪರಮೇಕಾವು ಭಾಗದಲ್ಲಿ ಪೂಕಟ್ಟಿಕ್ಕರ-ಕರಮುಕ್ಕು ಭಗವತಿ ದೇವಾಲಯ, ಚೂರಕಟ್ಟುಕ್ಕರ ಭಗವತಿ, ಚೆಂಪುಕ್ಕಾವು ಭಗವತಿ ಹಾಗೂ ಪನೆಮುಕ್ಕುಂಪಿಲ್ಲಿ ಶಸ್ತ ದೇವಾಲಯಗಳು ಭಾಗವಹಿಸಿದರೆ, ತಿರುವಂಬಾಡಿ ಕಡೆಯಿಂದ ಅಯ್ಯಂತೊಲೆ ಭಗವತಿ, ನೆತಿಲಕ್ಕಾವು ಭಗವತಿ, ಲಲೂರು ಭಗವತಿ ಹಾಗೂ ಕನಿಮಂಗಲಂ ಶಸ್ತ ದೇವಾಲಯಗಳು ಭಾಗವಹಿಸುತ್ತವೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಈ ಉತ್ಸವದ ಮುಖ್ಯ ಉದ್ದೇಶ ಎಲ್ಲ ದೇವ ದೇವತೆಯರು ಬೃಹತ್ ಮೆರವಣಿಗೆಯ ಮೂಲಕ ತ್ರಿಶ್ಶೂರಿನ ವಡಕ್ಕುನಾಥನ್ ದೇವಾಲಯ ದರ್ಶಿಸಿ ಶಿವನಿಗೆ ಗೌರವ ವಂದನೆ ಸಲ್ಲಿಸುವುದಾಗಿದೆ. ಈ ಸಂದರ್ಭದಲ್ಲಿ ಎರಡು ಭಾಗಗಳ ದೇವಸ್ಥಾನಗಳು ವಿಶೇಷವಾಗಿ ಸಿಂಗರಿಸಲ್ಪಟ್ಟ ಅಂಬಾರಿ/ಕೊಡೆಗಳನ್ನು ವಿಧ್ಯುಕ್ತವಾಗಿ ಆನೆಗಳ ಮೇಲಿಟ್ಟು ತಮ್ಮ ತಮ್ಮ ವೈಭವ ಪ್ರದರ್ಶಿಸುವುದಾಗಿದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಮುಖ್ಯ ಪೂರಂ ಉತ್ಸವವಿರುವ ದಿನದ ಏಳು ದಿನಗಳ ಮುಂಚಿನಿಂದಲೆ ಈ ಪೂರಂ ಉತ್ಸವದ ಸಿದ್ಧತೆಗಳು ಪ್ರಾರಂಭಗೊಳ್ಳುತ್ತವೆ. ಕೊಡೆಯಟ್ಟಂ ಅಂದರೆ ಪೂರಂ ಉತ್ಸವದ ಸಂಕೇತವಾದ ಧ್ವಜವನ್ನು ಹಾರಿಸುವುದರ ಮೂಲಕ ಈ ಉತ್ಸವವು ಸಾಂಕೇತಿಕವಾಗಿ ಪ್ರಾರಂಭಗೊಳ್ಳುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಧ್ವಜಾರೋಹಣದ ನಾಲ್ಕನೆಯ ದಿನದಂದು ವೆಡಿಕೆಟ್ಟುವನ್ನು ಆಚರಿಸಲಾಗುತ್ತದೆ. ವೆಡಿಕೆಟ್ಟು ಎಂದರೆ ಮಾದರಿ ಪಟಾಕಿ, ಸಿಡಿ ಮದ್ದುಗಳ ಪ್ರದರ್ಶನ. ಈ ಸಂದರ್ಭದಲ್ಲಿ ಪ್ರಮೇಕಾವು ಹಾಗೂ ತಿರುವಂಬಾಡಿ ದೇವಸ್ಥಾನಗಳ ವತಿಯಿಂದ ಸ್ವರಾಜ್ ಮೈದಾನದಲ್ಲಿ ಸಂಜೆಯ ಏಳು ಘಂಟೆಯ ನಂತರ ಅದ್ಭುತವಾದ ಪಟಾಕಿ ಸಿಡಿತದ ಪ್ರದರ್ಶನವಿರುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಇದಾದ ನಂತರದ ದಿನದಲ್ಲಿ ನೆಟಿಪಟ್ಟಂ, ಚಮಯಂ, ಆಲವಟ್ಟಂ ಹಾಗೂ ವೆಂಚಮರೋಮ್ ನಡೆಯುತ್ತವೆ. ಅಂದರೆ ಎರಡು ದೇವಸ್ಥಾನಗಳು ಪ್ರತ್ಯೇಕ ಸ್ಥಳಗಳಲ್ಲಿ ಆನೆಗಳೀಗೆ ಹೊದಿಸಲಾಗುವ ಶೃಂಗಾರದ ದಿರಿಸುಗಳು, ಅಲಂಕಾರಿಕ ವಸ್ತ್ರ ಒಡವೆಗಳು, ನವಿಲುಗೆರೆಗಲಿಂದ ಅಲಂಕಾರಿಸಲಾದ ವಿವಿಧ ಆನೆಗಳ ವಸ್ತ್ರ ಒಡವೆಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಇನ್ನೂ ಮುಖ್ಯ ಪೂರಂ ಉತ್ಸವದ ದಿನದಂದು ಪರಮೇಕಾವು ಹಾಗೂ ತಿರುವಂಬಾಡಿ ದೇವಾಲಯಗಳು ವಡಕ್ಕುನಾಥನ್ ದೇವಾಲಯ ಪ್ರವೇಶಿಸಿ ಶಿವನಿಗೆ ಗೌರವವಂದನೆ ಸಲ್ಲಿಸಿ ನಂತರ ದೇವಾಲಯ ಆವರಣದಿಂದ ಹೊರಬಂದು ಅವುಗಳಿಗೆ ನಿಗದಿಪಡಿಸಲಾದ ಪ್ರತ್ಯೇಕ ಸ್ಥಳಗಳಲ್ಲಿ ಎದುರು ಬದುರಾಗಿ ನಿಲ್ಲುತ್ತವೆ. ಈ ಒಟ್ಟಾರೆ ಮೆರವಣಿಗೆಯ ಸಂದರ್ಭದಲ್ಲಿ, ಪಾರಪರಿಕವಾದ ಎಲ್ಲ ರೀತಿಯ ವಾದ್ಯಗಳು ಸದಾ ನಿರಂತರವಾಗಿ ನುಡಿಯುತ್ತಲೆ ಇರುತ್ತವೆ. ಇದು ನೆರೆದವರ ಮನದಲ್ಲಿ ರೋಮಾಂಚನ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಹೀಗೆ ಎರಡು ದೇವಸ್ಥಾನಗಳು ಎದುರು ಬದುರು ನಿಂತಾಗ ನಡೆಯುವ ಕೂಡಮಟ್ಟಂ ಅತ್ಯಂತ ಪ್ರಮುಖ ಆಕರ್ಷಣೆಯಾಗಿ ಜನರನ್ನು ಸೆಳೆಯುತ್ತದೆ. ಕೂಡಮಟ್ಟಂ ಒಂದು ವಿಶೇಷ ಚಟುವಟಿಕೆಯಾಗಿದ್ದು ಇದರಲ್ಲಿ ಎರಡು ದೇವಸ್ಥಾನಗಳ ಆನೆಗಳ ಮೇಲೆ ಹೊರಿಸಲಾಗಿರುವ ಆಕರ್ಷಕ ಕೊಡೆಗಳನ್ನು ಆನೆಗಳ ಮೇಲೆ ನಿಂತವರು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರೆ.

ಚಿತ್ರಕೃಪೆ: Rameshng

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಈ ದೃಶ್ಯವು ನಿಜವಾಗಿಯೂ ಕಣ್ಣು ಕಟ್ಟುವಂತೆ ಮಾಡುತ್ತದೆ. ನೆರೆದ ಸಮಸ್ತ ಜನಸ್ತೋಮ ಈ ಒಂದು ಅದ್ಭುತ ಅನುಭವಕ್ಕೆ ಶಬರಿಯ ಹಾಗೆ ಕಾದು ಕುಳಿತಿರುತ್ತಾರೆ. ನುಡಿಯುತ್ತಿರುವ ವೈವಿಧ್ಯಮಯ ವಾದ್ಯಗಳ ಅದ್ಭುತ ತಾಳಗಳ ನಡುವೆ ಕೂಡಮಟ್ಟಂ ಮನ ಪುಳಕಿತಗೊಳ್ಳುವಂತೆ ಮಾಡುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಈ ಪೂರಂ ಉತ್ಸವದ ಮತ್ತೊಂದು ಮುಖ್ಯ ಗುಣಲಕ್ಷಣವೆಂದರೆ ಸಾಮುಹಿಕ ಸೌಹಾರ್ದತೆ. ಬಹುತೇಕ ಮುಸ್ಲಿಮ್ ಸಮುದಾಯದವರಿಂದ ಉತ್ಸವಕ್ಕೆ ಬೇಕಾದ ಮಂಟಪ ಇತ್ಯಾದಿಗಳು ರಚನೆಗೊಂಡರೆ, ಕೊಡೆಗಳ ವೈವಿಧ್ಯಮಯ ಅಲಂಕಾರಕ್ಕಾಗಿ ಬೇಕಾದ ಎಲ್ಲ ಅಲಂಕಾರಿಕ ವಸ್ತುಗಳು ಪ್ರದೇಶದಲ್ಲಿರುವ ಚರ್ಚುಗಳು ಹಾಗೂ ಅವುಗಳ ಸದಸ್ಯರಿಂದ ನೀಡಲ್ಪಡುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಪೂರಂ ಉತ್ಸವದ ಮರುದಿನ ನಸುಕಿನ ಜಾವ ಸುಮಾರು ನಾಲ್ಕು ಘಂಟೆಯ ಸಮಯಕ್ಕೆ ಎರಡು ದೇವಸ್ಥಾನಗಳ ವತಿಯಿಂದ ಏರ್ಪಡಿಸಲಾಗುವ ಪಟಾಕಿ ಪ್ರದರ್ಶನ ಅತ್ಯದ್ಭುತ ಹಾಗೂ ಅತಿ ರೋಮಾಂಚಕವಾದ ಉತ್ಸವದ ಘಟ್ಟವಾಗಿದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಈ ಒಂದು ಪ್ರದರ್ಶನ ನೋಡಲಿಕ್ಕೆಂದೆ ಕೇರಳದ ಮೂಲೆ ಮೂಲೆಗಳಿಂದ ಅನೇಕ ಜನರು ಈ ಉತ್ಸವಕ್ಕೆ ಆಗಮಿಸುತ್ತಾರೆ. ಎರಡೂ ದೇವಸ್ಥಾನಗಳಿಗೆ ಇದೊಂದು ಪ್ರತಿಷ್ಠೆಯ ಸ್ಪರ್ಧೆಯಾಗಿದ್ದು ಇಬ್ಬರೂ ತಮ್ಮ ತಮ್ಮ ಶಕ್ತಿ ಮೀರಿ ಅದ್ಭುತ ಪಟಾಕಿ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ.

ಚಿತ್ರಕೃಪೆ: Rameshng

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಒಟ್ಟು ಪಟಾಕಿ ಪ್ರದರ್ಶನ ಈ ಉತ್ಸವದ ಸಂದರ್ಭದಲ್ಲಿ ನಾಲ್ಕು ಬಾರಿಯಾದರೂ ನಸುಕಿನಲ್ಲಿ ಜರುಗುವ ಪ್ರದರ್ಶನ ಅತ್ಯಂತ ಆಕರ್ಷಕ ಹಾಗೂ ರೋಮಾಂಚಕವಾಗಿರುತ್ತದೆ ಹಾಗೂ ಇದು ಒಂದು ಘಂಟೆಯವರೆಗೆ ಮಾತ್ರ ನಡೆಯುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಈ ಸಂದರ್ಭದಲ್ಲಿ ಬಾನಂಗಳದಲ್ಲಿ ವಿವಿಧ ಬಣ್ಣಗಳಿಂದ ಕೂಡಿದ ವಿವಿಧ ಚಿತ್ತಾರಗಳು ಸಿಡಿ ಮದ್ದುಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Manojk

ತ್ರಿಶ್ಶೂರ್ ಪೂರಂ:

ತ್ರಿಶ್ಶೂರ್ ಪೂರಂ:

ಏಳನೆಯ ದಿನ ಪೂರಂ ಉತ್ಸವದ ಸಮಾಪ್ತಿ ದಿನವಾಗಿದ್ದು ಕೊನೆಯ ಬಾರಿಗೆ ಸ್ವರಾಜ್ ನಲ್ಲಿ ಉತ್ಸವವನ್ನು ಹೃದಯ ಪೂರ್ವಕವಾಗಿ ಬೀಳ್ಗೊಡಲು ಜಮಾಯಿಸುತ್ತಾರೆ. ಏಲು ದಿನಗಳ ಸುಂದರ ನೆನಪಿನೊಂದಿಗೆ ವರ್ಷದ ಪ್ರಮುಖ ಉತ್ಸವ ತ್ರಿಶ್ಶೂರ್ ಪೂರಂ ಅನ್ನು ಬೀಳ್ಗೊಡುತ್ತಾರೆ.

ಚಿತ್ರಕೃಪೆ: Manojk

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X